For Quick Alerts
ALLOW NOTIFICATIONS  
For Daily Alerts

ಕೂದಲ ಸೌಂದರ್ಯಕ್ಕಾಗಿ ದಾಸವಾಳ ಹೂವಿನ 8 ಪ್ರಯೋಜನಗಳು

|

ಯಾವುದೇ ಆರೈಕೆಯಿಲ್ಲದೇ ಬೆಳೆಯುವ, ಪ್ರಖರ ವರ್ಣದ ಸುಂದರ ದಾಸವಾಳದ ಹೂವು ಕೇವಲ ಅಂಗಳದ ಸೌಂದರ್ಯವನ್ನು ಮಾತ್ರವಲ್ಲ, ಕೂದಲ ಬೆಳವಣಿಗೆಗೂ ನೆರವಾಗುತ್ತದೆ ಎಂದು ನಿಮಗೆ ಗೊತ್ತಿತ್ತೇ? ದಾಸವಾಳ ಸಾಮಾನ್ಯವಾಗಿ ಎಲ್ಲಾ ಹೂವಿನ ತೋಟಗಳಲ್ಲಿಯೂ ಕಂಡುಬರುವ ಗಿಡವಾಗಿದ್ದು ಕೂದಲ ಆರೈಕೆ ಮತ್ತು ದೃಢ ಹಾಗೂ ಸೊಂಪಾದ ಕೂದಲನ್ನು ಪಡೆಯಲು ಈ ಹೂವಿಗಾಗಿ ಹೆಚ್ಚು ಅಲೆಯಬೇಕಾಗಿಲ್ಲ.

ಒಂದು ವೇಳೆ ನೀವು ಇರುವ ಸ್ಥಳದಲ್ಲಿ ಈ ಗಿಡ ಲಭ್ಯವಿಲ್ಲದೇ ಇದ್ದರೆ ಗ್ರಂಥಿಗೆ ಅಂಗಡಿಯಲ್ಲಿ ಈ ಹೂವುಗಳನ್ನು ಒಣಗಿಸಿದ ದಳ ಹಾಗೂ ಪಕಳೆಗಳು ಸಿದ್ಧರೂಪದಲ್ಲಿ ಸಿಗುತ್ತವೆ. ಈ ಒಣದಳಗಳು ಸಹಾ ಕೂದಲ ಆರೈಕೆಗೆ ಉತ್ತಮ ನೆರವು ನೀಡುತ್ತದೆ. ಸೀಳಿದ್ದ ಕೂದಲು, ಉದುರುವ ಕೂದಲು ಮೊದಲಾದವುಗಳನ್ನು ಇವು ಸರಿಪಡಿಸುತ್ತವೆ. ಬನ್ನಿ, ಕೂದಲ ಸೌಂದರ್ಯಕ್ಕಾಗಿ ದಾಸವಾಳವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ನೋಡೋಣ...

ಕೂದಲ ಬೆಳವಣಿಗೆಯನ್ನು ಪ್ರಚೋದಿಸುತ್ತದೆ

ಕೂದಲ ಬೆಳವಣಿಗೆಯನ್ನು ಪ್ರಚೋದಿಸುತ್ತದೆ

ದಾಸವಾಳದ ಬಣ್ಣ ಪ್ರಖರವಾಗಿರಲು ಇದರಲ್ಲಿರುವ ಪೋಷಕಾಂಶಗಳಾದ ಅಮೈನೋ ಆಮ್ಲಗಳು ಕಾರಣವಾಗಿವೆ. ಇವು ತ್ವಚೆ ಮತ್ತು ಕೂದಲ ಕಣಗಳಾದ ಕೆರಾಟಿನ್ ಎಂಬ ಅಂಶವನ್ನು ಉತ್ಪಾದಿಸಲು ಅಗತ್ಯವಾಗಿವೆ. ಹಾಗಾಗಿ ಈ ಹೂವು ಈಗಾಗಲೇ ಉದುರಿಹೋಗಿ ಬೋಳಾಗಿದ್ದ ಕೂದಲ ಬುಡವನ್ನು ಪ್ರಚೋದಿಸಿ ಹೊಸ ಕೂದಲು ಹುಟ್ಟುವಂತೆ ಮಾಡುತ್ತದೆ. ಇದಕ್ಕಾಗಿ ತಲೆಗೆ ಹಚ್ಚಿಕೊಳ್ಳುವ ತೈಲದೊಂದಿಗೆ ಈ ಹೂವುಗಳನ್ನು ಬೆರೆಸುವುದು ಅತಿ ಸುಲಭದ ಕೆಲಸ. ಒಂದು ಕಪ್ ತಣ್ಣನೆಯ ವಿಧಾನದಲ್ಲಿ ಹಿಂಡಿರುವ ಕೊಬ್ಬರಿ ಎಣ್ಣೆಯಲ್ಲಿ ಒಂದು ಮುಷ್ಠಿ ತುಂಬಾ ದಾಸವಾಳದ ಹೂವಿನ ದಳ ಮತ್ತು ಎಲೆಗಳನ್ನು ನುಣ್ಣಗೆ ಅರೆದು ಎಣ್ಣೆಯೊಂದಿಗೆ ಬೆರೆಸಬೇಕು. ಬಳಿಕ ಈ ಎಣ್ಣೆಯನ್ನು ಸುಮಾರು ಎರಡು ನಿಮಿಷಗಳವರೆಗೆ ಬಿಸಿಮಾಡಿ ತಣಿಸಬೇಕು. ತಣಿದ ಬಳಿಕ ಈ ಎಣ್ಣೆಯನ್ನು ತಲೆಗೂದಲ ಬುಡದಿಂದ ತುದಿಯವರೆಗೂ ಬರುವಂತೆ ವಾರಕ್ಕೆ ಮೂರು ಬಾರಿ ಹಚ್ಚಿಕೊಳ್ಳುತ್ತಿದ್ದರೆ ಶೀಘ್ರವೇ ಉತ್ತಮ ಪರಿಣಾಮವನ್ನು ಕಾಣಬಹುದು.

ಕೂದಲನ್ನು ನುಣುಪು ಮತ್ತು ಹೊಳಪುಳ್ಳದ್ದಾಗಿಸುತ್ತದೆ

ಕೂದಲನ್ನು ನುಣುಪು ಮತ್ತು ಹೊಳಪುಳ್ಳದ್ದಾಗಿಸುತ್ತದೆ

ನಿಮ್ಮ ಕೂದಲು ಮೃದು, ರೇಷ್ಮೆಯಂತೆ ಹೊಳೆಯಲು ಹಾಗೂ ಸೊಂಪಾಗಿರಲು ನೀವು ದಾಸವಾಳವನ್ನು ಸದಾ ಉಪಯೋಗಿಸುತ್ತಿರಬೇಕು. ಇದಕ್ಕಾಗಿ ದಾಸವಾಳದ ಒಣ ದಳಗಳು ಮತ್ತು ಸಮಪ್ರಮಾಣದಲ್ಲಿ ಲೋಳೆಸರದ ತಿರುಳನ್ನು ಚೆನ್ನಾಗಿ ಮಿಶ್ರಣ ಮಾಡಿ ತಲೆಗೆ ಕನಿಷ್ಟ ವಾರಕ್ಕೆ ಮೂರು ಬಾರಿ ಹಚ್ಚಿಕೊಳ್ಳಬೇಕು. ಅಲ್ಲದೇ ನಿಯಮಿತವಾಗಿ ಈ ವಿಧಾನವನ್ನು ಮುಂದುವರೆಸಿಕೊಂಡು ಹೋಗುತ್ತಾ ಬಂದರೆ ಕೂದಲು ದೃಢ, ಹೊಳಪುಳ್ಳ ಮತ್ತು ನೀಳವಾಗಲು ಸಾಧ್ಯವಾಗುತ್ತದೆ.

Most Read: ದಾಸವಾಳ ಹೂವಿನ ಹತ್ತಾರು ಔಷಧೀಯ ಗುಣಗಳು!

ಕೂದಲನ್ನು ಸ್ವಚ್ಛಗೊಳಿಸುತ್ತದೆ

ಕೂದಲನ್ನು ಸ್ವಚ್ಛಗೊಳಿಸುತ್ತದೆ

ರಾಸಾಯನಿಕ ಭರಿತ ಶಾಂಪೂಗಳು ಕೂದಲನ್ನು ತೊಳೆಯುವ ಭರದಲ್ಲಿ ನೈಸರ್ಗಿಕ ತೈಲಗಳನ್ನೂ ನಿವಾರಿಸಿಬಿಡುತ್ತವೆ. ಪರಿಣಾಮವಾಗಿ ಕೂದಲು ಪ್ರಾರಂಭದಲ್ಲಿ ಹೊಳಪು ಪಡೆದಿದ್ದರೂ ಕ್ರಮೇಣ ಹೊಳಪಿಲ್ಲದ್ದಾಗಿ ಕಳಾರಹಿತವಾಗಿಬಿಡುತ್ತದೆ. ಹಾಗಾಗಿ ಈ ಪ್ರಬಲ ಪ್ರಯೋಗಗಳಿಗೆ ನಿಮ್ಮ ಕೂದಲನ್ನು ಬಲಿಪಶುವಾಗಿಸುವುದನ್ನು ನಿಲ್ಲಿಸಿ, ನೀವೇ ಸ್ವತಃ ದಾಸವಾಳದ ಶಾಂಪೂ ತಯಾರಿಸಿ ವಾರಕ್ಕೊಮ್ಮೆ ಬಳಸುವ ಮೂಲಕ ನಿಮ್ಮ ಕೂದಲ ಹಿಂದಿನ ಸೊಬಗನ್ನು ಪಡೆಯಲು ಸಾಧ್ಯವಾಗುತ್ತದೆ. ದಾಸವಾಳದಿಂದ ಶಾಂಪೂ ತಯಾರಿಸಲು ಕೆಲವಾರು ವಿಧಾನಗಳಿವೆ. ಇದರಲ್ಲಿ ಅತಿ ಸುಲಭವಾದುದೆಂದರೆ ದಾಸವಾಳದ ಒಣ ದಳಗಳನ್ನು ಚೆನ್ನಾಗಿ ಪುಡಿಮಾಡಿ ಇದಕ್ಕೆ ಸಮಪ್ರಮಾಣದ ಕಡ್ಲೆಹಿಟ್ಟು ಮತ್ತು ಅಗತ್ಯವೆನಿದಷ್ಟು ನೀರನ್ನು ಬೆರೆಸಿ ತಯಾರಿಸಬಹುದು.

ಆಳವಾಗಿ ಆರೈಕೆ ನೀಡುತ್ತದೆ

ಆಳವಾಗಿ ಆರೈಕೆ ನೀಡುತ್ತದೆ

ದಾಸವಾಳದ ಹೂವು ಮತ್ತು ಎಲೆಗಳು ಅದ್ಭುತ ತೇವಕಾರಕ ಗುಣ ಹೊಂದಿವೆ. ಇದನ್ನು ಖಚಿತಪಡಿಸಲು ಕೊಂಚ ದಾಸವಾಳದ ದಳಗಳನ್ನು ಕೈಗಳಲ್ಲಿಯೇ ಹಿಚುಕಿ ನೋಡಿ, ಕೈಗಳ ಚರ್ಮ ತಕ್ಷಣವೇ ನೆರಿಗೆ ನೆರಿಗೆಯಾಗಿಬಿಡುತ್ತದೆ. ಏಕೆಂದರೆ ಈ ರಸದಲ್ಲಿರುವ ನೀರಿನಂಶವನ್ನು ತಕ್ಷಣವೇ ನಮ್ಮ ತ್ವಚೆ ಹೀರಿಕೊಂಡು ನೀರಿನಲ್ಲಿ ಹೆಚ್ಚುಹೊತ್ತು ಇದ್ದಾಗ ಆಗುವಂತೆಯೇ ನೆರಿಗೆ ನೆರಿಗೆಯಾಗುತ್ತದೆ. ಇದೇ ಕಾರಣಕ್ಕೆ ದಾಸವಾಳವನ್ನು ಪ್ರಮುಖ ಪ್ರಸಾದನಗಳಲ್ಲಿ ಹಾಗೂ ಗುಂಗುರು ಕೂದಲನ್ನು ನೇರವಾಗಿಸುವ ವಿಧಾನಗಳಲಿ ಬಳಸಲಾಗುತ್ತದೆ. ಈ ರಸ ಕೂದಲ ಒಳಗಿಳಿದು ಆರ್ದ್ರತೆಯನ್ನು ಒದಗಿಸುವ ಮೂಲಕ ಕೂದಲನ್ನು ದೃಢವಾಗಿಸುತ್ತದೆ ಹಾಗೂ ಸುಲಭವಾಗಿ ಈ ಆರ್ದ್ರತೆ ಕಳೆದುಕೊಳ್ಳದಂತೆ ತಡೆಯುತ್ತದೆ. ಈ ದ್ರವವನ್ನು ತಯಾರಿಸಲು ಎಂಟು ಹೂವುಗಳ ದಳಗಳನ್ನು ಅಗತ್ಯವೆನಿಸಿದಷ್ಟು ನೀರು ಬೆರೆಸಿ ನುಣ್ಣಗೆ ಅರೆದು ಈ ಲೇಪನವನ್ನು ದಪ್ಪನಾಗಿ ನೆತ್ತಿಯ ಮೇಲೆ ಹಚ್ಚಿಕೊಳ್ಳಿ ಹಾಗೂ ಒಂದು ಘಂಟೆಯ ಬಳಿಕ ತೊಳೆದುಕೊಳ್ಳಿ.

ತಲೆಹೊಟ್ಟು ಮತ್ತು ತುರಿಕೆಯನ್ನು ನಿವಾರಿಸುತ್ತದೆ

ತಲೆಹೊಟ್ಟು ಮತ್ತು ತುರಿಕೆಯನ್ನು ನಿವಾರಿಸುತ್ತದೆ

ದಾಸವಾಳದಲ್ಲಿ ಗುಣಪಡಿಸುವ ಗುಣವಿದೆ ಹಾಗೂ ಇದು ನೆತ್ತಿಯ ಚರ್ಮ ಅಗತ್ಯಕ್ಕೂ ಹೆಚ್ಚಿನ ತೈಲ ಸ್ರವಿಸದಿರುವಂತೆ ಹಾಗೂ ಈಗಗಲೇ ಸ್ರವಿಸಿದ್ದ ಹೆಚ್ಚುವರಿ ತೈಲವನ್ನು ನಿವಾರಿಸಲು ನೆರವಾಗುತ್ತದೆ. ಅಲ್ಲದೇ ಈ ಗುಣಗಳು ನೆತ್ತಿಯ ಚರ್ಮ ತಂಪಾಗಿರಲು ಹಾಗೂ ತುರಿಕೆ ಮತ್ತು ತಲೆಹೊಟ್ಟು ಇಲ್ಲವಾಗಲೂ ನೆರವಾಗುತ್ತದೆ. ಇದಕ್ಕಾಗಿ ಸಮಪ್ರಮಾಣದಲ್ಲಿ ಮದರಂಗಿ ಎಲೆ, ದಾಸವಾಳದ ಎಲೆ ಮತ್ತು ದಳಗಳನ್ನು ಮಿಶ್ರಣ ಮಾಡಿ ಕೊಂಚ ಲಿಂಬೆ ರಸದೊಂದಿಗೆ ಅರೆಯಿರಿ. ಈ ಲೇಪನವನ್ನು ವಾರಕ್ಕೆರಡು ಬಾರಿ ಹಚ್ಚಿಕೊಳ್ಳುವ ಮೂಲಕ ತಲೆಯ ಭಾಗದಲ್ಲಿ ಪಿ ಎಚ್ ಮಟ್ಟ ಸಂತುಲಿತವಾಗಿದ್ದು ಕ್ರಮೇಣ ತಲೆಹೊಟ್ಟು ಸಂಪೂರ್ಣವಾಗಿ ಇಲ್ಲವಾಗುತ್ತದೆ.

Most Read:ದಾಸವಾಳ ಹೂವಿನ ಚಹಾ-ಸ್ವಲ್ಪ ಹುಳಿ, ದುಪ್ಪಟ್ಟು ಸಿಹಿ..!

ಕೂದಲು ಉದುರುವುದನ್ನು ತಡೆಯುತ್ತದೆ

ಕೂದಲು ಉದುರುವುದನ್ನು ತಡೆಯುತ್ತದೆ

ಒಂದು ವೇಳೆ ನಿಮ್ಮ ಕೂದಲು ಆತಂಕಕಾರಿಯಾಗಿ ಉದುರುತ್ತಿದ್ದರೆ ದಾಸವಾಳ ನಿಮ್ಮ ಆತಂಕವನ್ನು ದೂರ ಮಾಡಬಲ್ಲುದು. ಇದರಲ್ಲಿ ವಿಟಮಿನ್ ಸಿ ಮತ್ತು ಅಮೈನೋ ಆಮ್ಲಗಳು ಸಮೃದ್ಧವಾಗಿದ್ದು ನೆತ್ತಿಯ ತ್ವಚೆಯ ಬುಡದಲ್ಲಿ ರಕ್ತಪರಿಚಲನೆ ಹೆಚ್ಚಿಸಲು ಹಾಗೂ ಆರೋಗ್ಯಕರ ಕೂದಲು ಬೆಳೆಯಲು ನೆರವಾಗುತ್ತದೆ. ಇದಕ್ಕೆ ಬೇಕಾದ ತೈಲವನ್ನು ನೀವೇ ಸ್ವತಃ ತಯಾರಿಸಿಕೊಳ್ಳಬಹುದು. ಇದಕ್ಕಾಗಿ ಒಂದು ಮುಚ್ಚಳವಿರುವ ಗಾಜಿನ ಜಾಡಿಯಲ್ಲಿ ಕೊಂಚ ಬಾದಾಮಿ ಎಣ್ಣೆ, ಎರಡರಿಂದ ಮೂರು ದಾಸವಾಳ ಹೂವುಗಳ ಒಣ ದಳಗಳನ್ನು ಹಾಕಿ ಗಟ್ಟಿಯಾಗಿ ಮುಚ್ಚಳ ಮುಚ್ಚಿ ಈ ಜಾಡಿಯನ್ನು ದಿನವಿಡೀ ಬಿಸಿಲಿಗೆ ತಾಗುವಂತೆ ಸತತವಾಗಿ ಒಂದು ತಿಂಗಳು ಇರಿಸಿ. ಆಗಾಗ ಈ ಬಾಟಲಿಯನ್ನು ಚೆನ್ನಾಗಿ ಕಲಕಲು ಮರೆಯದಿರಿ. ಹೀಗೆ ಕಲಕುವುದರಿಂದ ಎಣ್ಣೆಯಲ್ಲಿ ಹೂವಿನ ಪೋಷಕಾಂಶಗಳು ಬೆರೆತುಕೊಳ್ಳುತ್ತವೆ. ಒಂದು ತಿಂಗಳ ಬಳಿಕ ಈ ಎಣ್ಣೆಯನ್ನು ಸೋಸಿ ಬೇರೊಂದು ಜಾಡಿಯಲ್ಲಿ ಸಂಗ್ರಹಿಸಿ. ಈ ಎಣ್ಣೆಯನ್ನು ಪ್ರತಿ ಬಾರಿ ಸ್ನಾನ ಮಾಡುವ ಎರಡು ಘಂಟೆಗಳಿಗೂ ಮುನ್ನ ಮಸಾಜ್ ಮಾಡಿಕೊಂಡು ಹಚ್ಚಿಕೊಳ್ಳಿ. ಕೆಲವೇ ದಿನಗಳಲ್ಲಿ ಕೂದಲು ಉದುರುವುದು ಕಡಿಮೆಯಾಗಿರುವುದನ್ನು ಹಾಗೂ ನೀಳವಾಗುತ್ತಿರುವುದನ್ನು ಗಮನಿಸುವಿರಿ.

ಅಕಾಲಿಕ ಕೂದಲು ನೆರೆಯುವುದನ್ನು ತಡೆಯುತ್ತದೆ

ಅಕಾಲಿಕ ಕೂದಲು ನೆರೆಯುವುದನ್ನು ತಡೆಯುತ್ತದೆ

ದಾಸವಾಳದಲ್ಲಿ ಮೆಲನಿನ್ ಎಂಬ ವರ್ಣದ್ರವ್ಯವನ್ನು ಉತ್ಪಾದಿಸಲು ಅಗತ್ಯವಾದ ಪ್ರಬಲ ಆಂಟಿ ಆಕ್ಸಿಡೆಂಟುಗಳು ಹಾಗೂ ವಿಟಮಿನ್ನುಗಳಿವೆ. ನಮ್ಮ ಕೂದಲು ಹಾಗೂ ಚರ್ಮಕ್ಕೆ ಇರುವ ಬಣ್ಣಕ್ಕೆ ಈ ವರ್ಣದ್ರವ್ಯವೇ ಕಾರಣ. ಪುರಾತನ ಆಯುರ್ವೇದ ಹಾಗೂ ಇಂದಿನ ಆಧುನಿಕ ವೈದ್ಯಪದ್ದತಿ ಎರಡರಲ್ಲಿಯೂ ದಾಸವಾಲವನ್ನು ನೈಸರ್ಗಿಕ ಕೂದಲ ಬಣ್ಣ ನೀಡುವ ಪ್ರಸಾಧನದಲ್ಲಿ ಬಳಸಲಾಗುತ್ತಿದೆ. ಮೇಲಿನ ವಿಧಾನದಲ್ಲಿ ವಿವರಿಸಿರುವ ದಾಸವಾಳ ಕುದಿಸಿದ್ದ ಎಣ್ನೆಯನ್ನು ಹಚ್ಚಿಕೊಳ್ಳುವ ಮೂಲಕ ಕೂದಲು ನೆರೆಯುವುದನ್ನು ತಡವಾಗಿಸುತ್ತದೆಯಲ್ಲದೇ ಈಗಿರುವ ನೆರೆತ ಕೂದಲನ್ನೂ ಗಾಢವಾಗಿಸುತ್ತದೆ.

ಕೂದಲು ತುಂಡಾಗುವುದನ್ನು ತಪ್ಪಿಸುತ್ತದೆ

ಕೂದಲು ತುಂಡಾಗುವುದನ್ನು ತಪ್ಪಿಸುತ್ತದೆ

ಪ್ರದೂಷಣೆ, ಪ್ರಬಲ ರಾಸಾಯನಿಕಗಳು, ಮಾನಸಿಕ ಒತ್ತಡ ಮೊದಲಾದವು ಕೂದಲನ್ನು ಶಿಥಿಲಗೊಳಿಸುತ್ತವೆ. ಕೂದಲು ತೆಳ್ಳಗಾಗುತ್ತಾ ಮುಟ್ಟಿದರೆ ಸಾಕು ತುಂಡಾಗುವಂತೆ ಆಗಿದ್ದರೆ ಇದು ಯಾರಿಗಾದರೂ ಹೃದಯ ಒಡೆಯುವಂತಹ ಸಂಗತಿಯೇ ಹೌದು. ಆದರೆ ದಾಸವಾಳದಲ್ಲಿರುವ AHAಗಳು (Alpha hydroxy acid)ಕೂದಲಿನಲ್ಲಿರುವ ಎಲ್ಲಾ ಕೊಳೆ ಹಾಗೂ ರಾಸಾಯನಿಕಗಳನ್ನು ನಿವಾರಿಸಿ ಕೂದಲಿಗೆ ಅಗತ್ಯ ಆರ್ದ್ರತೆಯನ್ನು ಒದಗಿಸುವ ಮೂಲಕ ಕೂದಲಿನ ಕೆರಾಟಿನ್ ಕಣಗಳಿಗೆ ಪುನಃಶ್ಚೇತನ ನೀಡುತ್ತದೆ. ಇದರೊಂದಿಗೇ, ದಾಸವಾಳದಲ್ಲಿರುವ ಅಮೈನೋ ಆಮ್ಲಗಳು ಕೂದಲ ದೃಢತೆಯನ್ನು ಹೆಚ್ಚಿಸಿ ಇದರ ಸೆಳೆತ ಸಾಮರ್ಥ್ಯವನ್ನೂ ಹೆಚ್ಚಿಸಿ ಬಲಯುತವಾಗಿಸುತ್ತದೆ. ತನ್ಮೂಲಕ ಕೂದಲು ತುಂಡಾಗುವುದನ್ನು ತಪ್ಪಿಸುತ್ತದೆ.

English summary

Eight Benefits Of Hibiscus Flower For Hair

Did you know that besides making your garden look lovely, the brightly coloured blooms of hibiscus can do some amazing things for your hair? A common sight in every Indian garden, hibiscus flowers can promote the growth of thicker and stronger hair. Not just that, the powder made from sun-dried flowers can also prevent split ends, control dandruff and reduce hair fall to a great extent.
Story first published: Friday, March 8, 2019, 13:30 [IST]
X