For Quick Alerts
ALLOW NOTIFICATIONS  
For Daily Alerts

ಸೀಳು ಕೂದಲಿನ ಸಮಸ್ಯೆಗೆ ಹೀಗೆ ಹೋಗಲಾಡಿಸಿ

|

"ಸೀಳು ಕೂದಲು" ಅನ್ನೋದರ ಅರ್ಥ ಏನೂಂತಾ ಗೊತ್ತಿರೋರಿಗಷ್ಟೇ ಗೊತ್ತು ಅದರ ಜೊತೆ ಏಗೋದು ಅದೆಷ್ಟು ಕಷ್ಟ ಅಂತಾ!! ಕೂದಲು ಸೀಳಿಕೊಳ್ಳೋದರ ಮೂಲಕ ಪೆಡಸಾಗಿ, ಸುಲಭವಾಗಿ ತುಂಡಾಗೋ ಅದರ ಭಾಗ ಯಾವುದಿರುತ್ತದೋ ಅದೇ ಸೀಳುಕೂದಲು.

What are split ends and how can you treat them at home?

ಈ ಸೀಳುಕೂದಲು ಅನ್ನೋದು ಉದ್ದನೆಯ ಕೇಶರಾಶಿಯ ಯಾವುದೇ ಭಾಗದಲ್ಲೂ ಉಂಟಾಗಬಹುದಾದರೂ ಕೂಡ, ಅದು ಸಾಮಾನ್ಯವಾಗಿ ಕಾಣಿಸ್ಕೊಳ್ಳೋದು ಕೂದಲಿನ ತುದಿಭಾಗದಲ್ಲಿ. ಈ ಒಣಕಲಾದ ಮತ್ತು ಪೆಡುಸಾದ ತುದಿಗಳು ಆ ಉದ್ದನೆಯ ಇಡೀ ಕೂದಲನ್ನೇ ಹಾಳುಮಾಡುತ್ತವೆ. ಆ ತುದಿಭಾಗಗಳನ್ನ ಕತ್ತರಿಸಿ ತೆಗೆಯೋದೇನೋ ಇದಕ್ಕೆ ಸುಲಭ ಪರಿಹಾರ ಅಂತಾ ಅನ್ನಿಸೀತು. ಆದರೆ ಅದರರ್ಥ ಮುಂದೆ ಅದು ಪುನ: ಕಾಣಿಸಿಕೊಳ್ಳಬಾರದೆಂದೇನಲ್ಲ.

ವರ್ಷಾನುಗಟ್ಟಲೆಯಿಂದ ಮಾಡುತ್ತಾ ಬಂದ ಕೇಶಆರೈಕೆಯ ತಪ್ಪು ಕ್ರಮಗಳು, ಕೇಶಾರೋಗ್ಯಕ್ಕೆ ಸಂಬಂಧಿಸಿದ ಹಾಗೆ ಅಸಮರ್ಪಕ ದೈನಿಕ ಚಟುವಟಿಕೆಗಳು ಕಾಲಕ್ರಮೇಣ ಸೀಳು ಕೂದಲುಗಳಿಗೆ ದಾರಿ ಮಾಡಿಕೊಡುತ್ತವೆ. ಸರಿಯಾಗಿ ಪೋಷಣೆ ಪಡೆಯದ ಕೇಶರಾಶಿಯ ತುದಿಗಳು ಮುಕ್ತ ಶಾಫ಼್ಟ್ ಗಳಾಗಿ ಕೊನೆಗೊಂಡು ಅಂತಿಮವಾಗಿ ಅವು ಗರಿಯಂತಹ ರೂಪು ಪಡೆದುಕೊಳ್ಳುತ್ತವೆ.

ಇಷ್ಟಾದ ಬಳಿಕ ತುದಿಗಳು ಸೀಳಿಕೊಳ್ಳಲಾರಂಭಿಸುತ್ತವೆ. ನೆತ್ತಿಯ ನೈಸರ್ಗಿಕ ತೈಲಗಳೂ ಸಹ ಕೂದಲಿನ ತುದಿಭಾಗದವರೆಗೆ ಹರಿಯಲಾರವು. ಹಾಗಾಗಿಯೇ ಆ ಭಾಗವು ಒಣಕಲಾಗುತ್ತದೆ. ಸೀಳುಕೂದಲಿನ ಸಮಸ್ಯೆಯನ್ನ ನಿಭಾಯಿಸೋದಕ್ಕೆ ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಸುಲಭ ಪರಿಹಾರೋಪಾಯಗಳು ಇಲ್ಲಿವೆ.

ಕೇಶರಾಶಿಗೆ ಎಣ್ಣೆಯ ಉಪಚಾರ

ಕೇಶರಾಶಿಗೆ ಎಣ್ಣೆಯ ಉಪಚಾರ

ನೀವು ಚಿಕ್ಕವರಿದ್ದಾಗ ನಿಮ್ಮ ತಾಯಿ ಮತ್ತು ನಿಮ್ಮ ಅಜ್ಜಿ "ತಲೆಗೆ ಎಣ್ಣೆ ಹಚ್ಚಿಕೋ, ತಲೆಗೆ ಎಣ್ಣೆ ಹಚ್ಚಿಕೋ" ಅಂತಾ ನಿಮ್ಮ ಜೀವ ತಿಂತಾಯಿದ್ದುದ್ದು ನಿಮಗೆ ನೆನಪಿದೆಯೇ ? ನೋಡಿ, ನಿಜ ಹೇಳಬೇಕೆಂದರೆ ನಿಮ್ಮ ಜೀವನಚಕ್ರವೀಗ ಅದೇ ಬಿಂದುವಿಗೆ ಬಂದು ನಿಂತಿದೆ!! ನಿಮ್ಮ ಕೇಶರಾಶಿಯ ಹಾಳಾಗಿರೋ ತುದಿಗಳನ್ನ ಸರಿಮಾಡ್ಕೋಳ್ಳೋದು ಹೇಗೆ ಅನ್ನೋ ಹುಡುಕಾಟದಲ್ಲಿ ನೀವಿದ್ದೀರಿ, ಆದರೆ ಅದಕ್ಕೆ ಪರಿಹಾರ ನಿಮ್ಮ ಅಡುಗೆ ಕೋಣೆಯ ಕಪಾಟಿನಲ್ಲೇ ಇದೆ!!! ತೆಂಗಿನೆಣ್ಣೆ, ಆಲೀವ್ ಎಣ್ಣೆ, ಹರಳೆಣ್ಣೆ, ಬಾದಾಮಿ ಎಣ್ಣೆ, ಅಕ್ರೋಟದ ಎಣ್ಣೆ.....

 ಎಣ್ಣೆಯನ್ನು ಉಗುರು ಬೆಚ್ಚಗೆ ಬಿಸಿ ಮಾಡಿ ಹಚ್ಚಿ

ಎಣ್ಣೆಯನ್ನು ಉಗುರು ಬೆಚ್ಚಗೆ ಬಿಸಿ ಮಾಡಿ ಹಚ್ಚಿ

ಹೀಗೆ ಈ ಎಲ್ಲ ವಿಧದ ಎಣ್ಣೆಗಳೂ ಕೂಡ ಸೀಳು ಕೂದಲಿನ ತೊಂದರೆಗೆ ಪರಿಹಾರಗಳೇ... ಈ ಎಲ್ಲ ತೈಲಗಳೂ ನಿಮ್ಮ ಕೇಶರಾಶಿಯನ್ನ ಮೊಯಿಶ್ಚರೈಸ್ ಮಾಡುತ್ತವೆ ಹಾಗೂ ನಿಮ್ಮ ಸೀಳು ಕೂದಲುಗಳಿಗೆ ಅಗತ್ಯವಿದ್ದ ಆರೈಕೆಯೂ ಇದೇ ಆಗಿದೆ. ಎಣ್ಣೆಯ ಗರಿಷ್ಟ ಪ್ರಯೋಜನಾನಾ ಪಡ್ಕೊಳ್ಳೋಕೆ, ಎಣ್ಣೇನಾ ಕೇಶರಾಶಿಗೆ ಹಚ್ಚಿಕೊಳ್ಳೋಕೆ ಮೊದಲು ಅದನ್ನು ಸ್ವಲ್ಪ ಬೆಚ್ಚಗಾಗಿಸಿ. ಅಂತಹ ಬೆಚ್ಚನೆಯ ತೈಲದ ಜೊತೆಗೆ ಕರಿಬೇವಿನ ಎಲೆಗಳು, ವಿಟಮಿನ್ ಇ ಕ್ಯಾಪ್ಸೂಲ್ ಗಳು, ಮೆಂತೆಕಾಳು, ಬೇವಿನ ಎಲೆಗಳನ್ನೂ ಸೇರಿಸಿಕೊಂಡರೆ ಆ ತೈಲದಿಂದಾಗೋ ಲಾಭಗಳು ಇನ್ನಷ್ಟು ಹೆಚ್ಚಾಗುತ್ತವೆ.

ಮೊಯಿಶ್ಚರ್ ಮಾಡುವ ಹೇರ್ ಮಾಸ್ಕ್

ಮೊಯಿಶ್ಚರ್ ಮಾಡುವ ಹೇರ್ ಮಾಸ್ಕ್

ನಿಮ್ಮ ಕೇಶರಾಶಿಯು ಸಾಕಷ್ಟು ಆರ್ದ್ರವಾಗಿರೋದು ತುಂಬಾ ಅಗತ್ಯ. ಇದರರ್ಥ ನೀವು ಪ್ರತಿದಿನವೂ ತಲೆಗೆ ಎಣ್ಣೆ ಹಚ್ಚಿಕೊಳ್ಳಬೇಕೆಂದೇನಲ್ಲ. ನಿಮ್ಮ ಕೂದಲು ಪೂರ್ತಿ ಒಣಗಿಹೋಗದಂತೆ ಕಾಳಜಿ ಮಾಡಿದರೆ ಸಾಕು. ಇದಕ್ಕಾಗಿ ಹೇರ್ ಮಾಸ್ಕ್ ಅನ್ನ ಮತ್ತು ಮನೆಮದ್ದುಗಳನ್ನ ಕೇಶರಾಶಿಗೆ ಹಚ್ಚಿ. ಮೊಯಿಶ್ಚರ್ ಮಾಡುವ ಅತ್ಯುತ್ತಮ ಮಾಸ್ಕ್ ಗಾಗಿ ನಿಮಗೆ ಬೇಕಾಗೋದು 3:1:2 ರ ಅನುಪಾತದಲ್ಲಿ ಗಿಣ್ಣು, ಜೇನುತುಪ್ಪ, ಮತ್ತು ಕೊಬ್ಬರಿ ಎಣ್ಣೆ. ಈಗ ಈ ಮಿಶ್ರಣಕ್ಕೆ ವಿಟಮಿನ್ ಇ ಕ್ಯಾಪ್ಸೂಲ್ ನಿಂದ ತೆಗೆದ ಎಣ್ಣೆಯನ್ನು ಸೇರಿಸಿರಿ. ಹೀಗೆ ಮಾಡಿದಾಗ ಕೇಶರಾಶಿಗೆ ಇನ್ನಷ್ಟು ಪೋಷಕಾಂಶವನ್ನ ಒದಗಿಸಿದ ಹಾಗಾಗುತ್ತೆ.

ಹೀಗೆ ತಯಾರಾದ ಮಾಸ್ಕ್ ಅನ್ನ ಸೀಳಾಗಿರೋ ತುದಿಭಾಗಗಳಿಗೆ ಮೊದಲು ಹಚ್ಚಿ ಬಳಿಕ ನಿಧಾನವಾಗಿ ನೆತ್ತಿಯತ್ತ ಮೇಲ್ಮುಖವಾಗಿ ಹಚ್ಚುತ್ತಾ ಹೋಗಿ. ಈ ಮಾಸ್ಕ್ ನಿಮ್ಮ ಕೇಶರಾಶಿಯ ಮೇಲೆ 40 ನಿಮಿಷಗಳ ಕಾಲ ಹಾಗೆಯೇ ಇರಲಿ. ಬಳಿಕ, ತಣ್ಣೀರಿನಿಂದ ಹಾಗೂ ಮಂದ ಶ್ಯಾಂಪೂವಿನೊಂದಿಗೆ ಮಾಸ್ಕ್ ಅನ್ನ ತೊಳೆದು ತೆಗೆಯಿರಿ. ಬಯಸಿದ ಫಲಿತಾಂಶಕ್ಕಾಗಿ ಈ ಮಾಸ್ಕ್ ಅನ್ನ ವಾರಕ್ಕೆ ಕನಿಷ್ಟ ಒಂದು ಬಾರಿಯಾದರೂ ಬಳಕೆ ಮಾಡಿ.

 ಕೇಶರಾಶಿಯನ್ನು ಸ್ವಚ್ಛಗೊಳಿಸಿಕೊಳ್ಳುವುದು

ಕೇಶರಾಶಿಯನ್ನು ಸ್ವಚ್ಛಗೊಳಿಸಿಕೊಳ್ಳುವುದು

ಕೇಶರಾಶಿಗೆ ಶ್ಯಾಂಪೂವನ್ನು ಲೇಪಿಸಿದ ಬಳಿಕ, ಯಾವುದೇ ರಾಸಾಯನಿಕಗಳಿಲ್ಲದ ರೀತಿಯಲ್ಲಿ ನಿಮ್ಮ ಕೇಶರಾಶಿಯನ್ನ ಕಂಡೀಷನ್ ಮಾಡಿಕೊಳ್ಳಿ. ಈ ವಿಚಾರದಲ್ಲಿ ಆಪಲ್ ಸೈಡರ್ ವಿನೆಗರ್ ಅತ್ಯುತ್ತಮ ಮನೆಮದ್ದು. ಎರಡು ಚಮಚಗಳಷ್ಟು ಆಪಲ್ ಸೈಡರ್ ವಿನೆಗರ್ ಅನ್ನ ಅರ್ಧ ಲೀಟರ್ ನಷ್ಟು ನೀರಿನೊಂದಿಗೆ ಬೆರೆಸಿ ಕೇಶರಾಶಿಯನ್ನ ತೊಳೆದರೆ ಅದು ನಿಜಕ್ಕೂ ಬಲು ಪ್ರಯೋಜನಕಾರಿ. ವಿನೆಗರ್ ಬೆರೆತ ನೀರೆಲ್ಲವೂ ಕೇಶರಾಶಿಯಿಂದ ಜಾರಿಹೋದ ಬಳಿಕ, ಕೇಶರಾಶಿಯನ್ನ ಟವಲ್ ನಿಂದ ಚೆನ್ನಾಗಿ ಒರೆಸಿಕೊಳ್ಳಿರಿ. ಹೀಗೆ ಮಾಡುವುದರಿಂದ ನಿಮ್ಮ ಕೂದಲು ಮತ್ತು ನೆತ್ತಿಯ pH ಮಟ್ಟಗಳನ್ನ ಸಮತೋಲನಗೊಳಿಸಿದಂತಾಗುತ್ತದೆ ಹಾಗೂ ಜೊತೆಗೆ ನಿಮ್ಮ ಕೇಶರಾಶಿಯೂ ಕೂಡ ಸದೃಢವಾಗುತ್ತದೆ.

English summary

What are split ends and how can you treat them at home?

Here we explain what are split ends and how can you treat them at home, read on.
X
Desktop Bottom Promotion