For Quick Alerts
ALLOW NOTIFICATIONS  
For Daily Alerts

ನೈಸರ್ಗಿಕ ಹೇರ್ ಮಾಸ್ಕ್‌ಗಳು- ಬರೀ ಎರಡೇ ವಾರದಲ್ಲಿ ಕೂದಲು ಬಿಳಿಯಾಗುವ ಸಮಸ್ಯೆ ನಿವಾರಣೆ!

|

ದಟ್ಟವಾದ ಕಪ್ಪು ಕೂದಲಿನ ಮಧ್ಯೆ ಬೆಳ್ಳಿ ಗೆರೆಗಳಂತೆ ಬಿಳಿ ಕೂದಲು ಕಾಣಿಸಿಕೊಂಡರೆ ಅದಕ್ಕಿಂತ ದೊಡ್ಡ ಸಮಸ್ಯೆಯು ಮತ್ತೊಂದಿಲ್ಲ. ಅದರಲ್ಲೂ ಸೌಂದರ್ಯದ ಬಗ್ಗೆ ತುಂಬಾ ಕಾಳಜಿ ವಹಿಸುವಂತಹ ಮಹಿಳೆಯರ ತಲೆಯಲ್ಲಿ ಬಿಳಿ ಕೂದಲು ಕಾಣಿಸಿಕೊಂಡರಂತೂ ಅವರು ಆಕಾಶವೇ ತಲೆ ಮೇಲೆ ಬಿದ್ದಂತೆ ವರ್ತಿಸುವರು. ಇಂತಹ ಸಂದರ್ಭದಲ್ಲಿ ಬಿಳಿ ಕೂದಲನ್ನು ಮತ್ತೆ ಕಪ್ಪು ಮಾಡಲು ಇನ್ನಿಲ್ಲದಂತೆ ಸರ್ಕಸ್ ಮಾಡುವರು.

ಮಾರುಕಟ್ಟೆಯಲ್ಲಿ ಸಿಗುವಂತಹ ಕೂದಲು ಕಪ್ಪು ಮಾಡುವಂತಹ ಪ್ರತಿಯೊಂದು ಉತ್ಪನ್ನಗಳನ್ನು ಬಳಸಿಕೊಳ್ಳುವರು. ಆದರೆ ಇದರಿಂದ ಆಗುವ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನಬಹುದು. ಯಾಕೆಂದರೆ ರಾಸಾಯನಿಕಯುಕ್ತ ಉತ್ಪನ್ನಗಳು ಕೂದಲಿಗೆ ಮತ್ತಷ್ಟು ಹಾನಿ ಉಂಟು ಮಾಡುವುದು. ಇದರಿಂದ ಬಿಳಿ ಕೂದಲಿನ ನಿವಾರಣೆಗೆ ನೈಸರ್ಗಿಕವಾದ ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಳ್ಳುವುದು ಉತ್ತಮ. ಈ ಲೇಖನದಲ್ಲಿ ಕೆಲವೊಂದು ಮನೆಮದ್ದನ್ನು ಬಳಸಿಕೊಂಡು ಬಿಳಿ ಕೂದಲಿನ ನಿವಾರಣೆ ಮಾಡುವುದು ಹೇಗೆ ಎಂದು ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿದುಕೊಳ್ಳಿ. ಮನೆಯಲ್ಲೇ ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸುವುದು ಹೇಗೆ?

ನೆಲ್ಲಿಕಾಯಿ ಮತ್ತು ಮದರಂಗಿ ಪ್ಯಾಕ್

ನೆಲ್ಲಿಕಾಯಿ ಮತ್ತು ಮದರಂಗಿ ಪ್ಯಾಕ್

ಬೇಕಾಗುವ ಸಾಮಗ್ರಿಗಳು

*1 ಕಪ್ ತಾಜಾ ಮದರಂಗಿ ಪೇಸ್ಟ್

*3 ಚಮಚ ನೆಲ್ಲಿಕಾಯಿ ಹುಡಿ

*1 ಚಮಚ ಕಾಫಿ ಹುಡಿ

*ಕೈಗವಚ

*ಹಚ್ಚಲು ಒಂದು ಬ್ರಷ್

*ಬೇಕಾಗುವ ಸಮಯ

1 ಗಂಟೆ

ವಿಧಾನ

ವಿಧಾನ

ಒಂದು ಪ್ಲಾಸ್ಟಿಕ್ ಪಿಂಗಾಣಿಯಲ್ಲಿ ಎಲ್ಲವನ್ನು ಜತೆಯಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ. ಪೇಸ್ಟ್ ತುಂಬಾ ದಪ್ಪಗೆ ಇದ್ದರೆ ಆಗ ನೀವು ಇದಕ್ಕೆ ನೀರು ಬೆರೆಸಿಕೊಳ್ಳಿ. ಕೈಗವಚ ಹಾಕಿಕೊಳ್ಳಿ ಮತ್ತು ಈ ಮಿಶ್ರಣವನ್ನು ನೀವು ಬ್ರಷ್ ಬಳಸಿಕೊಂಡು ಕೂದಲಿಗೆ ಹಚ್ಚಿಕೊಳ್ಳಿ. ಬಿಳಿಯಾಗಿರುವ ಕೂದಲಿನ ಸಂಪೂರ್ಣ ಭಾಗಕ್ಕೆ ಇದನ್ನು ಹಚ್ಚಿಕೊಳ್ಳಿ.

ಒಂದು ಗಂಟೆ ಕಾಲ ಹಾಗೆ ಬಿಡಿ ಮತ್ತು ಇದು ತಲೆಯಲ್ಲಿ ಸಂಪೂರ್ಣವಾಗಿ ಒಣಗಲಿ.

ಇದರ ಬಳಿಕ ಸಲ್ಫೇಟ್ ಮುಕ್ತವಾಗಿರುವಂತಹ ಶಾಂಪೂ ಬಳಸಿಕೊಂಡು ಕೂದಲು ತೊಳೆಯಿರಿ.

Most Read: ಕುತ್ತಿಗೆಯ ನೆರಿಗೆಯನ್ನು ನಿವಾರಿಸಲು ಸೂಕ್ತ ಮನೆಮದ್ದುಗಳು

ವಿಧಾನ

ವಿಧಾನ

ನೀರಿನಲ್ಲಿ ಚಾ ಎಲೆಗಳನ್ನು ಕುದಿಸಿಕೊಳ್ಳಿ ಮತ್ತು ಇದು ಕೆಲವು ನಿಮಿಷ ಕಾಲ ಹಾಗೆ ತಣ್ಣಗಾಗಲು ಬಿಡಿ.

ಒಮ್ಮೆ ಚಾ ತಣ್ಣಗಾದ ಬಳಿಕ ಇದನ್ನು ಕೂದಲಿಗೆ ಹಚ್ಚಿಕೊಳ್ಳಿ ಮತ್ತು ಒಂದು ಗಂಟೆ ಕಾಲ ಹಾಗೆ ಇರಲಿ.

ಇದರ ಬಳಿಕ ತಣ್ಣೀರಿನಿಂದ ಕೂದಲನ್ನು ತೊಳೆಯಿರಿ.

ಶಾಂಪೂ ಬಳಸಿಕೊಳ್ಳಬೇಡಿ.

ಮದರಂಗಿ ಪ್ಯಾಕ್

ಮದರಂಗಿ ಪ್ಯಾಕ್

ಬೇಕಾಗುವ ಸಾಮಗ್ರಿಗಳು

2 ಚಮಚ ಚಾ ಎಲೆಗಳು

4 ಚಮಚ ಮದರಂಗಿ ಹುಡಿ

1 ಚಮಚ ಲಿಂಬೆರಸ

1 ಚಮಚ ನೆಲ್ಲಿ ಕಾಯಿ ಹುಡಿ

ಹಚ್ಚಿಕೊಳ್ಳಲು ಬ್ರಷ್

ಕೈಗವಚ

ಕಂಡೀಷನರ್

Most Read: ಕೂದಲಿಗೆ ಉಪ್ಪನ್ನು ಬಳಸುವುದರಿಂದಾಗುವ ಐದು ಅನುಕೂಲಗಳು

ವಿಧಾನ

ವಿಧಾನ

*ಒಂದು ಕಪ್ ನೀರಿನಲ್ಲಿ ಮದರಂಗಿ ಹುಡಿಯನ್ನು ನೆನೆಸಿಡಿ ಮತ್ತು 8 ಗಂಟೆಗಳ ಕಾಲ ಅದು ನೆನೆಯಲಿ. ರಾತ್ರಿ ಮದರಂಗಿಯನ್ನು ನೀವು ನೀರಿನಲ್ಲಿ ನೆನೆಯಲು ಹಾಕಿ.

*ಬೆಳಗ್ಗೆ ಚಹಾ ಎಲೆಗಳನ್ನು ನೀರಿನಲ್ಲಿ ಕುದಿಸಿಕೊಳ್ಳಿ ಮತ್ತು ಕೆಲವು ನಿಮಿಷ ಹಾಗೆ ಇರಲಿ. ಬಳಿಕ ತಣ್ಣಗಾಗಲು ಬಿಡಿ.

*ಚಹಾ ತಣ್ಣಗಾದ ಬಳಿಕ, ಇದಕ್ಕೆ ನೆನೆಸಲು ಹಾಕಿದ್ದ ಮದರಂಗಿ ಪೇಸ್ಟ್ ಹಾಕಿ. ಇದರ ಬಳಿಕ ಈ ಮಿಶ್ರಣಕ್ಕೆ ಲಿಂಬೆರಸ ಮತ್ತು ನೆಲ್ಲಿಕಾಯಿ ಹುಡಿ ಹಾಕಿಕೊಳ್ಳಿ. ಇದರ ಬಳಿಕ ಸರಿಯಾಗಿ ಮಿಶ್ರಣ ಮಾಡಿಕೊಂಡು ನಯವಾದ ಪೇಸ್ಟ್ ಮಾಡಿಕೊಳ್ಳಿ.

ಕೈಗವಚ ಹಾಕಿಕೊಳ್ಳಿ ಮತ್ತು ಇದರ ಬಳಿಕ ಮಿಶ್ರಣವನ್ನು ಬ್ರಷ್ ಬಳಸಿಕೊಂಡು ಕೂದಲಿಗೆ ಹಚ್ಚಿಕೊಳ್ಳಿ. ಬಿಳಿಯಾದ ಕೂದಲಿನ ಎಲ್ಲಾ ಭಾಗಕ್ಕೆ ಹಚ್ಚಿಕೊಳ್ಳಿ.

*ಒಂದು ಗಂಟೆ ಕಾಲ ಹಾಗೆ ಬಿಡಿ ಅಥವಾ ಈ ಪೇಸ್ಟ್ ಒಣಗುವ ತನಕ ಬಿಡಿ.

ಸಲ್ಫೇಟ್ ಇಲ್ಲದೆ ಇರುವ ಶಾಂಪೂ ಬಳಸಿಕೊಂಡು ಕೂದಲು ತೊಳೆಯಿರಿ.

ನೆಲ್ಲಿಕಾಯಿ ಹೇರ್ ಪ್ಯಾಕ್

ನೆಲ್ಲಿಕಾಯಿ ಹೇರ್ ಪ್ಯಾಕ್

ನೆಲ್ಲಿಕಾಯಿಯು ಕೂದಲಿಗೆ ತುಂಬಾ ಒಳ್ಳೆಯದು ಎಂದು ಸಾಬೀತಾಗಿದೆ ಮತ್ತು ಇದನ್ನು ಡೈ ಪೇಸ್ಟ್ ಆಗಿ ಬಳಸಿಕೊಳ್ಳಬೇಕು. ನೆಲ್ಲಿಕಾಯಿ ರಸ ಮತ್ತು ಮದರಂಗಿ ಬಳಸಿಕೊಂಡು ಕೂದಲಿಗೆ ಹಚ್ಚಿಕೊಳ್ಳಬೇಕು. ನೆಲ್ಲಿಕಾಯಿಯು ಕೂದಲು ಬಲಗೊಳ್ಳಲು ನೆರವಾಗುವುದು ಮತ್ತು ತಲೆಬುರುಡೆಯು ಕಳೆದುಕೊಂಡಿರುವ ಮೊಶ್ಚಿರೈಸರ್ ಪಡೆಯಲು ನೆರವಾಗುವುದು. ಮದರಂಗಿಯಲ್ಲಿರುವಂತಹ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶೀಲಿಂಧ್ರ ವಿರೋಧಿ ಗುಣಗಳು ತಲೆಬುರುಡೆಯಲ್ಲಿ ಪಿಎಚ್ ಮಟ್ಟವನ್ನು ಕಾಪಾಡುವುದು. ನೆಲ್ಲಿಕಾಯಿ ಮತ್ತು ಮದರಂಗಿಯ ಮಿಶ್ರಣವು ಕೂದಲು ಬಿಳಿಯಾಗುವುದನ್ನು ತಡೆಯಲು ತುಂಬಾ ಒಳ್ಳೆಯ ಮಿಶ್ರಣ. ತಿಂಗಳಲ್ಲಿ ಒಂದು ಸಲ ಇದನ್ನು ಬಳಸಿಕೊಳ್ಳಿ.

ಮೆಹೆಂದಿ ಮತ್ತು ಮೊಸರಿನ ಹೇರ್ ಪ್ಯಾಕ್

ಮೆಹೆಂದಿ ಮತ್ತು ಮೊಸರಿನ ಹೇರ್ ಪ್ಯಾಕ್

ಪರಿಶುದ್ಧವಾದ ಮೆಹೆಂದಿಯನ್ನು ಇದಕ್ಕೆ ಬಳಸಿ. ಪ್ಯಾಕ್‌ ಮಾಡಿರುವ ಮೆಹಂದಿಯನ್ನು ಬಳಸಬೇಡಿ. ರಾಸಾಯನಿಕಗಳಿಂದ ಮುಕ್ತವಾದ ಮೆಹಂದಿಯು ಇದಕ್ಕೆ ಒಳ್ಳೆಯದು. ಇದನ್ನು ಮಾಡಲು ಮೆಹಂದಿಯನ್ನು ನೀರಿನ ಬದಲಿಗೆ ಬ್ಲಾಕ್ ಟೀಯಲ್ಲಿ ನೆನೆಸಿ. ರಾತ್ರಿಯಿಡೀ ಇದನ್ನು ನೆನೆಯಲು ಬಿಟ್ಟು, ಬೆಳಗ್ಗೆ ಇದಕ್ಕೆ ಒಂದು ಟೇಬಲ್ ಚಮಚ ಆಲೀವ್ ಎಣ್ಣೆಯನ್ನು ಬೆರೆಸಿ. ನಂತರ ಅರ್ಧ ಕಪ್ ಮೊಸರು ಅಥವಾ ಒಂದು ಮೊಟ್ಟೆಯನ್ನು ಬೆರೆಸಿಕೊಳ್ಳಿ. ಆಮೇಲೆ ಇದನ್ನು ನಿಮ್ಮ ಕೂದಲಿಗೆ ಲೇಪಿಸಿ. 30 ನಿಮಿಷ ಬಿಟ್ಟು, ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ, ಹೀಗೆ ವಾರದಲ್ಲಿ ಎರಡು ಮೂರು ದಿನ ಮಾಡುವುದರಿಂದ ಹೊಳಪಿನ ನೈಸರ್ಗಿಕವಾಗಿ ಕಪ್ಪಗಾಗಿರುವ ಕೂದಲನ್ನು ಪಡೆಯಬಹುದು.

Most Read: ಬ್ಯೂಟಿ ಟಿಪ್ಸ್: ಮನೆಯಲ್ಲಿಯೇ ತಯಾರಿಸಿ ನೋಡಿ ಈರುಳ್ಳಿ ಫೇಸ್ ಪ್ಯಾಕ್

ಈರುಳ್ಳಿ ರಸದ ಹೇರ್ ಪ್ಯಾಕ್

ಈರುಳ್ಳಿ ರಸದ ಹೇರ್ ಪ್ಯಾಕ್

ಕೂದಲನ್ನು ಬುಡದಿಂದಲೇ ಕಪ್ಪಾಗಿಸುವ ಕಿಣ್ವ ಕ್ಯಾಟಲಸೆ ಎನ್ನುವುದು ಈರುಳ್ಳಿಯಲ್ಲಿದೆ. ಈರುಳ್ಳಿ ರಸದಲ್ಲಿ ಬಿಯೊಟಿನ್, ಮೆಗ್ನಿಶಿಯಂ, ತಾಮ್ರ, ವಿಟಮಿನ್ ಸಿ, ಫೋಸ್ಪರಸ್, ಸಲ್ಫರ್, ವಿಟಮಿನ್ ಬಿ1 ಮತ್ತು ಬಿ6 ಹಾಗೂ ಫಾಲಟೆ ಇದೆ. ಇವುಗಳು ಕೂದಲನ್ನು ಕಪ್ಪಾಗಿಸುವುದು ಮತ್ತು ಕೂದಲು ಉದುರುವುದನ್ನು ತಡೆಯುವುದು. ಒಂದು ಈರುಳ್ಳಿಯಿಂದ ರಸ ತೆಗೆದು ಅದನ್ನು ಕೂದಲಿಗೆ ಹಚ್ಚಿಕೊಳ್ಳಿ. ಅದರಲ್ಲೂ ಬುಡಕ್ಕೆ ಸರಿಯಾಗಿ ಹಚ್ಚಿಕೊಳ್ಳಿ. 40 ನಿಮಿಷ ಹಾಗೆ ಬಿಟ್ಟು ಬಳಿಕ ತೊಳೆಯಿರಿ. ಪರಿಣಾಮಕಾರಿ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಸಲ ಬಳಸಿ.

ಆಲೂಗಡ್ಡೆಯ ಮಾಸ್ಕ್

ಆಲೂಗಡ್ಡೆಯ ಮಾಸ್ಕ್

ನಿಮ್ಮ ಬಿಳಿಕೂದಲನ್ನು ಕಪ್ಪಗಾಗಿಸಲು, ಹಸಿ ಆಲೂಗಡ್ಡೆಯನ್ನು ಬೇಯಿಸಿಕೊಳ್ಳಿ ನಂತರ ಆ ನೀರಿನಿಂದ ಕೂದಲನ್ನು ತೊಳೆದುಕೊಳ್ಳಿ. ಒಣಗಿದ ನಂತರ ಕೂದಲಿಗೆ ಮೊಸರಿನ ಮಾಸ್ಕ್ ಅನ್ನು ಹಚ್ಚಿಕೊಳ್ಳಿ ಹತ್ತು ನಿಮಿಷಗಳ ನಂತರ ಕೂದಲನ್ನು ತೊಳೆದುಕೊಳ್ಳಿ.

English summary

Natural Hair Mask-with in two weeks get rid of White Hair!

Gray hair is among the most dreaded nightmares that women have. You might disagree, but no one really gives gray hair much thought until you find one of your own. That’s when it starts to feel like the world is crashing down on you. Like everything is changing. And we, as human beings, do not like change. While some of us make peace with it and gracefully transition into silver vixens, some of us like to take our time before we make the transition.
Story first published: Saturday, February 2, 2019, 13:10 [IST]
X
Desktop Bottom Promotion