For Quick Alerts
ALLOW NOTIFICATIONS  
For Daily Alerts

ನಿಮ್ಮ ಕೂದಲು ಉದುರುವ ಸಮಸ್ಯೆಗೆ ಫುಲ್‌ಸ್ಟಾಪ್ ಹಾಕುತ್ತೆ ಈ ಮನೆಮದ್ದು!

|

ಕೂದಲು ಉದುರುವುದು ಒಂದು ಸಮಸ್ಯೆಯಾಗಿದ್ದು, ಮಹಿಳೆಯರು, ಪುರುಷರು ಎಂಬ ಭೇದ-ಭಾವವಿಲ್ಲದೇ ಅನುಭವಿಸುತ್ತಿದ್ದಾರೆ. ಕೂದಲು ಉದುರುವುದನ್ನು ಕಡಿಮೆಮಾಡಲು, ಒಂದರ ನಂತರ ಒಂದರಂತೆ ವಿವಿಧ ಉತ್ಪನ್ನಗಳನ್ನು ಪ್ರಯತ್ನಿಸಲು ಪ್ರಾರಂಭಿಸುತ್ತಾರೆ. ಆದರೆ ಇದು ಪರಿಣಾಮಕಾರಿ ಪರಿಹಾರವಲ್ಲ. ಬದಲಾಗಿ, ನಿಮ್ಮ ಆಹಾರದ ಮೇಲೆ ಗಮನ ಹರಿಸಬೇಕು. ಬಾಹ್ಯ ಕೂದಲಿನ ಆರೈಕೆಗಿಂತ ಆಂತರಿಕ ಆರೈಕೆ ಮುಖ್ಯ, ಇದು ಆರೋಗ್ಯಕರ ಆಹಾರದಿಂದ ಮಾತ್ರ ಸಾಧ್ಯ.

ಕೂದಲು ಉದುರಲು ಕಾರಣಗಳೇನು?:

ಕೂದಲು ಉದುರಲು ಕಾರಣಗಳೇನು?:

ಮಹಿಳೆಯರಲ್ಲಿ ಕೂದಲು ಉದುರುವುದು ಸಾಮಾನ್ಯ ಸಂಗತಿಯಾದರೂ ದಿನಕ್ಕೆ 80 ಕ್ಕಿಂತ ಹೆಚ್ಚು ಎಳೆಗಳನ್ನು ಕಳೆದುಕೊಳ್ಳುತ್ತಿದ್ದರೆ, ಸಮಸ್ಯೆಯನ್ನು ಪರಿಹರಿಸಬೇಕಾಗಿದೆ. ಕೂದಲು ಉದುರುವಿಕೆಗೆ ಕಾರಣಗಳೆಂದರೆ,

ಅಸಮರ್ಪಕ ಆಹಾರ:

ಕೂದಲು ಉದುರುವಿಕೆಗೆ ಪ್ರಮುಖ ಕಾರಣವೆಂದರೆ ಆಹಾರದಲ್ಲಿನ ಬದಲಾವಣೆ. ನೀವು ಸೇವಿಸುವ ಆಹಾರವು ಪ್ರಮುಖ ಪೌಷ್ಠಿಕಾಂಶವನ್ನು ಕಳೆದುಕೊಂಡಿದೆ ಎಂದರ್ಥ. ಪ್ರೋಟೀನ್ ಕೂದಲು ಕಿರುಚೀಲಗಳನ್ನು ನಿರ್ಮಿಸುವುದರಿಂದ ಸರಾಸರಿ ವ್ಯಕ್ತಿಯು ಪ್ರತಿ ಕಿಲೋಗ್ರಾಂಗೆ ಕನಿಷ್ಠ 0.8 ಗ್ರಾಂ ಪ್ರೋಟೀನ್ ತಿನ್ನಬೇಕು.

ಜನನ ನಿಯಂತ್ರಣ ಮಾತ್ರೆಗಳು:

ಜನನ ನಿಯಂತ್ರಣ ಮಾತ್ರೆಗಳು:

ನೀವು ಜನನ ನಿಯಂತ್ರಣ ಮಾತ್ರೆಗಳನ್ನು ಸೇವಿಸುತ್ತಿದ್ದರೆ ಅಥವಾ ಇತ್ತೀಚೆಗೆ ಅವುಗಳನ್ನು ಬದಲಾಯಿಸಿದ್ದರೆ ಆಗ ಬದಲಾವಣೆಯು ನಿಮ್ಮ ಕೂದಲಿನ ಮೇಲೆ ಪ್ರತಿಫಲಿಸುತ್ತದೆ. ಹೆಚ್ಚಿನ ಜನನ ನಿಯಂತ್ರಣ ಮಾತ್ರೆಗಳು ಪ್ರೊಜೆಸ್ಟರಾನ್ ಅನ್ನು ಹೊಂದಿದ್ದು, ಇದು ಕೂದಲು ಉದುರುವಿಕೆಗೆ ಕಾರಣವಾಗಬಹುದು.

ತಪ್ಪಾದ ಕೇಶವಿನ್ಯಾಸ:

ತಪ್ಪಾದ ಕೇಶವಿನ್ಯಾಸ:

ಇದು ವಿಚಿತ್ರವೆನಿಸಬಹುದು ಆದರೆ ಕೂದಲು ಉದುರುವಿಕೆಯಲ್ಲಿ ನಿಮ್ಮ ಕೇಶವಿನ್ಯಾಸವು ದೊಡ್ಡ ಪಾತ್ರವನ್ನು ವಹಿಸುತ್ತದೆ. ನೀವು ಹೆಚ್ಚಾಗಿ ಪೋನಿಟೇಲ್ ಅಥವಾ ತುರುಬು‌ಗಳನ್ನು ಆರಿಸಿಕೊಂಡರೆ, ಬಹುಶಃ ಕೂದಲು ಉದುರುವಿಕೆಗೆ ಕಾರಣವಾಗಬಹುದು.

ಕೂದಲುದುರುವದನ್ನ ತಡೆಯಲು ಈ ಮನೆಮದ್ದು:

ಕೂದಲುದುರುವದನ್ನ ತಡೆಯಲು ಈ ಮನೆಮದ್ದು:

ಕೂದಲಿನ ಬಾಹ್ಯ ಆರೈಕೆಗಾಗಿ ಶಾಂಪೂ ಮತ್ತು ಕಂಡಿಷನರ್ ಅನ್ನು ಬದಲಾಯಿಸುವ ಮೊದಲು, ಈ ಮನೆಮದ್ದನ್ನು ಒಮ್ಮೆ ಪ್ರಯತ್ನಿಸಿ. ಇದು ಸಂಪೂರ್ಣವಾಗಿ ನೈಸರ್ಗಿಕವಾಗಿರುವುದರಿಂದ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲದು.

ಹಂತ 1:

ಮೊದಲನೆಯದಾಗಿ, ಆಲಿವ್ ಎಣ್ಣೆಯನ್ನು ನೆತ್ತಿಯ ಮೇಲೆ ಅಂದರೆ ಕೂದಲಿನ ಬೇರುಗಳಿಗೆ ಹಚ್ಚಿ. ಕೂದಲಿನ ಉದ್ದಕ್ಕೆ ಹಚ್ಚುವ ಅಗತ್ಯವಿಲ್ಲ.

ಹಂತ -2:

ಹಂತ -2:

  • ಎಣ್ಣೆಯನ್ನು ಹಚ್ಚಿದ ನಂತರ, ಹೇರ್ ಪ್ಯಾಕ್ ತಯಾರಿಸಿ.
  • ಇದಕ್ಕಾಗಿ 10-15 ಕರಿಬೇವಿನ ಎಲೆಗಳು, ಈರುಳ್ಳಿಯನ್ನು ತೆಗೆದುಕೊಂಡು ನುಣ್ಣಗೆ ಕತ್ತರಿಸಿ ಮಿಕ್ಸಿಯಲ್ಲಿ ಪೇಸ್ಟ್ ಮಾಡಿ.
  • ನಂತರ ಅದನ್ನು ಕೈಗಳಿಂದ ಹಿಸುಕಿಕೊಂಡು ಅಥವಾ ಸೋಸಿಕೊಂಡು, ರಸವನ್ನು ತೆಗೆಯಿರಿ.
  • ನಂತರ, ಅದಕ್ಕೆ ಒಂದು ಚಿಟಿಕೆ ಕರಿಮೆಣಸನ್ನು ಸೇರಿಸಿ ಅಥವಾ ಪುಡಿಯನ್ನು ಕೂಡ ಬಳಸಬಹುದು.
  • ಇದನ್ನು ಕೂದಲಿನ ಬೇರುಗಳಿಗೆ ಬೆರಳುಗಳ ಸಹಾಯದಿಂದ ಹಚ್ಚಿ, ಕೂದಲನ್ನು ಸುತ್ತಿ ಮತ್ತು ಸಡಿಲವಾದ ಬನ್ ಹಾಕಿಕೊಳ್ಳಿ.
  • ಈ ಪ್ಯಾಕ್ ಕೂದಲಿನ ಮೇಲೆ ಕನಿಷ್ಠ 1-2 ಗಂಟೆಗಳ ಕಾಲ ಬಿಡಿ.
  • ನಂತರ ಶಾಂಪೂ ಬಳಸಿ, ತೊಳೆಯಿರಿ.
  • ವಾರಕ್ಕೆ ಎರಡು ಬಾರಿ ಬಳಸಿದ ನಂತರ, ಪರಿಣಾಮವು ಶೀಘ್ರದಲ್ಲೇ ಗೋಚರಿಸುತ್ತದೆ.
  • ಕೂದಲು ಉದುರುವುದನ್ನು ನಿಲ್ಲಿಸಲು ಈ ವಿಷಯಗಳು ಸಹಾಯಕ:

    ಕೂದಲು ಉದುರುವುದನ್ನು ನಿಲ್ಲಿಸಲು ಈ ವಿಷಯಗಳು ಸಹಾಯಕ:

    • ಪೋನಿಟೇಲ್ ಅಥವಾ ಬನ್ ನಲ್ಲಿ ಕೂದಲನ್ನು ಕಟ್ಟಿಕೊಳ್ಳುವುದರಿಂದ, ಕೂದಲು ಕಡಿಮೆ ಉದುರುತ್ತದೆ.
    • ಕೂದಲಿಗೆ ವಾರಕ್ಕೆ ಎರಡು ಬಾರಿ ಎಣ್ಣೆ ಹಚ್ಚಿ. ಇದಕ್ಕಾಗಿ, ತೆಂಗಿನೆಣ್ಣೆಯಿಂದ ಸಾಸಿವೆ ಎಣ್ಣೆಯವರೆಗೆ, ಆಲಿವ್ ಎಣ್ಣೆ ಅಥವಾ ಬಾದಾಮಿ ಎಣ್ಣೆಯನ್ನು ಬಳಸಬಹುದು.
    • ಯಾವುದರ ಬಗ್ಗೆಯೂ ಹೆಚ್ಚು ಒತ್ತಡ ತೆಗೆದುಕೊಳ್ಳಬೇಡಿ.
    • ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ತೆಗೆದುಕೊಳ್ಳಿ.
    • ಜಂಕ್ ಫುಡ್ ಆದಷ್ಟು ದೂರಮಾಡಿ.
    • ದೇಹದಲ್ಲಿ ವಿಟಮಿನ್ ಡಿ ಕೊರತೆ ಉಂಟುಮಾಡಿಕೊಳ್ಳಬೇಡಿ.
English summary

Home Remedy to Stop Hair Fall and make it Thick and Long in Kannada

Here we talking about Home remedy to stop hair fall and make it thick and long in Kannada, read on
Story first published: Monday, October 4, 2021, 18:12 [IST]
X
Desktop Bottom Promotion