For Quick Alerts
ALLOW NOTIFICATIONS  
For Daily Alerts

ಕೂದಲು ತೆಳ್ಳಗಾಗುವುದುದನ್ನು ತಡೆಯುವುದು ಹೇಗೆ?

|

ಕೂದಲು ಉದುರುವುದು ಹೆಚ್ಚಿನವರ ಸಮಸ್ಯೆಯಾಗಿದೆ. ಕೂದಲನ್ನು ನೋಡಿ ಅಯ್ಯೋ ಹೇಗಿದ್ದ ಕೂದಲು ಹೇಗಾಯ್ತು, ಬಾಚಣಿಕೆಯಿಂದ ಬಾಚಿದರೆ ಬುಡಕ್ಕೆ ತಾಗುತ್ತಲೇ ಇರಲಿಲ್ಲ ಅಷ್ಟು ಮಂದವಾಗಿತ್ತು ಆದರೆ ಈಗ ನೋಡಿದರೆ ತಲೆ ಬುಡ ಕಾಣುವಂತೆ ಉದುರಿ ಹೋಗಿದೆ ಎಂದು ಬೇಜಾರು ಮಾಡಿಕೊಳ್ಳುತ್ತಾರೆ.

ಕೂದಲು ಉದುರಲು ಕಾರಣವೇನು?

ಜೀವನ ಶೈಲಿ, ಅನುವಂಶೀಯ ಕಾರಣ, ವಿಟಮಿನ್ಸ್ ಕೊರತೆ, ಹಾರ್ಮೋನ್‌ಗಳ ಬದಲಾವಣೆ, ಕಾಯಿಲೆ ಹೀಗೆ ಅನೇಕ ಕಾರಣಗಳಿಂದ ಉದುರುತ್ತದೆ.

Ways To Stop Your Hair From Thinning

ಜೀವನಶೈಲಿ ಹೇಗೆ ಕೂದಲು ಉದುರಲು ಕಾರಣವಾಗುತ್ತದೆ?

* ಕೂದಲಿಗೆ ಹೆಚ್ಚಿನ ಅಲಂಕಾರ ಮಾಡುವುದು: ಕೂದಲಿಗೆ ಬಣ್ಣ ಹಾಕುವುದು, ತುಂಬಾ ಕೆಮಿಕಲ್ ಇರುವ ಶ್ಯಾಂಪೂ ಬಳಸುವುದು, ಹೇರ್ ಡ್ರೈಯರ್ ಬಳಸುವುದು ಇವುಗಳಿಂದ ಕೂದಲು ಉದುರುವುದು.
* ಹೇರ್ ಜೆಲ್‌ ಬಳಸುವುದು: ಹೇರ್ ಜೆಲ್ ಬಳಸುವುದರಿಂದ ಕೂದಲು ನೋಡಲು ಚೆನ್ನಾಗಿ, ಸ್ಟೈಲಿಷ್ ಆಗಿ ಕಾಣುತ್ತದೆ, ಆದರೆ ದಿನಾ ಬಳಸುತ್ತಿದ್ದರೆ ಕೂದಲಿಗೆ ಹಾನಿಯಾಗಿ ಕೂದಲು ಉದುರಲು ಆರಂಭಿಸುವುದು.
* ಕೂದಲನ್ನು ತುಂಬಾ ಬಿಗಿಯಾಗಿ ಕಟ್ಟುವುದು: ಕೆಲವರಿಗೆ ಕೂದಲನ್ನು ತುಂಬಾ ಬಿಗಿಯಾಗಿ ಕಟ್ಟುವ ಅಭ್ಯಾಸ ಇರುತ್ತದೆ. ಆದರೆ ಈ ಅಭ್ಯಾಸ ಕೂಡ ಕೂದಲು ಉದುರಲು ಒಂದು ಕಾರಣ.
* ಕೂದಲಿಗೆ ಅವಶ್ಯಕವಾದ ಪೋಷಕಾಂಶ ಸಿಗದೇ ಇರುವುದು: ಕಬ್ಬಿಣದಂಶ, ಫಾಲಿಕ್ ಆಮ್ಲ, ಇತರ ಖನಿಜಾಂಶಗಳು ಕಮ್ಮಿಯಾದರೆ ಕೂದಲು ಉದುರುವುದು ಕಡಿಮೆಯಾಗುವುದು, ಆದ್ದರಿಂದ ಕೂದಲಿಗೆ ಬಾಹ್ಯ ಪೋಷಣೆ ಮಾಡಿದರಷ್ಟೇ ಸಾಲದು ಆಂತರಿಕವಾಗಿಯೂ ಪೋಷಣೆ ಮಾಡಬೇಕು, ಆದರೆ ಆರೋಗ್ಯಕರ ಆಹಾರ ಸೇವನೆ ಕಡೆಗೆ ಹೆಚ್ಚಿನ ಗಮನ ನೀಡಬೇಕು.

ಅತಿಯಾದ ಮಾನಸಿಕ ಒತ್ತಡ: ಮಾನಸಿಕ ಒತ್ತಡ ಎಂಬುವುದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮಂಡೆ ಬಿಸಿ ಜಾಸ್ತಿಯಾದರೆ ಕೂದಲು ಕೂಡ ಉದುರುವುದು.

ಈ ಕಾರಣಗಳಿಂದಲೂ ಕೂದಲು ಉದುರುತ್ತದೆ'

ಈ ಕಾರಣಗಳಿಂದಲೂ ಕೂದಲು ಉದುರುತ್ತದೆ'

  • ಹೆರಿಗೆಯ ಬಳಿಕ
  • ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳುವುದು ನಿಲ್ಲಿಸಿದಾಗ
  • ಹಾರ್ಮೋನ್‌ಗಳ ಬದಲಾವಣೆಯಾದಾಗ
  • ಅಟೋಇಮ್ಯೂನೆ ಕಾಯಿಲೆ
  • ಪೋಷಕಾಂಶಗಳ ಸಮಸ್ಯೆ
  • ತ್ವಚೆ ಸಮಸ್ಯೆ ಅಥವಾ ಸೋಂಕು
  •  ಕೂದಲು ತೆಳ್ಳಗಾಗುವುದನ್ನು ತಡೆಗಟ್ಟಲು ಮನೆಮದ್ದು

    ಕೂದಲು ತೆಳ್ಳಗಾಗುವುದನ್ನು ತಡೆಗಟ್ಟಲು ಮನೆಮದ್ದು

    ತಲೆ ಬುಡಕ್ಕೆ ಎಣ್ಣೆ ಮಸಾಜ್

    ವಾರದಲ್ಲಿ ಎರಡು ಬಾರಿ ತಲೆ ಬುಡಕ್ಕೆ ಎಣ್ಣೆ ಹಚ್ಚಿ ಮಸಾಜ್ ಮಾಡಿ. ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಹಚ್ಚಿದರೆ ಮತ್ತಷ್ಟು ಒಳ್ಳೆಯದು. ಇದರಿಂದ ತಲೆಬುಡದಲ್ಲಿ ಚೆನ್ನಾಗಿ ರಕ್ತ ಸಂಚಾರವಾಗಿ ಕೂದಲಿನ ಬುಡ ಬಲವಾಗಿಸುತ್ತದೆ. ಅಲ್ಲದೆ ಇದರಿಂದ ತಲೆ ಹೊಟ್ಟಿನ ಸಮಸ್ಯೆ ಇರುವುದಿಲ್ಲ.

    ಆ್ಯಂಟಿ ಥಿನ್ನಿಂಗ್ ಶ್ಯಾಂಪೂ

    ಆ್ಯಂಟಿ ಥಿನ್ನಿಂಗ್ ಶ್ಯಾಂಪೂ

    ಈ ಶ್ಯಾಂಪೂ ಎರಡು ರೀತಿಯಲ್ಲಿ ಇದು ಪ್ರಯೋಜನಕಾರಿಯಾಗಿದೆ. ಈ ಶ್ಯಾಂಪೂ ಹಾಕಿದರೆ ಕೂದಲು ನೋಡಲು ಮಂದವಾಗಿ ಕಾಣುವುದು, ಅಲ್ಲದೆ ಕೂದಲು ಉದುರುವುದು ಕೂಡ ಕಡಿಮೆಯಾಗುತ್ತದೆ.

     ಮಲ್ಟಿವಿಟಮಿನ್ಸ್

    ಮಲ್ಟಿವಿಟಮಿನ್ಸ್

    ಆರೋಗ್ಯಕರ ಕೂದಲು ಆರೋಗ್ಯದ ಲಕ್ಷಣವಾಗಿದೆ. ಕೂದಲು ಉದುರುತ್ತಿದೆ ಎಂದರೆ ಒಮ್ಮೆ ರಕ್ತ ಪರೀಕ್ಷೆ ಮಾಡಿಇಸ, ಇದರಿಂದ ದೇಹದಲ್ಲಿ ಯಾವ ವಿಟಮಿನ್ ಕಡಿಮೆಯಾಗಿದೆ ಎಂದು ತಿಳಿಯುತ್ತದೆ.

    ವಿಟಮಿನ್ಸ್ ಇರುವ ಆಹಾರ ಹಾಗೂ ಸಪ್ಲಿಮೆಂಟ್‌ ಸೇವನೆಯಿಂದ ಕೂದಲು ಉದುರುವುದನ್ನು ತಡೆಗಟ್ಟಬಹುದು.

     ಬಯೋಟಿನ್

    ಬಯೋಟಿನ್

    ಕೂದಲು ಉದುರುವುದನ್ನು ತಡೆಗಟ್ಟುವಲ್ಲಿ ಬಯೋಟಿನ್ ಅಥವಾ ಬಿ-7 ಸಹಕಾರಿ. ಬಯೋಟಿನ್ ನಟ್ಸ್, ಧಾನ್ಯಗಳು, ಲಿವರ್‌ ಇವುಗಳಲ್ಲಿ ಇರುತ್ತದೆ. ಬಯೋಟಿನ್ ಸಪ್ಲಿಮೆಂಟ್ ಕೂಡ ಸಿಗುತ್ತದೆ. ಆದರೆ ಸಪ್ಲಿಮೆಂಟ್ ವೈದ್ಯರ ಸಲಹೆ ಇಲ್ಲದೆ ತೆಗೆದುಕೊಳ್ಳಬಾರದು.

     ಒಮೆಗಾ 3 ಮತ್ತು 6 ಕೊಬ್ಬಿನ ಆಮ್ಲ

    ಒಮೆಗಾ 3 ಮತ್ತು 6 ಕೊಬ್ಬಿನ ಆಮ್ಲ

    ಒಮೆಗಾ 3 ಮತ್ತು 6 ಕೊಬ್ಬಿನ ಆಮ್ಲ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದರೆ ಇದು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವುದಿಲ್ಲ. ಆಹಾರ ಮೂಲಕ ಸಿಗಬೇಕು. ಒಮೆಗಾ 3 ಮತ್ತು 6 ಕೊಬ್ಬಿನಂಶ ಮೀನಿನಲ್ಲಿ ಅಧಿಕವಿರುತ್ತದೆ. ಇನ್ನು ಅಗಸೆ ಬೀಜದಲ್ಲೂ ಕೂಡ ಇದೆ.

     ಮನೆಯಲ್ಲಿ ಲೇಸರ್ ಥೆರಪಿ

    ಮನೆಯಲ್ಲಿ ಲೇಸರ್ ಥೆರಪಿ

    ಇದು ಕೂದಲು ಉದುರುವುದನ್ನು ತಡಗಟ್ಟುವಲ್ಲಿ ತುಂಬಾನೇ ಸಹಕಾರಿ. ಆದರೆ ಇದು ತುಂಬಾ ದುಬಾರಿಯಾಗಿದ್ದು ಸಾಮಾನ್ಯ ಜನರು ಈ ಚಿಕಿತ್ಸೆ ತೆಗೆದುಕೊಳ್ಳಲು ಸ್ವಲ್ಪ ಕಷ್ಟದ ವಿಷಯವಾಗಿದೆ.

English summary

Ways To Stop Your Hair From Thinning in Kannada

Hair fall is common problem, here are ways to stop your hair from thinning, read on.
X
Desktop Bottom Promotion