For Quick Alerts
ALLOW NOTIFICATIONS  
For Daily Alerts

ಕೂದಲಿಗೆ ಕೆರಾಟಿನ್ ಚಿಕಿತ್ಸೆ ಎಂದರೇನು?ಇದರ ಪ್ರಯೋಜನ ಹಾಗೂ ಅಡ್ಡಪರಿಣಾಮಗಳೇನು?

|
Keratin Treatment For Hair: Pros And Cons | Oneindia Kannada

> ಹೆಣ್ಣಿನ ಸೌಂದರ್ಯವು ಕೇವಲ ಮುಖದ ಮೇಲಿನ ಅಂದ ಹಾಗೂ ಆಕೆಯ ಕೇಶರಾಶಿಯು ತನ್ನ ಪಾಲು ನೀಡುವುದು. ಕಪ್ಪು, ದಪ್ಪ ಹಾಗೂ ಉದ್ದಗಿನ ಕೂದಲು ಇದ್ದರೆ ಆಗ ಸೌಂದರ್ಯವು ಎದ್ದು ಕಾಣುವುದು. ಆದರೆ ಉದ್ದ ಕೂದಲು ಎನ್ನುವುದು ನಿರ್ವಹಣೆಗೆ ಕೂಡ ತುಂಬಾ ಕಷ್ಟವಾಗಿರುವ ಕಾರಣದಿಂದಾಗಿ ಹೆಚ್ಚಿನ ಹೆಣ್ಣು ಮಕ್ಕಳು ಕೂದಲು ಕತ್ತರಿಸಿಕೊಳ್ಳುತ್ತಿರುವರು. ಇಂದಿನ ಟ್ರೆಂಡ್ ಎಂದರೆ ಕೂದಲಿನ ಸ್ಟ್ರೇಟೆನಿಂಗ್. ಇದು ಕೂದಲಿಗೆ ಮತ್ತಷ್ಟು ಅಂದವನ್ನು ನೀಡುವುದು. ಆದರೆ ನೈಜವಾಗಿ ಬರುವ ಕೂದಲಿಗೂ ಇದಕ್ಕೂ ತುಂಬಾ ವ್ಯತ್ಯಾಸವಿರುವುದು. ಇಂದಿನ ದಿನಗಳಲ್ಲಿ ಕೆರಾಟಿನ್ ಚಿಕಿತ್ಸೆ ಮೂಲಕ ಕೂದಲಿನ ಸ್ಟ್ರೇಟೆನಿಂಗ್ ಮಾಡುವರು. ಇದು ಗುಂಗುರು ಕೂದಲನ್ನು ನಿವಾರಣೆ ಮಾಡುವುದು ಮಾತ್ರವಲ್ಲದೆ, ಬಿಡಿಬಿಡಿಯಾದ ಕೂದಲನ್ನು ಸರಿಪಡಿಸಿ, ಕೂದಲಿಗೆ ಒಳ್ಳೆಯ ಆಕಾರ ಮತ್ತು ಅದರ ಕಾಂತಿ ವೃದ್ಧಿಸುವುದು. ಕೂದಲನ್ನು ನೇರವಾಗಿಸಲು ಹಿಂದೆ ಕೆಲವು ಮಂದಿ ಹೇರ್ ಐರನ್ ಮತ್ತು ಬ್ಲೋ ಡ್ರೈಯರ್ ಬಳಸಿಕೊಳ್ಳುತ್ತಿದ್ದರು. ಆದರೆ ಇದು ಹೆಚ್ಚು ಶ್ರಮದಾಯಕ. ಇಷ್ಟು ಮಾತ್ರವಲ್ಲದೆ ಕೆಲವು ಮಹಿಳೆಯರು ರಿಲ್ಯಾಕ್ಸಿಂಗ್ ಚಿಕಿತ್ಸೆ ಕೂಡ ಮಾಡಿರುವರು. ಆದರೆ ಇದು ಕೂದಲಿಗೆ ಹಾನಿ ಉಂಟು ಮಾಡುತ್ತದೆ. ಆದರೆ ಕೆರಾಟಿನ್ ಚಿಕಿತ್ಸೆಯು ಈಗ ಹೆಚ್ಚಿನ ಮಹಿಳೆಯರು ಹಾಗೂ ಹೇರ್ ಸ್ಟೈಲಿಸ್ಟ್ ಗಳ ಮೆಚ್ಚುಗೆಗೆ ಪಾತ್ರವಾಗಿದೆ. ಈ ಲೇಖನದಲ್ಲಿ ಕೆರಾಟಿನ್ ಚಿಕಿತ್ಸೆಯ ಲಾಭ ಮತ್ತು ಅಡ್ಡಪರಿಣಾಮಗಳ ಬಗ್ಗೆ ತಿಳಿಯುವ...

ALSO READ: ಕಣ್ಣಿನ ಅಂದ ಹೆಚ್ಚಿಸುವ ಬ್ರಷ್‌ಗಳ ಬಗ್ಗೆ ಗೊತ್ತಿದೆಯೇ?

ಕೆರಾಟಿನ್ ಚಿಕಿತ್ಸೆ ಎಂದರೇನು?

ಕೆರಾಟಿನ್ ಚಿಕಿತ್ಸೆ ಎಂದರೇನು?

ಕೆರಾಟಿನ್ ಎನ್ನುವುದು ಕೂದಲಿನಲ್ಲಿ ಇರುವಂತಹ ಪ್ರೋಟೀನ್ ಆಗಿದೆ. ಕೆರಾಟಿನ್ ಉತ್ತಮವಾಗಿದ್ದರೆ ಆಗ ಕೂದಲು ನೇರ ಹಾಗೂ ಕಾಂತಿಯುತವಾಗಿ ಇರುವುದು. ಆಹಾರ ಕ್ರಮ ಹಾಗೂ ಜೀವನಶೈಲಿ ಬದಲಾವಣೆಯಿಂದಾಗಿ ಕಳೆದ ಹಲವಾರು ವರ್ಷಗಳಿಂದ ಕೂದಲಿನಲ್ಲಿ ಕೆರಾಟಿನ್ ಮಟ್ಟವು ಕಡಿಮೆ ಆಗುತ್ತಲಿದೆ. ಇದರಿಂದ ಕೂದಲು ಒಣ ಹಾಗೂ ನಿಸ್ತೇಜವಾಗಿ ಕಾಣಿಸುವುದು. ಕೆರಾಟಿನ್ ಚಿಕಿತ್ಸೆ ವೇಳೆ ಕೂದಲಿಗೆ ಕೃತಕವಾಗಿ ಕೆರಾಟಿನ್ ನೀಡಲಾಗುತ್ತದೆ. ಇದರಿಂದಾಗಿ ಕೂದಲು ತುಂಬಾ ನಯ, ಕಾಂತಿ ಹಾಗೂ ಹೊಳಪವನ್ನು ಪಡೆಯುವುದು. ಹೀಗಾಗಿ ಇದು ಮಹಿಳೆಯರು ಹಾಗೂ ಪುರುಷರಲ್ಲಿ ತುಂಬಾ ಮೆಚ್ಚುಗೆಗೆ ಪಾತ್ರವಾಗಿದೆ.

ಇದು ಹೇಗೆ ಕೆಲಸ ಮಾಡುವುದು?

ಇದು ಹೇಗೆ ಕೆಲಸ ಮಾಡುವುದು?

ಹೇರ್ ಸ್ಟೈಲಿಸ್ಟ್ ಗಳು ಕೂದಲನ್ನು ಕೆರಾಟಿನ್ ಇರುವ ಶ್ಯಾಂಪೂ ಮತ್ತು ಕಂಡೀಷನರ್ ನಿಂದ ಕೂದಲನ್ನು ತೊಳೆಯುವರು. ಇದರ ಬಳಿಕ ಬ್ಲೋ ಡ್ರೈ ಮಾಡಿ ಕೂದಲಿನಲ್ಲಿರುವಂತಹ ತೇವಾಂಶ ತೆಗೆಯುವರು. ಇದರ ಬಳಿಕ ಬ್ರಷ್ ಬಳಸಿಕೊಂಡು ಕೆರಾಟಿನ್ ಸೊಲ್ಯೂಷನ್ ನನ್ನು ಕೂದಲಿಗೆ ಹಚ್ಚಲಾಗುತ್ತದೆ. ಇದರ ಬಳಿಕ ಕೂದಲು ಸೆಟ್ ಆಗಲು ಸ್ವಲ್ಪ ಸಮಯ ಬೇಕಾಗುವುದು. ಬ್ಲೋ ಡ್ರೈ ಬಳಸಿಕೊಂಡು ಮತ್ತೆ ಕೂದಲಿನ ತೇವಾಂಶ ತೆಗೆಯುವರು ಮತ್ತು ಸೊಲ್ಯೂಷನ್ ಕೂದಲಿನಲ್ಲಿ ಇರಲು ಹಾಟ್ ಫ್ಲ್ಯಾಟ್ ಐರನ್ ಬಳಸುವರು. ಕೂದಲಿನ ಉದ್ದಕ್ಕೆ ಅನುಗುಣವಾಗಿ ಇದಕ್ಕೆ ಸುಮಾರು ಎರಡು ಗಂಟೆ ಬೇಕಾಗುವುದು. ಈ ಚಿಕಿತ್ಸೆ ಬಳಿಕ ಮೂರು ದಿನಗಳ ಕಾಲ ಕೂದಲಿಗೆ ನೀರು ಮುಟ್ಟಿಸಬಾರದು. ಅಂತಿಮವಾಗಿ ಇದನ್ನು ಮಾಡಿದ ಬಳಿಕ ನಿಮಗೆ ಮೂರು ತಿಂಗಳ ಅಥವಾ ಹೆಚ್ಚಿನ ಕಾಲ ನಯ ಹಾಗೂ ನೇರವಾಗಿರುವ ಕೂದಲು ಸಿಗುವುದು.

ಕೆರಾಟಿನ್ ಚಿಕಿತ್ಸೆ ಏನೆಂದು ನಿಮಗೆ ಈಗ ತಿಳಿದಿದೆ. ಇದರ ಲಾಭ ಏನು ಮತ್ತು ಅಡ್ಡಪರಿಣಾಮಗಳು ಏನು ಎಂದು ನೀವು ತಿಳಿಯಿರಿ.

ಮೊದಲು ಪರೀಕ್ಷಿಸಿಕೊಳ್ಳಿ

ಮೊದಲು ಪರೀಕ್ಷಿಸಿಕೊಳ್ಳಿ

ನೀವು ಸಲೂನ್ ಗೆ ಹೋಗುವ ಮೊದಲು ಕೆರಾಟಿನ್ ಚಿಕಿತ್ಸೆಯು ನಿಮ್ಮ ಕೂದಲಿಗೆ ಹೊಂದಿಕೊಳ್ಳುತ್ತದೆಯಾ ಎಂದು ಪರೀಕ್ಷೆ ಮಾಡಿಕೊಳ್ಳಿ. ನಿಮ್ಮ ಸ್ನೇಹಿತರಿಗೆ ಇದು ಹೊಂದಿಕೊಂಡಿದ್ದರೆ ಅದರರ್ಥ ನಿಮಗೂ ಇದು ಸರಿಹೊಂದುವುದು ಎಂದಲ್ಲ. ಗುಂಗುರು ಕೂದಲು ಮತ್ತು ಬಿಡಿಬಿಡಿಯಾಗಿ ಕೂದಲು ಇರುವಂತಹವರು ಕೆರಾಟಿನ್ ಚಿಕಿತ್ಸೆ ಮಾಡಿಸಿಕೊಳ್ಳಬಹುದು ಎಂದು ಹೇರ್ ಸ್ಟೈಲಿಸ್ಟ್ ಗಳು ಹೇಳುವರು. ಮಧ್ಯಮ ನೇರವಾಗಿ ಇರುವಂತಹ ಕೂದಲಿನವರು ಈ ಚಿಕಿತ್ಸೆ ಕಡೆಗಣಿಸಬೇಕು ಎಂದು ಹೇಳುವರು.

ನೀವು ಇದನ್ನು ಪರೀಕ್ಷಿಸುವ ಮೊದಲು ಹೇರ್ ಸ್ಟೈಲಿಸ್ಟ್ ಬಳಿ ಸಲಹೆ ಕೇಳಿ. ನಂಬಿಕಸ್ಥ ಮತ್ತು ಅನುಭವಿ ಹೇರ್ ಸ್ಟೈಲಿಸ್ಟ್ ನ್ನು ನೀವು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ನೀವು ಹೇರ್ ಸ್ಟೈಲಿಸ್ಟ್ ಜತೆಗೆ ಮಾತನಾಡಿದರೆ ಆಗ ನಿಮಗೆ ಇದು ಹೊಂದಿಕೊಳ್ಳುತ್ತದೆಯಾ ಎಂದು ತಿಳಿಯುವುದು. ಪ್ರತಿಯೊಂದು ಕೆರಾಟಿನ್ ಚಿಕಿತ್ಸೆಯನ್ನು ಸಮಾನವಾಗಿ ಮಾಡಲಾಗಿಲ್ಲ. ನೀವು ಇದನ್ನು ಮಾಡಿಸುವ ಮೊದಲು ಇದರ ಬಗ್ಗೆ ಸರಿಯಾಗಿ ತಿಳಿಯಿರಿ. ಕೂದಲಿನ ಉದ್ದಕ್ಕೆ ಅನುಗುಣವಾಗಿ ಇದರ ದರ ನಿಗದಿ ಮಾಡುವರು. ಮೊದಲು ದರ ಕೇಳಲು ಮರೆಯಬೇಡಿ.

ALSO READ: ಕೂದಲು ಕವಲೊಡೆಯುವುದನ್ನು ತಡೆಗಟ್ಟಲು ಇಲ್ಲಿದೆ ಟಿಪ್ಸ್

ಒಳ್ಳೆಯದು

ಒಳ್ಳೆಯದು

• ಕೆರಾಟಿನ್ ಚಿಕಿತ್ಸೆ ಕೂದಲಿಗೆ ತುಂಬಾ ಸುರಕ್ಷಿತ

• ಇದು ಕೂದಲನ್ನು ತುಂಬಾ ಕಾಂತಿಯುತ ಮಾಡುವುದು ಹಾಗೂ ಗುಂಗುರು ನಿವಾರಿಸುವುದು

• ಕೂದಲು ತುಂಬಾ ನಯ ಹಾಗೂ ರೇಷ್ಮೆಯಂತೆ ಆಗುವುದು

• ಇದು ಪುರುಷರು ಹಾಗೂ ಮಹಿಳೆಯರಿಗೆ ಹೊಂದಿಕೊಳ್ಳುವುದು.

• ಯಾವುದೇ ಅಡ್ಡಪರಿಣಾಮಗಳು ಸಾಬೀತಾಗಿಲ್ಲ

• ಕೂದಲನ್ನು ನೇರವಾಗಿ ಇಡಲು ಸ್ಪ್ರೇ ಅಥವಾ ಜೆಲ್ ನ ಅಗತ್ಯವಿಲ್ಲ.

• ಸುಲಭವಾಗಿ ಸ್ಟೈಲ್ ಮಾಡಬಹುದು.

ಕೆಟ್ಟದು

ಕೆಟ್ಟದು

• ಇದಕ್ಕೆ ಬಳಸುವ ರಾಸಾಯನಿಕವು ಚರ್ಮಕ್ಕೆ ಕಿರಿಕಿರಿ ಉಂಟು ಮಾಡುವುದು ಹಾಗೂ ಕಣ್ಣಿನಲ್ಲಿ ನೀರು ತರಿಸಬಹುದು.

• ಕೆಲವೊಂದು ಸಂದರ್ಭದಲ್ಲಿ ಇದು ಅಲರ್ಜಿಯನ್ನು ಉಂಟು ಮಾಡಬಹುದು. ದದ್ದು ಮತ್ತು ತುರಿಕೆ ಉಂಟಾಗಬಹುದು.

• ಇದು ತುಂಬಾ ದುಬಾರಿ ಚಿಕಿತ್ಸೆ

• ಗರ್ಭಿಣಿಯರು ಇದನ್ನು ಮಾಡಿಸಬಾರದು.

• ಪರಿಣಿತ ಹೇರ್ ಸ್ಟೈಲಿಸ್ಟ್ ಮಾತ್ರ ಇದನ್ನು ಮಾಡಬೇಕು.

• ದೀರ್ಘಕಾಲ ಬಾಳಿಕೆ ಬರಲು ವಿಶೇಷ ಸಲ್ಫೇಟ್ ಶ್ಯಾಂಪೂ ಹಾಗೂ ಕಂಡೀಷನರ್ ಬಳಸಲಾಗುತ್ತದೆ.

• ಕಟ್ಟಡ ಸಾಮಗ್ರಿ ಹಾಗೂ ಮನೆಬಳಕೆ ಉತ್ಪನ್ನಗಳಲ್ಲಿ ಬಳಸಲಾಗುವಂತಹ ರಾಸಾಯನಿಕವಾಗಿರುವಂತಹ ಫಾರ್ಮಾಲ್ಡಿಹೈಡ್ ನ್ನು ಇದಕ್ಕೆ ಬಳಸುವುದು ತುಂಬಾ ಟೀಕೆಗೆ ಗುರಿಯಾಗಿದೆ.

English summary

Keratin Treatment For Hair: Pros And Cons

Keratin treatment is one of the latest and trending hair straightening treatments. It not only helps to get straighthair but also improves the volume of hair and boosts its shine. But Keratin treatment has pros and cons have a look.
X
Desktop Bottom Promotion