For Quick Alerts
ALLOW NOTIFICATIONS  
For Daily Alerts

ಕಸವೆಂದು ಭಾವಿಸುವ ಈ ವಸ್ತುವಿಂದ ನಿಮ್ಮ ಕೂದಲು ಉದ್ದವಾಗುವುದು

|

ಸೌಂದರ್ಯದ ರಹಸ್ಯವು ಕುಂಬಳಕಾಯಿ ಬೀಜಗಳಲ್ಲಿ ಅಡಗಿದೆ ಎಂಬುದು ನಿಮಗೆ ತಿಳಿದಿದೆಯೇ? ಹೌದು, ಕುಂಬಳಕಾಯಿ ಬೀಜಗಳಲ್ಲಿ ಕೂದಲು ಹಾಗೂ ಚರ್ಮವನ್ನು ಪೋಷಿಸುವಂತಹ ಅನೇಕ ಪೋಷಕಾಂಶಗಳಿವೆ. ಇದು ಕುಕುರ್ಬಿಟಾಸಿನ್ ಎಂಬ ಅಮೈನೋ ಆಮ್ಲವನ್ನು ಹೊಂದಿದ್ದು, ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಉದ್ದನೆಯ ಕೂದಲನ್ನು ಬಯಸುವರು, ಇದರ ಲಾಭವನ್ನು ಪಡೆಯಬಹುದು.

ನೀವು ಕುಂಬಳಕಾಯಿಯಿಂದ ಬೀಜಗಳನ್ನು ತೆಗೆದುಕೊಂಡು ಚೆನ್ನಾಗಿ ಒಣಗಿಸಿ, ಸಂಗ್ರಹಿಸಿ. ಈ ಬೀಜಗಳನ್ನು ಮನೆಯಲ್ಲಿ ಎಣ್ಣೆ ಅಥವಾ ಹೇರ್ ಪ್ಯಾಕ್‌ಗಳಿಗೆ ಬಳಸಬಹುದು. ಕೂದಲು ಉದುರುವಿಕೆ ಅಥವಾ ಕೂದಲಿನ ಬೆಳವಣಿಗೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿದ್ದರೆ, ಈ ಕೆಳಗಿನ ವಿಧಾನಗಳಲ್ಲಿ ಬಳಸಿ, ಪರಿಹಾರ ಪಡೆಯಬಹುದು.

ಆಹಾರದಲ್ಲಿ ಕುಂಬಳಕಾಯಿ ಬೀಜಗಳನ್ನು ಸೇರಿಸಿ:

ಆಹಾರದಲ್ಲಿ ಕುಂಬಳಕಾಯಿ ಬೀಜಗಳನ್ನು ಸೇರಿಸಿ:

ಕುಂಬಳಕಾಯಿ ಬೀಜಗಳಲ್ಲಿ ಸೂಕ್ಷ್ಮ ಪೋಷಕಾಂಶಗಳು ಸಮೃದ್ಧವಾಗಿವೆ, ಇದನ್ನು ಕೂದಲಿನ ವಿನ್ಯಾಸವನ್ನು ಸುಧಾರಿಸಲು ಬಳಸಬಹುದು. ಇದನ್ನು ಸೇವಿಸುವ ಮೂಲಕ ಕೂದಲನ್ನು ಬುಡದಿಂದಲೇ ಬಲಪಡಿಸಬಹುದು. ಅದು ಸುರುಳಿ ಕೂದಲಾಗಿರಲಿ ಅಥವಾ ನೇರವಾಗಿರಲಿ, ಎಲ್ಲರಿಗೂ ತುಂಬಾ ಪ್ರಯೋಜನಕಾರಿ. ಇದನ್ನು ತಿಂಡಿ ಅಥವಾ ಸೂಪ್‌ನಲ್ಲಿ ಬೆರೆಸಿ ಸೇವಿಸಬಹುದು. ಇದಲ್ಲದೆ, ಅವುಗಳನ್ನು ಹುರಿದು ಕೂಡ ತಿನ್ನಬಹುದು. ಪ್ರತಿದಿನ ಒಂದರಿಂದ ಎರಡು ಚಮಚ ಕುಂಬಳಕಾಯಿ ಬೀಜಗಳನ್ನು ಸೇವಿಸಿದರೆ ಸಾಕು. ಇದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಲು ಪ್ರಯತ್ನಿಸಿ.

ಕುಂಬಳಕಾಯಿ ಬೀಜಗಳಿಂದ ಎಣ್ಣೆಯನ್ನು ತಯಾರಿಸಿ:

ಕುಂಬಳಕಾಯಿ ಬೀಜಗಳಿಂದ ಎಣ್ಣೆಯನ್ನು ತಯಾರಿಸಿ:

ಕೂದಲನ್ನು ದಟ್ಟವಾಗಿ ಮತ್ತು ದಪ್ಪವಾಗಿಸಲು ನಿಯಮಿತವಾದ ಎಣ್ಣೆ ಸಹ ಅಗತ್ಯ. ಇದಕ್ಕಾಗಿ ನೀವು ಕುಂಬಳಕಾಯಿ ಬೀಜಗಳಿಂದ ಎಣ್ಣೆಯನ್ನು ತಯಾರಿಸಬಹುದು. ಇದಕ್ಕಾಗಿ, ಒಂದು ಬಟ್ಟಲಿನಲ್ಲಿ ತೆಂಗಿನ ಎಣ್ಣೆ ಮತ್ತು ಕುಂಬಳಕಾಯಿ ಬೀಜಗಳನ್ನು ಮಿಶ್ರಣ ಮಾಡಿ, ಅವುಗಳನ್ನು ರುಬ್ಬಿಕೊಂಡು, ಆ ಪೇಸ್ಟ್ ಜಾರ್‌ಗೆ ಹಾಕಿ. ಈಗ ಗ್ಯಾಸ್ ಆನ್ ಮಾಡಿ, ನೀರನ್ನು ಬಿಸಿಮಾಡಲು ಪ್ಯಾನ್‌ ಇಡಿ. ಇದರ ನಂತರ ಎಣ್ಣೆಯ ಜಾರ್ ಅನ್ನು ಅದರಲ್ಲಿ ಅದ್ದಿ. ಸ್ವಲ್ಪ ಸಮಯ ಈ ರೀತಿ ಬಿಡಿ, ಈ ಸಮಯದಲ್ಲಿ ಗ್ಯಾಸ್ ಅನ್ನು ಕಡಿಮೆ ಉರಿಯಲ್ಲಿರಲಿ. 5 ರಿಂದ 6 ನಿಮಿಷಗಳ ನಂತರ ಗ್ಯಾಸ್ ಆಫ್ ಮಾಡಿ ನಂತರ ಜರಡಿ ಸಹಾಯದಿಂದ ಎಣ್ಣೆಯನ್ನು ಫಿಲ್ಟರ್ ಮಾಡಿ. ಈಗ ಈ ಎಣ್ಣೆಯನ್ನು ಬಳಸಬಹುದು.

ಉದ್ದ ಕೂದಲಿಗೆ ಹೇರ್ ಪ್ಯಾಕ್ ಬಳಸಿ:

ಉದ್ದ ಕೂದಲಿಗೆ ಹೇರ್ ಪ್ಯಾಕ್ ಬಳಸಿ:

ಕೂದಲು ಉದುರುವುದನ್ನು ತಪ್ಪಿಸಲು ಕುಂಬಳಕಾಯಿ ಬೀಜಗಳಿಂದ ಮಾಡಿದ ಹೇರ್ ಪ್ಯಾಕ್ ಅನ್ನು ತಯಾರಿಸಬಹುದು. ಇದಕ್ಕಾಗಿ, ಒಂದು ಬೌಲ್‌ನಲ್ಲಿ ಎರಡು ಚಮಚ ಕುಂಬಳಕಾಯಿ ಬೀಜದ ಪೇಸ್ಟ್ ಅನ್ನು ತೆಗೆದುಕೊಂಡು ಅದಕ್ಕೆ ಮೊಸರು ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿ. ಇದನ್ನು ನಿಮ್ಮ ಕೂದಲಿಗೆ ಹಚ್ಚಿ. ಸುಮಾರು 30 ನಿಮಿಷಗಳ ಕಾಲ ಹಾಗೆ ಬಿಡಿ ಮತ್ತು ನಂತರ ಕೂದಲನ್ನು ತೊಳೆಯಿರಿ . ಈ ಹೇರ್ ಪ್ಯಾಕ್ ಅನ್ನು ವಾರಕ್ಕೊಮ್ಮೆ ಪ್ರಯತ್ನಿಸಬಹುದು.

ಎಣ್ಣೆಯುಕ್ತ ನೆತ್ತಿ ತೊಡೆದುಹಾಕಲು ಹೀಗೆ ಮಾಡಿ:

ಎಣ್ಣೆಯುಕ್ತ ನೆತ್ತಿ ತೊಡೆದುಹಾಕಲು ಹೀಗೆ ಮಾಡಿ:

ಬೇಸಿಗೆಯಲ್ಲಿ ನೆತ್ತಿ ಎಣ್ಣೆಯುಕ್ತವಾಗುತ್ತದೆ, ಕೇವಲ ಕೂದಲು ತೊಳೆಯುವುದು ಮತ್ತು ಶಾಂಪೂ ಮಾತ್ರ ಈ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ನೀವು ಬಯಸಿದರೆ ಕುಂಬಳಕಾಯಿ ಬೀಜಗಳನ್ನು ಬಳಸಬಹುದು. ಕುಂಬಳಕಾಯಿಯನ್ನು ರುಬ್ಬಿ ಪೇಸ್ಟ್ ಮಾಡಿ, ಅದಕ್ಕೆ ನಿಂಬೆ ರಸವನ್ನು ಮಿಶ್ರಣ ಮಾಡಿ. ಈಗ ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ 15 ನಿಮಿಷಗಳ ಕಾಲ ಬಿಡಿ. 15 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ನೀವು ಬಯಸಿದರೆ, ನೀವು ವಾರಕ್ಕೆ ಎರಡು ಬಾರಿ ಈ ವಿಧಾನವನ್ನು ಪ್ರಯತ್ನಿಸಬಹುದು.

English summary

Best ways to use Pumpkin Seeds for Hair Growth in Kannada

Here we talking about Best ways to use Pumpkin Seeds for Hair Growth in Kannada, read on
X
Desktop Bottom Promotion