For Quick Alerts
ALLOW NOTIFICATIONS  
For Daily Alerts

ಕರಿಬೇವಿನ ಸೊಪ್ಪಿನಲ್ಲಿವೆ ಕೂದಲಿನ ಆರೋಗ್ಯ ಕಾಪಾಡುವ ಚಮತ್ಕಾರಿ ಗುಣಗಳು !!! ಬಳಸುವ ವಿಧಾನಗಳನ್ನು ತಿಳಿಯಿರಿ

|

ಊಟದ ಜೊತೆ ಉಪ್ಪಿನಕಾಯಿ ಎಂಬಂತೆ ಪ್ರತಿ ಮನೆಯ ಅಡುಗೆಯ ಒಗ್ಗರಣೆಗೆ ಕರಿಬೇವಿನ ಸೊಪ್ಪು ಬೇಕೇ ಬೇಕು . ಅದರ ಸಾರಥ್ಯ ಅಡುಗೆಗೆ ಹೊಸ ರುಚಿಯ ದಾರಿಯನ್ನೇ ತೋರಿಸುತ್ತದೆ . ಸಸ್ಯಾಹಾರಿ ಮಾಂಸಾಹಾರಿ ಎನ್ನದೆ ಎಲ್ಲರಿಗೂ ಬೇಕೇ ಬೇಕು ಈ ಕರಿಬೇವು . ಕೇವಲ ರುಚಿಗೆ ಮಾತ್ರವಲ್ಲದೆ ಆರೋಗ್ಯಕ್ಕೂ ಒಳ್ಳೆಯದು ಎಂದು ಬಹಳ ಜನರು ನಂಬಿ ಕರಿಬೇವನ್ನು ಉಪಯೋಗಿಸುತ್ತಾರೆ . ಜನರ ನಂಬಿಕೆಯನ್ನು ಕರಿಬೇವಿನ ಸೊಪ್ಪು ಎಂದಿಗೂ ಸುಳ್ಳು ಮಾಡುವುದಿಲ್ಲ.

ಅದರಂತೆ ಆಯುರ್ವೇದದಲ್ಲಿ ಕೂಡ ತನ್ನ ಇರುವಿಕೆಯನ್ನು ಕರಿಬೇವು ಸೂಚಿಸುತ್ತದೆ . ಹಿಂದಿನ ಕಾಲದ ಆರೋಗ್ಯ ಪಂಡಿತರು ತಮ್ಮ ಔಷಧಿಗಳಿಗೆ ಕರಿಬೇವನ್ನು ಉಪಯೋಗಿಸುತ್ತಿದ್ದರು ಎಂದು ಹಲವಾರು ಕಡೆ ಉಲ್ಲೇಖವಿದೆ . ಮನುಷ್ಯನ ದೈಹಿಕ ಆರೋಗ್ಯ ರಕ್ಷಣೆಯಲ್ಲಿ ಕರಿಬೇವಿನ ಸೊಪ್ಪಿನ ಪಾತ್ರ ಬಹಳಷ್ಟಿದೆ . ರಕ್ತದ ಒತ್ತಡ ನಿವಾರಣೆಯಿಂದ ಹಿಡಿದು ತಲೆ ಕೂದಲಿನ ಆರೋಗ್ಯ ಕಾಪಾಡುವವರೆಗೂ ಕರಿಬೇವು ಜನರ ಹಿತಾಸಕ್ತಿಯನ್ನು ಕಾಯ್ದಿದೆ.

Curry Leaves

ಕರಿಬೇವಿನ ಸೊಪ್ಪಿನಿಂದ ತಲೆ ಕೂದಲು ನಯವಾಗಿ , ಉದ್ದವಾಗಿ ಮತ್ತು ಸೊಂಪಾಗಿ ಬೆಳೆಯುತ್ತದೆ . ಏಕೆಂದರೆ ಕರಿಬೇವಿನ ಸೊಪ್ಪಿನಲ್ಲಿ ಬಹಳವೇ ಜಾಸ್ತಿ ಕೂದಲಿಗೆ ಉಪಯೋಗವಾಗುವಂತಹ ಪೋಷಕಾಂಶಗಳು ಅಡಗಿವೆ . ವಿಟಮಿನ್ ' ಸಿ ' , ಫೋಸ್ಫೋರ್ಸ್ , ಐರನ್ , ಕ್ಯಾಲ್ಸಿಯಂ ಮತ್ತು ನಿಕೊಟಿನಿಕ್ ಆಸಿಡ್ ಗಳಿಗೆ ಕರಿಬೇವು ತನ್ನಲ್ಲಿ ಸ್ಥಳ ಮಾಡಿ ಕೊಟ್ಟಿದೆ . ಆದ್ದರಿಂದ ಒಬ್ಬರು ಹೊಟ್ಟೆ ಉರಿದು ಕೊಳ್ಳುವಂತೆ ಮಾಡುವ ದಟ್ಟವಾದ ಕೂದಲು ನಿಮ್ಮದಾಗಬೇಕೆಂದರೆ , ಈಗಲೇ ಮಾರುಕಟ್ಟೆಗೆ ಹೋಗಿ ಕರಿಬೇವನ್ನು ಮನೆಗೆ ತನ್ನಿ . ಖಂಡಿತ ಕರಿಬೇವು ನಿಮ್ಮ ಪಾಲಿಗೆ ವರದಾನ ಆಗುತ್ತದೆ .

ಕರಿಬೇವಿನ ಸೊಪ್ಪನ್ನು ಉಪಯೋಗಿಸುವುದರಿಂದ ಕೂದಲು ಉದುರುವುದನ್ನು ಆದಷ್ಟು ಬೇಗನೆ ಕಡಿಮೆ ಮಾಡಬಹುದು . ಕರಿಬೇವಿನ ಸೊಪ್ಪು ಕೂದಲಿನ ಬೇರುಗಳಿಗೆ ಶಕ್ತಿಯನ್ನು ಒದಗಿಸಿ ಅವುಗಳ ಆರೋಗ್ಯ ಕಾಪಾಡುತ್ತದೆ . ಇದರಿಂದ ಕೂದಲು ಸೊಂಪಾಗಿ ಬೆಳೆಯುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ . ಕರಿಬೇವಿನ ಸೊಪ್ಪಿನಲ್ಲಿರುವ ಆಂಟಿ ಒಕ್ಸಿಡಾಂಟ್ಸ್ ತಲೆ ಬುರುಡೆಯ ನೆತ್ತಿಯ ಚರ್ಮದಲ್ಲಿ ಸದಾ ತೇವಾಂಶವಿರುವಂತೆ ನೋಡಿಕೊಳ್ಳುತ್ತದೆ . ಇದರಿಂದ ನೆತ್ತಿಯ ಕೂದಲನ್ನು ಬಹಳ ಬೇಗನೆ ಕಡಿಮೆ ಮಾಡುವ ನಿರ್ಜೀವ ಕೋಶಗಳನ್ನು ಕಡಿಮೆ ಮಾಡಿ ಕೂದಲಿನ ಬೇರುಗಳನ್ನು ಬಲಪಡಿಸಿ ಕೂದಲು ಬೆಳೆಯಲು ಬೇಕಾದ ಎಲ್ಲಾ ರೀತಿಯ ಆರೋಗ್ಯಕರ ವಾತಾವರಣವನ್ನು ನಿರ್ಮಾಣ ಮಾಡುತ್ತದೆ. ಇಷ್ಟೇ ಅಲ್ಲದೆ ಕರಿಬೇವಿನ ಸೊಪ್ಪಿನಲ್ಲಿ ಬೀಟಾ ಕೆರೋಟಿನ್ ಮತ್ತು ಪ್ರೋಟೀನ್ ಅಂಶ ಇರುವುದರಿಂದ ತಲೆ ಕೂದಲು ತೆಳ್ಳಗಾಗುವುದನ್ನು ಶೀಘ್ರವಾಗಿ ತಡೆಯುತ್ತದೆ. ಕರಿಬೇವಿನ ಸೊಪ್ಪನ್ನು ಇತರ ವಸ್ತುಗಳೊಂದಿಗೆ ಸೇರಿಸಿ ನಿಮ್ಮ ಕೂದಲಿನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದನ್ನು ಈಗ ನೋಡೋಣ..

Most Read: ಮೆಂತೆಕಾಳುಗಳನ್ನು ಬಳಸಿಕೊಂಡು ಕೂದಲು ಉದುರುವಿಕೆ ಸಮಸ್ಯೆ ನಿವಾರಿಸಿ

Curry Leaves

ತೆಂಗಿನ ಎಣ್ಣೆಯೊಂದಿಗೆ ಕರಿಬೇವಿನ ಸೊಪ್ಪು

ಈ ಮಿಶ್ರಣವನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಮನೆಯಲ್ಲೇ ಸುಲಭವಾಗಿ ಸಿಗುವ ವಸ್ತುಗಳಿಂದ ಮಾಡಿಕೊಳ್ಳಬಹುದು .

ತಯಾರು ಮಾಡಲು ಬೇಕಾಗಿರುವ ಸಾಮಗ್ರಿಗಳು :

* ಒಂದು ಹಿಡಿ ಫ್ರೆಶ್ ಆದ ಕರಿಬೇವಿನ ಸೊಪ್ಪು .

* 2 - 3 ಚಮಚ ಹಸಿ ತೆಂಗಿನ ಎಣ್ಣೆ .

ತಯಾರು ಮಾಡುವ ವಿಧಾನ

ಮೊದಲಿಗೆ ತೆಂಗಿನ ಎಣ್ಣೆಯನ್ನು ಒಲೆಯ ಮೇಲಿಟ್ಟು ಬಿಸಿ ಬರುವವರೆಗೆ ಕಾಯಿಸಿ. ಅದಕ್ಕೆ ಮೊದಲೇ ತೆಗೆದಿಟ್ಟುಕೊಂಡಂತಹ ಒಂದು ಹಿಡಿ ಕರಿಬೇವಿನ ಸೊಪ್ಪನ್ನು ಹಾಕಿ. ಇವೆರಡನ್ನೂ ಸ್ಪಾಟುಲಾ ಮೂಲಕ ಚೆನ್ನಾಗಿ ತಿರುಗಿಸಿ ಕರಿಬೇವಿನ ಸೊಪ್ಪಿನ ಮೇಲೆ ಕಪ್ಪಗೆ ಬಣ್ಣ ಬರುವವರೆಗೆ ಸ್ಟೋವ್ ಮೇಲಿಟ್ಟು ನಂತರ ಸ್ಟವ್ ಆಫ್ ಮಾಡಿ . ಹೀಗೆ ಉರಿದ ಮಿಶ್ರಣವನ್ನು ತಣ್ಣಗಾಗಲು ಬಿಡಿ. ಆರಿದ ಮೇಲೆ ಈ ಮಿಶ್ರಣವನ್ನು ಪೇಸ್ಟ್ ಥರ ಮಾಡಿಕೊಂಡು ತಲೆಯ ಕೂದಲಿನ ಬುಡಕ್ಕೆ ಹಾಕುತ್ತಾ ನಿಧಾನವಾಗಿ ಮಸಾಜ್ ಮಾಡಿ. ಈ ಮಸಾಜ್ ಮಾಡಿದ ಮಿಶ್ರಣವನ್ನು ಕೂದಲಿನ ಮೇಲೆ ೩೦ ನಿಮಿಷಗಳ ಕಾಲ ಹಾಗೆ ಆರಲು ಬಿಡಿ . ನಂತರ ನೀವು ಮಾಮೂಲಾಗಿ ಉಪಯೋಗಿಸುವಂತಹ ಶಾಂಪೂ ಉಪಯೋಗಿಸಿ ತಲೆಗೆ ಸ್ನಾನ ಮಾಡಿಕೊಳ್ಳಿ .

ಇಲ್ಲಿ ಎರಡೂ ಪದಾರ್ಥಗಳಿಂದಲೂ ನಿಮಗೆ ಬಹಳ ಉಪಯೋಗವಿದೆ . ತೆಂಗಿನ ಎಣ್ಣೆಯಲ್ಲೂ ಕೂದಲಿಗೆ ಬೇಕಾದ ಒಳ್ಳೆಯ ಪೋಷಕಾಂಶಗಳಿವೆ. ಹಾಗೆ ಕರಿಬೇವಿನ ಸೊಪ್ಪಿನಲ್ಲೂ ಕೂಡ . ಇದರಿಂದ ನಿಮ್ಮ ಕೂದಲಿಗೆ ಮತ್ತು ಅವುಗಳ ಬೇರುಗಳಿಗೆ ಯಾವುದೇ ತೊಂದರೆ ಆಗದಂತೆ ನಿಮ್ಮ ಕೂದಲಿನ ರಕ್ಷಣೆ ಮಾಡಿ ಅವುಗಳ ಆರೋಗ್ಯ ಕಾಪಾಡಿಕೊಳ್ಳಬಹುದು ಮತ್ತು ಕೂದಲು ಉದುರದಂತೆ ನೋಡಿಕೊಳ್ಳಬಹುದು .

ಕೂದಲಿಗೆ ಕರಿಬೇವಿನ ಸೊಪ್ಪಿನ ಮಾಸ್ಕ್ :

ಇದೂ ಸಹ ಮನೆಯಲ್ಲಿ ಸಿಗುವಂತಹ ವಸ್ತುಗಳಿಂದ ಮಾಡಿಕೊಳ್ಳಬಹುದಾದ ಒಂದು ಹೇರ್ ಮಾಸ್ಕ್ .

ಇದನ್ನು ತಯಾರು ಮಾಡಿಕೊಳ್ಳಲು ಬೇಕಾದ ವಸ್ತುಗಳು :

* ಒಂದು ಹಿಡಿ ಫ್ರೆಶ್ ಆದ ಕರಿಬೇವಿನ ಸೊಪ್ಪು .

* 3 ರಿಂದ 4 ಚಮಚ ಗಟ್ಟಿ ಮೊಸರು.

Most Read: ಭೃಂಗರಾಜ ತೈಲ: ಕೂದಲಿಗೆ ಲಭಿಸುವ ಪ್ರಯೋಜನಗಳು ಮತ್ತು ಉಪಯೋಗಿಸುವ ವಿಧಾನಗಳು

ತಯಾರು ಮಾಡುವ ವಿಧಾನ

ಮೊದಲು ಮಿಕ್ಸಿ ಜಾರ್ ಗೆ ಒಂದು ಹಿಡಿ ಕರಿಬೇವಿನಿಂದ ಸೊಪ್ಪನ್ನು ಹಾಕಿ . ಅದಕ್ಕೆ ಮೊಸರನ್ನು ಸೇರಿಸಿ . ಇದನ್ನು ಚೆನ್ನಾಗಿ ಪೇಸ್ಟ್ ನ ಹದಕ್ಕೆ ಬರುವ ಹಾಗೆ ರುಬ್ಬಿಕೊಳ್ಳಿ . ಈ ಮಿಶ್ರಣವನ್ನು ಜಾರ್ ನಿಂದ ಒಂದು ಬಟ್ಟಲಿಗೆ ಸುರಿದುಕೊಂಡು ಅದನ್ನು ಕೂದಲಿನ ಬುಡಕ್ಕೆ , ನೆತ್ತಿಗೆ ಮತ್ತು ಕೂದಲಿನ ಎಲ್ಲಾ ಭಾಗಕ್ಕೆ ಸರಿಯಾದ ರೀತಿಯಲ್ಲಿ ಹಚ್ಚಿ . ಇದನ್ನು ಸುಮಾರು 30 ರಿಂದ 45 ನಿಮಿಷಗಳವರೆಗೆ ಹಾಗೆ ಆರಲು ಬಿಡಿ . ನಂತರ ಉಗುರು ಬೆಚ್ಚಗಿನ ನೀರು ಮತ್ತು ಶಾಂಪೂವಿನಿಂದ ತಲೆ ತೊಳೆದು ತಲೆ ಒರೆಸಿಕೊಳ್ಳಿ. ಇಲ್ಲಿ ನೀವು ಮುಖ್ಯವಾಗಿ ಗಮನ ಹರಿಸಬೇಕಾದ ಅಂಶ ಎಂದರೆ ನೀವು ಈ ಮಿಶ್ರಣ ತಯಾರು ಮಾಡಲು ಮೊಸರಿನ ಬದಲು ಹಾಲನ್ನು ಬೇಕಾದರೂ ಉಪಯೋಗಿಸ ಬಹುದು . ಈ ರೀತಿಯ ಮಾಸ್ಕ್ ಅನ್ನು ನೀವು ವಾರಕ್ಕೆ ಒಂದು ಬಾರಿ ಉಪಯೋಗಿಸಿದರೆ ಸಾಕು. ಒಳ್ಳೆಯ ಫಲಿತಾಂಶ ಕಾಣಬಹುದು . ಇದರಿಂದ ಕೂದಲು ಉದುರುವುದನ್ನು ತಡೆಯುವುದು ಅಷ್ಟೇ ಅಲ್ಲದೆ ಈಗಿನ ಜನತೆ ಬಹಳ ಚಿಕ್ಕ ವಯಸ್ಸಿನಲ್ಲೇ ಎದುರಿಸುತ್ತಿರುವ ನೆರೆ ಕೂದಲು ಅಥವಾ ಬಿಳಿ ಕೂದಲಿನ ಸಮಸ್ಯೆಯನ್ನು ಹೋಗಲಾಡಿಸಬಹುದು.

Most Read: ಕೂದಲ ಬೆಳವಣಿಗೆಗೆ ಮತ್ತು ಸದೃಢ ಕೂದಲಿಗಾಗಿ ಬೇವಿನ ಎಲೆಗಳ ಬಳಕೆ ಹೇಗೆ ಗೊತ್ತೇ?

Curry Leaves

ಗುಂಗುರು ಕೂದಲಿಗೆ ಕರಿಬೇವಿನ ಸೊಪ್ಪಿನಲ್ಲಿದೆ ಪರಿಹಾರ

ಗುಂಗುರು ಕೂದಲು ಕೆಲವರಿಗೆ ಇಷ್ಟವಾದರೆ , ಇನ್ನೂ ಕೆಲವರಿಗೆ ಬಹಳ ದೊಡ್ಡ ಸಮಸ್ಯೆ ಎಂಬ ಭಾವನೆ ಮೂಡಿಸುತ್ತದೆ . ಅಂತಹವರು ಕರಿಬೇವಿನ ಸೊಪ್ಪಿನಿಂದ ಈ ಸಮಸ್ಯೆಗೆ ಮುಕ್ತಿ ಹಾಡಬಹುದು .

ಸಮಸ್ಯೆ ದೂರ ಮಾಡಲು ಸಹಾಯ ಮಾಡುವ ಸಾಮಗ್ರಿಗಳು

* ಸುಮಾರು 15 ರಿಂದ 20 ಕರಿಬೇವಿನ ಎಲೆಗಳು .

* 2 ಕಪ್ ಶುದ್ಧವಾದ ನೀರು .

ತಯಾರು ಮಾಡುವ ಬಗೆ

ಮೊದಲು ನೀರನ್ನು ಒಂದು ಸ್ಟೀಲ್ ಪಾತ್ರೆಯಲ್ಲಿ ಹಾಕಿ ಸ್ಟವ್ ಮೇಲಿಟ್ಟು ಚೆನ್ನಾಗಿ ಕುದಿ ಬರುವವರೆಗೆ ಕುದಿಸಿ . ಕುದಿಯುತ್ತಿರುವ ನೀರಿಗೆ ಶುದ್ಧವಾದ ನೀರಿನಿಂದ ತೊಳೆದ ಕರಿಬೇವಿನ ಎಸಳುಗಳನ್ನು ಹಾಕಿ ನೀರು ಅರ್ಧಕ್ಕೆ ಹಾವಿಯಾಗುವಂತೆ ಮತ್ತೆ ಕುದಿಸಿ . ಈಗ ಸ್ಟವ್ ಆರಿಸಿ . ನೀರು ಉಗುರು ಬೆಚ್ಚಗಾಗುವ ತನಕ ಕಾಯ್ದು ನೀವು ಶಾಂಪೂ ಹಾಕಿ ತಲೆಯನ್ನು ಶುದ್ಧವಾಗಿ ತೊಳೆದ ನಂತರ ನಿಮ್ಮ ಗುಂಗುರು ಕೂದಲನ್ನು ಕುದಿಸಿದ ಉಗುರು ಬೆಚ್ಚಗಿನ ಕರಿಬೇವಿನ ನೀರಿನಲ್ಲಿ ಅದ್ದಿ.

ಈ ರೀತಿ ನೀವು ಸ್ನಾನ ಮಾಡಿದಾಗ ಪ್ರತಿ ಬಾರಿ ಮಾಡುತ್ತಾ ಬಂದರೆ ಗುಂಗುರು ಕೂದಲಿನ ಸಮಸ್ಯೆ ದೂರವಾಗಿ ಕೂದಲು ಮಾಮೂಲಿನ ಕೂದಲಿನಂತಾಗುತ್ತದೆ. ಮೇಲಿನ ವಿಧಾನಗಳು ಎಲ್ಲಾ ನೈಸರ್ಗಿಕ ವಸ್ತುಗಳಿಂದ ಮಾಡಿರುವುದರಿಂದ ಇಲ್ಲಿ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ. ಆದ್ದರಿಂದ ಯಾವುದೇ ಸಂಕೋಚವಿಲ್ಲದೆ ನೀವು ಈ ಹೇರ್ ಮಾಸ್ಕ್ ಗಳನ್ನು ಉಪಯೋಗಿಸಬಹುದು .

English summary

Curry Leaves for Hair Growth:ways to use curry leaves

Curry leaves or kaddi patta is generally used to add extra flavours and aroma to the food. It has a strong taste which adds a very different taste to the food. You might be experimenting curry leaves in different food items but do you know it good for your hair as well? Curry leaves will provide you beauty benefits which will help you enhance your hair quality and length as well. Curry leaves are loaded with vitamin C, phosphorus, iron, calcium and nicotinic acid. Use of curry leaves for hair will provide you thick and lustrous hair.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X