For Quick Alerts
ALLOW NOTIFICATIONS  
For Daily Alerts

ಹಳದಿ ಉಗುರುಗಳನ್ನು ಬಿಳಿಯಾಗಿಸುವುದು ಹೇಗೆ?

By Super
|

ಅಂದವಾಗಿಸಲ್ಪಟ್ಟ ಕೈ ಹಾಗೂ ಕಾಲ್ಬೆರಳುಗಳು, ಉಗುರುಗಳು ಮಹಿಳೆಯರ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಸಹಾಯಕಾರಿ. ಆದಾಗ್ಯೂ ದೀರ್ಘ ಸಮಯದವರೆಗೆ ಉಗುರುಗಳನ್ನು ಅಂದವಾಗಿಸುವುದು, ಸ್ವಚ್ಛವಾಗಿಡುವುದು, ಬಿಳಿಯಾಗಿರಿಸಿಕೊಳ್ಳುವುದು ಕಷ್ಟದ ಕೆಲಸ. ಅಲ್ಲದೇ ಉಗುರುಗಳನ್ನು ಅಂದವಾಗಿಸಲು (ಮೆನಿಕ್ಯೂರ್) ಹೆಚ್ಚು ಹಣವೂ ಬೇಕಾಗುವುದರಿಂದ ಉಗುರುಗಳ ಸೌಂದರ್ಯದ ಬಗ್ಗೆ ಗಮನಹರಿಸುವುದು ಅಷ್ಟು ಸುಲಭವಲ್ಲ.

ಪಾರ್ಲರ್ ಗಳಲ್ಲಿ ಮ್ಯಾನಿಕ್ಯೂಬ್/ ಉಗುರುಗಳನ್ನು ಅಂದವಾಗಿಸುವುದಕ್ಕೆ ಸಾಕಷ್ಟು ಹಣ ವ್ಯಯ ಮಾಡಬೇಕಾಗುತ್ತದೆ. ಮಹಿಳೆಯರಲ್ಲಿ ಹೆಚ್ಚಾಗಿ ಇರುವ ಉಗುರಿನ ಸಮಸ್ಯೆಯೆಂದರೆ ಹಳದಿ ಉಗುರುಗಳು.

ಉಗುರುಗಳ ಚಿಕಿತ್ಸೆ ದುಬಾರಿ ಮಾತ್ರವಲ್ಲದೆ ಇದು ಉಗುರಿನ ಆರೋಗ್ಯಕ್ಕೂ ಹಾನಿಕರ. ಆದ್ದರಿಂದ ನಿಮ್ಮ ಉಗುರುಗಳ ಚಿಕಿತ್ಸೆಯನ್ನು ಮನೆಮದ್ದಿನ ಮೂಲಕವೇ ಮಾಡಬಹುದು.

ಅಂದದ ಉಗುರುಗಳಿಗೆ ಇಲ್ಲಿ ಕೆಲವು ನೈಸರ್ಗಿಕ ಚಿಕಿತ್ಸೆಗಳನ್ನು ಹೇಳಲಾಗಿದೆ.

ಹಳದಿ ಉಗುರುಗಳಿಗೆ ನೈಸರ್ಗಿಕ ಚಿಕಿತ್ಸೆ

ಟೂತ್ಪೇಸ್ಟ್ ಅದ್ಭುತಗಳು

ಟೂತ್ಪೇಸ್ಟ್ ಅದ್ಭುತಗಳು

ಬಿಳಿ ಮತ್ತು ಕ್ಲೀನ್ ಉಗುರುಗಳನ್ನು ಪಡೆಯಲು ಸರಳ ರೀತಿಯಲ್ಲಿ ಟೂತ್ಪೇಸ್ಟ್ ಗಳಿಂದ ಉಗುರುಗಳನ್ನು ಉಜ್ಜಿ. ಇದು ಕೇವಲ ಇದು ಉಗುರುಗಳ ಕಲೆಗಳನ್ನು ತೆಗೆದುಹಾಕುವಲ್ಲಿ ಮಾತ್ರ ಸಹಾಯ ಮಾಡದೆ ಉಗುರುಗಳ ಹೊಳಪನ್ನು ಹೆಚ್ಚಿಸುವಲ್ಲಿಯೂ ಸಹಕಾರಿಯಾಗಿದೆ!

ನಿಂಬೆ ಮ್ಯಾಜಿಕ್

ನಿಂಬೆ ಮ್ಯಾಜಿಕ್

ನಿಂಬೆ, ಲೆಕ್ಕವಿಲ್ಲದಷ್ಟು ಅನುಕೂಲಗಳನ್ನು ಹೊಂದಿರುವ ಮತ್ತೊಂದು ನೈಸರ್ಗಿಕ ಉತ್ಪನ್ನವಾಗಿದೆ. ನಿಮ್ಮ ಎಲ್ಲಾ ಹಳದಿಯಾಗಿರುವ ಮತ್ತು ಕಲೆಗಳುಳ್ಳ ಉಗುರುಗಳನ್ನು ಸ್ವಚ್ಛ ಮಾಡಲು ನಿಂಬೆ ನೀರಿನಲ್ಲಿ ಉಗುರುಗಳನ್ನು ಅದ್ದಿ ತೆಗೆಯುವ ಚಿಕಿತ್ಸೆ ಮಾಡಬಹುದು. ಇದು ಸಂಪೂರ್ಣವಾಗಿ ಸುರಕ್ಷಿತ ಮತ್ತು ನಂತರ ಉತ್ತಮ ಪರಿಣಾಮಗಳನ್ನು ಕಾಣಬಹುದು!

ನಿಂಬೆ ಸಾರಯುಕ್ತ ಎಣ್ಣೆಗಳನ್ನು ಬಳಸಿಯೂ ಉಗುರುಗಳನ್ನು ಬಿಳಿಯಾಗಿಸಬಹುದು. ಆದರೆ ಉತ್ತಮ ಪರಿಣಾಮಕ್ಕಾಗಿ ಈ ಚಿಕಿತ್ಸೆಯನ್ನು ನಿರಂತರವಾಗಿ ಮಾಡಿ. ಒಂದು ಬಟ್ಟಲಲ್ಲಿ ತೈಲವನ್ನು ಸುರಿದು ಒಂದೆರಡು ನಿಮಿಷಗಳ ಕಾಲ ಬೆರಳುಗಳನ್ನು ಅದರಲ್ಲಿ ಅದ್ದಿ. ನಂತರ ಉಗುರುಗಳನ್ನು ಚೆನ್ನಾಗಿ ತೊಳೆಯಿರಿ.

ಅಡುಗೆ ಸೋಡ ಮತ್ತು ನಿಂಬೆ ರಸ

ಅಡುಗೆ ಸೋಡ ಮತ್ತು ನಿಂಬೆ ರಸ

ಉತ್ತಮ ಗುಣಮಟ್ಟದ ಅಡುಗೆ ಸೋಡ ಮತ್ತು ನಿಂಬೆ ರಸ ಸೇರಿಸಿ ಪೇಸ್ಟ್ ಮಾಡಿ. ಇದನ್ನು ಉಗುರುಗಳಿಗೆ ಹಚ್ಚಿ. ಇದು ಸಂಪೂರ್ಣವಾಗಿ ಹಳದಿ ಉಗುರುಗಳನ್ನು ಹೋಗಲಾಡಿಸಲು ಸಹಾಯಮಾಡುತ್ತದೆ.

ಸತು ಮತ್ತು ವಿಟಮಿನ್ ಇ ಜೀವಸತ್ವಗಳ ಹೆಚ್ಚಳ

ಸತು ಮತ್ತು ವಿಟಮಿನ್ ಇ ಜೀವಸತ್ವಗಳ ಹೆಚ್ಚಳ

ದೇಹದಲ್ಲಿ ಸತು ಖನಿಜಾಂಶದ ಕೊರತೆ ಹಳದಿ ಉಗುರುಗಳ ಮೂಲ ಕಾರಣಗಳಲ್ಲಿ ಒಂದಾಗಿದೆ. ನಿಮ್ಮ ದೈನಂದಿನ ಊಟ ಸತು ಪೂರಕ ಪ್ರಮಾಣವನ್ನು ಹೆಚ್ಚಿಸಲು ಪ್ರಯತ್ನಿಸಿ. ಇದು ಶಾಶ್ವತವಾಗಿ ನಿಮ್ಮ ಉಗುರಿನ ಸಮಸ್ಯೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ಅಲ್ಲದೆ, ವಿಟಮಿನ್ ಈ ಹಳದಿ ಉಗುರುಗಳ ಬಿಕ್ಕಟ್ಟನ್ನು ಗುಣಪಡಿಸಲು ಮಾಂತ್ರಿಕ ರೀತಿಯಲ್ಲಿ ಸಹಾಯ ಮಾಡುತ್ತದೆ. ಈ ಜೀವಸತ್ವ ಇರುವ ಪದಾರ್ಥಗಳನ್ನು ಹೆಚ್ಚೆಚ್ಚು ಸೇವಿಸಿ.

ಬಫರಿಂಗ್ ಮತ್ತು ಮಾಯಿಶ್ಚರೈಸಿಂಗ್

ಬಫರಿಂಗ್ ಮತ್ತು ಮಾಯಿಶ್ಚರೈಸಿಂಗ್

ನೀವು ಕಾಲಕಾಲಕ್ಕೆ ನಿಮ್ಮ ಕೈ ಉಗುರುಗಳನ್ನು ರಕ್ಷಿಸಲು ಮಾಯಿಶ್ಚರೈಸರ್ ಉಪಯೋಗಿಸಿ. ಉಗುರುಗಳನ್ನು ಬಫರ್ ಮಾಡಿ ಮತ್ತು ನಂತರ ಅವುಗಳನ್ನು ತೊಳೆಯಿರಿ. ಒಮ್ಮೆ ಶುಷ್ಕವಾದರೆ ಉತ್ತಮ ಗುಣಮಟ್ಟದ ಮಾಯಿಶ್ಚರೈಸರ್ ಮಾಡಿ ನೇಲ್ ಪಾಲಿಶ್ ಮಾಡಿ. ಇದು ಉಗುರುಗಳು ಹೀಗೆ ಹಳದಿಯಾಗಿರುವುದನ್ನು ತಪ್ಪಿಸಿ ಬಾಹ್ಯ ಅಂಶಗಳನ್ನು ರಕ್ಷಿಸುತ್ತದೆ.

 ಉಗುರು ಬೆಳ್ಳಗಾಗಿಸಲು ಉಪಾಯ

ಉಗುರು ಬೆಳ್ಳಗಾಗಿಸಲು ಉಪಾಯ

ನೀವು ಯಾವುದೇ ಸಮಸ್ಯೆಗಳಿಗೆ ಮನೆಯಲ್ಲಿ ಅತ್ಯುತ್ತಮ ನೈಸರ್ಗಿಕ ಪರಿಹಾರಗಳನ್ನು ಕಂಡುಕೊಳ್ಳಬಹುದು. ಈ ಚಿಕಿತ್ಸೆಗಳ ನಿಯಮಿತ ಪಾಲನೆ, ಪರಿಪೂರ್ಣ ಫಲಿತಾಂಶಗಳನ್ನು ನೀಡುತ್ತದೆ! ಆದಾಗ್ಯೂ ಸಮಸ್ಯೆ ಹೋಗದಿದ್ದರೆ, ವೈದ್ಯರ ಬಳಿ ಸಮಸ್ಯೆಯನ್ನು ಹೇಳಿ ಸಲಹೆ ಪಡೆದುಕೊಳ್ಳಬಹುದು.

English summary

How To Treat Yellow Nails Naturally | Tips For Body Care

Since nail treatments are not only expensive but also harmful in the long run, one should always make sure to opt for natural remedies at home. For this here is a simple guide that you can follow to treat yellow nails.
X
Desktop Bottom Promotion