ಮೆಂತೆ ಕಾಳಿನ ಕಾರುಬಾರಿಗೆ ಭೇಷ್ ಎನ್ನಲೇಬೇಕು!

By: manu
Subscribe to Boldsky

ಅಡುಗೆಮನೆ ಎಂದಾಕ್ಷಣ ಕೆಲವೊಂದು ಸಾಂಬಾರ ವಸ್ತುಗಳಲ್ಲಿ ಕೆಲವು ಸದಾ ಇರಲೇ ಬೇಕು. ಇವು ಖಾಲಿಯಾಗುವ ಮುನ್ನವೇ ಅಂಗಡಿಯಿಂದ ಖರೀದಿಸಿ ತಂದು ಮರುತುಂಬಿಕೊಳ್ಳದಿದ್ದರೆ ಗೃಹಿಣಿಯರಿಗೆ ಸಮಾಧಾನವೇ ಇರುವುದಿಲ್ಲ. ಸಾಸಿವೆ, ಅರಿಶಿನ ಪುಡಿ, ಮೆಣಸಿನ ಪುಡಿ, ಮೆಂತೆ ಇವೆಲ್ಲಾ ಅಡುಗೆಮನೆಯಲ್ಲಿ ಸದಾ ಇರಲೇಬೇಕಾದ ಸಾಮಾಗ್ರಿಗಳಾಗಿವೆ.... ಅಡುಗೆಮನೆಯ ಮೆಂತೆ- ಕೂದಲಿನ ಸರ್ವ ರೋಗಕ್ಕೂ ರಾಮಬಾಣ

ಅದರಲ್ಲೂ ಮೆಂತೆ ಎಂದರೆ ಸಾಂಬಾರ ಪದಾರ್ಥಗಳಲ್ಲಿ ತನ್ನದೇ ಆದ ಪ್ರಾಮುಖ್ಯತೆ ಪಡೆದುಕೊಂಡಿರುವ ಮೆಂತೆ ಮತ್ತು ಮೆಂತೆ ಸೊಪ್ಪನ್ನು ವಿವಿಧ ರೀತಿಯ ಔಷಧಿಗಳಲ್ಲಿ ಬಳಸುತ್ತಾರೆ. ಆಯುರ್ವೇದದಲ್ಲಿಯೂ ಮೆಂತೆಗೆ ವಿಶೇಷ ಸ್ಥಾನವನ್ನು ನೀಡಲಾಗುತ್ತದೆ.ಆಯುರ್ವೇದದಲ್ಲಿಯೂ ಮೆಂತೆಗೆ ವಿಶೇಷ ಸ್ಥಾನವನ್ನು ನೀಡಲಾಗುತ್ತದೆ. ಇಂತಹ ಗುಣಗಳುಳ್ಳ ಮೆಂತೆಯನ್ನು, ಕೂದಲಿನ ಹಾಗೂ ಮುಖದ ಸೌಂದರ್ಯಕ್ಕೆ ಹೇಗೆ ಬಳಸಲಾಗುತ್ತದೆ ಎಂಬುದನ್ನು ನೋಡೋಣ ಬನ್ನಿ ........  

ಮೆಂತೆ ಕಾಳಿನಿಂದ ಮಾಡಿದ ಶಾಂಪೂ!

ಮೆಂತೆ ಕಾಳಿನಿಂದ ಮಾಡಿದ ಶಾಂಪೂ!

*ಮೊದಲು ಮೆ೦ತೆಕಾಳುಗಳನ್ನು ಏಳೆ೦ಟು ಗಂಟೆಗಳ ನೆನೆಸಿಡಿರಿ

*ಕಾಳುಗಳು ನೆನೆದು ಮೆತ್ತಗಾಗುತ್ತಲೇ ಅವುಗಳನ್ನು ಮಿಕ್ಸರ್ ಗ್ರೈ೦ಡರ್ ನಲ್ಲಿ ತಿರುವಿ ಪೇಸ್ಟ್‌ನ ರೂಪಕ್ಕೆ ತ೦ದುಕೊಳ್ಳಿರಿ.

*ಈ ಪೇಸ್ಟ್ ಅನ್ನು ನಿಮ್ಮ ನೆತ್ತಿಗೆ ನೇರವಾಗಿ ಹಚ್ಚಿಕೊಳ್ಳಿರಿ ಹಾಗೂ ಅದು ನೆತ್ತಿಯ ಮೇಲೆ ಹಾಗೆಯೇ ಒಣಗಲು ಅವಕಾಶ ನೀಡಿರಿ. ಬಳಿಕ ಮ೦ದವಾದ ಶ್ಯಾ೦ಪೂವಿನಿ೦ದ ಅದನ್ನು ತೊಳೆದುಕೊಳ್ಳುವುದರ ಮೂಲಕ ಕೋಮಲವಾದ ಕೇಶರಾಶಿಯನ್ನು ನಿಮ್ಮದಾಗಿಸಿಕೊಳ್ಳಿರಿ.

ಡ್ಯಾಂಡ್ರಫ್ ಸಿಕ್ಕುಸಿಕ್ಕಾದ ಕೂದಲಿಗೆ....

ಡ್ಯಾಂಡ್ರಫ್ ಸಿಕ್ಕುಸಿಕ್ಕಾದ ಕೂದಲಿಗೆ....

ಚೆನ್ನಾಗಿ ಜಜ್ಜಿದ ಮೆ೦ತೆಕಾಳುಗಳನ್ನು ಬೆಚ್ಚಗಿನ ತೈಲದಲ್ಲಿ ಬೆರೆಸಿದಲ್ಲಿ, ಈ ಮಿಶ್ರಣವು ನೆತ್ತಿಯ ತುರಿಕೆಯನ್ನೂ ಹಾಗೂ ತಲೆಹೊಟ್ಟಿನ ಅಥವಾ ಡ್ಯಾಂಡ್ರಫ್ ಕಿರಿಕಿರಿಯನ್ನೂ ಹೋಗಲಾಡಿಸುವ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಕೆಲಸಮಾಡುತ್ತದೆ.

ಕೂದಲು ಉದುರುವುದನ್ನು ತಡೆಗಟ್ಟಲು

ಕೂದಲು ಉದುರುವುದನ್ನು ತಡೆಗಟ್ಟಲು

ಮೆಂತೆ ಬೀಜವನ್ನು ಹಾಲಿನ ಜೊತೆ ರುಬ್ಬಿ ತಲೆಗೆ ಹಚ್ಚುವುದರಿಂದ ಕೂದಲು ಉದುರುವುದನ್ನು ತಡೆಯಬಹುದು.

ಚರ್ಮದ ಸೌಂದರ್ಯಕ್ಕೆ

ಚರ್ಮದ ಸೌಂದರ್ಯಕ್ಕೆ

ಚರ್ಮದ ಸೌಂದರ್ಯಕ್ಕೆ ಕೊಂಚ ಮೆಂತೆಪುಡಿಯನ್ನು ಮೊಸರಿನೊಂದಿಗೆ ಮಿಶ್ರಣ ಮಾಡಿ ದಪ್ಪನಾದ ಲೇಪನ ತಯಾರಿಸಿ. ಬಿಸಿಲಿಗೆ ಒಡ್ಡಿದ್ದ ಭಾಗ, ಮುಖ, ಕುತ್ತಿಗೆ, ಕೈಗಳಿಗೆ ಹಚ್ಚಿ ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ವಾರಕ್ಕೆ ಎರಡು ಅಥವಾ ಮೂರು ಬಾರಿ ಪುನರಾವರ್ತಿಸಿ.

ತ್ವಚೆಯ ಅಂದಕ್ಕೆ

ತ್ವಚೆಯ ಅಂದಕ್ಕೆ

ಕೊಂಚ ಮೆಂತೆಕಾಳುಗಳನ್ನು ನೆನೆಸಿ ಅರೆದು ಈ ಮಿಶ್ರಣಕ್ಕೆ ಹಸಿ ಹಾಲು ಹಾಕಿ ದಪ್ಪನೆಯ ಲೇಪನ ತಯಾರಿಸಿ. ಲೇಪನವನ್ನು ಹಚ್ಚಿ ವೃತ್ತಾಕಾರದಲ್ಲಿ ಮಸಾಜ್ ಮಾಡಿ ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ

 
English summary

List of Fenugreek Benefits fof skin and haircare

Eating foods that have fenugreek can actually purify the blood and lead to better, clearer skin.If applied externally on the skin and the hair, fenugreek can give you multiple benefits. Fenugreek seeds boiled in water and used as a rinse can reduce hair fall to a great extent. This herb has proven to be good for various hair problems, like balding, hair fall and even dandruff...have a look
Please Wait while comments are loading...
Subscribe Newsletter