For Quick Alerts
ALLOW NOTIFICATIONS  
For Daily Alerts

ಕೂದಲಿನ ಬೆಳವಣಿಗೆಗೆ ಬೆಳ್ಳುಳ್ಳಿಯನ್ನು ಬಳಸುವುದು ಹೇಗೆ?

|

ಕೂದಲು ಉದುರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನೀವು ಈಗಾಗಲೇ ಅಂಗಡಿಗಳಲ್ಲಿ ಸಿಗುವಂತಹ ಹಲವಾರು ಶಾಂಪೂ, ಕಂಡೀಷನರ್ ಹಾಗೂ ಇನ್ನಿತರ ಉತ್ಪನ್ನಗಳನ್ನು ಬಳಕೆ ಮಾಡಿಕೊಂಡಿರಬಹುದು. ಇದರಿಂದ ಸಿಕ್ಕಿರುವಂತಹ ಫಲಿತಾಂಶವು ತುಂಬಾ ನಿರಾಶೆ ಮೂಡಿಸಿರಬಹುದು. ಯಾಕೆಂದರೆ ಮಾರುಕಟ್ಟೆಯಲ್ಲಿ ಸಿಗುವಂತಹ ಉತ್ಪನ್ನಗಳು ಕೂದಲಿಗೆ ಕಾಂತಿ ನೀಡುವ ಬದಲು ಅದರಲ್ಲಿ ಇರುವಂತಹ ರಾಸಾಯನಿಕಗಳು ಹಲವಾರು ಸಮಸ್ಯೆಗಳು ಹುಟ್ಟು ಹಾಕುವುದು. ಹೀಗಾಗಿ ಅಂತಹ ರಾಸಾಯನಿಕಯುಕ್ತ ಉತ್ಪನ್ನಗಳ ಬದಲಿಗೆ ಮನೆ ಮದ್ದುಗಳನ್ನು ಬಳಸಿಕೊಂಡರೆ ಅದರಿಂದ ಹೆಚ್ಚಿನ ಲಾಭ ಆಗುವುದು ಮತ್ತು ಅಡ್ಡ ಪರಿಣಾಮಗಳು ಕೂಡ ಕಡಿಮೆ.

ಹೀಗಾಗಿ ಇಂದಿನ ದಿನಗಳಲ್ಲಿ ಹೆಚ್ಚಿನವರು ಮನೆ ಮದ್ದುಗಳಿಗೆ ಮೊರೆ ಹೋಗುತ್ತಿರುವರು. ಆದರೆ ಮನೆ ಮದ್ದುಗಳನ್ನು ಬಳಸುವ ವೇಳೆ ಕೂಡ ಸ್ವಲ್ಪ ಎಚ್ಚರಿಕೆ ಅಗತ್ಯ. ಯಾಕೆಂದರೆ ಇದಕ್ಕೆ ತುಂಬಾ ತಾಳ್ಮೆ ಬೇಕಾಗುವುದು ಮತ್ತು ಸರಿಯಾದ ಪ್ರಮಾಣ ಹಾಗೂ ಕ್ರಮದಲ್ಲಿ ಬಳಸಿಕೊಂಡರೆ ಆಗ ಖಂಡಿತವಾಗಿಯೂ ಫಲಿತಾಂಶ ಸಿಗುವುದು. ಈ ಲೇಖನದಲ್ಲಿ ಬೆಳ್ಳುಳ್ಳಿ ಬಳಸಿಕೊಂಡು ಕೂದಲು ಉದುರುವಿಕೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂದು ಹೇಳಿಕೊಡಲಿದ್ದೇವೆ. ಬೆಳ್ಳುಳ್ಳಿ ಹೆಚ್ಚಾಗಿ ಪ್ರತಿಯೊಂದು ಮನೆಯ ಅಡುಗೆ ಕೋಣೆಯಲ್ಲಿ ಲಭ್ಯವಿರುವುದು. ಇದು ಯಾವುದೇ ಅಡುಗೆಯ ರುಚಿ ಹೆಚ್ಚು ಮಾಡುವುದು. ಬೆಳ್ಳುಳ್ಳಿಯಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು ಕೂಡ ಇರುವ ಕಾರಣದಿಂದಾಗಿ ಇದನ್ನು ಭಾರತೀಯರು ಹೆಚ್ಚಾಗಿ ಬಳಕೆ ಮಾಡುವರು. ಬೆಳ್ಳುಳ್ಳಿಯು ಕೂದಲು ಉದುರುವಿಕೆ ಸಮಸ್ಯೆಯನ್ನು ತುಂಬಾ ಪರಿಣಾಮಕಾರಿ ಆಗಿ ನಿವಾರಣೆ ಮಾಡುವುದು ಎಂದು ಹೇಳಲಾಗುತ್ತದೆ. ಇದರಲ್ಲಿ ಇರುವಂತಹ ಕೆಲವೊಂದು ಅಂಶಗಳು ಕೂದಲು ಉದುರುವಿಕೆ ತಡೆದು, ಅದು ಚೆನ್ನಾಗಿ ಬೆಳೆಯಲು ನೆರವಾಗುವುದು.

Most Read: ದಿಂಬಿನಡಿ ಬೆಳ್ಳುಳ್ಳಿ ಇಟ್ಟು ಮಲಗಿದರೆ, ಆರೋಗ್ಯಕ್ಕೆ ದುಪ್ಪಟ್ಟು ಲಾಭ!

Garlic for Hair Growth

ಕೂದಲು ಉದುರುವಿಕೆಗೆ ತಡೆಯಲು ಬೆಳ್ಳುಳ್ಳಿ ಹೇಗೆ ನೆರವಾಗುವುದು?

1.ಬೆಳ್ಳುಳ್ಳಿಯಲ್ಲಿ ಇರುವಂತಹ ಕೆಲವೊಂದು ಅಂಶಗಳು ಕೂದಲು ಉದುರುವಿಕೆ ತಡೆಯಲು ತುಂಬಾ ನೆರವಾಗುವುದು.
2.ಇದರಲ್ಲಿ ಇರುವಂತಹ ಕೆಲವು ಪ್ರಮುಖ ಅಂಶಗಳಾಗಿರುವಂತಹ ಸತು, ಸಲ್ಫರ್ ಮತ್ತು ಕ್ಯಾಲ್ಸಿಯಂ ಕೂದಲಿಗೆ ನೆರವಾಗುವುದು.
3.ಇದರಲ್ಲಿ ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ. ಇದು ಕೂದಲು ಉದುರುವಿಕೆಗೆ ಕಾರಣವಾಗುವ ಕೀಟಾಣುಗಳು ಮತ್ತು ಬ್ಯಾಕ್ಟೀರಿಯಾವನ್ನು ಕೊಲ್ಲುವುದು.
4.ಇದರಲ್ಲಿ ಸೆಲೆನಿಯಂ ಎನ್ನುವ ಅಂಶವಿದೆ ಮತ್ತು ಇದು ರಕ್ತ ಸಂಚಾರ ಉತ್ತಮಪಡಿಸುವುದು. ಇದರಿಂದಾಗಿ ಕೂದಲಿನ ಬೆಳವಣಿಗೆ ಸರಾಗವಾಗಿ ಆಗುವುದು.
5.ಇದು ಕೂದಲಿನ ಕಿರು ಚೀಲಗಳನ್ನು ಶುದ್ಧೀಕರಿಸುವುದು. ಇದರಿಂದ ಕಿರು ಚೀಲ ಮುಚ್ಚುವುದು ತಪ್ಪುವುದು ಮತ್ತು ಕೂದಲು ಬಲಿಷ್ಠವಾಗುವುದು.
6.ತಲೆಹೊಟ್ಟು ನಿವಾರಣೆಗೆ ಇದು ಪರಿಣಾಮಕಾರಿ.

Most Read: ಬೆಳ್ಳುಳ್ಳಿ ಎಷ್ಟು ಉಪಕಾರಿಯೋ, ಅಷ್ಟೇ ಅಪಾಯಕಾರಿಯೂ ಕೂಡ!

ಬೆಳ್ಳುಳ್ಳಿ ಬಳಸುವ ವಿಧಾನಗಳು

ಕೂದಲಿನ ಬೆಳವಣಿಗೆಗೆ ಬೆಳ್ಳುಳ್ಳಿ ಮತ್ತು ತೆಂಗಿನ ಎಣ್ಣೆ

ತೆಂಗಿನ ಎಣ್ಣೆಯು ಕೂದಲಿನ ಆರೋಗ್ಯಕ್ಕೆ ಹಲವಾರು ರೀತಿಯ ಲಾಭಗಳನ್ನು ನೀಡುವುದು. ಇದನ್ನು ಬೆಳ್ಳುಳ್ಳಿ ಜತೆಗೆ ಸೇರಿಸಿಕೊಂಡಾಗ ಅದು ಕೂದಲು ಉದುರುವಿಕೆ ತಡೆಗಟ್ಟಲು ನೆರವಾಗುವುದು. ಎರಡು ಎಸಲು ಬೆಳ್ಳುಳ್ಳಿ ತೆಗೆದುಕೊಂಡು, ಅದನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ. ಈಗ ತೆಂಗಿನ ಎಣ್ಣೆಯನ್ನು ಸ್ವಲ್ಪ ಮಧ್ಯಮವಾಗಿ ಬಿಸಿ ಮಾಡಿ ಮತ್ತು ಅದಕ್ಕೆ ಬೆಳ್ಳುಳ್ಳಿ ಹಾಕಿಕೊಳ್ಳಿ. ಈ ಮಿಶ್ರಣವನ್ನು ತಲೆಬುರುಡೆಗೆ ಹಚ್ಚಿಕೊಂಡು, ಸರಿಯಾಗಿ ಮಸಾಜ್ ಮಾಡಿ. 30 ನಿಮಿಷ ಕಾಲ ಈ ಮಿಶ್ರಣವು ತಲೆಯಲ್ಲಿ ಹಾಗೆ ಇರಲಿ ಮತ್ತು ಇದರ ಬಳಿಕ ಸಾಮಾನ್ಯದಂತೆ ಕೂದಲು ತೊಳೆಯಿರಿ.

ಬೆಳ್ಳುಳ್ಳಿ ಮತ್ತು ಜೇನುತುಪ್ಪದಿಂದ ಕೂದಲ ಬೆಳವಣಿಗೆ

ಕೂದಲು ಉದುರುವಿಕೆ ತಡೆಯಲು ಬೆಳ್ಳುಳ್ಳಿ ಜತೆಗೆ ಜೇನುತುಪ್ಪ ಕೂಡ ಬೆರೆಸಿಕೊಳ್ಳಬಹುದು. 8 ಎಸಲು ಬೆಳ್ಳುಳ್ಳಿ ತೆಗೆದುಕೊಳ್ಳಿ ಮತ್ತು ಅದನ್ನು ಜಜ್ಜಿಕೊಂಡು ಸುಮಾರು ಎರಡು ಚಮಚ ರಸ ತೆಗೆಯಿರಿ. ಇದಕ್ಕೆ ಒಂದು ಚಮಚ ಜೇನು ತುಪ್ಪ ಹಾಕಿಕೊಳ್ಳಿ. ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಕೂದಲು ಹಾಗೂ ತಲೆಬುರುಡೆಗೆ ಸರಿಯಾಗಿ ಹಚ್ಚಿಕೊಳ್ಳಿ. 20 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ಲಘು ಶಾಂಪೂ ಹಾಕಿಕೊಂಡು ಕೂದಲು ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಸಲ ಈ ವಿಧಾನ ಅನುಸರಿಸಿಕೊಂಡು ಹೋಗಿ.

Most Read: ಮನೆ ಔಷಧ: ಬೆಳ್ಳುಳ್ಳಿ ಹಾಗೂ ಜೇನುತುಪ್ಪದ ಜಬರ್ದಸ್ತ್ ಪವರ್

ಶುಂಠಿ ಮತ್ತು ಬೆಳ್ಳುಳ್ಳಿಯಿಂದ ಕೂದಲಿನ ಬೆಳವಣಿಗೆ

ಶುಂಠಿಯು ಪ್ರತಿಯೊಂದು ಮನೆಯ ಅಡುಗೆ ಕೋಣೆಯಲ್ಲಿ ಸಿಗುವಂತಹ ವಸ್ತು. ಈಗ ಶುಂಠಿ ಹಾಗೂ ಬೆಳ್ಳುಳ್ಳಿಯನ್ನು ಮಿಶ್ರಣ ಮಾಡಿಕೊಂಡು ಕೂದಲು ಉದುರುವಿಕೆ ತಡೆಯಬಹುದು. ಎರಡು ಮಧ್ಯಮ ಗಾತ್ರದ ಶುಂಠಿ ತುಂಡುಗಳು ಮತ್ತು ಸುಮಾರು 8 ಎಸಲು ಬೆಳ್ಳುಳ್ಳಿ ತೆಗೆದುಕೊಳ್ಳಿ ಮತ್ತು ಇವೆರಡನ್ನು ಜತೆಯಾಗಿ ಜಜ್ಜಿಕೊಳ್ಳಿ. ಎರಡು ಸರಿಯಾಗಿ ಪೇಸ್ಟ್ ಆದ ಬಳಿಕ ಅದನ್ನು ಬದಿಗೆ ಇಡಿ. ಒಂದು ತವಾಗೆ ಸ್ವಲ್ಪ ಎಣ್ಣೆ ಹಾಕಿ. ಇದಕ್ಕೆ ನೀವು ತೆಂಗಿನ ಎಣ್ಣೆ ಅಥವಾ ಆಲಿವ್ ತೈಲ ಬಳಸಬಹುದು. ಈ ಎಣ್ಣೆಗೆ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ. ಈ ಪೇಸ್ಟ್ ನ ಬಣ್ಣವು ಕಂದು ಬಣ್ಣಕ್ಕೆ ತಿರುಗುವ ತನಕ ಎಣ್ಣೆ ಬಿಸಿ ಮಾಡಿ. ಈಗ ಮಿಶ್ರಣವನ್ನು ತಣ್ಣಗಾಗಲು ಬಿಡಿ. ಎಣ್ಣೆ ತಣ್ಣಗಾದ ಬಳಿಕ ಎಣ್ಣೆಯನ್ನು ಸೋಸಿಕೊಳ್ಳಿ. ಇದರ ಬಳಿಕ ಎಣ್ಣೆಯನ್ನು ತಲೆಗೆ ಹಾಕಿಕೊಂಡು ಮಸಾಜ್ ಮಾಡಿ ಮತ್ತು 30 ನಿಮಿಷ ಕಾಲ ಹಾಗೆ ಬಿಡಿ. ಲಘು ಶಾಂಪೂ ಬಳಸಿಕೊಂಡು ಕೂದಲು ತೊಳೆಯಿರಿ. ವಾರದಲ್ಲಿ ಎರಡು ಸಲ ನೀವು ಇದನ್ನು ಬಳಸಿಕೊಂಡರೆ ಉತ್ತಮ ಫಲಿತಾಂಶ ಸಿಗುವುದು.

ಆರಂಭದಲ್ಲಿ ನೀವು ತಲೆಬುರುಡೆಗೆ ಬೆಳ್ಳುಳ್ಳಿ ಬಳಸಿಕೊಂಡ ವೇಳೆ ನಿಮಗೆ ಸ್ವಲ್ಪ ಮಟ್ಟಿಗೆ ಕಿರಿಕಿರಿ ಅನಿಸುವುದು. ಆದರೆ ನಿಮಗೆ ಈ ಕಿರಿಕಿರಿ ಅಥವಾ ಸಮಸ್ಯೆಯು ತುಂಬಾ ಹೊತ್ತು ಕಾಡಿದರೆ ಆಗ ನೀವು ಇದನ್ನು ಬಳಸುವುದನ್ನು ನಿಲ್ಲಿಸಿಬಿಡಿ. ಬೆಳ್ಳುಳ್ಳಿ ಸಾರಭೂತ ತೈಲವನ್ನು ತಲೆ ಬುರುಡೆಗೆ ನೇರವಾಗಿ ಬಳಸಿಕೊಳ್ಳಬಾರದು ಎಂದು ನೀವು ಯಾವಾಗಲೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು.

English summary

Ways to Use Garlic for Hair Growth

Still stressing over that stubborn hair fall? Here is another ingredient from your kitchen that can help you control hair fall effectively- Garlic. Garlic is one of the most commonly found ingredients in an Indian kitchen. It is also a part of almost every Indian dish which not just enhances the taste of the food but also adds a lot of nutritional values to the food. Garlic can be used to control hair fall effectively. It has certain properties which can help you fight hair fall.
X
Desktop Bottom Promotion