For Quick Alerts
ALLOW NOTIFICATIONS  
For Daily Alerts

ಕೂದಲು ಉದ್ದವಾಗಿ ಬೆಳೆಯಬೇಕೆ? ಈ ಸಿಂಪಲ್ ಟಿಪ್ಸ್ ಗಮನಿಸಿ

|

ಕೂದಲು ಉದ್ದವಾಗಿ ಬೆಳೆಸಬೇಕೆಂದು ಇಚ್ಚಿಸಿದ್ದೀರಾ? ಹಾಗಾದರೆ ಸ್ವಲ್ಪ ತಾಳ್ಮೆ ಹಾಗೂ ಹೆಚ್ಚಿನ ಆರೈಕೆ ಬೇಕಾಗುತ್ತದೆ. ಕೆಲವರು ಕೂದಲು ಉದ್ದ ಬೆಳೆಸಬೇಕೆಂದು ಇಚ್ಚಿಸಿರುತ್ತಾರೆ, ಆದರೆ ಸ್ವಲ್ಪ ಉದ್ದ ಬಂದ ಕೂದಲು ತಿಂಗಳುಗಳು ಕಳೆದರೂ ಹಾಗೇ ಇರುತ್ತದೆ.

Hair Hacks To Promote Faster Hair Growth

ದಿನ ಕೂದಲನ್ನು ಹಿಡಿದು ನೋಡುತ್ತೇವೆ, ನೋಡಿದಾಗ ಕೂದಲಿನ ಉದ್ದ ಹಾಗೇ ಇರುತ್ತದೆ ಹೊರತು ಕೂದಲೇನು ಉದ್ದ ಬೆಳೆದಿರುವುದಿಲ್ಲ. ಛೇ.. ಕೂದಲು ಉದ್ದ ಬೆಳೆಸೋಣ ಅಂದರೆ ಅದು ಬೆಳೆಯುತ್ತೇನೆ ಇಲ್ಲ ಏನು ಮಾಡಲಿ ಎಂದು ನೀವು ಆಲೋಚಿಸುತ್ತಿದ್ದರೆ ನೀವು ಮಾಡುತ್ತಿರುವ ಸಿಂಪಲ್ ಮಿಸ್ಟೇಕ್ಸ್‌ನಿಂದಾಗಿ ಕೂದಲು ಬೆಳೆಯುವುದು ಕಷ್ಟವಾಗಿರುತ್ತದೆ.

ಹೌದು ನಾವು ಎಷ್ಟೇ ಎಚ್ಚರಿಕೆ ವಹಿಸಿದರೂ ನಮಗೇ ಗೊತ್ತಿಲ್ಲದೆ ಕೂದಲಿನ ವಿಷಯದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ. ಇಲ್ಲಿ ಕೂದಲು ಉದ್ದವಾಗಿ ಬೆಳೆಸಬೇಕೆಂದು ಬಯಸುವವರಿಗೆ ಕೆಲವೊಂದು ಸಿಂಪಲ್ ಅಂಡ್‌ ಯೂಸ್‌ಫುಲ್ ಟಿಪ್ಸ್ ನೀಡಿದ್ದೇವೆ ನೋಡಿ.

1. ಕೂದಲನ್ನು ಟ್ರಿಮ್ ಮಾಡಿ

1. ಕೂದಲನ್ನು ಟ್ರಿಮ್ ಮಾಡಿ

ಕೂದಲನ್ನು ಉದ್ದ ಬೆಳೆಸಬೇಕೆಂದರೆ ಇವರೆನು ಟ್ರಿಮ್ ಮಾಡಲು ಹೇಳ್ತಾ ಇದ್ದಾರೆ ಎಮದು ಆಲೋಚಿಸುತ್ತಿದ್ದೀರಾ.. ಹೌದು ಕೂದಲು ಉದ್ದ ಬೆಳೆಯಬೇಕೆಂದರೆ ಅದರ ತುದಿ ಟ್ರಿಮ್ ಮಾಡಬೇಕು, ಇಲ್ಲದಿದ್ದರೆ ಕೂದಲಿನ ತುದಿ splitಅಂದರೆ ಕವಲೊಡೆಯುವುದು, ಇದರಿಂದಾಗಿ ಕೂದಲು ಉದ್ದ ಬೆಲೆಯುವುದೇ ಇಲ್ಲ.

2. ಸರಿಯಾದ ರೀತಿಯಲ್ಲಿ ಕೂದಲನ್ನು ತೊಳೆಯಿರಿ

2. ಸರಿಯಾದ ರೀತಿಯಲ್ಲಿ ಕೂದಲನ್ನು ತೊಳೆಯಿರಿ

ಕೂದಲು ಉದ್ದವಾಗಿ ಬೆಳೆಯಬೇಕೆಂದರೆ ಕೂದಲಿನ ಬುಡಕ್ಕೆ ಸರಿಯಾದ ಆರೈಕೆ ಅಗ್ಯತ. ಮೊದಲಿಗೆ ಆ್ಯಂಟಿ ಬ್ಯಾಕ್ಟಿರಿಯಾ ಶ್ಯಾಂಪೂ ಬಳಸಿ, ಇದು ನಿಮ್ಮ ತಲೆ ಬುಡವನ್ನು ಸ್ವಚ್ಛವಾಗಿ ಇಡುತ್ತದೆ, ತಲೆಯನ್ನು ತೊಳೆಯುವಾಗ ಯಾವುದೇ ಕೊಳೆಯಂಶ ನಿಲ್ಲದಂತೆ ತೊಳೆಯಿರಿ.

ಮತ್ತೊಂದು ವಿಷಯವೆಂದರೆ ತಲೆಯನ್ನು ಪ್ರತಿದಿನ ತೊಳೆಯಬೇಡಿ, ವಾರದಲ್ಲಿ 2-3 ಬಾರಿ ತೊಳೆದರೆ ಸಾಕು.

3. ಕಂಡಿಷನರ್ ಬಳಸಿ

3. ಕಂಡಿಷನರ್ ಬಳಸಿ

ಕೂದಲಿನ ಬುಡ ಬಲವಾಗಿರಬೇಕು, ಕೂದಲು ನೋಡಲು ಆಕರ್ಷಕವಾಗಿ ಕಾಣಬೇಕೆಂದರೆ ಕಂಡೀಷನರ್ ಬಳಸಿ, ಇದು ದೂಳು, ಕೊಳೆಯಿಂದ ಕೂದಲಿನ ರಕ್ಷಣೆ ಮಾಡುತ್ತದೆ, ಅಲ್ಲದೆ ಕೂದಲಿನ ಮಾಯಿಶ್ಚರೈಸರ್ ಕಾಪಾಡುತ್ತದೆ. ಕೆಮಿಕಲ್ ಇಲ್ಲದ ಕಂಡೀಷನರ್ ಬೇಕೆಂದರೆ ಮೊಸರು, ಮೊಟ್ಟೆ ಇವುಗಳನ್ನು ಬಳಸಬಹುದು, ಇದರಿಂದ ಕೂದಲಿನ ಬುಡಕ್ಕೆ ಬೇಕಾದ ಪ್ರೊಟೀನ್ ದೊರೆಯುತ್ತದೆ, ಕೂದಲು ಕೂಡ ಉದ್ದವಾಗಿ ಬೆಳೆಯುತ್ತದೆ.

4. ಒದ್ದೆ ಕೂದಲನ್ನು ಕಟ್ಟಬೇಡಿ

4. ಒದ್ದೆ ಕೂದಲನ್ನು ಕಟ್ಟಬೇಡಿ

ಬೆಳಗ್ಗೆ ಸ್ನಾನ ಮಾಡಿ ಕೂದಲು ಒಣಗಿರದಿದ್ದರೆ ಹಾಗೇ ಜಡೆ ಹಾಕಬೇಡಿ, ಇದರಿಂದ ಕೂದಲು ಹಾಳಾಗುವುದು, ಅಲ್ಲದೆ ಒಂದು ರೀತಿಯ ಕೆಟ್ಟ ವಾಸನೆ ಕೂಡ ಬೀರುವುದು, ಇನ್ನು ತಲೆ ಬುಡದಲ್ಲಿ ನೀರು ಹಾಗೇ ಇದ್ದರೆ ಕೂದಲಿನ ಬುಡ ಹಾಳಾಗುತ್ತದೆ, ಶಿಲೀಂಧ್ರ ಸಮಸ್ಯೆ ಉಂಟಾಗಿ ಕೂದಲು ಉದುರುವುದು. ಹಾಗಾಗಿ ಕೂದಲನ್ನು ತೊಳೆದ ಬಳಿಕ ಒಣಗಿಸಿ, ಹಾಗಂತ ಫ್ಯಾನ್ ಅಡಿಯಲ್ಲಿ ಅಥವಾ ಹೇರ್‌ ಬ್ಲೋಯರ್ ಬಳಸಿ ಒಣಗಿಸಬೇಡಿ, ಹಾಗೇ ಹರಡಿಬಿಟ್ಟು ರೂಮ್‌ನ ಉಷ್ಣತೆಗೆ ಒಣಗಿಸಿ.

 5. ವಾರಕ್ಕೊಮ್ಮೆ ಕೂದಲಿಗೆ ಎಣ್ಣೆ ಮಸಾಜ್ ಮಾಡಿ

5. ವಾರಕ್ಕೊಮ್ಮೆ ಕೂದಲಿಗೆ ಎಣ್ಣೆ ಮಸಾಜ್ ಮಾಡಿ

ಕೂದಲಿನ ಪೋಷಣೆಗೆ ಎಣ್ಣೆ ಮಸಾಜ್ ಅಗ್ಯತ. ಕೂದಲಿಗೆ ಎಣ್ಣೆ ಹಚ್ಚಿ, ಒಂದು ಟವಲ್‌ ಅನ್ನು ಬಿಸಿ ನೀರಿನಲ್ಲಿ ಅದ್ದಿ ಹಿಂಡಿ ಅದನ್ನು ತಲೆಗೆ ಸುತ್ತಿ, ಇದರಿಂದ ಕೂದಲಿನ ಬುಡ ಚೆನ್ನಾಗಿ ಎಣ್ಣೆ ಹೀರಿಕೊಳ್ಳುತ್ತದೆ, ನಂತರ ಮೈಲ್ಡ್ ಶ್ಯಾಂಪೂ ಹಚ್ಚಿ ತೊಳೆಯಿರಿ. ಹರಳೆಣ್ಣೆ, ತೆಂಗಿನೆಣ್ಣೆ ಹೀಗೆ ನಿಮಗೆ ಸೂಕ್ತವಾದ ಎಣ್ಣೆ ಹಚ್ಚಬೇಡಿ.

6. ಒದ್ದೆ ಕೂದಲನ್ನು ಬಾಚಬೇಡಿ

6. ಒದ್ದೆ ಕೂದಲನ್ನು ಬಾಚಬೇಡಿ

ಇನ್ನು ಒದ್ದೆ ಕೂದಲನ್ನು ಬಾಚಲೇಬಾರದು, ಕೆಲವರಿಗೆ ಈ ರೀತಿಯ ಅಭ್ಯಾಸವಿರುತ್ತದೆ. ಒದ್ದೆ ಕೂದಲನ್ನು ಬಾಚುವುದರಿಂದ ಕೂದಲು ಉದುರುವ ಸಮಸ್ಯೆ ಉಂಟಾಗುವುದು.

 7. ಬ್ಲೀಚ್ ಅಥವಾ ಹೇರ್ ಕಲರ್ ಹಚ್ಚಬೇಡಿ

7. ಬ್ಲೀಚ್ ಅಥವಾ ಹೇರ್ ಕಲರ್ ಹಚ್ಚಬೇಡಿ

ಬ್ಲೀಚ್ ಅಥವಾ ಹೇರ್‌ ಕಲರ್ ಕೂದಲು ನೋಡಲು ಸ್ಟೈಲಿಷ್ ಆಗಿ ಕಾಣುವಂತೆ ಮಾಡುವುದು, ಆದರೆ ಕೂದಲಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ಕೂದಲಿನ ಬುಡಕ್ಕೆ ಹಾನಿಯಾಗುವುದು, ಕೂದಲು ಹಾಳಾಗುವುದು. ಕೂದಲು ಉದ್ದ ಬೆಳೆಸಲು ಇಚ್ಚಿಸುವವರು ಮದರಂಗಿ ಗಿಡದ ಎಲೆಯನ್ನು ರುಬ್ಬಿ, ಅದಕ್ಕೆ ಬೀಟ್‌ ರೂಟ್‌ ರಸ ಸೇರಿಸಿ ಹಚ್ಚಿ, ಕೂದಲು ಕೆಂಚು ಬಣ್ಣದಲ್ಲಿ ಕಾಣುವಂತೆ ಮಾಡಬಹುದು.

8. ಬಿಸಿ ನೀರಿನ ಸ್ನಾನ ಮಾಡಬೇಡಿ

8. ಬಿಸಿ ನೀರಿನ ಸ್ನಾನ ಮಾಡಬೇಡಿ

ಯಾವತ್ತೂ ಕೂದಲಿಗೆ ನೀರು ಹಾಕುವಾಗ ಉಗುರು ಬೆಚ್ಚಗಿನ ನೀರು ಹಾಕಿ, ಮೈಗೆ ಹಾಕುವಷ್ಟು ಉಷ್ಣತೆಯಲ್ಲಿ ತಲೆಗೆ ನೀರು ಹಾಕಬೇಡಿ, ಇದರಿಂದ ಕೂದಲಿನ ಬುಡ ಹಾಳಾಗುವುದು. ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಕೂದಲಿನ ಬುಡ ಒಣಗುವುದು, ಇದು ಕೂದಲಿನ ಆರೋಗ್ಯ ಹಾಳು ಮಾಡುತ್ತದೆ.

ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು ನಿಮ್ಮ ಕೂದಲು ಉದ್ದವಾಗಿ ಬೆಳೆಯುವುದು.

English summary

Hair Hacks To Promote Faster Hair Growth

Listed here are some amazing hair hacks to promote faster hair growth and make this process rewarding for you. Let's go!
X
Desktop Bottom Promotion