For Quick Alerts
ALLOW NOTIFICATIONS  
For Daily Alerts

'ಮೆಂತೆಕಾಳಿನ' ಹೇರ್ ಪ್ಯಾಕ್ - ಕೂದಲಿಗೆ ಯಾವುದೇ ಸಮಸ್ಯೆ ಬರಲ್ಲ!

|

ಕೂದಲಿನ ಮತ್ತು ತ್ವಚೆಯ ಪೋಷಣೆಯನ್ನು ಮಾಡುವಲ್ಲಿ ಹೆಚ್ಚಿನ ಮಹಿಳೆಯರು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಇಂದಿನ ಧೂಳು ಹಾಗೂ ಕಲುಷಿತ ವಾತಾವರಣದಿಂದಾಗಿ ಹೆಚ್ಚು ಹಾನಿಗೆ ಒಳಗಾಗುವುದೇ ನಮ್ಮ ಕೂದಲು ಮತ್ತು ತ್ವಚೆಯಾಗಿದೆ. ಎಲ್ಲಾ ಸೌಂದರ್ಯ ಸಲಹೆಗಳನ್ನು ನಾವು ನೀಡುವಾಗ ಹೇಳುವ ಮಾತೆಂದರೆ ಆದಷ್ಟು ನೈಸರ್ಗಿಕ ಉತ್ಪನ್ನಗಳನ್ನು ಬಳಸಿಕೊಂಡು ನಿಮ್ಮ ಕೂದಲು ಮತ್ತು ತ್ವಚೆಯ ಕಾಳಜಿ ಮಾಡಿ ಎಂದಾಗಿದೆ. ಬ್ಯೂಟಿಪಾರ್ಲರ್‌ಗೆ ಹೋಗುವುದು ಇಲ್ಲವೇ ಬೇರೆ ಬೇರೆ ಜಾಹೀರಾತುಗಳನ್ನು ನೋಡಿಕೊಂಡು ಆ ಉತ್ಪನ್ನಗಳನ್ನು ಬಳಸುವುದರಿಂದ ನಿಮ್ಮ ಕೂದಲು ಮತ್ತು ತ್ವಚೆಯ ಸ್ವಾಸ್ಥ್ಯ ಉತ್ತಮಗೊಳ್ಳುವುದಿಲ್ಲ ಬದಲಿಗೆ ಇನ್ನಷ್ಟು ಹದಗೆಡುತ್ತದೆ.

ಕೂದಲು ಉದುರುವ ಸಮಸ್ಯೆಗೆ 'ಮೆಂತೆ ಹೇರ್ ಪ್ಯಾಕ್'

ಇಂದಿನ ಲೇಖನದಲ್ಲಿ ನಿಮ್ಮ ಕೂದಲಿನ ಕಾಳಜಿಯನ್ನು ಮೆಂತೆ ಎಂಬ ಅತ್ಯದ್ಭುತ ನೈಸರ್ಗಿಕ ವಿಧಾನದಿಂದ ಪೋಷಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಇದನ್ನು ನೀವು ಎಲೆ ಇಲ್ಲವೇ ಬೀಜದ ರೂಪದಲ್ಲಿ ನಿಮ್ಮ ಕೂದಲಿಗೆ ಬಳಸಬಹುದು. ವಿಶೇಷವಾಗಿ ಕೂದಲುದುರುವಿಕೆ ಮತ್ತು ತಲೆಹೊಟ್ಟಿನ ಸಮಸ್ಯೆಯಿಂದ ನೀವು ಬಳಲುತ್ತಿದ್ದೀರಿ ಎಂದಾದಲ್ಲಿ ಮೆಂತೆ ಒಂದು ವರದಾನವಾಗಿದೆ. ನಿಮ್ಮ ಕೂದಲನ್ನು ಗಟ್ಟಿಗೊಳಿಸಿ ಕೂದಲಿಗೆ ಪೋಷಣೆಯನ್ನು ಒದಗಿಸಿ ಕೂದಲನ್ನು ದಪ್ಪನಾಗಿಸುತ್ತದೆ ಮತ್ತು ಹೊಳೆಯುವಂತೆ ಮಾಡುವ ಪೋಷಕಾಂಶಗಳನ್ನು ಮೆಂತೆ ಒಳಗೊಂಡಿದೆ.

ಮೆಂತೆಕಾಳಿನಲ್ಲಿರುವ ಎಣ್ಣೆ ಮತ್ತು ಇತರ ಖನಿಜಾಂಶಗಳು ನಿಮ್ಮ ಕೂದಲಿನ ಬೆಳವಣಿಗೆಯನ್ನು ಉನ್ನತೀಕರಿಸುತ್ತದೆ. ನೀವು ಕೂದಲಿಗೆ ಮೆಂತೆಯನ್ನು ಬಳಸುತ್ತಿದ್ದೀರಿ ಎಂದಾದಲ್ಲಿ ಇತರ ಕೂದಲಿನ ಉತ್ಪನ್ನಗಳನ್ನು ಬಳಸುವ ಅಗತ್ಯವೇ ಇರುವುದಿಲ್ಲ. ಇದರೊಂದಿಗೆ ಇತರ ಉತ್ಪನ್ನಗಳನ್ನು ಬಳಸಿಕೊಂಡು ನಿಮ್ಮ ಕೂದಲಿನ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಮೆಂತೆ ಮತ್ತು ಇತರ ಉತ್ಪನ್ನಗಳನ್ನು ಬಳಸಿಕೊಂಡು ಕೂದಲಿನ ಪೋಷಣೆಯನ್ನು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ....

1. ಮೆಂತೆ ಪೇಸ್ಟ್

1. ಮೆಂತೆ ಪೇಸ್ಟ್

ಆರು ಗಂಟೆಗಳ ಕಾಲ ಮೆಂತೆಯನ್ನು ನೀರಿನಲ್ಲಿ ನೆನೆಸಿ. ಇದನ್ನು ಪೇಸ್ಟ್‌ನಂತೆ ಸಿದ್ಧಪಡಿಸಿ. ನಿಮ್ಮ ಕೂದಲಿಗೆ ಈ ಪೇಸ್ಟ್ ಅನ್ನು ಹಚ್ಚಿ 20 ನಿಮಿಷ ಬಿಡಿ. ಮೃದುವಾದ ಶಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿ.

2. ಮೆಂತೆ ಮತ್ತು ಮೊಟ್ಟೆ ಹೇರ್ ಪ್ಯಾಕ್

2. ಮೆಂತೆ ಮತ್ತು ಮೊಟ್ಟೆ ಹೇರ್ ಪ್ಯಾಕ್

ಮೆಂತೆ ಪೇಸ್ಟ್ ಅನ್ನು ಒಂದು ಮೊಟ್ಟೆಯೊಂದಿಗೆ ಮಿಶ್ರ ಮಾಡಿ. ನಿಮ್ಮ ಕೂದಲಿಗೆ ಈ ಮಿಶ್ರಣವನ್ನು ಹಚ್ಚಿ ಅರ್ಧ ಗಂಟೆ ಬಿಡಿ. ತಣ್ಣೀರು ಮತ್ತು ಶಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿ. ಮೆಂತೆ ಮತ್ತು ಮೊಟ್ಟೆಯಲ್ಲಿ ಪ್ರೊಟೀನ್ ಅಂಶಗಳಿದ್ದು ನಿಮ್ಮ ಕೂದಲಿಗೆ ಪೋಷಣೆಯನ್ನು ಒದಗಿಸಿ ಕೂದಲು ಹೊಳೆಯುವಂತೆ ಮಾಡುತ್ತದೆ.

3. ಆಪಲ್ ಸೀಡರ್ ವಿನೇಗರ್ ಮತ್ತು ಮೆಂತೆ ಹೇರ್ ಪ್ಯಾಕ್

3. ಆಪಲ್ ಸೀಡರ್ ವಿನೇಗರ್ ಮತ್ತು ಮೆಂತೆ ಹೇರ್ ಪ್ಯಾಕ್

ನಿಮ್ಮ ಕೂದಲಿನಿಂದ ಹೊಟ್ಟು ನಿವಾರಿಸಲು ಮೆಂತೆ ಮತ್ತು ಆಪಲ್ ಸೀಡರ್ ವಿನೇಗರ್ ಕಮಾಲಿನದ್ದಾಗಿದೆ. ಅರ್ಧ ಕಪ್ ಮೆಂತೆ ಪೇಸ್ಟ್ ಅನ್ನು ಎರಡು ಚಮಚ ಆಪಲ್ ಸೀಡರ್ ವಿನೇಗರ್‌ನೊಂದಿಗೆ ಮಿಶ್ರ ಮಾಡಿ. ನಿಮ್ಮ ಕೂದಲಿಗೆ ಈ ಪೇಸ್ಟ್ ಅನ್ನು ಹಚ್ಚಿಕೊಳ್ಳಿ. 15-20 ನಿಮಿಷ ಹಾಗೆಯೇ ಬಿಟ್ಟು ನಂತರ ಶಾಂಪೂವಿನಿಂದ ಕೂದಲು ತೊಳೆದುಕೊಳ್ಳಿ.

4. ಮೊಸರು ಮತ್ತು ಮೆಂತೆ ಹೇರ್ ಪ್ಯಾಕ್

4. ಮೊಸರು ಮತ್ತು ಮೆಂತೆ ಹೇರ್ ಪ್ಯಾಕ್

ನಿಮ್ಮ ಕೂದಲಿಗೆ ಮೃದುವಾದ ಪೋಷಣೆಯನ್ನು ನೀಡಲು 1/4 ಕಪ್ ಮೊಸರನ್ನು ಅರ್ಧ ಕಪ್ ಮೆಂತೆ ಪೇಸ್ಟ್‌ನೊಂದಿಗೆ ಮಿಶ್ರ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ 20 ನಿಮಿಷ ಹಾಗೆಯೇ ಬಿಡಿ ನಂತರ ತಣ್ಣೀರಿನಿಂದ ಕೂದಲನ್ನು ತೊಳೆದುಕೊಳ್ಳಿ.

5. ಬಿಸಿ ಎಣ್ಣೆ ಮತ್ತು ಮೆಂತೆ ಹೇರ್ ಪ್ಯಾಕ್

5. ಬಿಸಿ ಎಣ್ಣೆ ಮತ್ತು ಮೆಂತೆ ಹೇರ್ ಪ್ಯಾಕ್

ಮೆಂತೆ ಬೀಜವನ್ನು ಹುಡಿ ಮಾಡಿಕೊಂಡು ಮೂರು ಚಮಚ ಸಾಸಿವೆ ಅಥವಾ ಆಲೀವ್ ಎಣ್ಣೆಯೊಂದಿಗೆ ಮಿಶ್ರ ಮಾಡಿ. ನಿಮ್ಮ ಕೂದಲಿಗೆ ಎಣ್ಣೆ ಹಚ್ಚಿ 10 ನಿಮಿಷ ಬಿಡಿ. ನಂತರ ಎಂದಿನಂತೆ ನಿಮ್ಮ ಕೂದಲನ್ನು ತೊಳೆದುಕೊಳ್ಳಿ.

6. ತೆಂಗಿನ ಹಾಲು ಮತ್ತು ಮೆಂತೆ ಹೇರ್ ಪ್ಯಾಕ್

6. ತೆಂಗಿನ ಹಾಲು ಮತ್ತು ಮೆಂತೆ ಹೇರ್ ಪ್ಯಾಕ್

1/4 ಕಪ್ ತೆಂಗಿನ ಹಾಲನ್ನು ಅರ್ಧ ಕಪ್ ಮೆಂತೆ ಪೇಸ್ಟ್‌ನೊಂದಿಗೆ ಮಿಶ್ರ ಮಾಡಿ. ನಿಮ್ಮ ಕೂದಲಿಗೆ ಈ ಮಿಶ್ರಣವನ್ನು ಹಚ್ಚಿಕೊಳ್ಳಿ. 5 ನಿಮಿಷ ಮಸಾಜ್ ಮಾಡಿ ಹಾಗೆಯೇ 10 ನಿಮಿಷ ಕೂದಲಿನಲ್ಲಿ ಬಿಡಿ. ತಣ್ಣೀರಿನಿಂದ ಕೂದಲನ್ನು ತೊಳೆದುಕೊಳ್ಳಿ. ಇದು ನಿಮ್ಮ ಕೂದಲಿಗೆ ಅತ್ಯುತ್ತಮ ಪೋಷಣೆಯನ್ನು ಮಾಡುತ್ತದೆ.

8. ಮೆಂತೆ ನೀರು

8. ಮೆಂತೆ ನೀರು

ಮೆಂತೆಯನ್ನು ನೀರಿನಲ್ಲಿ ನೆನೆಸಿ ಮತ್ತು ಅದನ್ನು ರಾತ್ರಿ ಪೂರ್ತಿ ಹಾಗೆಯೇ ಇಡಿ. ಈ ನೀರಿನಿಂದ ನಿಮ್ಮ ಕೂದಲನ್ನು ತೊಳೆದುಕೊಳ್ಳಿ. ಕೆಲವು ಗಂಟೆ ಬಿಟ್ಟು ಕೂದಲಿಗೆ ಶ್ಯಾಂಪೂ ಮಾಡಿ. ನಿಮ್ಮ ಕೂದಲು ಬೆಳೆಯುವಂತೆ ಈ ನೀರು ಮಾಡುತ್ತದೆ. ವಾರಕ್ಕೆ ಎರಡು ಬಾರಿ ಹೀಗೆ ಮಾಡಿ ನೋಡಿ.

9. ಮೆಂತೆ ಹಾಗೂ ತೆಂಗಿನಹಾಲು ಹೇರ್ ಪ್ಯಾಕ್

9. ಮೆಂತೆ ಹಾಗೂ ತೆಂಗಿನಹಾಲು ಹೇರ್ ಪ್ಯಾಕ್

ಮೆಂತೆಕಾಳಿನ ಪೇಸ್ಟ್ ಮಾಡಿಕೊಂಡು ಅದನ್ನು ತೆಂಗಿನ ಹಾಲಿನೊಂದಿಗೆ ಮಿಶ್ರಣ ಮಾಡಿಕೊಳ್ಳಿ. ಇದನ್ನು ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿಕೊಳ್ಳಿ. 30 ನಿಮಿಷ ಕಾಲ ಹಾಗೆ ಬಿಡಿ ಬಳಿಕ ಶಾಂಪೂವಿನಿಂದ ತೊಳೆಯಿರಿ. ಇದರಿಂದ ಕೂದಲು ತುಂಬಾ ಆರೋಗ್ಯಕಾರಿಯಾಗಿರುತ್ತದೆ. ಕೂದಗೆ ರೇಷ್ಮೆಯಂತಹ ಹೊಳಪು ಹಾಗೂ ಕಾಂತಿಯನ್ನು ನೀಡುವುದು.

ಕೂದಲು ಉದುರುವುದನ್ನು ತಡೆಯಲು

ಕೂದಲು ಉದುರುವುದನ್ನು ತಡೆಯಲು

ಮೆಂತೆ ಕಾಳಿನ ಪೇಸ್ಟ್ ಮತ್ತು ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿಕೊಂಡು ಮೃಧುವಾದ ಪೇಸ್ಟ್ ಮಾಡಿಕೊಳ್ಳಿ. ತಲೆಕೂದಲಿಗೆ ಹಾನಿಯಾಗಿರುವ ಜಾಗಕ್ಕೆ ಇದನ್ನು ಹಚ್ಚಿಕೊಳ್ಳಿ. ಹತ್ತು ನಿಮಿಷ ಕಾಲ ಇದನ್ನು ಒಣಗಲು ಬಿಡಿ. ಶಾಂಪೂವಿನಿಂದ ಕೂದಲು ತೊಳೆಯಿರಿ. ಉತ್ತಮ ಫಲಿತಾಂಶ ಪಡೆಯಲು ಅಲೋವೆರಾ ಜೆಲ್ ನ್ನು ಇದಕ್ಕೆ ಸೇರಿಸಿಕೊಳ್ಳಬಹುದು.

ತಲೆಹೊಟ್ಟಿನ ಚಿಕಿತ್ಸೆಗೆ

ತಲೆಹೊಟ್ಟಿನ ಚಿಕಿತ್ಸೆಗೆ

ಮೆಂತೆ ಕಾಳನ್ನು ನೆನೆಸಿಕೊಂಡ ಬಳಿಕ ಅದರ ಪೇಸ್ಟ್ ಮಾಡಿಕೊಳ್ಳಿ. ಅದಕ್ಕೆ ಒಂದು ಚಮಚ ನಿಂಬೆರಸ ಹಾಕಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ತಲೆಬುರುಡೆಗೆ ಸರಿಯಾಗಿ ಹಚ್ಚಿಕೊಳ್ಳಿ. ತಲೆಹೊಟ್ಟನ್ನು ನಿವಾರಿಸಲು ಇದು ಅತ್ಯುತ್ತಮವಾದ ವಿಧಾನವಾಗಿದೆ. ತಲೆಹೊಟ್ಟಿನಿಂದ ಸಮಸ್ಯೆಯನ್ನು ಎದುರಿಸುವಂತಹ ಜನರಿಗೆ ಇಲ್ಲಿ ಮತ್ತೊಂದು ವಿಧಾನವಿದೆ. 2-3 ಚಮಚ ಮೊಸರನ್ನು ಪಡೆಯಿರಿ ಮತ್ತು ಅದಕ್ಕೆ 2-3 ಚಮಚ ಮೆಂತೆಯನ್ನು ಸೇರಿಸಿಕೊಳ್ಳಿ. ಮೆಂತೆಯನ್ನು ರಾತ್ರಿಯಿಡಿ ನೆನೆಸಿಟ್ಟು ಮೆತ್ತಗಿನ ಪೇಸ್ಟ್ ಮಾಡಿ. ಇದನ್ನು ತಲೆಬುರುಡೆ ಮತ್ತು ಕೂದಲಿಗೆ ಸರಿಯಾಗಿ ಹಚ್ಚಿಕೊಳ್ಳಿ. 30 ನಿಮಿಷ ಬಿಟ್ಟು ಕೂದಲನ್ನು ತೊಳೆಯಿರಿ.

ನೆಲ್ಲಿಕಾಯಿ ಜತೆ ಮೆಂತೆ

ನೆಲ್ಲಿಕಾಯಿ ಜತೆ ಮೆಂತೆ

ಕೂದಲು ಬಿಳಿಯಾಗುವುದನ್ನು ತಡೆಯಲು ಮೆಂತೆಯ ಹುಡಿಗೆ ಸ್ವಲ್ಪ ನೆಲ್ಲಿಕಾಯಿ ಹುಡಿ ಮತ್ತು ನಿಂಬೆರಸ ಬೆರೆಸಿಕೊಳ್ಳಿ. ಇದನ್ನು ತಲೆಬುರುಡೆಗೆ ಹಚ್ಚಿಕೊಂಡು ಸರಿಯಾಗಿ ಒಣಗಲು ಬಿಡಿ. ಸ್ವಲ್ಪ ಸಮಯದ ಬಳಿಕ ತಂಪಾದ ನೀರಿನಿಂದ ಕೂದಲು ತೊಳೆಯಿರಿ.

ಕೋಮಲವಾದ ಕೇಶರಾಶಿಗೆ

ಕೋಮಲವಾದ ಕೇಶರಾಶಿಗೆ

ಕಾಳುಗಳು ನೆನೆದು ಮೆತ್ತಗಾಗುತ್ತಲೇ ಅವುಗಳನ್ನು ಮಿಕ್ಸರ್ ಗ್ರೈ೦ಡರ್ ನಲ್ಲಿ ತಿರುವಿ ಪೇಸ್ಟ್‌ನ ರೂಪಕ್ಕೆ ತ೦ದುಕೊಳ್ಳಿರಿ. ಈ ಪೇಸ್ಟ್ ಅನ್ನು ನಿಮ್ಮ ನೆತ್ತಿಗೆ ನೇರವಾಗಿ ಹಚ್ಚಿಕೊಳ್ಳಿರಿ ಹಾಗೂ ಅದು ನೆತ್ತಿಯ ಮೇಲೆ ಹಾಗೆಯೇ ಒಣಗಲು ಅವಕಾಶ ನೀಡಿರಿ. ಬಳಿಕ ಮ೦ದವಾದ ಶಾಂಪೂವಿನಿ೦ದ ಅದನ್ನು ತೊಳೆದುಕೊಳ್ಳುವುದರ ಮೂಲಕ ಕೋಮಲವಾದ ಕೇಶರಾಶಿಯನ್ನು ನಿಮ್ಮದಾಗಿಸಿಕೊಳ್ಳಿರಿ.

English summary

Ways To Control Dandruff & Hair Fall With Fenugreek Seeds

Fenugreek, also called as methi has many benefits for both health and beauty. Fenugreek can be used in the form of leaves and seeds. Fenugreek leaves are also consumed as a herb and its seeds are used as a spice. You can use fenugreek seeds for all your hair problems especially hair fall and dandruff. They can prevent hair fall, make your hair thick and promote hair growth. Fenugreek is one of the best nutrients for hair. You need not to go for expensive hair treatments for hair growth, if you use fenugreek seeds for hair, at home.
X
Desktop Bottom Promotion