For Quick Alerts
ALLOW NOTIFICATIONS  
For Daily Alerts

ತಲೆ ಹೊಟ್ಟು ನಿವಾರಣೆಗೆ ಕಹಿಬೇವಿನ ಎಲೆ ಹೇಗೆ ಬಳಸಬೇಕು?

|

ತಲೆಹೊಟ್ಟು ಸಾಮಾನ್ಯವಾಗಿ ಎಲ್ಲರಿಗೂ ಕಾಡುವ ಸಮಸ್ಯೆಯಾಗಿದೆ. ತಲೆಹೊಟ್ಟು ಬಂದರೆ ತುರಿಕೆ, ತಲೆ ಬುಡ ಶುಷ್ಕವಾಗುವುದು . ಕೂದಲು ಉದುರುವುದು, ಮೈ ಮೇಲೆ, ಹಣೆ ಮೇಲೆ ಬಿದ್ದರೆ ಮೊಡವೆ ಏಳುವುದು ಮುಂತಾದ ಸಮಸ್ಯೆ ಕಂಡು ಬರುವುದು.

How To Use Neem Leaves For Dandruff

ತಲೆಗೆ ತುಂಬಾ ಎಣ್ಣೆ ಹಚ್ಚಿ ತೊಳೆಯದೇ ಹಾಗೇ ತುಂಬಾ ಹೊತ್ತು ಬಿಡುವುದು, ರಾಸಾಯನಿಕ ಅಧಿಕವಿರುವ ಶ್ಯಾಂಪೂ ಬಳಸುವುದು, ತಲೆಗೆ ಸರಿಯಾಗಿ ಎಣ್ಣೆ ಮಸಾಜ್‌ ಮಾಡದೇ ಇರುವುದು, ತಲೆ ಕೂದಲು ಒಣಗಿಸದೇ ಇರುವುದು, ದೂಳು ಇರುವ ಕಡೆ ಹೆಚ್ಚಾಗಿ ಓಡಾಡುವುದು ಇವೆಲ್ಲಾ ತಲೆ ಹೊಟ್ಟು ಬರಲು ಪ್ರಮುಖ ಕಾರಣಗಳಾಗಿವೆ.

ತಲೆಹೊಟ್ಟು ಸಮಸ್ಯೆಗೆ ಕಹಿಬೇವಿನ ಎಲೆ ಹಚ್ಚುವುದು ಒಳ್ಳೆಯದೆಂದು ಎಕ್ಸ್‌ಪರ್ಟ್ ಸಲಹೆ ನೀಡುತ್ತಾರೆ. ಇನ್ನು ತಲೆ ಕೂದಲಿನ ಸಮಸ್ಯೆಗೆ ಕಹಿಬೇವಿನ ಎಲೆ ಬಳಸುವುದು ಹಿಂದಿನ ಕಾಲದಿಂದಲೂ ಇದೆ.

ಕಹಿಬೇವು

ಕಹಿಬೇವು

ಕಹಿಬೇವು ತಲೆಗೆ ಹಚ್ಚುವುದರಿಂದ ತಲೆ ಬುಡದಲ್ಲಿ ಶಿಲೀಂಧ್ರ, ಬ್ಯಾಕ್ಟಿರಿಯಾ ಸಮಸ್ಯೆ ಇರುವುದಿಲ್ಲ. ಹೇನು ಕೂಡ ಇಲ್ಲವಾಗುವುದು ಅಲ್ಲದೆ ತಲೆ ಬುಡ ಸ್ವಚ್ಛವಾಗಿರುತ್ತದೆ, ಕೂದಲು ಮೃದುವಾಗುವುದು, ಕೂದಲು ಆರೋಗ್ಯಕರವಾಗಿ ಬೆಳೆಯಲು ಕೂಡ ಸಹಕಾರಿ.

ಇಲ್ಲಿ ನಾವು ತಲೆ ಹೊಟ್ಟು ಬಂದಾಗ ಕಹಿಬೇವು ಹೇಗೆ ಬಳಸಿದರೆ ಈ ಸಮಸ್ಯೆ ಬೇಗ ಕಡಿಮೆಯಾಗುತ್ತದೆ ಎಂಬ ಟಿಪ್ಸ್ ನೀಡಿದ್ದೇವೆ ನೋಡಿ:

 1. ಕಹಿಬೇವಿನ ಎಲೆಯ ನೀರಿನ ಸ್ನಾನ

1. ಕಹಿಬೇವಿನ ಎಲೆಯ ನೀರಿನ ಸ್ನಾನ

ನಿಮ್ಮ ಕೂದಲಿನ ಆರೈಕೆಗೆ ತಲೆಸ್ನಾನ ಮಾಡುವಾಗ ಕಹಿಬೇವು ಹಾಕಿ ಬಳಸಿ ನೋಡಿ ತುಂಬಾ ವ್ಯತ್ಯಾಸ ಗೊತ್ತಾಗುವುದು.

ನೀವು ಒಂದು ಪಾತ್ರೆಗೆ ನೀರು ಹಾಕಿ ಕುದಿಸಿ, ನೀರು ಕುದಿ ಬರುವಾಗ ಕಹಿಬೇವಿನ ಎಲೆ ಹಾಕಿ ತುಂಬಾ ಚೆನ್ನಾಗಿ ಕುದಿಸಿ, ನಂತರ ನೀರಿನ ಬಣ್ಣ ಬದಲಾದಾಗ ಆರಲು ಬಿಡಿ. ಆ ನೀರನ್ನು ಸೋಸಿ ಅಥವಾ ಕಹಿ ಬೇವಿನ ಎಲೆ ತೆಗೆದು ಬಿಡಿ, ಅದನ್ನು ತಲೆಗೆ ಹಚ್ಚಿ, ಸ್ವಲ್ಪ ಹೊತ್ತು ಬಿಟ್ಟು ತಲೆ ತೊಳೆಯಿರಿ.

ತಲೆಸ್ನಾನ ಹೀಗೆ ಮಾಡುತ್ತಿದ್ದರೆ ತಲೆ ಹೊಟ್ಟಿನ ಸಮಸ್ಯೆಯೇ ಬರುವುದಿಲ್ಲ

 2. ಕಹಿಬೇವು ಹಾಗೂ ಜೇನು

2. ಕಹಿಬೇವು ಹಾಗೂ ಜೇನು

ಕಹಿಬೇವಿನಂತೆ ಜೇನು ಕೂಡ ಬ್ಯಾಕ್ಟಿರಿಯಾ, ಶಿಲೀಂಧ್ರಗಳ ವಿರುದ್ಧ ಹೋರಾಡುತ್ತದೆ. ಈ ಎರಡು ವಸ್ತುಗಳನ್ನು ಮಿಶ್ರ ಮಾಡಿ ಹಚ್ಚುವುದರಿಂದ ಕೂಡ ಉತ್ತಮ ಪ್ರಯೋಜನ ಪಡೆಯಬಹುದು.

ಒಂದು ಹಿಡಿಯಷ್ಟು ಕಹಿಬೇವು ತೆಗೆದುಕೊಳ್ಳಿ ಅದನ್ನು ಪೇಸ್ಟ್ ಮಾಡಿ, ಅದರ ಜೊತೆ ಜೇನು ಬೆರೆಸಿ ತಲೆಗೆ ಹಚ್ಚಿ 15-20 ನಿಮಿಷ ಬಿಟ್ಟು ತಲೆ ತೊಳೆಯಿರಿ.

3. ಕಹಿಬೇವು ಮತ್ತು ಮೊಸರು

3. ಕಹಿಬೇವು ಮತ್ತು ಮೊಸರು

ಮೊಸರು ಕೂದಲಿಗೆ ಅತ್ಯುತ್ತಮವಾದ ಕಂಡಿಷನರ್ ಅದರ ಜೊತೆಗೆ ಕಹಿಬೇವು ಸೇರಿಸಿದರೆ ಕೂದಲಿನ ಸಂಪೂರ್ಣ ಆರೈಕೆ ಮಾಡಿದಂತಾಗುವುದು. ಅದಕ್ಕಾಗಿ ನೀವು ಮಾಡಬೇಕಾಗಿರುವುದು

  • ಕಹಿಬೇವಿನ ಎಲೆಯನ್ನು ಪೇಸ್ಟ್ ಮಾಡಿ, ಅದಕ್ಕೆ ಮೊಸರು ಹಾಕಿ ಬೆರೆಸಿ, ಈ ಮಿಶ್ರಣ ತಲೆಗೆ ಹಚ್ಚಿ 10-15 ನಿಮಿಷ ಬಿಟ್ಟು ತಲೆ ತೊಳೆಯಿರಿ.
  • ಕೂದಲು ತುಂಬಾ ಒರಟಾಗಿದ್ದರೆ ಈ ಮಿಶ್ರಣ ಹಚ್ಚುವುದರಿಂದ ಕೂದಲು ಕೂಡ ತುಂಬಾ ಮೃದುವಾಗುವುದು.

    ಇದನ್ನು ವಾರದಲ್ಲಿ ಎರಡು ಬಾರಿ ಮಾಡಿ.

    4. ಕಹಿಬೇವಿನ ಎಲೆ, ತೆಂಗಿನೆಣ್ಣೆ, ಹರಳೆಣ್ಣೆ

    4. ಕಹಿಬೇವಿನ ಎಲೆ, ತೆಂಗಿನೆಣ್ಣೆ, ಹರಳೆಣ್ಣೆ

    ಕೂದಲು ತುಂಬಾ ತೆಳ್ಳಗಿದ್ದರೆ ಕೂದಲಿನ ಬುಡ ತುಂಬಾ ಗಟ್ಟಿಯಾಗುವುದು. ಹರಳೆಣ್ಣೆ ಕೂದಲು ಕೂಡ ಸೊಂಪಾಗಿ ಬೆಳೆಯುವುದು.

    ಈ ಮಿಶ್ರಣಕ್ಕಾಗಿ ನೀವು ಮಾಡಬೇಕಾಗಿರುವುದು

    • ತೆಂಗಿನೆಣ್ಣೆಯನ್ನು ಕುದಿಸಿ ಅದಕ್ಕೆ ಕಹಿ ಬೇವಿನ ಎಲೆ ಹಾಕಿ ಕುಸಿದಿ, ಅದನ್ನು ತಣ್ಣಗಾಗಲು ಬಿಡಿ.
    • ನಂತರ ಆ ಎಣ್ಣೆ ಸೋಸಿ ಅದಕ್ಕೆ ಹರಳೆಣ್ಣೆ ಹಾಗೂ ನಿಂಬೆರಸ ಮಿಶ್ರ ಮಾಡಿ.
    • ಈಗ ಈ ಮಿಶ್ರಣವನ್ನು ತಲೆಗೆ ಹಚ್ಚಿ ಒಂದು ಗಮಟೆಯ ಬಳಿಕ ತಲೆ ತೊಳೆದರೆ ತಲೆಹೊಟ್ಟು ಸಮಸ್ಯೆಯೂ ಇರಲ್ಲ, ಕೂದಲಿನ ಬುಡ ಕೂಡ ಬಲವಾಗುತ್ತದೆ.
English summary

How To Use Neem Leaves For Dandruff

Experts suggest it is best to go natural when it comes to fighting dandruff. , today we have for some amazing ways you can use neem for dandruff. Here we go.
X
Desktop Bottom Promotion