For Quick Alerts
ALLOW NOTIFICATIONS  
For Daily Alerts

ಪಿಗ್ಗಿ ನೀಡಿದ ಹೇರ್‌ ಮಾಸ್ಕ್ ಟಿಪ್ಸ್ ಲಾಕ್‌ಡೌನ್‌ನಲ್ಲಿ ಉಪಯೋಗಕ್ಕೆ ಬರುತ್ತೆ ನೋಡಿ

|

ಮುಖದ ಕಲೆ ಹೋಗಲಾಡಿಸಲು, ಕೂದಲಿನ ಅಂದ ಹೆಚ್ಚಿಸಲು, ಬಿಸಿಲಿನಿಂದ ತ್ವಚೆ ರಕ್ಷಣೆಗೆ ಈಗ ಎಲ್ಲರೂ ಮನೆಮದ್ದು, ನೈಸರ್ಗಿಕ ಪ್ಯಾಕ್‌ಗಳನ್ನೇ ಬಳಸುತ್ತಿದ್ದಾರೆ. ಇನ್ನು ಸೆಲೆಬ್ರಿಟಿಗಳು ಕೂಡ ನೈಸರ್ಗಿಕವಾದ ಫೇಸ್‌ಸ್ಕ್ರಬ್, ಫೇಶಿಯಲ್, ಹೇರ್‌ ಮಾಸ್ಕ್‌ ಮುಂತಾದ ಬ್ಯೂಟಿ ಸೀಕ್ರೆಟ್‌ ಹಂಚಿಕೊಳ್ಳುತ್ತಿದ್ದಾರೆ.

ಕೊರೊನಾವೈರಸ್‌ ಲಾಕ್‌ಡೌನ್‌ನಿಂದಾಗಿ ನಮ್ಮೆಲ್ಲರ ಜೀವನಶೈಲಿಯೇ ಬದಲಾಗಿದೆ ಅಲ್ಲವೇ? ಲಾಕ್‌ಡೌನ್‌ನಿಂದಾಗಿ ನಮ್ಮ ಆಧುನಿಕ ಜೀವನಶೈಲಿ ಬದಲಿಗೆ ನಮ್ಮ ಹಿರಿಯರು ಪಾಲಿಸುತ್ತಿದ್ದ ಜೀವನಶೈಲಿಗೆ ಮರಳುತ್ತಿದ್ದೇವೆ ಎಂದರೆ ತಪ್ಪಲ್ಲ.

Priyanka Chopra Swears By DIY This Hair Mask

ಹೋಟೆಲ್, ರೆಸ್ಟೋರೆಂಟ್‌ ಊಟ ಬದಲಿಗೆ ಮನೆಯೂಟ ಸವಿಯುವುದು ಹೆಚ್ಚಾಗಿದೆ, ಇನ್ನು ಮನೆಮದ್ದುಗಳ ಬಳಕೆ ಹೆಚ್ಚಾಗಿ ಮಾಡುತ್ತಿದ್ದೇವೆ. ಇನ್ನು ಸೌಂದರ್ಯ ವಿಷಯದಲ್ಲಿ ಹೇಳುವುದಾದರೆ ಮನೆಮದ್ದುಗಳೇ ಈಗ ಪರಿಣಾಮಕಾರಿಯಾಗಿವೆ.

ಮುಖದ ಕಲೆ ಹೋಗಲಾಡಿಸಲು, ಕೂದಲಿನ ಅಂದ ಹೆಚ್ಚಿಸಲು, ಬಿಸಿಲಿನಿಂದ ತ್ವಚೆ ರಕ್ಷಣೆಗೆ ಈಗ ಎಲ್ಲರೂ ಮನೆಮದ್ದು, ನೈಸರ್ಗಿಕ ಪ್ಯಾಕ್‌ಗಳನ್ನೇ ಬಳಸುತ್ತಿದ್ದಾರೆ. ಇನ್ನು ಸೆಲೆಬ್ರಿಟಿಗಳು ಕೂಡ ನೈಸರ್ಗಿಕವಾದ ಫೇಸ್‌ಸ್ಕ್ರಬ್, ಫೇಶಿಯಲ್, ಹೇರ್‌ ಮಾಸ್ಕ್‌ ಮುಂತಾದ ಬ್ಯೂಟಿ ಸೀಕ್ರೆಟ್‌ ಹಂಚಿಕೊಳ್ಳುತ್ತಿದ್ದಾರೆ.

ಈ ನಡುವೆ ಪ್ರಿಯಾಂಕ ಚೋಪ್ರಾ ಈ ಹಿಂದೆ ತಮ್ಮ ಕೂದಲಿನ ಸೌಂದರ್ಯಕ್ಕಾಗಿ ತಾವೇನು ಮಾಡುತ್ತಿದ್ದಾರೆ ಎಂಬ ಬ್ಯೂಟಿ ಸೀಕ್ರೆಟ್‌ ಹಂಚಿಕೊಂಡಿದ್ದರು. ಸಾಮಾನ್ಯವಾಗಿ ಸೆಲೆಬ್ರಿಟಿಗಳೆಂದರೆ ತಮ್ಮ ಸೌಂದರ್ಯ ಕಾಪಾಡಲು ದುಬಾರಿ ಸೌಂದರ್ಯವರ್ಧಕ ಬಳಸುತ್ತಾರೆ ಎಂದೇ ಸಾಮಾನ್ಯರು ಭಾವಿಸುತ್ತಾರೆ. ಆದರೆ ಸೆಲೆಬ್ರಿಟಿಗಳು ಆದರೂ ಕೂಡ ಅಜ್ಜಿ ಕಾಲದ ಸೌಂದರ್ಯ ರಹಸ್ಯವನ್ನು ಅವರೂ ತಮ್ಮ ಸೌಂದರ್ಯ ಕಾಪಾಡಲು ಬಳಸುತ್ತಿರುತ್ತಾರೆ ಎನ್ನುವುದು ಕೂಡ ಅಷ್ಟೇ ನಿಜ.

ಇಲ್ಲಿ ಪ್ರಿಯಾಂಕಾ ಚೋಪ್ರಾ ಆರೋಗ್ಯಕರ ಹಾಗೂ ಆಕರ್ಷಕ ಕೂದಲು ಪಡೆಯಲು ಏನು ಮಾಡಬೇಕೆಂದು ಇನ್‌ಸ್ಟಾಗ್ರಾಮ್‌ನಲ್ಲಿ ನೀಡಿರುವ ಟಿಪ್ಸ್‌ ಅನ್ನು ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

ಪಿಗ್ಗಿಗೆ ತಾಯಿ ಹೇಳಿದ ಬ್ಯೂಟಿ ಸೀಕ್ರೆಟ್

ಪಿಗ್ಗಿಗೆ ತಾಯಿ ಹೇಳಿದ ಬ್ಯೂಟಿ ಸೀಕ್ರೆಟ್

ಈ ಸೌಂದರ್ಯ ರಹಸ್ಯ ಪಿಗ್ಗಿಗೆ ಅವರ ಅಮ್ಮ ಹೇಳಿ ಕೊಟ್ಟಿದ್ದಂತೆ. ನನ್ನ ಆರೋಗ್ಯ ಕೂದಲಿನ ರಹಸ್ಯ ಕೂಡ ಇದೇ ಎಂದು ಪಿಗ್ಗಿ ಹೇಳಿದ್ದಾರೆ. ಬೇಸಿಗೆಯಲ್ಲಿ ಒಣ ಕೂದಲು, ತಲೆ ತುರಿಕೆ, ತಲೆ ಹೊಟ್ಟಿನ ಸಮಸ್ಯೆ ಹೆಚ್ಚಾಗುವುದು. ಇಂಥ ಸಮಸ್ಯೆ ತಡೆಗಟ್ಟಿ ಕೂದಲಿನ ಆರೋಗ್ಯ ಕಾಪಾಡಲು ನೈಸರ್ಗಿಕವಾದ ಈ ಹೇರ್‌ ಮಾಸ್ಕ್ ತುಂಬಾ ಪ್ರಯೋಜನಕಾರಿಯಾಗಿದೆ.

 ನೈಸರ್ಗಿಕ ಹೇರ್ ಡೈ ರೆಸಿಪಿ

ನೈಸರ್ಗಿಕ ಹೇರ್ ಡೈ ರೆಸಿಪಿ

ಒಂದು ಬೌಲ್‌ನಲ್ಲಿ ಎರಡು ಚಮಚ ಮೊಸರು ಹಾಕಿ, 1 ಚಮಚ ಜೇನು ಹಾಕಿ ಅದಕ್ಕೆ ಒಂದು ಮೊಟ್ಟೆ ಒಡೆದು ಹಾಕಿ. ಈಗ ಈ ಎಲ್ಲಾ ಸಾಮಗ್ರಿ ಹಾಕಿ ಮಿಶ್ರ ಮಾಡಿ. ಇದನ್ನು ತಲೆಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ಮೈಲ್ಡ್‌ ಶ್ಯಾಂಪೂ ಹಾಕಿ ಉಗುರು ಬೆಚ್ಚಗಿನ ನೀರಿನಲ್ಲಿ ತಲೆ ತೊಳೆಯಿರಿ.

ಈ ಹೇರ್‌ ಮಾಸ್ಕ್‌ ಪ್ರಯೋಜನಗಳು

ಈ ಹೇರ್‌ ಮಾಸ್ಕ್‌ ಪ್ರಯೋಜನಗಳು

ಮೊಸರು ತಲೆ ಬುಡದ ಕೊಳೆ ತೆಗೆಯುವಲ್ಲಿ ಸಹಕಾರಿ. ಜೇನು ಕೂದಲಿಗೆ ಮಾಯಿಶ್ಚರೈಸರ್ ಆಗಿ ಇಡುತ್ತದೆ, ಹಾಗೂ ತಲೆ ತುರಿಕೆ ಕಡಿಮೆಯಾಗುವುದು. ಇನ್ನು ಮೊಟ್ಟೆ ಕೂದಲಿನ ಹೊಳಪು ಹೆಚ್ಚಿಸುತ್ತದೆ. ಈ ಮೂರು ಸಾಮಗ್ರಿ ಕೂದಲಿನ ಸಮಸ್ಯೆ ಹೋಗಲಾಡಿಸಿ, ಬಾಹ್ಯವಾಗಿ ಕೂದಲಿನ ರಕ್ಷಣೆ ಮಾಡುತ್ತದೆ.

ಇತರ ಪ್ರಯೋಜನಗಳು

  • ಮೊಸರಿನಲ್ಲಿರುವ ಅಮೈನೋ ಆಮ್ಲಗಳು, ಮೊಟ್ಟೆಯಲ್ಲಿರುವ ಪ್ರೊಟೀನ್ ಕೂದಲಿನ ಬಲ ಹೆಚ್ಚಿಸುತ್ತದೆ
  • ಈ ಹೇರ್‌ ಮಾಸ್ಕ್‌ ಕೂದಲು ಉದುರುವುದನ್ನು ತಡೆಗಟ್ಟುವಲ್ಲಿಯೂ ಸಹಕಾರಿ.
  • ಬೆವತು ತಲೆ ತುಂಬಾ ತುರಿಸುತ್ತಿದ್ದರೆ ಕರಿಬೇವಿನ ಎಲೆಯ ಮಾಸ್ಕ್ ಹಚ್ಚಿ

    ಬೆವತು ತಲೆ ತುಂಬಾ ತುರಿಸುತ್ತಿದ್ದರೆ ಕರಿಬೇವಿನ ಎಲೆಯ ಮಾಸ್ಕ್ ಹಚ್ಚಿ

    ಪ್ರಿಯಾಂಕ ಹೇಳಿದ ಹೇರ್‌ ಮಾಸ್ಕ್ ಜೊತೆಗೆ ಬೋಲ್ಡ್‌ ಸ್ಕೈ ನಿಮಗೆ ತಲೆ ತುರಿಕೆ ಕಡಿಮೆ ಮಾಡುವ ಅತ್ಯುತ್ತಮವಾದ ಫೇಸ್‌ ಮಾಸ್ಕ್‌ ರೆಸಿಪಿ ನೀಡಿದ್ದೇವೆ. ಒಂದು ಹಿಡಿ ಕರಿಬೇವು ರುಬ್ಬಿ, ಅದನ್ನು 2 ಚಮಚ ಕಡ್ಲೆ ಹಿಟ್ಟು ಹಾಗೂ ಮೊಸರು ಜೊತೆ ಮಿಶ್ರ ಮಾಡಿ ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ತಲೆ ತೊಳೆಯಿರಿ. ಹೀಗೆ ಮಾಡಿದರೆ ತಲೆ ತುರಿಕೆ ಕಡಿಮೆಯಾಗುವುದು.

English summary

Priyanka Chopra Swears By DIY This Hair Mask

Through her post, Priyanka mentioned that a few years back she shared her beauty regime with the Vogue magazine. And also that considering the current situation, it is time to revisit the DIY beauty hacks she had mentioned.
Story first published: Wednesday, April 22, 2020, 14:38 [IST]
X
Desktop Bottom Promotion