For Quick Alerts
ALLOW NOTIFICATIONS  
For Daily Alerts

ಮೇಕಪ್‌ನಿಂದ ಹಾಳದ ತುಟಿದ ಅಂದ ಮರಳಿ ನೀಡುವ ಹೋಮ್‌ಮೇಡ್ ಲಿಪ್‌ಬಾಮ್

|

ಮುಖದ ಸೌಂದರ್ಯ ಎಂದು ಬಂದಾಗ ಕಣ್ಣು ಹಾಗೂ ತುಟಿಗೆ ಹೆಚ್ಚಿನ ಗಮನ ಕೊಡುತ್ತೇವೆ, ನಂತರ ಮೂಗು, ಹುಬ್ಬು, ಕೆನ್ನೆ ಅಂತೆಲ್ಲಾ ನೋಡುತ್ತೇವೆ. ಕಣ್ಣುಗಳು ಅಂದವಾಗಿದ್ದು, ತುಟಿಗಳು ಮೃದುವಾಗಿ ಹೊಳಪಿನಿಂದ ಕೂಡಿದ್ದರೆ ಆ ಮುಖದ ಆಕರ್ಷಣೆಯೇ ಬೇರೆ.

Chemical Free Lip Balm Recipes

ಇನ್ನು ತುಟಿಯ ಅಂದಕ್ಕಾಗಿ ಲಿಪ್‌ಸ್ಟಿಕ್‌, ಲಿಪ್‌ ಬಾಮ್ ಎಲ್ಲಾ ಬಳಸುತ್ತೇವೆ, ಆದರೆ ಅವುಗಳಲ್ಲಿ ಕೆಮಿಕಲ್ ಅಂಶ ಇರುವುದರಿಂದ ತುಟಿಯ ಮೇಲೆ ಅಡ್ಡಪರಿಣಾಮ ಬೀರುವುದು. ತುಟಿ ನೈಸರ್ಗಿಕವಾಗಿ ತನ್ನ ಮೃದುತ್ವ ಹಾಗೂ ಹೊಳಪು ಕಳೆದುಕೊಂಡು ತುಟಿಗೆ ಮೇಕಪ್ ಮಾಡಿದರೆ ಮಾತ್ರ ಚೆಂದ ಕಾಣವಂತೆ ಆಗುವುದು.
ನಿಮ್ಮ ತುಟಿಯೂ ಇದೇ ರೀತಿಯಾಗಿದ್ದರೆ ಮೇಕಪ್ ಹಾಕದೆಯೂ ತುಟಿ ಆಕರ್ಷಕವಾಗಿ ಕಾಣಿಸುವುದು ಹೇಗೆ ಎಂದು ನೀವು ಯೋಚಿಸುತ್ತಿದ್ದರೆ ಈ ಹೋಮ್‌ ಮೇಡ್‌ ಲಿಪ್‌ ಬಾಮ್‌ ಟ್ರೈ ಮಾಡಿ.

ಮನೆಯಲ್ಲಿ ಇರುವಾಗ, ಆಫೀಸ್‌ಗೆ ಹೋಗುವಾಗ ಈ ಲಿಪ್‌ ಬಾಮ್ ಬಳಸಬಹುದಾಗಿದ್ದು ನೋಡಲು ಆಕರ್ಷಕವಾಗಿ ಕಾಣುವುದು.

ಬನ್ನಿ ಲಿಪ್‌ ಬಾಮ್‌ಗೆ ಬಳಸುವ ವಸ್ತುಗಳಾವುವು, ತಯಾರಿಸುವುದು ಹೇಗೆ ಎಂದು ನೋಡೋಣ:

 ಮಿಂಟ್ ಚಾಕೋಲೆಟ್ ಲಿಪ್ ಬಾಮ್

ಮಿಂಟ್ ಚಾಕೋಲೆಟ್ ಲಿಪ್ ಬಾಮ್

* 2 ಚಮಚ ಬೀವ್ಯಾಕ್ಸ್ ಪೆಲೆಟ್ಸ್ (white beeswax pellets)

* 2 ಚಮಚ ಬಾದಾಮಿ ಎಣ್ಣೆ

* ಚಮಚ ಕೋಕಾ ಪುಡಿ

* 2 ಹನಿ ಪೆಪ್ಪರ್‌ಮಿಂಟ್ ಆಯಿಲ್

ಮಾಡುವ ವಿಧಾನ

* ಬೀವ್ಯಾಕ್ಸ್ ಪೆಲೆಟ್ಸ್ ಕರಗಿಸಿ

* ಅದು ಕರಗುತ್ತಿದ್ದಂತೆ ಕೋಕಾಪುಡಿ ಹಾಕಿ ತಿರುಗಿಸಿ.

* ಈಗ ಬಾದಾಮಿ ಎಣ್ಣೆ ಹಾಗೂ ಪೆಪ್ಪರ್‌ಮಿಂಟ್‌ ಆಯಿಲ್‌ ಹಾಕಿ ಮಿಕ್ಸ್ ಮಾಡಿ ಉರಿಯಿಂದ ಇಳಿಸಿ ಇಡಿ.

* ತಣ್ಣಗಾದ ಮೇಲೆ ಚಿಕ್ಕ ಡಬ್ಬದಲ್ಲಿ ಹಾಕಿಟ್ಟು ಬಳಸಿ.

ರಾಸ್‌ಬೆರ್ರಿ ಮತ್ತು ಲೆಮನ್‌ ಲಿಪ್‌ ಬಾಮ್‌

ರಾಸ್‌ಬೆರ್ರಿ ಮತ್ತು ಲೆಮನ್‌ ಲಿಪ್‌ ಬಾಮ್‌

ಬೇಕಾಗುವ ಸಾಮಗ್ರಿ

* 2 ಚಮಚ ರಾಸ್‌ಬೆರ್ರಿ ಜೆಲಾಟಿನ್ ಮಿಕ್ಸ್

* 2 ಚಮಚ ತೆಂಗಿನೆಣ್ಣೆ

*3-4 ಚಮಚ ಲೆಮನ್‌ ಎಸೆನ್‌ಶಿಯಲ್ ಆಯಿಲ್

* 1 ಚಮಚ

* ಮೈಕ್ರೋವೇವ್ ಸೇಫ್‌ ಬೌಲ್‌

ಮಾಡುವ ವಿಧಾನ

* ತೆಂಗಿನೆಣ್ಣೆಯನ್ನು ಬೌಲ್‌ನಲ್ಲಿ ಹಾಕಿ 20 ಸೆಕೆಂಡ್ ಬಿಸಿ ಮಾಡಿ

* ಈಗ ರಾಸ್‌ಬೆರ್ರಿ ಜೆಲಾಟಿನ್ ಹಾಕಿ ಮಿಕ್ಸ್ ಮಾಡಿ.

* ನಂತರ ಪುನಃ ಮೈಕ್ರೋವೇವ್‌ನಲ್ಲಿ ಬಿಸಿ ಮಾಡಿ, ಜೆಲಾಟಿನ್ ಕರಗಬೇಕು, ಎಣ್ಣೆ ಮೇಲ್ಭಾಗದಲ್ಲಿ ತೇಲಬೇಕು.

* ಈಗ ಲೆಮನ್‌ ಎಸೆನ್‌ಶಿಯಲ್ ಹಾಕಿ ಮಿಕ್ಸ್‌ ಮಾಡಿ.

* ನಂತರ ಒಂದು ಚಿಕ್ಕ ಗಾಜಿನ ಡಬ್ಬದಲ್ಲಿ ಹಾಕಿ, ಫ್ರೀಜರ್‌ನಲ್ಲಿ ಹಾಕಿಡಿ.

ರೋಸ್‌ ಲಿಪ್‌ ಬಾಮ್‌

ರೋಸ್‌ ಲಿಪ್‌ ಬಾಮ್‌

ರೋಸ್‌ ಲಿಪ್‌ ಬಾಮ್‌

ಬೇಕಾಗುವ ಸಾಮಗ್ರಿ

1 ಚಮಚ ಬೀ ವ್ಯಾಕ್ಸ್ (ಮೇಣ)

1/2 ಚಮಚ ಹರಳೆಣ್ಣೆ

3 ಚಮಚ ರೋಸ್‌ ಆಯಿಲ್

1 ಚಮಚ ವನಿಲ್ಲಾ ರಸ

1 ಚಮಚ ಕೋಕಾ ಬಟರ್

1/4 ಚಮಚ ಆಲ್ಕಾನೆಟ್ ರೂಟ್ ಪೌಡರ್ (alkanet root)

ಮಾಡುವ ವಿಧಾನ

* ಮೇಣ ಕರಗಿಸಿ ಅದರಲ್ಲಿ ಹರಳೆಣ್ಣೆ ಹಾಕಿ, ನಂತರ ರೋಸ್‌ ಆಯಿಲ್, ಕೋಕಾ ಬಟರ್ ಹಾಕಿ ಮಿಕ್ಸ್ ಮಾಡಿ. ವೆನಿಲ್ಲಾ ರಸದ ಒಂದೆರಡು ಹನಿಯೂ ಸೇರಿಸಿ

* ಈಗ ಆಲ್ಕಾನೆಟ್ ರೂಟ್ ಪೌಡರ್ ಸೇರಿಸಿ.

* ನಂತರ ತಣ್ಣಗಾದ ಮೇಲೆ ಒಂದು ಡಬ್ಬದಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಟ್ಟು ಬಳಸಿ.

ಇದನ್ನು ಹಚ್ಚಿದಾಗ ತುಟಿ ಲಿಪ್‌ಸ್ಟಿಕ್‌ ಹಚ್ಚಿದಂತೆ ಅಂದವಾಗಿ ಕೂಡ ಕಾಣುವುದು.

ಶಿಯಾ ಬಟರ್ ಲಿಪ್‌ಬಾಮ್

ಶಿಯಾ ಬಟರ್ ಲಿಪ್‌ಬಾಮ್

ಬೇಕಾಗುವ ಸಾಮಗ್ರಿ

2 ಚಮಚ ಮೇಣ

2 ಚಮಚ ಶಿಯಾ ಬಟರ್

2 ಚಮಚ ತೆಂಗಿನೆಣ್ಣೆ

2-3 ಚಮಚ ಎಸೆನ್‌ಶಿಯಲ್ ಆಯಿಲ್

ಮಾಡುವುದು ಹೇಗೆ

* ಮೇಣ, ಶಿಯಾ ಬಟರ್, ತೆಂಗಿನೆಣ್ಣೆ ಮೂರು ಸಾಮಗ್ರಿ ಜೊತೆಗೆ ಹಾಕಿ ಕರಗಿಸಿ, ಆದರೆ ಕುದಿಸಬೇಡಿ.

* ಎಲ್ಲಾ ಕರಗಿದ ಮೇಲೆ ಎಸೆನ್‌ಶಿಯಲ್ ಹಾಕಿ.

* ನಂತರ ಗಾಜಿನ ಡಬ್ಬದಲ್ಲಿ ತಣ್ಣಗಾದ ಮೇಲೆ ಬಳಸಿ.

English summary

Homemade Chemical Free Lip Balm Recipes in Kannada

Homemade Chemical Free Lip Balm Recipes in Kannada
Story first published: Friday, February 19, 2021, 18:51 [IST]
X
Desktop Bottom Promotion