For Quick Alerts
ALLOW NOTIFICATIONS  
For Daily Alerts

ಕಪ್ಪಾದ ಕೂದಲಿಗಾಗಿ ಕರಿಜೀರಿಗೆ ಎಣ್ಣೆ ಮಾಡುವುದು ಹೇಗೆ?

|

"ಕರಿಜೀರಿಗೆ" ಅಥವಾ "ಕೃಷ್ಣಜೀರಿಗೆ" ಅಂತಾ ಕರೆಸ್ಕೊಳ್ಳೋ ಈ ಕಪ್ಪು ಬೀಜಗಳು ಕೇಶರಾಶಿಯ ಆರೋಗ್ಯಕ್ಕೆ ಹೇಳಿಮಾಡಿಸಿದಂತಹವು ಅನ್ನೋ ವಿಚಾರ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಕರಿಜೀರಿಗೆಯನ್ನ "ಕಲೊಂಜಿ ಅಂತಾನೂ ಕರೀತಾರೆ. ಇವತ್ತು ಮಾರುಕಟ್ಟೆಯಲ್ಲಿ ಸಿಗೋವಂತಹ ಬಹಳಷ್ಟು ಹೇರ್ ಮಾಸ್ಕ್ ಗಳು ಮತ್ತು ಕಂಡೀಷನರ್ ಗಳಲ್ಲಿ ಈ ಕರಿಜೀರಿಗೆಯನ್ನ ಬಳಸಿಯೇ ಇರ್ತಾರೆ. ಈ ಬೀಜಗಳಲ್ಲಿ ಉರಿಶಾಮಕ ಸಂಯುಕ್ತಗಳಿವೆ ಹಾಗೂ ಜೊತೆಗೆ ನಿಮ್ಮ ಕೇಶರಾಶಿಗೆ ಅಗತ್ಯ ಇರೋವಂತಹ ಎಲ್ಲ ಪೋಷಕಾಂಶಗಳೂ ಹೇರಳವಾಗಿವೆ. ನಿಮ್ಮ ದಿನನಿತ್ಯದ ಕೇಶದ ಆರೈಕೆಯ ಭಾಗವಾಗಿ ಈ ಕರಿಜೀರಿಗೆಯನ್ನ ಹೇಗೆ ಬಳಸಿಕೊಳ್ಳಬಹುದು ಗೊತ್ತೇ ? ತೈಲದ ರೂಪದಲ್ಲಿ ಬಳಸಿಕೊಳ್ಳೋದೇ ಅತ್ಯಂತ ಸುಲಭವಾದ ಮಾರ್ಗೋಪಾಯ.

ಕಲೊಂಜಿ ನಿಮ್ಮ ಕೇಶರಾಶಿಗೆ ಹೇಗೆ ಪ್ರಯೋಜನಕಾರಿ ?

ಕಲೊಂಜಿ ನಿಮ್ಮ ಕೇಶರಾಶಿಗೆ ಹೇಗೆ ಪ್ರಯೋಜನಕಾರಿ ?

ಕಲೊಂಜಿಯಲ್ಲಿ ಉರಿಶಾಮಕ ಸಂಯುಕ್ತಗಳಿದ್ದು, ನೆತ್ತಿಯ ಉರಿಯನ್ನು ತಗ್ಗಿಸಲು ಇವು ಬಲು ಸಹಕಾರಿ. ನೆತ್ತಿಯ ಉರಿಯು ತಲೆಹೊಟ್ಟಿಗೆ ಹಾಗೂ ಕೇಶರಾಶಿಗೆ ಸಂಬಂಧಿಸಿದ ಇನ್ನಿತರ ತೊಂದರೆಗಳಿಗೆ ದಾರಿಮಾಡಿ ಕೊಡುತ್ತದೆ. ಮುಂದೆ ಇದು ಕೂದಲುದುರುವಿಕೆಗೂ ಕಾರಣವಾಗುತ್ತದೆ.

ಪೋಷಕಾಂಶಗಳಿಂದ ಸಮೃದ್ಧವಾಗಿರುವ ಕಲೊಂಜಿಯು ಕೇಶರಾಶಿಯ ಪಾಲಿಗೆ ಬಲು ಹಿತಕಾರಿ. ನಿಮ್ಮ ಕೇಶರಾಶಿಗೆ ಅತ್ಯಾವಶ್ಯಕ ಪೋಷಕಾಂಶಗಳನ್ನ ಒದಗಿಸೋದರ ಮೂಲಕ ಅದು ನಿಮ್ಮ ಕೇಶರಾಶಿಯನ್ನ ವೃದ್ಧಿಸುತ್ತದೆ. ನಿಮ್ಮ ಕೂದಲುಗಳ ಬೇರುಗಳ ಆರೋಗ್ಯವನ್ನ ಸುಧಾರಿಸುವುದರ ಮೂಲಕ, ನಿಮ್ಮ ಕೇಶರಾಶಿಯ ಒಟ್ಟಾರೆ ಆರೋಗ್ಯವನ್ನ ಸುಧಾರಿಸುತ್ತದೆ. ನಿಮ್ಮ ಕೇಶರಾಶಿಯ ಬೆಳವಣಿಗೆಯನ್ನ ಹೆಚ್ಚಿಸುವುದಷ್ಟೇ ಅಲ್ಲದೇ, ಕೂದಲು ಉದುರದಂತೆಯೂ ತಡೆಗಟ್ಟುತ್ತದೆ.

ಕರಿಬೀಜದ ತೈಲದಲ್ಲಿ ಲೈನಿಯೋಲಿಕ್ ಆಮ್ಲವಿದ್ದು, ಇದು ಕೂದಲು ಬೂದುಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ.

ಕರಿಬೀಜದ ತೈಲದಲ್ಲಿ ಇರುವ ಒಮೇಗಾ -3 ಎಂಬ ರಾಸಾಯನಿಕವು ನೆತ್ತಿಯ ಭಾಗಕ್ಕೆ ರಕ್ತದ ಪೂರೈಕೆಯನ್ನು ವೃದ್ಧಿಗೊಳಿಸುತ್ತದೆ ಹಾಗೂ ಈ ಮೂಲಕ ಕೇಶರಾಶಿಯು ಸೊಂಪಾಗಿ, ಪುಷ್ಕಳವಾಗಿ ಬೆಳೆಯೋದಕ್ಕೆ ಕಾರಣವಾಗುತ್ತದೆ.

ಕರಿಬೀಜದೆಣ್ಣೆ ಅಥವಾ ಕಲೊಂಜಿ ಎಣ್ಣೆಯನ್ನ ಮನೆಯಲ್ಲೇ ತಯಾರಿಸೋದು ಹೇಗೆ ?

ಕರಿಬೀಜದೆಣ್ಣೆ ಅಥವಾ ಕಲೊಂಜಿ ಎಣ್ಣೆಯನ್ನ ಮನೆಯಲ್ಲೇ ತಯಾರಿಸೋದು ಹೇಗೆ ?

ಬೇಕಾಗುವ ಸಾಮಗ್ರಿಗಳು:

1 ಟೇಬಲ್ ಚಮಚದಷ್ಟು ಕರಿಬೀಜಗಳು

1 ಟೇಬಲ್ ಚಮಚದಷ್ಟು ಮೆಂತೆಕಾಳುಗಳು

200 ಮಿ.ಲೀ. ನಷ್ಟು ತೆಂಗಿನೆಣ್ಣೆ

50 ಮಿ.ಲೀ. ನಷ್ಟು ಕ್ಯಾಸ್ಟರ್ ಎಣ್ಣೆ

ಗಾಜಿನ ಬಾಟಲಿ

ಕರಿಬೀಜಗಳನ್ನೂ ಹಾಗೂ ಮೆಂತೆಕಾಳುಗಳನ್ನೂ ಚೆನ್ನಾಗಿ ಪುಡಿಮಾಡಿಟ್ಟುಕೊಳ್ಳಿರಿ. ಈಗ ಈ ಪುಡಿಯನ್ನು ಗಾಜಿನ ಬಾಟಲಿಯಲ್ಲಿ ಹಾಕಿ. ಅದಕ್ಕೆ ತೆಂಗಿನೆಣ್ಣೆಯನ್ನೂ ಮತ್ತು ಕ್ಯಾಸ್ಟರ್ ಎಣ್ಣೆಯನ್ನೂ ಸೇರಿಸಿರಿ. ಈಗ ಈ ಬಾಟಲಿಯನ್ನು ಮುಚ್ಚಿ ಅದನ್ನು ಬಿಸಿಲಿನಲ್ಲಿಡಿ. 2 ರಿಂದ 3 ವಾರಗಳ ಕಾಲ ಅದನ್ನು ಹಾಗೆಯೇ ಬಿಸಿಲಿನಲ್ಲಿಡಿ. ಪ್ರತೀ ಎರಡು ದಿನಗಳಿಗೊಮ್ಮೆ ತೈಲವನ್ನು ಕದಡುತ್ತಾ ಇರಿ ಹಾಗೂ 2 ರಿಂದ 3 ವಾರಗಳ ಬಳಿಕ ಅದನ್ನು ಸ್ಟ್ರೈನ್ ಮಾಡಿರಿ. ಅತ್ಯುತ್ತಮ ಫಲಿತಾಂಶಕ್ಕಾಗಿ ಈ ತೈಲವನ್ನು ನಿಮ್ಮ ಕೇಶರಾಶಿಗೆ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಹಚ್ಚಿಕೊಳ್ಳಿರಿ.

ಕೇಶ ಸಂವರ್ಧನೆಗಾಗಿ ಕಾಲೊಂಜಿ ತೈಲದ ಬಳಕೆ ಹೇಗೆ ?

ಕೇಶ ಸಂವರ್ಧನೆಗಾಗಿ ಕಾಲೊಂಜಿ ತೈಲದ ಬಳಕೆ ಹೇಗೆ ?

ಕಲೊಂಜಿ ತೈಲವನ್ನ ನೀವು ನೇರವಾಗಿಯೇ ನಿಮ್ಮ ಕೇಶರಾಶಿಗೆ ಹಚ್ಚಿಕೊಳ್ಳಬಹುದು. ಒಂದಿಷ್ಟು ಕಲೊಂಜಿ ತೈಲವನ್ನ ತೆಗೆದುಕೊಂಡು ಅದನ್ನು ನೆತ್ತಿಯ ಮೇಲೆ ಹಚ್ಚಿಕೊಳ್ಳಿರಿ. ಅರ್ಧಘಂಟೆಯ ಕಾಲ ಹಾಗೆಯೇ ಇರಗೊಟ್ಟು ಬಳಿಕ, ಸ್ವಚ್ಛವಾಗಿ ತೊಳೆಯಿರಿ. ಈ ತೈಲವನ್ನ ನಿಮ್ಮ ಕೇಶರಾಶಿಗೆ ಹಚ್ಚಿಕೊಳ್ಳುವುದರಿಂದ ಕೇಶರಾಶಿಯು ತ್ವರಿತವಾಗಿ ಬೆಳಗುತ್ತದೆ. ಕಲೊಂಜಿ ತೈಲದ ಜೊತೆಗೆ ಒಲೀವ್ ತೈಲವನ್ನೋ ಅಥವಾ ಕ್ಯಾಸ್ಟರ್ ತೈಲವನ್ನೋ ಸೇರಿಸಿಯೂ ಬಳಸಬಹುದು. ಬಳಕೆಯ ವಿಧಾನ: ಕಲೊಂಜಿ ತೈಲ ಹಾಗೂ ಇತರ ತೈಲವನ್ನ ಸಮಪ್ರಮಾಣಗಳಲ್ಲಿ ತೆಗೆದುಕೊಳ್ಳಿ, ಅವುಗಳನ್ನು ಮಿಶ್ರಗೊಳಿಸಿ, ಹಾಗೂ ಬಳಿಕ ನಿಮ್ಮ ಕೇಶರಾಶಿಗೆ ಹಚ್ಚಿಕೊಳ್ಳಿರಿ. ಹಚ್ಚಿಕೊಂಡ ಬಳಿಕ ಚೆನ್ನಾಗಿ ತಿಕ್ಕಿಕೊಳ್ಳಿರಿ ಹಾಗೂ ನಂತರ 30 ನಿಮಿಷಗಳ ಕಾಲ ಹಾಗೆಯೇ ಇರಗೊಟ್ಟು, ಶ್ಯಾಂಪೂವಿನಿಂದ ತೊಳೆದು ತೆಗೆಯಿರಿ.

ಕಲೊಂಜಿ ಮತ್ತು ನಿಂಬೆಹಣ್ಣು

ಕಲೊಂಜಿ ಮತ್ತು ನಿಂಬೆಹಣ್ಣು

ಕಲೊಂಜಿ ತೈಲವನ್ನು ನೀವು ನಿಂಬೆಹಣ್ಣಿನ ರಸದೊಂದಿಗೂ ಬಳಸಬಹುದು. ನಿಂಬೆಹಣ್ಣಿನಲ್ಲಿರುವ ವಿಟಮಿನ್ ಸಿ, ನಿಮ್ಮ ನೆತ್ತಿಯ ಕೊಲ್ಲಾಜಿನ್ ನ ಮಟ್ಟವನ್ನ ಹೆಚ್ಚಳಗೊಳಿಸುತ್ತದೆ. ಮೊದಲು ನಿಂಬೆರಸವನ್ನ ನಿಮ್ಮ ಕೂದಲಿಗೆ ಹಚ್ಚಿಕೊಳ್ಳಿರಿ, 15 ನಿಮಿಷಗಳ ಕಾಲ ಹಾಗೆಯೇ ಇರಗೊಡಿರಿ, ಹಾಗೂ ಬಳಿಕ ತೊಳೆಯಿರಿ. ನಂತರ, ಕಲೊಂಜಿ ಎಣ್ಣೆಯಿಂದ ನಿಮ್ಮ ಕೇಶರಾಶಿಯನ್ನು ಮಾಲೀಸು ಮಾಡಿಕೊಳ್ಳಿರಿ. ಬಯಸಿದಲ್ಲಿ, ರಾತ್ರಿಯಿಡೀ ಈ ತೈಲವನ್ನ ನಿಮ್ಮ ಕೇಶರಾಶಿಯಲ್ಲಿ ಹಾಗೆಯೇ ಇರಗೊಡಬಹುದು.

ಕಲೊಂಜಿ ಮತ್ತು ಮೆಂತೆ ಕಾಳು

ಕಲೊಂಜಿ ಮತ್ತು ಮೆಂತೆ ಕಾಳು

ಒಂದಿಷ್ಟು ಮೆಂತೆಕಾಳುಗಳನ್ನ ತೆಗೆದುಕೊಂಡು ಅವನ್ನು ಕಾರೊಂಜಿ ತೈಲ ಹಾಗೂ ತೆಂಗಿನೆಣ್ಣೆಯೊಂದಿಗೆ ಬೆರೆಸಿರಿ (ಮೆಂತೆಕಾಳುಗಳನ್ನ ಪುಡಿಮಾಡಿಟ್ಟುಕೊಂಡಿರಬೇಕು). ಈಗ, ಈ ಮಿಶ್ರಣವನ್ನ ನಿಮ್ಮ ಕೂದಲಿಗೆ ಹಚ್ಚಿಕೊಳ್ಳಿರಿ, 30 ನಿಮಿಷಗಳ ಕಾಲ ಹಾಗೆಯೇ ಇರಗೊಡಿರಿ, ಹಾಗೂ ಬಳಿಕ ಮಂದ ಶ್ಯಾಂಪೂವಿನೊಂದಿಗೆ ಅದನ್ನ ತೊಳೆದು ತೆಗೆಯಿರಿ. ತೆಂಗಿನೆಣ್ಣೆ ಹಾಗೂ ಮೆಂತೆಕಾಳುಗಳೆರಡೂ ನಿಮ್ಮ ಕೇಶರಾಶಿಯ ಪಾಲಿಗೆ ಬಲು ಹಿತಕಾರಿ. ಕೂದಲುದುರುವುದು ಹಾಗೂ ಕೂದಲು ತೆಳುವಾಗುವಂತಹ ತೊಂದರೆಗಳನ್ನ ಇವೆರಡೂ ದೂರ ಮಾಡುತ್ತವೆ.

ಕಲೊಂಜಿ ತೈಲವನ್ನ ಇತರ ಎಣ್ಣೆಗಳೊಂದಿಗೆ ಕೇಶರಾಶಿಯ ಮೇಲೆ ಬಳಸಿದಾಗ, ಅದನ್ನ ಕೇಶರಾಶಿಯಿಂದ ನಿವಾರಿಸಿ ತೆಗೆಯೋದು ಬಲು ಪ್ರಯಾಸಕರವಾದೀತು. ಹಾಗಾಗಿ ಅದರ ನಿವಾರಣೆಗಾಗಿ ಒಂದು ಒಳ್ಳೆಯ ಶ್ಯಾಂಪೂವನ್ನ ಉಪಯೋಗಿಸಿರಿ.

English summary

How To Make Kalonji Oil At Home For Your Hair

Here are kalonji oil recipe for your hair, have a look.
X
Desktop Bottom Promotion