For Quick Alerts
ALLOW NOTIFICATIONS  
For Daily Alerts

ಹರಳೆಣ್ಣೆ ಬಳಸಿ ಸ್ಟ್ರೆಚ್‌ ಮಾರ್ಕ್ಸ್ ಹೋಗಲಾಡಿಸುವ 8 ವಿಧಾನಗಳು

|

ಸ್ಟ್ರೆಚ್‌ ಮಾರ್ಕ್ಸ್ ಎನ್ನುವುದು ಹೆಚ್ಚಿನವರನ್ನು ಕಾಡುತ್ತಿರುವ ಸೌಂದರ್ಯ ಸಮಸ್ಯೆಯಾಗಿದೆ. ದಪ್ಪ ಅದವರು ಸಣ್ಣ ಆದಾಗ, ಸಣ್ಣ ಇದ್ದವರು ದಪ್ಪವಾದಾಗ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಇನ್ನು ಗರ್ಭಿಣಿಯಾದಾಗ ಈ ಸ್ಟ್ರೆಚ್‌ ಮಾರ್ಕ್ಸ್ ಬೀಳುವುದು ಸಹಜ. ಕೆಲವರಲ್ಲಿ ಹೆರಿಗೆಯ ಬಳಿಕ ಸ್ಟ್ರೆಚ್‌ ಮಾರ್ಕ್ಸ್ ಕಡಿಮೆಯಾದರೆ, ಇನ್ನು ಕೆಲವರಿಗೆ ಸ್ಟ್ರೆಚ್‌ ಮಾರ್ಕ್ಸ್ ಹಾಗೆಯೇ ಉಳಿಯುತ್ತದೆ.

ಸ್ಟ್ರೆಚ್‌ ಮಾರ್ಕ್ಸ್ ಬಿದ್ದಾಗ ತ್ವಚೆಗೆ ಸೂಕ್ತ ಆರೈಕೆ ಸಿಕ್ಕರೆ ಸ್ಟ್ರೆಚ್‌ ಮಾರ್ಕ್ಸ್ ಮಾಯವಾಗಿ ತ್ವಚೆ ಮೊದಲಿನಂತಾಗುವುದು. ಸ್ಟ್ರೆಚ್‌ಮಾರ್ಕ್ಸ್ ಹೋಗಲಾಡಿಸುವಲ್ಲಿ ಹರಳೆಣ್ಣೆ ತುಂಬಾ ಪರಿಣಾಮಕಾರಿಯಾದ ಮನೆಮದ್ದಾಗಿದೆ. ಹರಳೆಣ್ಣೆ ಬಳಸುವುದುರಿಂದ ತ್ವಚೆಯ ಮೇಲಿದ್ದ ಸ್ಟ್ರೆಚ್‌ ಮಾರ್ಕ್ಸ್ ಕ್ರಮೇಣ ಇಲ್ಲವಾಗಿ ತ್ವಚೆ ಮೊದಲಿನಂತಾಗುವುದು. ಹರಳೆಣ್ಣೆಯನ್ನು ಸೌಂದರ್ಯವರ್ಧಕವಾಗಿ ಹಿಂದಿನಿಂದಲೂ ಬಳಸುತ್ತಾ ಬರುತ್ತಿದ್ದಾರೆ. ಇದನ್ನು ಈಗಲೂ ವೈಜ್ಞಾನಿಕವಾಗಿ ಪರಿಶೀಲಿಸಿ ಕ್ರೀಮ್, ಸೋಪ್ ತಯಾರಿಯಲ್ಲೂ ಬಳಸುತ್ತಿದ್ದಾರೆ.

Srechmarks

* ಹರಳೆಣ್ಣೆಯಲ್ಲಿ ಗ್ಲಿಸರಿನ್ ರೀತಿಯ ರಿಸಿನೋಲಿಕ್‌ ಆಮ್ಲವಿದ್ದು, ಈ ಕೊಬ್ಬಿನ ಆಮ್ಲ ಸ್ಟ್ರೆಚ್‌ ಮಾರ್ಕ್ಸ್ ಹೋಗಲಾಡಿಸುವಲ್ಲಿ ಸಹಕಾರಿಯಾಗಿದೆ.

* ಹರಳೆಣ್ಣೆಯಲ್ಲಿ ಉತ್ತಮವಾದ ಮಾಯಿಶ್ಚರೈಸರ್‌ ಗುಣವಿದ್ದು, ಇದು ತ್ವಚೆಯ ತೇವಾಂಶ ಕಾಪಾಡಿ, ಮೈ ಕಾಂತಿ ಹೆಚ್ಚಿಸುವಲ್ಲಿಯೂ ಸಹಕಾರಿಯಾಗಿದೆ. ಇದರಲ್ಲಿ ಆ್ಯಂಟಿ ಬ್ಯಾಕ್ಟಿರಿಯಾ ಗುಣವಿರುವುದರಿಂದ ಸ್ಟ್ರೆಚ್‌ಮಾರ್ಕ್ಸ್ ಅನ್ನು ಬ್ಯಾಕ್ಟಿರಿಯಾ ಮುಕ್ತವಾಗಿಸುತ್ತದೆ.

*ಇದು ಕೊಲೆಜಿನ್ ಹಾಗೂ ಎಲಾಸ್ಟಿನ್ ಉತ್ಪತ್ತಿ ಮಾಡಲು ಸಹಕಾರಿಯಾಗಿರುವುದರಿಂದ ತ್ವಚೆ ಮೊದಲಿನಂತಾಗಲು ಸಹಕಾರಿಯಾಗಿದೆ.

ಹರಳೆಣ್ಣೆ ಬಳಸಿ ಸ್ಟ್ರೆಚ್‌ ಮಾರ್ಕ್ಸ್ ಇಲ್ಲವಾಗಿಸುವ ವಿಧಾನಗಳು

1. ಬಿಸಿ ಎಣ್ಣೆಯ ಮಸಾಜ್

1. ಬಿಸಿ ಎಣ್ಣೆಯ ಮಸಾಜ್

ಬೇಕಾಗಿರುವ ಸಾಮಗ್ರಿ

2 ಚಮಚ ಹರಳೆಣ್ಣೆ

ತಯಾರಿ ಸಮಯ

5ನಿಮಿಷ

ಚಿಕಿತ್ಸೆ ಸಮಯ

30 ನಿಮಿಷ

ಮಾಡುವುದು ಹೇಗೆ?

1. ಒಂದು ಬೌಲ್‌ನಲ್ಲಿ 2 ಚಮಚ ಹರಳೆಣ್ಣೆಯನ್ನು ಹಾಕಿ ಬಿಸಿ ಮಾಡಿ.

2. ಎಣ್ಣೆ ಮುಟ್ಟುಬಹುದಾದ ಬಿಸಿ ಇರುವಾಗ ಅದನ್ನು ತೆಗೆದು ಸ್ಟ್ರೆಚ್‌ ಮಾರ್ಕ್ಸ್ ಇರುವ ಕಡೆ ಹಚ್ಚಬೇಕು.

3. ಎಣ್ಣೆ ಹಚ್ಚಿ 30 ನಿಮಿಷ ಬಿಡಿ

4. ಈಗ ಉಗುರು ಬೆಚ್ಚಗಿನ ನಿರಿನಿಂದ ತೊಳೆಯಿರಿ

ಎಷ್ಟು ಬಾರಿ ಮಾಡಬೇಕು?

ವಾರದಲ್ಲಿ3-4 ಬಾರಿ ಮಾಡುತ್ತಾ ಬಂದರೆ ಸ್ಟ್ರೆಚ್ಚ್ ಮಾರ್ಕ್ಸ್ ಇಲ್ಲವಾಗುವುದು.

2. ಹರಳೆಣ್ಣೆ ಹಾಗೂ ಆಲೂಗಡ್ಡೆ ಚಮತ್ಕಾರ

2. ಹರಳೆಣ್ಣೆ ಹಾಗೂ ಆಲೂಗಡ್ಡೆ ಚಮತ್ಕಾರ

ಬೇಕಾಗುವ ಸಾಮಗ್ರಿ

1 ಆಲೂಗಡ್ಡೆಯ ರಸ

2 ಚಮಚ ಹರಳೆಣ್ಣೆ

ತಯಾರಿ ಸಮಯ

10 ನಿಮಿಷ

ಚಿಕಿತ್ಸೆ ಸಮಯ

30 ನಿಮಿಷ

ಮಾಡುವ ವಿಧಾನ:

1. ಆಲೂಗಡ್ಡೆ ರಸವನ್ನು ಹರಳೆಣ್ಣೆ ಜತೆ ಮಿಕ್ಸ್ ಮಾಡಿ ಕೆಲವು ಗಂಟೆಗಳ ಫ್ರಿಡ್ಜ್‌ನಲ್ಲಿಡಿ.

2. ನಂತರ ತೆಗೆದು ಸ್ಟ್ರೆಚ್‌ ಮಾರ್ಕ್ಸ್ ಇರುವ ಕಡೆ ಹಚ್ಚಿ, 30 ನಿಮಿಷ ಬಿಡಿ.

3. ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ

ಎಷ್ಟು ಬಾರಿ ಮಾಡಬೇಕು?

ವಾರದಲ್ಲಿ 3-4 ಬಾರಿ ಮಾಡಿ

ಇದು ಏಕೆ ಪ್ರಯೋಜನಕಾರಿ?

ಈ ಮಿಶ್ರಣ ತ್ವಚೆಯನ್ನು ಹಿಗ್ಗುವಂತೆ ಮಾಡುವುದರಿಂದ ಸ್ಟ್ರೆಚ್‌ ಮಾರ್ಕ್ಸ್ ಬಿದ್ದ ಕಡೆ ಚೆನ್ನಾಗಿ ಮಾಯಿಶ್ಚರೈಸರ್ ದೊರೆತು ಕಲೆಗಳು ಮಾಯುವಾಗುವುದು. ಹೀಗೆ ಮಾಡುವುದರಿಂದ ತ್ವಚೆಗಳಲ್ಲಿ ಎದ್ದು ಕಾಣುತ್ತಿರುವ ಗೆರೆಗಳು ಮಾಯವಾಗುವುದು ಹಾಗೂ ಸ್ಟ್ರೆಚ್‌ ಮಾರ್ಕ್ಸ್ ಕಲೆ ಇಲ್ಲವಾಗಿಸುವುದು.

ಹರಳೆಣ್ಣೆ ಮತ್ತು ತೆಂಗಿನೆಣ್ಣೆ

ಹರಳೆಣ್ಣೆ ಮತ್ತು ತೆಂಗಿನೆಣ್ಣೆ

ಬೇಕಾಗುವ ಸಾಮಗ್ರಿ

1 ಚಮಚ ತೆಂಗಿನೆಣ್ಣೆ

1 ಚಮಚ ಹರಳೆಣ್ಣೆ

ತಯಾರಿ ಸಮಯ

2 ನಿಮಿಷ

ಚಿಕಿತ್ಸೆ ಸಮಯ

30 ನಿಮಿಷ

ಮಾಡುವುದು ಹೇಗೆ?

* ತೆಂಗಿನೆಣ್ಣೆ ಹಾಗೂ ಹರಳೆಣ್ಣೆ ಸಮವಾಗಿ ತೆಗೆದುಕೊಂಡು ಮಿಶ್ರ ಮಾಡಿ.

* ಈಗ ಆ ಎಣ್ಣೆಯನ್ನು ಸ್ಟ್ರೆಚ್‌ ಮಾರ್ಕ್ಸ್ ಇರುವ ಕಡೆ ಹಚ್ಚಿ, ತ್ವಚೆಗೆ ಬಿಸಿ ಅನುಭವ ಉಂಟಾಗುವವರೆಗೆ ಮೆಲ್ಲನೆ ಮಸಾಜ್‌ ಮಾಡಿ

* ನಂತರ 30 ನಿಮಿಷ ಬಿಟ್ಟು ಬಿಸಿ ನೀರಿನಿಂದ ತೊಳೆಯಿರಿ.

ಎಷ್ಟು ಬಾರಿ ಮಾಡಬೇಕು?

ವಾರದಲ್ಲಿ 3-4 ಬಾರಿ ಮಾಡಬೇಕು

ಪ್ರಯೋಜನ

ಹರಳೆಣ್ಣೆ ಹಾಗೂ ತೆಂಗಿನೆಣ್ಣೆ ಎರಡೂ ತ್ವಚೆ ಆರೈಕೆಗೆ ಒಳ್ಳೆಯದು. ಇವುಗಳು ತ್ವಚೆಯನ್ನು ಮಾಯಿಶ್ಚರೈಸರ್ ಮಾಡಿ, ಸ್ಟ್ರೆಚ್‌ ಮಾರ್ಕ್ಸ್ ಹೋಗಲಾಡಿಸುತ್ತದೆ.

4. ಹರಳೆಣ್ಣೆ ಮತ್ತು ಲವಂಗ

4. ಹರಳೆಣ್ಣೆ ಮತ್ತು ಲವಂಗ

ಬೇಕಾಗುವ ಸಾಮಗ್ರಿ

5-6 ಲವಂಗ

2 ಚಮಚ ಹರಳೆಣ್ಣೆ

ತಯಾರಿ ಸಮಯ

10 ನಿಮಿಷ

ಚಿಕಿತ್ಸೆ ಸಮಯ

45 ನಿಮಿಷ

ಮಾಡುವ ವಿಧಾನ:

*ಲವಂಗವನ್ನು ಪುಡಿ ಮಾಡಿ ಹರಳೆಣ್ಣೆ ಜತೆ ಮಿಶ್ರ ಮಾಡಿ

* ನಂತರ ಎಣ್ಣೆಯ ಬಣ್ಣ ಸ್ವಲ್ಪ ಬದಲಾಗುವವರೆಗೆ ಕಾಯಿಸಿ

* ಗ್ಯಾಸ್‌ನಿಂದ ತೆಗೆದು ತಣ್ಣಗಾಗಲು ಬಿಡಿ, ನಂತರ ಸ್ಟ್ರೆಚ್‌ಮಾರ್ಕ್ಸ್ ಮೇಲೆ ಮಸಾಜ್‌ ಮಾಡಿ.

* ಸುಮಾರು 15 ನಿಮಿಷ ಮಸಾಜ್‌ ಮಾಡಬೇಕು.

* ನಂತರ 30 ನಿಮಿಷ ಇಟ್ಟು, ಬಿಸಿ ನೀರಿನಿಂದ ತೊಳೆಯಿರಿ.

ಪ್ರಯೋಜನ

ಲವಂಗ ಕಲೆಗಳನ್ನು ತೆಗೆಯುವಲ್ಲಿ ಪ್ರಯೋಜನಕಾರಿ. ಈ ಎರಡು ಸಾಮಗ್ರಿ ಮಿಕ್ಸ್ ಮಾಡಿ ಹಚ್ಚುವುದರಿಂದ ಸ್ಟ್ರೆಚ್‌ ಮಾರ್ಕ್ಸ್ ಕಲೆಗಳು ಬೇಗನೆ ಇಲ್ಲವಾಗುವುದು.

ಹರಳೆಣ್ಣೆ ಹಾಗೂ ಲೋಳೆಸರ

ಹರಳೆಣ್ಣೆ ಹಾಗೂ ಲೋಳೆಸರ

ಬೇಕಾಗುವ ಸಾಮಗ್ರಿ

1 ಚಮಚ ಲೋಳೆಸರ

1 ಚಮಚ ಹರಳೆಣ್ಣೆ

ತಯಾರಿಗೆ ಬೇಕಾಗುವ ಸಮಯ

5 ನಿಮಿಷ

ಚಿಕಿತ್ಸೆ ಸಮಯ

ರಾತ್ರಿ ಹೊತ್ತಿನಲ್ಲಿ ಮಾಡಿ

ಮಾಡುವ ವಿಧಾನ:

1.ಲೋಳೆಸರವನ್ನು ನುಣ್ಣನೆ ಮಾಡಿ ಹಾಗೂ ಹರಳೆಣ್ಣೆ ಮಿಶ್ರ ಮಾಡಬೇಕು.

2. ನಂತರ ಸ್ವಲ್ಪ ಬಿಸಿ ಮಾಡಿ ಸ್ಟ್ರೆಚ್‌ ಮಾರ್ಕ್ಸ್ ಇರುವ ಕಡೆ ಹಚ್ಚಿ ರಾತ್ರಿ ಹೊತ್ತು ಬಿಟ್ಟು ಬೆಳಗ್ಗೆ ತೊಳೆಯಿರಿ.

ಎಷ್ಟ ಬಾರಿ ಮಾಡಬೇಕು?

ಕಲೆ ಹೋಗುವವರಿಗೆ ಪ್ರತಿದಿನ ಮಾಡಬೇಕು

ಏಕೆ ಇದು ಪರಿಣಾಮಕಾರಿ?

ಲೋಳೆಸರದಲ್ಲಿ ವಿಟಮಿನ್‌ ಇ ಹಾಗೂ ಆ್ಯಂಟಿಆಕ್ಸಿಡೆಂಟ್‌ ಅಂಶವಿರುವುದರಿಂದ ತ್ವಚೆಯಲ್ಲಿರುವ ಕಲೆಗಳನ್ನು ಹೋಗಲಾಡಿಸುವುದು ಮಾತ್ರವಲ್ಲ, ತ್ವಚೆ ಕಾಂತಿಯನ್ನೂ ಹೆಚ್ಚಿಸುತ್ತದೆ.

7. ಹರಳೆಣ್ಣೆ ಹಾಗೂ ಪ್ಲಾಸ್ಟಿಕ್

7. ಹರಳೆಣ್ಣೆ ಹಾಗೂ ಪ್ಲಾಸ್ಟಿಕ್

ಬೇಕಾಗುವ ಸಾಮಗ್ರಿ

2 ಚಮಚ ಹರಳೆಣ್ಣೆ

ಪ್ಲಾಸ್ಟಿಕ್ ರ‍್ಯಾಪ್/ಬಿಸಿ ನೀರಿನ ಬಾಟಲ್

ಬೇಕಾಗುವ ಸಮಯ

2 ನಿಮಿಷ

ಚಿಕಿತ್ಸೆ ಸಮಯ

45 ನಿಮಿಷ

ಮಾಡುವ ವಿಧಾನ

* ಹರಳೆಣ್ಣೆ ಸ್ವಲ್ಪ ಬಿಸಿಮಾಡಿ.

* ನಮತರ ಹರಳೆಣ್ಣೆಯನ್ನು ಸ್ಟ್ರೆಚ್‌ ಮಾರ್ಕ್ಸ್ ಇರುವ ಕಡೆ ಹಚ್ಚಿ 10-15 ನಿಮಿಷ ಮಸಾಜ್ ಮಾಡಿ.

* ಮಸಾಜ್‌ ಮಾಡಿದ ಮೇಲೆ ಪ್ಲಾಸ್ಟಿಕ್‌ ಸುತ್ತಿ

* ಈಗ ಹೀಟಿಂಗ್‌ ಪ್ಯಾಡ್ ಅಥವಾ ಬಿಸಿ ನೀರಿನ ಬಾಟಲ್‌ ಅನ್ನು ಪ್ಲಾಸ್ಟಿಕ್‌ ಮೇಲೆ ಒತ್ತುತ್ತಾ ಇರಿ. ಈ ರೀತಿ 30 ನಿಮಿಷ ಮಾಡಿ.

*ನಂತರ ಬಿಸಿ ನೀರಿನಿಂದ ತೊಳೆಯಿರಿ.

ಎಷ್ಟು ಬಾರಿ ಮಾಡಬೇಕು?

ವಾರದಲ್ಲಿ 3-4 ಮಾಡಿ ಮಾಡಬೇಕು.

ಏಕೆ ಇದು ಪ್ರಯೋಜನಕಾರಿ?

ಈ ಚಿಕಿತ್ಸೆಯಲ್ಲಿ ತ್ವಚೆಯನ್ನು ತುಂಬಾ ಆಳದಿಂದ ಮಾಯಿಶ್ಚರೈಸರ್‌ ಮಾಡುತ್ತದೆ.

ಹರಳೆಣ್ಣೆ ಹಾಗೂ ಸಕ್ಕರೆ ಸ್ಕ್ರಬ್

ಹರಳೆಣ್ಣೆ ಹಾಗೂ ಸಕ್ಕರೆ ಸ್ಕ್ರಬ್

ಬೇಕಾಗುವ ಸಾಮಗ್ರಿ

* 1 ಚಮಚ ಹರಳೆಣ್ಣೆ

* 1ಚಮಚ ಸಕ್ಕರೆ

ಬೇಕಾಗುವ ಸಮಯ

2 ನಿಮಿಷ

ಚಿಕಿತ್ಸೆ ಸಮಯ

20 ನಿಮಿಷ

ಮಾಡುವ ವಿಧಾನ

* ಸಕ್ಕರೆ ಹಾಗೂ ಹರಳೆಣ್ಣೆಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಮಿಶ್ರ ಮಾಡಿ.

* ಈಗ ಸ್ಟ್ರೆಚ್‌ ಮಾರ್ಕ್ಸ್ ಮೇಲೆ ಸ್ಕ್ರಬ್‌ ಮಾಡಿ

* ಮೃದುವಾಗಿ 5 ನಿಮಿಷ ಸ್ಕ್ರಬ್ ಮಾಡಿ.

* ನಂತರ 15 ನಿಮಿಷ ಹಾಗೇ ಬಿಡಿ.

* ಈಗ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಎಷ್ಟು ಬಾರಿ ಮಾಡಬೇಕು

ವಾರದಲ್ಲಿ 2-3 ಬಾರಿ ಮಾಡಿ.

ಏಕೆ ಇದು ಪ್ರಯೋಜನಕಾರಿ?

ಈ ರೀತಿ ಸ್ಕ್ರಬ್‌ ಮಾಡುವುದರಿಂದ ನಿರ್ಜೀವ ತ್ವಚೆಯನ್ನು ತೆಗೆಯಬಹುದು ಹಾಗೂ ಹರಳೆಣ್ಣೆ ತ್ವಚೆಯನ್ನು ಮಾಯಿಶ್ಚರೈಸರ್ ಮಾಡಿ ಕಲೆಯನ್ನು ತೆಗೆದು ಹಾಕುತ್ತದೆ.

English summary

How To Use Castor Oil For Treating Stretch Marks

Stretch Marks appear during periods of rapid weight loss or weight gain and during pregnancy period. Even though it is stubborn to fade, but it can be as simple as including castor oil in your skin care routine.
Story first published: Saturday, November 23, 2019, 16:39 [IST]
X
Desktop Bottom Promotion