For Quick Alerts
ALLOW NOTIFICATIONS  
For Daily Alerts

ಅಕಾಲಿಕವಾಗಿ ಉಂಟಾಗುವ ಬೊಕ್ಕತಲೆ ಸಮಸ್ಯೆ ತಡೆಗಟ್ಟಬೇಕೆ?

|

ವಯಸ್ಸಾಗುತ್ತಾ ಸಾಗಿದಂತೆ ಕೂದಲು ಉದುರುವಿಕೆ ಎಂಬುದು ಸಾಮಾನ್ಯ ಸಮಸ್ಯೆ. ಆದ್ರೆ ಕೆಲವರಲ್ಲಿ ವಯಸ್ಸಾಗುವ ಮುನ್ನವೇ ಅಂದ್ರೆ ಅಕಾಲಿಕವಾಗಿ ಕೂದಲು ಉದುರಿ, ಬೋಳುತಲೆ ಉಂಟಾಗುತ್ತದೆ. ಇದಕ್ಕೆ ನಮ್ಮ ಆಹಾರ ಪದ್ಧತಿ, ಪೋಷಕಾಂಶಗಳ ಕೊರತೆ ಸೇರಿದಂತೆ ಹಲವಾರು ಕಾರಣಗಳಿವೆ. ಆದ್ರೆ ಈ ಅಕಾಲಿಕ ಬೊಕ್ಕತಲೆ ಸಮಸ್ಯೆಯನ್ನು ಕೆಲವೊಂದು ಪೋಷಕಾಂಶಗಳ ಸಮತೋಲನದಿಂದ ನಿಯಂತ್ರಣಕ್ಕೆ ತರಬಹುದು. ಕೂದಲಿನ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳ ಸೇವನೆಯಿಂದ ಕೂದಲುದುರುವಿಕೆ ತಡೆದು, ಬೋಳುತಲೆ ಆಗುವುದನ್ನು ತಡೆಯಬಹುದು. ಹಾಗಾದರೆ, ಅಂತಹ ಪೋಷಕಾಂಶಗಳಾವುವು ಇಲ್ಲಿ ನೋಡೋಣ.

ಅಕಾಲಿಕವಾಗಿ ಉಂಟಾಗುವ ಬೋಳು ಅಥವಾ ಬೊಕ್ಕತಲೆ ಎಂದರೇನು?

ಅಕಾಲಿಕವಾಗಿ ಉಂಟಾಗುವ ಬೋಳು ಅಥವಾ ಬೊಕ್ಕತಲೆ ಎಂದರೇನು?

ಹೆಸರೇ ಸೂಚಿಸುವಂತೆ, ನಿಮ್ಮ ಇಪ್ಪತ್ತು ಅಥವಾ ಮೂವತ್ತರ ವಯಸ್ಸಿನಲ್ಲೇ ಕೂದಲು ಉದುರಿ, ಬೊಕ್ಕತಲೆ ಅಥವಾ ಬೋಳು ತಲೆ ಉಂಟಾಗುವುದು. ಇದು ನೆತ್ತಿಯ ಕೂದಲು ತೆಳುವಾಗುವುದರ ಮೂಲಕ ಪ್ರಾರಂಭವಾಗುತ್ತದೆ. ಇದಕ್ಕೆ ಒಂದು ಪ್ರಾಥಮಿಕ ಕಾರಣವೆಂದರೆ ಪ್ರೌಢಾವಸ್ಥೆಯ ನಂತರ ಟೆಸ್ಟೋಸ್ಟೆರಾನ್ ಹಾರ್ಮೋನ್ ಉತ್ಪಾದನೆಯು ಹೆಚ್ಚಾಗಿ, ಇದು ಚರ್ಮದಲ್ಲಿ ಕಂಡುಬರುವ ಕಿಣ್ವದೊಂದಿಗೆ ಸಂಪರ್ಕಕ್ಕೆ ಬರುವುದರಿಂದ ಅಕಾಲಿಕವಾಗಿ ಬೋಳುತಲೆಗೆ ಕಾರಣವಾಗುತ್ತದೆ.

ಅಕಾಲಿಕ ಬೋಳುತಲೆಯ ಲಕ್ಷಣಗಳು:

ಅಕಾಲಿಕ ಬೋಳುತಲೆಯ ಲಕ್ಷಣಗಳು:

1. ನಿಮ್ಮ ನೆತ್ತಿಯ ಕೂದಲು ಕ್ರಮೇಣ ತೆಳುವಾಗತೊಡಗುವುದು.

2. ಮುಂದಲೆ ಕೂದಲು ತೆಳುವಾಗುವುದು.

3. ನೆತ್ತಿಯ ಮೇಲೆ ಅಲ್ಲಲ್ಲಿ ಕೂದಲು ಕಡಿಮೆಯಾಗುವುದು.

4. ಕೂದಲನ್ನು ಬಾಚಿಕೊಳ್ಳುವಾಗ ಅಥವಾ ತೊಳೆಯುವಾಗ ಒಮ್ಮೆಗೆ ಹೆಚ್ಚು ಕೂದಲು ಉದುರುವುದು.

ಕೂದಲು ಬೆಳವಣಿಗೆಯ ಹಂತ:

ಕೂದಲು ಬೆಳವಣಿಗೆಯ ಹಂತ:

ನಿಮ್ಮ ಚರ್ಮ ಮತ್ತು ಉಗುರುಗಳಂತೆ, ನಿಮ್ಮ ಕೂದಲು ಬೆಳವಣಿಗೆ ಹಂತವನ್ನು ಅನುಸರಿಸುತ್ತದೆ. ಈ ಚಕ್ರದ ಯಾವುದೇ ಸಮಯದಲ್ಲಿ ಕೂದಲು ಉದುರುವಿಕೆ ಸಂಭವಿಸಬಹುದು. ಇದರಲ್ಲಿ 3 ಹಂತಗಳಿವೆ:

ಮೊದಲ ಹಂತ ಅನಾಜೆನ್: ಇದರಲ್ಲಿ ಕೂದಲು ನಿರಂತರವಾಗಿ ಬೆಳೆಯುತ್ತದೆ. ನಿಮ್ಮ ಕೂದಲು ತಿಂಗಳಿಗೆ ಸುಮಾರು 1-2 ಸೆಂ.ಮೀ ಬೆಳೆಯುತ್ತದೆ. ಈ ಹಂತವು 2-5 ವರ್ಷಗಳ ಕಾಲ ನಡೆಯಬಹುದು.

ಎರಡನೆಯ ಹಂತ ಕ್ಯಾಟಜೆನ್: ಇದು ಕೂದಲಿನ ಬೆಳವಣಿಗೆಯು ನಿಲ್ಲುವ ಹಂತ. ಸಾಮಾನ್ಯವಾಗಿ ಎರಡು-ಮೂರು ವಾರಗಳವರೆಗೆ ಇರುತ್ತದೆ.

ಮೂರನೇ ಹಂತ ಟೆಲೋಜೆನ್ : ಇದು ವಿಶ್ರಾಂತಿಯ ಹಂತವಾಗಿದ್ದು, ಸುಮಾರು 1-4 ತಿಂಗಳುಗಳವರೆಗೆ ಇರುತ್ತದೆ. ನಿಮ್ಮ ನೆತ್ತಿಯ ಕೂದಲಿನ ಸುಮಾರು 10% ಕೂದಲು ಈ ಹಂತದಲ್ಲಿ ಉದುರುವುದು.

ಕೂದಲು ಬೆಳವಣಿಗೆಗೆ ಅಗತ್ಯವಾಗಿರುವ ಪ್ರಮುಖ ಪೋಷಕಾಂಶಗಳು:

ಕೂದಲು ಬೆಳವಣಿಗೆಗೆ ಅಗತ್ಯವಾಗಿರುವ ಪ್ರಮುಖ ಪೋಷಕಾಂಶಗಳು:

ವಿಟಮಿನ್ ಎ:

ಇದು ಕೂದಲು ಸೇರಿದಂತೆ ದೇಹದ ಎಲ್ಲಾ ಜೀವಕೋಶಗಳ ಬೆಳವಣಿಗೆಗೆ ವಿಟಮಿನ್ ಎ ಅಗತ್ಯವಿದೆ. ವಿಟಮಿನ್ ಎ ಮೇದೋಗ್ರಂಥಿಗಳಿಗೆ ಎಣ್ಣೆಯುಕ್ತ ಪದಾರ್ಥವನ್ನು ತಯಾರಿಸಲು ಸಹಾಯ ಮಾಡುತ್ತದೆ. ಮೇದೋಗ್ರಂಥಿಗಳ ಸ್ರಾವವು ನೆತ್ತಿಯನ್ನು ತೇವಗೊಳಿಸಿ, ಕೂದಲನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ವಿಟಮಿನ್ ಎ ಕೊರತೆಯಿಂದ ಕೂದಲು ಉದುರುವಿಕೆ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು. ಗೆಣಸು, ಕ್ಯಾರೆಟ್, ಕುಂಬಳಕಾಯಿ, ಪಾಲಕ್ ಮತ್ತು ಎಲೆಕೋಸುಗಳಲ್ಲಿ ಬೀಟಾ-ಕ್ಯಾರೋಟಿನ್ ಅಧಿಕವಾಗಿದೆ, ಇದು ವಿಟಮಿನ್ ಎ ಆಗಿ ಬದಲಾಗುತ್ತದೆ. ವಿಟಮಿನ್ ಎ ಹಾಲು, ಮೊಟ್ಟೆ ಮತ್ತು ಮೊಸರು ಮುಂತಾದ ಪ್ರಾಣಿ ಉತ್ಪನ್ನಗಳಲ್ಲಿಯೂ ಕಂಡುಬರುತ್ತದೆ. ಕಾಡ್ ಲಿವರ್ ಆಯಿಲ್ ವಿಶೇಷವಾಗಿ ಉತ್ತಮ ಮೂಲವಾಗಿದೆ.

ಒಮೆಗಾ-3:

ಒಮೆಗಾ-3:

ಒಮೆಗಾ-3 ಕೊಬ್ಬಿನಾಮ್ಲಗಳು ಕೂದಲಿನ ಪರಿಮಾಣ ಮತ್ತು ಸಾಂದ್ರತೆಯನ್ನು ಬೆಂಬಲಿಸುತ್ತವೆ. ವಾಲ್‌ನಟ್ಸ್, ಚಿಯಾ ಬೀಜಗಳು, ಅಗಸೆ ಬೀಜಗಳು ಇತ್ಯಾದಿಗಳಲ್ಲಿ ಒಮೆಗಾ-3 ಸಮೃದ್ಧವಾಗಿದ್ದು, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಬಿ ಜೀವಸತ್ವಗಳು:

ಬಿ ಜೀವಸತ್ವಗಳು:

ಕೂದಲಿನ ಬೆಳವಣಿಗೆಗೆ ಬಯೋಟಿನ್ ಎಂಬ ಬಿ ವಿಟಮಿನ್ ಮುಖ್ಯವಾಗಿದೆ. ಬಯೋಟಿನ್ ಕೊರತೆಯು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಇದು ಹಾನಿಗೊಳಗಾದ ಕೂದಲು ಕಿರುಚೀಲಗಳನ್ನು ಮರುನಿರ್ಮಾಣ ಮಾಡಲು ಪ್ರೋಟೀನ್ ಅನ್ನು ಅಮೈನೋ ಆಮ್ಲಗಳಾಗಿ ವಿಭಜಿಸುತ್ತದೆ. ಇತರ ಬಿ- ಜೀವಸತ್ವಗಳು ಕೆಂಪು ರಕ್ತ ಕಣಗಳನ್ನು ರಚಿಸಲು ಸಹಾಯ ಮಾಡುತ್ತದೆ. ಇದು ನೆತ್ತಿ ಮತ್ತು ಕೂದಲು ಕಿರುಚೀಲಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಸಾಗಿಸುತ್ತದೆ. ಇದಕ್ಕಾಗಿ ನೀವು ಧಾನ್ಯ, ಬಾದಾಮಿ, ಮಾಂಸ, ಮೀನಿನ ಮೊರೆ ಹೋಗಬಹುದು.

ವಿಟಮಿನ್ ಸಿ:

ವಿಟಮಿನ್ ಸಿ:

ವಿಟಮಿನ್ ಸಿ ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದ್ದು, ಅದು ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಈ ಮೂಲಕ ಕೂದಲು ಬೇಗ ಉದುರುವುದನ್ನು ತಡೆಯಬಹುದು. ಹೆಚ್ಚುವರಿಯಾಗಿ, ಕೂದಲಿನ ರಚನೆಯ ಪ್ರಮುಖ ಭಾಗವಾದ ಕಾಲಜನ್ ಎಂದು ಕರೆಯಲ್ಪಡುವ ಪ್ರೋಟೀನ್ ಅನ್ನು ರಚಿಸಲು ನಿಮ್ಮ ದೇಹಕ್ಕೆ ವಿಟಮಿನ್ ಸಿ ಅಗತ್ಯವಿರುತ್ತದೆ. ಜೊತೆಗೆ ವಿಟಮಿನ್ ಸಿ ನಿಮ್ಮ ದೇಹವು ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ, ಇದು ಕೂದಲಿನ ಬೆಳವಣಿಗೆಗೆ ಅಗತ್ಯವಾದ ಖನಿಜವಾಗಿದೆ. ಸ್ಟ್ರಾಬೆರಿ, ಮೆಣಸು, ಪೇರಲ ಮತ್ತು ಸಿಟ್ರಸ್ ಹಣ್ಣುಗಳು ವಿಟಮಿನ್ ಸಿ ಯ ಉತ್ತಮ ಮೂಲಗಳಾಗಿವೆ.

ವಿಟಮಿನ್ ಡಿ:

ವಿಟಮಿನ್ ಡಿ:

ವಿಟಮಿನ್ ಡಿ ಕೊರತೆಯು ಕೂದಲು ಉದುರುವಿಕೆಗೆ ಕಾರಣವಾಗುವುದು. ಕೂದಲು ಬೆಳವಣಿಗೆಯಲ್ಲಿ ವಿಟಮಿನ್ ಡಿ ಪ್ರಮುಖ ಪಾತ್ರ ವಹಿಸುವುದು. ಸೂರ್ಯನ ಕಿರಣಗಳ ನೇರ ಸಂಪರ್ಕದ ಮೂಲಕ ನಿಮ್ಮ ದೇಹವು ವಿಟಮಿನ್ ಡಿ ಅನ್ನು ಉತ್ಪಾದಿಸುತ್ತದೆ. ವಿಟಮಿನ್ ಡಿ ಯ ಉತ್ತಮ ಆಹಾರ ಮೂಲಗಳೆಂದರೆ, ಕೊಬ್ಬಿನ ಮೀನು, ಮೀನಿನ ಎಣ್ಣೆ, ಕೆಲವು ಅಣಬೆಗಳು

ವಿಟಮಿನ್ ಇ

ವಿಟಮಿನ್ ಇ

ವಿಟಮಿನ್ ಸಿ ಯಂತೆಯೇ, ವಿಟಮಿನ್ ಇ ಉತ್ಕರ್ಷಣ ನಿರೋಧಕವಾಗಿದ್ದು, ಅದು ಆಕ್ಸಿಡೇಟಿವ್ ಒತ್ತಡವನ್ನು ತಡೆಯಲು ಸಹಾಯ ಮಾಡುತ್ತದೆ. ಒಂದು ಅಧ್ಯಯನದ ಪ್ರಕಾರ, ಕೂದಲು ಉದುರುವ ಜನರು 8 ತಿಂಗಳುಗಳ ಕಾಲ ವಿಟಮಿನ್ ಇ ಪಡೆದುಕೊಂಡ ನಂತರ ಕೂದಲು ಬೆಳವಣಿಗೆಯಲ್ಲಿ 34.5% ಹೆಚ್ಚಳವನ್ನು ಕಂಡರು ಎನ್ನಲಾಗುತ್ತದೆ. ಸೂರ್ಯಕಾಂತಿ ಬೀಜಗಳು, ಬಾದಾಮಿ, ಪಾಲಕ್ ಮತ್ತು ಆವಕಾಡೊಗಳು ವಿಟಮಿನ್ ಇ ಯ ಉತ್ತಮ ಮೂಲಗಳಾಗಿವೆ.

ಕಬ್ಬಿಣ:

ಕಬ್ಬಿಣ:

ಕೆಂಪು ರಕ್ತ ಕಣಗಳು ನಿಮ್ಮ ಜೀವಕೋಶಗಳಿಗೆ ಆಮ್ಲಜನಕವನ್ನು ಸಾಗಿಸಲು ಕಬ್ಬಿಣವು ಸಹಾಯ ಮಾಡುತ್ತದೆ. ಇದು ಕೂದಲಿನ ಬೆಳವಣಿಗೆ ಸೇರಿದಂತೆ ಅನೇಕ ದೈಹಿಕ ಕಾರ್ಯಗಳಿಗೆ ಇದು ಪ್ರಮುಖ ಖನಿಜವಾಗಿದೆ. ರಕ್ತಹೀನತೆಗೆ ಕಾರಣವಾಗುವ ಕಬ್ಬಿಣದ ಕೊರತೆಯು ಕೂದಲು ಉದುರುವಿಕೆಗೆ ಪ್ರಮುಖ ಕಾರಣವಾಗಿದೆ. ಇದು ವಿಶೇಷವಾಗಿ ಮಹಿಳೆಯರಲ್ಲಿ ಸಾಮಾನ್ಯವಾಗಿದೆ. ಕಬ್ಬಿಣ ಅಧಿಕವಾಗಿರುವ ಆಹಾರಗಳಲ್ಲಿ ಮೊಟ್ಟೆ, ಮಾಂಸ, ಪಾಲಕ್ ಮತ್ತು ಹೆಸರುಬೇಳೆ ಸೇರಿವೆ.

ಸತು:

ಕೂದಲಿನ ಅಂಗಾಂಶಗಳ ಬೆಳವಣಿಗೆ ಮತ್ತು ದುರಸ್ತಿಯಲ್ಲಿ ಸತುವು ಪ್ರಮುಖ ಪಾತ್ರ ವಹಿಸುತ್ತದೆ. ಇದು ಕಿರುಚೀಲಗಳ ಸುತ್ತಲಿನ ಎಣ್ಣೆ ಗ್ರಂಥಿಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಕೂದಲು ಉದುರುವುದು ಸತು ಕೊರತೆಯ ಸಾಮಾನ್ಯ ಲಕ್ಷಣವಾಗಿದೆ. ಈ ಕಾರಣಕ್ಕಾಗಿ, ಸತುವನ್ನು ಸಂಪೂರ್ಣ ಆಹಾರದಿಂದ ಪಡೆಯುವುದು ಉತ್ತಮ. ಸತುವು ಅಧಿಕವಾಗಿರುವ ಆಹಾರಗಳಲ್ಲಿ ಪಾಲಕ್, ಗೋಧಿ ನುಚ್ಚು, ಕುಂಬಳಕಾಯಿ ಬೀಜಗಳು ಮತ್ತು ಹೆಸರುಬೇಳೆ ಸೇರಿವೆ.

ಪ್ರೋಟೀನ್:

ಕೂದಲು ಬಹುತೇಕ ಪ್ರೋಟೀನ್‌ನಿಂದ ಮಾಡಲ್ಪಟ್ಟಿದ್ದು, ಕೂದಲಿನ ಬೆಳವಣಿಗೆಗೆ ಸಾಕಷ್ಟು ಮುಖ್ಯವಾಗಿದೆ. ಪ್ರೋಟೀನ್ ಕೊರತೆಯು ಕೂದಲಿನ ಬೆಳವಣಿಗೆಯನ್ನು ಕಡಿಮೆ ಮಾಡಿ, ಕೂದಲು ಉದುರುವಿಕೆಗೆ ಕಾರಣವಾಗಬಹುದು. ಪ್ರೋಟೀನ್ ಉತ್ತಮ ಮೂಲವೆಂದರೆ, ಹಾಲು, ಮೊಟ್ಟೆ, ಪನ್ನೀರ್ ಇತ್ಯಾದಿ.

Read more about: hair hair care ಕೂದಲು
English summary

Are Dietary Supplements Helpful In Premature Baldness? Dietician Explains in Kannada

Here we talking about Are Dietary Supplements Helpful In Premature Baldness? Dietician Explains in Kannada, read on
Story first published: Saturday, August 27, 2022, 15:28 [IST]
X
Desktop Bottom Promotion