For Quick Alerts
ALLOW NOTIFICATIONS  
For Daily Alerts

ಕೂದಲು ಉದುರುವುದನ್ನು ತಡೆಗಟ್ಟಲು ತೆಂಗಿನೆಣ್ಣೆ ಹೇಗೆ ಬಳಸಬೇಕು?

|

ಕೊಬ್ಬರಿ ಎಣ್ಣೆ ಭಾರತೀಯ ಅತಿ ಪುರಾತನ ಸೌಂದರ್ಯವರ್ಧಕವಾಗಿದೆ ಹಾಗೂ ಹಲವಾರು ಕೇಶ ಸಂಬಂಧಿ ತೊಂದರೆಗಳನ್ನು ನಿವಾರಿಸಲು ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ; ಕೂದಲ ಉದುರುವಿಕೆ, ನೆತ್ತಿಯ ಒಣಗುವಿಕೆ, ಕೂದಲು ತೆಳುವಾಗುವುದು ಮೊದಲಾದ ಹಲವಾರು ತೊಂದರೆಗಳನ್ನು ಕೊಬ್ಬರಿ ಎಣ್ಣೆ ಸಮರ್ಥವಾಗಿ ಪರಿಹಸಿರುತ್ತದೆ.

ಭಾರತದ ಅತಿ ಪುರಾತನ ವಿಧಾನವಾದ ಆಯುರ್ವೇದದಲ್ಲಂತೂ ಕೊಬ್ಬರಿ ಎಣ್ಣೆಯನ್ನು ಹಲವಾರು ಕೇಶ, ಚರ್ಮ ಮತ್ತು ಇತರ ಸೌಂದರ್ಯ ಸಂಬಂಧಿತ ತೊಂದರೆಗಳಿಗೆ ಪರಿಹಾರವಾಗಿ ಬಳಸಲಾಗುತ್ತಿದೆ. ಅಷ್ಟೇ ಅಲ್ಲ, ಕೂದಲನ್ನು ಸೊಂಪಾಗಿಸಲು ಇದರ ಬ್ಯಾಕ್ಟೀರಿಯಾ ನಿವಾರಕ ಮತ್ತು ಮೃದುಕಾರಕ ಗುಣಗಳು ಬಳಸಲ್ಪಡುತ್ತವೆ. ಕೂದಲ ಎಲ್ಲಾ ತೊಂದರೆಗಳಿಗೆ ಕೊಬ್ಬರಿ ಎಣ್ಣೆಯೊಂದೇ ಸಿದ್ಧೌಷದ ಎಂದೇ ಪರಿಗಣಿಸಲ್ಪಟ್ಟಿದೆ.

ವಿಶೇಷವಾಗಿ ಕೂದಲು ಉದುರುವಿಕೆಯನ್ನು ತಡೆಯಲು ಕೊಬ್ಬರಿ ಎಣ್ಣೆ ಮಹತ್ವದ ಪಾತ್ರ ವಹಿಸುತ್ತದೆ. ಕೂದಲ ಉದುರುವಿಕೆಗೆ ಕೆಲವಾರು ಕಾರಣಗಳಿವೆ: ಇದರಲ್ಲಿ ಪ್ರಮುಖವಾದವು ಎಂದರೆ ಮಾನಸಿಕ ಒತ್ತಡ, ಕೆಲವು ಔಷಧಿಗಳು, ಪೋಷಕಾಂಶಗಳ ಅಸಮತೋಲನ, ಅತಿ ಶೀಘ್ರವಾದ ತೂಕ ಇಳಿಕೆ, ರಸದೂತಗಳ ಪರಿಣಾಮ ಇತ್ಯಾದಿ. ಕೊಬ್ಬರಿ ಎಣ್ಣೆ ಕೂದಲ ಬುಡಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸುವ ಮೂಲಕ ಕೂದಲು ಚೆನ್ನಾಗಿ ಬೆಳೆಯಲು ಹಾಗೂ ಆರೋಗ್ಯಕರ ಮತ್ತು ಸುಲಭವಾಗಿ ಉದುರದಂತೆ ಆರೋಗ್ಯಕರವಾಗಿರಲು ನೆರವಾಗುತ್ತದೆ.

ಕೂದಲ ಆರೈಕೆಗೆ ಕೊಬ್ಬರಿ ಎಣ್ಣೆಯ ಪ್ರಯೋಜನಗಳು ಹಾಗೂ ಇದನ್ನು ಸಮರ್ಥವಾಗಿ ಬಳಸಿಕೊಳ್ಳುವ ಬಗ್ಗೆ ಕೆಲವು ವಿಧಾನಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ, ಬನ್ನಿ, ನೋಡೋಣ:

ಕೂದಲ ಆರೋಗ್ಯ ವೃದ್ದಿಗಾಗಿ ಕೊಬ್ಬರಿ ಎಣ್ಣೆಯ ಬಳಕೆ

ಕೂದಲ ಆರೋಗ್ಯ ವೃದ್ದಿಗಾಗಿ ಕೊಬ್ಬರಿ ಎಣ್ಣೆಯ ಬಳಕೆ

ಕೊಬ್ಬರಿ ಎಣ್ಣೆ ಸ್ನಿಗ್ಧ ದ್ರವವಾಗಿದ್ದು ನಮ್ಮ ದೇಹದಲ್ಲಿ ನೈಸರ್ಗಿಕವಾಗಿ ಒಸರುವ ಮೇದೋಗ್ರಂಥಿಗಳ ಸ್ರಾವ (sebum) ವನ್ನೇ ಹೋಲುತ್ತದೆ. ನಮ್ಮ ಚರ್ಮದ ಅಡಿಯಲ್ಲಿ ಒಸರುವ ಈ ಸ್ರಾವ ನಮ್ಮ ತ್ವಚೆಯನ್ನು ಒಣಗದಿರುವಂತೆ ಕಾಪಾಡುತ್ತದೆ ಹಾಗೂ ಕೂದ ಬುಡವನ್ನು ತೇವವಾಗಿರಿಸಿ ಯಾವುದೇ ಹಾನಿಯಾಗದಂತೆ ರಕ್ಷಿಸುತ್ತದೆ. ಇದೇ ಕಾರಣಕ್ಕೆ ನೆತ್ತಿಯ ಭಾಗದಲ್ಲಿ ಚೆನ್ನಾಗಿ ಹಚ್ಚಿಕೊಳ್ಳುವ ಎಣ್ಣೆ ನಮ್ಮ ಕೂದಲ ಬುಡಗಳನ್ನು ದೃಢ ಮತ್ತು ಆರೋಗ್ಯಕರವಾಗಿರಿಸಲು ಅಗತ್ಯವಾಗಿದೆ.

ಕೊಬ್ಬರಿ ಎಣ್ಣೆಯಲ್ಲಿರುವ ಲಾರಿಕ್ ಆಮ್ಲ ನಮ್ಮ ಕೂದಲಿನಲ್ಲಿರುವ ಪೋಟೀನುಗಳು ಪರಸ್ಪರ ಬಂಧಿಸಲು ನೆರವಾಗುತ್ತದೆ ಹಾಗೂ ಕೂದಲ ಬುಡಗಳನ್ನು ಸವೆತದಿಂದ ರಕ್ಷಿಸಿ ಇಲ್ಲಿಂದ ಹೊರಡುವ ಕೂದಲು ಆರೋಗ್ಯಕರ ಮತ್ತು ಸುಲಭವಾಗಿ ತುಂಡಾಗದೇ ದೃಢವಾಗಿರುವಂತೆ ಮಾಡುತ್ತದೆ.

ಕೊಬ್ಬರಿ ಎಣ್ಣೆಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಕೂದಲ ಬೆಳವಣಿಗೆಯನ್ನು ಉತ್ತೇಜಿಸಿ ಕೂದಲು ಸೊಂಪಾಗುವಂತೆ ಮಾಡುತ್ತದೆ.

ಕೊಬ್ಬರಿ ಎಣ್ಣೆ ಕೂದಲಿನ ದೃಢಭಾಗದ ಒಳಗೆ ಸೋರಿಕೊಳ್ಳುವ ಗುಣ ಹೊಂದಿದ್ದು ಇದೇ ಕಾರಣಕ್ಕೆ ಕೂದಲ ಬುಡದಿಂದಲೂ ತುದಿಯವರೆಗೆ ಎಣ್ಣೆಯನ್ನು ಹೆಚ್ಚಿಕೊಳ್ಳಲು ಹೇಳಲಾಗುತ್ತದೆ. ತನ್ಮೂಲಕ ವಾತಾವರಣದ ಕಲ್ಮಶಗಳು ಮತ್ತು ಪ್ರದೂಷಣೆಗಳಿಂದ ಹಾಗೂ ಅತಿಯಾದ ಬಿಸಿಯಿಂದ ಕೂದಲನ್ನು ರಕ್ಷಿಸುತ್ತದೆ.

ಕೊಬ್ಬರಿ ಎಣ್ಣೆಯಲ್ಲಿ ಶಿಲೀಂಧ್ರ ನಿವಾರಕ ಗುಣಗಳು ಹಾಗೂ ಬ್ಯಾಕ್ಟೀರಿಯಾ ನಿವಾರಕ ಗುಣಗಳಿದ್ದು ಕೂದಲ ಬೆಳವಣಿಗೆಗೆ ಅಡ್ಡಿಯುಂಟುಮಾಡುವ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ತೊಂದರೆಯನ್ನು ನಿವಾರಿಸುತ್ತದೆ. ತನ್ಮೂಲಕ ಕೂದಲ ಬೆಳವಣಿಗೆಗೆ ಅಗತ್ಯವಿರುವ ಒಟ್ಟಾರೆ ಪೋಷಣೆಯನ್ನು ಕೊಬ್ಬರಿ ಎಣ್ಣೆಯೊಂದೇ ಪೂರೈಸುತ್ತದೆ.

ಕೊಬ್ಬರಿ ಎಣ್ಣೆ ನೈಸರ್ಗಿಕ ಕಂಡೀಶನರ್ ಸಹಾ ಆಗಿದೆ ಹಾಗೂ ಇದು ಕೂದಲನ್ನು ಮೃದು ಮತ್ತು ಹೊಳಪುಳ್ಳದ್ದಾಗಿ ಇರಿಸಲು ನೆರವಾಗುತ್ತದೆ.

ನೆತ್ತಿಯ ಭಾಗವನ್ನು ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳುವ ಮೂಲಕ ನೆತ್ತಿಯ ಚರ್ಮದ ಭಾಗದಲ್ಲಿ ರಕ್ತ ಪರಿಚಲನೆ ಉತ್ತಮಗೊಳ್ಳುತ್ತದೆ. ಈ ಮೂಲಕ ಕೊಬ್ಬರಿ ಎಣ್ಣೆಯ ಪೋಷಕಾಂಶಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕೂದಲ ಬುಡಗಳಿಗೆ ತಲುಪಲು ಸಾಧ್ಯವಾಗುತ್ತದೆ.

ಆಳವಾದ ಕಂಡೀಶನಿಂಗ್ ಗಾಗಿ ಕೊಬ್ಬರಿ ಎಣ್ಣೆಯನ್ನು ಬಳಸುವ ವಿಧಾನ:

ಆಳವಾದ ಕಂಡೀಶನಿಂಗ್ ಗಾಗಿ ಕೊಬ್ಬರಿ ಎಣ್ಣೆಯನ್ನು ಬಳಸುವ ವಿಧಾನ:

ನಿಮ್ಮ ನಿತ್ಯದ ಸೌಮ್ಯ ಶಾಂಪೂ ಉಪಯೋಗಿಸಿ ಸ್ನಾನ ಮಾಡಿ, ಆದರೆ ಕಂಡೀಶನರ್ ಬಳಸದಿರಿ.

ಒಂದು ಚಿಕ್ಕ ಬೋಗುಣಿಯಲ್ಲಿ ಕೊಂಚ ಕೊಬ್ಬರಿ ಎಣ್ಣೆಯನ್ನು ಬೆಚ್ಚಗಾಗಿಸಿ. ಅಂದರೆ ಬೆರಳು ಕೊಂಚ ಬಿಸಿಯಾಗುವಷ್ಟು ಮಾತ್ರ ಬಿಸಿ ಮಾಡಿ.

ನಿಮ್ಮ ಕೂದಲನ್ನು ಹರಡಿ ಒಣಗಲು ಬಿಡಿ. ಪೂರ್ಣವಾಗಿ ಒಣಗಿದ ಬಳಿಕ ಈ ಎಣ್ಣೆಯನ್ನು ಕೂದಲ ಬುಡದಿಂದ ಪ್ರಾರಂಭಿಸಿ ತುದಿಯವರೆಗೂ ಬರುವಂತೆ ಚೆನ್ನಾಗಿ ಹಚ್ಚಿಕೊಳ್ಳಿ.

ಅಗಲ ಬಾಚಣಿಗೆ ಬಳಸಿ ಚೆನ್ನಾಗಿ ಬಾಚಿಕೊಳ್ಳಿ ಹಾಗೂ ಎಣ್ಣೆ ಎಲ್ಲಾ ಭಾಗಗಳಿಗೂ ಆವರಿಸುವಂತೆ ಮಾಡಿ.

ನಂತರ ಶವರ್ ಕ್ಯಾಪ್ ಒಂದನ್ನು ಧರಿಸಿ ಮುಂದಿನ ನಲವತ್ತೈದು ನಿಮಿಷ ಹಾಗೇ ಬಿಡಿ. ಸಾಧ್ಯವಾದರೆ, ರಾತ್ರಿ ಮಲಗುವ ಮುನ್ನ ಶವರ್ ಕ್ಯಾಪ್ ಧರಿಸಿ ಮರುದಿನ ಬೆಳಿಗ್ಗೆ ನಿವಾರಿಸಿ.

ಬಳಿಕ ನಿತ್ಯದ ಶಾಂಪೂ ಬಳಸಿ ಮತ್ತೊಮ್ಮೆ ಕೂದಲನ್ನು ತೊಳೆದುಕೊಳ್ಳಿ. ಈ ವಿಧಾನಕ್ಕೆ ಕೊಂಚ ಹೆಚ್ಚಿನ ಸಮಯ ಬೇಕಾಗಿರುವ ಕಾರಣ ನಿಮ್ಮ ಸ್ನಾನದ ಸಮಯವನ್ನು ಸೂಕ್ತವಾಗಿ ನಿಗದಿಪಡಿಸಿಕೊಳ್ಳಿ.

ತಲೆಹೊಟ್ಟು ನಿವಾರಿಸಲು:

ತಲೆಹೊಟ್ಟು ನಿವಾರಿಸಲು:

ಒಂದು ಬೋಗುಣಿಯಲ್ಲಿ ಕೊಬ್ಬರಿ ಎಣ್ಣೆ ಮತ್ತು ಲೋಳೆಸರ ಅಥವಾ ಅಲೋವೆರಾದ ತಿರುಳನ್ನು ಸಮಪ್ರಮಾಣದಲ್ಲಿ ಚೆನ್ನಾಗಿ ಬೆರೆಸಿ. ಈ ಮಿಶ್ರಣವನ್ನು ತಲೆಹೊಟ್ಟಿರುವ ಭಾಗಕ್ಕೆಲ್ಲಾ ಚೆನ್ನಾಗಿ ಹಚ್ಚಿಕೊಳ್ಳಿ ಹಾಗೂ ಸುಮಾರು ಒಂದು ಘಂಟೆ ಹಾಗೇ ಬಿಡಿ. ಬಳಿಕ ನಿತ್ಯದಂತೆ ಸ್ನಾನ ಮಾಡಿ. ಈ ಮಿಶ್ರಣ ನೆತ್ತಿಯ ಚರ್ಮಕ್ಕೆ ಅಗತ್ಯವಿರುವ ಆರ್ದ್ರತೆಯನ್ನು ಒದಗಿಸುವ ಮೂಲಕ ಚರ್ಮ ಪಕಳೆ ಏಳದಂತೆ ತಡೆಯುತ್ತದೆ ಹಾಗೂ ತಲೆ ಹೊಟ್ಟು ಶೀಘ್ರವೇ ಇಲ್ಲವಾಗುತ್ತದೆ.

ಕೊಬ್ಬರಿ ಎಣ್ಣೆ ಮತ್ತು ಆಲಿವ್ ಎಣ್ಣೆಯ ಕೇಶಲೇಪ ( Hair Mask)

ಕೊಬ್ಬರಿ ಎಣ್ಣೆ ಮತ್ತು ಆಲಿವ್ ಎಣ್ಣೆಯ ಕೇಶಲೇಪ ( Hair Mask)

ಇವೆರಡೂ ನೆತ್ತಿಯ ಚರ್ಮಕ್ಕೆ ಅಗತ್ಯವಾದ ಆರೈಕೆಯನ್ನು ನೀಡುವ ಮೂಲಕ ಒಣಗುವಿಕೆಯನ್ನು ತಡೆಯುತ್ತದೆ ಹಾಗೂ ಈ ಭಾಗದಿಂದ ಸೌಮ್ಯವಾದ, ಕಾಂತಿಯುಕ್ತ ಮತ್ತು ಸುಕ್ಕುರಹಿತ ಕೂದಲು ಬೆಳವಣಿಗೆಯಾಗಲು ನೆರವಾಗುತ್ತದೆ. ಇದಕ್ಕಾಗಿ ಸಮಪ್ರಮಾಣದಲ್ಲಿ ಕೊಬ್ಬರಿ ಎಣ್ಣೆ ಮತ್ತು ಆಲಿವ್ ಎಣ್ಣೆಗಳನ್ನು ಬೆರೆಸಿ ಕೊಂಚವೇ ಬಿಸಿ ಮಾಡಿ. ಈ ಎಣ್ಣೆಯಿಂದ ನೆತ್ತಿಯ ಭಾಗವನ್ನು ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ಬಳಿಕ ಬಿಸಿನೀರಿನಲ್ಲಿ ದಪ್ಪನೆಯ ಟವೆಲ್ಲೊಂದನ್ನು ಮುಳುಗಿಸಿ ಚೆನ್ನಾಗಿ ಹಿಂಡಿ ಈ ಟವೆಲ್ಲನ್ನು ತಲೆಯ ಭಾಗಕ್ಕೆ ಸುತ್ತಿಕೊಳ್ಳಿ. ಸುಮಾರು ಒಂದು ಘಂಟೆ ಹಾಗೇ ಬಿಟ್ಟು ಬಳಿಕ ಸೌಮ್ಯ ಶಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿ. ಉತ್ತಮ ಪರಿಣಾಮಕಾಗಿ ಈ ವಿಧಾನವನ್ನು ಆಗಾಗ ಪುನರಾವರ್ತಿಸುತ್ತಿರಿ.

English summary

Coconut Oil for Hair Loss : Benefits and How to Use

Coconut oil for hair loss, here is tips to use coconut oil to control hair fall read on.
Story first published: Thursday, December 17, 2020, 10:15 [IST]
X
Desktop Bottom Promotion