For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಕೂದಲು ದುರ್ವಾಸನೆ ಬೀರುವುದನ್ನು ತಡೆಗಟ್ಟುವುದು ಹೇಗೆ?

|

ಅಂಡರ್‌ಆರ್ಮ್, ಪಾದ ಸೇರಿದಂತೆ ದೇಹದ ವಿವಿಧ ಭಾಗಗಳು ಅಹಿತಕರ ವಾಸನೆಯನ್ನು ಉಂಟುಮಾಡುತ್ತವೆ. ಆದರೆ, ನೆತ್ತಿಯಲ್ಲಿ ಉಂಟಾಗುವ ವಾಸನೆ ಇವುಗಳಿಗಿಂತ ಭಿನ್ನ. ಜೀವನಶೈಲಿ, ಮಾಲಿನ್ಯ ಸೇರಿದಂತೆ ಹಲವಾರು ಅಂಶಗಳು ನೆತ್ತಿಯಲ್ಲು ವಾಸನೆ ಹುಟ್ಟಲು ಕಾರಣವಾಗುತ್ತವೆ. ಅದರಲ್ಲೂ ಮಳೆಗಾಲದಲ್ಲಿ ತೇವಾಂಶದ ಹೆಚ್ಚಳ ಹಾಗೂ ಶಾಖದ ಕೊರತೆಯಿಂದಾಗಿ ಈ ಸಮಸ್ಯೆ ಹೆಚ್ಚಾಗುತ್ತದೆ.ಹಾಗಾದರೆ, ಬನ್ನಿ ಈ ನೆತ್ತಿಯಲ್ಲಿ ವಾಸನೆ ಹುಟ್ಟಿಕೊಳ್ಳಲು ಕಾರಣ ಹಾಗೂ ಅದನ್ನು ಪರಿಹರಿಸುವ ಮಾರ್ಗಗಳನ್ನು ತಿಳಿದುಕೊಳ್ಳೋಣ.

ಮಳೆಗಾಲದಲ್ಲಿ ನೆತ್ತಿಯ ದುರ್ವಾಸನೆ ಹೆಚ್ಚಲು ಕಾರಣಗಳು:

ಒದ್ದೆಯಾದ ನೆತ್ತಿ:

ಒದ್ದೆಯಾದ ನೆತ್ತಿ:

ಹೌದು, ಮಳೆಗಾಲದಲ್ಲಿ ನೆತ್ತಿಯ ವಾಸನೆ ಸಾಮಾನ್ಯವಾಗಿ ಹೆಚ್ಚಾಗುತ್ತದೆ. ಏಕೆಂದರೆ, ಮಳೆಗಾಲದಲ್ಲಿ ಕೂದಲು ಹಾಗೂ ನೆತ್ತಿ ತೇವಾಂಶದಿಂದ ಕೂಡಿರುತ್ತದೆ. ಇದರಿಂದ ವಾಸನೆ ಹುಟ್ಟುವುದು. ಆದ್ದರಿಂದ ಮಳೆಯಲ್ಲಿ ಒದ್ದೆಯಾದ ಬಳಿಕ ನೆತ್ತಿಯನ್ನು ಸರಿಯಾಗಿ ಒಣಗಿಸಲು ಮರೆಯದಿರಿ.

ಶಿಲೀಂದ್ರಗಳ ಸೋಂಕು:

ಶಿಲೀಂದ್ರಗಳ ಸೋಂಕು:

ಮಳೆಗಾಲದಲ್ಲಿ ಶಿಲೀಂದ್ರ ಸೋಂಕಿನ ಸಮಸ್ಯೆ ಹೆಚ್ಚುವುದು. ನೆತ್ತಿಯಲ್ಲಿ ವಾಸನೆಯು ಚರ್ಮದ ಮೇಲೆ ವಾಸಿಸುವ ಶಿಲೀಂಧ್ರದ ಪರಿಣಾಮವಾಗಿರಬಹುದು. ಈ ಶಿಲೀಂಧ್ರವು ಫೋಲಿಕ್ಯುಲೈಟಿಸ್ , ತಲೆಹೊಟ್ಟು ಮತ್ತು ಎಸ್ಜಿಮಾದಂತಹ ಉರಿಯೂತದ ಪ್ರತಿಕ್ರಿಯೆಗಳಿಂದ ಹೆಚ್ಚುವುದು.

ಕಡಿಮೆ ಅಥವಾ ಅತಿಯಾಗಿ ತಲೆ ತೊಳೆಯುವುದು:

ಕಡಿಮೆ ಅಥವಾ ಅತಿಯಾಗಿ ತಲೆ ತೊಳೆಯುವುದು:

ಮಳೆಗಾಲದಲ್ಲಿ ಕೆಲವರು ಕಡಿಮೆ ತೊಳೆಯುತ್ತಾರೆ, ಇನ್ನು ಕೆಲವರು ಪ್ರತಿದಿನ ತೊಳೆಯುತ್ತಾರೆ. ಇದರಿಂದಲೂ ಕೂದಲು ದುರ್ವಾಸನೆ ಬೀರುವುದು. ಕೂದಲು ಅಥವಾ ನೆತ್ತಿಯನ್ನು ಸರಿಯಾಗಿ ತೊಳೆಯದೇ ಇದ್ದಾಗ, ಅವು ನಿಮ್ಮ ನೆತ್ತಿಯ ಮೇಲೆ ತೈಲಗಳು ಅಥವಾ ಮೇದೋಗ್ರಂಥಿಗಳ ಸ್ರಾವವನ್ನು ಹಾಗೆಯೇ ಉಳಿದುಬಿಡುತ್ತದೆ. ಈ ಮೇದೋಗ್ರಂಥಿಗಳ ಸ್ರಾವವು ನಿಮ್ಮ ನೆತ್ತಿಯನ್ನು ಮತ್ತು ನಿಮ್ಮ ಕೂದಲನ್ನು ವಾಸನೆಯಿಂದ ಕೂಡಿರುವಂತೆ ಮಾಡುತ್ತದೆ. ಇನ್ನು ದಿನಾ ತಲೆತೊಳೆದು ಕೂದಲು ಒಣಗದೆ ನೆತ್ತಿಯಿಂದ ದುರ್ವಾಸನೆ ಬೀರುವುದು.

ಆಹಾರಕ್ರಮ:

ಆಹಾರಕ್ರಮ:

ನಿಮ್ಮ ಆಹಾರಕ್ರಮದಲ್ಲಿನ ಬದಲಾವಣೆಗಳು ದೇಹದ ವಾಸನೆಗೆ ಕಾರಣವಾಗಬಹುದು. ಉದಾಹರಣೆಗೆ, ನೀವು ಮಾಂಸಾಹಾರಿಗಳಾಗಿದ್ದರೆ, ಅದು ಕೂದಲು ಸೇರಿದಂತೆ ದೇಹದಲ್ಲಿ ವಿಭಿನ್ನ ವಾಸನೆ ಉಂಟುಮಾಡುತ್ತದೆ. ಕೂದಲನ್ನು ಎರಡು ದಿನಕ್ಕೊಮ್ಮೆ ಅಥವಾ ವಾರದಲ್ಲಿ 3 ಬಾರಿ ತೊಳೆದು ಒಣಗಿಸಿ.

ಹೇರ್‌ ಪ್ರಾಡೆಕ್ಟ್‌

ಹೇರ್‌ ಪ್ರಾಡೆಕ್ಟ್‌

ಕೆಲವು ಜನರು ಪರಿಮಳವನ್ನು ಆಧರಿಸಿ ಕೂದಲಿನ ಉತ್ಪನ್ನಗಳನ್ನು ಖರೀದಿಸುತ್ತಾರೆ, ಇನ್ನೂ ಕೆಲವರು ಫಲಿತಾಂಶಗಳ ಮೇಲೆ ಹೆಚ್ಚು ಗಮನಹರಿಸುತ್ತಾರೆ. ಆದಾಗ್ಯೂ, ಸಿಹಿ ಸುವಾಸನೆಯುಳ್ಳ ಉತ್ಪನ್ನಗಳು ಸಹ ನಿಮ್ಮ ನೆತ್ತಿಯ ಮೇಲೆ ತೈಲಗಳ ಸಂಗ್ರಹವನ್ನು ಉಂಟುಮಾಡಬಹುದು, ಅವುಗಳು ತೊಳೆಯದಿದ್ದರೆ, ಅದರ ಜೊತೆಗೆ ಮಳೆನೀರು ಕೂಡ ಬಿದ್ದಾಗ ನೆತ್ತಿಯ ವಾಸನೆಗೆ ಕಾರಣವಾಬಹುದು.

ಈ ಕಾರಣಗಳಿಂದಲೂ ಕೂದಲು ಕೆಟ್ಟ ವಾಸನೆ ಬೀರುವುದು

ಈ ಕಾರಣಗಳಿಂದಲೂ ಕೂದಲು ಕೆಟ್ಟ ವಾಸನೆ ಬೀರುವುದು

ಸೆಬೊರ್ಹೆಕ್ ಡರ್ಮಟೈಟಿಸ್:

ಇದೊಂದು ಸಾಮಾನ್ಯ ಚರ್ಮದ ಕಾಯಿಲೆಯಾಗಿದ್ದು, ನಮ್ಮ ದೇಹದಲ್ಲಿ ವಾಸಿಸುವ ನೈಸರ್ಗಿಕ ಯೀಸ್ಟ್‌ನ ಅತಿಯಾದ ಬೆಳವಣಿಗೆಯಿಂದ ಉಂಟಾಗುತ್ತದೆ. ಇದು ನೆತ್ತಿಯ ಮೇಲೆ ಶುಷ್ಕ, ಹಳದಿ, ಚಿಪ್ಪುಗಳುಳ್ಳ ತೇಪೆಗಳನ್ನು ಉಂಟುಮಾಡಿ, ಇದು ವಾಸನೆಗೆ ಕಾರಣವಾಗುತ್ತದೆ.

ಬೆಸಿಗೆಯಲ್ಲಿ ವಿಪರೀತ ಬೆವರುವಿಕೆ:

ವ್ಯಾಯಾಮ ಅಥವಾ ಇನ್ನಾವುದೇ ಬೆವರು ಸುರಿಸಿ ಕೆಲಸ ಮಾಡಿದ ನಂತರ ಸ್ನಾನ ಮಾಡದೇ ಇರುವ ವ್ಯಕ್ತಿಯಾಗಿದ್ದರೆ, ನಿಮ್ಮ ನೆತ್ತಿಯಲ್ಲಿ ವಾಸನೆ ಕಂಡುಬರುವುದು ಸಾಮಾನ್ಯ. ಏಕೆಂದರೆ, ಆ ಬೆವರು ನಿಮ್ಮ ನೆತ್ತಿಯ ಮೇಲೆ ಬ್ಯಾಕ್ಟೀರಿಯಾದೊಂದಿಗೆ ಬೆರೆತಾಗ, ಅಹಿತಕರ ವಾಸನೆ ಹುಟ್ಟಿಕೊಳ್ಳುತ್ತದೆ.

ಹಾರ್ಮೋನುಗಳ ಬದಲಾವಣೆ:

ಹಾರ್ಮೋನ್ ಬದಲಾವಣೆಗಳು ನಿಮ್ಮ ಕೂದಲು ಮತ್ತು ನೆತ್ತಿಯ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಅನೇಕ ಮಹಿಳೆಯರು ಮುಟ್ಟು ನಿಲ್ಲುವ ಸಮಯದಲ್ಲಿ ಕೂದಲು ತೆಳುವಾಗುವುದನ್ನು ಅಥವಾ ಕೂದಲು ಉದುರುವುದನ್ನು ಗಮನಿಸುತ್ತಾರೆ. ನಿಮ್ಮ ದೇಹವು ಹೆಚ್ಚಿನ ಪ್ರಮಾಣದಲ್ಲಿ ಆಂಡ್ರೊಜೆನ್ ಉತ್ಪಾದಿಸಿದರೆ, ಅದು ನಿಮ್ಮ ಚರ್ಮದ ಗ್ರಂಥಿಗಳಿಂದ ತೈಲದ ಅಧಿಕ ಉತ್ಪಾದನೆಗೆ ಕಾರಣವಾಗಬಹುದು. ಇದು ಕೂಡ ವಾಸನೆಗೆ ಕಾರಣವಾಗಬಹುದು.

ಮಾಲಿನ್ಯ:

ನಾವು ಮಾಲಿನ್ಯವನ್ನು ನಮ್ಮ ಶ್ವಾಸಕೋಶಗಳಿಗೆ ಹಾನಿಕಾರಕವೆಂದು ಯೋಚಿಸುತ್ತೇವೆ. ಆದರೆ ಮಾಲಿನ್ಯದ ಕಣಗಳು ನಿಮ್ಮ ಕೂದಲಿಗೆ ಅಂಟಿಕೊಳ್ಳುವುದರಿಂದ ನೆತ್ತಿ ಕೆಟ್ಟ ವಾಸನೆಯನ್ನು ಉಂಟುಮಾಡಬಹುದು.

ಸೋರಿಯಾಸಿಸ್:

ನೀವು ನೆತ್ತಿಯ ಸೋರಿಯಾಸಿಸ್ ಹೊಂದಿದ್ದರೂ ಕೂಡ, ನೆತ್ತಿಯಲ್ಲಿ ವಾಸನೆ ಹುಟ್ಟಿಕೊಳ್ಳುತ್ತದೆ. ಏಕೆಂದರೆ, ಸೋರಿಯಾಸಿಸ್ ಆದ ಜಾಗವನ್ನು ತೊಳೆಯದೇ ಇರುವುದರಿಂದ ಆ ಜಾಗದಲ್ಲಿ ತೈಲ ಮತ್ತು ಚರ್ಮದ ಕೋಶಗಳು ಸಂಗ್ರಹವಾಗಿ ವಾಸನೆಯ ಬೆಳವಣಿಗೆಗೆ ಕಾರಣವಾಗಬಹುದು.

ಕೂದಲ ದುರ್ವಾಸನೆ ತಡೆಗಟ್ಟಲು ಕೆಲ ಮನೆಮದ್ದುಗಳು:

ಕೂದಲ ದುರ್ವಾಸನೆ ತಡೆಗಟ್ಟಲು ಕೆಲ ಮನೆಮದ್ದುಗಳು:

ವೈದ್ಯರನ್ನು ಭೇಟಿ ಮಾಡುವ ಮೊದಲು ಮನೆಮದ್ದುಗಳೊಂದಿಗೆ ನಿಮ್ಮ ಸಮಸ್ಯೆಯನ್ನು ಪರಿಹರಿಸಲು ಬಯಸಿದರೆ, ಈ ಆಯ್ಕೆಗಳನ್ನು ಪರಿಗಣಿಸಿ:

ವಾಸನೆಯುಕ್ತ ನೆತ್ತಿಗಾಗಿ ಶಾಂಪೂ:

ತಲೆಹೊಟ್ಟು ಅಥವಾ ಸೆಬೊರ್ಹೆಕ್ ಡರ್ಮಟೈಟಿಸ್ ನಿಮ್ಮ ನೆತ್ತಿಯಿಂದ ಹೊರಹೊಮ್ಮುವ ವಾಸನೆಗೆ ಕಾರಣವಾಗಿದ್ದರೆ, ಈ ಉದ್ದೇಶಕ್ಕಾಗಿ ವಿಶೇಷವಾಗಿ ರೂಪಿಸಲಾದ ಶಾಂಪೂ ಬಳಸಿ ನಿಮ್ಮ ಕೂದಲು ಮತ್ತು ನೆತ್ತಿಯನ್ನು ತೊಳೆಯುವುದು ಯೋಗ್ಯವಾಗಿದೆ. ಅಮೇರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿ (AAD) ಕೆಳಗಿನ ಪದಾರ್ಥಗಳಲ್ಲಿ ಒಂದನ್ನು ಹೊಂದಿರುವ ಉತ್ಪನ್ನವನ್ನು ಬಳಸಲು ಸೂಚಿಸುತ್ತದೆ :

ಚಾರ್ಕೋಲ್

ಕೆಟೋಕೊನಜೋಲ್

ಸ್ಯಾಲಿಸಿಲಿಕ್ ಆಮ್ಲ ಮತ್ತು ಸಲ್ಫರ್

ಸೆಲೆನಿಯಮ್ ಸಲ್ಫೈಡ್

ಸತು ಪಿರಿಥಿಯೋನ್

ತೈಲಗಳ ಬಳಕೆ:

ತೈಲಗಳ ಬಳಕೆ:

ನೀವು ಕೆಲವು ಸಾರಭೂತ ತೈಲಗಳನ್ನು ಪರಿಹಾರವಾಗಿ ಪರಿಗಣಿಸಬಹುದು. ಆಂಟಿಮೈಕ್ರೊಬಿಯಲ್ ಆಗಿರುವ ಟೀ ಟ್ರೀ ಆಯಿಲ್ ಸೆಬೊರ್ಹೆಕ್ ಡರ್ಮಟೈಟಿಸ್‌ನಂತಹ ವಾಸನೆಯ ನೆತ್ತಿಯನ್ನು ಉಂಟುಮಾಡುವ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಪರಿಣಾಮಕಾರಿಯಾಗಿದೆ.

ಆಪಲ್ ಸೈಡರ್ ವಿನೆಗರ್:

ಆಪಲ್ ಸೈಡರ್ ವಿನೆಗರ್:

ಆಪಲ್ ಸೈಡರ್ ವಿನೆಗರ್ ತನ್ನ ವಿವಿಧ ಆರೋಗ್ಯ ಪ್ರಯೋಜನಗಳಿಗಾಗಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಇದು ಜನರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುವುದರಿಂದ ಹಿಡಿದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಇದರ ಪ್ರಮುಖ ಪ್ರಯೋಜನವೆಂದರೆ ಅದು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಇದರಿಂದಾಗಿ ಆಪಲ್ ಸೈಡರ್ ವಿನೆಗರ್ ನಿಮ್ಮ ನೆತ್ತಿಯ ಚಿಕಿತ್ಸೆಯಲ್ಲಿ ಬಳಸಬಹುದು. ಗಮನಿಸಿ, ಎಸ್ಜಿಮಾ ಹೊಂದಿದ್ದರೆ, ಆಪಲ್ ಸೈಡರ್ ವಿನೇಗರ್ ಬಳಸುವುದನ್ನು ತಪ್ಪಿಸಿ. ನಿಮ್ಮ ಚರ್ಮಕ್ಕೆ ಅನ್ವಯಿಸುವ ಮೊದಲು ಅದನ್ನು ದುರ್ಬಲಗೊಳಿಸಲು ಪ್ರಯತ್ನಿಸಿ. ನಿಮ್ಮ ನೆತ್ತಿಯ ಮೇಲೆ ಬಳಸುವ ಮೊದಲು ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ತಿಳಿಯಲು ಪ್ಯಾಚ್ ಟೆಸ್ಟ್ ಮಾಡಿ.

ಅಲೋವೆರಾ:

ಅಲೋವೆರಾ:

ನೀವು ಸೆಬೊರ್ಹೆಕ್ ಡರ್ಮಟೈಟಿಸ್ ಹೊಂದಿದ್ದರೆ , ಅಲೋವೆರಾವನ್ನು ಮನೆಮದ್ದು. ಇದು ಅದರ ನಂಜುನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದನ್ನು ನಿಮ್ಮ ನೆತ್ತಿಗೆ ಬಳಸಬಹುದು.

ನಿಂಬೆ ರಸ:

ನಿಂಬೆ ರಸ:

ನಿಂಬೆ ರಸವು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದ್ದು, ಇದು ನಿಮ್ಮ ನೆತ್ತಿಯ ಮೇಲೆ ವಾಸನೆ-ಉತ್ಪಾದಿಸುವ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತದೆ. ಆದರೆ, ಇದು ಆಮ್ಲೀಯ ಗುಣ ಹೊಂದಿರುವುದರಿಂದ, ಸೂರ್ಯನ ಬೆಳಕಿಗೆ ಹೋಗುವಾಗ ಸಮಸ್ಯೆ ಉಂಟು ಮಾಡಬಹುದು. ಆದ್ದರಿಂದ ಎಚ್ಚರಿಕೆಯಿಂದ ಬಳಸಿ.

ಯಾವಾಗ ವೈದ್ಯರನ್ನು ಭೇಟಿ ಮಾಡಬೇಕು?

ನೀವು ಪ್ರಯತ್ನಿಸಿದ ಯಾವುದೇ ತಂತ್ರಗಳು ಅಥವಾ ಚಿಕಿತ್ಸೆಗಳು ವಾಸನೆಯನ್ನು ಕಡಿಮೆ ಮಾಡದಿದ್ದರೆ ಅಥವಾ ತೆಗೆದುಹಾಕದಿದ್ದರೆ, ವೈದ್ಯರನ್ನು ಭೇಟಿ ಮಾಡಿ. ಅವರು ಪ್ರಸ್ತುತ ಇರಬಹುದಾದ ಪರಿಸ್ಥಿತಿಗಳನ್ನು ಮತ್ತಷ್ಟು ಮೌಲ್ಯಮಾಪನ ಮಾಡುತ್ತಾರೆ ಮತ್ತು ಹೆಚ್ಚುವರಿ ಚಿಕಿತ್ಸೆಯನ್ನು ಶಿಫಾರಸು ಮಾಡಬಹುದು.

English summary

How to treat Smelly Scalp in monsoon in Kannada

How to treat Smelly Scalp, How to treat Smelly Scalp in mansoon, How to treat Smelly Scalp kannada
X
Desktop Bottom Promotion