For Quick Alerts
ALLOW NOTIFICATIONS  
For Daily Alerts

ಕೂದಲುದುರುವ ಹಾಗೂ ತಲೆ ಹೊಟ್ಟು ಸಮಸ್ಯೆ ನಿವಾರಣೆಗೆ ಗಿಡಮೂಲಿಕೆಗಳು

|

ಇತ್ತೀಚೆಗೆ ಕೂದಲು ಉದುರುವಿಕೆ, ತಲೆಹೊಟ್ಟು, ಮತ್ತು ಕೂದಲಿನ ಇತರೆ ಸಮಸ್ಯೆಗಳು ಅಧಿಕವಾಗುತ್ತಲೇ ಸಾಗುತ್ತಿದೆ. ಅದಕ್ಕೆ ಕಾರಣಗಳು ಹತ್ತು ಹಲವು. ಕೂದಲಿನ ಸಮಸ್ಯೆಗಳನ್ನೇ ತಮ್ಮ ಲಾಭಕ್ಕಾಗಿ ಬಳಸಿಕೊಳುತ್ತಾ ಇರೋ ಅದೆಷ್ಟೊ ಕಂಪೆನಿಗಳು, ಬೇರೆಬೇರೆ ರೀತಿಯ ಪ್ರೊಡಕ್ಟ್‌ಗಳನ್ನು ಮಾರುಕಟ್ಟೆಗೆ ಬಿಟ್ಟು ಮಕ್ಮಲ್ ಟೋಪಿ ಹಾಕುತ್ತಿವೆ. ಸಮಸ್ಯೆಯಿಂದ ತತ್ತರಿಸಿರುವ ಜನ ಅದಕ್ಕೆ ಮಾರು ಹೋಗಿ, ಇರೋ ಚೂರುಪಾರು ಕೂದಲನ್ನೂ ಹಾಳು ಮಾಡಿಕೊಳುತ್ತಾ ಇರೋದು ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಇಂದು ಪ್ರತಿಯೊಬ್ಬರೂ ನೆನಪಿನಲ್ಲಿ ಇಡಲೇಬೇಕಾಗಿರುವ ಅಂಶವೇನೆಂದರೆ ನಿಮ್ಮ ಕೂದಲಿನ ಸಮಸ್ಯೆಗೆ ಪರಿಹಾರ ನಿಮ್ಮ ಮನೆಯಲ್ಲೇ ಇರುತ್ತೆ. ಅದು ನಿಮಗೆ ತಿಳಿದರಬೇಕು ಅಷ್ಟೇ. ಒಮ್ಮೆ ನೀವೇ ಯೋಚಿಸಿ..

ಹಿಂದಿನ ಕಾಲದವರ ಕೂದಲು ಎಷ್ಟು ಗಟ್ಟುಮುಟ್ಟಾಗಿ, ಎಷ್ಟು ದಟ್ಟವಾಗಿ, ಕಪ್ಪಾಗಿ ಇರುತ್ತಾ ಇತ್ತು ಅಲ್ಲವಾ.. ಈಗಿನ ಯುವಕ ಯುವತಿಯರ ಕೂದಲಿನಲ್ಲಿ ಯಾಕೆ ಇಷ್ಟೊಂದು ಸಮಸ್ಯೆ ಅನ್ನೋದಕ್ಕೆ ಪ್ರಮುಖ ಕಾರಣವೇ ಅವರು ಬಳಸುವ ಕೆಮಿಕಲ್‌ಗಳು. ಯಾರು ಕೆಮಿಕಲ್‌ಗಳಿಂದ ದೂರವಿರುತ್ತಾರೋ ಅಂತವರಿಗೆ ಖಂಡಿತ ಕೂದಲಿನ ಸಮಸ್ಯೆ ಇರೋದಿಲ್ಲ... ಹಾಗಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಕೂದಲಿನ ಬಗ್ಗೆ ಎಕ್ಸ್ಟ್ರಾ ಕೇರ್ ತೆಗೆದುಕೊಳ್ಳಲೇಬೇಕು ಎಂದರೆ ನೈಸರ್ಗಿಕವಾಗಿ ಸಿಗುವ ಗಿಡಮೂಲಿಕೆಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು

ಗಿಡಮೂಲಿಕೆಗಳು

ಗಿಡಮೂಲಿಕೆಗಳು

ಗಿಡಮೂಲಿಕೆಗಳು ಕೂದಲು ಉದುರುವಿಕೆ, ಕೂದಲು ಬಿಳಿಯಾಗುವುದು, ತಲೆಹೊಟ್ಟು, ಶಿಲೀಂಧ್ರ ಸೋಂಕು ಉಂಟಾಗಿರುವಂತಹ ತಲೆಬುರುಡೆ ಸಮಸ್ಯೆಯನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಆದರೆ ಕೂದಲಿಗೆ ಸಂಬಂಧಿಸಿದ ವಿವಿಧ ರೀತಿಯ ಸಮಸ್ಯೆಗಳು ನಮಗೆ ಜೀವಮಾನವಿಡಿ ಕಾಡುವುದು. ಕೂದಲು ಉದುರುವಿಕೆ, ಕೂದಲು ಬಿಳಿಯಾಗುವುದು, ತಲೆಹೊಟ್ಟು, ತುರಿಕೆ, ಶಿಲೀಂಧ್ರವಿರುವ ತಲೆಬುರುಡೆ, ತಲೆಬುರುಡೆ ಒಣಗುವುದು, ನಿಸ್ತೇಜ ಕೂದಲು ಇತ್ಯಾದಿ. ಈ ಎಲ್ಲಾ ಸಮಸ್ಯೆಗಳು ಕೂದಲಿಗೆ ಸಂಬಂಧಿಸಿದ್ದಾಗಿದೆ. ಜೀವನಶೈಲಿಗೆ ಸಂಬಂಧಿಸಿರುವಂತಹ ಕೆಲವೊಂದು ಬದಲಾವಣೆ ಗಳಾಗಿರುವ ಹಾರ್ಮೋನು ಅಸಮತೋಲನ ಮತ್ತು ಹವಾಮಾನ ದಲ್ಲಿ ವೈಪರಿತ್ಯ ಉಂಟಾಗುವ ಕಾರಣದಿಂದಾಗಿ ಕೂದಲಿನ ಸಮಸ್ಯೆಯು ತುಂಬಾ ದೀರ್ಘವಾಗಲು ಕಾರಣವಾಗಿದೆ. ಅದಾಗ್ಯೂ, ಭಾರತದಲ್ಲಿ ಶತಮಾನಗಳಿಂದಲೂ ಕೆಲವೊಂದು ಗಿಡಮೂಲಿಕೆಗಳನ್ನು ಬಳಸಿಕೊಂಡು ಬರಲಾಗುತ್ತಾ ಇದೆ. ಇದರಿಂದ ಕೂದಲು ಹಾಗೂ ಇತರ ಕೆಲವೊಂದು ಆರೋಗ್ಯ ಸಮಸ್ಯೆಗಳು ನಿವಾರಣೆ ಮಾಡಬಹುದಾಗಿದೆ. ಈ ಗಿಡಮೂಲಿಕೆ ಗಳಲ್ಲಿ ಔಷಧೀಯ ಅಂಶಗಳು ಇರುವುದು ಕೂಡ ಪತ್ತೆಯಾಗಿದೆ. ಕೂದಲು ಉದುರುವಿಕೆ, ಕೂದಲು ಬಿಳಿಯಾಗುವುದು ಮತ್ತು ತಲೆ ಹೊಟ್ಟು, ಶಿಲೀಂಧ್ರ ಸಮಸ್ಯೆ ನಿವಾರಣೆ ಮಾಡಲು ಕೆಲವೊಂದು ಭಾರತೀಯ ಗಿಡಮೂಲಿಕೆಗಳನ್ನು ಬಳಕೆ ಮಾಡ ಬಹುದು. ಇದನ್ನು ನೀವು ತಿಳಿದುಕೊಳ್ಳಿ.

ಬೇವು

ಬೇವು

ಬೇವಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ ಎಂದು ನಮಗೆ ತಿಳಿದಿದೆ. ಆಯುರ್ವೇದ ಔಷಧೀಯ ಒಂದು ಭಾಗವಾಗಿರುವಂತಹ ಬೇವಿನಿಂದ ಹಲವಾರು ರೀತಿಯ ಚರ್ಮ ಮತ್ತು ತಲೆಬುರುಡೆಯ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು. ಕೂದಲಿಗೆ ಬೇವನ್ನು

ಬಳಸಿದಾಗ ಇದನ್ನು ತಲೆಹೊಟ್ಟು, ತುರಿಕೆ ಮತ್ತು ಶಿಲೀಂಧ್ರ ಸೋಂಕನ್ನು ದೂರ ಇಡುವುದು. ಬೇವಿನ ಎಣ್ಣೆಯು ಕೂದಲು ಉದುರುವಿಕೆ ಮತ್ತು ಅಕಾಲಿಕವಾಗಿ ಕೂದಲು ಬಿಳಿಯಾಗುವ ಸಮಸ್ಯೆ ನಿವಾರಣೆ ಮಾಡುವುದು. ಇದು ಕೂದಲಿನ ಬೆಳವಣಿಗೆಗೂ ನೆರವಾಗುವುದು. ಕೂದಲಿಗೆ ಬೇವಿನ ಎಣ್ಣೆ

* ಬೇವಿನ ಎಣ್ಣೆಯನ್ನು ಸ್ವಲ್ಪ ಉಗುರು ಬೆಚ್ಚಗೆ ಮಾಡಿ

* ಈ ಎಣ್ಣೆಯಿಂದ ನಿಮ್ಮ ಕೂದಲಿನ ಬುಡವನ್ನು ಮಸಾಜ್ ಮಾಡಿ

* ಕನಿಷ್ಠ ಒಂದು ಗಂಟೆ ಅಥವಾ ರಾತ್ರಿ ಪೂರ್ತಿ ಇದನ್ನು ಹಾಗೆಯೇ ಬಿಡಿ

* ನಂತರ ನಿಮ್ಮ ಕೂದಲನ್ನು ಮೆದುವಾದ ಶಾಂಪೂವಿನಿಂದ ತೊಳೆಯಿರಿ

* ಇದನ್ನು ವಾರಕ್ಕೊಮ್ಮೆ ಮಾಡಿ, ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ.

Most Read:ಕೂದಲ ಸೌಂದರ್ಯಕ್ಕಾಗಿ ದಾಸವಾಳ ಹೂವಿನ 8 ಪ್ರಯೋಜನಗಳು

ಅಲೋವೆರಾ

ಅಲೋವೆರಾ

ಅಲೋವೆರಾವು ತ್ವಚೆಗೆ ಅದ್ಭುತವಾಗಿ ನೆರವಾಗುವುದು ಎಂದು ನಾವು ತಿಳಿದುಕೊಂಡಿದ್ದೇವೆ. ಅದೇ ರೀತಿಯಾಗಿ ಇದು ಕೂದಲನ್ನು ತುಂಬಾ ಬಲಿಷ್ಠ ಮತ್ತು ತಲೆಬುರುಡೆಯನ್ನು ಆರೋಗ್ಯವಾಗಿಡುವುದು. ಅಲೋವೆರಾದಲ್ಲಿ ಅಮಿನೋ ಆಮ್ಲ ಸಮೃದ್ಧವಾಗಿದೆ ಮತ್ತು ಪ್ರೋಟೀಲಿಟಿಕ್ ಕಿಣ್ವವು ಇದ್ದು, ಇದರಿಂದ ತಲೆಬುರುಡೆಯು ಆರೋಗ್ಯವಾಗಿರುವುದು ಮತ್ತು ಕೂದಲಿನ ಬೆಳವಣಿಗೆ ವರ್ಧಿಸುವುದು. ಇದರಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣವು ತಲೆಬುರುಡೆಯಲ್ಲಿ ಆಗುವಂತಹ ಕಿರಿಕಿರಿ ಮತ್ತು ಉಲ್ಬಣಗೊಳ್ಳುವುದನ್ನು ತಡೆಯಬಹುದು. ಕೂದಲಿನ ಪಿಎಚ್ ಮಟ್ಟವನ್ನು ಸ್ಥಾಪಿಸಲು ಇದು ನೆರವಾಗುವುದು.

ಅಲೋವೆರಾ ಮತ್ತು ಲಿಂಬೆರಸ

*ಒಂದು ಚಮಚ ಅಲೋವೆರಾ ಜೆಲ್ ಅನ್ನು ತೆಗೆದುಕೊಂಡು ಅದಕ್ಕೆ ಎರಡು ಚಮಚ ಲಿಂಬೆರಸವನ್ನು ಹಾಕಿ.

* ಕೂದಲನ್ನು ಸರಿಯಾಗಿ ಒಣಗಿಸಿ. ಹೇರ್ ಪ್ಯಾಕ್ ಅನ್ನು ಕೂದಲು ಹಾಗೂ ತಲೆಬುರುಡೆಗೆ ಸರಿಯಾಗಿ ಹಚ್ಚಿಕೊಳ್ಳಿ.

* 15 ನಿಮಿಷ ಬಿಟ್ಟು ತಂಪಾದ ನೀರಿನಿಂದ ತಲೆಗೆ ಸ್ನಾನ ಮಾಡಿ.

ಭೃಂಗರಾಜ್

ಭೃಂಗರಾಜ್

ಭೃಂಗರಾಜ್ ಸೂರ್ಯಕಾಂತಿ ಕುಟುಂಬಕ್ಕೆ ಸೇರಿರುವುದು. ಇದು ಕೂದಲು ಉದುರುವಿಕೆ, ಅಕಾಲಿಕವಾಗಿ ಕೂದಲು ಬಿಳಿಯಾಗುವುದನ್ನು ತಡೆಯುವುದು ಮತ್ತು ಕೂದಲಿನ ಬುಡವನ್ನು ಬಲಿಷ್ಠವಾಗಿಸಿ, ಕೂದಲಿಗೆ ಕಂಡೀಷನ್ ಮಾಡುವುದು ಮತ್ತು ಕೂದಲು ಆರೋಗ್ಯವಾಗಿರುವಂತೆ ಮಾಡುವುದು. ಕೂದಲಿಗೆ

ಬಳಸಬಹುದಾದ ತುಂಬಾ ಅದ್ಭುತವಾಗಿರುವಂತಹ ಗಿಡ ಮೂಲಿಕೆಯು ಇದಾಗಿದೆ.

ಕರಿಬೇವಿನ ಎಲೆಗಳು

ಕರಿಬೇವಿನ ಎಲೆಗಳು

ಕರಿಬೇವಿನ ಎಲೆಗಳಲ್ಲಿ ಆ್ಯಂಟಿಆಕ್ಸಿಡೆಂಟ್ ಸಮೃದ್ಧ ಮಟ್ಟದಲ್ಲಿದೆ. ಇದು ಕೂದಲಿಗೆ ತೇವಾಂಶ ನೀಡುವುದು, ತಲೆಬುರುಡೆಗೆ ಶಮನ ನೀಡುವುದು ಮತ್ತು ಕೂದಲಿನ ಸತ್ತ ಕೋಶಗಳನ್ನು ತೆಗೆಯಲು ನೆರವಾಗುವುದು. ಇದರಿಂದಾಗಿ ಕೂದಲಿನ ಕೋಶಗಳು ಸರಿಯಾಗಿ ಉಸಿರಾಡಿ ಬಲಿಷ್ಠವಾಗಲು ಸಾಧ್ಯವಾಗುವುದು. ಕರಿಬೇವಿನಲ್ಲಿ ಬೆಟಾ ಕ್ಯಾರೋಟಿನ್ ಮತ್ತು ಪ್ರೋಟೀನ್ ಅತ್ಯಧಿಕ ಮಟ್ಟದಲ್ಲಿ ಇದೆ. ಇದರಿಂದ ಕೂದಲು ಉದುರುವಿಕೆ ಕಡಿಮೆ ಆಗುವುದು ಮತ್ತು ಕೂದಲಿನ ಬೆಳವಣಿಗೆಗೆ ನೆರವಾಗುವುದು.

ಕೂದಲಿನ ಬೆಳವಣಿಗೆಗೆ ಕರಿಬೇವಿನ ಎಲೆಗಳು ಮತ್ತು ತೆಂಗಿನ ಎಣ್ಣೆ

ಕೂದಲಿನ ಬೆಳವಣಿಗೆಗೆ ಕರಿಬೇವಿನ ಎಲೆಗಳು ಮತ್ತು ತೆಂಗಿನ ಎಣ್ಣೆ

ಕರಿಬೇವಿನ ಎಲೆಗಳು ಮತ್ತು ತೆಂಗಿನ ಎಣ್ಣೆಯು ಕೂದಲಿನ ಬೆಳವಣಿಗೆಗೆ ನೆರವಾಗುವುದು ಮತ್ತು ಕೂದಲನ್ನು ಮಾಯಿಶ್ಚರೈಸ್ ಹಾಗೂ ತೇವಾಂಶದಿಂದ ಇಡುವುದು. ತಾಜಾವಿರುವ ಕರಿಬೇವಿನ ಎಲೆಗಳನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ ಸ್ವಲ್ಪ ತೆಂಗಿನ ಎಣ್ಣೆ ಹಾಕಿ. ಈಗ ಎರಡನ್ನು ಸರಿಯಾಗಿ ಕುದಿಸಿ ಮತ್ತು ಕರಿಬೇವಿನ ಎಲೆಗಳು ಸಂಪೂರ್ಣ ಕಪ್ಪು ಆಗುವ ತನಕ ಕುದಿಸಿ. ಈ ಮಿಶ್ರಣವನ್ನು ತೆಗೆದುಕೊಂಡು ತಣ್ಣಗಾಗಲು ಬಿಡಿ. ಇದಕ್ಕೆ 1-2 ಚಮಚ ನಿಂಬೆರಸವನ್ನು ಹಾಕಿ ಮತ್ತು ಇದನ್ನು ತಲೆಬುರುಡೆಗೆ ಹಾಕಿಕೊಳ್ಳಿ. ರಾತ್ರಿಯಿಡಿ ಹಾಗೆ ಬಿಟ್ಟು ಬೆಳಿಗ್ಗೆ ಕೂದಲು ತೊಳೆಯಿರಿ.

ನೆಲ್ಲಿಕಾಯಿ

ನೆಲ್ಲಿಕಾಯಿ

ಇದು ಕೂದಲಿಗೆ ಬಳಸಬಹುದಾದ ತುಂಬಾ ಪರಿಣಾಮಕಾರಿ ಗಿಡಮೂಲಿಕೆ ಅಥವಾ ಹಣ್ಣು. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಇದು ತಲೆಬುರುಡೆ ಒಣಗುವುದು ಮತ್ತು ತುರಿಕೆ ಕಡಿಮೆ ಮಾಡುವುದು, ತಲೆಹೊಟ್ಟು ನಿವಾರಣೆ ಮಾಡಿ, ತಲೆಬುರುಡೆಯು ಸರಿಯಾದ ರೀತಿಯಲ್ಲಿ ಸ್ವಚ್ಛವಾಗುವಂತೆ

ಮಾಡುವುದು. ನೆಲ್ಲಿಕಾಯಿಯಲ್ಲಿ ಇರುವಂತಹ ವಿಟಮಿನ್ ಗಳು ಮತ್ತು ಖನಿಜಾಂಶಗಳು ಕೂದಲಿನ ಬೆಳವಣಿಗೆ ಮತ್ತು ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುವುದು. ನೆಲ್ಲಿಕಾಯಿಯು ಒಂದು ರೀತಿಯ ನೈಸರ್ಗಿಕ ಕಂಡೀಷನರ್ ಆಗಿದೆ.

ಮೆಂತೆಕಾಳು

ಮೆಂತೆಕಾಳು

ಮೆಂತೆ ಕಾಳುಗಳನ್ನು ಒಂದು ಸಲ ಕೂದಲಿಗೆ ಹಚ್ಚಿಕೊಂಡರೆ ಅದರಿಂದ ಕೂದಲಿನ ಬೆಳವಣಿಗೆ ಆಗುವುದು, ತಲೆಬುರುಡೆ ಆರೋಗ್ಯ ಸುಧಾರಣೆ ಆಗುವುದು ಮತ್ತು ಕೂದಲಿಗೆ ಕಾಂತಿ ಬರುವುದು. ಮೆಂತ್ಯೆಯಲ್ಲಿ ಇರುವಂತಹ ಪ್ರೋಟೀನ್ ನಿಂದಾಗಿ ಅದು ಕೂದಲು ಉದುರುವಿಕೆ ತಡೆಯುವುದು. ಮೆಂತ್ಯೆಯಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣವು ತಲೆಹೊಟ್ಟು, ಕೂದಲಿನ ಕಿರಿಕಿರಿ, ಕಿಣ್ಣ ಮತ್ತು ಬೊಕ್ಕೆ ನಿವಾರಣೆಗೆ ನೆರವಾಗುವುದು.

*ಒಂದು ಹಿಡಿ ಮೆಂತೆ ಕಾಳುಗಳನ್ನು ನೀರಿನಲ್ಲಿ ನೆನೆಯಲು ಹಾಕಿ.

*ಆರು ಗಂಟೆಗಳ ಕಾಲ ನೆನೆಸಿದ ಬಳಿಕ ಒಂದು ಒಂದು ಪಾತ್ರೆಗೆ ಹಾಕಿ.

*ಒಂದು ಮಿಕ್ಸಿಗೆ ಮೆಂತೆ ಕಾಳುಗಳನ್ನು ಹಾಕಿ.

*ಮೂರು ಚಮಚ ಕಡಲೆಹಿಟ್ಟನ್ನು ಇದಕ್ಕೆ ಸೇರಿಸಿ.

*ಒಂದು ಚಮಚ ಮೊಸರನ್ನು ಇದಕ್ಕೆ ಹಾಕಿ.

*ಎಲ್ಲವನ್ನು ಜತೆಯಾಗಿ ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ.

*ತಲೆ ಕೂದಲು ಉದುರುವುದನ್ನು ನಿಲ್ಲಿಸಲು ಈ ಪೇಸ್ಟ್ ನ್ನು ಬಳಸಿ.

ಬಳಸುವುದು ಹೇಗೆ?

ಬಳಸುವುದು ಹೇಗೆ?

ವಾರದಲ್ಲಿ ಮೂರು ಸಲ ಈ ಪೇಸ್ಟ್ ಅನ್ನು ಬಳಸಿಕೊಂಡು ಕೂದಲು ಉದುರುವ ಸಮಸ್ಯೆಯನ್ನು ನಿಭಾಯಿಸಿ. ಕೂದಲಿನ ಬುಡಕ್ಕೆ ಇದನ್ನು ಹಚ್ಚಿಕೊಂಡು ಸುಮಾರು ಹತ್ತು ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಿರಿ.

ಲಿಂಬೆ

ಲಿಂಬೆ

ಲಿಂಬೆಯಲ್ಲಿ ಶಿಲೀಂಧ್ರ ವಿರೋಧಿ, ನಂಜುನಿರೋಧಕ ಗುಣಗಳಿದ್ದು, ಇದರಿಂದಾಗಿ ತಲೆಬುರುಡೆ ಮತ್ತು ಕೂದಲು ತುಂಬಾ ಸ್ವಚ್ಛವಾಗಿರುವುದು ಮತ್ತು ತಲೆಹೊಟ್ಟು ಕೂಡ ನಿವಾರಣೆ ಆಗುವುದು. ವಿಟಮಿನ್ ಸಿ ಮತ್ತು ಬಿಯಿಂದ ಸಮೃದ್ಧವಾಗಿರುವಂತಹ ಲಿಂಬೆಯು ಕೂದಲು ಬಲಿಷ್ಠವಾಗಲು ಸರಿಯಾದ ಮದ್ದು. ತಲೆಬುರುಡೆಯಲ್ಲಿ ಎಣ್ಣೆಯ ಸ್ರವಿಸುವಿಕೆಯನ್ನು ಲಿಂಬೆಯು ನಿಯಂತ್ರಿಸುವುದು.

ತಲೆ ಹೊಟ್ಟಿಗೆ ಮನೆಮದ್ದುಲಿಂಬೆ ರಸವನ್ನು ಬಳಸಿಕೊಂಡು ಹೊಟ್ಟಿಗೆ ಉಪಚಾರವನ್ನು ಪಡೆದುಕೊಳ್ಳಬಹುದಾಗಿದೆ. ಲಿಂಬೆ ರಸವು ಕೂದಲಿನ ಹೊಟ್ಟನ್ನು ನಿವಾರಿಸಿ ತಲೆಗೂದಲನ್ನು ದೃಢಗೊಳಿಸುತ್ತದೆ. ಲಿಂಬೆ ರಸದಲ್ಲಿರುವ ಸಿಟ್ರಿಕ್ ಆಸಿಡ್ ನೈಸರ್ಗಿಕವಾಗಿ ತಲೆಹೊಟ್ಟನ್ನು ನಿವಾರಿಸಲಿದೆ. ತುರಿಕೆಯ ನಿವಾರಣೆಯನ್ನು ಲಿಂಬೆ ರಸ ಮಾಡಲಿದೆ. ಲಿಂಬೆ ರಸವನ್ನು ನೀರಿನೊಂದಿಗೆ ಬೆರೆಸಿಕೊಂಡು ನಿಮ್ಮ ತಲೆಬುಡಕ್ಕೆ ಹಚ್ಚಿಕೊಳ್ಳಿ.

ಶಿಖಕಾಯಿ

ಶಿಖಕಾಯಿ

ಶಿಖಕಾಯಿಯನ್ನು ಭಾರತೀಯರು ಸಾವಿರಾರು ವರ್ಷಗಳ ಹಿಂದಿನಿಂದಲೂ ಕೂದಲನ್ನು ಸ್ವಚ್ಛಗೊಳಿಸಲು ಮತ್ತು ಕಂಡೀಷನರ್ ಆಗಿ ಬಳಕೆ ಮಾಡುತ್ತಲಿದ್ದರು. ಶಿಖಕಾಯಿ ನೈಸರ್ಗಿಕವಾಗಿ ಕೂದಲಿನ ಪಿಎಚ್ ಮಟ್ಟ ಕಾಪಾಡುವುದು ಮತ್ತು ಕೂದಲು ತುಂಬಾ ಕಾಂತಿಯುತ, ಆರೋಗ್ಯ ಮತ್ತು ತಲೆ ಹೊಟ್ಟು ಮುಕ್ತವಾಗಿರುವಂತೆ ಮಾಡುವುದು.

ಬ್ರಾಹ್ಮಿ

ಬ್ರಾಹ್ಮಿ

ಬ್ರಾಹ್ಮಿಯು ಜ್ಞಾಪಕ ಶಕ್ತಿ ಹೆಚ್ಚು ಮಾಡುವಲ್ಲಿ ಮತ್ತು ನರ ವ್ಯವಸ್ಥೆಯ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಕೂದಲಿನ ಚಿಕಿತ್ಸೆಗೆ ಕೂಡ ಇದನ್ನು ತುಂಬಾ ಹಿಂದಿನಿಂದಲೇ ಬಳಕೆ ಮಾಡಿಕೊಂಡು ಬರಲಾಗುತ್ತಿದೆ. ಇದು ಕೂದಲಿನ ಕಾಂತಿ ಮತ್ತು ಬೆಳವಣಿಗೆಗೆ ನೆರವಾಗುವುದು. ಬ್ರಾಹ್ಮಿ

ದೀರ್ಘಕಾಲದ ತನಕ ಕೂದಲನ್ನು ಆರೋಗ್ಯವಾಗಿ ಇಡುವುದು. ಈ ಎಲ್ಲಾ ಗಿಡಮೂಲಿಕೆಗಳು ಕೂದಲಿನ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿ. ತಲೆಹೊಟ್ಟು, ಕೂದಲು ಉದುರುವಿಕೆ ಮತ್ತು ಇತರ ಸಮಸ್ಯೆ ನಿವಾರಣೆ ಮಾಡಲು ಇವುಗಳನ್ನು ಬಳಕೆ ಮಾಡಿಕೊಳ್ಳಿ ಅಥವಾ ಈ ಗಿಡಮೂಲಿಕೆ ಇರುವಂತಹ ಕೆಲವು ಉತ್ಪನ್ನಗಳನ್ನು ಬಳಕೆ ಮಾಡಿ. ಶಾಂಪೂ ಮತ್ತು ಕಂಡೀಷನರ್ ನಲ್ಲಿ ಈ ಗಿಡಮೂಲಿಕೆಗಳನ್ನು ಬಳಸಲಾಗುತ್ತದೆ. ಇದು ತುಂಬಾ ಪರಿಣಾಮಕಾರಿಯಾಗಿ ಇರುವುದು.

English summary

Herbs that stop hair-fall & control dandruff

Indian herbs that stop hair-fall, greying & heal dandruff, fungus prone scalpIt is a known fact that our hair goes through various issues throughout our lifetime. Hair fall, greying, dandruff, itchy scalp, fungus prone scalp, dryness, dullness, etc. are all problems associated with hair. Lifestyle related issues causing hormonal imbalance, and erratic weather fluctuations are also playing a role in aggravating hair problems further. However, for centuries now, some natural herbs easily found in India have been magically solving hair and health problems for many who have trusted these plants for their medicinal properties.
X
Desktop Bottom Promotion