For Quick Alerts
ALLOW NOTIFICATIONS  
For Daily Alerts

ಮೊಡವೆ ರಹಿತ ತ್ವಚೆ ಪಡೆಯುವುದು ಹೇಗೆ?

|

ನಿಮ್ಮ ಮುಖ ಮೊಡವೆಯಿಂದ ತುಂಬಿದೆಯೇ? ಹೊಳೆಯುವ ಮುಖ ಹೊಂದಲು ಸರಿಯಾದ ಮಾರ್ಗ ಕಂಡು ಬರುತ್ತಿಲ್ಲವೇ? ಹಾಗಾದರೆ ಈ ಲೇಖನ ಓದಿ. ನಿಮ್ಮ ಮುಖವನ್ನು ಸುಂದರ, ಕಾಂತಿಯುತ ಹಾಗೂ ಹೊಳೆಯುವಂತೆ ಮಾಡಲು ಏನೆಲ್ಲಾ ಅವಕಾಶ ಇದೆ ಎನ್ನುವುದನ್ನು ಅರಿಯಬಹುದು. ಅಂದಹಾಗೆ ಶುಭ್ರ ಹಾಗೂ ಮೊಡವೆರಹಿತ ಮುಖ ಕಾಂತಿಯುತವಾಗಿ ಕಂಡು ಬರಲು ಕೆಲ ಸಮಯ ಹಿಡಿಸಬಹುದು, ಆದರೆ ಪರಿಹಾರ ಸಾಧ್ಯ. ಅದಕ್ಕೆ ನೀವು ಈ ಕೆಳಗಿನ ಹಂತವನ್ನು ಪಾಲಿಸಬೇಕು. ಆತಂಕ ಬೇಡ ಮುಖದ ಸೌಂದರ್ಯ ಮತ್ತೆ ಮರಳಲಿದೆ.

ಹಂತಗಳು

ಮುಖವನ್ನು ಸಂಪೂರ್ಣವಾಗಿ ಮೊಡವೆ ಕಲೆ ವಾಸಿ ಮಾಡುವ ಅಕ್ನೆವಾಶ್‌ನಿಂದ ಸ್ವಚ್ಛಗೊಳಿಸಿ. ಅದರಲ್ಲಿ ಬಳಸಿರುವ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿ. ಅದರಲ್ಲಿ ಸಿಂತೆಟಿಕ್‌ ಆಸಿಡ್‌ ಇದೆಯೇ ಎಂದು ದೃಢಪಡಿಸಿಕೊಳ್ಳಿ. ಈ ಅಂಶ ಮುಖದ ಮೇಲಿನ ಮೊಡವೆಯನ್ನು ಕಡಿಮೆಗೊಳಿಸಲು ಮಹತ್ವದ ಪಾತ್ರ ನಿರ್ವಹಿಸುತ್ತದೆ.

How to Get a Clean, Acne Free Face

ಸಾಧ್ಯವಾದಷ್ಟು ಮುಖ ತೊಳೆಯುವಾಗ ಅಪ್ರಿಕೋಟ್‌ ಸ್ಕ್ರಬ್‌ ಬಳಸಿ. ಇದು ಮುಖದ ಚರ್ಮವನ್ನು ಸ್ವಚ್ಛವಾಗಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಈ ಸ್ಕ್ರಬ್‌ ಮುಖದ ಚರ್ಮದ ನಿರ್ಜೀವ ಕಣಗಳನ್ನು ಜೀವಂತಗೊಳಿಸಿ ಕಾಂತಿಯುಕ್ತವಾಗಿಸುತ್ತವೆ. ಇದರ ಜತೆ ಗ್ರೀನ್‌ ಟಿ ಸ್ಕ್ರಬ್‌ ಕೂಡ ಉತ್ತಮ. ಇದು ಮುಖದ ಆಯಾಸ ಹಾಗೂ ಬಳಲಿಕೆಯನ್ನು ನಿವಾರಿಸುತ್ತದೆ.

ಇವೆಲ್ಲವೂ ಒಂದಿಷ್ಟು ಆಯ್ಕೆಗಳು ಮಾತ್ರ ಇದರೊಂದಿಗೆ ಹೊರಗೆಲ್ಲೋ ತೆರಳುವಾಗ ಮುಖಕ್ಕೆ ಮಾಸ್ಕ್‌ ಬಳಸುವುದರಿಂದಲೂ ಸಾಕಷ್ಟು ಅನುಕೂಲ ಇದೆ. ಇವು ಕೂಡ ಮುಖದ ಕಾಂತಿ ಹೆಚ್ಚಿಸಿ ಅಂದ ನೀಡುತ್ತವೆ. ಒಣದಾಗದಂತೆ ಚರ್ಮವನ್ನು ಕಾಪಾಡಿಕೊಳ್ಳುವುದು ಕೂಡ ಅತಿ ಮುಖ್ಯ. ಮನೆಯ ಕೋಣೆಯೊಳಗಿನ ತಾಪಮಾನಕ್ಕೆ ಮುಖದ ಚರ್ಮ ಒಣಗಬಹುದು. ಫ್ಯಾನ್‌ ಎದುರು ಕುಳಿತುಕೊಂಡಿರುತ್ತೇನೆ ಎಂದು ಕೆಲವರು ಹೇಳುತ್ತಾರೆ ಆದರೆ ಇದು ಪರಿಹಾರವಲ್ಲ. ನೀರಿನಲ್ಲಿ ಆಗಾಗ ತೊಳೆಯುತ್ತಾ, ಮುಖವನ್ನು ಹಸಿಯಾಗಿ ಉಳಿಸಿಕೊಂಡರೆ ಒಳಿತು. ಯಾವುದೇ ಬಟ್ಟೆ ಅಥವಾ ಮಾಸ್ಕ್‌ನಿಂದ ಮುಖವನ್ನು ಮುಚ್ಚುವ ಯತ್ನ ಮನೆಯ ಒಳಗಿದ್ದಾಗ ಬೇಡ.

ಮೊಡವೆ ಮೇಲೆ ಐಸ್‌ ಪೀಸ್‌ನ್ನು ಮೃದ್ಧುವಾಗಿ ಅದುಮಿ ಹಿಡಿಯಿರಿ. ಇದರಿಂದ ಮೊಡವೆ ಗಾತ್ರ ತಗ್ಗುತ್ತದೆಯಲ್ಲದೇ ನೋವು, ಅಸಹನೆ ನಿವಾರಣೆ ಆಗುತ್ತದೆ. ಕ್ಯೂಟಿಪ್‌ ತೆಗೆದುಕೊಳ್ಳಿ ಮತ್ತು ಅದಕ್ಕೆ ಸ್ವಲ್ಪ ಪೆರೊಕ್ಸೈಡ್‌ ಬಳಿಯಿರಿ ಅಥವಾ ಪೆರೊಕ್ಸೈಡ್‌ ಒರುವ ಬಾಟಲಿಯಲ್ಲಿ ಅದ್ದಿ. ಅದನ್ನು ಮೊಡವೆ ಇರುವ ಜಾಗಕ್ಕೆ ಹಚ್ಚಿ. ಕೊಂಚ ನೋವು ಆಗಬಹುದು ಆದರೆ ಅದು ನಿಮ್ಮ ಚರ್ಮಕ್ಕೆ ಮುಖದ ಭವಿಷ್ಯದ ಕಾಂತಿಗೆ ಸಹಕಾರಿ. ಆಸಕ್ತರು ಪೆರೊಕ್ಸೈಡ್‌ ಬದಲು ಮದ್ಯವನ್ನು ಕೂಡ ಈ ಸಂದರ್ಭದಲ್ಲಿ ಬಳಸಬಹುದು. ಆದರೆ ಬಹುಜನರ ಮಾಹಿತಿ ಏನೆಂದರೆ ಇದು ಬಳಸುವಾಗ ಕೊಂಚ ಅಸಹನೀಯ ಅನ್ನಿಸುತ್ತದೆ.

ಸ್ಟ್ರಿಡೆಕ್ಸ್‌ ಎಲ್ಲೆಡೆ ಸಿಗುವ ವಸ್ತು. ಇದು ಹತ್ತಿಯ ಗೋಲದ ರೂಪದಲ್ಲಿ ಸಿಗುತ್ತದೆ. ಇದು ಸಾಲ್ಸಲಿಕ್‌ ಆಸಿಡ್‌ ಹೊರತಾಗಿದ್ದು, ನಾನಾ ಅವಶ್ಯಕ ವಸ್ತುಗಳನ್ನು ಒಳಗೊಂಡು ಒದ್ದೆ ರೂಪದಲ್ಲಿ ಸಿಗುತ್ತದೆ. ಇದು ಮದ್ಯ ರಹಿತವಾಗಿ ಸಿಗುವುದಿಲ್ಲ. ರಾತ್ರಿ ಮಲಗುವ ಮುನ್ನ ಇದನ್ನು ಮುಖಕ್ಕೆ ಒರೆಸಿಕೊಳ್ಳುವುದರಿಂದ ಚರ್ಮ ಹಸಿಯಾಗಿರಲು ಸಹಕರಿಸುತ್ತದೆ. ರಾತ್ರಿ ಚರ್ಮ ಒಣಗುವ ಸಮಸ್ಯೆ ಎದುರಾಗದು. ಆರಂಭದಲ್ಲಿ ಇದು ಇಷ್ಟವಾಗದೇ ಇರಬಹುದು. ಆದರೆ ಬಳಸುತ್ತಾ ಹೋದಂತೆ ಇದು ಹೊಂದಿಕೊಳ್ಳುತ್ತದೆ.

ಟಿಪ್ಸ್‌

ಮುಖವನ್ನು ಸ್ಪರ್ಶಿಸುವ ಮುನ್ನ ನಿಮ್ಮ ಕೈಗಳನ್ನು ತೊಳೆದುಕೊಳ್ಳಿ.

ದಿನನಿತ್ಯದ ಜೀವನ ಕ್ರಮದಲ್ಲಿ ಡಯಟ್‌ ಅಳವಡಿಸಿಕೊಳ್ಳಿ. ಇದು ನಿಮ್ಮ ಮುಖ ಆರೋಗ್ಯ ಹಾಗೂ ತಾರುಣ್ಯಪೂರ್ಣವಾಗಿ ಇರಿಸಿಕೊಳ್ಳಲು ಸಹಕಾರಿ.

ಒತ್ತಡಗಳನ್ನು ದೂರವಾಗಿಸಿಕೊಳ್ಳಿ. ಅತಿಯಾದ ಒತ್ತಡದಿಂದಲೂ ಮುಖದ ಮೇಲೆ ಮೊಡವೆ ಉಂಟಾಗಬಹುದು.

ಎಚ್ಚರಿಕೆಗಳು

ಇವೆಲ್ಲಾ ವಿಧಾನವನ್ನೂ ಪ್ರತಿದಿನ ಬಳಸಬೇಡಿ. ಚರ್ಮ ಒಣಗಿದಾಗ ಅಥವಾ ವಾರಕ್ಕೆ ಒಮ್ಮೆ ಈ ಮೇಲಿನ ಪ್ರಯೋಗಗಳು ಸೂಕ್ತ.

ಮೊಡವೆ ಒಂದೇ ದಿನಕ್ಕೆ ಗುಣವಾಗಿ ಬಿಡುತ್ತದೆ ಎಂದು ನಂಬಿಕೊಳ್ಳಬೇಡಿ. ಇದು ಹಂತ ಹಂತವಾಗಿ ನಿವಾರಣೆ ಆಗುತ್ತದೆ.

ಕೈ ಸ್ವಚ್ಛವಿಲ್ಲದ ಸಂದರ್ಭದಲ್ಲಿ ಮುಖವನ್ನು ಮುಟ್ಟುವ ಕಾರ್ಯ ಮಾಡಬೇಡಿ.

ಮೊಡವೆಯನ್ನು ಬಲವಂತವಾಗಿ ಒಡೆಯುವ ಯತ್ನ ಬೇಡ. ಇದು ನಿಮ್ಮ ಮುಖದ ಸೌಂದರ್ಯ ಹಾಳು ಮಾಡುತ್ತದೆ. ಕಲೆ ಮುಖದ ಮೇಲೆ ಶಾಶ್ವತವಾಗಿ ಉಳಿದುಕೊಳ್ಳಬಹುದು. ಈ ವಿಧಾನದಿಂದ ಮೊಡವೆಗೆ ತಾತ್ಕಾಲಿಕ ಪರಿಹಾರ ಸಿಗಬಹುದು, ಆದರೆ ಶಾಶ್ವತವಾಗಿ ನಿವಾರಣೆ ಆಗದು.

English summary

How to Get a Clean, Acne Free Face | Tips For Beauty | ಮೊಡವೆ ರಹಿತ ತ್ವಚೆ ಪಡೆಯುವುದು ಹೇಗೆ? | ಸೌಂದರ್ಯಕ್ಕಾಗಿ ಕೆಲ ಸಲಹೆಗಳು

Have bad acne? Can't seem to find a way to get that flawless face? Read this article to find out how to get that perfect looking face.
X
Desktop Bottom Promotion