For Quick Alerts
ALLOW NOTIFICATIONS  
For Daily Alerts

ಹಾಟ್‌ ಆಯಿಲ್‌ ಟ್ರೀಟ್ಮೆಂಟ್‌ನಿಂದ ಕೂದಲು ಉದುರುವುದನ್ನು ತಡೆಗಟ್ಟಬಹುದೇ?

|

ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದ್ದೇ ತುಂಬಾ ಜನರಿಗೆ ಕಾಡುತ್ತಿರುವ ಸಮಸ್ಯೆಯಾಗಿದೆ. ಏನು ಮಾಡಿದರೂ ಕೂದಲು ಉದುರುವುದು ಕಡಿಮೆಯಾಗುತ್ತಿಲ್ಲ ಏನು ಮಾಡುವುದು ಎಂದು ಕೇಳುತ್ತಾರೆ. ಕೂದಲು ನಾನಾ ಕಾರಣಗಳಿಂದ ಉದುರುತ್ತದೆ, ಆರೋಗ್ಯ ಸಮಸ್ಯೆ, ಹಾರ್ಮೋನ್ ಸಮಸ್ಯೆ, ವಾತಾವರಣದಲ್ಲಿರುವ ಮಾಲಿನ್ಯ ಈ ಎಲ್ಲಾ ಕಾರಣಗಳಿಂದಲೂ ಕೂದಲು ಉದುರುತ್ತದೆ.

hot oil massage for hair

ಆದರೆ ಸ್ವಲ್ಪ ಕೂದಲಿನ ಆರೈಕೆ ಕಡೆ ಗಮನ ನೀಡಿದರೆ ಕೂದಲು ಉದುರುವುದನ್ನು ತಡೆಗಟ್ಟಬಹುದು. ಕೂದಲು ಉದುರುವುದನ್ನು ತಡೆಗಟ್ಟುವಲ್ಲಿ ಹಾಟ್‌ ಆಯಿಲ್ ಮಸಾಜ್‌ ( ಎಣ್ಣೆಯನ್ನು ಬಿಸಿ ಮಾಡಿ ಹಚ್ಚುವುದು) ಒಳ್ಳಯದು ಎಂದು ಮನೆಯಲ್ಲಿ ಅಜ್ಜಿ, ಅಮ್ಮ ಹೇಳುವುದನ್ನು ಕೇಳಿರಬಹುದು. ಈ ಹಾಟ್‌ ಆಯಿಲ್ ಮಸಾಜ್‌ ನಿಜವಾಗಲೂ ಒಳ್ಳೆಯದೇ? ಇದರಿಂದ ಕೂದಲನ್ನು ಬಲಪಡಿಸಬಹುದೇ ಎಂದು ನೋಡೋಣ ಬನ್ನಿ:

ಹಾಟ್‌ ಆಯಿಲ್ ಟ್ರೀಟ್ಮೆಂಟ್‌:

ಹಾಟ್‌ ಆಯಿಲ್ ಟ್ರೀಟ್ಮೆಂಟ್‌:

ಕೂದಲು ಉದುರುವುದು, ಕೂದಲು ಕವಲೊಡೆಯುವುದು, ಕೂದಲು ಡ್ರೈಯಾಗುವುದು ಹೀಗೆ ಒಂದಲ್ಲಾ ಒಂದು ಕೂದಲಿನ ಸಮಸ್ಯೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಕೂದಲಿನ ಸಮಸ್ಯೆ ತಡೆಗಟ್ಟಲು ಎಣ್ಣೆ ಮಸಾಜ್‌ ಒಳ್ಳೆಯದೆಂದು ಸಹಿಂದಿನಿಂದಲೂ ನಂಬಲಾಗುವುದು. ವಾರದಲ್ಲಿ 2-3 ಬಾರಿ ಎಣ್ಣೆಯನ್ನು ಬಿಸಿ ಮಾಡಿ ಮಸಾಜ್ ಮಾಡುವುದರಿಂದ ಕೂದಲು ಚೆನ್ನಾಗಿರುತ್ತದೆ ಎಂದು 2016ರ ಅಧ್ಯಯನ ವರದಿ ಹೇಳಿದೆ.

ಕೂದಲಿನ ಬುಡವನ್ನು ಬಲವಾಗಿಸುತ್ತೆ

ಕೂದಲಿನ ಬುಡವನ್ನು ಬಲವಾಗಿಸುತ್ತೆ

ಕೂದಲಿನ ಬುಡ ಸಡಿಲವಾದಾಗ ಕೂದಲು ಉದುರುವ ಸಮಸ್ಯೆ ಉಂಟಾಗುವುದು. ಉಗುರು ಬೆಚ್ಚಗಿನ ಎಣ್ಣೆಯನ್ನು ತಲೆಗೆ ಹಾಕಿ ಮಸಾಜ್ ಮಾಡುವುರಿಂದ ಕೂದಲಿನ ಬುಡ ಬಲವಾಗುವುದು.

 ಹಾಟ್‌ ಆಯಿಲ್‌ ಟ್ರೀಟ್ಮೆಂಟ್‌ ಹೇಗೆ ಮಾಡಬೇಕು?

ಹಾಟ್‌ ಆಯಿಲ್‌ ಟ್ರೀಟ್ಮೆಂಟ್‌ ಹೇಗೆ ಮಾಡಬೇಕು?

ಮೊದಲಿಗೆ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ, ಕುದಿಸಬೇಡಿ. ನಂತರ ಉಗುರು ಬೆಚ್ಚಗಿನ ಎಣ್ಣೆಯನ್ನು ತಲೆಗೆ ಹಚ್ಚಿ 30 ನಿಮಿಷ ಬಿಟ್ಟು ಮೈಲ್ಡ್ ಶ್ಯಾಂಪೂ ಹಚ್ಚಿ ತಲೆ ತೊಳೆಯಿರಿ.

ಈ ರೀತಿ ಮಸಾಜ್‌ ಮಾಡುವುದರಿಂದ ಮತ್ತೊಂದು ಪ್ರಯೋಜನವೆಂದರೆ ತಲೆಹೊಟ್ಟಿನ ಸಮಸ್ಯೆ ಕೂಡ ದೂರಾಗುವುದು.

 ಹಾಟ್ ಆಯಿಲ್‌ ಮಸಾಜ್‌ ಎಲ್ಲರಿಗೂ ಮಾಡಬಹುದೇ?

ಹಾಟ್ ಆಯಿಲ್‌ ಮಸಾಜ್‌ ಎಲ್ಲರಿಗೂ ಮಾಡಬಹುದೇ?

ತ್ವಚೆ ಸಮಸ್ಯೆ ಅಥವಾ ಸೋರಿಯಾಸಿಸ್‌ನಂಥ ಸಮಸ್ಯೆಯಿದ್ದರೆ ನಿಮ್ಮ ವೈದ್ಯರ ಸಲಹೆ ಪಡೆದ ಬಳಕವಷ್ಟೇ ಹಚ್ಚಿ. ಇಲ್ಲದಿದ್ದರೆ ಹಾಟ್‌ ಆಯಿಲ್‌ ಟ್ರೀಟ್ಮೆಂಟ್‌ ಯಾರು ಬೇಕಾದರೂ ಮಾಡಬಹುದು.

ಹಾಟ್‌ ಆಯಿಲ್‌ ಟ್ರೀಟ್ಮೆಂಟ್‌ಗೆ ಯಾವ ಎಣ್ಣೆ ಬಳಸಬಹುದು?

ತೆಂಗಿನೆಣ್ಣೆ, ಬಾದಾಮಿ ಎಣ್ಣೆ, ಜೊಜೊಬಾ ಎಣ್ಣೆ ಹೀಗೆ ನಿಮಗೆ ಸೂಕ್ತವಾದ ಎಣ್ಣೆಯನ್ನು ತಲೆಗೆ ಹಚ್ಚಬಹುದು.

ಹಾಟ್‌ ಆಯಿಲ್ ಮಸಾಜ್‌ ಮಾಡಿದಾಗ ಏನಾಗುತ್ತೆ?

ಹಾಟ್‌ ಆಯಿಲ್‌ ಮಸಾಜ್‌ ಮಾಡಿದಾಗ ಕೂದಲಿನ ಬುಡ ಬಲವಾಗುವುದು, ಅಲ್ಲದೆ ಕೂದಲಿನ ಬುಡದಲ್ಲಿ ಮಾಯಿಶ್ಚರೈಸರ್ ಇರುತ್ತದೆ, ಇದರಿಂದ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಸೂಚನೆ: ಕೂದಲಿಗೆ ಹಾಟ್‌ ಆಯಿಲ್ ಟ್ರೀಟ್ಮೆಂಟ್‌ ಅಂತ ತುಂಬಾ ಬಿಸಿಯಾದ ಎಣ್ಣೆ ಬಳಸಬೇಡಿ. ತಲೆ ಬುಡ ಸುಟ್ಟು ಹೋಗುತ್ತೆ. ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ, ನಂತರ ಕೈಯಿಂದ ತೆಗೆದು ತಲೆಗೆ ಹಾಕಿ, ಹಾಗೇ ನೇರವಾಗಿ ಸುರಿಯಬೇಡಿ.ಉಗುರು ಬೆಚ್ಚಗಿನ ಎಣ್ಣೆಯಿಂದ ಮಸಾಜ್‌ ಮಾಡಿ, ಒಂದು ಟವಲ್‌ ಅನ್ನು ಬಿಸಿ ನೀರಿನಲ್ಲಿ ಅದ್ದಿ ತಲೆಗೆ ಸುತ್ತಿದರೆ ಕೂದಲಿಗೆ ಮತ್ತಷ್ಟು ಒಳ್ಳೆಯದು.

English summary

How Hot Oil Massage In Hair Growth In Kannada

Does hot oil massage help for hairr growh, read on....
X
Desktop Bottom Promotion