For Quick Alerts
ALLOW NOTIFICATIONS  
For Daily Alerts

ಆಕ್ಸಿಜನ್‌ ಲೇಸರ್‌ ಥೆರಪಿಯಿಂದ,ಕೂದಲು ತೆಳುವಾಗುವುದು, ಬಕ್ಕ ತಲೆ ಉಂಟಾಗುವುದನ್ನು ತಡೆಗಟ್ಟಬಹುದೇ?

|

ಸೊಂಪಾಗಿದ್ದ ಕೂದಲು ಇದ್ದಕ್ಕಿದ್ದಂತೆ ಉದುರಲಾರಂಭಿಸಿದರೆ ಹೆಣ್ಣಾಗಲಿ, ಗಂಡಾಗಲಿ ಅದರ ಬಗ್ಗೆ ಚಿಂತೆ ಮಾಡಿಯೇ ಮಾಡುತ್ತಾರೆ. ಏಕೆಂದರೆ ಕೂದಲು ತಮ್ಮ ಮುಖಕ್ಕೆ ಪ್ರತ್ಯೇಕ ಲಕ್ಷಣವನ್ನು ನೀಡುವುದು. ನೋಡಲು ನಾವೆಷ್ಟೆ ಚೆನ್ನಾಗಿದ್ರೂ ಕೂದಲು ಉದುರಲಾರಂಭಿಸಿದರೆ ಮುಖದಲ್ಲಿ ಏನೋ ಕೊರತೆ ಉಂಟಾದಂತೆ ಕಾಣುವುದು, ಮುಖದಲ್ಲಿ ಮೊದಲಿನ ಛಾರ್ಮ್ ಇರುವುದಿಲ್ಲ. ಆದ್ದರಿಂದಲೇ ಕೂದಲು ಸೊಂಪಾಗಿ ಇರಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ.

Oxygen Laser Therapy For Hair Loss

ಕೂದಲು ಒಬ್ಬ ವ್ಯಕ್ತಿಯ ಆತ್ಮವಿಶ್ವಾಸ ಹೆಚ್ಚಿಸುತ್ತದೆ. 2009ರಲ್ಲಿ ಇಂಟರ್‌ನ್ಯಾಷನಲ್‌ ಸೊಸೈಟಿ ಆಫ್ ಹೇರ್‌ ರೆಸ್ಟೋರೇಷನ್‌ ಸರ್ಜರಿ ಅವರು ಒಂದು ಅಧ್ಯಯನ ನಡೆಸಿದ್ದರು, ಅದರಲ್ಲಿ ಶೇ.58ರಷ್ಟು ಜನರು ತುಂಬಾ ಕೂದಲು ಇರುವುದು ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.

ಕೂದಲು ಉದುರುವುದನ್ನು ತಡೆಗಟಗಟಲು ಹಲವಾರು ಚಿಕಿತ್ಸೆಗಳಿವೆ, ಅದರಲ್ಲೊಂದು ಲೇಸರ್‌ ಆಕ್ಸಿಜನ್ ಥೆರಪಿ. ಇದು ಸುರಕ್ಷಿತವಾಗಿದೆ ಹಾಗೂ ಪರಿಣಾಮಕಾರಿಯಾಗಿದೆ, ಹೆಚ್ಚು ನೋವು ಉಂಟಾಗುವುದಿಲ್ಲ, ಹೇರ್‌ ಟ್ರಾನ್ಸ್‌ಪ್ಲ್ಯಾಂಟ್‌ನಷ್ಟು ದುಬಾರಿಯೂ ಅಲ್ಲ.

ಆಕ್ಸಿನ್‌ ಲೇಸರ್‌ ಥೆರಪಿ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ:

 ಆಕ್ಸಿಜನ್ ಲೇಸರ್ ಥೆರಪಿ

ಆಕ್ಸಿಜನ್ ಲೇಸರ್ ಥೆರಪಿ

ಕೂದಲು ಉದುರುವುದನ್ನು ತಡೆಗಟ್ಟಲು ಆಕ್ಸಿಜನ್‌ ಲೇಸರ್ ಥೆರಪಿ ಎಂಬುವುದು ಅತ್ಯಾಉನಿಕವಾದ ವಿಧಾನವಾಗಿದೆ.ಇದು USA FDA ಅನುಮತಿ ನೀಡಿರುವ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಊದಲಿನ ಚಿಕಿತ್ಸಾ ವಿಧಾನವಾಗಿದೆ. ಇದು ಆರೋಗ್ಯಕರವಾದ ಚಿಕಿತ್ಸೆ ವಿಧಾನವಾಗಿದ್ದು ಕೂದಲಿನ ಬುಡಕ್ಕೆ ಸರಿಯಾಗಿ ಆಮ್ಲಜನಕ ಪೂರೈಕೆ ಮಾಡುವಂತೆ ಮಾಡಿ ಕೂದಲಿನ ಬುಡ ಬಲಪಡಿಸುವುದು, ಇದರಿಂದಾಗಿ ಕೂದಲು ಉದುರುವುದು ಕಡಿಮೆಯಾಗಿ ಕೂದಲಿನ ಬೆಳವಣಿಗೆಯಾಗುವುದು.

 ಆಕ್ಸಿಜನ್ ಲೇಸರ್ ಥೆರಪಿ ಪ್ರಯೋಜನಗಳು

ಆಕ್ಸಿಜನ್ ಲೇಸರ್ ಥೆರಪಿ ಪ್ರಯೋಜನಗಳು

* ಕೂದಲು ಉದುರುವುದು ಕಡಿಮೆಯಾಗುವುದು

* ತೆಳುವಾದ ಕೂದಲು ಮಂದವಾಗುವುದು

* ಕೂದಲಿನ ಬುಡದಲ್ಲಿ ರಕ್ತ ಸಂಚಾರ ಹೆಚ್ಚುವುದು.

* ಹೊಸ ಕೂದಲು ಹುಟ್ಟುವುಉದ

* ತಲೆ ಬುಡ ಆರೋಗ್ಯಕರವಾಗಿರುತ್ತೆ

* ತಲೆ ಬುಡದಲ್ಲಿ PH ಬ್ಯಾಲೆನ್ಸ್ ಆಗುವುದರಿಂದ ತಲೆಹೊಟ್ಟು ಕಡಿಮೆಯಾಗುವುದು.

ತಲೆ ಬುಡಕ್ಕೆ ಈ ಪ್ರಯೋಜನಗಳಿವೆ

ತಲೆ ಬುಡಕ್ಕೆ ಈ ಪ್ರಯೋಜನಗಳಿವೆ

* ಕೊಲೆಜಿನ್‌ ಉತ್ಪತ್ತಿ ಹೆಚ್ಚಿಸುತ್ತೆ

* ತಲೆ ಬುಡದಲ್ಲಿ ಮಾಯಿಶ್ಚರೈಸರ್ ಕಾಪಾಡುತ್ತೆ, ಇದರಿಂದ ಕೂದಲಿನ ಬುಡ ಒಣಗುವುದಿಲ್ಲ.

* ತ್ವಚೆಯ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ

* ಇಂಟರ್‌ಸೆಲ್ಯೂಲರ್‌ ದ್ರವ ಹೆಚ್ಚಿಸಿ ಪೋಷಕಾಂಶಗಳು ದೊರೆಯುವಂತೆ ಮಾಡುವುದು.

 ಲೇಸರ್ ಚಿಕಿತ್ಸೆ ಕೂದಲು ಉದುರುವ ಸಮಸ್ಯೆ ಇರುವವರಿಗೆ ಹೇಗೆ ಸಹಕಾರಿ?

ಲೇಸರ್ ಚಿಕಿತ್ಸೆ ಕೂದಲು ಉದುರುವ ಸಮಸ್ಯೆ ಇರುವವರಿಗೆ ಹೇಗೆ ಸಹಕಾರಿ?

ಕೂದಲು ಉದುರುತ್ತಿದ್ದರೆ, ಕೂದಲು ತುಂಬಾ ತೆಳುವಾಗಿದ್ದರೆ ಮೆಡಿಕಲ್‌ ಲೇಸರ್‌ ಸಾಧನ ಬಳಸಿ ಹಾನಿಯಾಗಿದ್ದ ಕೂದಲಿನ ಬುಡವನ್ನು ಸರಿಪಡಿಸಲಾಗುವುದು. ಈ ಚಿಕಿತ್ಸೆಯಿಂದ ಕೂದಲು ಮರು ಹುಟ್ಟುವುದು, ಅಲ್ಲದೆ ಈ ಮರುಹುಟ್ಟಿದ ಕೂದಲು ತುಂಬಾ ಬಲವಾಗಿರುತ್ತೆ. ಈ ಚಿಕಿತ್ಸೆ ಪಡೆದುಕೊಂಡವರಲ್ಲಿ ಸಕ್ಸಸ್‌ ರೇಟ್‌ ಶೇ.85ರಷ್ಟಿದೆ.

ಅಲ್ಲದೆ ಈ ಚಿಕಿತ್ಸೆ ಬಳಿಕ ಹುಟ್ಟಿದ ಕೂದಲು ಬಲವಾಗಿರುವುದು, ಕೂದಲು ಉದುರುವ ಸಮಸ್ಯೆ ಇರುವುದಿಲ್ಲ.

English summary

Oxygen Laser Therapy For Hair Loss: All You Need to Know in Kannada

Oxygen Laser Therapy For Hair Loss: All You Need to Know in Kannada,read on...
X
Desktop Bottom Promotion