For Quick Alerts
ALLOW NOTIFICATIONS  
For Daily Alerts

ಪವರ್‌ಫುಲ್ ಎಣ್ಣೆಗಳು: ಕೂದಲು ಉದುರುವಿಕೆ ಸಮಸ್ಯೆಗೆ ಒಂದೇ ವಾರದಲ್ಲಿ ಪರಿಹಾರ

|

ಇಂದಿನ ಪ್ರತಿಯೊಬ್ಬ ಪುರುಷರು ಹಾಗೂ ಮಹಿಳೆಯರು ಸಾಮಾನ್ಯವಾಗಿ ಎದುರಿಸುವಂತಹ ಸಮಸ್ಯೆಯೆಂದರೆ ಕೂದಲು ಉದುರುವಿಕೆ ಹಾಗೂ ಕೂದಲು ತೆಳುವಾಗುವುದು. ಇದಕ್ಕೆ ಹಲವಾರು ರೀತಿಯ ಕಾರಣಗಳು ಇರಬಹುದು. ಆದರೆ ಈ ಸಮಸ್ಯೆಗೆ ನಿಮಗೆ ಈ ಲೇಖನದಲ್ಲಿ ಶಾಶ್ವತ ಪರಿಹಾರ ಹೇಳಿಕೊಡಲಿದ್ದೇವೆ. ಮನೆಯಲ್ಲೇ ತಯಾರಿಸಿದ ಕೆಲವೊಂದು ತೈಲಗಳಿಂದ ಕೂದಲು ಉದುರುವಿಕೆ ತಡೆಯಬಹುದು. ಗಿಡಮೂಲಿಕೆ ತೈಲವು ಕೂದಲು ಉದುರುವಿಕೆ ನಿಯಂತ್ರಿಸಲು ನೆರವಾಗುವುದು ಮತ್ತು ಕೂದಲು ಬೆಳೆಯಲು ನೆರವಾಗುವುದು.

Try These Home-made Hair Oils To Stop Hair Fall

ಕೂದಲು ಉದುರುವಿಕೆಗೆ ನಾನಾ ಸಮಸ್ಯೆಗಳು ಇರಬಹುದು. ಇದರಲ್ಲಿ ಕಲುಷಿತ ವಾತಾವರಣ, ಒತ್ತಡ, ರಾಸಾಯನಿಕದ ಅತಿಯಾದ ಬಳಕೆ ಮತ್ತು ಹಾಮೋರ್ನು ಅಸಮತೋಲನವು ಪ್ರಮುಖ ಕಾರಣಗಳಾಗಿವೆ. ಕೂದಲು ಉದುರುವಿಕೆಯನ್ನು ನೀವು ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಮಾಡಿದರೆ ತಲೆ ಬೋಳಾಗುವುದನ್ನು ತಡೆಯಬಹುದು. ಕೂದಲು ಉದುರುವಿಕೆ ತಡೆಯುವ ಜತೆಗೆ ಈ ತೈಲಗಳು ತಲೆಹೊಟ್ಟು, ಕೂದಲು ಬಿಳಿಯಾಗುವುದು ಮತ್ತು ತಲೆಬುರುಡೆಯ ಸೋಂಕುಗಳನ್ನು ತಡೆಯುವುದು.

ದಾಸವಾಳದ ಗಿಡಮೂಲಿಕೆ ತೈಲ

ದಾಸವಾಳದ ಗಿಡಮೂಲಿಕೆ ತೈಲ

ದಾಸವಾಳದ ಹೂವನ್ನು ನಿಯಮಿತವಾಗಿ ಬಳಸಿಕೊಂಡರೆ ಅದರಿಂದ ಹಲವಾರು ರೀತಿಯ ಲಾಭಗಳು ಕೂದಲಿಗೆ ಸಿಗುವುದು. ಇದರಲ್ಲಿ ವಿಟಮಿನ್ ಇ ಮತ್ತು ಸಿ, ಅಮಿನೋ ಆಮ್ಲ ಇದ್ದು, ಇದು ಕೂದಲು ಉದುರುವಿಕೆ ತಡೆಯಲು ಮತ್ತು ಕೂದಲಿಗೆ ಕಪ್ಪು ಬಣ್ಣ ನೀಡಲು ನೆರವಾಗುವುದು. ದಾಸವಾಳವು ಅಕಾಲಿಕವಾಗಿ ಕೂದಲು ಬಿಳಿಯಾಗುವುದನ್ನು ತಡೆಯಲು ಪ್ರಮುಖ ಮದ್ದು.

ಬೇಕಾಗುವ ಸಾಮಗ್ರಿಗಳು

  • 2 ದಾಸವಾಳದ ಹೂವುಗಳು
  • ½ ಕಪ್ ದಾಸವಾಳದ ಎಲೆಗಳು
  • ½ ಕಪ್ ತೆಂಗಿನೆಣ್ಣೆ
  • ¼ ಕಪ್ ಬಾದಾಮಿ ಎಣ್ಣೆ
  • ತಯಾರಿಸುವ ವಿಧಾನ

    ದಾಸವಾಳದ ಎಲೆಗಳು ಮತ್ತು ಹೂವನ್ನು ಸರಿಯಾಗಿ ತೊಳೆದುಕೊಳ್ಳಿ. ಇದನ್ನು ಸೂರ್ಯನ ಬಿಸಿಲು ಅಥವಾ ಒವನ್ ನಲ್ಲಿ ಒಣಗಿಸಿ. ಒಂದು ಸಣ್ಣ ಬಾಣಲೆಗೆ ತೆಂಗಿನೆಣ್ಣೆ ಮತ್ತು ಬಾದಾಮಿ ಎಣ್ಣೆ ಹಾಕಿ. ಎರಡು ಬಿಸಿ ಮಾಡಿ ಮತ್ತು ಒಣಗಿರುವ ದಾಸವಾಳದ ಎಲೆಗಳು ಮತ್ತು ಹೂವನ್ನು ಇದಕ್ಕೆ ಹಾಕಿಕೊಂಡು ಕಡಿಮೆ ಬೆಂಕಿಯಲ್ಲಿ ಮತ್ತೆ ಐದು ನಿಮಿಷ ಬಿಸಿ ಮಾಡಿ. ಕೋಣೆಯ ತಾಪಮಾನಕ್ಕೆ ಎಣ್ಣೆಯು ಬಂದ ಬಳಿಕ ಸೋಸಿಟ್ಟುಕೊಳ್ಳಿ.

    Most Read: ಪಿತೃ ಪಕ್ಷ ಪೂಜೆಯನ್ನು ಮನೆಯಲ್ಲಿ ಮಾಡುವಾಗ ಅನುಸರಿಸಬೇಕಾದ ವಿಧಿವಿಧಾನಗಳು

    ಅಲೋವೆರಾ ಎಣ್ಣೆ

    ಅಲೋವೆರಾ ಎಣ್ಣೆ

    ಅಲೋವೆರಾವು ಕೂದಲು ಮತ್ತು ತಲೆಬುರುಡೆಯನ್ನು ಮೊಶ್ಚಿರೈಸ್ ಮಾಡುವುದು. ವಿಟಮಿನ್ ಎ ಮತ್ತು ಇ ಇರುವಂತಹ ಅಲೋವೆರಾವು ಕೂದಲಿನ ಕೋಶಗಳನ್ನು ಬಲಗೊಳಿಸುವುದು ಮತ್ತು ಕೂದಲಿನ ಬೆಳವಣಿಗೆಗೆ ನೆರವಾಗುವುದು.

    ಬೇಕಾಗುವ ಸಾಮಗ್ರಿಗಳು

    • 1 ಅಲೋವೆರಾ ಎಲೆ
    • ½ ಕಪ್ ತೆಂಗಿನೆಣ್ಣೆ
    • ಕೆಲವು ಹನಿ ಸಾರಭೂತ ತೈಲ(ಆಯ್ಕೆಗೆ ಬಿಟ್ಟದ್ದು)
    • ತಯಾರಿಸುವ ವಿಧಾನ

      ತಾಜಾ ಅಲೋವೆರಾದ ಎಲೆತೆಗೆದುಕೊಂಡು ಅದರ ಮುಳ್ಳು ಮತ್ತು ಸಿಪ್ಪೆ ತೆಗೆಯಿರಿ. ಇದರ ಬಿಳಿ ಲೋಳೆ ತೆಗೆದುಕೊಂಡು ಅದನ್ನು ಒಂದು ಪಿಂಗಾಣಿಗೆ ಹಾಕಿ. ಇದಕ್ಕೆ ತೆಂಗಿನೆಣ್ಣೆ ಹಾಕಿಕೊಳ್ಳಿ ಮತ್ತು ಸಾಸ್ ಪ್ಯಾನ್ ನಲ್ಲಿ ಈ ಮಿಶ್ರಣವನ್ನು ಬಿಸಿ ಮಾಡಿ. 5-7 ನಿಮಿಷ ಕಾಲ ಹದ ಬೆಂಕಿಯಲ್ಲಿ ಇದನ್ನು ಬಿಸಿ ಮಾಡಿ. ನಿಮ್ಮ ಆಯ್ಕೆಯ ಸಾರಭೂತ ತೈಲವನ್ನು ಕೆಲವು ಹನಿ ಹಾಕಿ. ಇದನ್ನು ಸ್ಪ್ರೇ ಬಾಟಲಿಗೆ ಹಾಕಿಕೊಂಡು ಅದನ್ನು ಮುಂದೆ ಬಳಕೆ ಮಾಡಬಹುದು. ತಂಪಾದ ಜಾಗದಲ್ಲಿ ಇದನ್ನು ಇಟ್ಟರೆ ಎರಡು ವಾರ ಕಾಲ ಬಾಳಿಕೆ ಬರುವುದು.

      ಈರುಳ್ಳಿ ಎಣ್ಣೆ

      ಈರುಳ್ಳಿ ಎಣ್ಣೆ

      ಈರುಳ್ಳಿಯಲ್ಲಿ ಇರುವಂತಹ ಸಲ್ಫರ್ ಅಂಶವು ಕೂದಲು ಉದುರುವಿಕೆ ನಿಯಂತ್ರಿಸುವುದು ಮತ್ತು ಕೂದಲ ಬೆಳವಣಿಗೆಗೆ ನೆರವಾಗುವುದು. ಇದರಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣವು ತಲೆಹೊಟ್ಟು ಮತ್ತು ಇತರ ತಲೆಯ ಸೋಂಕು ನಿವಾರಣೆ ಮಾಡುವುದು.

      Most Read: ಈ 4 ರಾಶಿಚಕ್ರದವರು ನಾಯಕತ್ವ ಗುಣದಲ್ಲಿ ಎತ್ತಿದ ಕೈ!

      ಬೇಕಾಗುವ ಸಾಮಗ್ರಿಗಳು

      • 1 ಸಣ್ಣ ಗಾತ್ರದ ಈರುಳ್ಳಿ
      • 2 ಬೆಳ್ಳುಳ್ಳಿ ಎಸಲು
      • 2 ಚಮಚ ತೆಂಗಿನೆಣ್ಣೆ
      • ಕೆಲವು ಹನಿ ಸಾರಭೂತ ತೈಲ
      • Most Read: ನೆನಪಿಡಿ ಇಂತಹ ತಪ್ಪುಗಳನ್ನು ಎಂದೂ ಮಾಡಬೇಡಿ- 'ಪಿತೃ ದೋಷ' ಬರಬಹುದು!

        ತಯಾರಿಸುವ ವಿಧಾನ

        ಮಧ್ಯಮ ಗಾತ್ರ ಈರುಳ್ಳಿಯನ್ನು ಸಣ್ಣಸಣ್ಣ ತುಂಡುಗಳನ್ನಾಗಿ ಮಾಡಿ ಮತ್ತು ಬೆಳ್ಳುಳ್ಳಿ ಎಸಲನ್ನು ಜಜ್ಜಿಕೊಳ್ಳಿ. ಒಂದು ಸಣ್ಣ ಬಾಣಲೆಯಲ್ಲಿ ತೆಂಗಿನೆಣ್ಣೆ ಬಿಸಿ ಮಾಡಿ. ಅದಕ್ಕೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಹಾಕಿ. ಸಣ್ಣ ಬೆಂಕಿಯಲ್ಲಿ ಈ ಎಣ್ಣೆ ಬಿಸಿ ಮಾಡಿ ಮತ್ತು ಗುಳ್ಳೆಗಳು ಬರಲು ಆರಂಭವಾಗಲಿದೆ. ಇದರ ಬಳಿಕ ತೈಲವನ್ನು ತಣ್ಣಗಾಗಲು ಬಿಡಿ. ಇದಕ್ಕೆ ಕೆಲವು ಹನಿ ಸಾರಭೂತ ತೈಲ ಹಾಕಿ ಮತ್ತು ಸ್ಪ್ರೇ ಬಾಟಲಿಗೆ ಹಾಕಿ. ಇದನ್ನು ರೆಫ್ರೀಜರೇಟರ್ ನಲ್ಲೂ ಇಡಬಹುದು.

        ಶುಂಠಿ ಎಣ್ಣೆ

        ಶುಂಠಿ ಎಣ್ಣೆ

        ಶುಂಠಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳು ಇವೆ. ಇದು ತಲೆಯ ಸೋಂಕನ್ನು ನಿವಾರಣೆ ಮಾಡುವುದು. ಇದು ತಲೆ ಮತ್ತು ಕೂದಲನ್ನು ಶುಚಿಗೊಳಿಸಲು ನೆರವಾಗುವುದು.

        ಬೇಕಾಗುವ ಸಾಮಗ್ರಿಗಳು

        • 1 ಚಮಚ ತುರಿದ ಶುಂಠಿ
        • ½ ಕಪ್ ಆಲಿವ್ ತೈಲ
        • 2-3 ಹನಿ ರೋಸ್ಮೆರಿ ಸಾರಭೂತ ತೈಲ
        • ತಯಾರಿಸುವ ವಿಧಾನ

          ಕಡಿಮೆ ಬೆಂಕಿಯಲ್ಲಿ ಆಲಿವ್ ತೈಲವನ್ನು ಒಂದು ಸಣ್ಣ ಬಾಣಲೆಗೆ ಹಾಕಿ. ಇದಕ್ಕೆ ತುರಿದ ಶುಂಠಿ ಹಾಕಿಕೊಳ್ಳಿ. 4-5 ನಿಮಿಷ ಕಾಲ ಇದು ಬಿಸಿಯಾಗಲಿ ಮತ್ತು ಬಳಿಕ ಸೋಸಿಕೊಂಡು ತಂಪಾದ ಜಾಗದಲ್ಲಿಟ್ಟುಕೊಳ್ಳಿ.

English summary

Try These Home-made Hair Oils To Stop Hair Fall

Hair fall and hair thinning can turn out to be a nightmare to both men and women. And today we'll give you a permanent solution to your worries by introducing you to some home-made hair oils that you can try. These herbal hair oils can control hair loss to a great extent and promote hair growth. Hair loss can occur due to several reasons like excessive chemical use, environmental pollution, stress and even hormonal imbalance. Therefore, when you see the early signs of hair fall, do not take it lightly as it can lead to serious issues like baldness in the future.
Story first published: Saturday, September 29, 2018, 13:01 [IST]
X
Desktop Bottom Promotion