For Quick Alerts
ALLOW NOTIFICATIONS  
For Daily Alerts

ಬರೀ 15 ದಿನಗಳಲ್ಲಿಯೇ ಕೂದಲು ಉದುರುವ ಸಮಸ್ಯೆ ನಿವಾರಿಸುವ ಗಿಡಮೂಲಿಕೆಗಳು

|

ನಮ್ಮ ಜೀವನಶೈಲಿಗೆ ಅನುಗುಣವಾಗಿ ನಮ್ಮ ಆರೋಗ್ಯ ಕೂಡ ಇರುವುದು ಎನ್ನುವುದು ಹೇಳಲಾಗುವ ಮಾತು. ದೇಹಕ್ಕೆ ಶ್ರಮವಿಲ್ಲದೆ ಕುಳಿತುಕೊಂಡು ಮಾಡುವ ಕೆಲಸ ಹಾಗೂ ಹೊರಗಿನ ಕಲ್ಮಷ ವಾತಾವರಣ, ಅನಾರೋಗ್ಯಕರ ಆಹಾರ ಕ್ರಮ ಇತ್ಯಾದಿಗಳಿಂದಾಗಿ ಇಂದಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಯು ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಪ್ರಮುಖವಾಗಿ ಮಹಿಳೆಯರು ಹಾಗೂ ಪುರುಷರನ್ನು ಇಬ್ಬರಲ್ಲೂ ಕಂಡುಬರುವಂಹ ಸಮಸ್ಯೆ ಎಂದರೆ ಅದು ಕೂದಲು ಉದುರುವಿಕೆ. ಮಹಿಳೆಯರಲ್ಲಿ ಕೂದಲು ಉದುರುವಿಕೆ ಸಮಸ್ಯೆ ಕಂಡುಬರಲು ಹಲವಾರು ರೀತಿಯ ಕಾರಣಗಳು ಇರಬಹುದು. ಇದರಲ್ಲಿ ಭಾವನಾತ್ಮಕ ಅಥವಾ ದೈಹಿಕ ಒತ್ತಡ, ಹೊಸ ಔಷಧಿ ಸೇವನೆ, ಕೂದಲಿನ ಕೆಟ್ಟ ಆರೋಗ್ಯ, ಸ್ವಯಂ ರಕ್ಷಿತ ರೋಗ, ಪೋಷಕಾಂಶಗಳ ಕೊರತೆ, ಜ್ವರ ಅಥವಾ ಅನಾರೋಗ್ಯ ಇತ್ಯಾದಿಗಳು. ಕೆಲವೊಂದು ಸಲ ಒಂದೆರಡು ಕಾರಣಗಳು ಜತೆಯಾಗಿರುವುದರಿಂದ ಕೂದಲು ಉದುರುವಿಕೆ ಸಮಸ್ಯೆಯು ಕಂಡುಬರುವುದು. ಆದರೆ ಇದನ್ನು ಪತ್ತೆ ಮಾಡುವುದು ತುಂಬಾ ಕಠಿಣ ಕೆಲಸವಾಗಿದೆ.

ಯಾಕೆಂದರೆ ನಿಮ್ಮಲ್ಲಿ ಸ್ವಯಂರಕ್ಷಿತ ಕಾಯಿಲೆ ಪತ್ತೆಯಾಗಬೇಕು ಅಥವಾ ತೆಗೆದುಕೊಳ್ಳುತ್ತಿರುವಂತಹ ಹೊಸ ಔಷಧಿಯ ಅಡ್ಡಪರಿಣಾಮದಿಂದಾಗಿ ಇದು ಬಂದಿದೆ ಎಂದು ತಿಳಿದುಕೊಳ್ಳುವುದು ಸವಾಲಿನ ಕೆಲಸ. ಆರೋಗ್ಯಕಾರಿ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋಗುವುದು ಮತ್ತು ಕೂದಲಿಗೆ ಬೇಕಾಗಿರುವಂತಹ ಸ್ವಲ್ಪ ಟಿಎಲ್ ಸಿ ನೀಡುವುದರ ಜತೆಗೆ ಕೂದಲು ಉದುರುವಿಕೆಗೆ ತಡೆಯಲು ಕೆಲವೊಂದು ವಿಧಾನಗಳು ಇವೆ ಮತ್ತು ಸುಂದರ ಹಾಗೂ ಕಾಂತಿಯುತ ಕೂದಲು ಕೂಡ ಪಡೆಯಬಹುದು. ಕೆಲವೊಂದು ಆಯುರ್ವೇದ ಗಿಡಮೂಲಿಕೆಗಳನ್ನು ಬಳಸಿಕೊಂಡು ಕೂದಲು ಉದುರುವಿಕೆ ಸಮಸ್ಯೆ ನಿವಾರಣೆ ಮಾಡಬಹುದು. ಇಲ್ಲಿ ಸುಮಾರು 16 ಗಿಡಮೂಲಿಕೆಗಳನ್ನು ಸೂಚಿಸಲಾಗಿದೆ ಮತ್ತು ಅದನ್ನು ಬಳಸುವುದು ಹೇಗೆ ಎಂದು ಹೇಳಲಾಗಿದೆ. ಇನ್ನು ತಡ ಯಾಕೆ? ಲೇಖನ ಪೂರ್ತಿ ಓದಿಕೊಂಡು ಕೂದಲು ಉದುರುವಿಕೆ ಸಮಸ್ಯೆ ಬಗೆಹರಿಸಿಕೊಳ್ಳಿ.

ಅಲೋವೆರಾ

ಅಲೋವೆರಾ

ಬೇಕಾಗುವ ಸಾಮಗ್ರಿ

2 ಚಮಚ ಅಲೋವೆರಾ ಲೋಳೆ

ವಿಧಾನ

*ತಾಜಾ ಅಲೋವೆರಾ ಎಲೆಯ ಸಿಪ್ಪೆ ತೆಗೆದು ಅದರಿಂದ ಎರಡು ಚಮಚ ಲೋಳೆ ತೆಗೆಯಿರಿ.

*ಈ ಲೋಳೆಯನ್ನು ಕೂದಲಿಗೆ ಹಚ್ಚಿಕೊಂಡು ಅದನ್ನು ಕೆಲವು ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ.

*ಎರಡು ಗಂಟೆಗಳ ಕಾಲ ಲೋಳೆಯು ಕೂದಲಿನಲ್ಲಿ ಹಾಗೆ ಇರಲಿ ಮತ್ತು ಇದರ ಬಳಿಕ ಲಘು ಶಾಂಪೂ ಹಾಕಿಕೊಂಡು ಕೂದಲು ತೊಳೆಯಿರಿ.

ಎಷ್ಟು ಸಲ

ವಾರದಲ್ಲಿ ಎರಡು ಸಲ

Most Read: ಅರಿಶಿನದ ಹೇರ್ ಮಾಸ್ಕ್ ಬಳಸಿ- ಕೂದಲು ಉದ್ದವಾಗಿ ಬೆಳೆಯುತ್ತದೆ!

ಜಿನ್ಸೆಂಗ್

ಜಿನ್ಸೆಂಗ್

ಬೇಕಾಗುವ ಸಾಮಗ್ರಿ

2-3 ಚಮಚ ಜಿನ್ಸೆಂಗ್ ತೈಲ

ಬೇಕಾಗುವ ಸಮಯ

45 ನಿಮಿಷ

ವಿಧಾನ

ಒಂದು ಪಿಂಗಾಣಿಗೆ ಮೂರು ಚಮಚ ಜಿನ್ಸೆಂಗ್ ತೈಲವನ್ನು ಹಾಕಿಕೊಳ್ಳಿ.

*ಕೂದಲನ್ನು ಪ್ರತ್ಯೇಕ ಮಾಡಿಕೊಳ್ಳಿ ಮತ್ತು ಈ ಎಣ್ಣೆಯನ್ನು ತಲೆಬುರುಡೆಗೆ ಮಸಾಜ್ ಮಾಡಿ.

*ಕೂದಲಿನ ಬುಡದಿಂದ ತುದಿಯ ತನಕ ಎಣ್ಣೆಯನ್ನು ಸರಿಯಾಗಿ ಹಚ್ಚಿಕೊಳ್ಳಿ.

*10 ನಿಮಿಷ ಕಾಲ ಕೂದಲಿಗೆ ಸರಿಯಾಗಿ ಮಸಾಜ್ ಮಾಡಿಕೊಳ್ಳಿ.

*30 ನಿಮಿಷ ಕೂದಲಿನಲ್ಲಿ ಎಣ್ಣೆಯು ಹಾಗೆ ಇರಲಿ ಮತ್ತು ಲಘು ಶಾಂಪೂ ಬಳಸಿಕೊಂಡು ಕೂದಲನ್ನು ತೊಳೆಯಿರಿ.

ಎಷ್ಟು ಸಲ?

ವಾರದಲ್ಲಿ ಮೂರು ಸಲ ಇದನ್ನು ಬಳಸಿಕೊಳ್ಳಿ.

Most Read: ಆಲೂಗಡ್ಡೆ ಕೂದಲನ್ನು ನೀಳ ಮತ್ತು ಸೊಂಪಾಗಿಸುತ್ತದೆ-ಒಂದಲ್ಲಾ, ಎರಡಲ್ಲಾ, ಮೂರು ವಿಧಗಳಲ್ಲಿ!

ರೋಸ್ಮೆರಿ

ರೋಸ್ಮೆರಿ

ಬೇಕಾಗುವ ಸಾಮಗ್ರಿಗಳು

*5-10 ಹನಿ ರೋಸ್ಮೆರಿ ಸಾರಭೂತ ತೈಲ

*2-3 ಚಮಚ ವಾಹಕ ತೈಲ

ಎಷ್ಟು ಸಮಯ ಬೇಕು

45 ನಿಮಿಷ

ವಿಧಾನ

*ಒಂದು ಪಿಂಗಾಣಿಯಲ್ಲಿ ರೋಸ್ಮೆರಿ ಸಾರಭೂತ ತೈಲ ಮತ್ತು ಯಾವುದಾದರೂ ವಾಹಕ ತೈಲ(ತೆಂಗಿನ ಎಣ್ಣೆ, ಆಲಿವ್ ತೈಲ, ಬಾದಾಮಿ ಎಣ್ಣೆ ಅಥವಾ ಜೊಜೊಬಾ ಎಣ್ಣೆ) ಬಳಸಿಕೊಳ್ಳಿ.

*ಈ ಎಣ್ಣೆಯ ಮಿಶ್ರಣವನ್ನು ತಲೆಬುರುಡೆಗೆ ಸರಿಯಾಗಿ ಮಸಾಝ್ ಮಾಡಿಕೊಳ್ಳಿ ಮತ್ತು ಇದು ಕೂದಲಿನಲ್ಲಿ ಕೆಲಸ ಮಾಡಲಿ.

10 ನಿಮಿಷ ಕಾಲ ತಲೆಬುರುಡೆಗೆ ಮಸಾಜ್ ಮಾಡಿ.

*ಇನ್ನು 30 ನಿಮಿಷ ಕಾಲ ಎಣ್ಣೆಯನ್ನು ಕೂದಲಿನಲ್ಲಿ ಹಾಗೆ ಬಿಡಿ ಮತ್ತು ಇದರ ಬಳಿಕ ಲಘು ಶಾಂಪೂ ಹಾಕಿಕೊಂಡು ತೊಳೆಯಿರಿ.

ನೆಲ್ಲಿಕಾಯಿ

ನೆಲ್ಲಿಕಾಯಿ

ಸೌಂದರ್ಯ ಚಿಕಿತ್ಸೆಗೆ ಸಹಾಯ ಮಾಡುವ ಮನೆ ಮದ್ದು ನೆಲ್ಲಿಕಾಯಿ ಎಂದರೆ ತಪ್ಪಾಗಲಾರದು. ಇದರಲ್ಲಿ ವಿಟಮಿನ್-ಸಿ ಸಮೃದ್ಧವಾಗಿರುವುದರಿಂದ ಎಲ್ಲಾ ವಿದಧ ಚರ್ಮ ಹಾಗೂ ಕೂದಲು ಸಂಬಂಧಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ. ಹಾಗಾಗಿಯೇ ಹೆಚ್ಚಿನ ಮಹಿಳೆಯರು ನೆಲ್ಲಿಕಾಯಿ ನೀರನ್ನು (ಆಮ್ಲಾ ವಾಟರ್) ಸೌಂದರ್ಯ ವರ್ಧಕ ಉತ್ಪನ್ನವಾಗಿ ಉಪಯೋಗಿಸುತ್ತಾರೆ.

ಬೇಕಾಗುವ ಸಾಮಗ್ರಿಗಳು

4 ಚಮಚ ನೆಲ್ಲಿಕಾಯಿ ಹುಡಿ

2 ಚಮಚ ಲಿಂಬೆ ರಸ

ನೀರು

ನೀರು

ಬೇಕಾಗುವ ಸಮಯ

20 ನಿಮಿಷ

ವಿಧಾನ

*ಒಂದು ಪಿಂಗಾಣಿಯಲ್ಲಿ ನೀರು ಹಾಕಿ, ಅದಕ್ಕೆ ನೆಲ್ಲಿಕಾಯಿ ಹುಡಿ ಮತ್ತು ಲಿಂಬೆರಸ ಹಾಕಿಕೊಂಡು ಮಿಶ್ರಣ ಮಾಡಿ ಮೆತ್ತಗಿನ ಪೇಸ್ಟ್ ಮಾಡಿಕೊಳ್ಳಿ.

ಇದನ್ನು ತಲೆಬುರುಡೆಗೆ ಸರಿಯಾಗಿ ಮಸಾಜ್ ಮಾಡಿ ಮತ್ತು ಸಂಪೂರ್ಣ ಕೂದಲಿಗೆ ಇದನ್ನು ಹಚ್ಚಿಕೊಳ್ಳಿ.

*15 ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ಲಘು ಶಾಂಪೂ ಬಳಸಿಕೊಂಡು ತೊಳೆಯಿರಿ.

ಎಷ್ಟು ಸಲ

ವಾರದಲ್ಲಿ ಎರಡು ಸಲ ಬಳಸಿ

Most Read: ಕೂದಲ ಸೌಂದರ್ಯಕ್ಕಾಗಿ ದಾಸವಾಳ ಹೂವಿನ 8 ಪ್ರಯೋಜನಗಳು

ತುಳಸಿ

ತುಳಸಿ

ಭಾರತೀಯರು ಅದರಲ್ಲೂ ಹಿಂದೂಗಳು ತುಳಸಿ ಗಿಡಕ್ಕೆ ನೀಡುವಷ್ಟು ಮಹತ್ವ ಬೇರೆ ಯಾರೂ ನೀಡಲಾರರರು. ಯಾಕೆಂದೆ ಹಿಂದೂಗಳಿಗೆ ತುಳಸಿ ತುಂಬಾ ಪವಿತ್ರ. ತುಳಸಿಯಲ್ಲಿ ಲಕ್ಷ್ಮೀಯು ನೆಲೆಸಿದ್ದಾಳೆಂದು ಹಿಂದೂಗಳು ಹಿಂದಿನಿಂದಲೂ ನಂಬಿಕೊಂಡು ಬಂದಿದ್ದಾರೆ. ತುಳಸಿಯನ್ನು ಹಲವಾರು ರೀತಿಯ ಆಯುರ್ವೇದ ಔಷಧಿಗಳಲ್ಲಿಯೂ ಬಳಸಲಾಗುತ್ತಾ ಇದೆ. ಇದರಲ್ಲಿ ಇರುವಂತಹ ಔಷಧಿಯ ಗುಣಗಳು ಮಾನವನ ದೇಹಕ್ಕೆ ತುಂಬಾ ಒಳ್ಳೆಯದು.

ಬೇಕಾಗುವ ಸಾಮಗ್ರಿಗಳು

*ಒಂದು ಹಿಡಿ ತುಳಸಿ ಎಲೆಗಳು

*2-3 ಚಮಚ ಆಲಿವ್ ತೈಲ

ಬೇಕಾಗುವ ಸಮಯ

45 ನಿಮಿಷ

ವಿಧಾನ

*ಬಿಸಿಲಿನಲ್ಲಿ ತುಳಸಿ ಎಲೆಗಳನ್ನು ಸರಿಯಾಗಿ ಒಣಗಿಸಿಕೊಳ್ಳಿ ಮತ್ತು ಇದರ ಬಳಿಕ ಒಣ ಎಲೆಗಳನ್ನು ರುಬ್ಬಿಕೊಂಡು ಹುಡಿ ಮಾಡಿ.

ಸ್ವಲ್ಪ ಬಿಸಿ ಮಾಡಿದ ಆಲಿವ್ ತೈಲಕ್ಕೆ ತುಳಸಿ ಎಲೆ ಹುಡಿ ಹಾಕಿ.

*ಈ ಎಣ್ಣೆಯನ್ನು ಒಂದು ಮೆತ್ತಗಿನ ಬಟ್ಟೆ ಬಳಸಿಕೊಂಡು ತಲೆಬುರುಡೆ ಮತ್ತು ಕೂದಲಿಗೆ ಸರಿಯಾಗಿ ಹಚ್ಚಿಕೊಳ್ಳಿ.

ಹತ್ತು ನಿಮಿಷ ಕಾಲ ತಲೆಬುರುಡೆಗೆ ಮಸಾಜ್ ಮಾಡಿಕೊಳ್ಳಿ ಮತ್ತು ಇದರ ಬಳಿಕ 30 ನಿಮಿಷ ಎಣ್ಣೆಯನ್ನು ಹಾಗೆ ಬಿಡಿ.

*ಶಾಂಪೂವಿನಿಂದ ಕೂದಲನ್ನು ತೊಳೆಯಿರಿ.

*ನೀವು ಈ ಎಣ್ಣೆಯನ್ನು ಅಧಿಕ ಪ್ರಮಾಣದಲ್ಲಿ ತಯಾರಿಸಿಕೊಂಡಿದ್ದರೆ ಆಗ ಮುಚ್ಚಳ ಬಿಗಿಯಾಗಿರುವ ಒಂದು ಡಬ್ಬದಲ್ಲಿ ಇದನ್ನು ಹಾಕಿಡಿ ಮತ್ತು ಅದನ್ನು ಫ್ರಿಡ್ಜ್ ನಲ್ಲಿ ಇಡಿ. ಈ ಎಣ್ಣೆಯನ್ನು 11 ದಿನಗಳ ಕಾಲ ಸಂಗ್ರಹಿಸಿ ಇಡಬಹುದು.

ಎಷ್ಟು ಸಲ?

ವಾರದಲ್ಲಿ ಮೂರು ಸಲ ಇದನ್ನು ಬಳಕೆ ಮಾಡಿ.

ದಾಸವಾಳ

ದಾಸವಾಳ

ಬೇಕಾಗುವ ಸಾಮಗ್ರಿಗಳು

*2 ದಾಸವಾಳದ ಎಲೆ

*2 ಚಮಚ ವಾಹಕ ತೈಲ

ಎಷ್ಟು ಸಮಯ

45 ನಿಮಿಷ

ವಿಧಾನ

*ನೀವು ಕೂದಲಿಗೆ ಬಳಸುವಂತಹ ಯಾವುದೇ ತೈಲವನ್ನು ದಾಸವಾಳದ ಹೂ ಹಾಕಿಕೊಂಡು ಕೆಲವು ನಿಮಿಷಗಳ ಕಾಲ ಬಿಸಿ ಮಾಡಿಕೊಳ್ಳಿ.

*ಈ ದಾಸವಾಳದ ಎಣ್ಣೆಯನ್ನು ಕೂದಲು ಹಾಗೂ ತಲೆಬುರುಡೆಗೆ ಸರಿಯಾಗಿ ಹಚ್ಚಿಕೊಳ್ಳಿ.

*ಹತ್ತು ನಿಮಿಷ ಕಾಲ ತಲೆಬುರುಡೆಗೆ ಸರಿಯಾಗಿ ಮಸಾಜ್ ಮಾಡಿಕೊಳ್ಳಿ ಮತ್ತು ಇದರ ಬಳಿಕ 30 ನಿಮಿಷ ಕಾಲ ತೈಲವು ಕೂದಲಿನಲ್ಲಿ ಹಾಗೆ ಇರಲಿ.

*ಶಾಂಪೂ ಹಾಕಿಕೊಂಡು ಕೂದಲು ತೊಳೆಯಿರಿ.

ಎಷ್ಟು ಸಲ

ವಾರದಲ್ಲಿ ಎರಡು ಸಲ ಬಳಸಿ.

English summary

Miracle Herbs That Prevent Hair Loss with in 15 days

Hair loss–the two words that are dreaded by men and women alike. There are various factors that can cause hair loss in women, ranging from emotional or physical stress, starting a new medication, bad hair health, auto-immune diseases, nutritional deficiencies, fever or illness, etc. Sometimes it can be multiple factors working together that cause your hair to fall out. It’s usually extremely hard to pinpoint the exact cause unless your are diagnosed with an auto-immune disease or are on medication that’s known to cause hair loss as a side effect.
X
Desktop Bottom Promotion