For Quick Alerts
ALLOW NOTIFICATIONS  
For Daily Alerts

ಸುಂದರವಾಗಿ ಕಾಣಲು ಗುಂಗುರು ಕೂದಲ ಆರೈಕೆ ಹೇಗೆ?

|

ಚಲನಚಿತ್ರ ನಟಿಯರಾದ ನಿತ್ಯ ಮೆಮನ್, ಕಂಗನಾ ರನೌತ್, ಅವಿಕಾ ಗೋರ್ ಮೊದಲಾದವರ ಸುಂದರವಾದ ಗುಂಗುರು ಕೂದಲನ್ನು ಕಂಡರೆ ಯಾರಿಗಾದರೂ ಒಮ್ಮೆ ನಮಗೂ ಇಂಥ ಕೂದಲಿದ್ದರೆ ಎಷ್ಟು ಚೆನ್ನ ಎಂದು ಅನ್ನಿಸುವುದು ಸಹಜ. ಆದರೆ ನಿಜವಾಗಿ ಗುಂಗುರು ಕೂದಲನ್ನು ಹೊಂದಿರುವ ಸಾಮಾನ್ಯ ಹುಡುಗಿಯರು ತಮ್ಮ ಕೂದಲನ್ನು ಇತರರಂತೆ ಸುಲಭವಾಗಿ ನಿರ್ವಹಿಸಲು ಸಾಧ್ಯವಿಲ್ಲ ಎಂಬುದಾಗಿ ನೊಂದುಕೊಳ್ಳುತ್ತಾರೆ.

How To Wash Curly Hair To Keep Them Beautiful And Bouncy

ಗುಂಗುರು ಕೂದಲು, ಒಂದು ವರವೂ ಹೌದು, ಶಾಪವೂ ಹೌದು. ಸುಂದರವಾದ ಗುಂಗುರು ಕೂದಲು, ವಿನ್ಯಾಸ, ಪರಿಮಾಣ ಮತ್ತು ಕೂದಲು ಹಾರಾಡುವ ರೀತಿ ನಮ್ಮನ್ನು ಪ್ರಲೋಭಿಸುತ್ತದೆ, ಆದರೆ ಇದು ನಿರ್ವಹಿಸಲು ಅತ್ಯಂತ ಕಷ್ಟಕರವಾದ ಕೂದಲಿನ ಪ್ರಕಾರವಾಗಿದೆ. ನೀವು ಎಷ್ಟೇ ಪ್ರಯತ್ನಿಸಿದರೂ ಅದನ್ನು ನಿರ್ವಹಿಸುವುದು ಅಷ್ಟು ಸುಲಭವಲ್ಲ.

ಗುಂಗುರು ಕೂದಲು ಒಡೆಯುವಿಕೆ, ಸಿಕ್ಕಾಗುವುದು, ಕೂದಲಿನ ತುದಿ ಒಡೆಯುವುದು ಈ ಪರಿಣಾಮಗಳಿಗೆ ಒಳಗಾಗುತ್ತದೆ….. … ನೀವು ಗುಂಗುರು ಕೂದಲನ್ನು ಹೊಂದಿದ್ದರೆ, ಸಾಮಾನ್ಯ ರೀತಿಯಲ್ಲಿ ಕೂದಲು ತೊಳೆದರೂ ಅದನ್ನು ನಿರ್ವಹಿಸುವುದು ಕಷ್ಟ. ಅದನ್ನು ತಪ್ಪಾದ ರೀತಿಯಲ್ಲಿ ಮಾಡಿ ನಿಮ್ಮ ಕೂದಲನ್ನು ನೀವು ನಾಶಪಡಿಸಿಕೊಳ್ಳುತ್ತೀರಿ. ಈ ರೀತಿ ಮಾಡುವುದನ್ನು ತಪ್ಪಿಸಿ. ಮತ್ತು ನಿಮ್ಮ ಕಾಳಜಿಯ ಕೊರತೆಯಿಂದ ನಿಮ್ಮ ಕೂದಲು ಹಾಳಾಗುತ್ತದೆ ಎಂಬುದನ್ನು ಮರೆಯದಿರಿ.

ಇಷ್ಟೇಲ್ಲಾ ಆದರೂ ನೀವು ನಿಮ್ಮ ಗುಂಗರು ಕೂದಲಿನಿಂದ ದೂರ ಉಳಿಯಲು ಸಾಧ್ಯವಿಲ್ಲ. ಹಾಗಾಗಿ ನೀವು ನಿಮ್ಮ ಕೂದಲನ್ನು ಇನ್ನಷ್ಟು ಸುಂದರವಾಗಿ, ಆಕರ್ಷಕವಾಗಿ ಕಾಣುವಂತೆ ಮಾಡಲು ಏಕೆ ಕಲಿಯಬಾರದು? ಇವತ್ತು ನಿಮ್ಮ ಗುಂಗುರು ಕೂದಲನ್ನು ಹೇಗೆ ತೊಳೆಯುವುದು ಮತ್ತು ಎಷ್ಟು ಬಾರಿ ಇದನ್ನು ಪುನರ್ರಾವರ್ತಿಸಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ.

ಗುಂಗುರು ಕೂದಲನ್ನು ಹೇಗೆ ತೊಳೆಯುವುದು?

ಗುಂಗುರು ಕೂದಲನ್ನು ಹೇಗೆ ತೊಳೆಯುವುದು?

ನಿಮ್ಮ ಸುರುಳಿ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ಬಯಸಿದರೆ, ನಿಮ್ಮ ಮೊದಲ ಹೆಜ್ಜೆ, ಕೂದಲನ್ನು ಸರಿಯಾದ ರೀತಿಯಲ್ಲಿ ತೊಳೆಯುವುದು. ಇದಕ್ಕಾಗಿ ನೀವು ಸರಿಯಾದ ಉತ್ಪನ್ನಗಳನ್ನು (ಸಲ್ಫೇಟ್ ಮುಕ್ತ ಶುದ್ಧೀಕರಣ ಶಾಂಪೂ) ಬಳಸಬೇಕಾಗುತ್ತದೆ ಜೊತೆಗೆ ನೀವು ಆತುರದಲ್ಲಿ ಈ ಕೆಲಸವನ್ನು ಮಾಡಲು ಸಾಧ್ಯವಿಲ್ಲ.

ತೊಳೆಯುವ ಮೊದಲು ನಿಮ್ಮ ಕೂದಲಲ್ಲಿನ ಸಿಕ್ಕನ್ನು ಬೇರ್ಪಡಿಸುವ ಮೂಲಕ ಪ್ರಾರಂಭಿಸಿ. ಅದನ್ನು ಮಾಡಲು ಡಿಟ್ಯಾಂಗ್ಲರ್ ಬ್ರಷ್ ಬಳಸಿ. ನಿಮ್ಮ ಕೂದಲನ್ನು ವಿಭಾಗಿಸಿ ಮತ್ತು ಯಾವುದೇ ಗಂಟುಗಳು ಮತ್ತು ಗೋಜಲುಗಳೂ ಇರದಂತೆ ಕೂದಲನ್ನು ಬಾಚಿಕೊಳ್ಳಿ.

ನೆತ್ತಿ ಶುದ್ಧಿ

ನೆತ್ತಿ ಶುದ್ಧಿ

ಆನಂತರದಲ್ಲಿ, ನೆತ್ತಿಯನ್ನು ಶುದ್ಧೀಕರಿಸುವುದು ಪ್ರಮುಖವಾದ ಹಂತ. ಏಕೆಂದರೆ ಅಲ್ಲಿಯೇ ನೀವು ಹಚ್ಚಿದ ತೈಲ ಮತ್ತು ಕಲ್ಮಶಗಳೂ ಸೇರಿಕೊಂಡಿರುವುದು. ನಿಮ್ಮ ಕೂದಲನ್ನು ಹೆಚ್ಚು ಎಳೆಯಬೇಡಿ, ಮತ್ತು ಕೈಗಳಿಂದ ಹೆಚ್ಚು ಬಲವನ್ನು ಹಾಕಬೇಡಿ.

ನೀವು ನೆತ್ತಿಯನ್ನು ಶುದ್ಧೀಕರಿಸಿದ ನಂತರ, ನಿಮ್ಮ ಕೂದಲನ್ನು ವಿಭಾಗಿಸಿ ಮತ್ತು ಇನ್ನು ಹೆಚ್ಚು ಅಂದರೆ ಕೂದಲಿನ ಸಂಪೂರ್ಣ ಸ್ವಚ್ಛತೆಗಾಗಿ ಕೂದಲಿನ ಕೆಳಗಿನಿಂದ ಮೇಲಕ್ಕೆ ಪ್ರತಿಯೊಂದು ವಿಭಾಗಕ್ಕೂ ತಾಕುವಂತೆ ಶಾಂಪೂವನ್ನು ಹಚ್ಚಿ.

ಕಂಡಿಷನರ್

ಕಂಡಿಷನರ್

ನೀವು ಶಾಂಪೂ ಮಾಡಿದ ನಂತರ, ಹೆಚ್ಚುವರಿ ನೀರನ್ನು ಹಿಸುಕಿ ತೆಗೆಯಿರಿ ನಂತರ ನಿಮ್ಮ ಕೂದಲಿಗೆ ಹೆಚ್ಚಿನ ಪ್ರಮಾಣದಲ್ಲಿ ಕಂಡಿಷನರ್ ಅನ್ನು ಅನ್ವಯಿಸಿ. ಕಂಡಿಷನರ್ ಅನ್ನು ನೆತ್ತಿಗೆ ಹಚ್ಚಬೇಡಿ. ಅದನ್ನು ಕೂದಲಿಗೆ ಮಾತ್ರ ಅನ್ವಯಿಸಿ. ಹೀಗೆ ಮಾಡುವುದರಿಂದ ಕೂದಲಿನ ಬುಡಕ್ಕೆ ಹಾನಿ ಉಂಟಾಗುವುದನ್ನು ತಪ್ಪಿಸಬಹುದು. ಸುಮಾರು ಒಂದು ನಿಮಿಷದ ನಂತರ, ಕಂಡಿಷನರ್ ಅನ್ನು ಕೂದಲಿನಲ್ಲಿ ಉಳಿಯದಂತೆ ಸ್ವಚ್ಛಗೊಳಿಸಿ ನಂತರ ಹಳೆಯ ಟೀ ಶರ್ಟ್ ಅಥವಾ ಸ್ವಚ್ಛವಾದ ಬಟ್ಟೆ ಬಳಸಿ ಮ್ಮ ಕೂದಲನ್ನು ಒಣಗಿಸಿ. ಹೀಗೆ ಮಾಡುವುದರಿಂದ ನಿಮ್ಮ ಕೂದಲು ಮೊದಲಿಗಿಂತ ಸುಂದರವಾಗಿರುವುದನ್ನು ನೀವೇ ಗಮನಿಸಿ.

ಸುರುಳಿಯಾಕಾರದ ಕೂದಲನ್ನು ಎಷ್ಟು ಬಾರಿ ತೊಳೆಯಬೇಕು?

ಸುರುಳಿಯಾಕಾರದ ಕೂದಲನ್ನು ಎಷ್ಟು ಬಾರಿ ತೊಳೆಯಬೇಕು?

ಗುಂಗುರು ಕೂದಲನ್ನು ಎಷ್ಟು ಬಾರಿ ತೊಳೆಯಬೇಕು ಎಂದು ನಾವು ತಿಳಿಯುವ ಮೊದಲು, ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳೋಣ. ನಮ್ಮ ನೆತ್ತಿಯು ಸೆಬಮ್ ಎಂಬ ನೈಸರ್ಗಿಕ ಎಣ್ಣೆಯನ್ನು ಉತ್ಪಾದಿಸುತ್ತದೆ, ಇದು ನಮ್ಮ ನೆತ್ತಿಯನ್ನು ರಕ್ಷಿಸಲು ಮತ್ತು ತೇವಗೊಳಿಸಲು ಸಹಾಯಮಾಡುತ್ತದೆ. ನೀವು ಗುಂಗುರು ಕೂದಲಿನ ದಪ್ಪವಾದ ರಚನೆಯನ್ನು ಹೊಂದಿದ್ದರೆ, ನೇರವಾದ ಕೂದಲಿಗೆ ಉಂಟಾಗುವ ಹಾಗೆ ಗುಂಗುರು ಕೂದಲಿಗೆ ಈ ಎಣ್ಣೆಯಿಂದ ಯಾವುದೇ ಸಮಸ್ಯೆಯಾಗುವುದಿಲ್ಲ (ನೇರವಾದ ಕೂದಲಿನಲ್ಲಿ ಬೇಗ ಜಿಡ್ಡುಗಟ್ಟುತ್ತದೆ)

ಪರಿಣಾಮವಾಗಿ ಗುಂಗುರು ಕೂದಲನ್ನು ಆಗಾಗ ತೊಳೆಯುವ ಅಗತ್ಯವಿಲ್ಲ ಎಂದು ನೀವು ಭಾವಿಸಬಹುದು. ಆದರೆ, ಎಣ್ಣೆ ಹರಡುವುದಿಲ್ಲವಾದ್ದರಿಂದ, ಇದು ಕೊಳೆ ಮತ್ತು ಕಲ್ಮಶಗಳ ಜೊತೆಗೆ ನಿಮ್ಮ ನೆತ್ತಿಯಲ್ಲಿ ಉಳಿದುಕೊಳ್ಳುತ್ತದೆ ಇದರಿಂದಾಗಿ ನೆತ್ತಿಯಲ್ಲಿ ತುರಿಕೆ ಉಂಟಾಗಬಹುದು ಮತ್ತು ತಲೆಹೊಟ್ಟಿನಂಥ ಕೂದಲಿನ ಸಮಸ್ಯೆಗಳಿಗೆ ಕಾರಣವಾಗಬಹುದು.

ಕೂದಲನ್ನು ಅನುಸರಿಸಿ ಆರೈಕೆ

ಕೂದಲನ್ನು ಅನುಸರಿಸಿ ಆರೈಕೆ

ಗುಂಗುರು ಕೂದಲನ್ನು ಎಷ್ಟು ಬಾರಿ ತೊಳೆಯಬೇಕು ಎಂಬ ಪ್ರಶ್ನೆ ಬಂದಾಗ ನಮ್ಮ ಸಲಹೆ, ನೀವು ದಪ್ಪವಾದ ಗುಂಗುರು ಕೂದಲನ್ನು ಹೊಂದಿದ್ದರೆ ವಾರಕ್ಕೊಮ್ಮೆ ಕೂದಲನ್ನು ತೊಳೆಯುವುದು ಉತ್ತಮ. ಆದರೆ ನಿಮ್ಮ ಕೂದಲು ಕೊಳಕು ಮತ್ತು ಮಾಲಿನ್ಯಕ್ಕೆ ಒಡ್ಡಿಕೊಂಡರೆ ನೀವು ವಾರಕ್ಕೆ ಎರಡು ಬಾರಿ ಕೂದಲನ್ನು ತೊಳೆಯುವುದು ಒಳ್ಳೆಯದು ಅಥವಾ ನಿಮಗೆ ತೊಳೆಯಬೇಕೆಂದು ಅನ್ನಿಸಿದರೆ ಅಥವಾ ಅಗತ್ಯವಿದ್ದರೆ ತೊಳೆಯಬಹುದು.

ನೀವು ತುಂಬಾ ತೆಳ್ಳಗಿನ ಗುಂಗುರು ಕೂದಲನ್ನು ಹೊಂದಿದ್ದರೆ, ದಿನ ಬಿಟ್ಟು ದಿನಕ್ಕೆ ನಿಮ್ಮ ಕೂದಲನ್ನು ತೊಳೆಯಿರಿ ಏಕೆಂದರೆ ಇಂತಹ ಕೂದಲು ಆಗಾಗ್ಗೆ ಕೊಳಕು ಆಗುತ್ತದೆ ಮತ್ತು ಎಣ್ಣೆಯನ್ನು ತ್ವರಿತವಾಗಿ ಪಸರಿಸುತ್ತದೆ, ಕೂದಲು ಜಿಡ್ದುಗಟ್ಟುತ್ತದೆ.

ನೀವು ಮಧ್ಯಮ ದಪ್ಪವಾದ ಗುಂಗುರು ಕೂದಲನ್ನು ಹೊಂದಿದ್ದರೆ, ವಾರದಲ್ಲಿ 2-3 ಬಾರಿ ನಿಮ್ಮ ಕೂದಲನ್ನು ತೊಳೆಯಿರಿ. ಇದು ಕೂದಲು ಸ್ವಚ್ಛವಾಗಿರಲು ಸಹಾಯಕವಾಗುತ್ತದೆ.

English summary

How To Wash Curly Hair To Keep Them Beautiful And Bouncy

Here we are discussing about How To Wash Curly Hair To Keep Them Beautiful And Bouncy. why not learn how to manage your tresses to keep it bold, bouncy and beautiful. Today, we will learn about how to wash curly hair and how often to do it. Read more.
Story first published: Monday, April 6, 2020, 15:39 [IST]
X
Desktop Bottom Promotion