For Quick Alerts
ALLOW NOTIFICATIONS  
For Daily Alerts

ನೇಲ್ ಪಾಲೀಶ್ ಬಬಲ್ಸ್ ತಪ್ಪಿಸುವುದು ಹೇಗೆ?

|

ಹುಡುಗಿಯರು ಸೌಂದರ್ಯ ಪ್ರಿಯರು ಎಂದು ಪ್ರತ್ಯೇಕವಾಗಿ ಹೇಳಬೇಕಾದ್ದೇನಿಲ್ಲ.. ಅದು ಎಲ್ಲರಿಗೂ ತಿಳಿದ ವಿಚಾರವೇ. ತಮ್ಮ ಕೂದಲು, ಮುಖ, ದೇಹ ಸೌಂದರ್ಯದ ಜೊತೆಗೆ ಕೈ ಹಾಗೂ ಕಾಲು ಬೆರಳುಗಳ, ಉಗುರುಗಳ ಸೌಂದರ್ಯತೆಯೂ ಹುಡುಗಿಯರಿಗೆ ಅಷ್ಟೇ ಮುಖ್ಯ. ಹುಡುಗಿಯರು ಏನೇ ಖರೀದಿ ಮಾಡಲು ಹೋದರೂ ಕೊನೆಯಲ್ಲಿ ಅವರಿಷ್ಟದ ನೇಲ್ ಪಾಲೀಶ್ ಒಂದು ಅವರ ಬ್ಯಾಗ್ ಸೇರಿರುತ್ತದೆ. ಹಾಗಾಗಿ ಹುಡುಗಿಯರು ಸಾಕಷ್ಟು ಉದ್ದವಾಗಿ, ಸುಂದರವಾಗಿ ಉಗುರುಗಳನ್ನು ಬೆಳೆಸಿಕೊಳ್ಳುವುದನ್ನೂ ಕೂಡ ನೀವು ಗಮನಿಸಿರಬಹುದು. ಹಾಗೆಯೇ ಕೆಲವು ಹುಡುಗರೂ ಕೂಡ ಈ ತಮ್ಮ ಕಾಲು ಕೈ ಉಗುರುಗಳ ಬಗ್ಗೆ ಹೆಚ್ಚು ಗಮನವಹಿಸುವುದೂ ಕೂಡ ಅಷ್ಟೇ ನಿಜ!

How To Avoid Nail Polish Bubbles

ಕೈಗಳಿಗೆ ಅಥವಾ ಉಗುರುಗಳಿಗೆ ಯಾವುದೇ ಹಾನಿಯಿಲ್ಲದೇ, ಉಗುರುಗಳು ಹೆಚ್ಚು ಅಥವಾ ಕಡಿಮೆ ಕತ್ತರಿಸದ ಹಾಗೇ ನೋಡಿಕೊಂಡು ನಮ್ಮ ಹಸ್ತಾಲಂಕಾರವನ್ನು ನಾವೇ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಮನೆಯಲ್ಲಿಯೇ ಮೆನಿಕ್ಯೂರ್ / ಹಸ್ತಾಲಂಕಾರವನ್ನು ಮಾಡಿಕೊಳ್ಳುವಾಗ ಸಾಕಷ್ಟು ತಪ್ಪುಗಳಾಗುವ ಸಾಧ್ಯತೆಗಳಿವೆ. ಅದರಲ್ಲೂ ಕೆಲವು ನಿರ್ದಿಷ್ಟವಾದ ಸಮಸ್ಯೆಗಳಿವೆ. ಹೌದು ನಾವೀಗ ಮಾತನಾಡುತ್ತಿರುವ ವಿಷಯ, ಮೆನಿಕ್ಯೂರ್ ಮಾಡಿ ಅದನ್ನು ಒಣಗಿಸುವ ಸಮಯದಲ್ಲಿ ಉಂಟಾಗಬಹುದಾದ ಉಗುರುಗಳಲ್ಲಿನ ಬಬಲ್ ಗಳ ಬಗ್ಗೆ!

ದುರದೃಷ್ಟವಶಾತ್, ಈ ಬಬಲ್ ಗಳು ಕಾಣಿಸಿಕೊಂಡರೆ, ನೀವು ಪುನಃ ಉಗುರಿನ ಬಣ್ಣವನ್ನು ತೆಗೆದು ಹೊಸದಾಗಿ ಆರಂಭಿಸುವುದಷ್ಟೇ ಇದಕ್ಕೆ ಪರಿಹಾರ. ಎಷ್ಟೋಂದು ಜಂಜಾಟ ಅಲ್ಲವೇ? ಆದರೆ ನಾವು ಈ ಲೇಖನದ ಮೂಲಕ ಹಸ್ತಾಲಂಕಾರ ಮಾಡುವಾಗ ಉಗುರುಗಳಲ್ಲಿ ಉಂಟಾಗುವ ಬಬಲ್ ಗಳು ಬಾರದಂತೆ ಹೇಗೆ ಸುರಕ್ಷತೆ ಮಾಡಬಹುದು ಎಂಬುದನ್ನು ತಿಳಿಸುತ್ತೇವೆ. ಅತ್ಯಂತ ಸುಲಭವಾಗಿ ಮೆನಿಕ್ಯೂರ್ ಮಾಡಲು ಈ ಲೇಖನವನ್ನು ಓದಿ.

ನೇಲ್ ಪಾಲೀಷ್ ನಲ್ಲಿ ಬಬಲ್ ಗಳು ಬರುವುದು ಯಾಕೆ?

ಇದನ್ನು ತಪ್ಪಿಸಲು ಪ್ರಯತ್ನಿಸಿದಷ್ಟು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಬಬಲ್ ಗಳು ಹೆಚ್ಚಾಗಿ ನೇಲ್ ಪಾಲೀಶ್ ಮಾಡಿ ಒಣಗಿಸುವ ಪ್ರಕ್ರಿಯೆಯಲ್ಲಿ ಉಂಟಾಗುತ್ತವೆ. ಪಾಲೀಶ್ ನ ಪದರಗಳ ನಡುವೆ ಗಾಳಿ ಸಿಕ್ಕಿದಾಗ ಈ ಬಬಲ್ ಗಳು ಉಂಟಾಗುತ್ತವೆ. ಇದು ಉಂಟಾಗುವ ಕೆಲವು ಕಾರಣಗಳು ಹೀಗಿವೆ: ನಿಮ್ಮ ನೇಲ್ ಪಾಲಿಶ್ ತುಂಬಾ ದಪ್ಪವಾಗಿರಬಹುದು, ಹಾಗಾಗಿ ಅದು ಒಣಗಲು ಸಾಕಷ್ಟು ಸಮಯ ಬೇಕು. ಆದರೆ ನೀವು ಅದು ಒಣಗುವುದಕ್ಕೂ ಮೊದಲೇ ಇನ್ನೊಂದು ಪದರ ಹಚ್ಚಲು/ ಲೇಪಿಸಲು ಆರಂಭಿಸುತ್ತೀರಿ, ಅಥವಾ ನೀವು ನೇಲ್ ಪಾಲೀಶ್ ಹಚ್ಚುವುದಕ್ಕೂ ಮೊದಲು ಬೇಸ್ ಕೋಟ್ (ಆರಂಭದಲ್ಲಿ ಉಗುರುಗಳಿಗೆ ಹಚ್ಚುವ ಬಣ್ಣರಹಿತ ಪಾಲೀಶ್) ಸರಿಯಾಗಿ ಹಚ್ಚದೇ ಇರಬಹುದು, ಅಥವಾ ನೀವು ಅವಧಿ ಮುಗಿದ ಪಾಲೀಶ್ ನ್ನು ಬಳಸುತ್ತಿದ್ದಿರಬಹುದು. ಕಾರಣಗಳು ಯಾವುದೇ ಇರಲಿ ಈ ಬಬಲ್ ಗಳ ಸಮಸ್ಯೆಯಿಂದ ಹೊರಬಂದು ನಿಮ್ಮ ಉಗುರುಗಳನ್ನು ಸುಂದರವಾಗಿ ಕಾಣುವಂತೆ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ನಿಮ್ಮ ನೇಲ್ ಪಾಲೀಶ್ ನಲ್ಲಿ ಬಬಲ್ ಗಳನ್ನು ತಪ್ಪಿಸುವುದು ಹೇಗೆ?

1. ನಿಮ್ಮ ಉಗುರುಗಳನ್ನು ಸ್ವಚ್ಛ ಗೊಳಿಸಿ

1. ನಿಮ್ಮ ಉಗುರುಗಳನ್ನು ಸ್ವಚ್ಛ ಗೊಳಿಸಿ

ನೀವು ಉಗುರುಗಳಿಗೆ ಬಣ್ಣವನ್ನು ಹಚ್ಚುವುದಕ್ಕೂ ಮೊದಲು ಉಗುರುಗಳನ್ನು ಅದಕ್ಕಾಗಿ ಸಿದ್ಧಪಡಿಸುವುದು ಕೂಡ ಬಹಳ ಮುಖ್ಯ. ಗ್ರೀಸ್ ಅಥವಾ ಕೊಳಕು ಉಗುರುಗಳಲ್ಲಿದ್ದರೆ ಅದು ಬಣ್ಣವನ್ನು ಉಗುರುಗಳಿಗೆ ಚೆನ್ನಾಗಿ ಅಂಟಿಕೊಳ್ಳದಂತೆ ತಡೆಯುತ್ತದೆ. ಮೊದಲು ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ತೊಳೆಯಿರಿ. ನಿಮ್ಮ ಉಗುರುಗಳು ಸಂಪೂರ್ಣವಾಗಿ ಒಣಗಲು ಬಿಡಿ. ನಂತರ, ಉಗುರುಗಳಲ್ಲಿ ಯಾವುದೇ ಎಣ್ಣೆ ಅಥವಾ ಕೊಳೆಯನ್ನು ತೆಗೆದುಹಾಕಲು ಅಸಿಟೋನ್ ನಲ್ಲಿ ನೆನೆಸಿದ ಹತ್ತಿಯಿಂದ ಅವುಗಳನ್ನು ಒರೆಸಿ.

2. ಯಾವಾಗಲೂ ಬೇಸ್ ಕೋಟ್ ಅನ್ನು ಅನ್ವಯಿಸಿ

2. ಯಾವಾಗಲೂ ಬೇಸ್ ಕೋಟ್ ಅನ್ನು ಅನ್ವಯಿಸಿ

ಮುಖಕ್ಕೆ ಪೌಂಡೇಶನ್ ಹಚ್ಚುವುದಕ್ಕಿಂತ ಮೊದಲು ಪ್ರೈಮರ್ ನ್ನು ಬಳಸುವ ಹಾಗೇ ಉಗುರುಗಳಿಗೆ ಬಣ್ಣವನ್ನು ಹಚ್ಚುವುದಕ್ಕೂ ಮೊದಲು ಬೇಸ್ ಕೋಟ್ ನ್ನು ಹಚ್ಚಲೆಬೇಕು. ಇದು ಉಗುರುಗಳಲ್ಲಿ ಹಚ್ಚಿದ ಬಣ್ಣ ಬೇಗ ಮಾಸದೇ ಇರಲು ಹಾಗೂ ಮೆನಿಕ್ಯೂರ್ ಸಾಕಷ್ಟು ದೀರ್ಘ ಸಮಯದ ವರೆಗೆ ಉಳಿದುಕೊಳ್ಳಲು ಸಹಾಯ ಮಾಡುತ್ತದೆ. ಉಗುರುಗಳು ನೈಸರ್ಗಿಕವಾಗಿ ತೈಲವನ್ನು ಉತ್ಪಾದನೆ ಮಾಡುವುದರಿಂದ ಉಗುರುಗಳಲ್ಲಿ ಬಣ್ಣವು ಚೆನ್ನಾಗಿ ಅಂಟಿಕೊಳ್ಳುವುದನ್ನು ಇದು ತಡೆಯುತ್ತದೆ ಹಾಗಾಗಿ ಬೇಸ್ ಕೋಟ್ ಹಚ್ಚುವುದರಿಂದ ಉಗುರುಗಳಿಗೆ ಹಚ್ಚಿದ ಬಣ್ಣವು ಹಾಗೆಯೇ ಉಳಿಯುತ್ತದೆ.

3. ನಿಮ್ಮ ನೇಲ್ ಪಾಲಿಷ್ ಅನ್ನು ಪರೀಕ್ಷಿಸಿ

3. ನಿಮ್ಮ ನೇಲ್ ಪಾಲಿಷ್ ಅನ್ನು ಪರೀಕ್ಷಿಸಿ

ನಿಮ್ಮ ನೇಲ್ ಪಾಲೀಶ್ ತುಂಬಾ ಹಳೆಯದಾಗಿದ್ದರೆ ಅದರಿಂದ ಉಗುರುಗಳ ಹೊಳೆಯುವಿಕೆಯನ್ನು ನಿರೀಕ್ಷಿಸಬೇಡಿ. ಅಂತಹ ನೇಲ್ ಪಾಲೀಶ್ ಸುಂದರವಾಗಿಯೂ ಕಾಣುವುದಿಲ್ಲ. ನಿಮ್ಮ ನೇಲ್ ಬಣ್ಣದ ಸ್ಥಿರತೆಯನ್ನು ಪರೀಕ್ಷಿಸಲು ಅದನ್ನು ಉಗುರುಗಳ ಸುತ್ತ ಹಚ್ಚಿ. ಅದು ದಪ್ಪ, ಜಿಗುಟು ಅಥವಾ ಅತೀ ತೆಳ್ಳಗಿದ್ದರೆ ಅದು ನಿಮ್ಮ ಉಗುರುಗಳ ಮೆರುಗನ್ನು ಹಾಳು ಮಾಡಬಹುದು. ಹಾಗಾಗಿ ಅದನ್ನು ಎಸೆದು ಬಿಡುವುದೇ ಸೂಕ್ತ!

4. ಬಾಟಲ್ ಅನ್ನು ರೋಲ್ (ಅಂಗೈಲಿಟ್ಟು ತಿರುಗಿಸುವುದು) ಮಾಡಿ

4. ಬಾಟಲ್ ಅನ್ನು ರೋಲ್ (ಅಂಗೈಲಿಟ್ಟು ತಿರುಗಿಸುವುದು) ಮಾಡಿ

ನೇಲ್ ಪಾಲೀಶ್ ಬಾಟಲ್ ಗಳನ್ನು ಅಲ್ಲಾಡಿಸುವುದು ನಾವು ಮಾಡುವ ಮೊದಲನೆಯ ತಪ್ಪು. ಪಾಲೀಶ್ ಬ್ರಶ್ ನ್ನು ಬಾಟಲಿಯ ಸುತ್ತ ಹಾಗೂ ಹಿಂದೆ ಮುಂದೆ ತಿರುಗಿಸುವುದು ಇನ್ನೂ ದೊಡ್ಡ ಪ್ರಮಾದ. ಹೀಗೆ ಮಾಡುವುದರಿಂದಾಗಿ ಗಾಳಿ ಬಾಟಲಿಯಲ್ಲಿ ಸೇರಿಕೊಂಡು ಬಬಲ್ ಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ಇಂತಹ ಗಾಳಿ ಗುಳ್ಳೆಗಳು ಉಗುರುಗಳಿಗೆ ಲೇಪಿಸಿದಾಗ ಕಾಣಿಸುವಂತಹ ದೊಡ್ಡ ಬಬಲ್ ಗಳನ್ನು ಉಗುರುಗಳ ಮೇಲೆ ಉಂಟು ಮಾಡುತ್ತವೆ. ಹಾಗಾಗಿ ನಿಮ್ಮ ನೇಲ್ ಪಾಲೀಶ್ ನ್ನು ಹಿಟ್ಟುಗಳನ್ನು ನಾದುವಾಗ ಮಾಡುವಂತೆ ನಿಮ್ಮ ಕೈಗಳ ನಡುವೆ ಇಟ್ಟು ತಿರುಗಿಸಿ.

5. ಬಣ್ಣವನ್ನು ತೆಳುವಾಗಿ ಲೇಪಿಸಿ

5. ಬಣ್ಣವನ್ನು ತೆಳುವಾಗಿ ಲೇಪಿಸಿ

ಮೆನಿಕ್ಯೂರ್ ನಲ್ಲಿ ಅತ್ಯಂತ ಪ್ರಮುಖವಾದ ವಿಷಯ ನೇಲ್ ಬಣ್ಣವನ್ನು ಹಚ್ಚುವ ವಿಧಾನ. ಬ್ರಶ್ ನಲ್ಲಿ ಅತೀ ಹೆಚ್ಚು ಬಣ್ಣ ಬಡಿದುಕೊಂಡಿದ್ದರೆ ಇದು ಉಗುರುಗಳ ಮೇಲೆ ಅಗತ್ಯಕ್ಕಿಂತ ಹೆಚ್ಚಾಗಿ ಬೀಳಬಹುದು. ಬಬಲ್ ಗಳು ಉಂಟಾಗದಂತೆ ತುಂಬಾ ದಪ್ಪವಾಗಿ ಬಣ್ಣವನ್ನು ಅನ್ವಯಿಸಬಾರದು, ಅಲ್ಲದೇ ಹೀಗೆ ದಪ್ಪವಾಗಿ ಅನ್ವಯಿಸುವುದರಿಂದ ಇದು ಒಣಗಲು ಸಾಕಷ್ಟು ಹೆಚ್ಚು ಸಮಯ ಬೇಕು.

ನೇಲ್ ಪಾಲೀಶ್ ನ್ನು ಅನ್ವಯಿಸಲು ಅತ್ಯುತ್ತಮವಾದ ಮೂರು ಮಾರ್ಗಗಳೆಂದರೆ: ಉಗುರುಗಳ ಮಧ್ಯಕ್ಕೆ ಮೊದಲು ಮತ್ತು ಉಗುರುಗಳ ಬದಿಯಲ್ಲಿ ನಂತರ ಬಣ್ಣವನ್ನು ಲೇಪಿಸಿ. ಬ್ರಶ್ ನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಬಣ್ಣ ಬಳಿದುಕೊಳ್ಳುವಂತೆ ನೋಡಿಕೊಳ್ಳಿ. ಮೊದಲ ಬಾರಿ ಬಣ್ಣವನ್ನು ಹಚ್ಚಿದ ನಂತರ ಅದು ಸರಿಯಾಗಿ ಒಣಗಲು ಬಿಡಿ. ಅದು ಒಣಗಿದ ನಂತರವಷ್ಟೇ ಇನ್ನೊಂದು ಬಾರಿ ಲೇಪಿಸಿ.

6. ಯಾವಾಗಲೂ ಟಾಪ್ ಕೋಟ್ ಅನ್ನು ಅನ್ವಯಿಸಿ

6. ಯಾವಾಗಲೂ ಟಾಪ್ ಕೋಟ್ ಅನ್ನು ಅನ್ವಯಿಸಿ

ಉಗುರಿನ ಬಣ್ಣವನ್ನು ಹಚ್ಚಿದ ನಂತರ ಯಾವಾಗಲೂ ಟಾಪ್ ಕೋಟ್ ಮಾಡುವುದು ಒಳ್ಳೆಯದು. ಉಗುರುಗಳ ಸುತ್ತ ಸರಿಯಾಗಿ ಬಣ್ಣವನ್ನು ಒರೆಸಿ ಸ್ವಚ್ಛಗೊಳಿಸಿ. ಇದರಿಂದ ಉಗುರುಗಳಿಗೆ ಹಚ್ಚಿದ ಬಣ್ಣ ಒಂದು ಕಡೆಯಿಂದ ಕಿತ್ತುಬರುವುದು ತಪ್ಪುತ್ತದೆ.

 7. ತಣ್ಣೀರಿನ ಬಟ್ಟಲಿನಲ್ಲಿ ನಿಮ್ಮ ಬೆರಳುಗಳನ್ನು ಅದ್ದಿ

7. ತಣ್ಣೀರಿನ ಬಟ್ಟಲಿನಲ್ಲಿ ನಿಮ್ಮ ಬೆರಳುಗಳನ್ನು ಅದ್ದಿ

ನಿಮ್ಮ ಉಗುರುಗಳಿಗೆ ಹಚ್ಚಿದ ಬಣ್ಣವನ್ನು ತ್ವರಿತವಾಗಿ ಒಣಗಿಸಲು ಸಹಾಯವಾಗುವಂತೆ ಮತ್ತು ಯಾವುದೇ ಕ್ರೀಸಿಂಗ್ ಅಥವಾ ಬಬ್ಲಿಂಗ್ (ಬಬಲ್ ಗಳು ಉಂಟಾಗುವುದನ್ನು ತಡೆಯಲು) ಅನ್ನು ತಡೆಯಲು, ನಿಮ್ಮ ಉಗುರುಗಳನ್ನು ತಣ್ಣೀರಿನ ಬಟ್ಟಲಿನಲ್ಲಿ ಒಂದು ನಿಮಿಷ ಮುಳುಗಿಸಿ. ಅಲ್ಲದೆ, ನಿಮ್ಮ ಉಗುರುಗಳನ್ನು ಹೊಳಪು ಮಾಡಿದ ನಂತರ ಕನಿಷ್ಠ ಎರಡು ಗಂಟೆಗಳ ಕಾಲ ಬಿಸಿ ನೀರಿನ ಸ್ನಾನ ಮಾಡುವುದನ್ನು ತಪ್ಪಿಸಿ.

8. ನಿಮ್ಮ ನೇಲ್ ಪಾಲೀಶ್ ಅನ್ನು ಸರಿಯಾಗಿ ಸಂಗ್ರಹಿಸಿಡಿ

8. ನಿಮ್ಮ ನೇಲ್ ಪಾಲೀಶ್ ಅನ್ನು ಸರಿಯಾಗಿ ಸಂಗ್ರಹಿಸಿಡಿ

ನೇಲ್ ಪಾಲೀಶ್ ಗಟ್ಟಿಯಾಗದ ಹಾಗೆ, ಹಾಳಾಗದ ಹಾಗೆ ತಡೆಗಟ್ಟಲು ಅದನ್ನು ಸರಿಯಾದ ತಾಪಮಾನದಲ್ಲಿ ಸ್ಥಿರವಾಗಿಡುವುದು ಬಹಳ ಮುಖ್ಯ. ಅತ್ಯಂತ ತಂಪಾಗಿರುವ ಅಥವಾ ಅತ್ಯಂತ ಬಿಸಿಯಾಗಿರುವ ವಾತಾವರಣದಲ್ಲಿಡದೇ ಸ್ಥಿರವಾಗಿರುವ ತಾಪಮಾನದಲ್ಲಿ ಶೇಖರಿಸಿಡಿ. ನೇಲ್ ಪಾಲೀಶ್ ನ್ನು ಬಳಸಿದ ನಂತರ ಬಾಟಲಿನ ಮೇಲ್ಭಾಗದಲ್ಲಿ ಬಣ್ಣ ಅಂಟಿಕೊಳ್ಳದಂತೆ ತಡೆಯಲು ನೇಲ್ ಪಾಲೀಶ್ ರಿಮೂವರ್ ಅದ್ದಿದ ಹತ್ತಿ ತುಂಡುಗಳಿಂದ ಅದನ್ನು ಒರೆಸಿಡಿ.

ಈ ಮೇಲಿನ ವಿಧಾನಗಳನ್ನು ಅನುಸರಿಸುವುದರಿಂದ ಉಗುರುಗಳಲ್ಲಿ ಉಂಟಾಗುವ ಬಬಲ್ ಗಳನ್ನು ಸುಲಭವಾಗಿ ತಡೆಯಬಹುದು. ಈ ಕ್ರಮಗಳನ್ನು ಅನುಸರಿಸಿದ ನಂತರವೂ ಬಬಲ್ ಗಳು ಉಂಟಾದಲ್ಲಿ ನೀವು ಆ ಪಾಲೀಶ್ ನ್ನು ತೆಗೆದುಹಾಕುವುದೇ ಬಳ್ಳೆಯದು.

ನೇಲ್ ಪಾಲೀಶ್ ಹಚ್ಚಿದ ನಂತರ ಉಂಟಾಗಬಹುದಾದ ಬಬಲ್ ಗಳನ್ನು ತಡೆಗಟ್ಟಲು ನಿಮಗೆ ಇತರ ಯಾವುದಾದರೂ ಉಪಾಯಗಳು ಗೊತ್ತಿದೆಯೇ? ಹಾಗಾದರೆ ನಿಮ್ಮ ಕಮೆಂಟ್ ಗಳ ಮೂಲಕ ನಮಗೆ ತಿಳಿಸಿ.

English summary

How To Avoid Nail Polish Bubbles

When you applied nail polish if bubbles comes it will not look nice, Here are tips to avoid those bubbles, Read on...
X
Desktop Bottom Promotion