For Quick Alerts
ALLOW NOTIFICATIONS  
For Daily Alerts

ಕೂದಲಿಗೆ ತುಪ್ಪ ಬಳಸುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ?

|

ಭಾರತೀಯರ ಆಹಾರ ಪದ್ಧತಿಯಲ್ಲಿ ತುಪ್ಪ ಬಹುಮುಖ್ಯ ಪಾತ್ರವಹಿಸುತ್ತದೆ. ಬಹುತೇಕರ ಮನೆಗಳಲ್ಲಿ ತುಪ್ಪವಿಲ್ಲದ ಭೋಜನವೇ ಇಲ್ಲ ಎಂದರೆ ತಪ್ಪಾಗುವುದಿಲ್ಲ. ತುಪ್ಪ ದೇಹದಲ್ಲಿ ಆಂಟಿಆಕ್ಸಿಡೆಂಟ್‌ ಆಗಿ ಕೆಲಸ ಮಾಡುತ್ತದೆ, ಜೀರ್ಣಕ್ರಿಯೆಗೆ ಸಹಕಾರಿ, ಮೂಳೆಗಳ ಆರೋಗ್ಯಕ್ಕೆ ಬೆಸ್ಟ್‌, ಕ್ಯಾನ್ಸರ್‌ ಬರದಿರಲು ಅಲ್ಲದೇ ಬುದ್ಧಿಮತ್ತೆ ಹೆಚ್ಚಲು ಕೂಡ ತುಪ್ಪ ಬೇಕು. ಹೀಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ತುಪ್ಪ ನಿಮ್ಮ ಕೇಶರಾಶಿಯ ಆರೈಕೆಯನ್ನೂ ಮಾಡುತ್ತದೆ ಎಂದರೆ ಅಚ್ಚರಿಪಡಬೇಕಿಲ್ಲ.

Benefits of Applying Ghee On Hair

ಹೌದು, ತುಪ್ಪದ ಸಹಾಯದಿಂದ ನಿಮ್ಮ ಕೂದಲ ನುಣುಪನ್ನು ಸಹ ಹೆಚ್ಚಿಸಬಹುದು. ಕೂದಲ ಹೊಟ್ಟು ನಿವಾರಣೆ, ಬುಡವನ್ನು ತಂಪಾಗಿಡಲು, ಕೂದಲ ಬೆಳವಣಿಗೆ, ಒಣ ಕೂದಲನ್ನು ತೇವಾಂಶವಾಗಿಸುವುದು ಸೇರಿದಂತೆ ಸಾಕಷ್ಟು ಆರೈಕೆಯನ್ನು ತುಪ್ಪ ಮಾಡುತ್ತದೆ. ಕೇಶಕ್ಕೆ ಯಾವೆಲ್ಲಾ ಪ್ರಯೋಜನಗಳನ್ನು ತುಪ್ಪ ನೀಡುತ್ತದೆ ಮುಂದೆ ನೋಡೋಣ:

1. ಕೂದಲ ನುಣುಪಿಗೆ ತುಪ್ಪ

1. ಕೂದಲ ನುಣುಪಿಗೆ ತುಪ್ಪ

ಮೊದಲನೆಯದಾಗ ಹಾಗೂ ಮುಖ್ಯವಾಗಿ ತುಪ್ಪವು ನಿಮ್ಮ ಕೂದಲ ನುಣುಪನ್ನು ಹೆಚ್ಚಿಸುತ್ತದೆ. ಕೂದಲು ಸುಕ್ಕು ಗಟ್ಟದಂತೆ ಹಾಗೂ ಸುಲಭವಾಗಿ ಸಿಕ್ಕುಗಳನ್ನು ತೆಗೆಯಲು ತುಪ್ಪ ಸಹಕಾರಿ. ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ ತುಪ್ಪವನ್ನು ಚೆನ್ನಾಗಿ ಕಾಯಿಸಿ ಬೆಚ್ಚಗಿರುವಾಗ ನಮ್ಮ ಕೂದಲ ಬುಡ ಸೇರಿದಂತೆ ಕೂದಲಿಗೆ ಲೇಪಿಸಿ, ಕನಿಷ್ಠ ಅರ್ಧ ಗಂಟೆ ಬಿಟ್ಟು ನಂತರ ನಯವಾದ ಶಾಂಪೂವಿನಿಂದ ಚೆನ್ನಾಗಿ ತೊಳೆಯಿರಿ.

2. ಒಣ ಹಾಗೂ ಹಾಳಾದ ಕೂದಲಿಗೆ ತುಪ್ಪದ ಮಸಾಜ್‌

2. ಒಣ ಹಾಗೂ ಹಾಳಾದ ಕೂದಲಿಗೆ ತುಪ್ಪದ ಮಸಾಜ್‌

ತುಪ್ಪದಲ್ಲಿರುವ ಆಂಟಿ ಆಕ್ಸಿಡೆಂಟ್‌ ಹಾಗೂ ಕೊಬ್ಬಿನ ಅಂಶವು ಬುಡದ ಮೂಲಕ ಕೂದಲಿನ ಆಳಕ್ಕೆ ಹೋಗಿ ಒಣ ಹಾಗೂ ಹಾಳಾದ ಕೂದಲನ್ನು ಕಾಪಾಡುತ್ತದೆ. ಇದಕ್ಕಾಗಿ ಅರ್ಧ ಕಪ್‌ ತೆಂಗಿನ ಎಣ್ಣೆ ಹಾಗೂ ಅರ್ಧ ಕಪ್‌ ತುಪ್ಪವನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ಬೆಚ್ಚಗಿನ ಎಣ್ಣೆಯನ್ನು ಬುಡಕ್ಕೆ ಹಚ್ಚಿ ಕನಿಷ್ಠ ೨೦ ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ ಶಾಂಪೂವಿನಿಂದ ತೊಳೆಯಿರಿ.

3. ಕೂದಲು ಒಡೆಯುವುದನ್ನು ತಡೆಯುತ್ತದೆ

3. ಕೂದಲು ಒಡೆಯುವುದನ್ನು ತಡೆಯುತ್ತದೆ

ಕೂದಲ ತುದಿ ಎರಡಾಗಿ ಒಡೆಯುವುದು ಬಹುತೇಕ ಹೆಣ್ಣು ಮಕ್ಕಳ ಸಮಸ್ಯೆಯಾಗಿದೆ. ಇದಕ್ಕೆ ಅತ್ಯುತ್ತಮ ಮನೆಮದ್ದು ತುಪ್ಪ ಎಂದರೆ ತಪ್ಪಾಗಲಾರದು. ತುಪ್ಪವನ್ನು ಒಡೆದ ಕೂದಲ ತುದಿಗೆ ಹಚ್ಚಿ ಕನಿಷ್ಠ ಅರ್ಧ ಗಂಟೆ ಬಿಟ್ಟು ನಂತರ ತಣ್ಣೀರಿನಿಂದ ಶಾಂಪೂ ಬಳಸಿ ತೊಳೆಯಿರಿ. ತುಪ್ಪದಲ್ಲಿರುವ ಎ, ಡಿ, ಕೆ2, ಇ ಮತ್ತ ಆಂಟಿಆಕ್ಸಿಡೆಂಟ್ಸ್‌ಗಳು ಅನಗತ್ಯವಾಗಿ ಕೂದಲು ಒಡೆಯುದನ್ನು ತಡೆಯುತ್ತದೆ.

4. ಹೊಟ್ಟು ನಿವಾರಣೆಗೆ ರಾಮಬಾಣ

4. ಹೊಟ್ಟು ನಿವಾರಣೆಗೆ ರಾಮಬಾಣ

ಕೂದಲ ಹೊಟ್ಟಿನ ನಿವಾರಣೆ ಹೆಣ್ಣು ಮಕ್ಕಳಿಗೆ ಸೀಮಿತವಾಗದೆ ಪುರುಷರಿಗೂ ಕಾಡುವ ಸಮಸ್ಯೆಯಾಗಿದೆ. ಕೂದಲ ಬುಡದಲ್ಲಿ ಕೊಬ್ಬಿನ ಅಂಶ ಕಡಿಮೆಯಾದಾಗ ಬುಡ ಒಣಗಿ ಹೊಟ್ಟಿನ ಸಮಸ್ಯೆ ಆರಂಭವಾಗುತ್ತದೆ, ಇದರಿಂದ ಒಣಗುವುದು ಹಾಗೂ ಕೆರೆತದ ಸಮಸ್ಯೆ ಕಾಡುತ್ತದೆ. ತುಪ್ಪವ ನಿಮ್ಮನ್ನು ಈ ಸಮಸ್ಯೆಯಿಂದ ಪಾರು ಮಾಡುತ್ತದೆ. ಅದಕ್ಕಾಗಿ ನೀವು ಮಾಡಬೇಕಾಗಿರುವುದ ಇಷ್ಟೇ: ಎರಡು ಚಮಚ ತುಪ್ಪ ಅರ್ಧ ಚಮಚ ನಿಂಬೆ ರಸವನ್ನು ತೆಗೆದುಕೊಂಡು ಮಿಶ್ರ ಮಾಡಿ ಬುಡಕ್ಕೆ ಹಚ್ಚಿ ಅರ್ಧ ಗಂಟೆ ಬಿಡಿ. ನಂತರ ಹೊಟ್ಟು ನಿವಾರಕ ಶಾಂಪೂ ಬಳಸಿ ಕೂದಲನ್ನು ತೊಳೆದರೆ ಬಹುತೇಕ ಹೊಟ್ಟಿನ ಸಮಸ್ಯೆ ಕಡಿಮೆಯಾಗುತ್ತದೆ. ಸಂಪೂರ್ಣ ಕಡಿಮೆ ಆಗಲು ವಾರಕ್ಕೆ ಒಮ್ಮೆಯಂತೆ ಎರಡು ತಿಂಗಳು ಪುನರಾವರ್ತಿಸಿ.

5. ಬುಡವನ್ನು ಹೈಡ್ರೇಟ್‌ ಮಾಡುತ್ತದೆ

5. ಬುಡವನ್ನು ಹೈಡ್ರೇಟ್‌ ಮಾಡುತ್ತದೆ

ಕೂದಲ ಬುಡದಲ್ಲಿ ಅಗತ್ಯ ಪ್ರಮಾಣದ ಎಣ್ಣೆಯ ಅಂಶ ಇಲ್ಲದ ಕಾರಣ ನಿಮ್ಮ ಕೂದಲು ಸಾಕಷ್ಟು ಒರಟಾಗಿ, ಒಣಗಿದಂತೆ ಮತ್ತು ಜೀವವಿಲ್ಲದಂತೆ ಕಾಣುತ್ತದೆ. ತುಪ್ಪದಲ್ಲಿ ಎಣ್ಣೆಯ ಅಂಶ ಹಾಗೂ ಕೊಬ್ಬಿನ ಅಂಶ ಸಾಕಷ್ಟು ಪ್ರಮಾಣದಲ್ಲಿ ಇರುವುದರಿಂದ ಇದು ಕೂದಲ ಆಳಕ್ಕೆ ಹೋಗಿ ಆರೋಗ್ಯಕರ ಎಣ್ಣೆಯ ಅಂಶವನ್ನು ಸೃಷ್ಟಿಸುತ್ತದೆ. ಅದ್ದರಿಂದ ತ್ವಚೆಯ ಕಾಳಜಿಯಂತೆ ಕೂದಲನ್ನು ಕಾಪಾಡಲು ಆಗಾಗ್ಗೆ ಕೂದಲಿಗೆ ತುಪ್ಪ ಬಳಸಿ ಮಸಾಜ್‌ ಮಾಡಿ.

6. ಕೂದಲ ಬೆಳವಣಿಗೆಗೂ ತುಪ್ಪ ಬೇಕು

6. ಕೂದಲ ಬೆಳವಣಿಗೆಗೂ ತುಪ್ಪ ಬೇಕು

ಕೂದಲು ಹಾಳಾಗಲು ಸಾಕಷ್ಟು ಕಾರಣಗಳಿವೆ, ಆದರೆ ಕೂದಲ ಉದುರುವಿಕೆ ಸಹಿಸಲು ಕಷ್ಟಸಾಧ್ಯ. ಇನ್ನು ಸಹಿಸಬೇಡಿ ತುಪ್ಪ ಬಳಸಿ. ತುಪ್ಪದಲ್ಲಿರುವ ಒಮೆಗಾ-3, ಕೊಬ್ಬಿನಾಮ್ಲ, ವಿಟಮಿನ್ಸ್‌ ಹಾಗೂ ಮಿನರಲ್ಸ್‌ಗಳು ಕೂದಲು ಬೆಳೆಯುವಂತೆ ಮಾಡಲು ಸಹಕಾರಿ.

English summary

Benefits of Applying Ghee On Hair in Kannada

Here we are discussing about Benefits of Applying Ghee On Hair. Anecdotal evidence claims that ghee can be used to make your hair grow, to add thickness to your hair, and to condition your scalp. Read more
Story first published: Tuesday, May 18, 2021, 14:02 [IST]
X
Desktop Bottom Promotion