For Quick Alerts
ALLOW NOTIFICATIONS  
For Daily Alerts

ಹೇನು, ಹೊಟ್ಟು ಮುಂತಾದ ಸಮಸ್ಯೆಗೆ ಕಹಿಬೇವು ಹೀಗೆ ಬಳಸಿ

|

ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದರೆ ಅದರಲ್ಲೂ ಹೆಣ್ಮಕ್ಕಳಿದ್ದರೆ, ಕೂದಲು ಉದ್ದವಾಗಿದ್ದರೆ ತಲೆಹೇನು ಸಮಸ್ಯೆ ಸಾಮಾನ್ಯವಾಗಿ ಇದ್ದೇ ಇರುತ್ತದೆ. ತಲೆ ಕೂದಲನ್ನು ಎಷ್ಟೇ ಸ್ವಚ್ಛವಾಗಿಟ್ಟರೂ ಹೇನು ಮಾತ್ರ ಕಡಿಮೆಯಾಗಲ್ಲ.

ಹೇನು, ಹೊಟ್ಟು ಮುಂತಾದ ಸಮಸ್ಯೆಗೆ ಕಹಿಬೇವು ಹೀಗೆ ಬಳಸಿ | Boldsky Kannada
Incredible Benefits Of Neem For Hair


ಒಂದು ಮಗುವಿನ ತಲೆಯಿಂದ ಮತ್ತೊಂದು ಮಗುವಿಗೆ ಹೇನು ಹರಡುವುದು. ಮಳೆಗಾಲದಲ್ಲಿ ಹೇನು ಸಮಸ್ಯೆ ಮತ್ತಷ್ಟು ಅಧಿಕವಾಗುವುದು. ಇನ್ನು ಎಲ್ಲರನ್ನು ಕಾಡುವ ಮತ್ತೊಂದು ಸಮಸ್ಯೆಯೆಂದರೆ ತಲೆಹೊಟ್ಟು, ಇದು ಕೂಡ ಸಾಕಷ್ಟು ತುರಿಕೆ ನೀಡುವುದಲ್ಲದೆ ಕೂದಲು ಉದುರುವುದಕ್ಕೆ ಕಾರಣವಾಗುತ್ತದೆ.

ಇಲ್ಲಿ ನಾವು ಕೂದಲಿಗೆ ಸಮಸ್ಯೆಗೆ ಹತ್ತು ಹಲವು ಸಮಸ್ಯೆಗಳಿಗೆ ಕಹಿಬೇವಿನ ಎಲೆಯಿಂದ ಪರಿಹಾರ ಕಂಡು ಕೊಳ್ಳುವುದು ಹೇಗೆ ಎಂದು ಹೇಳಿದ್ದೇವೆ ನೋಡಿ:

 1. ತಲೆಹೊಟ್ಟು ಹೋಗಲಾಡಿಸುವುದು ಹೇಗೆ?

1. ತಲೆಹೊಟ್ಟು ಹೋಗಲಾಡಿಸುವುದು ಹೇಗೆ?

ತಲೆಹೊಟ್ಟು ಹಲವಾರು ಕಾರಣಗಳಿಂದ ಉಂಟಾಗುತ್ತದೆ. ತಲೆಯಲ್ಲಿ ಶಿಲೀಂಧ್ರಗಳಿಂದಾಗಿ ತಲೆ ಹೊಟ್ಟು ಅಧಿಕವಾಗುವುದು. ಕಹಿ ಬೇವಿನ ಎಲೆಯಲ್ಲಿ ಬ್ಯಾಕ್ಟಿರಿಯಾ ಹಾಗೂ ಸೋಂಕುಗಳ ವಿರುದ್ಧ ಹೋರಾಡುವ ಗುಣವಿದೆ.

ಬಳಸುವುದು ಹೇಗೆ?

ಕಹಿಬೇವಿನ ಎಲೆಯನ್ನು ಪೇಸ್ಟ್ ಮಾಡಿ ಅದನ್ನು ಮೊಸರಿನ ಜೊತೆ ಮಿಶ್ರ ಮಾಡಿ. ನಂತರ ತಲೆಗೆ ಹಚ್ಚಿ 10-15 ನಿಮಿಷ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತಲೆ ತೊಳೆಯಿರಿ. ಹೀಗೆ ವಾರದಲ್ಲಿ ಎರಡು ಬಾರಿ ಮಾಡುತ್ತಿದ್ದರೆ ತಲೆಹೊಟ್ಟಿನ ಸಮಸ್ಯೆ ಇರುವುದಿಲ್ಲ, ಕೂದಲೂ ಚೆನ್ನಾಗಿರುತ್ತದೆ.

 2. ತಲೆ ಹೇನು ಇಲ್ಲವಾಗುವುದು

2. ತಲೆ ಹೇನು ಇಲ್ಲವಾಗುವುದು

ತಲೆಹೇನು ಸಮಸ್ಯೆಯಿಂದ ತುಂಬಾ ತುರಿಕೆ ಉಂಟಾಗುವುದು ಹಾಗೂ ತುರಿಸುತ್ತಿದ್ದರೆ ತಲೆಯಲ್ಲಿ ಕಜ್ಜಿ ಕೂಡ ಉಂಟಾಗುವುದು. ಈ ಸಮಸ್ಯೆ ಹೋಗಲಾಡಿಸಲು ಕೂಡ ಕಹಿ ಬೇವಿನ ಎಲೆ ಪರಿಣಾಮಕಾರಿ.

ಬಳಸುವುದು ಹೇಗೆ?

ಕಹಿ ಬೇವಿನ ಎಲೆಯನ್ನು ಎಣ್ಣೆ ಹಾಕಿ ಕುದಿಸಿ, ಅದರಿಂದ ತಲೆಗೆ ಮಸಾಜ್ ಮಾಡಿ ಒಂದೆರಡು ತಾಸು ಬಿಟ್ಟು ತಲೆ ತೊಳೆಯಿರಿ. ಈ ರೀತಿ ಮಾಡುತ್ತಿದ್ದರೆ ಬೇಗನೆ ತಲೆಹೇನು ಸಮಸ್ಯೆ ಇಲ್ಲವಾಗುವುದು.

3.ತಲೆ ಕೂದಲು ಉದುರುವುದು ಕಡಿಮೆಯಾಗುತ್ತದೆ

3.ತಲೆ ಕೂದಲು ಉದುರುವುದು ಕಡಿಮೆಯಾಗುತ್ತದೆ

ತಲೆ ಕೂದಲು ಸರಿಯಾದ ಆರೈಕೆಯಿಲ್ಲದಿದ್ದರೆ ಮತ್ತು ದೂಳು ಇವುಗಳಿಂದ ಕೂದಲು ಉದುರುವ ಸಮಸ್ಯೆ ಕಂಡು ಬರುವುದು. ಕಹಿಬೇವಿನ ಎಲೆಯಲ್ಲಿರುವ ಅಂಶಗಳು ತಲೆಯನ್ನು ಸ್ವಚ್ಛ ಮಾಡುವಲ್ಲಿ ಸಹಕಾರಿ.

ಬಳಸುವುದು ಹೇಗೆ

ಕಹಿ ಬೇವಿನ ಎಣ್ಣೆಯನ್ನು ತಲೆಗೆ ಹಚ್ಚಿ ಅಥವಾ ಎಲೆಯನ್ನು ಪೇಸ್ಟ್ ಮಾಡಿ ಹಚ್ಚಿ, ನಂತರ ಅರ್ಧ ಗಂಟೆಯ ಬಳಿಕ ತಲೆ ತೊಳೆಯಿರಿ. ಇದುತಲೆ ಬುಡವನ್ನು ಸ್ವಚ್ಛವಾಗಿಡುತ್ತದೆ ಹಾಗೂ ಕೂದಲಿನ ಬುಡವನ್ನು ಬಲವಾಗಿಸಿ ಕೂದಲು ಸೊಂಪಾಗಿ ಬೆಳೆಯುವಂತೆ ಮಾಡುವುದು.

4. ಕೂದಲಿನ ಹೊಳಪು ಹೆಚ್ಚಿಸುವುದು

4. ಕೂದಲಿನ ಹೊಳಪು ಹೆಚ್ಚಿಸುವುದು

ನಿಮ್ಮದು ಒರಟು ಕೂದಲೇ? ಇದಕ್ಕೂ ಪರಿಹಾರ ಕಹಿ ಬೇವಿನ ಎಣ್ಣೆಯಲ್ಲಿದೆ. ಇದರಲ್ಲಿರುವ ಅವಶ್ಯಕವಾದ ಕೊಬ್ಬಿನ ಆಮ್ಲ ಹಾಗೂ ಆ್ಯಂಟಿಆಕ್ಸಿಡೆಂಟ್‌ ಕೂದಲಿಗೆ ಹಾನಿಯುಂಟಾಗುವುದನ್ನು ತಡೆಗಟ್ಟುತ್ತದೆ.

ಬಳಸುವುದು ಹೇಗೆ?

ಕಹಿ ಬೇವಿನ ಎಣ್ಣೆ ಹಚ್ಚಿ, ನಂತರ ನೀವು ತಲೆ ಸ್ನಾನ ಮಾಡುವ ನೀರಿಗೆ ಕಹಿ ಬೇವಿನ ಎಲೆ ಹಾಕಿ ಕುದಿಸಿ ಅದರಿಂದ ತಲೆ ತೊಳೆಯಿರಿ. ಈ ರೀತಿ ಮಾಡುವುದರಿಂದ ಕೂದಲಿನ ಹೊಳಪು ಹೆಚ್ಚುವುದು.

 5. ಕಂಡೀಷನರ್‌ ಆಗಿಯೂ ಬಳಸಬಹುದು

5. ಕಂಡೀಷನರ್‌ ಆಗಿಯೂ ಬಳಸಬಹುದು

ನೀವು ಕೂದಲಿಗೆ ನೈಸರ್ಗಿಕವಾದ ಕಂಡೀಷನರ್ ಬಳಸಲು ಇಚ್ಛೆ ಪಡುವುದಾದರೆ ಕಹಿಬೇವಿನ ಎಣ್ಣೆಯನ್ನು ಈ ರೀತಿ ಬಳಸಬಹುದು ನೋಡಿ

ಮೊದಲಿಗೆ ಎಣ್ಣೆಯನ್ನು ಬುಡಕ್ಕೆ ಹಚ್ಚಿ ಟವಲ್‌ ಅನ್ನು ಬಿಸಿ ನೀರಿನಲ್ಲಿ ಅದ್ದಿ ತಲೆಗೆ ಸುತ್ತಿ. ಹೀಗೆ ಮಡಿದರೆ ಎಣ್ಣೆಯನ್ನು ಕೂದಲಿನ ಬುಡ ಚೆನ್ನಾಗಿ ಹೀರಿಕೊಳ್ಳುತ್ತದೆ. ಇದರಿಂದ ಕೂದಲು ಆಕರ್ಷಕವಾಗಿರುತ್ತದೆ.

English summary

Incredible Benefits Of Neem For Hair

Neem can be used in various forms to benefit your hair and keep the hair ailments at bay.
X
Desktop Bottom Promotion