Just In
Don't Miss
- News
ಹಿಂದಿ ಬರುವುದಿಲ್ಲ ಕ್ಷಮೆಯಾಚಿಸುತ್ತೇನೆ: ನೀವ್ಯಾಕೆ ಕ್ಷಮೆ ಕೇಳಬೇಕು ಕುಮಾರಣ್ಣ!
- Automobiles
ಫೋರ್ಡ್ ಮುಸ್ಟಾಂಗ್ ಕಾರಿನಂತೆ ಮಾಡಿಫೈಗೊಂಡ ಬಲೆನೊ ಸೆಡಾನ್ ಕಾರು
- Finance
ದಾಖಲೆಯತ್ತ ಮುನ್ನುಗ್ಗುತ್ತಿರುವ ಬಿಟ್ಕಾಯಿನ್: ಏಪ್ರಿಲ್ 11ರ ಬೆಲೆ ಇಲ್ಲಿದೆ
- Sports
ಈ ವಿಶಿಷ್ಟ ದಾಖಲೆಯಲ್ಲಿ ಕೊಹ್ಲಿಯನ್ನು ಹಿಂದಿಕ್ಕಿದ ಧವನ್
- Movies
'ಇಂದಿರಾನಗರದ ಗೂಂಡಾ ನಾನೇ' ಎಂದು ದ್ರಾವಿಡ್ಗೆ ಸೆಡ್ಡು ಹೊಡೆದ ಖ್ಯಾತ ನಟಿ
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬೇಸಿಗೆಯಲ್ಲಿ ಗಡ್ಡವನ್ನು ಆರೈಕೆ ಮಾಡುವ ವಿಧಾನಗಳಿವು
ಈ ಬೇಸಿಗೆಯಲ್ಲಿ ಗಡ್ಡವನ್ನು ಬೆಳೆಸುವುದು ಮತ್ತು ನಿರ್ವಹಿಸುವುದು ಸವಾಲಿನ ಸಂಗತಿಯೇ ಆಗಿದೆ. ಏಕೆಂದರೆ ನಿರಂತರ ಬೆವರುವಿಕೆಯು ಗಡ್ಡದ ಸುತ್ತಲೂ ಬಹಳಷ್ಟು ಕೊಳಕು ಮತ್ತು ಧೂಳನ್ನು ಸಂಗ್ರಹಿಸುತ್ತದೆ. ಇದು ನಿಮ್ಮ ಗಡ್ಡ ದುರ್ಬಲವಾಗಲು ಕಾರಣವಾಗುತ್ತದೆ. ಅಂದರೆ ಬೇಸಿಗೆಯಲ್ಲಿ ನೀವು ಗಡ್ಡವನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಇದರ ಅರ್ಥವಲ್ಲ. ನೀವು ಇದಕ್ಕಾಗಿ ಸ್ವಲ್ಪ ಸಮಯ ಮತ್ತು ಕಾಳಜಿ ನೀಡಬೇಕು ಎಂದರ್ಥ. ಆದ್ದರಿಂದ ಇಲ್ಲಿ ನಾವು ಕೆಲವು ಗಡ್ಡದ ಆರೈಕೆ ವಿಚಾರಗಳನ್ನು ಹಂಚಿಕೊಂಡಿದ್ದೇವೆ.
ಬೇಸಿಗೆಯಲ್ಲಿ ಗಡ್ಡದ ಆರೈಕೆಗಾಗಿ ಕೆಲವೊಂದು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

1. ಸಾಮಾನ್ಯ ಟ್ರಿಮ್ ಮಾಡಿಕೊಳ್ಳಿ:
ಟ್ರಿಮ್ಮಿಂಗ್ ಬೇಸಿಗೆಯಲ್ಲಿ ನಿಮ್ಮ ಗಡ್ಡವನ್ನು ನೋಡಿಕೊಳ್ಳುವ ಪ್ರಮುಖ ಮತ್ತು ಆರೋಗ್ಯಕರ ಮಾರ್ಗಗಳಲ್ಲಿ ಒಂದಾಗಿದೆ ಏಕೆಂದರೆ ಚಿಕ್ಕ ಗಡ್ಡದ ನಿರ್ವಹಣೆ ಸುಲಭ ಮತ್ತು ತುಂಬಾ ಸೊಗಸಾಗಿ ಕಾಣುತ್ತದೆ.

2. ಎಣ್ಣೆ ಮತ್ತು ಸ್ಕ್ರಬ್ಬಿಂಗ್:
ಎಸೆನ್ಷಿಯಲ್ ಆಯಿಲಿಂಗ್ ಸಹ ಹೊಳಪನ್ನು ಉಳಿಸಿಕೊಳ್ಳಲು ಮತ್ತು ಗಡ್ಡದ ಚಪ್ಪಟೆಯಾಗುವುದನ್ನು ತಪ್ಪಿಸುತ್ತದೆ. ಯಾವುದೇ ರೀತಿಯ ಬ್ಯಾಕ್ಟೀರಿಯಾಗಳನ್ನು ನಿಮ್ಮ ಮುಖದಿಂದ ದೂರವಿರಿಸಲು ನೀವು ವಾರಕ್ಕೆ ಎರಡು ಬಾರಿ ನಿಮ್ಮ ಗಡ್ಡವನ್ನು ಸ್ಕ್ರಬ್ ಮಾಡಬೇಕಾಗುತ್ತದೆ.

3. ಚೆನ್ನಾಗಿ ತೇವಗೊಳಿಸಿ:
ಗಡ್ಡ ತೊಳೆಯುವುದು ಮತ್ತು ಮಾಯಿಶ್ಚರೈಸರ್ ಹಚ್ಚುವುದು ಉತ್ತಮ ಗಡ್ಡದ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ ಮತ್ತು ಅದೇ ರೀತಿ ಕಾಪಾಡಲು ಸಹಾಯ ಮಾಡುತ್ತದೆ. ಹೆಚ್ಚು ಗಡಿಬಿಡಿಯಿಲ್ಲದೆ ಗಡ್ಡವನ್ನು ಸುಲಭವಾಗಿ ಬೇರ್ಪಡಿಸಲು ಇದು ಸಹಾಯ ಮಾಡುತ್ತದೆ.

4. ನೀರಿನ ಸೇವನೆಯನ್ನು ಹೆಚ್ಚಿಸಿ:
ಸರಿಯಾಗಿ ತಿನ್ನುವುದು ಮತ್ತು ಸಾಕಷ್ಟು ನೀರು ಕುಡಿಯುವುದು ಮುಖ್ಯ. ಪ್ರೋಟೀನ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು ಏಕೆಂದರೆ ಇದು ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ ಮತ್ತು ಶುಷ್ಕ ವಾತಾವರಣದಲ್ಲಿ ಚರ್ಮಕ್ಕೆ ಪೋಷಣೆಯನ್ನು ನೀಡುತ್ತದೆ.

5. ಗಡ್ಡದ ಮೇಲೆ ಸನ್‌ಸ್ಕ್ರೀನ್ ಹಚ್ಚಿ
ನಿಮ್ಮ ಗಡ್ಡದ ಮೇಲೆ ಸನ್‌ಸ್ಕ್ರೀನ್ ಹಚ್ಚಿಕೊಳ್ಳಿ ಏಕೆಂದರೆ ಕಠಿಣವಾದ ಸೂರ್ಯನ ಕಿರಣವು ಕೂದಲಿನ ಹೊರಪೊರೆಗಳನ್ನು ಒಡೆಯುತ್ತದೆ ಮತ್ತು ಅದು ಒಣಗುತ್ತದೆ ಮತ್ತು ಸುಲಭವಾಗಿ ಉದುರುತ್ತದೆ. ಸನ್‌ಸ್ಕ್ರೀನ್‌ನ ಹಚ್ಚುವುದರಿಂದ ನಿಮ್ಮ ಗಡ್ಡವನ್ನು ಹಾನಿಯಿಂದ ರಕ್ಷಿಸುವುದಲ್ಲದೆ ನಿಮ್ಮ ಕೂದಲನ್ನು ಮೃದುಗೊಳಿಸುತ್ತದೆ ಮತ್ತು ಹೊಳೆಯುವಂತೆ ಮಾಡುತ್ತದೆ.