For Quick Alerts
ALLOW NOTIFICATIONS  
For Daily Alerts

ಸಣ್ಣ ವಯಸ್ಸಿನ ಮಕ್ಕಳಲ್ಲಿ ಕಾಣಿಸುವ ಬಿಳಿ ಕೂದಲಿನ ಸಮಸ್ಯೆಗೆ ಕಾರಣಗಳು ಹಾಗೂ ಮನೆಮದ್ದುಗಳು

|

ಮಕ್ಕಳಲ್ಲಿ ಅಕಾಲಿಕ ಬಿಳಿ ಕೂದಲು ಕಾಣಿಸಿಕೊಂಡರೆ ಅದು ದೊಡ್ಡ ಸಮಸ್ಯೆ. ಇದರಿಂದ ಹೆಚ್ಚು ಚಿಂತೆಗೆ ಒಳಗಾಗುವವರು ಪೋಷಕರು. ಯಾಕೆಂದರೆ ಮಕ್ಕಳ ಬಗ್ಗೆ ಪೋಷಕರಿಗೆ ಹೆಚ್ಚಿನ ಕಾಳಜಿ ಇರುವುದು. ವಯಸ್ಸಾಗುವ ವೇಳೆ ಕೂದಲು ಬಿಳಿಯಾಗುವುದು ಸಾಮಾನ್ಯವೆಂದು ಹೇಳಬಹುದು. ಆದರೆ ಮಕ್ಕಳಲ್ಲಿ ಬಿಳಿ ಕೂದಲು ಕಾಣಿಸುವುದು ಏನಾದರೂ ಸಮಸ್ಯೆಯಿಂದ.

ಅದರಲ್ಲೂ ಇಂದಿನ ದಿನಗಳಲ್ಲಿ 20ರ ಹಾಗೂ 25ರ ಹರೆಯದ ಮಕ್ಕಳಲ್ಲಿ ಬಿಳಿ ಕೂದಲು ಕಾಣಿಸಿಕೊಳ್ಳುವುದು ಸಾಮಾನ್ಯವಾಗುತ್ತಿದೆ. ಆದರೆ ಎರಡು ವರ್ಷದ ಮಕ್ಕಳಲ್ಲೂ ಈ ಸಮಸ್ಯೆಯು ಕಾಣಿಸುವುದು. ಇದಕ್ಕೆ ಸಾಮಾನ್ಯ ಕಾರಣವೆಂದರೆ ಜೀವನಶೈಲಿಯಲ್ಲಿ ಆಗಿರುವಂತಹ ಬದಲಾವಣೆಗಳು.

ಕೆಲವೊಂದು ಪ್ರಮುಖ ಪೋಷಕಾಂಶಗಳ ಕೊರತೆ ಮತ್ತು ಸಮತೋಲಿತ ಆಹಾರ ಸೇವನೆ ಮಾಡದೆ ಇರುವುದು ಕೂಡ ಇದಕ್ಕೆ ಕಾರಣವಾಗಿದೆ. ಇದರಿಂದಾಗಿ ಮಕ್ಕಳಲ್ಲಿ ಅಕಾಲಿಕವಾಗಿ ಕೂದಲು ಬಿಳಿಯಾಗುವುದು. ತಜ್ಞರ ಪ್ರಕಾರ ಮಕ್ಕಳಲ್ಲಿ ಬಿಳಿ ಕೂದಲಿನ ಸಮಸ್ಯೆಯನ್ನು ಕೆಲವು ಮುನ್ನೆಚ್ಚರಿಕೆ ಮತ್ತು ಮನೆಮದ್ದಿನಿಂದ ನಿವಾರಣೆ ಮಾಡಬಹುದಾಗಿದೆ.

ಮಕ್ಕಳಲ್ಲಿ ಬಿಳಿ ಕೂದಲು ನಿವಾರಣೆ ಮಾಡಲು ಕೆಲವೊಂದು ಮನೆಮದ್ದುಗಳು

ಮಕ್ಕಳಲ್ಲಿ ಬಿಳಿ ಕೂದಲು ನಿವಾರಣೆ ಮಾಡಲು ಕೆಲವೊಂದು ಮನೆಮದ್ದುಗಳು

ಮಕ್ಕಳಲ್ಲಿ ಅಕಾಲಿಕವಾಗಿ ಕೂದಲು ಬಿಳಿಯಾಗುವಂತಹ ಸಮಸ್ಯೆಯು ಕಾಣಿಸುತ್ತಿದ್ದರೆ ನೀವು ಇದು ಯಾವುದೇ ರೀತಿಯ ವೈದ್ಯಕೀಯ ಸಮಸ್ಯೆಯಿಂದ ಬಂದಿರುವುದೇ ಎಂದು ಮೊದಲು ತಿಳಿದುಕೊಳ್ಳಬೇಕು. ಅಂತಹ ಸಮಸ್ಯೆಯು ಅಲ್ಲದೆ ಇದ್ದರೆ ಆಗ ನೀವು ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡು ಬಿಳಿ ಕೂದಲಿನ ಸಮಸ್ಯೆ ನಿವಾರಣೆ ಮಾಡಬಹುದು.

ಕರಿಬೇವಿನ ಎಲೆಗಳು

ಕರಿಬೇವಿನ ಎಲೆಗಳು

ಚಿಕ್ಕ ಉರಿಯಲ್ಲಿ ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಕೆಲವು ಬೇವಿನ ಎಲೆಗಳನ್ನು ಬೇಯಿಸಬೇಕು. ತಣ್ಣಗಾದ ಬಳಿಕ ಈ ಎಣ್ಣೆಯನ್ನು ಕೂದಲ ಬುಡಕ್ಕೆ ನಯವಾಗಿ ಮಸಾಜ್ ಮಾಡುವುದರಿಂದ ಬಿಳಿ ಕೂದಲು ಕಪ್ಪಗಾಗತೊಡಗುತ್ತದೆ. ಈ ಎಣ್ಣೆಗೆ ಕೊಂಚ ಮೊಸರನ್ನು ಅಥವಾ ಮಜ್ಜಿಗೆಯನ್ನು ಸೇರಿಸಿಯೂ ಬಳಸಬಹುದು.

ಮೊಸರು ಮತ್ತು ಯೀಸ್ಟ್

ಮೊಸರು ಮತ್ತು ಯೀಸ್ಟ್

ಒಂದು ಚಮಚ ಯೀಸ್ಟ್ ಬೆರೆಸಿದ ಮೊಸರನ್ನು ಪ್ರತಿನಿತ್ಯವು ಸೇವಿಸಿದರೆ ಅದರಿಂದ ಬಿಳಿ ಕೂದಲಿನ ಸಮಸ್ಯೆ ನಿವಾರಿಸಬಹುದು.

ನೆಲ್ಲಿಕಾಯಿ

ನೆಲ್ಲಿಕಾಯಿ

ನೆಲ್ಲಿಕಾಯಿ ತುಂಡುಗಳನ್ನು ತೆಂಗಿನೆಣ್ಣೆಯಲ್ಲಿ ಕುದಿಸಿರಿ ಮತ್ತು ಇದನ್ನು ತಲೆಬುರುಡೆಗೆ ಬಳಸಿಕೊಳ್ಳಿ. ರಾತ್ರಿ ವೇಳೆ ನೆಲ್ಲಿಕಾಯಿ ತುಂಡುಗಳನ್ನು ನೀರಿನಲ್ಲಿ ನೆನೆಸಲು ಹಾಕಿಡಿ ಮತ್ತು ಇದನ್ನು ಬೆಳಗ್ಗೆ ನೀವು ಮಕ್ಕಳ ಕೂದಲು ತೊಳೆಯಲು ಬಳಸಿ.

Most Read:ದೇಹದ ಈ ಭಾಗದಲ್ಲಿ ಮಚ್ಚೆ ಇರುವವರು ತುಂಬಾನೇ ಅದೃಷ್ಟವಂತರಂತೆ!

ನೆಲ್ಲಿಕಾಯಿ ಮತ್ತು ಬಾದಾಮಿ ಎಣ್ಣೆ

ನೆಲ್ಲಿಕಾಯಿ ಮತ್ತು ಬಾದಾಮಿ ಎಣ್ಣೆ

ನೆಲ್ಲಿಕಾಯಿ ಮತ್ತು ಬಾದಾಮಿ ಎಣ್ಣೆಯ ಮಿಶ್ರಣವನ್ನು ಬಳಸಿಕೊಂಡು ತಲೆಬುರುಡೆಗೆ ಸರಿಯಾಗಿ ಮಸಾಜ್ ಮಾಡಿಕೊಳ್ಳಿ. ರಾತ್ರಿಯಿಡಿ ಹಾಗೆ ಬಿಡಿ ಮತ್ತು ಬೆಳಗ್ಗೆ ಎದ್ದ ಬಳಿಕ ತೊಳೆಯಿರಿ. ಮಕ್ಕಳಲ್ಲಿ ಬಿಳಿ ಕೂದಲಿನ ಸಮಸ್ಯೆಗೆ ಇದು ತುಂಬಾ ಪರಿಣಾಮ ಕಾರಿಯಾಗಿರುವುದು.

ಹಸುವಿನ ಹಾಲಿನ ತುಪ್ಪ

ಹಸುವಿನ ಹಾಲಿನ ತುಪ್ಪ

ಹಸುವಿನ ಹಾಲಿನಿಂದ ಮಾಡಿರುವಂತಹ ತುಪ್ಪದಿಂದ ವಾರದಲ್ಲಿ ಎರಡು ಸಲ ಮಕ್ಕಳ ತಲೆಗೆ ಮಸಾಜ್ ಮಾಡಿ. ಇದರಿಂದ ಅಕಾಲಿಕವಾಗಿ ಕೂದಲು ಬಿಳಿಯಾಗುವುದನ್ನು ತಡೆಯ ಬಹುದಾಗಿದೆ. ಕೂದಲು ಬಿಳಿಯಾಗಿರುವಂತಹ ಸಮಸ್ಯೆಯು ತೀವ್ರವಾಗಿದ್ದರೆ ಆಗ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದರಿಂದ ಯಾವುದೇ ದೊಡ್ಡ ಸಮಸ್ಯೆ ಬರುವ ಮೊದಲುಅದಕ್ಕೆ ನೀವು ಚಿಕಿತ್ಸೆ ಮಾಡಿಸಿಕೊಳ್ಳುವುದು ಒಳ್ಳೆಯದು.

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆಯಲ್ಲಿ ವಿಟಮಿನ್‍ಗಳು, ಒಮೆಗಾ-3 ಕೊಬ್ಬಿನ ಆಮ್ಲಗಳು ಇರುತ್ತವೆ. ಈ ಅಂಶಗಳು ಕೂದಲಿನ ಬೆಳವಣಿಗೆಗೆ ಸಹಕರಿಸುತ್ತವೆ.ಇವುಗಳು ಕೂದಲನ್ನು ಸದೃಢಗೊಳಿಸುತ್ತವೆ. ಕೂದಲಿನ ಬೆಳವಣಿಗೆಗೆ ನೆರವಾಗುವ ಅತ್ಯುತ್ತಮ ಮನೆಮದ್ದುಗಳಲ್ಲಿ ಇದು ಸಹ ಒಂದಾಗಿದೆ. ಅಲ್ಲದೆ ಕೂದಲಿನ ತುದಿಗಳು ಒಡೆಯಲು ಪ್ರಮುಖ ಕಾರಣ ಅಗತ್ಯ ಪ್ರಮಾಣದ ಎಣ್ಣೆ ಮತ್ತು ಪೋಷಕಾಂಶ ಇಲ್ಲದಿರುವುದಾಗಿದೆ. ನಿಮ್ಮ ಕೂದಲ ತುದಿಗಳನ್ನು ಮೊಟ್ಟೆ ಬೆರೆಸಿದ ಬಿಸಿ ಸಾಸಿವೆ ಎಣ್ಣೆಯಲ್ಲಿ ಮಸಾಜ್ ಮಾಡುವುದರಿಂದ ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು. ಇನ್ನು ಬಿಳಿ ಕೂದಲಿನ ಸಮಸ್ಯೆಗೆ ಎರಡರಿಂದ ಮೂರು ಟೇಬಲ್ ಚಮಚದಷ್ಟು ಸಾಸಿವೆ ಎಣ್ಣೆಗೆ ಸ್ವಲ್ಪ ಮದರಂಗಿ ಎಲೆಗಳನ್ನು ಹಾಕಿ ಚಿಕ್ಕ ಉರಿಯಲ್ಲಿ ಎಲೆಗಳು ಪೂರ್ಣವಾಗಿ ಕರಗುವವರೆಗೆ ಕುದಿಸಬೇಕು. ತಣ್ಣಗಾದ ಬಳಿಕ ಈ ಎಣ್ಣೆಯನ್ನು ಪ್ರತಿದಿನ ಕೂದಲಿಗೆ ಹಚ್ಚಿಕೊಳ್ಳುವ ಮೂಲಕ ಹೊಳಪಿನ ನೈಸರ್ಗಿಕವಾಗಿ ಕಪ್ಪಗಾಗಿರುವ ಕೂದಲನ್ನು ಪಡೆಯಬಹುದು.

ಮಕ್ಕಳಲ್ಲಿ ಬಿಳಿ ಕೂದಲಿಗೆ ಕಾರಣಗಳು

ಮಕ್ಕಳಲ್ಲಿ ಬಿಳಿ ಕೂದಲಿಗೆ ಕಾರಣಗಳು

ಕೂದಲು ಪ್ರೋಟೀನ್ ನಿಂದ ಮಾಡಲ್ಪಟ್ಟಿದೆ ಮತ್ತು ಇದು ಚರ್ಮದ ಮೇಲ್ಭಾಗದಲ್ಲಿ ಇರುವಂತಹ ಕಿರುಚೀಲಗಳಲ್ಲಿ ಇದು ಬೆಳೆಯುವುದು. ಕೂದಲು ಉತ್ಪತ್ತಿ ಮಾಡಲು ಚರ್ಮವು ಪರಿವರ್ತನೆ ಹೊಂದುವುದು. ವ್ಯಕ್ತಿಯೊಬ್ಬನ ದೈಹಿಕ ನೋಟದಲ್ಲಿ ಕೂದಲು ಅತೀ ಮುಖ್ಯ ಪಾತ್ರ ವಹಿಸವುಉದು. ಕೂದಲು ಬಿಳಿಯಾಗಲು ಆರಂಭವಾದಾಗ ಅದು ಆ ವ್ಯಕ್ತಿಯ ಸೌಂದರ್ಯದ ಮೇಲೆ ಪರಿಣಾಮ ಬೀರುವುದು. ಅದರಲ್ಲೂ ಮಕ್ಕಳಲ್ಲಿ ಇದು ತೀರ ಕೆಟ್ಟದಾಗಿ ಕಾಣಿಸುವುದು. ಮಕ್ಕಳಲ್ಲಿ ಕೂದಲು ಬಿಳಿಯಾಗಲು ಕಾರಣಗಳು ಏನು ಎಂದು ನಾವು ಇಲ್ಲಿ ತಿಳಿಯುವ...

Most Read:ಬ್ಯೂಟಿ ಟಿಪ್ಸ್: ಮನೆಯಲ್ಲಿಯೇ ತಯಾರಿಸಿ ನೋಡಿ ಈರುಳ್ಳಿ ಫೇಸ್ ಪ್ಯಾಕ್

ಅನುವಂಶೀಯತೆ

ಅನುವಂಶೀಯತೆ

ಎರಡು ವರ್ಷದ ಮಕ್ಕಳಲ್ಲಿ ಕೂದಲು ಬಿಳಿಯಾಗುವ ಸಮಸ್ಯೆಯು ಕಂಡು ಬಂದರೆ ಅದಕ್ಕೆ ಮುಖ್ಯವಾಗಿ ಅನುವಂಶೀಯತೆಯು ಕಾರಣವಾಗಿರುವುದು. ಕುಟುಂಬದಲ್ಲಿ ಬೇಗನೆ ಕೂದಲು ಬಿಳಿಯಾಗುವ ಸಮಸ್ಯೆಯು ಇದ್ದರೆ ಆಗ ಮಕ್ಕಳಲ್ಲಿ ಅಕಾಲಿಕವಾಗಿ ಕೂದಲು ಬಿಳಿಯಾಗುವ ಸಮಸ್ಯೆಯು ಬರುವುದು.

ತಲೆಹೊಟ್ಟು

ತಲೆಹೊಟ್ಟು

ತಲೆಹೊಟ್ಟು ಮತ್ತು ಕೂದಲು ಬಿಳಿಯಾಗುವುದಕ್ಕೆ ಸಂಬಂಧವಿದೆ ಎಂದು ಅಧ್ಯಯನಗಳು ಕಂಡು ಕೊಂಡಿವೆ. ಒಂದು ಮತ್ತೊಂದನ್ನು ಉಂಟು ಮಾಡದೆ ಇದ್ದರೂ ಇದು ಪರಸ್ಪರ ಸಂಬಂಧಿಸಿರುವುದು. ತಲೆಹೊಟ್ಟಿನ ಸಮಸ್ಯೆಯು ತೀವ್ರವಾಗಿದ್ದರೆ ಆಗ ಅಕಾಲಿಕವಾಗಿ ಕೂದಲು ಬಿಳಿಯಾಗುವಂತಹ ಸಮಸ್ಯೆಯು ಬರಬಹುದು. ತಲೆಹೊಟ್ಟಿನ ಸಮಸ್ಯೆಗೆ ಸರಳ ಟಿಪ್ಸ್ ಇಲ್ಲಿದೆ ನೋಡಿ: ಮೆಂತೆ ಕಾಳುಗಳನ್ನು ರಾತ್ರಿಯೆಲ್ಲ ನೆನೆ ಹಾಕಿ, ಬೆಳಗ್ಗೆ ಅದನ್ನು ಪುಡಿ ಮಾಡಿಕೊಳ್ಳಿ. ಇದರಿಂದ ಪೇಸ್ಟ್ ತಯಾರಿಸಿಕೊಂಡು ಅದನ್ನು ಕೂದಲು ಮತ್ತು ಕೂದಲಿನ ಬುಡಕ್ಕೆ ಲೇಪಿಸಿ. ಒಂದು ಟೇಬಲ್ ಚಮಚ ಮೆಂತೆ ಪೇಸ್ಟ್‌ಗೆ ಒಂದು ಟೀ ಚಮಚ ಲಿಂಬೆರಸವನ್ನು ಬೆರೆಸಿಕೊಳ್ಳಿ. ಈ ಎರಡನ್ನು ಬೆರೆಸಿಕೊಂಡು ಕೂದಲಿಗೆ ಲೇಪಿಸಿಕೊಳ್ಳಿ. ಆಗ ಕೂದಲಿಗೆ ಪೋಷಣೆಯು ದೊರೆಯುತ್ತದೆ. ತಲೆಹೊಟ್ಟು ಮಾಯವಾಗುತ್ತದೆ.

ಅನಾರೋಗ್ಯ ಮತ್ತು ಕಾಯಿಲೆಗಳು

ಅನಾರೋಗ್ಯ ಮತ್ತು ಕಾಯಿಲೆಗಳು

ಟ್ಯುಬೆರಸ್ ಸ್ಕ್ಲೆರೋಸಿಸ್ ಮತ್ತು ವಿಟಲಿಗೋ ನಂತಹ ಕೆಲವೊಂದು ಕಾಯಿಲೆಗಳು ಕೂದಲಿನ ವರ್ಣದ್ರವ್ಯ ಕುಂದುವಂತೆ ಮಾಡುವುದು. ಇದರಿಂದಾಗಿ ಕೂದಲು ಬಿಳಿಯಾಗುವುದು, ಮಕ್ಕಳಲ್ಲಿ ಅನಾರೋಗ್ಯ, ಗಡ್ಡೆಗಳು ಇತ್ಯಾದಿಗಳು ಕಾಣಿಸಿಕೊಳ್ಳಬಹುದು.

Most Read:ಕುತ್ತಿಗೆಯ ಸುತ್ತ ಕಪ್ಪು ಬಣ್ಣವಾಗಿದೆಯೇ? ಹಾಗಾದರೆ ಈ ಫೇಸ್ ಪ್ಯಾಕ್ ಹಚ್ಚಿ ನೋಡಿ...

ಥೈರಾಯ್ಡ್

ಥೈರಾಯ್ಡ್

ಥೈರಾಯ್ಡ್ ಸಮಸ್ಯೆಯು ಹಾರ್ಮೋನುಗಳ ಮೇಲೆ ಕೆಲವೊಂದು ಪರಿಣಾಮಗಳನ್ನು ಉಂಟು ಮಾಡುವುದು ಮತ್ತು ಇದು ಮಕ್ಕಳಲ್ಲೂ ಸಮಸ್ಯೆ ಸೃಷ್ಟಿಸಬಹುದು. ಮಕ್ಕಳ ರಕ್ತದಲ್ಲಿ ಥೈರಾಯ್ಡ್ ಅಂಶವು ಹೆಚ್ಚಾಗಿದ್ದರೆ ಆಗ ಮಕ್ಕಳಲ್ಲಿ ಬಿಳಿ ಕೂದಲಿನ ಸಮಸ್ಯೆಯು ಕಾಣಿಸಿಕೊಳ್ಳಬಹುದು. ಅಷ್ಟೇ ಅಲ್ಲ ಕೆಲವೊಮ್ಮೆ ಮಕ್ಕಳಲ್ಲಿ ಒಣ ಹಾಗೂ ತುರಿಕೆ ಉಂಟು ಮಾಡುವ ಚರ್ಮದ ಸಮಸ್ಯೆ ಕಂಡು ಬಂದರೆ, ಇದು ಥೈರಾಯ್ಡ್ ಸಮಸ್ಯೆಯ ಲಕ್ಷಣವಾಗಿದೆ. ಉಗುರು ಉದ್ದಗಿನ ಗೆರೆಯಂತೆ ಒಡೆದುಹೋಗಿದ್ದರೆ ಕೂಡಲೇ ವೈದ್ಯರಿಗೆ ತೊರಿಸಿ

English summary

Premature White Hair in Children Causes & Home Remedies

Think grey hair, and you think old people! However, what if a kid experiences greying of hair and already has grey & white hair at his age? As a parent, it is something that will probably make you anxious. And if you are worried about your little one’s plight, fret not! Here, we talk about the causes, treatments, and home remedies for premature grey & white hair in kids!
X
Desktop Bottom Promotion