For Quick Alerts
ALLOW NOTIFICATIONS  
For Daily Alerts

ಗುಂಗುರು ಕೂದಲಿನ ಸಮಸ್ಯೆ ಇದೆಯೇ? ಇಲ್ಲಿದೆ ನೋಡಿ ಸರಳ ಟಿಪ್ಸ್

|

ಮಹಿಳೆಯರ ಸೌಂದರ್ಯದಲ್ಲಿ ಕೂದಲು ಪ್ರಮುಖ ಪಾತ್ರ ವಹಿಸುವುದು. ಕೂದಲು ಉದ್ದ, ಕಪ್ಪು ಹಾಗೂ ದಪ್ಪಗೆ ಇದ್ದರೆ ಆಗ ಸೌಂದರ್ಯಕ್ಕೆ ಮೆರಗು. ಇಂತಹ ಕೂದಲು ಪಡೆಯಲು ತುಂಬಾ ಶ್ರಮ ಪಡಬೇಕು. ಆದರೆ ಗುಂಗುರು ಕೂದಲು ಹೆಚ್ಚಿನ ಮಹಿಳೆಯರಲ್ಲಿ ಇರುವುದು. ಇದನ್ನು ಸರಿಯಾಗಿ ಬಳಸಿಕೊಂಡರೆ ಅದು ಕೂಡ ಸೌಂದರ್ಯ ವೃದ್ಧಿಸುವುದು. ಗುಂಗುರು ಕೂದಲು ಇದ್ದರೆ ಅದನ್ನು ಆರೈಕೆ ಮಾಡಲು ಎಷ್ಟು ಕಷ್ಟಪಡಬೇಕಾಗುತ್ತದೆ ಎನ್ನುವುದು ಅದು ಇರುವವರಿಗೆ ತಿಳಿದಿರುವ ವಿಚಾರವಾಗಿದೆ. ಇದರ ಆರೈಕೆ ಮಾಡುವುದು ಬೇರೆ ಕೂದಲಿನಂತೆ ಅಷ್ಟು ಸುಲಭವಲ್ಲ.

ಆದರೆ ಇದು ಅಸಾಧ್ಯವೂ ಅಲ್ಲ. ಇದನ್ನು ಆರೈಕೆ ಮಾಡಲು ಕೆಲವೊಂದು ಪರಿಣಾಮಕಾರಿಯಾಗಿರುವ ವಿಧಾನಗಳನ್ನು ಅನುಸರಿಸಿಕೊಂಡು ಹೋದರೆ ಅದರಿಂದ ಹೆಚ್ಚಿನ ಲಾಭವಿದೆ. ಈ ವಿಧಾನಗಳಿಂದ ನೀವು ಗುಂಗುರು ಕೂದಲಿನ ಆರೈಕೆ ಮಾಡಿ, ಅದನ್ನು ಸರಿಯಾದ ರೀತಿಯಲ್ಲಿ ನಿಮಗೆ ಬೇಕಾದಂತೆ ವಿನ್ಯಾಸ ಮಾಡಿಕೊಳ್ಳಬಹುದು. ಗುಂಗುರು ಕೂದಲಿನ ಆರೈಕೆಯಲ್ಲಿ ಪಾಲಿಸಬೇಕಾದ ಕೆಲವು ನಿಯಮಗಳನ್ನು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ಪಾಲಿಸಿಕೊಂಡು ಹೋಗಿ.

ಕೂದಲಿನ ಒಣಗಿರುವಾಗ ಕತ್ತರಿಸಿ

ಕೂದಲಿನ ಒಣಗಿರುವಾಗ ಕತ್ತರಿಸಿ

ಒಣ ಕೂದಲನ್ನು ಕತ್ತರಿಸಲು ಹೋಗಿ ಎಂದು ಯಾಕೆ ಹೇಳುತ್ತಿರಬಹುದೆಂದು ನೀವು ಭಾವಿಸಬಹುದು. ಯಾಕೆಂದರೆ ಹೆಚ್ಚಿನವರು ಒಣ ಕೂದಲು ಕತ್ತರಿಸಿಕೊಳ್ಳಲ್ಲ. ಗುಂಗುರು ಕೂದಲು ತುಂಬಾ ಕ್ಲಿಷ್ಟ ಹಾಗೂ ಒದ್ದೆಯಾಗಿರುವಾಗ ಮತ್ತಷ್ಟು ಭಿನ್ನವಾಗಿರುವುದು. ಇದು ಒಣಗಿದ ಬಳಿಕ ಯಾವ ರೀತಿಯಲ್ಲಿ ವಿನ್ಯಾಸವಾಗುವುದು ಎಂದು ಹೇಳಲು ಆಗಲ್ಲ. ಇದರಿಂದ ನೀವು ಒಣ ಕೂದಲನ್ನು ಕತ್ತರಿಸಿಕೊಂಡರೆ ಒಳ್ಳೆಯದು.

ಕೂದಲು ಒದ್ದೆಯಾಗಿರುವಾಗಲೇ ಇದನ್ನು ವಿನ್ಯಾಸಗೊಳಿಸಿ

ಕೂದಲು ಒದ್ದೆಯಾಗಿರುವಾಗಲೇ ಇದನ್ನು ವಿನ್ಯಾಸಗೊಳಿಸಿ

ಕೂದಲು ತೊಳೆದು ಬಂದ ಕೂಡಲೇ ಅದು ಒದ್ದೆಯಾಗಿರುವಾಗಲೇ ನೀವು ಕೂದಲನ್ನು ಬಾಚಿಕೊಳ್ಳಿ. ಗುಂಗುರು ಕೂದಲು ಇರುವ ಮಹಿಳೆಯರು ಮಾಡುಬಹುದಾದ ಒಳ್ಳೆಯ ಕೆಲಸವಿದು. ನೀವು ಬೆರಳುಗಳನ್ನು ಬಳಸಿ ಇದನ್ನು ವಿನ್ಯಾಸ ಮಾಡಬಹುದು ಅಥವಾ ಬಾಚಣಿಗೆ ಬಳಸಬಹುದು. ಇದರಿಂದ ಒಣಗಿದ ಬಳಿಕ ಇದು ಗಂಟುಗಂಟಾಗಿರದೆ ಸರಿಯಾಗಿ ನಿರ್ವಹಿಸಲು ಆಗುವುದು.

Most Read:ನೀವು ಬೆಳಗ್ಗೆ ಕುಡಿಯಬೇಕಾದ 9 ಆರೋಗ್ಯಕಾರಿ ಪಾನೀಯಗಳು

ಗಾಳಿಯಲ್ಲಿ ಒಣಗಲಿ

ಗಾಳಿಯಲ್ಲಿ ಒಣಗಲಿ

ಡ್ರೈಯರ್ ಬಳಸಿಕೊಂಡು ಕೂದಲು ಒಣಗಿಸುವ ಬದಲು ನೀವು ಗಾಳಿಯಲ್ಲಿಯೇ ಕೂದಲನ್ನು ಒಣಗಲು ಬಿಡಿ. ಇದಕ್ಕೆ ಹೆಚ್ಚಿನ ಸಮಯ ಬೇಕಾಗಬಹುದು. ಆದರೆ ಇದು ನಿಮ್ಮ ಕೂದಲಿಗೆ ಒಳ್ಳೆಯದು ಮತ್ತು ಇದು ಗಂಟುಗಳನ್ನು ನಿವಾರಣೆ ಮಾಡುವುದು. ಟವೆಲ್ ನಿಂದ ಅರ್ಧ ಒಣಗಿಸಿದ ಬಳಿಕ ನೀವು ಗಾಳಿಯಲ್ಲಿ ಹಾಗೆ ಬಿಟ್ಟುಬಿಡಿ.

ಆಲ್ಕೋಹಾಲ್ ಇರುವ ಉತ್ಪನ್ನ ಬಳಸಬೇಡಿ

ಆಲ್ಕೋಹಾಲ್ ಇರುವ ಉತ್ಪನ್ನ ಬಳಸಬೇಡಿ

ನಿಮ್ಮ ಕೂದಲಿಗೆ ಆಲ್ಕೋಹಾಲ್ ಇರುವಂತಹ ಯಾವುದೇ ರೀತಿಯ ಉತ್ಪನ್ನಗಳನ್ನು ಬಳಸಬೇಡಿ. ಜೆಲ್, ಹೇರ್ ಸ್ಪ್ರೇ ಅಥವಾ ಕೆಲವು ಸೆರಮ್ ಗಳಲ್ಲಿ ಆಲ್ಕೋಹಾಲ್ ಅಂಶವು ಇರುವುದು. ಇದನ್ನು ಕೂದಲಿನ ತೇವ ಹೀರಿಕೊಳ್ಳುವುದು ಮತ್ತು ಮತ್ತಷ್ಟು ಒಣಗುವಂತೆ ಮಾಡುವುದು. ಇದರಿಂದ ಕೂದಲು ತುಂಡಾಗುವುದು ಅಥವಾ ಹಾನಿಯಾಗುವುದು. ಇದರಿಂದ ಗುಂಗುರು ಕೂದಲು ಇರುವಂತಹವರು ಆದಷ್ಟು ಮಟ್ಟಿಗೆ ಆಲ್ಕೋಹಾಲ್ ಇರುವಂತಹ ಉತ್ಪನ್ನಗಳನ್ನು ಬಳಸಬೇಡಿ.

Most Read:ಚಿಕನ್- ಮಟನ್‌ಗಿಂತಲೂ ಇಂತಹ ಸಸ್ಯಾಹಾರಿ ಆಹಾರಗಳು ತುಂಬಾನೇ ಆರೋಗ್ಯಕಾರಿ

ಸಿಲ್ಕ್ ನ ತಲೆದಿಂಬು ಬಳಸಿ

ಸಿಲ್ಕ್ ನ ತಲೆದಿಂಬು ಬಳಸಿ

ಕಾಟನ್ ತಲೆದಿಂಬಿನ ಬದಲು ಸಿಲ್ಕ್ ನ ತಲೆದಿಂಬನ್ನು ಬಳಸಲು ಹೇಳಿರುವುದು ಯಾಕೆ ಎಂದು ನಿಮಗೆ ಅಚ್ಚರಿಯಾಗಿರಬಹುದು. ಆದರೆ ಹತ್ತಿಯು ನಿಮ್ಮ ಕೂದಲಿಗೆ ತಿಳಿಯದಂತೆ ಹಾನಿ ಮಾಡುವುದು. ಹತ್ತಿಯಲ್ಲಿ ಇರುವಂತಹ ನಾರಿನಾಂಶವು ಕೂದಲಿನಲ್ಲಿ ಇರುವಂತಹ ತೇವ ಹೀರಿಕೊಳ್ಳುವುದು. ಇದರಿಂದ ಕೂದಲು ಗಂಟುಗಂಟಾಗಿ ಒರಟಾಗುವುದು. ಇದರಿಂದಾಗಿ ನೀವು ತುಂಬಾ ನಯವಾಗಿರುವ ಸಿಲ್ಕ್ ತಲೆದಿಂಬು ಬಳಸಿ. ಇದರಿಂದ ಕೂದಲು ನಯವಾಗಿರುವುದು. ನೀವು ಗುಂಗುರು ಕೂದಲು ಹೊಂದಿದ್ದರೆ ಈ ವಿಧಾನಗಳನ್ನು ಗಮನದಲ್ಲಿಟ್ಟುಕೊಳ್ಳಿ ಮತ್ತು ಸರಿಯಾದ ರೀತಿಯಲ್ಲಿ ಆರೈಕೆ ಮಾಡಿ.

English summary

Simple tips for curly hair, every Girl Must Know!

If you are the one with curly hair, you might know what we mean by taking care of and maintaining curly hair. It is definitely not easy to tame curly hair, but again, it is not an impossible task. Well, if you think about it, curly hair can be managed efficiently if you follow certain rules. These specific rules will help you to embrace your curls in the right way and make the most of your natural tresses.
Story first published: Friday, October 12, 2018, 18:07 [IST]
X
Desktop Bottom Promotion