For Quick Alerts
ALLOW NOTIFICATIONS  
For Daily Alerts

ಸಾಮಾನ್ಯವಾಗಿ ಈ 6 ತಪ್ಪುಗಳಿಂದ ಕೂದಲು ಉದುರುವುದು

|

ಕೂದಲು ಆಕರ್ಷಕವಾಗಿದ್ದರೆ ಅದು ಮುಖದ ಅಂದ ಹೆಚ್ಚಿಸುವುದು. ಕೂದಲು ಚೆನ್ನಾಗಿ ಕಾಣಬೇಕು, ಸೊಂಪಾಗಿ ಬೆಳೆಯಬೇಕೆಂದು ಅದರ ಆರೈಕೆ ಕಡೆ ತುಂಬಾ ಕಾಳಜಿ ವಹಿಸುತ್ತೆವೆ.ಆದರೆ ಕೆಲವೊಮ್ಮೆ ಕೂದಲು ಆಕರ್ಷಕವಾಗಿ ಕಾಣಬೇಕೆಂದು ನಾವು ಮಾಡುವ ಹೇರ್‌ ಸ್ಟೈಲ್, ನಮಗೆ ಗೊತ್ತಿಲ್ಲದೆ ನಾವು ಮಾಡುವ ತಪ್ಪುಗಳು ಕೂದಲಿನ ಆರೋಗ್ಯ ಹಾಳು ಮಾಡಿ ಕೂದಲು ಒರಟಾಗುವುದು, ಕೂದಲು ಉದುರುವುದು ಮುಂತಾದ ಸಮಸ್ಯೆ ಉಂಟು ಮಾಡುತ್ತದೆ.

6 Common Mistakes That Cause Hair Fall | Boldsky Kannada

ನಾವು ಮಾಡುವ ಸಣ್ಣ ತಪ್ಪುಗಳ ಅರಿವು ನಮಗೆ ಉಂಟಾಗಿರುವುದಿಲ್ಲ, ಬೇರೆ ಯಾವುದೋ ಕಾರಣಕ್ಕೆ ಕೂದಲು ಉದುರುತ್ತಿದೆ ಎಂದು ಭಾವಿಸಿ ತುಂಬಾ ಟೆನ್ಷನ್‌ ಮಾಡಿಕೊಂಡು ಕೂದಲು ಉದುರುವುದನ್ನು ತಡೆಗಟ್ಟಲು ಏನು ಮಾಡಬೇಕೆಂದು ಪರಿಹಾರಕ್ಕಾಗಿ ಹುಡುಕುತ್ತೇವೆ. ನಿಮ್ಮ ಕೂದಲು ಉದುರುತ್ತಿದ್ದರೆ, ಇಲ್ಲಾ ಒರಟಾಗುತ್ತಿದ್ದರೆ ಕೂದಲಿನ ಅಂದಕ್ಕಾಗಿ ನೀವು ಈ ತಪ್ಪುಗಳನ್ನು ಮಾಡುತ್ತಿರುವಿರಾ? ಎಂದು ಗಮನಿಸುವುದು ಒಳ್ಳೆಯದು.

Reason For Hair Fall


ಇಲ್ಲಿ ನಾವು ಸಾಮಾನ್ಯವಾಗಿ ಮಾಡುವ 6 ತಪ್ಪುಗಳ ಬಗ್ಗೆ ಹೇಳಿದ್ದೇವೆ, ಈ ತಪ್ಪುಗಳನ್ನು ನೀವೂ ಮಾಡುತ್ತಿದ್ದರೆ ಇಂದೇ ಅದನ್ನ ಸರಿಪಡಿಸಿ ನಿಮ್ಮ ಕೂದಲಿನ ರಕ್ಷಣೆ ಮಾಡಿ.

ಒದ್ದೆಕೂದಲಿಗೆ ಹೀಗೆ ಮಾಡಬೇಡಿ

ಒದ್ದೆಕೂದಲಿಗೆ ಹೀಗೆ ಮಾಡಬೇಡಿ

ಒದ್ದೆ ಕೂದಲನ್ನು ಬಾಚಿ ಕಟ್ಟುವ ಅಭ್ಯಾಸ ಕೆಲವರಲ್ಲಿರುತ್ತದೆ. ಆದರೆ ಈ ರೀತಿ ಮಾಡುವುದರಿಂದ ಕೂದಲು ಹಾಳಾಗುತ್ತದೆ. ಕೂದಲು ಒದ್ದೆಯಾಗಿದ್ದಾಗ ಅಷ್ಟು ಗಟ್ಟಿಯಾಗಿ ಇರುವುದಿಲ್ಲ. ಆದ್ದರಿಂದ ಒದ್ದೆ ಕೂದಲನ್ನು ಬಾಚಿದಾಗ ಕವಲೊಡೆಯುವುದು, ಉದುರುವುದು ಮುಂತಾದ ಸಮಸ್ಯೆ ಉಂಟಾಗುವುದು. ಕೂದಲು ಒದ್ದೆ ಇರುವಾಗ ಬಾಚುವ ಬದಲು ಕೈ ಬೆರಳಿನಿಂದ ಕೂದಲಿನ ಸಿಕ್ಕು ಬಿಡಿಸಿ. ಇನ್ನು ಒದ್ದೆ ಕೂದಲನ್ನು ಕಟ್ಟಬೇಡಿ, ಇದರಿಂದ ಕೂಡ ಕೂದಲು ಹಾಳಾಗುತ್ತದೆ.

ಇನ್ನು ಕೆಲವರು ಒದ್ದೆ ಕೂದಲು ಬೇಗನೆ ಒಣಗಲಿ ಎಂದು ಫ್ಯಾನ್ ಗಾಳಿಯಲ್ಲಿ ಕೂದಲು ಒಣಗಿಸುವುದು, ಹೇರ್‌ ಡ್ರೈಯರ್ ಬಳಸುವುದು ಮಾಡುತ್ತಾರೆ. ಹೀಗೆ ಮಾಡುವುದು ಕೂಡ ಕೂದಲಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಒದ್ದೆ ಕೂದಲಿಗೆ ಹೇರ್‌ ಡ್ರೈಯರ್ ಬಳಸಿದರೆ ಕೂದಲು ಉದುರುವ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಕೂದಲನ್ನು ಹರಡಿ ಬಿಟ್ಟು ಒಣಗಿಸಿ.

ಕೇಶವಿನ್ಯಾಸಕ್ಕೆ ಬಿಸಿಯಾದ ಪರಿಕರಗಳನ್ನು ಬಳಸುವುದು

ಕೇಶವಿನ್ಯಾಸಕ್ಕೆ ಬಿಸಿಯಾದ ಪರಿಕರಗಳನ್ನು ಬಳಸುವುದು

ಬ್ಲೋ ಡ್ರೈಯರ್, ಐರನ್, ಹೇರ್‌ ಸ್ಟ್ರೈಟ್ನಿಂಗ್ ಇವೆಲ್ಲಾ ಕರೆಂಟ್‌ ಬಳಸಿ ಮಾಡುವ ಕೂದಲಿನ ಪರಿಕರಗಳು. ಇದರ ಬಿಸಿಯನ್ನು 185 ಡಿಗ್ರಿ ಉಷ್ಣತೆಗೆ ಇಟ್ಟರೆ ಕೂದಲು ಹಾಳಾಗುವುದನ್ನು ಸ್ವಲ್ಪ ತಡೆಗಟ್ಟಬಹುದು. ಅಧಿಕ ಉಷ್ಣತೆಯಲ್ಲಿ ಇಟ್ಟು ಬಳಸಿದರೆ ಕೂದಲು ಆ ಕ್ಷಣಕ್ಕೆ ನೀವು ಬಯಸಿದ ರೀತಿಯಲ್ಲಿ ಆಕರ್ಷಕವಾಗಿ ಕಾಣಬಹುದು. ಆದರೆ ಕ್ರಮೇಣ ಕೂದಲು ಮಂಕಾಗುವುದು, ಕೂದಲು ಉದುರುವುದು ಕಂಡು ಬರುವುದು. ಆದ್ದರಿಂದ ಸಲೂನ್, ಸ್ಪಾ, ಬ್ಯೂಟಿ ಪಾರ್ಲರ್‌ಗೆ ಹೋದಾಗ ಕೂಡ ಕಡಿಮೆ ಉಷ್ಣತೆಯಲ್ಲಿ ಇಟ್ಟು ನಿಮ್ಮ ಕೂದಲನ್ನು ಸೆಟ್‌ ಮಾಡಲು ಹೇಳಿ.

ಕೂದಲಿಗೆ ಎಣ್ಣೆ ಹಚ್ಚಿ, ಬುಡಕ್ಕೆ ಹಚ್ಚದೇ ಇರುವುದು

ಕೂದಲಿಗೆ ಎಣ್ಣೆ ಹಚ್ಚಿ, ಬುಡಕ್ಕೆ ಹಚ್ಚದೇ ಇರುವುದು

ಕೆಲವರು ಎಣ್ಣೆ ಮಸಾಜ್ ಮಾಡುವಾಗ ಬರೀ ಕೂದಲಿಗೆ ಮಾತ್ರ ಹಚ್ಚಿ ಕೂದಲಿನ ಬುಡಕ್ಕೆ ಹಚ್ಚುವುದೇ ಇಲ್ಲ. ಹೀಗೆ ಎಣ್ಣೆ ಹಚ್ಚುವುದು ತಪ್ಪಾದ ವಿಧಾನ. ನೀವು ಎಣ್ಣೆ ಹಚ್ಚಿ ಕೂದಲಿನ ಆರೈಕೆ ಮಾಡಬಯಸುವುದಾದರೆ ಎಣ್ಣೆಯನ್ನು ಕೂದಲಿನ ಬುಡಕ್ಕೆ ಹಚ್ಚಿ ಮಸಾಜ್‌ ಮಾಡಿ. ಇದರಿಂದ ಕೂದಲಿನ ಬುಡದಲ್ಲಿ ರಕ್ತ ಸಂಚಾರ ಚೆನ್ನಾಗಿ ಅಗಿ ಕೂದಲಿನ ಬುಡ ಗಟ್ಟಿಯಾಗುವುದು.

ಕೂದಲಿನ ಬುಡಕ್ಕೆ ಎಣ್ಣೆ ಹಚ್ಚಿ ಮಸಾಜ್‌ ಮಾಡುವುದರಿಂದ ಸಿಗುವ ಮತ್ತೊಂದು ಪ್ರಯೋಜನವೆಂದರೆ ತಲೆಹೊಟ್ಟಿನ ಸಮಸ್ಯೆ ಇರುವುದಿಲ್ಲ. ತಲೆ ಬಾಚುವಾಗ ಕೂಡ ಕೂದಲಿನ ಬುಡಕ್ಕೆ ತಾಗುವಂತೆ ಮೆಲ್ಲನೆ ಬಾಚಿ, ಇದರಿಂದ ರಕ್ತ ಸಂಚಾರ ಚೆನ್ನಾಗಿ ಆಗಿ ಕೂದಲು ಮಂದವಾಗಿ ಬೆಳೆಯುವುದು.

ಬಿಸಿ ನೀರಿನಲ್ಲಿ ತಲೆಸ್ನಾನ

ಬಿಸಿ ನೀರಿನಲ್ಲಿ ತಲೆಸ್ನಾನ

ಬಿಸಿ ನೀರಿನಲ್ಲಿ ಮೈ ಸ್ನಾನ ಮಾಡಿದರೆ ಹಗುರವೆನಿಸುವುದು, ಅದೇ ತಲೆಗೆ ಬಿಸಿ ನೀರು ಹಾಕುವ ಅಭ್ಯಾಸವಿದ್ದರೆ ಅದನ್ನು ಇಂದೇ ನಿಲ್ಲಿಸಿ. ಏಕೆಂದರೆ ತಲೆಗೆ ಬಿಸಿ ನೀರಿನ ಸ್ನಾನ ಕೂದಲಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಇದು ಕೂದಲಿನ ಬುಡದಲ್ಲಿರುವ ಎಣ್ಣೆಯಂಶ ತೆಗೆದು ಒಣಗಿಸುತ್ತದೆ, ಇದರಿಂದ ಕೂದಲು ಬಲಹೀನವಾಗುತ್ತದೆ. ಚಳಿಗಾಲ, ಮಳೆಗಾಲದಲ್ಲಿ ಬೇಕಾದರೆ ಸ್ವಲ್ಪ ಬೆಚ್ಚಗಿನ ನೀರು ತಲೆಗೆ ಹಾಕಬಹುದು.

ಕೂದಲಿನ ಪರಿಕರಗಳ ಶುಚಿತ್ವಕ್ಕೆ ಗಮನ ನೀಡದಿರುವುದು

ಕೂದಲಿನ ಪರಿಕರಗಳ ಶುಚಿತ್ವಕ್ಕೆ ಗಮನ ನೀಡದಿರುವುದು

ಬಾಚಣಿಕೆ, ಫ್ಲ್ಯಾಟ್‌ ಐರನ್, ಕರ್ಲಿಂಗ್‌ ಟಾಂಗ್ ಇವುಗಳನ್ನು ಶುಚಿಯಾಗಿಟ್ಟುಕೊಳ್ಳದಿದ್ದರೆ ಇದರಿಂದ ಕೂಡ ಕೂದಲು ಉದುರುವ ಸಮಸ್ಯೆ ಬರುತ್ತದೆ. ಶುಚಿಯಾಗಿಡದ ವಸ್ತುಗಳಲ್ಲಿ ತಲೆ ಕೂದಲು ಆರೈಕೆ ಮಾಡಿದರೆ ಆ ಬ್ಯಾಕ್ಟಿರಿಯಾಗಳು ತಲೆಯನ್ನು ಸೇರಿ, ತಲೆ ತುರಿಕೆ, ಕೂದಲು ಉದುರುವುದು ಮುಂತಾದ ಸಮಸ್ಯೆ ಉಂಟು ಮಾಡುತ್ತದೆ.

ಇನ್ನು ಒಬ್ಬರು ಬಳಸಿದ ಬಾಚಣಿಕೆ ಮತ್ತೊಬ್ಬರು ಬಳಸಬೇಡಿ. ಪ್ರತ್ಯೇಕವಾದ ಬಾಚಣಿಕೆ ಬಳಸುವುದು ಒಳ್ಳೆಯದು.

 ಮಲಗುವಾಗ ಕೂದಲನ್ನು ಬಿಗಿಯಾಗಿ ಕಟ್ಟುವುದು

ಮಲಗುವಾಗ ಕೂದಲನ್ನು ಬಿಗಿಯಾಗಿ ಕಟ್ಟುವುದು

ಮಲಗುವಾಗ ಕೂದಲನ್ನು ಬಿಗಿಯಾಗಿ ಕಟ್ಟಿ ಮಲಗುವ ಅಭ್ಯಾಸ ಹಲವರಲ್ಲಿರುತ್ತದೆ. ಕೂದಲನ್ನು ಹರಡಿ ಬಿಟ್ಟರೆ ಸಿಕ್ಕಾಗುತ್ತದೆ ಎಂದು ಬಿಗಿಯಾಗಿ ಕಟ್ಟುತ್ತಾರೆ. ಆದರೆ ಕೂದಲನ್ನು ಬಿಗಿಯಾಗಿ ಕಟ್ಟುವುದು ಒಳ್ಳೆಯದಲ್ಲ. ಜಡೆ ಹಾಕಿ ಮಲಗುವುದಾದರೆ ಸಡಿಲವಾಗಿ ಜಡೆ ಹಾಕಿ.

English summary

Common Mistake To Cause Hair Fall

If you tense about hair fall check out these common mistake you might also doing. To get healthy hair one must stop doing these common hair mistakes, To Know what are those mistakes, read this article.
Story first published: Friday, December 20, 2019, 15:36 [IST]
X
Desktop Bottom Promotion