For Quick Alerts
ALLOW NOTIFICATIONS  
For Daily Alerts

ಕೂದಲು ಸೊಂಪಾಗಿ ಬೆಳೆಯಲು ಮೊಸರಿನ ಮಾಸ್ಕ್-ಬರೀ 15 ದಿನಗಳಲ್ಲಿ ಫಲಿತಾಂಶ

|

ನೀಳ, ಕಾಂತಿಯುಕ್ತ ಕೂದಲನ್ನು ಹೊಂದುವುದು ಬಹುತೇಕ ಎಲ್ಲಾ ಮಹಿಳೆಯರ ಕನಸಾಗಿದೆ. ನಮ್ಮ ತಲೆಗೂದಲು ಬೆಳೆಯುವ ವೇಗ ಸುಮಾರು ತಿಂಗಳಿಗೆ ಒಂದಿಚಿನಷ್ಟಿರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದು ಎಲ್ಲಾ ಸಮಯದಲ್ಲಿ ಲಭಿಸುವುದಿಲ್ಲ. ಒಂದು ವೇಳೆ ನಿಮ್ಮ ಕೂದಲು ಘಾಸಿಗೊಂಡಿದ್ದರೆ ನಿಮ್ಮ ಕೂದಲು ಸಾಮಾನ್ಯ ಗತಿಯ ಬೆಳವಣಿಗೆಯನ್ನು ಪಡೆಯದೇ ಹೋಗಬಹುದು.

Yogurt Masks

ಒಂದು ವೇಳೆ ನಿಮ್ಮ ಕೂದಲು ಬೆಳೆಯುತ್ತಿಲ್ಲ ಎಂದು ಅನ್ನಿಸಿದರೆ ಈಗ ಚಿಂತೆಗೆ ಕಾರಣವಿಲ್ಲ. ಇದಕ್ಕೆ ನಿಮ್ಮ ಅಡುಗೆಮನೆಯಲ್ಲಿರುವ ಕೆಲವು ಸುಲಭ ಸಾಮಾಗ್ರಿಗಳೇ ಸಾಕು. ಅತ್ಯಂತ ಸರಳ ಸಾಮಾಗ್ರಿ ಎಂದರೆ ಮೊಸರು. ಇದರಲ್ಲಿರುವ ಶಿಲೀಂಧ್ರ ನಿವಾರಕ ಗುಣ ತಲೆಹೊಟ್ಟನ್ನು ನಿವಾರಿಸಿ ನೆತ್ತಿಯ ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ. ಅಲ್ಲದೇ ಕೂದಲಿಗೆ ಮತ್ತು ಚರ್ಮಕ್ಕೆ ನೈಸರ್ಗಿಕ ಆದ್ರತೆಯನ್ನೂ ಒದಗಿಸುತ್ತದೆ. ಅಲ್ಲದೇ ತ್ವಚೆಯಲ್ಲಿ ಉತ್ಪತ್ತಿಯಾಗುವ ಹೆಚ್ಚುವರಿ ಜಿಡ್ಡನ್ನು ನಿಯಂತ್ರಿಸಿ ತ್ವಚೆಯ ಆಮ್ಲೀಯ-ಕ್ಷಾರಿಯ ಮಟ್ಟದ ಸಮತೋಲನವನ್ನು ಕಾಪಾಡಲು ನೆರವಾಗುತ್ತದೆ. ಬನ್ನಿ, ಕೂದಲ ಬೆಳವಣಿಗೆ ಹೆಚ್ಚಲು ಮೊಸರನ್ನು ಬಳಸುವುದು ಹೇಗೆ ಎಂಬುದನ್ನು ನೋಡೋಣ...

ಬಾಳೆಹಣ್ಣು ಮತ್ತು ಮೊಸರು

ಬಾಳೆಹಣ್ಣು ಮತ್ತು ಮೊಸರು

ಈ ಲೇಪ ಉತ್ತಮ ತೇವಕಾರಕ ಹಾಗೂ ಚರ್ಮದ ಆಳದಿಂದ ಸ್ವಚ್ಛಗೊಳಿಸುವ ಲೇಪವಾಗಿದೆ ಹಾಗೂ ಈ ಮೂಲಕ ಆರೋಗ್ಯಕರ ಕೂದಲು ಬೆಳೆಯಲು ನೆರವಾಗುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು:

ಅರ್ಧ ಚೆನ್ನಾಗಿ ಹಣ್ಣಾಗಿರುವ ಬಾಳೆಹಣ್ಣು

ಒಂದು ದೊಡ್ಡ ಚಮಚ ಮೊಸರು

ಮೂರು ಚಿಕ್ಕ ಚಮಚ ಜೇನು

ಒಂದು ಚಿಕ್ಕ ಚಮಚ ಲಿಂಬೆ ರಸ

ತಯಾರಿಕಾ ವಿಧಾನ

ಒಂದು ಸ್ವಚ್ಛವಾದ ಬೋಗುಣಿಯಲ್ಲಿ ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿ ನಯವಾದ ಲೇಪವಾಗಿಸಿ. ಇದಕ್ಕೆ ಮೊಸರು, ಜೇನು ಮತ್ತು ಈಗತಾನೇ ಹಿಂಡಿದ ಲಿಂಬೆರಸವನ್ನು ಬೆರೆಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈ ಲೇಪವನ್ನು ಕೂದಲ ಬುಡದಿಂದ ತುದಿಯವರೆಗೂ ಆವರಿಸುವಂತೆ ಬ್ರಶ್ ಮೂಲಕ ಹಚ್ಚಿಕೊಳ್ಳಿ. ಬಳಿಕ ಸುಮಾರು ಇಪ್ಪತ್ತೈದು ಮೂವತ್ತು ನಿಮಿಷ ಹಾಗೇ ಬಿಡಿ. ಬಳಿಕ ನಿಮ್ಮ ನಿತ್ಯದ ಸೌಮ್ಯ ಶಾಂಪೂ ಬಳಸಿ ನೀರಿನಿಂದ ತೊಳೆದುಕೊಳ್ಳಿ.

Most Read: ಸೌಂದರ್ಯ ಹೆಚ್ಚಿಸುವ 'ಮೊಸರು'-ಎಷ್ಟು ಹೊಗಳಿದರೂ ಸಾಲದು!

ಮೊಸರು ಮತ್ತು ಆಲಿವ್ ಎಣ್ಣೆ

ಮೊಸರು ಮತ್ತು ಆಲಿವ್ ಎಣ್ಣೆ

ಇದೊಂದು ಅದ್ಭುತ ಸಂಯೋಜನೆಯಾಗಿದೆ ಹಾಗೂ ಘಾಸಿಗೊಂಡ ಕೂದಲನ್ನು ಸರಿಪಡಿಸಿ ಇನ್ನಷ್ಟು ಘಾಸಿಯಾಗುವುದರಿಂದ ತಡೆಯುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು

ಒಂದು ದೊಡ್ಡ ಚಮಚ ಮೊಸರು

ಒಂದು ಕಪ್ ಮೊಸರು

ಒಂದು ದೊಡ್ಡ ಚಮಚ ಲಿಂಬೆರಸ

ಎರಡು ಕಪ್ ನೀರು.

ತಯಾರಿಕಾ ವಿಧಾನ

ಮೊದಲು ಒಂದು ಬೋಗುಣಿಯಲ್ಲಿ ನೀರು ಲಿಂಬೆರಸವನ್ನು ಮಿಶ್ರಣ ಮಾಡಿ ಪಕ್ಕದಲ್ಲಿಡಿ. ಬಳಿಕ ಆಲಿವ್ ಎಣ್ಣೆ, ಮೊಸರನ್ನು ಇನ್ನೊಂದು ಪಾತ್ರೆಯಲ್ಲಿ ಮಿಶ್ರಣ ಮಾಡಿ. ಈ ಲೇಪವನ್ನು ಕೂದಲಿಗೆ ಬುಡದಿಂದ ತುದಿಯವರೆಗೆ ಹಚ್ಚಿಕೊಂಡು ಸುಮಾರು ಇಪ್ಪತ್ತು ಇಪ್ಪತ್ತೈದು ನಿಮಿಷ ಒಣಗಲು ಬಿಡಿ. ಬಳಿಕ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ. ಬಳಿಕ ಮೊದಲು ಮಿಶ್ರಣ ಮಾಡಿಟ್ಟಿದ್ದ ಲಿಂಬೆರಸ ಮತು ನೀರನ್ನು ಬಳಸಿ ಕೂದಲನ್ನು ಒದ್ದೆಯಾಗಿಸಿ. ಈ ಲೇಪ ವಿಶೇಷವಾಗಿ ಎಣ್ಣೆಕೂದಲು ಇರುವವರಿಗೆ ಸೂಕ್ತವಾಗಿದೆ. ಈ ಲೇಪ ತ್ವಚೆಯಲ್ಲಿ ಎಣ್ಣೆ ಉತ್ಪತ್ತಿಯಾಗುವುದನ್ನು ನಿಯಂತ್ರಿಸುತ್ತದೆ ಹಾಗೂ ಮುಚ್ಚಿದ್ದ ಸೂಕ್ಷ್ಮರಂಧ್ರಗಳನ್ನು ಸ್ವಚ್ಛಗೊಳಿಸುತ್ತದೆ.

ಮೊಸರು ಮತ್ತು ಜೇನು

ಮೊಸರು ಮತ್ತು ಜೇನು

ಅಗತ್ಯವಿರುವ ಸಾಮಾಗ್ರಿಗಳು

ಅರ್ಧ ಕಪ್ ಮೊಸರು

ಒಂದು ದೊಡ್ಡ ಚಮಚ ಜೇನು

ಒಂದು ದೊಡ್ಡ ಚಮಚ ಸೇಬಿನ ಶಿರ್ಕಾ

ತಯಾರಿಕಾ ವಿಧಾನ:

ಈ ಮೂರನ್ನೂ ಒಂದು ಬಟ್ಟಲಿನಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಿಮ್ಮ ಕೂದಲನ್ನು ಹಲವು ಭಾಗಗಳಾಗಿ ವಿಂಗಡಿಸಿ ಪ್ರತಿ ಭಾಗಕ್ಕೂ ಪ್ರತ್ಯೇಕವಾಗಿ ಈ ಲೇಪವನ್ನು ಹಚ್ಚಿ ಸುಮಾರು ಅರ್ಧ ಘಂಟೆ ಕಾಲ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಅಗತ್ಯವೆನಿಸಿದರೆ ಸೌಮ್ಯ ಶಾಂಪೂವನ್ನು ಬಳಸಬಹುದು.

Most Read: ಬ್ಯೂಟಿ ಟಿಪ್ಸ್: ಮುಖದ ಕಾಂತಿ ಹೆಚ್ಚಿಸಲು ಮೊಸರಿನ ಲೇಪನ!

ಮೊಸರು, ಜೇನು ಮತ್ತು ಲೋಳೆಸರ

ಮೊಸರು, ಜೇನು ಮತ್ತು ಲೋಳೆಸರ

ಈ ಮಿಶ್ರಣದಲ್ಲಿ ಹಲವಾರು ವಿಟಮಿನ್ನುಗಳು ಮತ್ತು ಅಮೈನೋ ಅಮ್ಲಗಳಿರುತ್ತವೆ ಹಾಗೂ ಇವು ತಲೆಯ ತ್ವಚೆಯನ್ನು ಆರೋಗ್ಯಕರವಾಗಿರಿಸುತ್ತವೆ.

ಅಗತ್ಯವಿರುವ ಸಾಮಾಗ್ರಿಗಳು

*ಮೂರು ದೊಡ್ಡ ಚಮಚ ಲೋಳೆಸರದ ತಿರುಳು

*ಎರಡು ದೊಡ್ಡ ಚಮಚ ಮೊಸರು

*ಎರಡು ದೊಡ್ಡ ಚಮಚ ಜೇನು

ತಯಾರಿಕಾ ವಿಧಾನ

ಒಂದು ಬೋಗುಣಿಯಲ್ಲಿ ಲೋಳೆಸರ, ಆಲಿವ್ ಎಣ್ಣೆ ಮತ್ತು ಮೊಸರನ್ನು ಹಾಕಿ ಮಿಶ್ರಣ ಮಾಡಿ. ಈ ಲೇಪವನ್ನು ತಲೆಗೂದಲಿಗೆ ವೃತ್ತಾಕಾರದ ರೀತಿಯಲ್ಲಿ ಹಚ್ಚುತ್ತಾ ಹೋಗಿ. ಪೂರ್ಣವಾಗಿ ಹಚ್ಚಿಕೊಂಡ ಬಳಿಕ ಸುಮಾರು ನಲವತ್ತೈದು ನಿಮಿಷ ಹಾಗೇ ಬಿಡಿ. ಬಳಿಕ ಸಾಮಾನ್ಯ ತಣ್ಣಿರು ಮತ್ತು ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.

English summary

Yogurt Masks For Hair Growth-with in 15 days result

Long and strong lustrous hair is a dream for many women out there. If your hair is too damaged then there are less chances that your hair will grow in a healthy manner. You can use yogurt effectively for hair growth. The anti-fungal properties of yogurt help in getting rid of dandruff and keeping the scalp healthy. It naturally moisturises the hair and the scalp.
X
Desktop Bottom Promotion