For Quick Alerts
ALLOW NOTIFICATIONS  
For Daily Alerts

ಕಾಂತಿಯುತ ಕೂದಲಿಗೆ ಮನೆಯಲ್ಲೇ ತಯಾರಿಸುವ ಹೇರ್‌ಮಾಸ್ಕ್‌ಗಳು

|

ಕೂದಲು ತುಂಬಾ ಉದ್ದ, ದಪ್ಪ ಹಾಗೂ ರೇಷ್ಮೆಯಂತೆ ಹೊಳೆಯುತ್ತಿರಬೇಕು, ಅದನ್ನು ಎಲ್ಲರೂ ದಿಟ್ಟ ಕಣ್ಣಿನಿಂದ ನೋಡುತ್ತಿರಬೇಕು ಎನ್ನುವುದು ಪ್ರತಿಯೊಬ್ಬ ಮಹಿಳೆಯ ಕನಸಾಗಿರುವುದು. ಆದರೆ ಈಗ ಮನೆಯಿಂದ ಹೊರಗೆ ಕಾಲಿಟ್ಟರೆ ಧೂಳು, ಕಲುಷಿತ ವಾತಾವರಣ ಮತ್ತು ಬಿಸಿಲಿನಿಂದಾಗಿ ಕೂದಲು ಕಾಂತಿ ಕಳೆದುಕೊಂಡು ನಿಸ್ತೇಜವಾಗಿ ಬಿಡುವುದು. ಇಷ್ಟು ಮಾತ್ರವಲ್ಲದೆ ಸ್ನಾನಕ್ಕೆ ಬಳಸುವ ನೀರು ಕೂಡ ಕಲುಷಿತವಾಗಿರುವ ಕಾರಣದಿಂದಾಗಿ ಕೂದಲು ತುಂಡಾಗುವುದು ಹಾಗೂ ಉದುರುವುದು ಕಂಡುಬರುವುದು. ಕೂದಲು ಬೆಣ್ಣೆಯಂತೆ ನಯ, ಕಾಂತಿ ಮತ್ತು ಪೋಷಣೆಯಿಂದ ತುಂಬಿದ್ದರೆ ಆಗ ಮಹಿಳೆಯರ ಆತ್ಮವಿಶ್ವಾಸವು ಹೆಚ್ಚಾಗುವುದು.

ಕಾಂತಿ ಕಳೆದುಕೊಳ್ಳಲು ಹಲವಾರು ರೀತಿಯ ಕಾರಣಗಳು ಇದೆ. ಮುಖ್ಯವಾಗಿ ನಮ್ಮ ಜೀವನಶೈಲಿ ಕೂಡ ಇದಕ್ಕೆ ಕಾರಣವಾಗಿದೆ. ಹೀಗಾಗಿ ಕೂದಲು ಉದುರುವಿಕೆ ಮತ್ತು ತುಂಡಾಗುವುದನ್ನು ತಡೆಗಟ್ಟಿ ಸುಂದರ ಹಾಗೂ ಕಾಂತಿಯುತ ಕೂದಲು ಪಡೆಯಲು ಕೆಲವು ಮನೆಯಲ್ಲೇ ತಯಾರಿಸುವಂತಹ ಹೇರ್ ಮಾಸ್ಕ್ ಗಳು ಇವೆ. ಇದನ್ನು ಬಳಸಿಕೊಂಡು ಕೂದಲಿನ ಸಮಸ್ಯೆ ನಿವಾರಣೆ ಮಾಡಬಹುದು. ಮನೆಯಲ್ಲೇ ಹೇರ್ ಮಾಸ್ಕ್ ನ್ನು ತಯಾರಿಸಿಕೊಳ್ಳುವುದು ಹೇಗೆ? ಮುಂದೆ ಓದಿ

ಆಲಿವ್ ತೈಲ ಮತ್ತು ಮಯೋನಿಸ್ ಹೇರ್ ಮಾಸ್ಕ್

ಆಲಿವ್ ತೈಲ ಮತ್ತು ಮಯೋನಿಸ್ ಹೇರ್ ಮಾಸ್ಕ್

ಆಲಿವ್ ತೈಲವು ತಲೆಹೊಟ್ಟು, ಶಿಲೀಂಧ್ರ ಮತ್ತು ತಲೆಬುರುಡೆಯ ಇತರ ಸಮಸ್ಯೆಗಳನ್ನು ನಿವಾರಣೆ ಮಾಡುವುದು. ಒಣ ಹಾಗೂ ಚರ್ಮ ಎದ್ದುಬರುವಂತಹ ಸಮಸ್ಯೆ ಕೂಡ ನಿವಾರಿಸುವುದು. ಇದರೊಂದಿಗೆ ಕೂದಲಿಗೆ ಕಾಂತಿ ಕೂಡ ನೀಡುವುದು.

ಬೇಕಾಗುವ ಸಾಮಗ್ರಿಗಳು

*2 ಚಮಚ ಆಲಿವ್ ತೈಲ

*2 ಚಮಚ ಮಯೋನಿಸ್

ವಿಧಾನ

•ಆಲಿವ್ ತೈಲ ಮತ್ತು ಮಯೋನಿಸ್ ನ್ನು ಒಂದು ಪಿಂಗಾಣಿಯಲ್ಲಿ ಮಿಶ್ರಣ ಮಾಡಿಕೊಳ್ಳಿ. ಇದರಲ್ಲಿ ಒಂದು ಹತ್ತಿ ಉಂಡೆ ಅದ್ದಿಕೊಂಡು ತಲೆಬುರುಡೆ ಮತ್ತು ಕೂದಲಿಗೆ ಇದನ್ನು ಸರಿಯಾಗಿ ಹಚ್ಚಿಕೊಳ್ಳಿ.

•ಕೆಲವು ನಿಮಿಷ ಕಾಲ ಹಾಗೆ ಮಸಾಜ್ ಮಾಡಿ ಮತ್ತು ರಾತ್ರಿಯಿಡಿ ಹಾಗೆ ಬಿಡಿ. ಬೇಕಿದ್ದರೆ ನೀವು ಶಾವರ್ ಕ್ಯಾಪ್ ಧರಿಸಬಹುದು. •ಬೆಳಗ್ಗೆ ಎದ್ದ ಬಳಿಕ ಕೂದಲನ್ನು ತೊಳೆಯಿರಿ ಮತ್ತು ಶಾಂಪೂ ಅಥವಾ ಕಂಡೀಷನರ್ ಹಾಕಿ ತೊಳೆಯಿರಿ.

•ಉತ್ತಮ ಫಲಿತಾಂಶ ಪಡೆಯಲು ವಾರದಲ್ಲಿ ಒಂದು ಸಲ ಇದನ್ನು ಬಳಸಿ.

 ಅಲೋವರಾ ಹೇರ್ ಮಾಸ್ಕ್

ಅಲೋವರಾ ಹೇರ್ ಮಾಸ್ಕ್

ಅಲೋವೆರಾದಲ್ಲಿ ಪ್ರೋಟಿಲಿಟಿಕ್ ಕಿಣ್ವಗಳು ಇದ್ದು, ತಲೆಬುರುಡೆಯಲ್ಲಿ ಸತ್ತಿರುವ ಚರ್ಮದ ಕೋಶಗಳನ್ನು ಇದು ಸರಿಪಡಿಸುವುದು.ಇದು ಅತ್ಯುತ್ತಮ ಕಂಡೀಷನರ್ ಆಗಿ ಕೂಡ ಕೆಲಸ ಮಾಡುವುದರಿಂದ ಕೂದಲು ತುಂಬಾ ನಯ ಹಾಗೂ ಕಾಂತಿಯುತವಾಗುವುದು.

ಬೇಕಾಗುವ ಸಾಮಗ್ರಿಗಳು

2 ಚಮಚ ಅಲೋವೆರಾ

ಬಳಸುವ ವಿಧಾನ

•ತಾಜಾ ಅಲೋವೆರಾ ಎಲೆಯಿಂದ ಅದರ ಲೋಳೆ ತೆಗೆಯಿರಿ ಮತ್ತು ಇದನ್ನು ಒಂದು ಪಿಂಗಾಣಿಗೆ ಹಾಕಿಡಿ.

•ಬೇಕಾದಷ್ಟು ಲೋಳೆ ಪಡೆದುಕೊಂಡು ಅದನ್ನು ತಲೆಬುರುಡೆ ಹಾಗೂ ಕೂದಲಿಗೆ ಸರಿಯಾಗಿ ಮಸಾಜ್ ಮಾಡಿಕೊಳ್ಳಿ.

•ರಾತ್ರಿ ಮಲಗುವ ಮೊದಲು ಹೀಗೆ ಮಾಡಿ ಮತ್ತು ಶಾವರ್ ಕ್ಯಾಪ್ ಧರಿಸಿ ಮಲಗಿ.

•ಬೆಳಗ್ಗೆ ಎದ್ದ ಬಳಿಕ ಕೂದಲು ತೊಳೆಯಿರಿ.

•ಉತ್ತಮ ಫಲಿತಾಂಶ ಬೇಕಿದ್ದರೆ ಆಗ 15 ದಿನಗಳಲ್ಲಿ ಒಂದು ಸಲ ನೀವು ಈ ಹೇರ್ ಮಾಸ್ಕ್ ಬಳಸಿಕೊಳ್ಳಿ.

ಮೊಟ್ಟೆ ಮತ್ತು ತೆಂಗಿನ ಎಣ್ಣೆ ಹೇರ್ ಮಾಸ್ಕ್

ತೆಂಗಿನ ಎಣ್ಣೆಯಲ್ಲಿ ಲಾರಿಕ್ ಆಮ್ಲವಿದೆ ಮತ್ತು ಇದು ಕೂದಲಿನ ಬುಡಕ್ಕೆ ಹೋಗಲು ನೆರವಾಗುವುದು ಮತ್ತು ಪೋಷಕಾಂಶ ನೀಡುವುದು.

ಬೇಕಾಗುವ ಸಾಮಗ್ರಿಗಳು

2 ಚಮಚ ತೆಂಗಿನೆಣ್ಣೆ

ಒಂದು ಮೊಟ್ಟೆ

ಬಳಸುವ ವಿಧಾನ

•ಒಂದು ಪಿಂಗಾಣಿಯಲ್ಲಿ ಎರಡ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

•ಈ ಮಿಶ್ರಣವನ್ನು ನಿಮಗೆ ಬೇಕಾಗುವಷ್ಟು ತೆಗೆದುಕೊಳ್ಳಿ ಮತ್ತು ಇದನ್ನು ತಲೆಬುರುಡೆಗೆ ಹಚ್ಚಿಕೊಂಡು 3-5 ನಿಮಿಷ ಕಾಲ ಮಸಾಜ್ ಮಾಡಿ.

•ರಾತ್ರಿಯಿಡಿ ಹಾಗೆ ಬಿಡಿ.

•ಬೆಳಗ್ಗೆ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ ಮತ್ತು ಶಾಂಪೂ ಅಥವಾ ಕಂಡೀಷನರ್ ಹಾಕಿ ತೊಳೆಯಿರಿ.

•ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಒಂದು ಸಲ ಹೀಗೆ ಮಾಡಿ.

ಮೊಸರು ಮತ್ತು ವಿಟಮಿನ್ ಇ ಹೇರ್ ಮಾಸ್ಕ್

ಮೊಸರು ಮತ್ತು ವಿಟಮಿನ್ ಇ ಹೇರ್ ಮಾಸ್ಕ್

ಮೊಸರಿನಲ್ಲಿ ವಿಟಮಿನ್ ಬಿ ಮತ್ತು ಡಿ ಹಾಗೂ ಪ್ರೋಟೀನ್ ಇದೆ. ಇದು ಕೂದಲಿನ ಬೆಳವಣಿಗೆಗೆ ಬೇಕಾಗುವ ಪ್ರಮುಖ ಅಂಶಗಳಾಗಿವೆ.

ಬೇಕಾಗುವ ಸಾಮಗ್ರಿಗಳು

2 ಚಮಚ ಮೊಸರು

2 ಚಮಚ ವಿಟಮಿನ್ ಇ ಹುಡಿ(4 ವಿಟಮಿನ್ ಇ ಕ್ಯಾಪ್ಸೂಲ್ಸ್)

ಬಳಸುವ ವಿಧಾನ

•ಒಂದು ಪಿಂಗಾಣಿಗೆ ವಿಟಮಿನ್ ಇ ಹುಡಿ ಹಾಕಿ ಅಥವಾ ವಿಟಮಿನ್ ಇ ಕ್ಯಾಪ್ಸೂಲ್ಸ್ ಹಾಕಿಕೊಳ್ಳಿ.

•ಬಳಿಕ ಇದಕ್ಕೆ ಮೊಸರು ಹಾಕಿ ಸರಿಯಾಗಿ ಮಿಶ್ರಣ ಮಾಡಿ.

•ಈ ಮಿಶ್ರಣವನ್ನು ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿಕೊಂಡು ರಾತ್ರಿಯಿಡಿ ಹಾಗೆ ಬಿಡಿ.

•ವಾರದಲ್ಲಿ ಒಂದು ಸಲ ಹೀಗೆ ಮಾಡಿದರೆ ನಿಮಗೆ ಬೇಕಿರುವ ಫಲಿತಾಂಶ ಸಿಗುವುದು.

ಕರಿಬೇವಿನ ಎಲೆಗಳು ಮತ್ತು ರತನ್ಜೋತ್ ಹೇರ್ ಮಾಸ್ಕ್

ಕರಿಬೇವಿನ ಎಲೆಗಳು ಮತ್ತು ರತನ್ಜೋತ್ ಹೇರ್ ಮಾಸ್ಕ್

ಕರಿಬೇವಿನ ಎಲೆಗಳಲ್ಲಿ ಉನ್ನತ ಮಟ್ಟದ ಪ್ರೋಟೀನ್ ಮತ್ತು ಬೆಟಾ ಕ್ಯಾರೋಟಿನ್ ಅಂಶವಿದೆ. ಇದು ಕೂದಲು ಉದುರುವಿಕೆ ಸಮಸ್ಯೆ ನಿವಾರಣೆ ಮಾಡಲು ಪ್ರಮುಖ ಪಾತ್ರ ವಹಿಸುವುದು.

ಬೇಕಾಗುವ ಸಾಮಗ್ರಿಗಳು

*8-10 ಕರಿಬೇವಿನ ಎಲೆಗಳು

*2-4 ರತನ್ಜೋತ್ ಕಡ್ಡಿಗಳು

2 ಚಮಚ ತೆಂಗಿನ ಎಣ್ಣೆ

ತಯಾರಿಸುವ ವಿಧಾನ

•ರತನ್ಜೋತ್ ಕಡ್ಡಿಗಳನ್ನು ತೆಂಗಿನೆಣ್ಣೆಯಲ್ಲಿ ರಾತ್ರಿ ನೆನೆಯಲು ಹಾಕಿ. ಬೆಳಗ್ಗೆ ಈ ಕಡ್ಡಿಗಳನ್ನು ತೆಗೆದು, ಪಿಂಗಾಣಿಗೆ ಎಣ್ಣೆಯನ್ನು ಹಾಕಿಡಿ.

•ಸ್ವಲ್ಪ ನೀರು ಹಾಕಿ ಕರಿಬೇವಿನ ಎಲೆಗಳನ್ನು ರುಬ್ಬಿಕೊಂಡು ಪೇಸ್ಟ್ ಮಾಡಿ.

•ಎಣ್ಣೆ ಮತ್ತು ಕರಿಬೇವಿನ ಎಲೆಗಳ ಪೇಸ್ಟ್ ನ್ನು ಮಿಶ್ರಣ ಮಾಡಿ.

•ಈ ಮಿಶ್ರಣವನ್ನು ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿಕೊಳ್ಳಿ ಮತ್ತು ರಾತ್ರಿಯಿಡಿ ಹಾಗೆ ಬಿಡಿ.

•ಬೆಳಗ್ಗೆ ನೀವು ಶಾಂಪೂ ಅಥವಾ ಕಂಡೀಷನರ್ ಹಾಕಿಕೊಂಡು ಕೂದಲು ತೊಳೆಯಿರಿ.

ಹಾಲು ಮತ್ತು ಜೇನುತುಪ್ಪದ ಹೇರ್ ಮಾಸ್ಕ್

ಹಾಲು ಮತ್ತು ಜೇನುತುಪ್ಪದ ಹೇರ್ ಮಾಸ್ಕ್

ಹಾಲಿನಲ್ಲಿ ಪ್ರಮುಖವಾಗಿರುವಂತಹ ಪ್ರೋಟೀನ್ ಅಂಶವಿದೆ. ಇದು ಕೂದಲಿಗೆ ತುಂಬಾ ಲಾಭಕಾರಿಯಾಗಿದೆ. ಜೇನುತುಪ್ಪವು ಕೂದಲು ಉದುರುವಿಕೆ ಮತ್ತು ಕೂದಲು ಒಣಗುವುದು ಹಾಗೂ ನಿಸ್ತೇಜ ಕೂದಲಿಗೆ ತುಂಬಾ ಪರಿಣಾಮಕಾರಿ ಆಗಿರಲಿದೆ.

ಬೇಕಾಗುವ ಸಾಮಗ್ರಿಗಳು

2 ಚಮಚ ಹಾಲು

2 ಚಮಚ ಜೇನುತುಪ್ಪ

ಬಳಸುವ ವಿಧಾನ

•ಪಿಂಗಾಣಿಯಲ್ಲಿ ಎರಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

•ಈ ಮಿಶ್ರಣವನ್ನು ಬೇಕಾದಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಿ ಮತ್ತು ಇದನ್ನು ತಲೆಬುರುಡೆ ಮತ್ತು ಕೂದಲಿಗೆ ಹಾಕಿ 3-5 ನಿಮಿಷ ಕಾಲ ಮಸಾಜ್ ಮಾಡಿ.

•ರಾತ್ರಿಯಿಡಿ ಇದನ್ನು ಹಾಗೆ ಬಿಡಿ.

•ಬೆಳಗ್ಗೆ ಎದ್ದ ಬಳಿಕ ಉಗುರುಬೆಚ್ಚಗಿನ ನೀರಿನಿಂದ ಕೂದಲನ್ನು ಶಾಂಪೂ ಅಥವಾ ಕಂಡೀಷನರ್ ಹಾಕಿ ಬಳಸಿ.

•ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಒಂದು ಸಲ ಇದನ್ನು ಬಳಸಿ.

ಗ್ರೀನ್ ಟೀ ಮತ್ತು ಮೊಟ್ಟೆ ಲೋಳೆಯ ಹೇರ್ ಮಾಸ್ಕ್

ಗ್ರೀನ್ ಟೀ ಮತ್ತು ಮೊಟ್ಟೆ ಲೋಳೆಯ ಹೇರ್ ಮಾಸ್ಕ್

ಕ್ಯಾಟ್ಚಿನ್ಸ್ ಮತ್ತು ಆ್ಯಂಟಿಆಕ್ಸಿಡೆಂಟ್ ಗಳಿಂದ ಸಮೃದ್ಧ ವಾಗಿರುವಂತಹ ಗ್ರೀನ್ ಟೀಯು ಕೂದಲು ಉದುರುವ ಸಮಸ್ಯೆ ಇರುವವರಿಗೆ ತುಂಬಾ ಪರಿಣಾಮಕಾರಿ ಆಗಿರಲಿದೆ. ನಿಯಮಿತವಾಗಿ ಗ್ರೀನ್ ಟೀ ಬಳಸಿದರೆ ಆಗ ಕೂದಲು ತುಂಬಾ ಕಾಂತಿಯುತ ಹಾಗೂ ನಯವಾಗುವುದು.

ಬೇಕಾಗುವ ಸಾಮಗ್ರಿಗಳು

2 ಚಮಚ ಗ್ರೀನ್ ಟೀ

1 ಮೊಟ್ಟೆಯ ಲೋಳೆ

ಬಳಸುವ ವಿಧಾನ

•ಗ್ರೀನ್ ಟೀ ಮತ್ತು ಮೊಟ್ಟೆಯ ಲೋಳೆಯನ್ನು ಒಂದು ಪಿಂಗಾಣಿಯಲ್ಲಿ ಹಾಕಿ ಮತ್ತು ಇದನ್ನು ಸರಿಯಾಗಿ ಕಲಸಿಕೊಳ್ಳಿ. ಇದಕ್ಕೆ ಒಂದು ಹತ್ತಿ ಉಂಡೆ ಹಾಕಿ ಮತ್ತು ಹತ್ತಿ ಉಂಡೆಯನ್ನು ಮಿಶ್ರಣದಲ್ಲಿ ಅದ್ದಿ ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿಕೊಳ್ಳಿ.

•ಕೆಲವು ನಿಮಿಷ ಮಸಾಜ್ ಮಾಡಿ ಮತ್ತು ರಾತ್ರಿಯಿಡಿ ಹಾಗೆ ಬಿಡಿ. ಬೇಕಿದ್ದರೆ ಶಾವರ್ ಕ್ಯಾಪ್ ಹಾಕಿಕೊಳ್ಳಿ.

•ನಿಯಮಿತವಾಗಿ ಬಳಸುವ ಶಾಂಪೂ ಅಥವಾ ಕಂಡೀಷನರ್ ಬಳಸಿಕೊಂಡು ಬೆಳಗ್ಗೆ ಕೂದಲು ತೊಳೆಯಿರಿ.

•ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಒಂದು ಸಲ ಇದನ್ನು ಬಳಸಿಕೊಳ್ಳಿ.

ಬಾಳೆಹಣ್ಣು ಮತ್ತು ಜೇನುತುಪ್ಪದ ಮಾಸ್ಕ್

ಬಾಳೆಹಣ್ಣು ಮತ್ತು ಜೇನುತುಪ್ಪದ ಮಾಸ್ಕ್

ಬಾಳೆಹಣ್ಣಿನಲ್ಲಿ ಪೊಟಾಶಿಯಂ, ಆ್ಯಂಟಿಆಕ್ಸಿಡೆಂಟ್, ನೈಸರ್ಗಿಕ ತೈಲ ಮತ್ತು ವಿಟಮಿನ್ ಗಳು ಸಮೃದ್ಧವಾಗಿದೆ. ಕೂದಲು ಉದುರುವಿಕೆ ಅಥವಾ ತುಂಡಾಗುವ ಸಮಸ್ಯೆ ಇದ್ದರೆ ಇದು ತುಂಬಾ ಪರಿಣಾಮಕಾರಿ ಆಗಲಿದೆ. ಇದು ಕೂದಲಿಗೆ ನೈಸರ್ಗಿಕ ಕಾಂತಿ ಕೂಡ ನೀಡುವುದು.

ಬೇಕಾಗುವ ಸಾಮಗ್ರಿಗಳು

2 ಚಮಚ ಬಾಳೆಹಣ್ಣಿನ ತಿರುಳು

2 ಚಮಚ ಜೇನುತುಪ್ಪ

ಬಳಸುವ ವಿಧಾನ

•ಎರಡನ್ನು ಪಿಂಗಾಣಿಗೆ ಹಾಕಿ ಮಿಶ್ರಣ ಮಾಡಿಕೊಳ್ಳಿ.

•ಈ ಮಿಶ್ರಣವನ್ನು ಬೇಕಾದಷ್ಟು ಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿಕೊಂಡು 3-5 ನಿಮಿಷ ಕಾಲ ಮಸಾಜ್ ಮಾಡಿಕೊಳ್ಳಿ.

•ರಾತ್ರಿಯಿಡಿ ಹಾಗೆ ಬಿಡಿ.

•ಬೆಳಗ್ಗೆ ಎದ್ದ ಬಳಿಕ ಉಗುರುಬೆಚ್ಚಗಿನ ನೀರಿನಿಂದ ಶಾಂಪೂ ಅಥವಾ ಕಂಡೀಷನರ್ ಬಳಸಿ ತೊಳೆಯಿರಿ.

•ವಾರದಲ್ಲಿ ಒಂದು ಸಲ ನೀವು ಇದನ್ನು ಬಳಸಿಕೊಳ್ಳಬಹುದು.

ಅವಕಾಡೋ ಮತ್ತು ಆಲಿವ್ ತೈಲದ ಹೇರ್ ಮಾಸ್ಕ್

ಅವಕಾಡೋ ಮತ್ತು ಆಲಿವ್ ತೈಲದ ಹೇರ್ ಮಾಸ್ಕ್

ಅವಕಾಡೋದಲ್ಲಿ ವಿಟಮಿನ್ ಎ, ಡಿ, ಇ ಮತ್ತು ಬಿ6 ಮಾತ್ರವಲ್ಲದೆ ಅಮಿನೋ ಆಮ್ಲ, ತಾಮ್ರ ಮತ್ತು ಕಬ್ಬಿನಾಂಶವಿದೆ. ಇದು ಕೂದಲಿನ ಸಂಪೂರ್ಣ ರಚನೆ ಸುಧಾರಣೆ ಮಾಡುವುದು. ಇದರಿಂದ ಕೂದಲು ತುಂಬಾ ನಯ ಹಾಗೂ ಕಾಂತಿಯುತವಾಗುವುದು.

ಬೇಕಾಗುವ ಸಾಮಗ್ರಿಗಳು

2 ಚಮಚ ಅವಕಾಡೋ ತಿರುಳು

2 ಚಮಚ ಆಲಿವ್ ತೈಲ

ಬಳಸುವ ವಿಧಾನ

•ಪಿಂಗಾಣಿಯಲ್ಲಿ ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

•ಈ ಮಿಶ್ರಣವನ್ನು ಬೇಕಾದಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಿ ಮತ್ತು ಇದನ್ನು ನಿಧಾನವಾಗಿ ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿಕೊಂಡು 3-5 ನಿಮಿಷ ಕಾಲ ಮಸಾಜ್ ಮಾಡಿ.

•ರಾತ್ರಿಯಿಡಿ ಹಾಗೆ ಬಿಡಿ.

•ಬೆಳಗ್ಗೆ ಉಗುರುಬೆಚ್ಚಗಿನ ನೀರಿನಲ್ಲಿ ಶಾಂಪೂ ಅಥವಾ ಕಂಡೀಷನರ್ ಹಾಕಿ ತೊಳೆಯಿರಿ.

•ವಾರದಲ್ಲಿ ಒಂದು ಸಲ ಬಳಸಿದರೆ ಆಗ ಉತ್ತಮ ಫಲಿತಾಂಶ ಸಿಗುವುದು.

ಹರಳೆಣ್ಣೆ, ದಾಲ್ಚಿನ್ನಿ ಮತ್ತು ಜೇನುತುಪ್ಪದ ಹೇರ್ ಮಾಸ್ಕ್

ಹರಳೆಣ್ಣೆ, ದಾಲ್ಚಿನ್ನಿ ಮತ್ತು ಜೇನುತುಪ್ಪದ ಹೇರ್ ಮಾಸ್ಕ್

ಹರಳೆಣ್ಣೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳೂ ಇವೆ. ಇದು ಕೂದಲಿಗೆ ಯಾವುದೇ ರೀತಿಯ ಸೋಂಕು ತಗುಲದಂತೆ ತಡೆಯುವುದು. ವಿಟಮಿನ್ ಇ, ಖನಿಜಾಂಶ, ಪ್ರೋಟೀನ್, ಒಮೆಗಾ-6 ಮತ್ತು ಒಮೆಗಾ-9 ನಿಂದ ಸಮೃದ್ಧವಾಗಿದೆ. ಇದರಲ್ಲಿ ಇರುವಂತಹ ಕೆಲವು ಕೊಬ್ಬಿನಾಮ್ಲಗಳು ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಬೇಕಾಗುವ ಸಾಮಗ್ರಿಗಳು

*2 ಚಮಚ ಹರಳೆಣ್ಣೆ

*2 ಚಮಚ ದಾಲ್ಚಿನಿ ಹುಡಿ

*2 ಚಮಚ ಜೇನುತುಪ್ಪ

ಬಳಸುವ ವಿಧಾನ

•ಎಲ್ಲವನ್ನು ಒಂದು ಪಿಂಗಾಣಿಯಲ್ಲಿ ಮಿಶ್ರಣ ಮಾಡಿಕೊಳ್ಳಿ.

•ಬೇಕಾದಷ್ಟು ಪ್ರಮಾಣದಲ್ಲಿ ಈ ಮಿಶ್ರಣವನ್ನು ತೆಗೆದುಕೊಂಡು ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿಕೊಂಡು ನಿಧಾನವಾಗಿ 3-5 ನಿಮಿಷ ಕಾಲ ಮಸಾಜ್ ಮಾಡಿಕೊಳ್ಳಿ.

•ರಾತ್ರಿಯಿಡಿ ಹಾಗೆ ಬಿಡಿ.

•ಶಾಂಪೂ ಅಥವಾ ಕಂಡೀಷನರ್ ಬಳಸಿಕೊಂಡು ಬೆಳಗ್ಗೆ ತೊಳೆಯಿರಿ.

•ವಾರದಲ್ಲಿ ಒಂದು ಸಲ ನೀವು ಇದನ್ನು ಬಳಸಿಕೊಂಡರೆ ಫಲಿತಾಂಶ ಸಿಗುವುದು.

English summary

9 Home made Hair Masks For Shiny Hair

Haircare is extremely important and we all know exactly why! One of the reasons for this is that we often associate our hair, its texture, length, volume, and style with our appearance. For example, soft, shiny, silky, and nourished hair instantly decks up our entire appearance, making us look confident and appealing as compared to dry and dull hair.
X
Desktop Bottom Promotion