For Quick Alerts
ALLOW NOTIFICATIONS  
For Daily Alerts

ನಿಮ್ಮ ಮದುವೆಯೇ? ಹಾಗಿದ್ದರೆ ಇಲ್ಲಿದೆ ನೋಡಿ ಕೂದಲಿನ ಬೆಳವಣಿಗೆಗೆ ಕೆಲವು ಸಲಹೆಗಳು

|

ವಿವಾಹಕ್ಕೆ ತಯಾರಿ ನೆಡೆಸುವ ವಧು ತನಗೆ ಉದ್ದವಾದ,ಹೊಳೆಯುವ ಕೂದಲು ಇರಬೇಕು ಎಂದು ಬಯಸುತ್ತಾಳೆ.

ಒಮ್ಮಿಂದೊಮ್ಮೆಲೇ ಕೂದಲು ಬೆಳೆಯುವ ಜಾದುವನ್ನು ಯಾರೂ ಮಾಡಲು ಸಾಧ್ಯವಿಲ್ಲವಾದರೂ ಕೂದಲು ಸರಿಯಾಗಿ ಬೆಳೆಯಲು ಕೆಲವು ವಿಸ್ಮಯ ವಿಧಾನಗಳಿವೆ. ತಜ್ಞರು ಹೇಳುವ ಪ್ರಕಾರ ಕನಿಷ್ಠ ಪಕ್ಷ ಐದು ಅಥವಾ ಆರು ತಿಂಗಳು ಮೊದಲೇ ಕೂದಲ ಆರೋಗ್ಯಕರ ಬೆಳವಣಿಗೆಗೆ ಸೂಕ್ತ ಕಾಳಜಿವಹಿಸುವುದು ಉತ್ತಮ.ಕೇಶ ಬೆಳವಣಿಗೆಯ ವಿಧಾನಗಳನ್ನು ಅನುಸರಿಸುವ ಮೊದಲು ಸಾಕಷ್ಟು ತಾಳ್ಮೆ ವಹಿಸುವುದು ಅವಶ್ಯಕ ಏಕೆಂದರೆ ಯಶಸ್ಸು ಬೇಕೆಂದರೆ ತಾಳ್ಮೆಯಿಂದ ಕಾಯಲೇಬೇಕು. ನಿಮ್ಮ ಮದುವೆಯ ದಿನದ ಮೊದಲು ಕೂದಲು ಆರೋಗ್ಯಕರವಾಗಿ ಬೆಳೆಯಲು ಕೂದಲ ತರಭೇತಿ ತಜ್ಞೆ ಶಿಖೀ ಅಗರವಾಲ್ ಕೆಲವು ಮಾಹಿತಿಗಳನ್ನು ನೀಡಿದ್ದಾರೆ.

ಮಸಾಜ್ ಮಾಡಿ

ಮಸಾಜ್ ಮಾಡಿ

ರಕ್ತ ಸಂಚಲನೆ ಸರಿಯಾಗಿಯಾಗಲು ಮತ್ತು ತೇವಾಂಶವನ್ನು ಕಾಪಾಡಿಕೊಳ್ಳಲು ಕೂದಲಿಗೆ ಮಸಾಜ್ ಮಾಡುವ ಅಗತ್ಯವಿದೆ.ಈಗಾಗಲೇ ವಧುವಿನ ಕೂದಲು ಹೆಚ್ಚು ಎಣ್ಣೆಯುತವಾದಲ್ಲಿ ವಾರಕ್ಕೊಮ್ಮೆ ಎಣ್ಣೆ ಹಚ್ಚಬೇಕು ಮತ್ತು ಒಣ ಕೂದಲನ್ನು ಹೊಂದಿದ ವಧು ವಾರದಲ್ಲಿ ಕನಿಷ್ಠ ಎರೆಡು ಬಾರಿ ಎಣ್ಣೆ ಹಚ್ಚಿ ಮಸಾಜ್ ಮಾಡಬೇಕು.

ರಾಸಾಯನಿಕ ಅಂಶವಿಲ್ಲದ ಉತ್ಪನ್ನಗಳ ಬಳಕೆ

ರಾಸಾಯನಿಕ ಅಂಶವಿಲ್ಲದ ಉತ್ಪನ್ನಗಳ ಬಳಕೆ

ಸಿಲಿಕಾನ್,ಸಲ್ಫೇಟ್,ಪ್ಯಾರಬಲ್ಸ್ ಇವುಗಳನ್ನು ಹೊಂದಿರದ ನೈಸರ್ಗಿಕ ಅಂಶಗಳನ್ನೊಳಗೊಂಡ ಶಾಂಪೂ ಬಳಸಿ.ಇದು ಕೂದಲಿನ ತೇವಾಂಶವನ್ನು ಕಾಪಾಡಿ ಆರೋಗ್ಯಕರ ಕೂದಲಿನ ಬೆಳವಣಿಗೆಗೆ ಸಹಕರಿಸುತ್ತದೆ. ರಾಸಾಯನಿಕ ಅಂಶಗಳನ್ನು ಒಳಗೊಂಡ ಶಾಂಪೂ ಡಿಟರ್ಜೆಂಟ್ ನಷ್ಟೆ ಹಾನಿಕಾರಕ,ಇಂತಹ ಶಾಂಪೂವನ್ನು ನಿಯಮಿತವಾಗಿ ಬಳಸುವುದರಿಂದ ಕೂದಲು ತೇವಾಂಶವನ್ನು ಕಳೆದು ಕೊಂಡು ದುರ್ಬಲವಾಗುತ್ತದೆ. ಆದ್ದರಿಂದ ವಧು ಆಗುವವಳು ಈ ರೀತಿಯ ಶಾಂಪೂವಿನ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.

Most Read: ಕಡಲೆಹಿಟ್ಟಿನ ಹೇರ್ ಮಾಸ್ಕ್! ಇದು ಕೂದಲನ್ನು ಬಲಿಷ್ಠ ಹಾಗೂ ಆರೋಗ್ಯವಾಗಿಡುವುದು!

ಡೀಪ್ ಕಂಡೀಷನಿಂಗ್

ಡೀಪ್ ಕಂಡೀಷನಿಂಗ್

ಕೊಬ್ಬರಿ ಎಣ್ಣೆ, ಬಾಬಸ್ಸು ಎಣ್ಣೆ,ಜೇನುತುಪ್ಪ ಇಂತಹ ನೈಸರ್ಗಿಕ ಅಂಶಗಳನ್ನು ಒಳಗೊಂಡ ಕಂಡಿಷನರ್ ಬಳಸುವುದು ಕೂದಲ ಬೆಳವಣಿಗೆಯನ್ನು ಪ್ರಚೋದಿಸುತ್ತವೆ.ನೈಸರ್ಗಿಕ ಉತ್ಪನ್ನಗಳ ಬಳಕೆಯಿಂದ ಕೇಶರಾಶಿ ಮೃದು ಮತ್ತು ಕೋಮಲತೆಯನ್ನು ಪಡೆಯುತ್ತದೆ. ಸ್ಟೈಲ್ ಮತ್ತು ಅಧಿಕ ಶಾಖ ಕೊಡುವುದನ್ನು ನಿಲ್ಲಿಸಿ: ಹೇರ್ ಡ್ರೈಯರ್ ಅಧಿಕ ಶಾಖದಿಂದಾಗಿ ಕೂದಲ ಬೆಳವಣಿಗೆ ಕುಂಠಿತಗೊಳ್ಳುತ್ತದೆ.ವಧುವಾಗುವವಳು ಹೇರ್ ಡ್ರೈಯರ್ ಬಳಸುವುದರಿಂದ ಕೂದಲ ಬೇರು ದುರ್ಬಲಗೊಂಡು ಕೂದಲು ತುಂಡಾಗುವಿಕೆ ಹೆಚ್ಚುತ್ತದೆ. ಕೂದಲು ಒದ್ದೆ ಇರುವಾಗ ದುರ್ಬಲವಾಗಿರುವುದರಿಂದ ಅದಕ್ಕೆ ಹೆಚ್ಚು ಶಾಖ ಕೊಡಬೇಡಿ.ಸ್ವಲ್ಪ ಮೃದುವಾಗಿರುವ ಬಾಚಣಿಗೆ ಬಳಸುವುದು ಸೂಕ್ತ.ಇದು ಕೂದಲ ರಕ್ತ ಸಂಚಲನವನ್ನು ಹೆಚ್ಚಿಸಿ ತಲೆಯ ಬುಡದಲ್ಲಿ ಕೂದಲಿಗೆ ಅಗತ್ಯವಿರುವ ಎಣ್ಣೆಯನ್ನು ಉತ್ಪತ್ತಿ ಮಾಡುತ್ತದೆ.

ರೇಷ್ಮೆಯಂತಹ ಕೂದಲಿಗೆ ತಲೆದಿಂಬು

ರೇಷ್ಮೆಯಂತಹ ಕೂದಲಿಗೆ ತಲೆದಿಂಬು

ಕೂದಲು ಆರೋಗ್ಯಕರವಾಗಿರಲು ನೈಜವಾಗಿ ತಲೆಯಲ್ಲಿ ಎಣ್ಣೆ ಉತ್ಪತ್ತಿಯಾಗುತ್ತದೆ.ನಾವು ಪ್ರತಿರಾತ್ರಿ ಮಲಗುವಾಗ ಬಳಸುವ ಹತ್ತಿ,ರೇಯಾನ್ ಅಥವಾ ಪಾಲಿಯೆಸ್ಟರ್ ಫ್ಯಾಬ್ರಿಕ್ ತಲೆದಿಂಬುಗಳು ಕೂದಲಿನಲ್ಲಿ ಉತ್ಪತ್ತಿಯಾಗುವ ಎಣ್ಣೆಯನ್ನು ಹೀರಿಕೊಂಡು ಒಣ ಕೂದಲಿಗೆ ಕಾರಣವಾಗುತ್ತದೆ.ರೇಷ್ಮೆ ಬಟ್ಟೆಯ ದಿಂಬನ್ನು ಬಳಸುವುದು ಕೂದಲ ಆರೋಗ್ಯಕ್ಕೆ ಒಳ್ಳೆಯದು ಮತ್ತು ಇದು ಒಂದು ರೀತಿಯಲ್ಲಿ ರಾತ್ರಿ ಮಲಗಿದಾಗಲೂ ಕೂಡ ಕೂದಲ ಬಗ್ಗೆ ಕಾಳಜಿವಹಿಸಿದಂತಾಗುತ್ತದೆ.

Most Read: ತಲೆಕೂದಲಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡುವಾಗ ಏನು ಮಾಡಬೇಕು? ಏನು ಮಾಡಬಾರದು?

ಕೂದಲನ್ನು ಹೆಚ್ಚು ವಾಶ್ ಮಾಡಬೇಡಿ

ಕೂದಲನ್ನು ಹೆಚ್ಚು ವಾಶ್ ಮಾಡಬೇಡಿ

ಪ್ರತಿದಿನ ತಲೆಸ್ನಾನ ಮಾಡುವುದರಿಂದ ಕೂದಲಲ್ಲಿರುವ ಎಣ್ಣೆ ತೆಗೆದು ಹಾಕಿ ಕೂದಲಿಗೆ ಸಿಗಬೇಕಾದ ಪೋಷಣೆಯನ್ನು ಕುಂಠಿತಗೊಳಿಸಿ ಕೂದಲಿನ ಬೆಳವಣಿಗೆಯನ್ನು ತಡೆಯುತ್ತದೆ. ಕೇವಲ ತಲೆಯ ಬುಡಕ್ಕೆ ನೀವು ಏನನ್ನು ಹಚ್ಚುತ್ತೀರಿ ಎಂಬುದರ ಜೊತೆಗೆ ಸಂಪೂರ್ಣ ಕೂದಲಿಗೆ ಏನು ಹಚ್ಚುತ್ತೀರಿ ಎಂಬುದು ಕೂಡ ಕೂದಲ ಬೆಳವಣಿಗೆಗೆ ಮುಖ್ಯವಾಗುತ್ತದೆ.ಆರೋಗ್ಯಕರವಾದ ಆಹಾರವನ್ನು ತೆಗೆದುಕೊಳ್ಳುವುದು ತ್ವಚೆಯ ಹೊಳಪಿಗೆ ಮಾತ್ರವಲ್ಲ ಕೂದಲಿನ ಬೆಳವಣಿಗೆಗೂ ಕಾರಣವಾಗುತ್ತದೆ ಎಂದು ಅಗರವಾಲ್ ಹೇಳುತ್ತಾರೆ.

 ಆಹಾರ ಕ್ರಮ

ಆಹಾರ ಕ್ರಮ

ವಿಟಮಿನ್ ಡಿ,ವಿಟಮಿನ್ ಇ ಮತ್ತು ಜಿಂಕ್ ಹೇರಳವಾಗಿರುವ ಆಹಾರಗಳ ಸೇವನೆ ಕೇವಲ ಕೂದಲನ್ನು ಬಲಗೊಳ್ಳಿಸುವುದು ಮಾತ್ರವಲ್ಲ ಬೆಳವಣಿಗೆಯನ್ನೂ ಹೆಚ್ಚಿಸುತ್ತದೆ.ಕೂದಲಿನ ಗುಣಮಟ್ಟ ಹೆಚ್ಚಿಸಲು ಕೂಡ ಇದು ಸಹಾಯಕ.ಮೊಟ್ಟೆ,ಮೀನು,ಕಿತ್ತಳೆ ಹಣ್ಣು,ಸೂರ್ಯಕಾಂತಿ ಬೀಜ,ವಾಲ್ನಟ್,ಬಾದಾಮಿ,ಅಗಸೆ ಬೀಜ ಇವುಗಳು ಕೂದಲಿಗೆ ಬೇಕಾದ ಅಗತ್ಯ ಕೊಬ್ಬಿನ ಅಂಶ ಮತ್ತು ಪ್ರೊಟೀನ್ ಅನ್ನು ಹೊಂದಿದೆ ಎಂದು ಅಗರವಾಲ್ ಹೇಳುತ್ತಾರೆ.

English summary

Getting married? Here are few tips to grow your hair

According to experts, starting a healthy and conscious hair-care regime at-least 5-6 months prior is a great idea. Before even starting a hair-care regime, it's essential to practice patience, because as they say- patience is the key to success and the results of success is always fruitful. Here are some sure-fire ways by Shikhee Agrawal, Head Training, The Body Shop, to grow your hair quickly before your wedding day:
Story first published: Thursday, January 24, 2019, 13:20 [IST]
X
Desktop Bottom Promotion