For Quick Alerts
ALLOW NOTIFICATIONS  
For Daily Alerts

ಡಿಟಾಕ್ಷ್ ಸ್ನಾನ ಮಾಡುವುದು ಹೇಗೆ ?

|

ಪ್ರತಿನಿತ್ಯ ಹೊಸ ಮೂಡ್‍ಗೋಸ್ಕರ, ನವ ಚೈತನ್ಯಕ್ಕಾಗಿ ಬೆಳಿಗ್ಗೆ ಎದ್ದು ಸ್ನಾನ ಮಾಡುವುದು ಸಾಮಾನ್ಯ ಪದ್ಧತಿ. ಆದರೆ ದಿನವೂ ಮಾಡುವ ಈ ಸ್ನಾನದಲ್ಲಿ ಹೆಚ್ಚಿನ ಖನಿಜಾಂಶಗಳನ್ನಾಗಲೀ ಅಥವಾ ಬೇರೆ ಯಾವುದೇ ರೀತಿಯ ಪೋಷಕಾಂಶಗಳನ್ನು ನಾವು ಬಳಸುವುದೇ ಇಲ್ಲ. ಕೇವಲ ಸಾಧಾರಣ ಸ್ನಾನ ಅಥವಾ ಜಳಕವನ್ನು ಮಾಡುತ್ತೇವೆ. ಯಾವತ್ತಾದರೂ ಅಪರೂಪಕ್ಕೆ ಎಣ್ಣೆ ಸ್ನಾನವನ್ನು ಮಾಡುತ್ತೇವೆ ಎನ್ನುವುದನ್ನು ಹೊರತುಪಡಿಸಿದರೆ ಬೇರೆ ಯಾವುದೇ ವಿಶೇಷತೆಗಳೂ ನಮ್ಮ ಜಳಕದಲ್ಲಿ ಇಲ್ಲ. ಆದರೆ ಪ್ರತಿದಿನ ದುಡಿಯುವ ದೇಹಕ್ಕೆ ಒಮ್ಮೆಯಾದರೂ ರಿಲಾಕ್ಸ್ ಬೇಕಲ್ಲವೇ ? ಅದಕ್ಕಾಗಿಯೇ ನೀವು ಡಿಟೊಕ್ಸಿಫಿಕೇಷನ್ ಸ್ನಾನವನ್ನು ಮಾಡಬಹುದು. ಡಿಟೊಕ್ಸಿಫಿಕೇಷನ್ ಅಥವಾ ನಿರ್ವಿಶೀಕರಣ ಸ್ನಾನ ಎಂದು ಕರೆಯಲ್ಪಡುವ ಈ ಸ್ನಾನ ದೇಹಕ್ಕೆ ಬಹಳ ಒಳ್ಳೆಯದು.

ಡಿಟೊಕ್ಸಿಫಿಕೇಷನ್ ಅಂದರೆ ಖನಿಜಾಂಶ ನೀರಿನ ಸ್ನಾನ ಇದೊಂದು ಪುರಾತನ ಸ್ನಾನ ಮಾಡುವ ವಿಧಾನವಾಗಿದೆ. ಇದು ಎಣ್ಣೆ ಸ್ನಾನಕ್ಕಿಂತ ತುಂಬಾ ವಿಭಿನ್ನ. ಈ ಸ್ನಾನ ಮಾಡಿದ ಪ್ರಯೋಜನವೆಂದರೆ, ನಿರ್ಜೀವ ತ್ವಚೆಯನ್ನು ಹೋಗಲಾಡಿಸಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ದೊರೆಯುವಂತೆ ಮಾಡುತ್ತದೆ. ಈ ಸ್ನಾನವನ್ನು ಮಾಡುವುದಾದರೆ ನೀವು ಕನಿಷ್ಠ 40 ನಿಮಿಷ ಸಮಯವನ್ನಾದರೂ ಮೀಸಲಿಡಬೇಕಾಗುತ್ತದೆ. ಡಿಟೊಕ್ಸಿಫಿಕೇಷನ್ ಸ್ನಾನವನ್ನು ಮಾಡಲು ಅದರದ್ದೇ ಆದ ವಿಧಾನಗಳಿವೆ. ಬನ್ನಿ ಡಿಟೊಕ್ಸಿಫಿಕೇಷನ್ ಸ್ನಾನ ಮಾಡುವ ವಿಧಾನ ಬಗ್ಗೆ ತಿಳಿಯೋಣ:

How to Take a Detox Bath

ಡಿಟೊಕ್ಸಿಫಿಕೇಷನ್ ಸ್ನಾನವನ್ನು ಮಾಡುವ ವಿಧಾನ :

* ಮೊದಲೇ ಹೇಳಿದಂತೆ ಈ ಸ್ನಾನಕ್ಕಾಗಿ 40 ನಿಮಿಷ ವಿನಿಯೋಗಿಸಬೇಕು. 20 ನಿಮಿಷ ನಿರ್ಜೀವ ತ್ವಚೆಯನ್ನು ಹೋಗಲಾಡಿಸಲು ಹಾಗೂ ಇನ್ನು 20 ನಿಮಿಷ ದೇಹವು ಖನಿಜಾಂಶಗಳನ್ನು ಹೀರಿಕೊಳ್ಳಲು.

• ಬಾತ್ ಟಬ್ ನಲ್ಲಿ ಬಿಸಿ ನೀರು ತುಂಬಿಸಬೇಕು, ನೀರು ಹೆಚ್ಚು ಬಿಸಿಯಾಗಿಯೇ ಇದ್ದರೆ ಒಳ್ಳೆಯದು. ಅದರಲ್ಲೂ ಕ್ಲೋರಿನ್ ಇಲ್ಲದ ನೀರನ್ನು ಬಳಸುವುದು ಪ್ರಮುಖವಾದ ವಿಷಯ.

•ನಂತರ ಎಪ್ಸೋಮ್ ಸಾಲ್ಟ್ (epsom salt) ಅನ್ನು ಸೇರಿಸಬೇಕು. ಎಪ್ಸೋಮ್ ಸಾಲ್ಟ್ ದೇಹದಲ್ಲಿ ಮ್ಯಾಗ್ನಿಷಿಯಂ ಪ್ರಮಾಣವನ್ನು ಸರಿಪಡಿಸಲು ಸಹಕಾರಿಯಾಗಿದೆ. ಇದರಲ್ಲಿರುವ ಗಂಧಕ ದೇಹದಲ್ಲಿರುವ ಕಶ್ಮಲಗಳನ್ನು ಹೋಗಲಾಡಿಸಿ, ಮಿದುಳಿಗೆ ಪ್ರೊಟೀನ್ ಕಳಿಸುವ ನರಗಳ ಆರೋಗ್ಯವನ್ನು ಹೆಚ್ಚಿಸುವಂತೆ ಮಾಡುತ್ತದೆ. ಎಪ್ಸೋಮ್ ಸಾಲ್ಟ್ ಬಹಳ ಅಗ್ಗವಾದ ದರದಲ್ಲಿ ನಿಮಗೆ ದೊರೆಯುತ್ತದೆ.

• ಬಿಸಿ ನೀರಿಗೆ ಎಪ್ಸೋಮ್ ಸಾಲ್ಟ್ ಉಪ್ಪಿನ ಜೊತೆ ಅಡುಗೆ ಸೋಡಾವನ್ನು ಹಾಕಬೇಕು. ಈ ನೀರಿಗೆ 1 ಕಪ್ ಅಡುಗೆ ಸೋಡಾ ಹಾಕಬೇಕು. ಬೇಕಿಂಗ್ ಸೋಡಾ ಹಾಕಿದರೆ ತ್ವಚೆಯನ್ನು ಚೊಕ್ಕಟಗೊಳಿಸುವ (ಕ್ಲೆನ್ಸ್) ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಇದು ಕೀಟಾಣುಗಳ ವಿರುದ್ಧ ಹೋರಾಡಿ ತ್ವಚೆಯನ್ನು ತೊಂದರೆಗಳಿಂದ ರಕ್ಷಣೆ ಮಾಡುತ್ತದೆ. ಅಲ್ಲದೆ ತ್ವಚೆಯನ್ನು ಮೃದು ಮಾಡುತ್ತದೆ.

• ಅಷ್ಟೇ ಅಲ್ಲದೇ ಈ ನೀರಿಗೆ 2 ಇಂಚಿನಷ್ಟು ದೊಡ್ಡದಿರುವ ಶುಂಠಿಯನ್ನು ಪೇಸ್ಟ್ ಮಾಡಿ ಹಾಕಬೇಕು. ಈ ಶುಂಠಿಯನ್ನು ಹಾಕಲೇಬೇಕೆಂದೇನೂ ಇಲ್ಲ, ಹಾಕಿದರೆ ಈ ಸ್ನಾನ ಮತ್ತಷ್ಟು ಪ್ರಯೋಜನಕಾರಿಯಾಗುವುದು. ಶುಂಠಿ ಹಾಕಿದರೆ ಹೃದಯದ ಸ್ವಾಸ್ಥ್ಯಕ್ಕೆ ಒಳ್ಳೆಯದು. ಅಲ್ಲದೆ ಬೆವರಿನ ದುರ್ವಾಸನೆಯ ವಿರುದ್ಧ ಹೋರಾಡುತ್ತದೆ. ಶುಂಠಿ ಹಾಕಿದರೆ ಮೈ ಬಿಸಿಯಾಗಿ ತ್ವಚೆ ಸ್ವಲ್ಪ ಹೊತ್ತಿನವರೆಗೆ ಕೆಂಪು-ಕೆಂಪಾಗಿ ಇರುತ್ತದೆ. ಈ ರೀತಿ ಶುಂಠಿ ಹಾಕುವುದಾದರೆ ಅದರ ಪ್ರಮಾಣದ ಬಗ್ಗೆ ಎಚ್ಚರವಹಿಸಬೇಕು. ಶುಂಠಿ ಹಾಕಿ ಸ್ನಾನ ಮಾಡಿ ಮೈಯನ್ನು ಬೆಚ್ಚನೆಯ ಹೊದಿಕೆಯಿಂದ ಸುತ್ತಿದರೆ ಮೈ ತುಂಬಾ ಬೆವರುತ್ತದೆ.

ಈ ರೀತಿ ಬೆವರುವುದರ ಪ್ರಯೋಜನವೆಂದರೆ ಜ್ವರ, ಶೀತ, ಕೆಮ್ಮು ಈ ರೀತಿಯ ಕಾಯಿಲೆಗಳು ಸುಲಭವಾಗಿ ಹತ್ತಿರ ಸುಳಿಯುವುದಿಲ್ಲ. ಮೈ ಹೆಚ್ಚಾಗಿ ಬೆವರಿದರೆ ಕೆಲಸ ಮಾಡುವಾಗ ಬಹಳ ಕಿರಿಕಿರಿ ಎನಿಸುತ್ತದೆ. ಆದರೆ ಶುಂಠಿ ಬಳಸುವುದರಿಂದ ನಿಮ್ಮ ಸ್ನಾನ ಇನ್ನಷ್ಟು ಪರಿಪೂರ್ಣವಾಗುವುದಲ್ಲದೇ ನಿಮ್ಮನ್ನು ಬೆವರುವ ತೊಂದರೆಯಿಂದ ದೂರವಿಡುತ್ತದೆ.

•ಈ ಸ್ನಾನದ ನೀರಿಗೆ ಸುವಾಸನೆ ಇರುವ ಎಣ್ಣೆಯನ್ನು ಸೇರಿಸಿದರೆ ಮನಸ್ಸಿನ ಒತ್ತಡ ಕಡಿಮೆಯಾಗಿ, ಮನಸ್ಸಿನಲ್ಲಿ ಉಲ್ಲಾಸ ತುಂಬ ನಿಮಗೆ ವಿಶ್ರಾಂತಿಯ ಅನುಭವವನ್ನು ನೀಡುತ್ತದೆ. ಲ್ಯಾವೆಂಡರ್ ಎಣ್ಣೆ, ಬಾದಾಮಿ ಎಣ್ಣೆ ಈ ರೀತಿಯ ಎಣ್ಣೆಯನ್ನು ಬಳಸಬಹುದು. ಈ ರೀತಿಯಾಗಿ ಎಣ್ಣೆ ಹಾಕುವಾಗ 20 ಹನಿಯಷ್ಟು ಹಾಕಿದರೆ ಸಾಕು. ಆದರೆ ಇದನ್ನು ಡಿಟಾಕ್ಸ್ ಸ್ನಾನದಲ್ಲಿ ಬಳಸಲೇ ಬೇಕೆಂದೇನು ಇಲ್ಲ. ಇದು ಐಚ್ಛಿಕ. ಸುಗಂಧ ಎಣ್ಣೆಯನ್ನೂ ಬಳಸುವುದರಿಂದ ನಿಮ್ಮ ಸ್ನಾನ ಇನ್ನಷ್ಟು ಪರಿಣಾಮಕಾರಿ ಎನಿಸುವುದು.

• ಈ ಮೇಲಿನ ಎಲ್ಲಾ ಸಾಮಾಗ್ರಿಗಳನ್ನು ಟಬ್‍ನಲ್ಲಿ ಹಾಕಿ ನೀವು ನೀರಿನಲ್ಲಿ ರಿಲಾಕ್ಸ್ ಮಾಡಬಹುದು. ಟಬ್‍ನಲ್ಲಿ ಇಳಿಯುವುದಕ್ಕೆ ಮೊದಲು ನೀರಿನ ಬಿಸಿಯನ್ನು ನಿಮ್ಮ ದೇಹ ತಡೆಯಬಹುದೇ ಎಂಬುದನ್ನು ಪರೀಕ್ಷೀಸಿಕೊಳ್ಳಿ. ಶುಂಠಿಯನ್ನೂ ಹಾಕುವುದರಿಂದ ನೀರು ಸ್ವಲ್ಪ ಉರಿ ಎನಿಸಬಹುದು. ಆದ್ದರಿಂದ ನಿಮ್ಮ ದೇಹ ತಡೆಯುವಷ್ಟು ಬಿಸಿಯನ್ನು ಮಾತ್ರ ಬಳಸಿ. ಒಂದು ವೇಳೆ ನಿಮಗೆ ತುಂಬಾ ಬಿಸಿ ಎನಿಸಿದರೆ ಸ್ವಲ್ಪ ತಣ್ಣೀರು ಸೇರಿಸಿ ಹದ ಬಿಸಿ ಮಾಡಿಕೊಳ್ಳಿ. ಈ ನೀರಿನಲ್ಲಿ 20 ನಿಮಿಷಗಳ ಕಾಲ ಇರಿ. ಹೀಗೆ ಮಾಡಿದ ಕೆಲವೇ ನಿಮಿಷಗಳಲ್ಲಿ ನೀವು ಬೆವರಲಾರಂಭಿಸುತ್ತೀರಿ. ಇದರಿಂದ ದೇಹ ಹಗುರವಾದಂತೆ ಅನುಭವವಾಗುತ್ತದೆ.

• ನಂತರ ನೀರಿನಿಂದ ಬಹಳ ನಿಧಾನವಾಗಿ ಟಬ್ ನಿಂದ ಹೊರಗೆ ಬನ್ನಿ. ಏಕೆಂದರೆ ಹೀಗೆ ಮೇಲೆದ್ದು ಬರುವಾಗ ನಿಮ್ಮ ದೇಹವು ಬಲಹೀನವಾದಂತೆ ನಿಮಗನಿಸುವುದು. ಅಲ್ಲದೇ ಇದು ಲವಣಪೂರಿತ ನೀರಾದ್ದರಿಂದ ಜಾರುವ ಸಾಧ್ಯತೆ ಹೆಚ್ಚು. ಆದ್ದರಿಂದ ಸಾಕಷ್ಟು ಎಚ್ಚರಿಗೆ ವಹಿಸುವುದು ಅಗತ್ಯ.

• ಸ್ನಾನದ ನಂತರ ಎದ್ದು ಸಾಕಷ್ಟು ನೀರು ಕುಡಿಯಿರಿ, ಇದರಿಂದ ದೇಹದಲ್ಲಿರುವ ಕಶ್ಮಲಗಳನ್ನು, ಜೀವಾಣುಗಳನ್ನು ಹೊರಹಾಕಲು ಸಾಧ್ಯವಾಗುವುದು. ಹಾಗೂ ನಿಮ್ಮ ತ್ವಚೆಯ ಹೊಳಪು ಹೆಚ್ಚಾಗುವುದು. ಸಾಕಷ್ಟು ನೀರು ಕುಡಿಯದಿದ್ದಲ್ಲಿ ಸುಸ್ತು ಕಾಣಿಸಿಕೊಳ್ಳಬಹುದು. ಈ ಸ್ನಾನದಂತೆಯೇ ಉಳಿದ ಮಸಾಜ್ ಮಾಡಿಸಿಕೊಳ್ಳುವುದು ಇಂತಹ ಸಮಯಗಳಲ್ಲಿಯೂ ಕೊನೆಯಲ್ಲಿ ಅಧಿಕ ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ತಂಂಬಾ ಉತ್ತಮ.

ಸೂಚನೆಗಳು:

1. ಹೈಡ್ರೋಜನ್ ಪೆರಾಕ್ಸೈಡ್‍ನ್ನು ನಿಮ್ಮ ಸ್ನಾನದಲ್ಲಿ ಬಳಸುವುದನ್ನು ತಪ್ಪಿಸಿ.

2. ಡಿಟೊಕ್ಸ್ ಸ್ನಾನವನ್ನು ಗರ್ಭಿಣಿಯರು, ಹೃದಯಕ್ಕೆ ಸಂಬಂಧಿಸಿದ ಖಾಯಿಲೆ ಇರುವವರು ಕಿಡ್ನಿ ಸಮಸ್ಯೆ ಇರುವವರು ಅಥವಾ ಬೇರೆ ಯಾವುದೇ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿರುವವರು ಈ ಬಿಸಿ ನೀರಿನ ಸ್ನಾನವನ್ನು ಮಾಡಬಾರದು.

ಈ ಲೇಖನವನ್ನು ಕೇವಲ ನಿಮ್ಮ ಶಿಕ್ಷಣಕ್ಕಾಗಿ / ನಿಮಗೆ ಮಾಹಿತಿಯನ್ನು ಕೊಡುವುದಕ್ಕಾಗಿಯೇ ಹೊರತು ಡಿಟೊಕ್ಸ್ ಸ್ನಾನದಿಂದ ಯಾವುದೇ ಖಾಯಿಲೆಗಳು ವಾಸಿಯಾಗುತ್ತನೆ ಅಥವಾ ನಿವಾರಣೆಯಾಗಿತ್ತವೆ ಎಂದು ಹೇಳಲಾಗಿಲ್ಲ. ಈ ಸ್ನಾನದ ವಿಧಾನವನ್ನು ಅನುಸರಿಸುವುದಕ್ಕಿಂತ ಮೊದಲು ನಿಮ್ಮ ಕುಟುಂಬ ವೈದ್ಯರನ್ನು ಸಂಪರ್ಕಿಸಿ ಅವರ ವೈದ್ಯಕೀಯ ಸಲಹೆಗಳನ್ನು ಪಡೆದುಕೊಳ್ಳಿ.

ಈ ಸ್ನಾನಕ್ಕೆ ಬೇಕಾದ ಯಾವುದೇ ವಸ್ತುಗಳನ್ನು ಉಪಯೋಗಿಸುವುದಕ್ಕೆ ಮೊದಲು ಅದರ ಅಡ್ಡ ಪರಿಣಾಮಗಳನ್ನು ಓದಿಕೊಳ್ಳಿ. ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳದೇ ಕಡಿಮೆ ಗುಣಮಟ್ಟದ ವಸ್ತುಗಳನ್ನು ಬಳಸಬೇಡಿ.

English summary

How to Take a Detox Bath | How To Do Tips | ಡಿಟಾಕ್ಸ್ ಸ್ನಾನ ಮಾಡುವುದು ಹೇಗೆ?

A detox bath is thought to assist your body in eliminating toxins as well as absorbing the minerals and nutrients that are in the water. Most of all, it'll leave you feeling refreshed and awakened.
X
Desktop Bottom Promotion