For Quick Alerts
ALLOW NOTIFICATIONS  
For Daily Alerts

ಕೂದಲು ಸೊಂಪಾಗಿ ಬೆಳೆಯಲು ಬ್ರಾಹ್ಮಿ ಪೌಡರ್ ಬಳಸಿ ನೋಡಿ

|

ಬ್ರಾಹ್ಮಿಯನ್ನು ವೈಜ್ಞಾನಿಕವಾಗಿ ಬಕೊಪಾ ಮೊನ್ನೇರಿ ಮತ್ತು ಬಕೋಪಾ ಮೊನ್ನಿಯೇರಿ ಎಂದು ಕರೆಯಲಾಗುತ್ತದೆ. ಭಾರತೀಯರು ಹಿಂದಿನಿಂದಲೂ ಇದನ್ನು ಹಲವಾರು ರೀತಿಯ ಕಾಯಿಲೆಗಳಿಗೆ ಔಷಧಿಯಾಗಿ ಬಳಸಿಕೊಂಡು ಬರುತ್ತಿದ್ದಾರೆ. ಬ್ರಾಹ್ಮಿಯು ಜ್ಞಾಪಕಶಕ್ತಿ ಹೆಚ್ಚು ಮಾಡುತ್ತದೆ ಎಂದು ಸಾಬೀತು ಕೂಡ ಆಗಿದೆ. ಇದೇ ಬ್ರಾಹ್ಮಿಯಿಂದ ಇನ್ನೂ ಹಲವಾರು ಉಪಯೋಗಗಳು ಇವೆ. ಕೂದಲಿನ ಬೆಳವಣಿಗೆಗೆ ಕೂಡ ಹಲವಾರು ಬ್ರಾಹ್ಮಿಯನ್ನು ಬಳಸುತ್ತಾರೆ. ಇದರ ಇತರ ಕೆಲವೊಂದು ಉಪಯೋಗಗಳೆಂದರೆ ಐಬಿಎಸ್, ಅಲ್ಝೈಮರ್ ಕಾಯಿಲೆ, ಆತಂಕ, ಏಕಾಗ್ರತೆ ಕೊರತೆಯಂತೆ ಸಮಸ್ಯೆ, ಅಲರ್ಜಿ ಇತ್ಯಾದಿಗಳಿಗೆ ಬಳಸಲಾಗುತ್ತದೆ. ಒತ್ತಡ ನಿವಾರಣೆ ಮಾಡಲು ಇದು ತುಂಬಾ ಸಹಕಾರಿ ಎಂದು ಪರಿಗಣಿಸಲಾಗಿದೆ.

ಹೆಚ್ಚಿನ ಜನರು ಇದನ್ನು ಮಾನಸಿಕ ಆರೋಗ್ಯ, ಬೆನ್ನುನೋವು, ಗಂಟುನೋವು ಮತ್ತು ಲೈಂಗಿಕ ಪ್ರದರ್ಶನ ಉತ್ತಮಪಡಿಸಿಕೊಳ್ಳಲು ಬಳಸಿಕೊಳ್ಳುವರು. ಕೂದಲಿಗೂ ಕೂಡ ಬ್ರಾಹ್ಮಿಯಿಂದ ಹಲವಾರು ರೀತಿಯ ಉಪಯೋಗಗಳು ಇವೆ. ಬ್ರಾಹ್ಮಿಯನ್ನು ಹಲವಾರು ವಿಧಾನಗಳಲ್ಲಿ ಬಳಸಿಕೊಳ್ಳಬಹುದು. ಕೂದಲಿನ ಬೆಳವಣಿಗೆಗೆ ಬ್ರಾಹ್ಮಿ ತೈಲವನ್ನು ಬಳಸಿಕೊಳ್ಳಬಹುದು.

Brahmi

ಬಳಸುವುದು ಹೇಗೆ?

ಕೂದಲಿಗೆ ಬ್ರಾಹ್ಮಿ ಹುಡಿಯನ್ನು ಬಳಸುವುದರಿಂದ ಕೂದಲಿನ ಬೆಳವಣಿಗೆಗೆ ನೆರವಾಗುವುದು ಮಾತ್ರವಲ್ಲದೆ, ಇದು ಕೂದಲಿನ ಸಮಸ್ಯೆಗಳನ್ನು ಇವಾರಣೆ ಮಾಡುವುದು. ಇದು ಮೆದುಳಿನ ರಾಸಾಯನಿಕಗಳನ್ನು ಹೆಚ್ಚಿಸಿ, ಅದರಿಂದ ಮೆದುಳನ್ನು ಮತ್ತಷ್ಟು ಚುರುಕಾಗಿಸುವುದು. ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುವ ಬದಲು ನೀವು ಕೂದಲಿಗೆ ಬ್ರಾಹ್ಮಿ ಬಳಸುವುದು ಒಳ್ಳೆಯದು. ಬ್ರಾಹ್ಮಿಯು ಕೂದಲಿನ ಬೇರನ್ನು ಬಲಪಡಿಸಿಕೊಂಡು ಕೂದಲಿನ ಪ್ರಮಾಣವನ್ನು ಕೂಡ ಹೆಚ್ಚು ಮಾಡುವುದು. ಇದರಿಂದಾಗಿ ಕೂದಲು ಉತ್ತಮವಾಗಿ ಬೆಳೆಯುವುದು. ಬ್ರಾಹ್ಮಿ ಹುಡಿ ಬಳಸಿಕೊಂಡು ಕೂದಲಿಗೆ ಒಳ್ಳೆಯ ನೈಸರ್ಗಿಕ ಉತ್ಪನ್ನ ತಯಾರಿಸಿಕೊಳ್ಳಬಹುದು.

ಮಾರುಕಟ್ಟೆಯಲ್ಲಿ ಸಿಗುವಂತಹ ತಾಜಾ ಬ್ರಾಹ್ಮಿ ಎಲೆಗಳನ್ನು ತೆಗೆದುಕೊಳ್ಳಬಹುದು ಅಥವಾ ಅದರ ಹುಡಿ ಖರೀದಿಸಬಹುದು. ಎಲೆಗಳನ್ನು ತೆಗೆದುಕೊಂಡರೆ ಅದನ್ನು ಒಣಗಿಸಿಕೊಂಡು ಹುಡಿ ಮಾಡಿ. ತಾಜಾ ಎಲೆಯು ಹುಡಿಯು ಸ್ವಲ್ಪ ಹುಲ್ಲಿನ ವಾಸನೆ ನೀಡುವ ಕಾರಣದಿಂದ ಇದಕ್ಕೆ ಸಾರಭೂತ ತೈಲ ಬಳಸಿಕೊಳ್ಳಬಹುದು.

ನೆಲ್ಲಿಕಾಯಿ, ತುಳಸಿ ಅಥವಾ ಬೇವಿನ ಎಲೆ ಜತೆಗೆ ಬ್ರಾಹ್ಮಿ ಮಿಶ್ರಣ ಮಾಡಿಕೊಳ್ಳಬಹುದು. ಇಂತಹ ಗಿಡಮೂಲಿಕೆ ಮತ್ತು ಎಣ್ಣೆಯನ್ನು ಬ್ರಾಹ್ಮಿ ಹುಡಿಯಿಂದ ಕೂದಲಿಗೆ ತಯಾರಿಸುವ ಪೇಸ್ಟ್ ಗೆ ಮಾತ್ರ ಬಳಸಿಕೊಳ್ಳಬೇಕು. ಯಾಕೆಂದರೆ ಕೇವಲ ಬ್ರಾಹ್ಮಿ ಮಾತ್ರ ಕೂದಲಿಗೆ ಅಂಟಿಕೊಳ್ಳದು. ಎಣ್ಣೆ ಮತ್ತು ಇತರ ಕೆಲವೊಂದು ಗಿಡಮೂಲಿಕೆ ಬಳಕೆ ಮಾಡಿದರೆ ಅದರಿಂದ ಪೇಸ್ಟ್ ದಪ್ಪ ಆಗುವುದು. ಕೂದಲಿಗೆ ಈ ಪೇಸ್ಟ್ ಹಚ್ಚಿಕೊಳ್ಳಿ ಮತ್ತು 45-50 ನಿಮಿಷ ಕಾಲ ಹಾಗೆ ಬಿಡಿ. ಉಗುರುಬೆಚ್ಚಗಿನ ನೀರಿನಿಂದ ಕೂದಲು ತೊಳೆಯಿರಿ.

ಲಾಭಗಳು

ಬ್ರಾಹ್ಮಿಯು ಕೂದಲಿನ ಸಂಪೂರ್ಣ ಆರೋಗ್ಯವನ್ನು ಉತ್ತಮಪಡಿಸುವುದು. ಇದು ಕೂದಲನ್ನು ಉದ್ದ ಹಾಗೂ ದಪ್ಪ ಮಾಡುವುದು. ಬ್ರಾಹ್ಮಿ ಹುಡಿಯು ಕೂದಲಿನ ಬೆಳವಣಿಗೆಗೆ ನೆರವಾಗುವುದು ಮತ್ತು ನಿಯಮಿತವಾಗಿ ಬಳಸಿದರೆ ಕೆಲವೇ ವಾರಗಳಲ್ಲಿ ಕೂದಲ ತುಂಡಾಗುವುದನ್ನು ತಡೆಯವುಉದು. ಕೂದಲಿನ ಕಿರುಚೀಲಗಳನ್ನು ಇದು ರಕ್ಷಿಸುವ ಮೂಲಕ ಕೂದಲಿಗೆ ಆಗುವ ಹಾನಿ ತಡೆಯುವುದು. ಇದರಿಂದ ಕೂದಲು ಸೊಂಪಾಗಿ ಬೆಳೆಯಲು ನೆರವಾಗುವುದು. ತಾಜಾ ಬ್ರಾಹ್ಮಿ ಎಲೆಯ ಹುಡಿಯನ್ನು ಕೂದಲಿಗೆ ಬಳಸುವ ಕಾರಣದಿಂದ ಇದು ತಲೆಹೊಟ್ಟಿನ ಸಮಸ್ಯೆ ನಿವಾರಣೆ ಮಾಡುವುದು. ಚರ್ಮ ಒಣಗುವುದನ್ನು ತಡೆಯುವುದು ಮತ್ತು ತಲೆಯಲ್ಲಿನ ತುರಿಕೆ ಕಡಿಮೆ ಮಾಡುವುದು.

English summary

Brahmi Powder for Hair Growth

Brahmi, scientifically called Bacopa Monnieri and Bocopa Monniera, is a plant that has been used as a natural remedy for several problems in the ancient Indian medicine system Ayurveda. While brahmi has been proven to be very effective for improving memory; a large section of people use brahmi powder for hair growth. Other common uses also include remedy for irritable bowel syndrome (IBS), Alzheimer's disease, anxiety, attention deficit-hyperactivity disorder, allergic conditions.
X
Desktop Bottom Promotion