For Quick Alerts
ALLOW NOTIFICATIONS  
For Daily Alerts

ಕೂದಲು ಸೊಂಪಾಗಿ ಬೆಳೆಯುಲು ಈರುಳ್ಳಿ ಜ್ಯೂಸ್ ಬಳಸಿ-ಬರೀ 15 ದಿನಗಳಲ್ಲಿ ಫಲಿತಾಂಶ ಪಡೆಯಿರಿ

|

ಕೂದಲು ಉದುರುವಿಕೆ ಸಮಸ್ಯೆ ಎನ್ನುವುದು ಇಂದಿನ ದಿನಗಳಲ್ಲಿ ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ. ಇದು ಪುರುಷರಲ್ಲೂ ಕಾಣಿಸಿಕೊಳ್ಳುವುದು. ಇದಕ್ಕೆ ಹಲವಾರು ರೀತಿಯ ಕಾರಣಗಳು ಇದೆ. ಮುಖ್ಯವಾಗಿ ಇಂದಿನ ಒತ್ತಡದ ಜೀವನಶೈಲಿ ಮತ್ತು ಕಲುಷಿತ ವಾತಾವರಣ. ಈ ಎರಡು ಅಂಶಗಳು ಕೂದಲು ಉದುರುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವುದು. ಕಲುಷಿತ ನೀರಿನಿಂದ ಸ್ನಾನ ಮಾಡಿದರೂ ಕೂದಲು ಉದುರುವಿಕೆ ಸಮಸ್ಯೆ ಕಾಣಿಸುವುದು. ಅನುವಂಶೀಯವಾಗಿಯೂ ಕೂದಲು ಉದುರುವಿಕೆ ಸಮಸ್ಯೆ ಕಾಣಬಹುದು. ಮಹಿಳೆಯರಲ್ಲಿ ಮುಖ್ಯವಾಗಿ ಹಾರ್ಮೋನು ಬದಲಾವಣೆ ಸಂದರ್ಭದಲ್ಲಿ ಕೂದಲು ಉದುರುವಿಕೆ ಸಮಸ್ಯೆಯು ಕಂಡುಬರುವುದು.

ಅದರಲ್ಲೂ ಗರ್ಭಧಾರಣೆ ವೇಳೆ ಕೂದಲು ಉದುರುವಿಕೆ ಸಮಸ್ಯೆಯು ಅತಿಯಾಗಿ ಇರುವುದು. ಆದರೆ ಹೆರಿಗೆ ಬಳಿಕ ಇದು ಕಡಿಮೆ ಆಗುವುದು. ಇದಕ್ಕೆ ಚಿಂತೆ ಮಾಡಬೇಕಾಗಿಲ್ಲ. ಕೂದಲು ಉದುರುವಿಕೆಗೆ ಪರಿಹಾರ ಎನ್ನುವುದು ಇಲ್ಲವೆಂದೇ ಹೆಚ್ಚಿನವರು ಭಾವಿಸಿದ್ದಾರೆ. ಮಾರುಕಟ್ಟೆಯಲ್ಲಿ ಸಿಗುವಂತಹ ದುಬಾರಿ ಬೆಲೆಯ ಶಾಂಪೂ, ಕಂಡೀಷನರ್ ಇತ್ಯಾದಿಗಳನ್ನು ತಂದು ಬಳಸಿಕೊಳ್ಳುವರು. ಆದರೆ ಇದು ಅಡ್ಡ ಪರಿಣಾಮಗಳನ್ನು ಉಂಟು ಮಾಡುವುದು. ಅದೇ ಮನೆಮದ್ದುಗಳನ್ನು ಬಳಸಿಕೊಂಡರೆ ಕೂದಲು ಉದುರುವಿಕೆ ಸಮಸ್ಯೆಯನ್ನು ನೈಸರ್ಗಿಕವಾಗಿ ನಿವಾರಣೆ ಮಾಡಬಹುದು ಮತ್ತು ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಇಲ್ಲ. ಮನೆಮದ್ದುಗಳನ್ನು ಬಳಸಿಕೊಳ್ಳುವಾಗ ಮುಖ್ಯವಾಗಿ ತಾಳ್ಮೆ ಬೇಕು. ಯಾಕೆಂದರೆ ಇದು ಫಲಿತಾಂಶ ನೀಡುವುದು ತುಂಬಾ ನಿಧಾನ. ಈ ಕಾರಣದಿಂದಾಗಿ ಮನೆಮದ್ದನ್ನು ಬಳಸುವ ಮೊದಲು ನೀವು ತಾಳ್ಮೆ ವಹಿಸುವುದನ್ನು ಕಲಿಯಬೇಕು.

ಈರುಳ್ಳಿ ರಸದಿಂದ ಕೂದಲು ಉದುರುವಿಕೆ ನಿವಾರಣೆ

ಈರುಳ್ಳಿ ರಸದಿಂದ ಕೂದಲು ಉದುರುವಿಕೆ ನಿವಾರಣೆ

ಇಂದು ಈ ಲೇಖನದಲ್ಲಿ ನಾವು ನಿಮಗೆ ಈರುಳ್ಳಿ ರಸದಿಂದ ಕೂದಲು ಉದುರುವಿಕೆ ನಿವಾರಣೆ ಮತ್ತು ಕೂದಲು ಬೆಳೆಯುವುದು ಹೇಗೆ ಎಂದು ಹೇಳಿಕೊಡಲಿದ್ದೇವೆ. ಈರುಳ್ಳಿ ಪ್ರತಿಯೊಂದು ಮನೆಯಲ್ಲೂ ಲಭ್ಯವಾಗುವುದು. ಇದರ ರಸವನ್ನು ನೀವು ಕೂದಲಿನ ಬೆಳವಣಿಗೆಗೆ ಬಳಸಿಕೊಳ್ಳಬಹುದು. ಇದರಿಂದ ಕೂದಲು ಉದುರುವಿಕೆ ನಿವಾರಣೆ ಮಾಡಬಹುದು. ಈರುಳ್ಳಿಯಲ್ಲಿ ಕೆಲವೊಂದು ಪ್ರಮುಖ ಪೋಷಕಾಂಶಗಳು ಮತ್ತು ಖನಿಜಾಂಶಗಳು ಇದೆ. ಇದರು ಕೂದಲಿನ ಬೆಳವಣಿಗೆಗೆ ನೆರವಾಗುವುದು ಮತ್ತು ಕೂದಲನ್ನು ದಪ್ಪವಾಗಿಸುವುದು. ಈರುಳ್ಳಿ ರಸದ ಜತೆಗೆ ಇತರ ಕೆಲವು ನೈಸರ್ಗಿಕ ಸಾಮಗ್ರಿಗಳನ್ನು ಬಳಸಿಕೊಂಡು ಕೂದಲು ಉದುರುವಿಕೆ ತಡೆಯಬಹುದು ಮತ್ತು ಅದು ಬೆಳವಣಿಗೆಗೆ ಕೂಡ ನೆರವಾಗುವುದು. ಕೂದಲು ಉದುರುವಿಕೆ ಸಮಸ್ಯೆಗೆ ಈರುಳ್ಳಿ ಬಳಸುವ ವಿಧಾನಗಳು

 ಈರುಳ್ಳಿ ರಸ

ಈರುಳ್ಳಿ ರಸ

ಒಂದು ಈರುಳ್ಳಿಯ ರಸ ತೆಗೆಯಿರಿ ಮತ್ತು ಅದರಲ್ಲಿ ಹತ್ತಿ ಉಂಡೆ ಅದ್ದಿಕೊಂಡು ಆ ರಸವನ್ನು ತಲೆಬುರುಡೆಗೆ ಸರಿಯಾಗಿ ಹಚ್ಚಿಕೊಳ್ಳಿ. ಇದನ್ನು ಹಚ್ಚಿಕೊಂಡ ಬಳಿಕ ಕೈಬೆರಳುಗಳನ್ನು ಬಳಸಿಕೊಂಡು ತಲೆಬುರುಡೆಗೆ ಸರಿಯಾಗಿ ಮಸಾಜ್ ಮಾಡಿ. ಇದನ್ನು ಹಾಗೆ 30 ನಿಮಿಷ ಕಾಲ ಬಿಡಿ ಮತ್ತು ಬಳಿಕ ಕೂದಲನ್ನು ಸಾಮಾನ್ಯದಂತೆ ತೊಳೆಯಿರಿ. ಈ ಕ್ರಮವನ್ನು ನೀವು ವಾರದಲ್ಲಿ ನಾಲ್ಕರಿಂದ ಐದು ಸಲ ಮಾಡಿದರೆ ಆಗ ನಿಮಗೆ ಉತ್ತಮ ಫಲಿತಾಂಶ ಸಿಗುವುದು.

ಈರುಳ್ಳಿ ರಸ ಮತ್ತು ಮೊಟ್ಟೆ

ಈರುಳ್ಳಿ ರಸ ಮತ್ತು ಮೊಟ್ಟೆ

ಕೂದಲಿನ ಬೆಳವಣಿಗೆ ಮತ್ತು ಅದರ ಗುಣಮಟ್ಟಕ್ಕೆ ಮೊಟ್ಟೆ ಬಳಸುವುದು ಹೇಗೆ ಎಂದು ನಿಮಗೆ ಈಗಾಗಲೇ ತಿಳಿದಿದೆ. ಮೊಟ್ಟೆಯನ್ನು ಈರುಳ್ಳಿ ರಸದ ಜತೆಗೆ ಸೇರಿಸಿಕೊಂಡಾಗ ಆಗ ನಿಮಗೆ ಮತ್ತಷ್ಟು ಉತ್ತಮ ಫಲಿತಾಂಶ ಸಿಗುವುದು. ನೀವು ಒಂದು ಇಡೀ ಮೊಟ್ಟೆಯ ಲೋಳೆ ತೆಗೆದುಕೊಳ್ಳಿ ಮತ್ತು ಅದಕ್ಕೆ ಒಂದು ಚಮಚ ಈರುಳ್ಳಿ ರಸ ಹಾಕಿ. ಈರುಳ್ಳಿ ರಸ ಮತ್ತು ಮೊಟ್ಟೆಯ ಲೋಳೆಯನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ ಮತ್ತು ದಪ್ಪಗಿನ ಫೇಸ್ಟ್ ಮಾಡಿ. ಈ ಮಿಶ್ರಣಕ್ಕೆ ನೀವು ಕೆಲವು ಹನಿ ಸಾರಭೂತ ತೈಲವನ್ನು ಹಾಕಿಕೊಳ್ಳಬಹುದು. ಈಗ ಈ ಮಿಶ್ರಣವನ್ನು ತಲೆಬುರುಡೆ ಮತ್ತು ಕೂದಲಿಗೆ ಸರಿಯಾಗಿ ಹಚ್ಚಿಕೊಳ್ಳಿ. ಮಿಶ್ರಣವನ್ನು ಕೂದಲಿಗೆ ಸರಿಯಾಗಿ ಹಚ್ಚಿಕೊಂಡ ಬಳಿಕ ಕೂದಲನ್ನು ಶಾವರ್ ಕ್ಯಾಪ್ ನಿಂದ ಮುಚ್ಚಿಕೊಳ್ಳಿ. 30 ನಿಮಿಷ ಕಾಲ ಮಿಶ್ರಣವು ತಲೆಯಲ್ಲಿ ಹಾಗೆ ಇರಲಿ ಮತ್ತು ಇದರ ಬಳಿಕ ನೀವು ಶಾಂಪೂ ಹಾಕಿಕೊಂಡು ಕೂದಲು ತೊಳೆಯಿರಿ. ವಾರದಲ್ಲಿ ಎರಡು ಅಥವಾ ಮೂರು ಸಲ ನೀವು ಈ ಮನೆಮದ್ದನ್ನು ಬಳಸಿಕೊಳ್ಳಬಹುದು.

ತೆಂಗಿನೆಣ್ಣೆ ಮತ್ತು ಈರುಳ್ಳಿ ರಸ

ತೆಂಗಿನೆಣ್ಣೆ ಮತ್ತು ಈರುಳ್ಳಿ ರಸ

ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವ ಮತ್ತು ಕೂದಲನ್ನು ಆರೋಗ್ಯವಾಗಿ ಇಡುವಂತಹ ಮತ್ತೊಂದು ಸಾಮಗ್ರಿ ಎಂದರೆ ಅದು ತೆಂಗಿನ ಎಣ್ಣೆ. ಎರಡು ಚಮಚ ತೆಂಗಿನ ಎಣ್ಣೆ ತೆಗೆದುಕೊಳ್ಳಿ ಮತ್ತು ಎರಡು ಚಮಚ ಈರುಳ್ಳಿ ರಸ ತೆಗೆದುಕೊಳ್ಳಿ. ಇದನ್ನು ಜತೆಯಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಕೂದಲಿನ ಬುಡದಿಂದ ತುದಿ ತನಕ ಸರಿಯಾಗಿ ಹಚ್ಚಿಕೊಳ್ಳಿ ಮತ್ತು ಸರಿಯಾಗಿ ಮಸಾಜ್ ಮಾಡಿ. ಈ ಮಿಶ್ರಣವನ್ನು ತಲೆಯಲ್ಲಿ ಹಾಗೆ 30 ನಿಮಿಷ ಕಾಲ ಬಿಡಿ. 30 ನಿಮಿಷ ಬಳಿಕ ನೀವು ಲಘುವಾದ ಶಾಂಪೂ ಬಳಸಿಕೊಂಡು ಕೂದಲು ತೊಳೆಯಿರಿ. ಈ ಮನೆಮದ್ದನ್ನು ಎರಡು ದಿನಕ್ಕೊಮ್ಮೆ ನೀವು ಬಳಸಿಕೊಳ್ಳಬಹುದು. ತಲೆಹೊಟ್ಟು ಕೂಡ ನಿವಾರಣೆ ಮಾಡಬೇಕು ಎಂದಾಗಿದ್ದರೆ ಆಗ ನೀವು ಕೆಲವು ಹನಿ ಚಾ ಮರದ ಎಣ್ಣೆಯನ್ನು ಇದಕ್ಕೆ ಹಾಕಿಕೊಳ್ಳಿ.

ಪರಿಣಾಮಕಾರಿ ಫಲಿತಾಂಶ ಪಡೆಯಬೇಕಾದರೆ

ಪರಿಣಾಮಕಾರಿ ಫಲಿತಾಂಶ ಪಡೆಯಬೇಕಾದರೆ

ಪರಿಣಾಮಕಾರಿ ಫಲಿತಾಂಶ ಪಡೆಯಬೇಕಾದರೆ ಆಗ ನೀವು ಈ ಮನೆಮದ್ದನ್ನು ನಿಯಮಿತವಾಗಿ ಬಳಸಿಕೊಳ್ಳಬೇಕು. ಕೂದಲಿನ ಬೆಳವಣಿಗೆಗೆ ಸಮಯ ಬೇಕಾಗುವುದು ಮತ್ತು ತಾಳ್ಮೆ ಮುಖ್ಯ. ಕೇಲವೇ ದಿನಗಳಲ್ಲಿ ನಿಮ್ಮ ಕೂದಲು ಬೆಳೆದು ಉದ್ದವಾಗಲಿದೆ ಎಂದು ನಿರೀಕ್ಷೆ ಮಾಡಬೇಡಿ. ಈ ಮನೆಮದ್ದನ್ನು ಬಳಸುವ ಜತೆಗೆ ನೀವು ಆರೋಗ್ಯಕರ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋಗಬೇಕು. ಆರೋಗ್ಯಕರ ಹಾಗೂ ಸಮತೋಲಿತ ಆಹಾರದಿಂದಾಗಿ ಕೂದಲು ಬೆಳೆಯುವುದು ಮತ್ತು ಕೂದಲಿನ ಗುಣಮಟ್ಟವು ಉತ್ತಮವಾಗುವುದು. ಈರುಳ್ಳಿ ರಸದಿಂದ ನಿಮಗೆ ಅಲರ್ಜಿ ಕಾಣಿಸಿಕೊಳ್ಳುತ್ತಲಿದ್ದರೆ ಆಗ ನೀವು ಈ ವಿಧಾನವನ್ನು ಬಳಸಿಕೊಳ್ಳಬೇಡಿ. ಬಳಸಿಕೊಂಡ ಬಳಿಕ ತಲೆಯಲ್ಲಿ ತುರಿಕೆ ಅಥವಾ ಕಿರಿಕಿರಿ ಅನಿಸಿದರೆ ಆಗ ನೀವು ತಕ್ಷಣವೇ ಅದನ್ನು ತೊಳೆಯಿರಿ ಮತ್ತು ಮುಂದಕ್ಕೆ ನೀವು ಇದನ್ನು ಬಳಸಲು ಹೋಗಬೇಡಿ.

English summary

Onion Juice for Hair Growth-with in 15 days result!

Are you also tired of the stubborn hair fall and dreaming about thick and long hair? Do not worry you do not have to depend on various products that are loaded with chemicals to treat hair fall. It takes some extra efforts to treat hair fall. You also need to have a lot of patience to allow your hair to regrow. One of the natural ingredients which can stimulate hair growth is onion. Onion is the most common ingredient which you can find in almost every kitchen. Now you can use it for hair growth as well. It can help you control hair fall. Onion contains certain minerals which stimulate hair growth and makes your hair thicker.
X
Desktop Bottom Promotion