For Quick Alerts
ALLOW NOTIFICATIONS  
For Daily Alerts

ಬೆಣ್ಣೆ ಹಣ್ಣಿನಿಂದ ಕೂದಲಿಗೆ ಪ್ರಯೋಜನಗಳೇನು? ಇದನ್ನು ಬಳಸುವುದು ಹೇಗೆ?

|

ಕೂದಲು ಉದುರುವಿಕೆ, ತುಂಡಾಗುವುದು ಇತ್ಯಾದಿ ಸಮಸ್ಯೆಗಳು ಪ್ರತಿಯೊಬ್ಬರನ್ನು ಕಾಡುತ್ತದೆ. ಅದರಲ್ಲೂ ಕಲ್ಮಶವಾಗಿರುವ ನೀರು ಹಾಗೂ ವಾತಾವರಣದಿಂದಾಗಿ ಇಂತಹ ಸಮಸ್ಯೆಯು ಮತ್ತಷ್ಟು ಹೆಚ್ಚಾಗುವುದು. ಕಲುಷಿತವಾದ ವಾತಾವರಣದೊಂದಿಗೆ ದಿನನಿತ್ಯದ ಒತ್ತಡ, ಜೀವನಶೈಲಿ ಮತ್ತು ಆಹಾರ ಕ್ರಮದಿಂದಾಗಿ ಕೂದಲು ಉದುರುವಿಕೆ ಸಮಸ್ಯೆಯು ಬರುವುದು. ಇದಕ್ಕಾಗಿ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಉತ್ಪನ್ನಗಳು ಸಿಗುವುದು. ಇದರಲ್ಲಿ ಕೆಲವೊಂದು ನೈಸರ್ಗಿಕ ಇನ್ನು ಕೆಲವು ರಾಸಾಯನಿಕಗಳನ್ನು ಒಳಗೊಂಡಿರುವುದು. ಈ ಉತ್ಪನ್ನಗಳು ಕೆಲವು ಸಮಯ ಕೂದಲು ಉದುರುವಿಕೆ ಸಮಸ್ಯೆಗೆ ಪರಿಹಾರ ನೀಡಬಹುದು. ಶಾಶ್ವತ ಪರಿಹಾರ ಬೇಕಾದರೆ ಆಗ ನೈಸರ್ಗಿಕ ಉತ್ಪನ್ನಗಳನ್ನು ಬಳಸಿಕೊಳ್ಳಬೇಕು. ಈ ಲೇಖನದಲ್ಲಿ ತಲೆ ಉದುರುವಿಕೆ ಸಮಸ್ಯೆ ನಿವಾರಣೆ ಮಾಡಲು ಆವಕಾಡೊ ಅಥವಾ ಬೆಣ್ಣೆ ಹಣ್ಣು ಬಳಕೆ ಮಾಡುವುದು ಹೇಗೆ ಎಂದು ತಿಳಿಸಿಕೊಡಲಿದ್ದೇವೆ. ಅವಕಾಡೋದಿಂದ ಕೂದಲು ತುಂಬಾ ಬಲಿಷ್ಠ ಹಾಗೂ ಆರೋಗ್ಯಕರವಾಗುವುದು.

ಆವಕಾಡೊಕೂದಲಿಗೆ ಪುನರ್ಶ್ಚೇತನ ನೀಡುವುದು. ಅವಕಾಡೋದಲ್ಲಿ ಪ್ರಮುಖವಾಗಿ ವಿಟಮಿನ್ ಎ, ಬಿ6, ಸಿ ಮತ್ತು ಇ ಅಂಶವಿದೆ. ಇಷ್ಟು ಮಾತ್ರವಲ್ಲದೆ ಇದರಲ್ಲಿ ಖನಿಜಾಂಶಗಳಾಗಿರುವ ತಾಮ್ರ, ಪೊಟಾಶಿಯಂ ಮತ್ತು ಕಬ್ಬಿನಾಂಶವಿದೆ. ಇದೆಲ್ಲವೂ ಕೂದಲಿಗೆ ತುಂಬಾ ಲಾಭವನ್ನು ಉಂಟು ಮಾಡಲಿದೆ. ಅವಕಾಡೋದಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಫ್ರೀ ರ್ಯಾಡಿಕಲ್ ನಿಂದಾಗಿ ಉಂಟಾಗುವಂತಹ ಹಾನಿ ತಡೆಯುವುದು. ಅವಕಾಡೋದಲ್ಲಿ ಇರುವಂತಹ ಕೊಬ್ಬಿನಾಮ್ಲ ಅಮಿನೊ ಆಮ್ಲವು ಕೂದಲನ್ನು ಮೊಶ್ಚಿರೈಸ್ ಆಗಿ ಇಡುವುದು. ಅವಕಾಡೋದಿಂದ ನಮಗೆ ಸಿಗುವ ಲಾಭಗಳ ಬಗ್ಗೆ ತಿಳಿದುಕೊಂಡೆವು. ಇನ್ನು ಇದನ್ನು ಬಳಸಿಕೊಳ್ಳುವುದು ಹೇಗೆ ಎಂದು ನಾವು ತಿಳಿಯಬೇಕಾಗಿದೆ. ಕೂದಲಿಗೆ ಅವಕಾಡೋದ ಲಾಭ ಪಡೆಯಲು ನೀವು ಇದನ್ನು ವಿವಿಧ ರೀತಿಯಿಂದ ಬಳಸಿಕೊಳ್ಳಬಹುದು. ಇದು ಹೇಗೆ ಎಂದು ಈ ಲೇಖನದಲ್ಲಿ ನೀವು ತಿಳಿಯಿರಿ.

1. ಹಾನಿಗೀಡಾದ ಕೂದಲಿಗೆ ಪುನರ್ಶ್ಚೇತನ ನೀಡುವುದು

1. ಹಾನಿಗೀಡಾದ ಕೂದಲಿಗೆ ಪುನರ್ಶ್ಚೇತನ ನೀಡುವುದು

ಅವಕಾಡೋದಲ್ಲಿ ಅಮಿನೋ ಆಮ್ಲವು ಸಮೃದ್ಧವಾಗಿದೆ ಮತ್ತು ಪ್ರೋಟೀನ್ ಕೂಡ ಇದ್ದು, ಇದು ಆಳವಾಗಿ ತಲೆಬುರುಡೆಗೆ ಪೋಷಣೆ ನಿಡುವುದು. ಹಾನಿಗೀಡಾಗಿರುವಂತಹ ಕೂದಲನ್ನು ಪುನರ್ಶ್ಚೇತನಗೊಳಿಸಲು ಆವಕಾಡೊತೈಲವು ತುಂಬಾ ಪರಿಣಾಮಕಾರಿಯಾಗಿ ಇರುವುದು. ಇದೆರಡು ತುಂಬಾ ಆಳವಾಗಿ ಕೂದಲಿಗೆ ಪೋಷಣೆ ನೀಡುವುದು ಮತ್ತು ಅದರ ಕಾಂತಿ ಹೆಚ್ಚಿಸುವುದು.

ಬೇಕಾಗುವ ಸಾಮಗ್ರಿಗಳು

½ ಅವಕಾಡೋ

2 ಚಮಚ ಆವಕಾಡೊತೈಲ

ಬಳಸುವ ವಿಧಾನ

•ಅವಕಾಡೋವನ್ನು ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ.

•ಇದಕ್ಕೆ ಆವಕಾಡೊತೈಲ ಹಾಕಿ ಮತ್ತು ಸರಿಯಾಗಿ ಮಿಶ್ರಣ ಮಾಡಿ.

•ನಿಧಾನವಾಗಿ ಇದನ್ನು ತಲೆಬುರುಡೆಗೆ ಮಸಾಜ್ ಮಾಡಿ ಮತ್ತು ಸಂಪೂರ್ಣ ಕೂದಲಿಗೆ ಇದನ್ನು ಹಚ್ಚಿಕೊಳ್ಳಿ.

•15 ನಿಮಿಷ ಕಾಲ ನೀವು ಇದನ್ನು ಹಾಗೆ ಬಿಡಿ.

•ಬಳಿಕ ನಿತ್ಯದಂತೆ ಶಾಂಪೂ ಬಳಸಿಕೊಂಡು ಕೂದಲು ತೊಳೆಯಿರಿ.

2. ಗಂಟ್ಟಿಕ್ಕಿಕೊಂಡಿರುವ ಕೂದಲಿನ ನಿವಾರಣೆಗೆ

2. ಗಂಟ್ಟಿಕ್ಕಿಕೊಂಡಿರುವ ಕೂದಲಿನ ನಿವಾರಣೆಗೆ

ತೆಂಗಿನೆಣ್ಣೆಯಲ್ಲಿ ವಿಟಮಿನ್ ಗಳು ಮತ್ತು ಅಮಿನೋ ಆಮ್ಲವಿದ್ದು, ಇದು ಕೂದಲಿಗೆ ತುಂಬಾ ಲಾಭಕಾರಿ. ಇದು ಕೂದಲಿನ ಆಳಕ್ಕೆ ಇಳಿದು, ಆಳವಾದ ಫೋಷಣೆ ನೀಡುವುದು. ಇದು ಕೂದಲಿಗೆ ಪೋಷಣೆ ನೀಡುವುದು ಮತ್ತು ಆರೋಗ್ಯಕರ ತಲೆಬುರುಡೆಗೆ ಇದು ನೆರವಾಗುವುದು. ಆವಕಾಡೊಜತೆಗೆ ಇದನ್ನು ಸೇರಿಸಿದರೆ ಆಗ ಅದರಿಂದ ಕೂದಲಿನ ಮೊಶ್ಚಿರೈಸ್ ಉಳಿಯುವುದು ಮತ್ತು ಹಾನಿಗೀಡಾಗಿರುವ ಹಾಗೂ ಗಂಟಿಕ್ಕಿಕೊಂಡಿರುವ ಕೂದಲಿಗೆ ಪರಿಹಾರ ಸಿಗುವುದು.

ಬೇಕಾಗುವ ಸಾಮಗ್ರಿಗಳು

1 ಹಣ್ಣಾದ ಅವಕಾಡೋ

2 ಚಮಚ ತೆಂಗಿನೆಣ್ಣೆ

ತಯಾರಿಸುವ ವಿಧಾನ

•ಒಂದು ಪಿಂಗಾಣಿಯಲ್ಲಿ ಅವಕಾಡೋವನ್ನು ಹಿಚುಕಿಕೊಂಡು ಮೆತ್ತಗಿನ ಪೇಸ್ಟ್ ಮಾಡಿ.

•ಇದಕ್ಕೆ ತೆಂಗಿನೆಣ್ಣೆ ಹಾಕಿ ಮತ್ತು ಸರಿಯಾಗಿ ಮಿಶ್ರಣ ಮಾಡಿ.

•ಈ ಮಿಶ್ರಣವನ್ನು ಕೂದಲು ಮತ್ತು ತಲೆಬುರುಡೆಗೆ ಹಚ್ಚಿಕೊಳ್ಳಿ. ಕೂದಲಿನ ತುದಿಗೆ ಹಚ್ಚಿಕೊಳ್ಳಲು ಗಮನಹರಿಸಿ.

•ಶಾವರ್ ಕ್ಯಾಪ್ ಬಳಸಿಕೊಂಡು ಕೂದಲನ್ನು ಮುಚ್ಚಿಕೊಳ್ಳಿ.

•30 ನಿಮಿಷ ಕಾಲ ಇದು ಹಾಗೆ ಇರಲಿ.

•ತಣ್ಣಗಿನ ನೀರು ಬಳಸಿ ಕೂದಲಿಗೆ ಶಾಂಪೂ ಹಾಕಿ.

•ಇದರ ಬಳಿಕ ಕಂಡೀಷನರ್ ಬಳಸಿ.

•ಕೂದಲು ಒಣಗಲು ಬಿಡಿ.

Most Read: ಬ್ಯೂಟಿ ಟಿಪ್ಸ್: ಬೆಣ್ಣೆ ಹಣ್ಣಿನಲ್ಲಿದೆ-ಬೆಣ್ಣೆಯಂತಹ ಸೌಂದರ್ಯ!

3.ಕೂದಲಿಗೆ ಕಂಡೀಷನ್ ನೀಡಿ

3.ಕೂದಲಿಗೆ ಕಂಡೀಷನ್ ನೀಡಿ

ಅಲೋವೆರಾದಲ್ಲಿ ವಿವಿಧ ರೀತಿಯ ವಿಟಮಿನ್ ಗಳು, ಖನಿಜಾಂಶಗಳು ಮತ್ತು ಕಿಣ್ವಗಳು ಇವೆ. ಇವುಗಳು ಚರ್ಮದ ಸತ್ತಕೋಶ ತೆಗೆಯುವುದು ಮತ್ತು ಆರೋಗ್ಯಕರ ತಲೆಬುರುಡೆಗೆ ನೆರವಾಗುವುದು. ನಿಂಬೆಯು ಒಂದು ಸಿಟ್ರಸ್ ಹಣ್ಣಾಗಿದ್ದು, ಅದರಲ್ಲಿ ವಿಟಮಿನ್ ಸಿ ಅಧಿಕವಾಗಿದೆ. ಇದರಿಂದ ಕಾಲಜನ್ ಉತ್ಪತ್ತಿಯು ಹೆಚ್ಚಾಗುವುದು ಮತ್ತು ಕೂದಲು ಆರೋಗ್ಯಕಾರಿಯಾಗಿ ಬೆಳೆಯಲು ನೆರವಾಗುವುದು. ಲಿಂಬೆಯಲ್ಲಿ ಇರುವ ಆಮ್ಲೀಯ ಗುಣದಿಂದಾಗಿ ಅದು ತಲೆಬುರುಡೆಯನ್ನು ಸ್ವಚ್ಛಗೊಳಿಸುವುದು. ಅವಕಾಡೋದೊಂದಿಗೆ ತೆಂಗಿನೆಣ್ಣೆ(ಆಳವಾಗಿ ಕೂದಲಿಗೆ ಪೋಷಣೆ ನೀಡುವುದು) ಮತ್ತು ಜೇಣುತುಪ್ಪ(ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣ) ಕೂದಲಿಗೆ ಕಂಡೀಷನ್ ನೀಡಿ ಬಲಿಷ್ಠವಾಗಿಸುವುದು.

ಬೇಕಾಗುವ ಸಾಮಗ್ರಿಗಳು

1 ಹಣ್ಣಾದ ಅವಕಾಡೋ

2 ಚಮಚ ಅಲೋವೆರಾ

2 ಚಮಚ ಜೇನುತುಪ್ಪ

11/2 ಚಮಚ ಲಿಂಬೆರಸ

2 ಚಮಚ ತೆಂಗಿನೆಣ್ಣೆ

ತಯಾರಿಸುವ ವಿಧಾನ

•ಎಲ್ಲವನ್ನು ಜತೆಯಾಗಿ ಹಾಕಿಕೊಂಡು ರುಬ್ಬಿಕೊಳ್ಳಿ.

•ಈ ಮಿಶ್ರಣವನ್ನು ಕೂದಲು ಮತ್ತು ತಲೆಬುರುಡೆಗೆ ಹಚ್ಚಿ.

•ಶಾವರ್ ಕ್ಯಾಪ್ ನಿಂದ ತಲೆ ಮುಚ್ಚಿಕೊಳ್ಳಿ.

•15-20ನಿಮಿಷ ಕಾಲ ಹಾಗೆ ಬಿಡಿ.

•ತಣ್ಣೀರು ಬಳಸಿಕೊಂಡು ಶಾಂಪೂ ಹಾಕಿ.

•ಅಂತಿಮವಾಗಿ ಕಂಡೀಷನರ್ ಬಳಸಿಕೊಳ್ಳಿ.

•ಕೂದಲು ಒಣಗಲು ಬಿಡಿ.

4.ಕೂದಲಿಗೆ ಕಾಂತಿ ನೀಡುವುದು

4.ಕೂದಲಿಗೆ ಕಾಂತಿ ನೀಡುವುದು

ಅವಕಾಡೋದಲ್ಲಿ ಇರುವಂತಹ ವಿಟಮಿನ್ ಗಳು ಮತ್ತು ಕೊಬ್ಬಿನಾಮ್ಲವು ಕೂದಲಿನ ಕಾಂತಿಯನ್ನು ಹಿಡಿದಿಡುವುದು. ಆಲಿವ್ ತೈಲದಲ್ಲಿ ಉರಿಯೂತ ಶಮನಕಾರಿ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳು ಇವೆ. ಇದು ತಲೆಬುರುಡೆಗೆ ಶಮನ ನೀಡುವುದು ಮತ್ತು ತಲೆಬುರುಡೆಗೆ ಆಗುವ ಹಾನಿ ತಡೆಯುವುದು. ಲಿಂಬೆಯಲ್ಲಿ ಇರುವಂತಹ ವಿಟಮಿನ್ ಗಳು ಕೂದಲಿಗೆ ಲಾಭವನ್ನು ಉಂಟು ಮಾಡಲಿದೆ.

ಬೇಕಾಗುವ ಸಾಮಗ್ರಿಗಳು

1 ಹಣ್ಣಾದ ಅವಕಾಡೋ

¼ ಕಪ್ ಆಲಿವ್ ತೈಲ

1 ಚಮಚ ಲಿಂಬೆರಸ

ತಯಾರಿಸುವ ವಿಧಾನ

•ಪಿಂಗಾಣಿಯಲ್ಲಿ ಆವಕಾಡೊಜಜ್ಜಿಕೊಂಡು ಪೇಸ್ಟ್ ಮಾಡಿ.

•ಇದಕ್ಕೆ ಆಲಿವ್ ತೈಲ ಮತ್ತು ಲಿಂಬೆರಸ ಬೆರೆಸಿಕೊಂಡು ಮಿಶ್ರಣ ಮಾಡಿ.

•ಈ ಪೇಸ್ಟ್ ನ್ನು ಕೂದಲಿಗೆ ಸರಿಯಾಗಿ ಹಚ್ಚಿಕೊಳ್ಳಿ.

•20 ನಿಮಿಷ ಕಾಲ ಕೂದಲನ್ನು ಹಾಗೆ ಬಿಟ್ಟುಬಿಡಿ.

•ಸಾಮಾನ್ಯದಂತೆ ನೀವು ಕೂದಲಿಗೆ ಶಾಂಪೂ ಹಾಕಿಕೊಳ್ಳಿ.

5.ಕೂದಲಿನ ಬೆಳವಣಿಗೆಗೆ ನೆರವಾಗುವುದು

5.ಕೂದಲಿನ ಬೆಳವಣಿಗೆಗೆ ನೆರವಾಗುವುದು

ಕೂದಲಿನ ಬೆಳವಣಿಗೆಗೆ ಆವಕಾಡೊತೈಲವು ತುಂಬಾ ಶ್ರೇಷ್ಠವಾಗಿರುವುದು. ಇದರಲ್ಲಿ ವಿಟಮಿನ್ ಬಿ ಮತ್ತು ಇ ಇದ್ದು, ಕೂದಲನ್ನು ಇದು ಬಲಿಷ್ಠವಾಗಿಸುವುದು ಮತ್ತು ಕೂದಲು ಉದುರದಂತೆ ತಡೆಯುವುದು. ಕೂದಲಿನ ಕಿರುಚೀಲಗಳಿಗೆ ಇದು ಉತ್ತೇಜನ ನೀಡುವುದು ಮತ್ತು ಆರೋಗ್ಯಕಾರಿಯಾಗಿ ಕೂದಲು ಬೆಳೆಯಲು ನೆರವಾಗುವುದು.

ಬೇಕಾಗುವ ಸಾಮಗ್ರಿಗಳು

ಆವಕಾಡೊತೈಲ

ಬಳಸುವ ವಿಧಾನ

•ಸ್ವಲ್ಪ ಆವಕಾಡೊತೈಲವನ್ನು ಅಂಗೈಗೆ ಹಾಕಿಕೊಂಡು ಬೆರಳನ್ನು ಅದ್ದಿಕೊಳ್ಳಿ.

•ಈಗ ಕೈಬೆರಳಿನಿಂದ ತಲೆಬುರುಡೆಗೆ ಸರಿಯಾಗಿ ಮಸಾಜ್ ಮಾಡಿ.

•1 ಗಂಟೆ ಕಾಲ ಹಾಗೆ ಬಿಡಿ.

•ಬಳಿಕ ನೀವು ಕೂದಲು ತೊಳೆಯಿರಿ.

Most Read: ಬೆಣ್ಣೆ ಹಣ್ಣಿನಲ್ಲಿದೆ-ಬೆಣ್ಣೆಯಂತಹ ಸೌಂದರ್ಯ! ಪ್ರಯತ್ನಿಸಿ ನೋಡಿ...

6. ಕೂದಲಿಗೆ ಇದು ಮೊಶ್ಚಿರೈಸ್ ನೀಡುವುದು

6. ಕೂದಲಿಗೆ ಇದು ಮೊಶ್ಚಿರೈಸ್ ನೀಡುವುದು

ಆವಕಾಡೊತಲೆಬುರುಡೆಯ ಆಳಕ್ಕೆ ತೆರಳುವುದು ಮತ್ತು ಮೊಶ್ಚಿರೈಸ್ ಮಾಡುವುದು. ಮೊಟ್ಟೆಯ ಲೋಳೆಯಲ್ಲಿ ವಿಟಮಿನ್ ಗಳು, ಖನಿಜಾಂಶಗಳು ಮತ್ತು ಪ್ರೋಟೀನ್ ಒಳಗೊಂಡಿದೆ. ಇದು ಕೂದಲಿಗೆ ತುಂಬಾ ಪರಿಣಾಮಕಾರಿಯಾಗಿದೆ. ಒಣ ಕೂದಲಿಗೆ ಇದರಿಂದ ಮೊಶ್ಚಿರೈಸ್ ಸಿಗುವುದು.

ಬೇಕಾಗುವ ಸಾಮಗ್ರಿಗಳು

1 ಹಣ್ಣಾದ ಅವಕಾಡೋ

1 ಮೊಟ್ಟೆಯ ಲೋಳೆ

1 ಚಮಚ ತೆಂಗಿನೆಣ್ಣೆ

ಬಳಸುವ ವಿಧಾನ

•ಒಂದು ಪಿಂಗಾಣಿಯಲ್ಲಿ ಆವಕಾಡೊಹಾಕಿಕೊಂಡು ಹಿಚುಕಿಕೊಳ್ಳಿ.

•ಇದಕ್ಕೆ ಮೊಟ್ಟೆಯ ಲೋಳೆ ಮತ್ತು ತೆಂಗಿನೆಣ್ಣೆ ಸೇರಿಸಿಕೊಂಡು ಮಿಶ್ರಣ ಮಾಡಿ.

•ಈ ಮಿಶ್ರಣವನ್ನು ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿಕೊಳ್ಳಿ.

•15-20 ನಿಮಿಷ ಕಾಲ ಹಾಗೆ ಬಿಡಿ.

•ಶಾಂಪೂ ಮತ್ತು ಕಂಡೀಷನರ್ ಹಾಕಿ ತೊಳೆಯಿರಿ.

7. ತಲೆಹೊಟ್ಟು ನಿವಾರಣೆ ಮಾಡುವುದು

7. ತಲೆಹೊಟ್ಟು ನಿವಾರಣೆ ಮಾಡುವುದು

ಆವಕಾಡೊಬೀಜದಲ್ಲಿ ಆ್ಯಂಟಿಆಕ್ಸಿಡೆಂಟ್ ಗುಣಗಳು ಇವೆ. ಆ್ಯಂಟಿಆಕ್ಸಿಡೆಂಟ್ ತಲೆಬುರುಡೆಯನ್ನು ಫ್ರೀ ರ್ಯಾಡಿಕಲ್ ನಿಂದ ತಡೆಯುವುದು. ಇದರಿಂದ ತಲೆಬುರುಡೆಯು ಆರೋಗ್ಯವಾಗಿರುವುದು ಮತ್ತು ತಲೆಹೊಟ್ಟಿನಿಂದ ರಕ್ಷಣೆ ನೀಡುವುದು. ಜೇನುತುಪ್ಪದಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಬ್ಯಾಕ್ಟೀರೀಯಾವನ್ನು ದೂರುವಿಡುವುದು ಮತ್ತು ತಲೆಹೊಟ್ಟು ನಿವಾರಣೆಗೆ ನೆರವಾಗುವುದು.

ಬೇಕಾಗುವ ಸಾಮಗ್ರಿಗಳು

2 ಚಮಚ ಆವಕಾಡೊಬೀಜದ ಹುಡಿ

ಒಂದು ಚಮಚ ಜೇನುತುಪ್ಪ

ಬಳಸುವ ವಿಧಾನ

•ಆವಕಾಡೊಹಣ್ಣಿನ ಬೀಜದ ಸಿಪ್ಪೆ ತೆಗೆಯಿರಿ ಮತ್ತು ಅದನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ.

•ಇದನ್ನು ರುಬ್ಬಿಕೊಂಡು ಹುಡಿ ಮಾಡಿಕೊಳ್ಳಿ.

•ಇದರಲ್ಲಿ ಎರಡು ಚಮಚ ಹುಡಿ ತೆಗೆದುಕೊಳ್ಳಿ ಮತ್ತು ಅದಕ್ಕೆ ಜೇನುತುಪ್ಪ ಬೆರೆಸಿ.

•ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

•ನಿಧಾನವಾಗಿ ಕೆಲವು ನಿಮಿಷ ಕಾಲ ಈ ಪೇಸ್ಟ್ ನಿಂದ ತಲೆಬುರುಡೆಗೆ ಮಸಾಜ್ ಮಾಡಿಕೊಳ್ಳಿ.

•ಬಿಸಿ ನೀರು ಬಳಸಿಕೊಂಡು ಕೂದಲು ತೊಳೆಯಿರಿ.

8. ಕೂದಲನ್ನು ನಯ ಹಾಗೂ ಸುಂದರವಾಗಿಸುವುದು

8. ಕೂದಲನ್ನು ನಯ ಹಾಗೂ ಸುಂದರವಾಗಿಸುವುದು

ಮಯೋನಿಸ್ ನಲ್ಲಿ ಮೊಟ್ಟೆ, ವಿನೇಗರ್ ಮತ್ತು ತೈಲದ ಲಾಭಗಳು ಸಿಗುವುದು ಮತ್ತು ಇದನ್ನು ಆವಕಾಡೊಜತೆಗೆ ಬೆರೆಸಿಕೊಂಡಾಗ ಅದು ಕೂದಲಿಗೆ ಪೋಷಣೆ ನೀಡುವುದು ಮತ್ತು ಕೂದಲನ್ನು ನಯ ಹಾಗೂ ಸುಂದರವಾಗಿಸುವುದು.

ಬೇಕಾಗುವ ಸಾಮಗ್ರಿಗಳು

½ ಹಣ್ಣಾದ ಅವಕಾಡೋ

1 ಕಪ್ ಮಯೋನಿಸ್

ತಯಾರಿಸುವ ವಿಧಾನ

•ಒಂದು ಪಿಂಗಾಣಿಗೆ ಆವಕಾಡೊಹಾಕಿ ಹಿಚುಕಿಕೊಳ್ಳಿ.

•ಇದಕ್ಕೆ ಈಗ ಮಯೋನಿಸ್ ಹಾಕಿ ಮಿಶ್ರಣ ಮಾಡಿ.

•ಈ ಪೇಸ್ಟ್ ನ್ನು ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿಕೊಳ್ಳಿ. ಕೂದಲಿನ ಬುಡದಿಂದ ತುದಿ ತನಕ ಹಚ್ಚಿಕೊಳ್ಳಿ.

•20 ನಿಮಿಷ ಕಾಲ ಹಾಗೆ ಬಿಡಿ.

•ತಣ್ಣೀರು ಬಳಸಿಕೊಂಡು ಶಾಂಪೂ ಅಥವಾ ಕಂಡೀಷನರ್ ಬಳಸಿ ತೊಳೆಯಿರಿ.

•ಕೂದಲು ಒಣಗಲು ಬಿಡಿ.

9. ಕೂದಲನ್ನು ಸರಿಪಡಿಸುವುದು

9. ಕೂದಲನ್ನು ಸರಿಪಡಿಸುವುದು

ಮೊಸರಿನಲ್ಲಿ ಇರುವಂತಹ ಲ್ಯಾಕ್ಟಿಕ್ ಆಮ್ಲವು ತಲೆಬುರುಡೆಯನ್ನು ಶುದ್ಧೀಕರಿಸುವುದು ಮತ್ತು ಅದಕ್ಕೆ ಮೊಶ್ಚಿರೈಸ್ ನೀಡುವುದು. ಆವಕಾಡೊಜತೆಗೆ ಜೇನುತುಪ್ಪ ಮತ್ತು ಆಲಿವ್ ತೈಲ ಹಾಕಿಕೊಂಡರೆ ಆಗ ಮೊಶ್ಚಿರೈಸ್ ಹಾಗೆ ಹಿಡಿದಿಟ್ಟುಕೊಳ್ಳುವುದು ಮತ್ತು ತಲೆಬುರುಡೆ ಮತ್ತು ಕೂದಲಿಗೆ ಪೋಷಣೆ ನೀಡುವುದು. ಇದರಿಂದ ಹಾನಿಗೀಡಾಗಿರುವ ಕೂದಲನ್ನು ಅದು ಸರಿಪಡಿಸುವುದು.

ಬೇಕಾಗುವ ಸಾಮಗ್ರಿಗಳು

½ ಅವಕಾಡೋ

1 ಕಪ್ ಮೊಸರು

2 ಚಮಚ ಆಲಿವ್ ತೈಲ

1 ಚಮಚ ಜೇನುತುಪ್ಪ

ಬಳಸುವ ವಿಧಾನ

•ಒಂದು ಪಿಂಗಾಣಿಯಲ್ಲಿ ಅವಕಾಡೋವನ್ನು ಹಿಚುಕಿಕೊಳ್ಳಿ ಮತ್ತು ನಯವಾದ ಪೇಸ್ಟ್ ಮಾಡಿ.

•ಇದಕ್ಕೆ ಮೊಸರು, ಆಲಿವ್ ತೈಲ ಮತ್ತು ಜೇನುತುಪ್ಪ ಹಾಕಿ ಮಿಶ್ರಣ ಮಾಡಿ.

•ಈ ಮಿಶ್ರಣವನ್ನು ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿಕೊಳ್ಳಿ.

•ಇದರ ಬಳಿಕ ತಲೆಗೆ ಶಾವರ್ ಕ್ಯಾಪ್ ಹಾಕಿಕೊಳ್ಳಿ.

•20 ನಿಮಿಷ ಕಾಲ ಹಾಗೆ ಬಿಡಿ.

•ಶಾಂಪೂ ಮತ್ತು ಕಂಡೀಷನರ್ ಹಾಕಿ ಕೂದಲನ್ನು ತಣ್ಣೀರಿನಿಂದ ತೊಳೆಯಿರಿ.

10. ಒಣ ಕೂದಲಿನ ಚಿಕಿತ್ಸೆಗೆ

10. ಒಣ ಕೂದಲಿನ ಚಿಕಿತ್ಸೆಗೆ

ಅವಕಾಡೋ, ಜೇನುತುಪ್ಪ ಮತ್ತು ಆಲಿವ್ ತೈಲವು ತಲೆಬುರುಡೆಗೆ ಮೊಶ್ಚಿರೈಸ್ ನೀಡುವುದು ಮತ್ತು ಒಣ ಹಾಗೂ ಹಾನಿಗೀಡಾಗಿರುವ ಕೂದಲಿಗೆ ಚಿಕಿತ್ಸೆ ನೀಡಲು ಪರಿಣಾಮಕಾರಿಯಾಗಿ ಇರುವುದು. ಲ್ಯಾವೆಂಡರ್ ಸಾರಭೂತ ತೈಲವು ಆ್ಯಂಟಿಬ್ಯಾಕ್ಟೀರಿಯಾ ಗುಣವನ್ನು ಹೊಂದಿದೆ. ಇದು ತಲೆಬುರುಡೆಯಿಂದ ಬ್ಯಾಕ್ಟೀರಿಯಾವನ್ನು ದೂರವಿಡುವುದು ಮತ್ತು ಆರೋಗ್ಯಕರ ತಲೆಬುರುಡೆಗೆ ನೆರವಾಗುವುದು.

ಬೇಕಾಗುವ ಸಾಮಗ್ರಿಗಳು

ಒಂದು ಹಣ್ಣಾದ ಅವಕಾಡೋ

2 ಚಮಚ ಜೇನುತುಪ್ಪ

2 ಚಮಚ ಆಲಿವ್ ತೈಲ

2-3 ಹನಿ ಲ್ಯಾವೆಂಡರ್ ಸಾರಭೂತ ತೈಲ

ತಯಾರಿಸುವ ವಿಧಾನ

•ಎಲ್ಲಾ ಸಾಮಗ್ರಿಯನ್ನು ಜತೆಯಾಗಿ ರುಬ್ಬಿಕೊಂಡು ಪೇಸ್ಟ್ ಮಾಡಿ.

•ಈ ಪೇಸ್ಟ್ ನ್ನು ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿಕೊಳ್ಳಿ.

•ತಲೆಯನ್ನು ಶಾವರ್ ಕ್ಯಾಪ್ ನಿಂದ ಮುಚ್ಚಿಕೊಳ್ಳಿ.

•ಡ್ರೈಯರ್ ಬಳಸಿಕೊಂಡು ಸುಮಾರು 15 ನಿಮಿಷ ಕಾಲ ತಲೆಗೆ ಬಿಸಿ ನೀಡಿ.

•ಅಥವಾ ನೀವು ಬಿಸಿಲಿನಲ್ಲಿ 30-45 ನಿಮಿಷ ಕುಳಿತುಕೊಳ್ಳಿ.

•ತಣ್ಣೀರು ಬಳಸಿಕೊಂಡು ಶಾಂಪೂ ಹಾಕಿಕೊಳ್ಳಿ.

•ಬಳಿಕ ಕಂಡೀಷನರ್ ಬಳಸಿ.

•ಕೂದಲು ಒಣಗಲು ಬಿಡಿ.

English summary

Avocado: Benefits For Hair & How To Use

Natural way is the best way to counter all the damage caused to our hair. Avocado is a natural ingredient that will benefit your hair like no other. It is loaded with nutrients that nourish the hair. It can be used with natural ingredients like honey, olive oil, lemon etc. to deal with various hair issues like hair fall, dry and damaged hair.
X
Desktop Bottom Promotion