Latest Updates
-
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ!
ಈ ಟ್ರಿಕ್ಸ್ ಅನುಸರಿಸಿ, ಕೂದಲು ದಪ್ಪವಾಗಿ, ಉದ್ದವಾಗಿ ಬೆಳೆಯುತ್ತೆ...
ಮುಖದ ಸೌಂದರ್ಯವನ್ನು ಆಕರ್ಷಕವಾಗಿ ಕಾಣುವಂತೆ ಮಾಡುವುದರಲ್ಲಿ ಕೇಶರಾಶಿಯ ಪಾತ್ರ ಮಹತ್ವದ್ದು ಎನ್ನಬಹುದು. ದೃಢವಾದ ಹಾಗೂ ಆರೋಗ್ಯವಂತ ಕೇಶರಾಶಿಯು ಸೌಂದರ್ಯವನ್ನು ಸದಾ ಕಂಗೊಳಿಸುವಂತೆ ಮಾಡುವುದು. ಅದೇ ಒರಟಾದ ಕೂದಲು ಅಥವಾ ಶುಷ್ಕತೆಯಿಂದ ಕೂಡಿರುವ ಕೇಶರಾಶಿಯು ನಮ್ಮ ಸೌಂದರ್ಯ ಮಂಕಾಗಿ ಕಾಣುವಂತೆ ಮಾಡುವುದು. ಜೊತೆಗೆ ಜೀವನದಲ್ಲಿ ಉತ್ಸಾಹಗಳಿರದಂತೆ ಶೋಭಿಸುವುದು.
ಧೂಳು, ಮಾಲಿನ್ಯ, ಅನುಚಿತ ಪೋಷಣೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ಕೇಶರಾಶಿಯು ಬಹುಬೇಗ ತನ್ನ ಗುಣಮಟ್ಟವನ್ನು ಕಳೆದುಕೊಳ್ಳುವುದು. ಜೊತೆಗೆ ಬಣ್ಣದಲ್ಲೂ ಬದಲಾವಣೆ ಹೊಂದುವುದು. ನೈಸರ್ಗಿಕವಾಗಿಯೇ ಹಾನಿಗೊಳಗಾದ ಕೇಶರಾಶಿಗೆ ಕೃತಕ ಆರೈಕೆ ಮಾಡುವುದರಿಂದ ಯಾವುದೇ ಪರಿಣಾಮಕಾರಿ ಬೆಳವಣಿಗೆ ಉಂಟಾಗದು. ಬದಲಿಗೆ ನೈಸರ್ಗಿಕ ವಿಧಾನಗಳಿಂದಲೇ ಪೋಷಣೆ ಮಾಡುವುದರ ಮೂಲಕ ಕೂದಲ ಆರೋಗ್ಯವನ್ನು ಕಾಪಾಡಬಹುದು. ಆದರೆ ಇವೆಲ್ಲವೂ ಬಹಳ ದೀರ್ಘಕಾಲ ತೆಗೆದುಕೊಳ್ಳುವುದು.
ನಿಮಗೂ ನಿಮ್ಮ ಕೇಶರಾಶಿಯು ಆರೋಗ್ಯ ಕಳೆದುಕೊಂಡಿದೆ ಹಾಗೂ ಬಹಳ ತೆಳುವಾಗಿ ಗೋಚರಿಸುತ್ತದೆ ಎಂದಾದರೆ ಕೆಲವು ಸಲಹೆಗಳನ್ನು ಅಳವಡಿಸಿದರೆ ಹೇರಳವಾದ ಕೇಶರಾಶಿಯನ್ನು ಹೊಂದಿರುವಂತೆ ಕಾಣುವುದು. ನೀವು ಈ ರೀತಿಯ ಒಂದು ಉಪಾಯಗಳ ಹುಡುಕಾಟದಲ್ಲಿದ್ದರೆ ನಿಮಗೆ ಈ ಸಲಹೆಗಳು ಹೆಚ್ಚು ಪ್ರಯೋಜನಕಾರಿಯಾಗುವುದು....

ಕೂದಲು ಬಾಚುವುದು
ಕೂದಲಿನ ಮಸಾಜ್ ಉತ್ತಮ ಆರೋಗ್ಯ ನೀಡುವುದು. ಕೂದಲನ್ನು ಮೃದುವಾಗಿ ಹಿಮ್ಮುಖವಾಗಿ ಬಾಚುವುದರಿಂದ ಆರೋಗ್ಯಕರ ಕೂದಲನ್ನು ಹೊಂದಬಹುದು. ಕೂದಲುಗಳನ್ನು ಸರಿಯಾಗಿ ವಿಭಾಗ ಮಾಡಿಕೊಂಡು ಹಿಮ್ಮುಖನಾಗಿ ಬಾಚಿ. ಅದು ಬೇರುಗಳ ತನಕ ಹೋಗಬೇಕು. ಈ ವಿಧಾನದಿಂದ ಕೂದಲು ದಟ್ಟವಾಗಿ ಇರುವಂತೆ ಕಾಣುವುದು.

ಕೂದಲು ಬಾಚುವುದು
ಸ್ನಾನ ಮಾಡಿದ ಕೂದಲು ಅಥವಾ ಒದ್ದೆ ಕೂದಲನ್ನು ಒಣಗಿಸುವಾಗ ತಲೆ ಕೆಳಗೆ ಮಾಡಿ ಒಣಗಿಸಿ. ಅಂದರೆ ಕೂದಲುಗಳ ಬೇರು ಮೇಲ್ಭಾಗದಲ್ಲಿ ಬರುವಂತೆ ಮಾಡಿಕೊಳ್ಳಬೇಕು. ಹೀಗೆ ಒಣಗಿಸಿಕೊಂಡ ಕೇಶರಾಶಿಯು ಹೇರಳವಾಗಿರುವಂತೆ ಕಾಣುವುದು.

ವಿಭಜನೆಯನ್ನು ಬದಲಾಯಿಸಿ
ಈ ವಿಧಾನದ ಅನುಕರಣೆಗೆ ಹೆಚ್ಚು ಉಪಕರಣಗಳ ಅಗತ್ಯವಿರುವುದಿಲ್ಲ. ನಿಮ್ಮ ಕೂದಲನ್ನು ವಿಭಜಿಸಿ. ಈ ವಿಧಾನವನ್ನು ನಿತ್ಯ ವಿಭಜಿಸುವುದರ ವಿರುದ್ಧ ದಿಕ್ಕಿಗೆ ವಿಭಜಿಸಿ. ಆಗ ಕೂದಲು ಹೇರಳವಾಗಿರುವಂತೆ ಕಾಣುವುದು. ನಿತ್ಯವೂ ಒಂದೇ ಭಾಗದಲ್ಲಿ ವಿಭಜಿಸುವುದರಿಂದ ಕೂದಲು ಸಮತಟ್ಟಾಗಿ ಕುಳಿತುಕೊಂಡಿರುತ್ತದೆ.

ಮಲಗುವಾಗ ಬನ್ ಮಾಡಿಕೊಳ್ಳಿ
ಕೂದಲು ದಟ್ಟವಾಗಿ ಕಂಗೊಳಿಸಿದರೆ ಹೆಚ್ಚು ಖುಷಿಯಾಗುವುದು. ಹಾಗಾಗಿ ರಾತ್ರಿ ಮಲಗುವ ಮುನ್ನ ಕೂದಲನ್ನು ಬನ್ ವಿನ್ಯಾಸದಲ್ಲಿ ಕಟ್ಟಿಕೊಂಡು ಮಲಗಬೇಕು. ಮರುದಿನ ಕೂದಲಿಗೆ ಯಾವುದೇ ತೊಂದರೆ ಉಂಟಾಗದು. ಜೊತೆಗೆ ದಟ್ಟವಾದ ಕೇಶರಾಶಿಯನ್ನು ಹೊಂದಿರುವಂತೆ ವಿನ್ಯಾಸಗೊಳಿಸಬಹುದು. ರಾತ್ರಿ ಬನ್ ವಿನ್ಯಾಸ ಮಾಡಿಕೊಳ್ಳುವುದರಿಂದ ಬೆಳಗ್ಗೆ ಕೂದಲು ಅಲೆಗಳ ರೂಪದಂತೆ ಹೆಚ್ಚು ಇದ್ದಂತೆ ಶೋಭಿಸುವುದು.

ಕಂಡಿಷನರ್ ಬಳಸಿ
ಕೂದಲು ತೊಳೆಯುವ ಪ್ರಕ್ರಿಯೆಯನ್ನು ಬದಲಿಸುವುದರ ಕೂದಲು ಹೆಚ್ಚಿರುವಂತೆ ಕಾಣುವುದು. ಶಾಂಪೂ ಬಳಸುವ ಮನ್ನ ಕಂಡೀಷನರ್ ಅನ್ವಯಿಸಿದರೆ ಕೂದಲು ನಯವಾಗಿ ಹಾಗೂ ಹೊಳಪಿನಿಂದ ಕೂಡಿರುವಂತೆ ಕಾಣುವುದು. ಅಲ್ಲದೆ ಕೇಶರಾಶಿಯು ದಪ್ಪವಾಗಿರುವಂತೆ ಕಾಣುವುದು.

ರೋಲರ್ ಬಳಸಿ
ರೋಲರ್ ಬಳಸುವುದರಿಂದ ಕೇಶರಾಶಿಯನ್ನು ಹೆಚ್ಚು ಹೊಂದಿರುವಂತಹ ಬ್ರಮೆಗೆ ಒಳಗಾಗುವಂತೆ ಮಾಡುವುದು. ಪ್ಲಾಸ್ಟಿಕ್ ಅಥವಾ ವೆಲ್ಕೋ ರೊಲರ್ ಗಳೊಂದಿಗೆ ಸುತ್ತಿಕೊಳ್ಳಿ. ನಂತರ 20 ಮಿಷಗಳ ಕಾಲ ಬಿಟ್ಟು, ರೋಲರ್ ತೆಗೆದು ಬಾಚಿಕೊಳ್ಳಿ ಆಗ ಕೇಶರಾಶಿ ಹೆಚ್ಚಿರುವಂತೆ ಕಾಣುವುದು.

ಬೇಬಿ ಪೌಡರ್ ಬಳಸಿ
ಜಿಡ್ಡಿನಿಂದ ಕೂಡಿರುವ ಕೂದಲು ಹೆಚ್ಚು ಎಣ್ಣೆಯಿಂದ ಕೂಡಿರುವಂತೆ ಕಾಣುವುದು. ಜೊತೆಗೆ ಕೂದಲು ಅಂಟಿಕೊಂಡಿರುವುದರಿಂದ ಕಡಿಮೆ ಕೂದಲು ಹೊಂದಿರುವಂತೆ ಕಾಣುವುದು. ಹಾಗಾಗಿ ನಿಮಗೆ ಒಗ್ಗುವ ಬೇಬಿ ಪೌಡ್‍ಅನ್ನು ಕೂದಲಿಗೆ ಅನ್ವಯಿಸಿ ಬಾಚಿಕೊಳ್ಳಿ. ಇದರಿಂದ ಕೂದಲು ದಪ್ಪವಾಗಿರುವಂತೆ ಕಾಣುವುದು.

ಶುಷ್ಕ ಕೇಶರಾಶಿಯ ಶಾಂಪೂ
ಶುಷ್ಕ ಕೇಶರಾಶಿಯ ಶಾಂಪೂ ಬಳಸುವುದರಿಂದ ಕೂದಲು ಬಹುಬೇಗ ಒಣಗುವುದರ ಜೊತೆಗೆ ಹೆಚ್ಚು ಕೂದಲು ಹೊಂದಿರುವಂತೆ ತೋರುವುದು. ಆದರೆ ಈ ವಿಧಾನವನ್ನು ನಿತ್ಯವೂ ಅನ್ವಯಿಸಿದರೆ ಅಡ್ಡ ಪರಿಣಾಮ ಬೀರುವುದು. ಗಡಿಬಿಡಿಯ ಸಂದರ್ಭದಲ್ಲಿ ಇಂತಹ ಪ್ರಯೋಗವನ್ನು ಒಮ್ಮೆ ಮಾಡಬಹುದು.



Click it and Unblock the Notifications











