For Quick Alerts
ALLOW NOTIFICATIONS  
For Daily Alerts

ಕೂದಲ ಬೆಳವಣಿಗೆಯನ್ನು 'ವಿಟಮಿನ್ ಇ' ಹೇಗೆ ಹೆಚ್ಚಿಸುತ್ತದೆ ಬಲ್ಲಿರಾ?

|

ವಿಟಮಿನ್ ಇ ನಮ್ಮ ಕೂದಲ ಬೆಳವಣಿಗೆ, ತ್ವಚೆ ಮತ್ತು ಕಣ್ಣುಗಳಿಗೆ ಅವಶ್ಯವಾಗಿರುವ ಪೋಷಕಾಂಶವಾಗಿದ್ದು ಇದೇ ಕಾರಣಕ್ಕೆ ಇದನ್ನು ಮ್ಯಾಜಿಕ್ ಪೋಷಕಾಂಶವೆಂದೂ ಕರೆಯುತ್ತಾರೆ. ಮೂಲತಃ, ವಿಟಮಿನ್ ಇ ಕಣಗಳ ರಚನೆಯನ್ನು ಗಮನಿಸಿದರೆ ಇದರಲ್ಲಿ ಎಂಟು ಕೊಬ್ಬಿನಲ್ಲಿ ಕರಗುವ ಟೋಕೋಫೆರಾಲ್ ಮತ್ತು ಟೋಕೋಟ್ರೈಇನಾಲ್ಸ್ ಎಂಬ ವಿಟಮಿನ್ನುಗಳು ಗೊಂಚಲಾಗಿರುವಂತೆ ಕಾಣುತ್ತದೆ. ವಿಟಮಿನ್ ಇ ನ ಹೆಗ್ಗಳಿಕೆ ಎಂದರೆ ಇದೊಂದು ಆಂಟಿಆಕ್ಸಿಡೆಂಟ್ ಕೂಡಾ ಆಗಿದ್ದು ತ್ವಚೆಗೆ ಹಾನಿ ಕಾರಕವಾದ ಮತ್ತು ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಕಣಗಳನ್ನು ತಟಸ್ಥಗೊಳಿಸುವ ಮೂಲಕ ತ್ವಚೆಗೆ ಎದುರಾಗುವ ಹಾನಿಯಿಂದ ರಕ್ಷಣೆ ನೀಡುತ್ತದೆ. ತಜ್ಞರ ಪ್ರಕಾರ, ಪುರುಷರಿಗೆ ಸರಾಸರಿ ಪ್ರತಿದಿನಕ್ಕೆ ನಾಲ್ಕು ಮಿಲಿಗ್ರಾಂ ಅಗತ್ಯವಿದ್ದರೆ ಮಹಿಳೆಯರಿಗೆ ಪ್ರತಿದಿನಕ್ಕೆ ಸರಾಸರಿ ಮೂರು ಮಿಲಿಗ್ರಾಂ ಅಗತ್ಯವಿದೆ. ತ್ವಚೆಯ ಆರೋಗ್ಯ ಮತ್ತು ಸೌಂದರ್ಯಕ್ಕೆ ನೇರವಾದ ಸಂಬಂಧವಿರುವ ಕಾರಣ ಪ್ರಜ್ವಲಿಸುವ ಸಹಜಸೌಂದರ್ಯಕ್ಕಾಗಿ ವಿಟಮಿನ್ ಇ ಹೇಗೆ ನೆರವಾಗುತ್ತದೆ ನೋಡೋಣ:

ಕೂದಲ ಬೆಳವಣಿಗೆಗೆ ವಿಟಮಿನ್ ಇ ಹೇಗೆ ನೆರವಾಗುತ್ತದೆ?

ಕೂದಲ ಬೆಳವಣಿಗೆಗೆ ವಿಟಮಿನ್ ಇ ಹೇಗೆ ನೆರವಾಗುತ್ತದೆ?

ಸಾಮಾನ್ಯವಾಗಿ, ಪ್ರತಿ ವ್ಯಕ್ತಿಯ ದೇಹದಿಂದ, ಪ್ರತಿದಿನ, ವಿಶೇಷವಾಗಿ ತಲೆಯಿಂದ (ನಮ್ಮ ತಲೆಯಲ್ಲಿ ಸುಮಾರು ಒಂದರಿಂದ ಒಂದೂವರೆ ಲಕ್ಷ ಕೂದಲುಗಳಿರುತ್ತವೆ) ಸುಮಾರು ನೂರು ಕೂದಲುಗಳು ಉದುರುತ್ತವೆ. ಅಲ್ಲದೇ ಈ ನೂರು ಕೂದಲುಗಳು ಗುಂಪಾಗಿ ಕಂಡಾಗ ಕೊಂಚ ದುಗುಡ ಎದುರಾಗುತ್ತದೆ. ಆದರೆ ಒಂದು ವೇಳೆ ಈ ಗುಂಪು ಇನ್ನೂ ಹೆಚ್ಚು ಕೂದಲುಗಳಿಂದ ಕೂಡಿದ್ದರೆ ದುಗುಡವೂ ಹೆಚ್ಚುತ್ತದೆ. ಕೂದಲು ಉದುರುವುದು ಮತ್ತು ಈ ಸ್ಥಳದಲ್ಲಿ ಹೊಸ ಕೂದಲು ಹುಟ್ಟುವುದು ನಿಸರ್ಗನಿಯಮವಾಗಿದ್ದು ಆತಂಕಕ್ಕೆ ಕಾರಣವಿಲ್ಲ. ಒಂದು ವೇಳೆ ಉದುರಿದ ಕೂದಲಿನಷ್ಟೇ ಪ್ರಮಾಣದ ಹೊಸ ಕೂದಲು ಹುಟ್ಟದಿದ್ದರೆ ಮಾತ್ರ ಕೂದಲು ವಿರಳವಾಗುತ್ತಾ ಸಾಗುತ್ತದೆ, ಇದೇ ಚಿಂತೆಗೆ ಪ್ರಮುಖ ಕಾರಣವಾಗಿದೆ. ಇದನ್ನು ಸರಿಪಡಿಸಲು ಕೆಲವಾರು ವಿಧಾನಗಳಿವೆ. ವಿಟಮಿನ್ ಇ ಗುಳಿಗೆಗಳನ್ನು ಸೇವಿಸುವುದು ಇದರಲ್ಲೊಂದು. ವಿಟಮಿನ್ ಇ ಹೊಂದಿರುವ ಕೇಶಲೇಪವನ್ನು ಹಚ್ಚಿಕೊಳ್ಳುವುದು ಇನ್ನೊಂದು ವಿಧಾನ. ಕೂದಲು ನಷ್ಟವಾಗುವುದನ್ನು ವಿಟಮಿನ್ ಇ ಹೇಗೆ ತಡೆಗಟ್ಟುತ್ತದೆ? ಇದನ್ನು ಅರಿಯಲು ಮೊದಲು ವಿಟಮಿನ್ ಇ ಒಂದು ಪ್ರಬಲ ಆಂಟಿ ಆಕ್ಸಿಡೆಂಟ್ ಎಂಬುದನ್ನು ಅರಿತುಕೊಳ್ಳಬೇಕು. ಈ ಗುಣವೇ ಕೂದಲ ಬುಡವನ್ನು ಅತ್ಯುತ್ತಮ ಆರೋಗ್ಯ ಹೊಂದಲು ನೆರವಾಗುತ್ತದೆ ಹಾಗೂ ಘಾಸಿಗೊಂಡಿದ್ದ ಕೂದಲ ಬುಡಗಳನ್ನು ಸರಿಪಡಿಸಿ ಹೊಸ ಮತ್ತು ಆರೋಗ್ಯಕರ ಕೂದಲು ಹುಟ್ಟಲು ನೆರವಾಗುತ್ತದೆ. ಅಲ್ಲದೇ ಅಂಗಾಂಶ ಘಾಸಿಗೊಳ್ಳುವುದರಿಂದ ತಡೆಯುತ್ತದೆ. ಇನ್ನೊಂದು ವಿಧದಲ್ಲಿ ಹೇಳಬಹುದೆಂದರೆ ಕೂದಲ ಬುಡಗಳು ಅತ್ಯುತ್ತಮ ಆರೋಗ್ಯದಲ್ಲಿದ್ದು ಇವುಗಳಿಂದ ಆರೋಗ್ಯಕರ ಕೂದಲು ಹುಟ್ಟಿ ಉದ್ದವಾಗಿ ಬೆಳೆಯಲು ನೆರವಾಗುತ್ತದೆ. ಅಲ್ಲದೇ ಕೂದಲ ಬುಡಕ್ಕೆ ಸುಲಲಿತ ರಕ್ತಪರಿಚಲನೆ ಒದಗಿಸುವ ಮೂಲಕ ಕೂದಲಿಗೆ ಅತ್ಯುತ್ತಮ ಪೋಷಣೆ ದೊರಕುತ್ತದೆ ಹಾಗೂ ಈ ಕೂದಲು ಸುಲಭವಾಗಿ ತುಂಡಾಗದಷ್ಟು ಬಲಯುತ ಹಾಗೂ ನೀಳವಾಗಿರುತ್ತದೆ.

Most Read: ತ್ವಚೆಗೆ ರೋಸ್ ವಾಟರ್‌‌ನ ಪ್ರಯೋಜನಗಳು ಹಾಗೂ ಇದನ್ನು ಬಳಸಲು ಸ್ಟೆಪ್ ಬೈ ಸ್ಟೆಪ್ ಟಿಪ್ಸ್

ನಿಮ್ಮ ಕೂದಲನ್ನು ವಿಟಮಿನ್ ಇ ಹೇಗೆ ಹೊಳಪುಳ್ಳದ್ದಾಗಿಸುತ್ತದೆ?

ನಿಮ್ಮ ಕೂದಲನ್ನು ವಿಟಮಿನ್ ಇ ಹೇಗೆ ಹೊಳಪುಳ್ಳದ್ದಾಗಿಸುತ್ತದೆ?

ಇತ್ತೀಚೆಗೆ ನೀವು ನಿಮ್ಮ ಕೂದಲನ್ನು ನೇರವಾಗಿಸುವ ಸೌಂದರ್ಯ ಚಿಕಿತ್ಸೆಯನ್ನು ಪಡೆದಿದ್ದೀರಾ? ಕೂದಲನ್ನು ತೊಳೆದುಕೊಂಡ ಬಳಿಕ ಗುಂಗುರಾಗಿರುವ ಕೂದಲನ್ನು ನೇರಗೊಳಿಸಲು ಹೇರ್ ಡ್ರೈಯರ್ ಬಳಸುತ್ತೀರಾ? ಹಾಗಾದರೆ ಎಚ್ಚರಿಕೆ ಇರಲಿ, ಏಕೆಂದರೆ ಈ ಅಭ್ಯಾಸಗಳು ಕೂದಲನ್ನು ಒಣ ಮತ್ತು ನಿಸ್ತೇಜವಾಗಿಸುತ್ತದೆ. ಒಂದು ವೇಳೆ ಕೂದಲು ನೇರವಾಗಿಲ್ಲವೆಂದು ಹೆಚ್ಚು ಹೆಚ್ಚು ಹೇರ್ ಡ್ರೈಯರ್ ಮತ್ತು ನೇರವಾಗಿಸುವ ಚಿಕಿತ್ಸೆಯನ್ನು ಪಡೆಯುತ್ತಾ ಹೋದರೆ ತ್ವಚೆ ತನ್ನ ನಿಜವಾದ ಹೊಳಪನ್ನೇ ಕಳೆದುಕೊಳ್ಳಬಹುದು. ತಜ್ಞರ ಪ್ರಕಾರ ಕೂದಲು ಒಂದು ಪ್ರಕಾರದಲ್ಲಿಯೇ ಒಡೆಯಲು trichorrhexis nodosa ಎಂಬ ಸ್ಥಿತಿ ಕಾರಣವಾಗಿದೆ, ಹಾಗೂ ಸತತವಾಗಿ ಕೂದಲನ್ನು ಬಿಸಿಯಾಗಿಸುವ ಮೂಲಕ ಮತ್ತು ಪ್ರಬಲ ರಾಸಾಯನಿಕಗಳನ್ನು ಬಳಸುವ ಮೂಲಕ ಈ ಸ್ಥಿತಿ ಇನ್ನಷ್ಟು ಶಿಥಿಲವಾಗುತ್ತದೆ. ಅಲ್ಲದೇ ಈ ಸ್ಥಿತಿ ಎದುರಾದರೆ ಕೂದಲು ನಿಸ್ತೇಜವಾಗುವುದು ಮಾತ್ರವಲ್ಲ ಸಹಜ ಹೊಳಪು ಮತ್ತು ಸೆಳೆತವನ್ನೂ ಕಳೆದುಕೊಳ್ಳುತ್ತದೆ. ಇದಕ್ಕೆ ಇಂಬು ಕೊಡಲು ಸೂರ್ಯನ ಅತಿನೇರಳೆ ಕಿರಣಗಳೂ ತಮ್ಮ ದೇಣಿಗೆ ನೀಡುತ್ತವೆ. ಈ ಕಿರಣಗಳು ಕೇವಲ ತ್ವಚೆಗೆ ಮಾತ್ರವಲ್ಲ, ತಲೆಗೂದಲಿಗೂ ಹಾನಿಕಾರಕವೇ ಆಗಿವೆ. ತಜ್ಞರ ಪ್ರಕಾರ ಈ ಅತಿನೇರಳೆ ಕಿರಣಗಳು ಚರ್ಮ ಮತ್ತು ಕೂದಲಿನಲ್ಲಿರುವ ವರ್ಣದ್ರವ್ಯಗಳಿಗೆ ಹಾನಿ ಎಸಗುತ್ತವೆ. ಆದರೆ ವಿಟಮಿನ್ ಈ ಈ ಕಿರಣಗಳಿಗೆ ತಡೆಯೊಡ್ಡುವ ಮೂಲಕ ಈ ಹಾನಿಯಿಂದ ರಕ್ಷಣೆ ಒದಗಿಸುತ್ತದೆ. ಒಂದು ವೇಳೆ ವಿಟಮಿನ್ ಇ ಯುಕ್ತ ತೈಲವನ್ನು ನಿಯಮಿತವಾಗಿ ಬಳಸುತ್ತಾ ಬಂದರೆ ಕೆಲವೇ ದಿನಗಳಲ್ಲಿ ಪ್ರಮುಖ ವ್ಯತ್ಯಾಸವನ್ನು ಕಾಣಬಹುದು.

ನೆತ್ತಿಯ ಆರೋಗ್ಯಕ್ಕೆ ವಿಟಮಿನ್ ಇ ಎಷ್ಟು ಅವಶ್ಯಕ?

ನೆತ್ತಿಯ ಆರೋಗ್ಯಕ್ಕೆ ವಿಟಮಿನ್ ಇ ಎಷ್ಟು ಅವಶ್ಯಕ?

ತಜ್ಞರ ಪ್ರಕಾರ, ಚರ್ಮದ ವ್ರಣ ಮತ್ತು ಉರಿಯೂತಗಳಿಗೆ ವೈದ್ಯರು ವಿಟಮಿನ್ ಇ ಯುಕ್ತ ಔಷಧಿಗಳನ್ನು ಸೇವಿಸುವಂತೆ ವೈದ್ಯರು ಸಲಹೆ ಮಾಡಲು ವಿಟಮಿನ್ ಇ ಯಲ್ಲಿರುವ ಗುಣಪಡಿಸುವ ಗುಣವೇ ಕಾರಣವಾಗಿದೆ. ಇದೇ ಪ್ರಕಾರ, ಕೆಲವಾರು ಸೋಂಕುಗಳು ನೆತ್ತಿಯ ಚರ್ಮವನ್ನು ಒಣದಾಗಿಸಿ ಪಕಳೆಯೇಳಲು ಮತ್ತು ಈ ಮೂಲಕ ತಲೆಹೊಟ್ಟು ಎದುರಾಗಲು ಮತ್ತು ಸುಲಭವಾಗಿ ಕೂದಲು ಉದುರಲು ಕಾರಣವಾಗುತ್ತದೆ. ಈ ಭಾಗದಲ್ಲಿ ವಿಟಮಿನ್ ಇ ಯುಕ್ತ ತೈಲವನ್ನು ಹಚ್ಚಿಕೊಳ್ಳುವ ಮೂಲಕ ಈ ತೊಂದರೆಗಳನ್ನು ಇಲ್ಲವಾಗಿಸಬಹುದು. ಒಂದು ವೇಳೆ ಈ ಸ್ಥಿತಿ ಉಲ್ಬಣಗೊಂಡರೆ ತಲೆಯಲ್ಲಿ ಭಾರೀ ತುರಿಕೆ ಮತ್ತು ಬಿಳಿ ಅಥವಾ ಹಳದಿ ಪಕಳೆಯೆದ್ದು ತ್ವಚೆ ಕೆಂಪಗಾಗುವ Seborrheic dermatitis ಎಂಬ ಸ್ಥಿತಿಯೂ ಎದುರಾಗಬಹುದು. ಈ ಸ್ಥಿತಿಗೆ Malassezia ಎಂಬ ಶಿಲೀಂಧ್ರವೂ ಕಾರಣವಾಗಬಹುದು. ಈ ಶಿಲೀಂಧ್ರ ನಮ್ಮ ನೆತ್ತಿಯಲ್ಲಿರುವ ತಲೆಗೂದಲ ಬುಡಗಳು ಸ್ರವಿಸುವ ನೈಸರ್ಗಿಕ ತೈಲಗಳನ್ನು ಹೀರಿ ಬೆಳೆಯುತ್ತದೆ. ಒಮ್ದು ವೇಳೆ ಈ ಶಿಲೀಂಧ್ರ ಅಗತ್ಯಕ್ಕೂ ಮೀರಿ ಬೆಳೆದರೆ ಇದು ನೆತ್ತಿಯ ಚರ್ಮವನ್ನು ವಿಪರೀತವಾಗಿ ಒಣಗಿಸಿ ತಲೆಹೊಟ್ಟು ಅಪಾರವಾಗುವಂತೆ ಮಾಡುತ್ತದೆ. ವಾಸ್ತವವಾಗಿ, ನೆತ್ತಿಯಲ್ಲಿ ತುರಿಕೆ ಮತ್ತು ಒಣದಾಗುವಿಕೆ ಕಂಡುಬಂದರೆ ಇದು ವಿಟಮಿನ್ ಇ ಕೊರತೆಯಿಂದಲೇ ಎದುರಾಗಿದೆ ಎಂದು ಅರ್ಥೈಸಿಕೊಳ್ಳಬಹುದು. ವಿಟಮಿನ್ ಇ ಯಲ್ಲಿರುವ ಉರಿಯೂತ ನಿವಾರಕ ಗುಣ ಈ ತುರಿಕೆಯನ್ನು ನಿವಾರಿಸುತ್ತದೆ. ಅಲ್ಲದೇ ತ್ವಚೆಯ ಮೇಲೆ ಕವಚದಂತೆ ಆವರಿಸಿ ನೈಸರ್ಗಿಕ ಆದ್ರತೆ ನಷ್ಟವಾಗದಂತೆ ತಡೆಯುತ್ತದೆ. ಅಲ್ಲದೇ ವಿಟಮಿನ್ ಇ ಕೊಬ್ಬಿನಲ್ಲಿ ಕರಗುವ ಪೋಷಕಾಂಶವಾಗಿರುವ ಕಾರಣ ತ್ವಚೆಯ ಸೂಕ್ಷ್ಮರಂಧ್ರಗಳ ಮೂಲಕ ಚರ್ಮದ ಆಳಕ್ಕಿಳಿದು ಅಲ್ಲಿರುವ ಸೋಂಕನ್ನೂ ಗುಣಪಡಿಸಿ ಕೂದಲ ಆರೋಗ್ಯ ವೃದ್ದಿಸುತ್ತದೆ.

Most Read: ಈ 7 ಕೆಟ್ಟ ಅಭ್ಯಾಸಗಳಿಂದಾಗಿಯೇ ಕೂದಲು ಉದುರುವ ಸಮಸ್ಯೆ ಬರುವುದಂತೆ!

ಕೂದಲ ರೋಗ ನಿರೋಧಕ ವ್ಯವಸ್ಥೆಯನ್ನು ವಿಟಮಿನ್ ಇ ಬಲಬಡಿಸಬಲ್ಲುದೇ?

ಕೂದಲ ರೋಗ ನಿರೋಧಕ ವ್ಯವಸ್ಥೆಯನ್ನು ವಿಟಮಿನ್ ಇ ಬಲಬಡಿಸಬಲ್ಲುದೇ?

ಹೌದು, ವಿಟಮಿನ್ ಇ ಗೆ ಈ ಕ್ಷಮತೆ ಖಂಡಿತವಾಗಿಯೂ ಇದೆ. ಒಂದು ವೇಳೆ ನೀವು ವಿಟಮಿನಿ ಇ ಗುಳಿಗೆಗಳನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಹಾಗೂ ಕೂದಲ ಆರೈಕೆಗೆ ಅಗತ್ಯವಾದ ಇತರ ಕ್ರಮಗಳನ್ನೂ ಕೈಗೊಳ್ಳುತ್ತಿದ್ದರೆ ರೋಗ ನಿರೋಧಕ ವ್ಯವಸ್ಥೆ ಇನ್ನಷ್ಟು ಉತ್ತಮಗೊಳ್ಳುತ್ತದೆ. ಈ ಶಕ್ತಿ ಉತ್ತಮವಾಗಿದ್ದರೆ ನೆತ್ತಿಯಲ್ಲಿ ಯಾವುದೇ ಸೋಂಕು ಎದುರಾಗುವುದಿಲ್ಲ ಹಾಗೂ ಈ ಮೂಲಕ ಸೋರಿಯಾಸಿಸ್, ಅತಿಯಾದ ತುರಿಕೆ ಇರುವ scalp pruritus, ಅತಿಯಾಗಿ ಕೂದಲು ಉದುರುವ tellogen effluvium ಮೊದಲಾದ ಸ್ಥಿತಿಗಳಿಂದ ರಕ್ಷಣೆ ದೊರಕುತ್ತದೆ. ಸಾಮಾನ್ಯವಾಗಿ ಈ ಸ್ಥಿತಿಗಳೆಲ್ಲವೂ ಮಾನಸಿಕ ಒತ್ತಡ ಹಾಗೂ ಇತರ ತೊಂದರೆಗಳಿಂದ ಪ್ರಾರಂಭವಾಗುತ್ತವೆ. ರೋಗ ನಿರೋಧಕ ವ್ಯವಸ್ಥೆ ಪ್ರಬಲವಾಗಿದ್ದಷ್ಟೂ ತ್ವಚೆಯ ಆರೋಗ್ಯವೂ ಉತ್ತಮವಾಗಿರುತ್ತದೆ. ಈ ವ್ಯವಸ್ಥೆ ಉತ್ತಮವಾಗಿರಲು ಮಾನಸಿಕ ಒತ್ತಡವನ್ನೂ ನಿಯಂತ್ರಣದಲ್ಲಿರಿಸುವುದು ಅಗತ್ಯವಾಗಿದೆ.

ಕೂದಲ ಆರೋಗ್ಯ ವೃದ್ಧಿಗಾಗಿ ವಿಟಮಿನ್ ಇ ಬಳಸುವುದು ಹೇಗೆ?

ಕೂದಲ ಆರೋಗ್ಯ ವೃದ್ಧಿಗಾಗಿ ವಿಟಮಿನ್ ಇ ಬಳಸುವುದು ಹೇಗೆ?

ವಿಟಮಿನ್ ಇ ಸುಲಭವಾಗಿ ಮಾರುಕಟ್ಟೆಯಲ್ಲಿ ದೊರಕುವ ಪ್ರಸಾದನವಾಗಿದೆ. ಅಲ್ಲದೇ ಈ ತೈಲವನ್ನು ಮಿಶ್ರಣ ಮಾಡಿರುವ ಕೇಶತೈಲಗಳನ್ನೂ ಬಳಸಬಹುದು. ತಲೆಗೂದಲ ಆರೈಕೆಗೆ ತೈಲದ ಬಳಕೆ ಅಗತ್ಯವಾಗಿದೆ ಹಾಗೂ ವಿಟಮಿನ್ ಇ ಯುಕ್ತ ತೈಲದಿಂದ ನೆತ್ತಿಯ ಚರ್ಮವನ್ನು ನಯವಾಗಿ ಮಸಾಜ್ ಮಾಡುವ ಮೂಲಕ ಕೂದಲ ಆರೋಗ್ಯವನ್ನು ವೃದ್ದಿಸಬಹುದು. ಇನ್ನೂ ಉತ್ತಮವೆಂದರೆ ಕೊಂಚ ವಿಟಮಿನ್ ಇ ತೈಲವನ್ನು ಕೊಂಚವೇ ಬಿಸಿಮಾಡಿ ನೇರವಾಗಿ ತಲೆಗೂದಲಿಗೆ ಕೊಂಚ ಮಸಾಜ್ ನೊಂದಿಗೆ ಹಚ್ಚಿಕೊಳ್ಳುವುದು. ಪರ್ಯಾಯವಾಗಿ, ನಿಮ್ಮ ನಿತ್ಯದ ಕಂಡೀಶನರ್ ನೊಂದಿಗೆ ವಿಟಮಿನ್ ಇ ತೈಲವನ್ನು ಬೆರೆಸಿ ಶಾಂಪೂ ಬಳಿಕ ತೊಳೆದುಕೊಳ್ಳಬಹುದು..ಅಥವಾ ವಿಟಮಿನ್ ಇ ಗುಳಿಗೆಯನ್ನು ಪುಡಿಮಾಡಿ ತಲೆಗೆ ಹಚ್ಚಿಕೊಳ್ಳುವ ತೈಲದೊಂದಿಗೆ ಬೆರೆಸಿಯೂ ಹಚ್ಚಿಕೊಳ್ಳಬಹುದು. ಅತ್ಯುತ್ತಮ ಪರಿಣಾಮಕ್ಕಾಗಿ ಈ ಮಿಶ್ರಣವನ್ನು ರಾತ್ರಿಯಿಡೀ ನೆನೆಸಿಟ್ಟು ಮರುದಿನ ತೊಳೆದುಕೊಳ್ಳಬೇಕು. ವಿಟಮಿನ್ ಇ ತೈಲ ಅಥವಾ ಗುಳಿಗೆಗಳಿಂದ ಕೇಶಲೇಪವ್ನನು ತಯಾರಿಸಬಹುದೇ?

ಹೌದು, ಕೂದಲ ಆರೈಕೆಗಾಗಿ ಇದನ್ನು ಹೇಗೆ ತಯಾರಿಸುವುದು ಎಂದು ನೋಡೋಣ:

ಲೋಳೆಸರ ಮತ್ತು ವಿಟಮಿನ್ ಇ

ಲೋಳೆಸರ ಮತ್ತು ವಿಟಮಿನ್ ಇ

ನಾಲ್ಕು ವಿಟಮಿನ್ ಇ ಗುಳಿಗೆಗಳನ್ನು ತೆರೆದು ಒಳಗಿರುವ ತೈಲವನ್ನು ಚಿಕ್ಕ ಪಾತ್ರೆಯಲ್ಲಿ ಸಂಗ್ರಹಿಸಿ. ಇದಕ್ಕೆ ಮೂರು ಚಿಕ್ಕ ಚಮಚ ಲೋಳೆಸರದ ತಿರುಳನ್ನು ಬೆರೆಸಿ. ಕೆಲವು ತೊಟ್ಟು ಬಾದಾಮಿ ಎಣ್ಣೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕೂದಲ ಬುಡದಿಂದ ತುದಿಯವರೆಗೂ ತಾಕುವಂತೆ ಹಚ್ಚಿಕೊಳ್ಳಿ. ಸುಮಾರು ಅರ್ಧ ಘಂಟೆ ಹಾಗೇ ಬಿಟ್ಟು ಬಳಿಕ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ. ನಿಮ್ಮ ಕೂದಲ ಆರೋಗ್ಯ ಕಾಪಾಡಲು ಮತ್ತು ಕಾಂತಿಯನ್ನು ಹೆಚ್ಚಿಸಲು ಇದು ಅತಿ ಸುಲಭವಾದ ವಿಧಾನವಾಗಿದೆ ಹಾಗೂ ಕೂದಲಿಗೆ ಆರ್ದ್ರತೆ ಮತ್ತು ವಿಟಮಿನ್ ಇ ಒದಗಿಸಲು ಸಾಧ್ಯವಾಗುತ್ತದೆ.

ಮೊಟ್ಟೆ ಮತ್ತು ವಿಟಮಿನ್ ಇ

ಮೊಟ್ಟೆ ಮತ್ತು ವಿಟಮಿನ್ ಇ

ಮೂರು ಮೊಟ್ಟೆಗಳು, ನಾಲ್ಕು ವಿಟಮಿನ್ ಇ ಗುಳಿಗೆಗಳು ಮತ್ತು ಎರಡು ಚಿಕ್ಕ ಚಮಚ ತಣ್ಣನೆಯ ವಿಧಾನದಿಂದ ಹಿಂಡಿ ತೆಗೆದಿರುವ ಬಾದಾಮಿ ಎಣ್ಣೆಯನ್ನು ಸಂಗಹಿಸಿ. ಮೊದಲು ಒಂದು ಪಾತ್ರೆಯಲ್ಲಿ ಮೊಟ್ಟೆಗಳನ್ನು ಚೆನ್ನಾಗಿ ಗೊಟಾಯಿಸಿ ಇದಕ್ಕೆ ಗುಳಿಗೆಗಳಿಂದ ಬೇರ್ಪಡಿಸಿ ತೆಗೆದ ವಿಟಮಿನ್ ಇ ತೈಲ ಮತ್ತು ಬಾದಾಮಿ ಎಣ್ಣೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ತಲೆಗೂದಲಿಗೆ ಹೆಚ್ಚಿಕೊಂಡು ಸುಮಾರು ಮುಕ್ಕಾಲು ಘಂಟೆ ಒಣಗಲು ಬಿಡಿ. ಬಳಿಕ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.

ಹೋಹೋಬಾ ಎಣ್ಣೆ ಮತ್ತು ವಿಟಮಿ ನಿ (Jojoba oil and vitamin E)

ಹೋಹೋಬಾ ಎಣ್ಣೆ ಮತ್ತು ವಿಟಮಿ ನಿ (Jojoba oil and vitamin E)

ತಲೆಗೂದಲ ಬುಡಕ್ಕೆ ತಂಪು ನೀಡಲು ಹೋಹೋಬಾ ಎಣ್ಣೆ ಅತ್ಯುತ್ತಮವಾಗಿದೆ. ಇದರಲ್ಲಿ ಶಿಲೀಂಧ್ರ ನಿವಾರಕ ಗುಣ ಪ್ರಬಲವಾಗಿದ್ದು ನೆತ್ತಿಯ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ. ಅಲ್ಲದೇ ಈಗಾಗಲೇ ಎದುರಾಗಿರುವ ಒಣಚರ್ಮದ ಪಕಳೆಗಳ ಪದರವನ್ನು (ಸತ್ತ ಜೀವಕೋಶಗಳ ಪದರ) ಹಾಗೂ ಕೊಳೆ ಮತ್ತು ಕಲ್ಮಶಗಳನ್ನು ನಿವಾರಿಸಲು ನೆರವಾಗುವ ಮೂಲಕ ಸ್ವಚ್ಛ, ಆರೋಗ್ಯಕರ ಹಾಗೂ ಉತ್ತಮ ಆರ್ದ್ರತೆ ಹೊಂದಿರುವ ತ್ವಚೆ ಪಡೆಯಲು ಸಾಧ್ಯವಾಗುತ್ತದೆ. ಹೋಹೋಬಾ ಎಣ್ಣೆಯಲ್ಲಿ ವಿಟಮಿನ್ ಇ, ಒಮೆಗಾ ೬ ಮತ್ತು ೯ ಕೊಬ್ಬಿನಾಮ್ಲಗಳು ಮತ್ತು ಸಂತೃಪ್ತ ಕೊಬ್ಬಿನಾಮ್ಲಗಳಿವೆ ಹಾಗೂ ಇವು ಫ್ರೀ ರ್‍ಯಾಡಿಕಲ್ ಮತ್ತು ಉತ್ಕರ್ಷಣಶೀಲ ಒತ್ತಡನ್ನು ನಿವಾರಿಸಲು ನೆರವಾಗುತ್ತದೆ. ಮುಚ್ಚಿದ್ದ ಸೂಕ್ಷ್ಮರಂಧ್ರಗಳನ್ನು ತೆರೆಯಲು ಹೋಹೋಬಾ ಎಣ್ಣೆ ಸಮರ್ಥವಾಗಿದ್ದು ಈ ಮೂಲಕ ಕಲ್ಮಶಗಳನ್ನು ನಿವಾರಿಸುತ್ತದೆ. ಹಾಗಾಗಿ, ಹೋಹೋಬಾ ಎಣ್ಣೆ ಮತ್ತು ವಿಟಮಿನ್ ಇ ತೈಲವನ್ನು ಬೆರೆಸಿ ಹಚ್ಚಿಕೊಳ್ಳುವ ಮೂಲಕ ಅದ್ಭುತವಾದ ಆರೈಕೆಯನ್ನು ಪಡೆಯಬಹುದು. ಇದಕ್ಕಾಗಿ ತಲಾ ಎರಡು ದೊಡ್ಡ ಚಮಚ ವಿಟಮಿನ್ ಇ, ಹೋಹೋಬಾ ಎಣ್ಣೆ ಮತ್ತು ಲೋಳೆಸರದ ತಿರುಳನ್ನು ಮಿಶ್ರಣ ಮಾಡಿ ಚೆನ್ನಾಗಿ ಗೊಟಾಯಿಸಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿಕೊಂಡು ಒಂದು ಘಂಟೆ ಒಣಗಲು ಬಿಡಿ. ಬಳಿಕ ಸೌಮ್ಯ ಶಾಂಪೂ ಉಪಯೋಗಿಸಿ ಸ್ನಾನ ಮಾಡಿ.

ಬೆಣ್ಣೆಹಣ್ಣು ಮತ್ತು ವಿಟಮಿನ್ ಇ

ಬೆಣ್ಣೆಹಣ್ಣು ಮತ್ತು ವಿಟಮಿನ್ ಇ

ಬೆಣ್ಣೆಹಣ್ಣು (Avocado) ವಿಟಮಿನ್ ಇ ಯೊಂದಿಗೆ ಸಮೃದ್ದವಾಗಿದೆ. ಇದಕ್ಕೆ ಇನ್ನಷ್ಟು ವಿಟಮಿನ್ ಇ ತೈಲವನ್ನು ಬೆರೆಸುವ ಮೂಲಕ ಇದರ ಶಕ್ತಿಯನ್ನು ಹಲವಾರು ಪಟ್ಟು ಹೆಚ್ಚಿಸಬಹುದು,. ಇದಕ್ಕಾಗಿ ಚೆನ್ನಾಗಿ ಹಣ್ಣಾದ ಬೆಣ್ಣೆಹಣ್ಣಿನ ಅರ್ಧಭಾಗದ ತಿರುಳನ್ನು ಒಂದು ಚಿಕ್ಕ ಚಮಚ ಆಲಿವ್ ಎಣ್ಣೆ ಮತ್ತು ಒಂದು ದೊಡ್ಡ ಚಮಚ ವಿಟಮಿನ್ ಇ ತೈಲದೊಂದಿಗೆ ಮಿಶ್ರಣ ಮಾಡಿ ಚೆನ್ನಾಗಿ, ಕೂದಲಿಗೆ ಹಚ್ಚಿಕೊಳ್ಳುವಷ್ಟು ನಯವಾಗುವಂತೆ ಗೊಟಾಯಿಸಿ. ಬಳಿಕ ಇದನ್ನು ಕೂದಲಿಗೆ ಹಚ್ಚಿಕೊಂಡು ಸುಮಾರು ಮುಕ್ಕಾಲು ಘಂಟೆ ಹಾಗೇ ಬಿಡಿ. ನಂತಹ ಸೌಮ್ಯ ಶಾಂಪೂ ಬಳಸಿ ತೊಳೆದುಕೊಂಡು ಕಂಡೀಶನರ್ ಬಳಸಿ ತೊಳೆದುಕೊಳ್ಳಿ.

English summary

How Vitamin E for Hair can Boost your Hair Health

Vitamin E for Hair is often called a magic ingredient also for our skin and eyes. Basically, vitamin E belongs to a cluster of eight fat-soluble vitamins known as tocopherols and tocotrienols. The best thing about vitamin E is that it's an antioxidant and being so, it can contain cell damage and neutralise harmful free radicals. Experts say that on an average, men would need 4 mg of vitamin E a day and women could opt for 3 mg every day.
X
Desktop Bottom Promotion