Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಎಣ್ಣೆ ಬಳಸದೇ, ಕೂದಲನ್ನು ಮಾಯಿಶ್ಚರೈಸ್ ಮಾಡಲು ಇಲ್ಲಿದೆ ಟಿಪ್ಸ್‌ಗಳು
ನಮ್ಮ ಕೂದಲನ್ನು ತೇವಯುತಗೊಳಿಸಲು ಇರುವ ಪ್ರಾಥಮಿಕ ವಿಧಾನ ಅಂದ್ರೆ, ಎಣ್ಣೆ ಹಚ್ಚುವುದು. ಆದರೆ, ಕೆಲವು ಎಣ್ಣೆಗಳು ನೆತ್ತಿಯ ರಂಧ್ರಗಳನ್ನು ನಿರ್ಬಂಧಿಸಿ, ಪರೋಕ್ಷವಾಗಿ ಕೂದಲು ಉದುರುವಿಕೆ, ತಲೆಹೊಟ್ಟು ಮೊದಲಾದ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಜೊತೆಗೆ ಆ ಎಣ್ಣೆಯನ್ನು ತೆಗೆಯಲು, ಶಾಂಪೂ ಬಳಸಲೇಬೇಕು. ಈ ರಾಸಾಯನಿಕಯುಕ್ತ ಶಾಂಪೂ ಕೂದಲಿನ ಶುಷ್ಕತೆಗೆ ಕಾರಣವಾಗುವುದರಲ್ಲಿ ಎರಡು ಮಾತಿಲ್ಲ. ಇದೇ ಕಾರಣಕ್ಕೆ ಹೆಚ್ಚಿನವರು ಎಣ್ಣೆ ಹಚ್ಚಲು ಹಿಂಜರಿಯುವುದು.
ನಮ್ಮ ಕೂದಲನ್ನು ತೇವಯುತಗೊಳಿಸಲು ಇರುವ ಪ್ರಾಥಮಿಕ ವಿಧಾನ ಅಂದ್ರೆ, ಎಣ್ಣೆ ಹಚ್ಚುವುದು. ಆದರೆ, ಕೆಲವು ಎಣ್ಣೆಗಳು ನೆತ್ತಿಯ ರಂಧ್ರಗಳನ್ನು ನಿರ್ಬಂಧಿಸಿ, ಪರೋಕ್ಷವಾಗಿ ಕೂದಲು ಉದುರುವಿಕೆ, ತಲೆಹೊಟ್ಟು ಮೊದಲಾದ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಜೊತೆಗೆ ಆ ಎಣ್ಣೆಯನ್ನು ತೆಗೆಯಲು, ಶಾಂಪೂ ಬಳಸಲೇಬೇಕು. ಈ ರಾಸಾಯನಿಕಯುಕ್ತ ಶಾಂಪೂ ಕೂದಲಿನ ಶುಷ್ಕತೆಗೆ ಕಾರಣವಾಗುವುದರಲ್ಲಿ ಎರಡು ಮಾತಿಲ್ಲ. ಇದೇ ಕಾರಣಕ್ಕೆ ಹೆಚ್ಚಿನವರು ಎಣ್ಣೆ ಹಚ್ಚಲು ಹಿಂಜರಿಯುವುದು.
ಆದ್ದರಿಂದ ನೀವೇನಾದರೂ ಎಣ್ಣೆ ಬಳಸದೇ, ನಿಮ್ಮ ಕೂದಲನ್ನು ತೇವಗೊಳಿಸಬೇಕೆಂದು ಬಯಸಿದರೆ, ಈ ಕೆಳಗಿನ ಸರಳ ಉಪಾಯಗಳನ್ನು ಪ್ರಯತ್ನಿಸಬಹುದು.
ಕೂದಲನ್ನು ತೇವಗೊಳಿಸಲು ಎಣ್ಣೆಯ ಬದಲು ಬಳಸಬಹುದಾದ ಸರಳ ಉಪಾಯಗಳನ್ನು ಈ ಕೆಳಗೆ ನೀಡಲಾಗಿದೆ:

1. ಜೇನುತುಪ್ಪ:
ಜೇನುತುಪ್ಪವು ನಿಮ್ಮ ಕೂದಲನ್ನು ತೇವಗೊಳಿಸುವ ಮಾಸ್ಟರ್ ಬ್ಲಾಸ್ಟರ್ ಗುಣಗಳನ್ನು ಹೊಂದಿದೆ. ಇದು ಎಮೋಲಿಯಂಟ್ ಮತ್ತು ಹ್ಯೂಮೆಕ್ಟಂಟ್ ಗುಣಗಳನ್ನು ಹೊಂದಿದ್ದು, ಕೂದಲನ್ನು ಚೆನ್ನಾಗಿ ಮಾಯಿಶ್ಚರೈಸ್ ಮಾಡುತ್ತದೆ. ಇದು ಕೂದಲಿಗೆ ಹೊಳಪನ್ನು ಸೇರಿಸುವುದಲ್ಲೇ, ಮೃದುವಾಗಿಸುತ್ತದೆ. ನಿಮ್ಮ ಕೂದಲಿನ ಹೊಳಪನ್ನು ಉಳಿಸಿಕೊಳ್ಳಲು ಬಯಸಿದರೆ, ಅದನ್ನು ಜೇನುತುಪ್ಪದೊಂದಿಗೆ ತೇವಗೊಳಿಸಿ. ಇದರಿಂದ ಒಣಕೂದಲಿನ ಸಮಸ್ಯೆ ದೂರವಾಗುವುದು.

2. ಮೊಸರು:
ಮೊಸರಿನಲ್ಲಿರುವ ಆರೋಗ್ಯಕರ ಬ್ಯಾಕ್ಟೀರಿಯಾಗಳು ನೆತ್ತಿಯ ಒಳ್ಳೆಯದು. ಇದು ಕೂದಲನ್ನು ಬೇರುಗಳಿಂದ ತೇವಗೊಳಿಸಿ, ಬಲಪಡಿಸುತ್ತದೆ. ನಿಮಗೆ ಉದ್ದನೆಯ ಕೂದಲು ಬೇಕಿದ್ದರೆ, ಕೂದಲು ಉದುರುವುದನ್ನು ತಡೆಯಲು ಮೊಸರು ಅತ್ಯಂತ ನೈಸರ್ಗಿಕ ಪರಿಹಾರವಾಗಿದೆ. ಇದು ಒಣ ಕೂದಲನ್ನು ಪೋಷಿಸಿ, ನೆತ್ತಿಯನ್ನು ಹೈಡ್ರೇಟ್ ಆಗಿರಿಸುತ್ತದೆ. ಈ ನೈಸರ್ಗಿಕ ಹೇರ್ ಮಾಸ್ಕ್ ಪರಿಪೂರ್ಣ ತೈಲ ಬದಲಿಯಾಗಿದೆ.

3. ಮೊಟ್ಟೆ:
ಮೊಟ್ಟೆಗಳು ಕೂದಲಿಗೆ ಸೂಪರ್ ಫುಡ್. ಅವು ವಿಟಮಿನ್, ಫೋಲೇಟ್, ಬಯೋಟಿನ್ ಮತ್ತು ಆರೋಗ್ಯಕರ ಕೂದಲಿಗೆ ಬೇಕಾದ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಇದು ನೆತ್ತಿಯನ್ನು ಆಳವಾಗಿ ಪೋಷಿಸಿ, ಕೂದಲು ಒಡೆಯುವುದನ್ನು ಮತ್ತು ಉದುರುವುದನ್ನು ತಡೆಯುತ್ತದೆ. ನಿಮ್ಮ ಕೂದಲನ್ನು ತೊಳೆಯುವಾಗ, ಶಾಂಪೂವಿನಲ್ಲಿ ಮೊಟ್ಟೆಗಳಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಕೂದಲಿನ ಗುಣಮಟ್ಟವನ್ನು ಹೆಚ್ಚಿಸಲು ಮೊಟ್ಟೆಗಳನ್ನು ಶಿಫಾರಸು ಮಾಡಲಾಗುವುದು.

4. ಅವಕಾಡೊ:
ಅವಕಾಡೊವು ಬಯೋಟಿನ್ ಮತ್ತು ವಿಟಮಿನ್ ಹೊಂದಿರುವ ಒಂದು ಹಣ್ಣಾಗಿದ್ದು ಅದು ಕೂದಲಿನ ಉತ್ತಮ ಗುಣಮಟ್ಟಕ್ಕೆ ಅಗತ್ಯವಾಗಿದೆ. ಈ ಅವಕಾಡೊಗಳ ಬಳಸಿ ಹೇರ್ ಮಾಸ್ಕ್ ತಯಾರಿಸಿ ಮತ್ತು ಮೃದುತ್ವವನ್ನು ಅನುಭವಿಸಿ. ಇದರ ಜೊತೆಗೆ, ಅವಕಾಡೊಗಳು ಕೂದಲು ಸೀಳಾಗುವ ಸಮಸ್ಯೆಗಳನ್ನು ತಡೆಯುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

5. ಬಾಳೆಹಣ್ಣು:
ನಿಮ್ಮ ಕೂದಲನ್ನು ದಪ್ಪ ಮತ್ತು ಬಲವಾಗಿ ಮಾಡಲು ಬಯಸುವಿರಾ? ಹಾಗಾದರೆ, ಅವುಗಳನ್ನು ಬಾಳೆಹಣ್ಣಿನಿಂದ ಮುಚ್ಚಿ. ಬಾಳೆಹಣ್ಣಿನಲ್ಲಿ ಸಿಲಿಕಾ ಮತ್ತು ಆಂಟಿಮೈಕ್ರೊಬಿಯಲ್ ಗುಣಗಳಿವೆ. ಈ ಎರಡು ಅಂಶಗಳು ತಲೆಹೊಟ್ಟು ಕಡಿಮೆ ಮಾಡಲು ಮತ್ತು ನೆತ್ತಿಯನ್ನು ಒಣಗಿಸಲು ಸಹಾಯ ಮಾಡುತ್ತದೆ.
ಗಮನಿಸಿ: ಕೂದಲಿನ ಗುಣಮಟ್ಟ ಮತ್ತು ವಿನ್ಯಾಸವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಕೆಲವರು ಕೂದಲಿಗೆ ಎಣ್ಣೆ ಹಚ್ಚುವುದನ್ನ ಇಷ್ಟಪಡುತ್ತಾರೆ ಆದರೆ ಅವರಲ್ಲಿ ಒಂದೆರಡು ಜನರು ಎಣ್ಣೆ ಹಚ್ಚಿದ ನಂತರ ಕೂದಲಿನ ಸಮಸ್ಯೆಗೆ ಒಳಗಾಗುತ್ತಾರೆ. ಆದ್ದರಿಂದ ಕೂದಲಿನ ಎಣ್ಣೆಗಳಿಗೆ ವಿದಾಯ ಹೇಳಿ ಮತ್ತು ನಿಮ್ಮ ದೈನಂದಿನ ಜೀವನದಲ್ಲಿ ಈ ನೈಸರ್ಗಿಕ ತಂತ್ರಗಳನ್ನು ಅನ್ವಯಿಸಿ.



Click it and Unblock the Notifications