ಚಳಿಗಾಲದಲ್ಲಿ ಕೂದಲಿನ ಆರೈಕೆಗೆ ಸಲಹೆಗಳು

Posted By: Hemanth
Subscribe to Boldsky

ಚಳಿಗಾಲವೆಂದರೆ ಅದು ದೇಹವನ್ನು ಹಿಂಡಿಹಿಪ್ಪೆ ಮಾಡುವಂತಹ ಸಮಯ. ಯಾಕೆಂದರೆ ಈ ಸಮಯದಲ್ಲಿ ಶೀತ ವಾತಾವರಣದಲ್ಲಿ ದೇಹದ ಪ್ರತಿಯೊಂದು ಅಂಗಾಂಗಗಳಿಗೆ ಕೂಡ ಪ್ರಭಾವ ಉಂಟಾಗುವುದು. ಇದರಲ್ಲಿ ಕೂದಲು ಕೂಡ ಒಂದಾಗಿದೆ. ಆದರೆ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಬೇಕೆಂದರೆ ವಾರದಲ್ಲಿ ಮೂರು ಸಲವಾದರೂ ಕೂದಲನ್ನು ತೊಳೆಯಬೇಕು. ಅದರಲ್ಲೂ ಚಳಿಗಾಲದಲ್ಲಿ ಕೂದಲಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅತೀ ಅಗತ್ಯ. ಕೂದಲನ್ನು ಚಳಿಗಾಲದಲ್ಲಿ ತೊಳೆಯುವಾಗ ನೀವು ಪಾಲಿಸಬೇಕಾದ ಕೆಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಉಗುರುಬೆಚ್ಚಗಿನ ನೀರಿನಿಂದ ಕೂದಲು ತೊಳೆಯಿರಿ

ಚಳಿಗಾಲದಲ್ಲಿ ಬಿಸಿ ನೀರು ದೇಹಕ್ಕೆ ತುಂಬಾ ಹಿತವನ್ನು ನೀಡುತ್ತದೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಆದರೆ ಬಿಸಿಯಾದ ನೀರಿನಿಂದ ಕೂದಲು ತೊಳೆಯುವಂತಹ ತಪ್ಪನ್ನು ನೀವು ಮಾಡಬೇಡಿ. ಉಗುರುಬೆಚ್ಚಗಿನ ನೀರು ಮಾತ್ರ ಬಳಸಿ. ಬಿಸಿ ನೀರು ಕೂದಲನ್ನು ಎಳೆಗಳನ್ನು ಸ್ಥಿರವಲ್ಲದಂತೆ ಮಾಡುವುದು ಮತ್ತು ಇದರಿಂದ ಅದರ ಕೋಶಗಳು ತುಂಬಾ ದುರ್ಬಲವಾಗುವುದು.

hair wash

ಎರಡನ್ನು ಬಳಸಿ!

ಚಳಿಗಾಲವು ತುಂಬಾ ಒಣಗುವಂತೆ ಮಾಡುವುದು ಮತ್ತು ನಿಮ್ಮ ಕೂದಲು ಮೊದಲೇ ಒಣ ಕೂದಲಾಗಿದ್ದರೆ ಶಾಂಪೂ ಹಾಕಿ ತೊಳೆದರೆ ಮತ್ತಷ್ಟು ಕೂದಲು ಒಣಗುವುದರಲ್ಲಿ ಸಂಶಯವಿಲ್ಲ. ಮೊಶ್ಚಿರೈಸರ್ ಉಳಿದುಕೊಳ್ಳಲು ಕಂಡೀಷನರ್ ಬಳಸಿ. ಆದರೆ ಕೂದಲು ತುಂಬಾ ತೆಳು ಮತ್ತು ಎಣ್ಣೆಯುಕ್ತ ತಲೆಬುರುಡೆಯಿದ್ದರೆ ಸಲ್ಫೇಟ್ ಇಲ್ಲದಿರುವ ಶಾಂಪೂ ಬಳಸಿ.

ಸರಿಯಾಗಿ ಎಣ್ಣೆ ಹಚ್ಚಿ

ಅತಿಯಾಗಿ ತಲೆಬುರುಡೆಯು ಒಣಗಿ ಹೋದರೆ ಅದರಿಂದ ಕೋಶಗಳು ಸಡಿಲಗೊಂಡು ಕೂದಲು ಉದುರುವುದು ಮತ್ತು ತಲೆಹೊಟ್ಟು ಉಂಟಾಗುವುದು. ಚಳಿಗಾಲದಲ್ಲಿ ನೀವು ಕೂದಲಿಗೆ ಸರಿಯಾಗಿ ಎಣ್ಣೆ ಹಚ್ಚಿಕೊಳ್ಳಿ. ಇದರಿಂದ ತಲೆಬುರುಡೆಯಲ್ಲಿ ತೇವಾಂಶವು ಉಳಿದುಕೊಳ್ಳುವುದು.

ಶಾಂಪೂ ಹಾಕುವ ಮೊದಲು ತಲೆ ಬಾಚಿಕೊಳ್ಳಿ

ಶಾಂಪೂ ಹಾಕಿಕೊಳ್ಳುವ ಮೊದಲು ನೀವು ಸರಿಯಾಗಿ ಕೂದಲನ್ನು ಬೇರ್ಪಡಿಸಿಕೊಳ್ಳಿ. ಇದರಿಂದ ಕೂದಲು ತುಂಡಾಗುವುದು ಮತ್ತು ಗಡುಸಾಗುವುದು ತಪ್ಪುವುದು. ಕೂದಲಿಗೆ ತುಂಬಾ ಮೃಧುವಾಗಿರುವ ಬಾಚಣಿಗೆ ಬಳಸಿಕೊಳ್ಳಿ. ಕೂದಲು ತೊಳೆಯುವ ಮೊದಲು ಸರಿಯಾದ ಆರೈಕೆ ಕ್ರಮ ಪಾಲಿಸಿ ಇದು ತುಂಬಾ ಕಠಿಣವೆನಿಸಿದರೂ ನೀವು ವಾರದಲ್ಲಿ ಒಂದು ಸಲ ಕೂದಲು ತೊಳೆಯುವ ಮೊದಲು ಕೆಲವು ಕ್ರಮ ಪಾಲಿಸಬೇಕು. ಕೂದಲು ತೊಳೆಯುವ ಮೊದಲು ನೈಸರ್ಗಿಕ ಹೇರ್ ಪ್ಯಾಕ್ ಅಥವಾ ಕೂದಲಿನ ಪ್ರೋಟೀನ್ ಕ್ರೀಮ್ ಬಳಸಿ. ಕೂದಲು ತೊಳೆದ ಬಳಿಕ ಸರಿಯಾದ ಸೀರಮ್ ಬಳಸಿ.

haircare

ಕೂದಲು ತೊಳೆಯುವಾಗ ಒಂದಕ್ಕೊಂದನ್ನು ಉಜ್ಜಿಕೊಳ್ಳಬೇಡಿ.

ಕೂದಲು ತೊಳೆಯುವಾಗ ಒಂದಕ್ಕೊಂದನ್ನು ಉಜ್ಜಿಕೊಳ್ಳಬೇಡಿ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಕೈಬೆರಳುಗಳನ್ನು ಬಳಸಿಕೊಂಡು ವೃತ್ತಾಕಾರದಲ್ಲಿ ಕೂದಲಿಗೆ ಶಾಂಪೂ ಹಚ್ಚಿಕೊಳ್ಳಿ. ಅಂಗೈ ಬಳಸಬೇಡಿ ಅಥವಾ ಗಟ್ಟಿಯಾಗಿ ಉಜ್ಜಿಕೊಳ್ಳಬೇಡಿ.

ಬಿಸಿ ಎಣ್ಣೆಯ ಮಸಾಜ್

ಚಳಿಗಾಲದಲ್ಲಿ ಕೂದಲು ಒರಟು ಹಾಗೂ ಒಣಗಿದಂತೆ ಕಾಣುತ್ತದೆ. ಇದು ಮಾಯಿಶ್ಚರೈಸ್ ಅನ್ನು ಕಳೆದುಕೊಳ್ಳುತ್ತದೆ ಹಾಗೂ ಕೂದಲಿನ ಅಂದವನ್ನು ಬದಲಾಯಿಸುತ್ತದೆ. ಹಾಗಾಗಿ ಬಿಸಿ ಎಣ್ಣೆಯ ಮಸಾಜ್ ಕೂದಲಿನ ಶೈಲಿಯನ್ನು ಬದಲಾಯಿಸುತ್ತದೆ, ಹಾಗೂ ಮರು - ಹೈಡ್ರೇಟ್ಸ್ ಅನ್ನು ಒದಗಿಸುತ್ತದೆ. ಬಿಸಿ ಎಣ್ಣೆಯು ಚಳಿಗಾಲದಲ್ಲಿ ಉಂಟಾಗಿರುವ ಕೂದಲಿನ ಒರಟನ್ನು ಹೋಗಲಾಡಿಸುತ್ತದೆ. ಬಿಸಿ ಎಣ್ಣೆ ಮಸಾಜ್ ಅನ್ನು ಯಾವುದೇ ಎಣ್ಣೆಯನ್ನು ಬಳಸಿಕೊಂಡು ಕೂಡ ಮಾಡಬಹುದು. ಚಲಿಗಾಲದಲ್ಲಿ ಇದನ್ನು ನಿರಂತರವಾಗಿ ಮಾಡಿದರೆ, ತುಂಬಾ ಉಪಯುಕ್ತವಾಗಿರುತ್ತದೆ. 

haircare

ಕಂಡೀಷನರ್‌ಗಳು

ಚಳಿಗಾಲಕ್ಕೆ ಕಂಡೀಷನರ್‌ಗಳು ತುಂಬಾ ಉತ್ತಮವಾದುದು. ಉತ್ತಮ ಗುಣಮಟ್ಟದ ಕಂಡೀಷನರ್‌ಗಳಿಂದ ಕೂದಲಿನ ತುದಿ ಸೀಳಾಗುವಿಕೆ ಕಡಿಮೆಯಾಗುತ್ತದೆ. ಚಳಿಗಾಲದಲ್ಲಿ ಕಂಡೀಷನ್‌ನ ಬಳಕೆ ಅತ್ಯವಶ್ಯಕವಾದುದು. ನೀವು ಶಾಂಪು ಬಳಸುವುದಕ್ಕಿಂತ ಮುನ್ನ ಕಂಡೀಷನರ್ ಅನ್ನು ಬಳಸಬಹುದು. ಕಂಡೀಷನರ್ ಅನ್ನು ಹಚ್ಚಿ 5 ನಿಮಿಷಗಳ ಕಾಲ ಹಾಗೆ ಬಿಡಿ. ಕೂದಲಿನ ತುದಿಗೆ ಹಚ್ಚುವುದು ಉತ್ತಮ ಬುಡಕ್ಕೆ ಕಂಡೀಷನರ್ ಅಗತ್ಯವಿಲ್ಲ. ನಂತರ ತಣ್ಣೀರಿನಲ್ಲಿ ಕೂದಲು ತೊಳೆಯಿರಿ. ಶಾಂಪೂ ಬಳಸಿದ ನಂತರ ಕೂಡ ಈ ವಿಧಾನವನ್ನು ಮಾಡಿ. 

ಹೇರ್ ಪ್ಯಾಕ್‌ಗಳು

ಹೇರ್ ಪ್ಯಾಕ್‌ಗಳನ್ನು ನೈಸರ್ಗಿಕ ಸಾಮಾಗ್ರಿಗಳಿಂದ ಮಾಡಿಕೊಳ್ಳುವುದು ತುಂಬಾ ಉತ್ತಮವಾದುದು. ಈ ಹೇರ್ ಪ್ಯಾಕ್‌ಗಳು ಕೂದಲಿಗೆ ತೇವಾಂಶವನ್ನು ಒದಗಿಸುವುದರೊಂದಿಗೆ, ತಲೆಹೊಟ್ಟನ್ನು ನಿವಾರಿಸಿ ಕೂದಲಿನ ಉತ್ತಮ ಬೆಳವಣಿಗೆಗೆ ಸಹಕಾರಿಯಾಗಿರುತ್ತವೆ. ನೈಸರ್ಗಿಕವಾಗಿ ದೊರೆಯುವ ಮನೆಯಲ್ಲೇ ಮಾಡಿಕೊಳ್ಳಬಹುದಾದ ಹೇರ್ ಪ್ಯಾಕ್‌ಗಳು ಸಾಕಷ್ಟಿವೆ, ಆದರೆ ಅವುಗಳ ಉಪಯೋಗವನ್ನು ನಾವು ಯೋಗ್ಯ ರೀತಿಯಲ್ಲಿ ಮಾಡಿಕೊಳ್ಳಬೇಕು. ಅಂದರೆ ಮೊಸರು, ಹೆನ್ನಾ (ಮದರಂಗಿ), ಹಾಲು, ಬೇವು ಹಾಗೂ ಲಿಂಬೆ ಹಣ್ಣು. ಈ ಸಾಮಾಗ್ರಿಗಳಿಂದ ಮಾಡಿದ ಹೇರ್ ಪ್ಯಾಕ್‌ಗಳು ಉತ್ತಮ ಫಲಿತಾಂಶವನ್ನು ನೀಡುವುದರಲ್ಲಿ ಸಂಶಯವಿಲ್ಲ. 

hair wash

ಶಾಂಪು ಮತ್ತು ಕಂಡೀಷನರ್‌ಗಳು

ಪ್ರತಿ ಋತುವಿಗೆ ಅನುಗುಣವಾಗಿ ನಿಮ್ಮ ಶ್ಯಾಂಪು ಮತ್ತು ಕಂಡೀಷನರ್‌ಗಳನ್ನು ಬದಲಾಯಿಸಿ. ನಿಮ್ಮ ಕೂದಲಿಗೆ ಹೊಂದಿಕೊಳ್ಳುವ ಶಾಂಪೂವನ್ನು ಚಳಿಗಾಲದಲ್ಲಿ ಬಳಸಿ. ಕೂದಲು ತಜ್ಞರನ್ನು ಭೇಟಿ ಮಾಡಿ ಅವರ ಸಲಹೆಯಂತೆ ಶಾಂಪು ಮತ್ತು ಕಂಡೀಷನರ್ ಬಳಸಿ.

English summary

Tips to wash your hair to prevent hair loss winter

washing hair during winters is really a task. But for healthy hair, it is important that you wash your hair at least thrice a week. However, during winters you must take extra care of your hair and along with that make some tweaks in your hair washing regimen since that is the first step to hair care. Here are a few tips that you should keep in mind while washing your hair during winters.