For Quick Alerts
ALLOW NOTIFICATIONS  
For Daily Alerts

ಮೃದು ಹಾಗೂ ಸಿಕ್ಕುರಹಿತ ಕೇಶರಾಶಿಗಾಗಿ ಇವುಗಳಿಂದ ಕೂದಲು ತೊಳೆಯಿರಿ

|

ವಾತಾವರಣದಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಜೊತೆಗೆ, ಕೂದಲಿಗೆ ಬಳಸುವ ರಾಸಾಯನಿಕಯಕ್ತ ಉತ್ಪನ್ನಗಳು, ಕೂದಲನ್ನು ಹಾನಿಗೊಳಿಸುತ್ತದೆ. ಈ ರೀತಿಯ ಸಮಸ್ಯೆಗಳ ವಿರುದ್ಧ ಹೋರಾಡಲು, ಕೂದಲನ್ನು ಪೋಷಿಸುವ ಮತ್ತು ಅವುಗಳನ್ನು ಹೊಳೆಯುವಂತೆ ಮಾಡಲು ನೈಸರ್ಗಿಕ ಪದಾರ್ಥಗಳನ್ನು ಬಳಸಬೇಕು. ಶಾಂಪೂ ಮಾಡಿದ ನಂತರ ಕೂದಲನ್ನು ನೈಸರ್ಗಿಕ ಪದಾರ್ಥಗಳಿಂದ ತೊಳೆಯುವುದರಿಂದ ಕೇಶ ರಾಶಿ ಮೃದು ಹಾಗೂ ಸೊಗಸಾಗಿ ಇರುತ್ತದೆ. ಹಾಗಾದರೆ, ಈ ಹೇರ್ ರಿನ್ಸ್ ಅನ್ನು ಮನೆಯಲ್ಲಿಯೇ ಹೇಗೆ ಮಾಡಬಹುದು ಎಂದು ನೀವು ತಿಳಿದುಕೊಳ್ಳಲು ಈ ಕೆಳಗೆ ನೋಡಿ.

ಮೃದುವಾದ ಕೂದಲನ್ನು ಪಡೆಯಲು ನೈಸರ್ಗಿಕವಾಗಿ ತಯಾರಿಸಬಹುದಾದ ಹೇರ್ ರಿನ್ಸ್ ಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

DIY ಹೇರ್ ರಿನ್ಸ್ ಅನ್ನು ಹೇಗೆ ಬಳಸುವುದು?:

DIY ಹೇರ್ ರಿನ್ಸ್ ಅನ್ನು ಹೇಗೆ ಬಳಸುವುದು?:

ನಿಮ್ಮ ಕೂದಲನ್ನು ಶಾಂಪೂ ಮಾಡಿ, ಅವುಗಳನ್ನು ಕಂಡೀಶನ್ ಹಚ್ಚಿ, ನಂತರ ನಿಮ್ಮ ಕೂದಲನ್ನು ಹೇರ್ ರಿನ್ಸ್ ನಿಂದ ತೊಳೆಯಿರಿ. ಇದು ನಿಮ್ಮ ಕೂದಲನ್ನು ಕಡಿಮೆ ಉದುರುವುದನ್ನು ತಡೆಗಟ್ಟಿ, ತಕ್ಷಣ ಮೃದುವಾಗಿಸುತ್ತದೆ. ಜೊತೆಗೆ, ಕೆಲವು ಹೇರ್ ರಿನ್ಸ್ ಗಳು ನಿಮ್ಮ ನೆತ್ತಿಯ ಪಿಹೆಚ್ ಮಟ್ಟವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಕೂದಲ ಕಿರುಚೀಲಗಳನ್ನು ಗಟ್ಟಿಮಾಡಿ, ನತ್ತಿಯನ್ನು ಸ್ವಚ್ಛಗೊಳಿಸುತ್ತದೆ.

ಟೀ ಹೇರ್ ರಿನ್ಸ್:

ಟೀ ಹೇರ್ ರಿನ್ಸ್:

ಗ್ರೀನ್, ಬ್ಲಾಕ್ ಅಥವಾ ಇನ್ನಾವುದೇ ಟೀಗಳನ್ನು ನಿಮ್ಮ ಹೇರ್ ರಿನ್ಸ್ ಆಗಿ ಬಳಸಬಹುದು ಚಹಾವು ಅತ್ಯಂತ ಶಕ್ತಿಯುತವಾದ ಪೋಷಕಾಂಶಗಳನ್ನು ಹೊಂದಿರುವ ಕಾರಣ, ನೆತ್ತಿಯ ತೇವಾಂಶವನ್ನು ಸುಗಮಗೊಳಿಸಿ, ಕೂದಲನ್ನು ಮೃದು ಮಾಡಲು ಹಾಗೂ ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದಕ್ಕಾಗಿ 2-3 ಟೀ ಬ್ಯಾಗ್‌ಗಳನ್ನು ಬೆಚ್ಚಗಿನ ನೀರಿನಲ್ಲಿ ಅದ್ದಿ, 2 ಗಂಟೆಗಳ ಕಾಲ ಇರಿಸಿ. ಈ ನೀರಿನಿಂದ ನಿಮ್ಮ ಕೂದಲನ್ನು ತೊಳೆಯಿರಿ. ಬ್ಲಾಕ್ ಟೀ, ಕ್ಯಾಮೊಮೈಲ್ ಚಹಾ, ಗ್ರೀನ್ ಟೀ ಅಥವಾ ಮಲ್ಲಿಗೆ ಚಹಾ ಉತ್ತಮ ಆಯ್ಕೆಗಳಾಗಿವೆ.

ಅಲೋವೆರಾ ಹೇರ್ ರಿನ್ಸ್:

ಅಲೋವೆರಾ ಹೇರ್ ರಿನ್ಸ್:

ಈ ಹೇರ್ ರಿನ್ಸ್ ತಯಾರಿಸಲು ನಿಮಗೆ ಅಲೋವೆರಾ ಜೆಲ್ 2 ಚಮಚ ಮತ್ತು 2 ಕಪ್ ಉಗುರು ಬೆಚ್ಚಗಿನ ನೀರು ಬೇಕಾಗುತ್ತದೆ. ಅಲೋವೆರಾ ಜೆಲ್ ಅನ್ನು ನೀರಿನೊಂದಿಗೆ ಚೆನ್ನಾಗಿ ಬೆರೆಸಿ. ಕಂಡೀಷನರ್ ಹಚ್ಚಿದ ನಂತರ ಈ ಅಲೋವೆರಾ ಮಿಶ್ರಣದಿಂದ ನಿಮ್ಮ ಕೂದಲನ್ನು ತೊಳೆಯಿರಿ. ಇದರಿಂದ ನಿಮ್ಮ ನೆತ್ತಿಯನ್ನು ಹೈಡ್ರೇಟ್ ಆಗುವುದಲ್ಲದೇ, ಕೂದಲನ್ನು ಮತ್ತಷ್ಟು ನೇರವಾಗಿಸುತ್ತದೆ ಮತ್ತು ಮೃದುಗೊಳಿಸುತ್ತದೆ. ಅಲೋವೆರಾ ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದ್ದು, ಕೂದಲಿನಲ್ಲಿರುವ ಕೊಳಕು, ಬ್ಯಾಕ್ಟೀರಿಯಾ ತೆಗೆದು, ನೆತ್ತಿಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುವುದು. ಇದನ್ನು ವಾರಕ್ಕೊಮ್ಮೆ ಈ ಬಳಸಿ.

ಅಡುಗೆ ಸೋಡಾ ಹೇರ್ ರಿನ್ಸ್:

ಅಡುಗೆ ಸೋಡಾ ಹೇರ್ ರಿನ್ಸ್:

ಅಡುಗೆ ಸೋಡಾ ಕೂಡ ಕೂದಲಿಗೆ ಹೆಚ್ಚಿನ ಪ್ರಯೋಜನಕಾರಿಯಾಗಿದೆ. ಈ ಹೇರ್ ರಿನ್ಸ್ ತಯಾರಿಸಲು 1 ಕಪ್ ನೀರಿನೊಂದಿಗೆ 1/2 ಕಪ್ ಅಡಿಗೆ ಸೋಡಾದ ಬೆರೆಸಿ ಪೆಸ್ಟ್ ತಯಾರಿಸಿ. ಈ ಪೇಸ್ಟ್ ದಪ್ಪವಾಗಿರುವುದರಿಂದ, ಕಂಡೀಷನಿಂಗ್ ಮಾಡುವ ಮೊದಲು ಇದನ್ನು ನಿಮ್ಮ ನೆತ್ತಿಯ ಮೇಲೆ ಉಜ್ಜಿಕೊಳ್ಳಿ. ಇದರಿಂದ ನಿಮ್ಮ ನೆತ್ತಿ ಮತ್ತು ಕೂದಲಿನಿಂದ ಕೊಳೆಯನ್ನು ತೆಗೆದುಹಾಕಬಹುದು ಜೊತೆಗೆ ನೆತ್ತಿಯ ಎಣ್ಣೆಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಚೆನ್ನಾಗಿ ಮಸಾಜ್ ಮಾಡಿದ ನಂತರ, ಅದನ್ನು ತೊಳೆಯಿರಿ. ಈಗ ನಿಮ್ಮ ಕೂದಲು ಮೃದು ಮತ್ತು ರೇಷ್ಮೆಯಂತೆ ಕಾಣುತ್ತದೆ.

ನಿಂಬೆ ರಸ ಹೇರ್ ರಿನ್ಸ್:

ನಿಂಬೆ ರಸ ಹೇರ್ ರಿನ್ಸ್:

ತ್ವರಿತ ಕೂದಲು ಬೆಳವಣಿಗೆಯನ್ನು ಉತ್ತೇಜಿಸಲು ಈ ಹೇರ್ ರಿನ್ಸ್ ಅದ್ಭುತವಾಗಿದೆ. ಇದಕ್ಕಾಗಿ ನಿಮಗೆ ಬೇಕಾಗಿರುವುದು 1 ಕಪ್ ನಿಂಬೆ ರಸ 2 ಕಪ್ ನೀರು. ಈ ಎರಡು ದ್ರವಗಳನ್ನು ಮಿಶ್ರಣ ಮಾಡಿ ಮತ್ತು ನಿಮ್ಮ ಕೂದಲನ್ನು ದ್ರಾವಣದಿಂದ ತೊಳೆಯಿರಿ. ನಿಂಬೆ ರಸವು ನಮ್ಮ ದೇಹದಲ್ಲಿ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಇದು ಕೂದಲು ವೇಗವಾಗಿ ಬೆಳೆಯುವಂತೆ ಮಾಡುತ್ತದೆ. ಇದಲ್ಲದೆ, ಈ ಹೇರ್ ರಿನ್ಸ್ ನೆತ್ತಿಯಲ್ಲಿ ತೈಲ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

English summary

DIY Hair Rinses For Soft And Manageable Hair in Kannada

Hair rinses are concentrated with natural ingredients that boost hair health. Therefore, try these DIY hair rinses at home. Here we talking about DIY Hair Rinses For Soft And Manageable Hair in Kannada, read on
Story first published: Tuesday, September 7, 2021, 12:06 [IST]
X
Desktop Bottom Promotion