ಎಲ್ಲರ ಎದುರು ನೀವು ಆಕರ್ಷಕವಾಗಿ ಕಾಣಬೇಕು ಎಂದರೆ ನಿಮ್ಮ ಕೇಶರಾಶಿಯು ಹೆಚ್ಚು ಆಕರ್ಷಣೆಯಿಂದ ಕೂಡಿರಬೇಕು. ಹಾಗೊಮ್ಮೆ ನಿಮ್ಮ ಕೇಶರಾಶಿಯು ಅಷ್ಟು ಸುಂದರವಾಗಿ ಕಾಣದು ಎಂದಾದರೆ ನಿಮ್ಮ ಸೌಂದರ್ಯವೂ ಅಷ್ಟು ಆಕರ್ಷಣೆಯನ್ನು ಪಡೆದುಕೊಳ್ಳುವುದಿಲ್ಲ. ಎಲ್ಲಾ ಅಲಂಕಾರಗಳು ಮಂಕಾಗಿ ಕಾಣಿಸುತ್ತವೆ. ಹಾಗಾಗಿಯೇ ಕೇಶಗಳನ್ನು ಕಾಂತಿಗೊಳಿಸಲು ರಾಸಾಯನಿಕ ಪದಾರ್ಥಗಳನ್ನು ಬಳಸಿರುವ ಶಾಂಪೂಗಳನ್ನು ಬಳಸುತ್ತೇವೆ. ಈ ಬಗೆಯ ಆರೈಕೆಯಿಂದ ಒಮ್ಮೆ ಕೇಶವು ಸುಂದರವಾದ ಹೊಳಪನ್ನು ಕಂಡರೂ ಸಹ ಪುನಃ ತನ್ನ ಆರೋಗ್ಯವನ್ನು ಕಳೆದುಕೊಳ್ಳುತ್ತದೆ.
ದೀರ್ಘಕಾಲದ ವರೆಗೆ ಕೇಶರಾಶಿಯು ಆರೋಗ್ಯದಿಂದ ಕೂಡಿರಬೇಕು ಅಥವಾ ಹೊಳಪಿನಿಂದ ಕಂಗೊಳಿಸಬೇಕು ಎನ್ನುವ ಆಸೆ ನಿಮಗಿದ್ದರೆ ಮೊಟ್ಟೆಯ ಮೊರೆ ಹೋಗಿ. ಕೆಲವು ಆರೋಗ್ಯಕರ ಶಾಂಪೂಗಳೊಂದಿಗೆ ಮೊಟ್ಟೆಯನ್ನು ಮಿಶ್ರಣಮಾಡಿ. ಕೂದಲಿಗೆ ಅನ್ವಯಿಸಿ. ಆಗ ಕೇಶರಾಶಿಯು ಅತ್ಯುತ್ತಮ ಆರೋಗ್ಯವನ್ನು ಪಡೆದುಕೊಳ್ಳುವುದು. ಜೊತೆಗೆ ಆಕರ್ಷಣೆಯಿಂದ ಕಂಗೊಳಿಸುವುದು. ಹಾಗಾದರೆ ಆ ವಿಧಾನಗಳು ಯಾವವು? ಎನ್ನುವುದನ್ನು ತಿಳಿದುಕೊಳ್ಳಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ..
ಮೊಟ್ಟೆ +ಆಲಿವ್ ಎಣ್ಣೆ + ಶಾಂಪೂ
*1 ಟೀ ಚಚಮ ಆಲಿವ್ ಎಣ್ಣೆ, 1 ಟೀ ಚಮಚ ನಿಂಬೆ ರಸ, 1 ಟೇಬಲ್ ಚಮಚ ಮಂದವಾದ ಶಾಂಪೂ ಸೇರಿಸಿ ಮಿಶ್ರಗೊಳಿಸಿ.
*ಮಿಶ್ರಣಕ್ಕೆ ಅರ್ಧ ಕಪ್‍ಬೆಚ್ಚಗಿನ ನೀರನ್ನು ಸೇರಿಸಿ, ನಯವಾದ ಮಿಶ್ರಣವನ್ನು ತಯಾರಿಸಿ.
*ನಂತರ ತಲೆಗೆ ಅನ್ವಯಿಸಿ, ಸ್ವಲ್ಪ ಸಮಯ ಬಿಡಿ.
*ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಉತ್ತಮ ಪರಿಣಾಮವನ್ನು ಪಡೆಯಲು *ವಾರಕ್ಕೊಮ್ಮೆ ಈ ಕ್ರಮವನ್ನು ಅನ್ವಯಿಸಿ.
ಮೊಟ್ಟೆ -ಆಲೋವೆರಾ- ಶಾಂಪೂ
*ಒಂದು ಮೊಟ್ಟೆಯ ಬಿಳಿ ಭಾಗಕ್ಕೆ, 3 ಟೇಬಲ್ ಚಮಚ ಅಲೋವೆರಾ ಜೆಲ್ ಮತ್ತು 2 ಟೇಬಲ್ ಚಮಚ ಮಂದವಾದ ಶಾಂಪೂವನ್ನು ಸೇರಿಸಿ.
*ಮಿಶ್ರಣವನ್ನು ತಲೆಗೆ ಅನ್ವಯಿಸಿ, ಸ್ವಲ್ಪ ಸಮಯದ ಬಳಿಕ ತೊಳೆಯಿರಿ.
*ಗಣನೀಯವಾಗಿ ಈ ಕ್ರಮವನ್ನು ಅನ್ವಯಿಸಿದರೆ ತಲೆ ಹೊಟ್ಟು, ಶಿಲೀಂಧ್ರಗಳ ಸೋಂಕು ನಿವಾರಣೆಯಾಗುವುದು.
ಮೊಟ್ಟೆ-ಬಾದಾಮಿ-ಜೇನುತುಪ್ಪ-ಶಾಂಪೂ
*1 ಟೇಬಲ್ ಚಮಚ ಬಾದಾಮಿ ಎಣ್ಣೆ, 1 ಟೇಬಲ್ ಚಮಚ ಹ್ಯಾಜೆಲ್ ಹರ್ಬ್, 2 ಟೇಬಲ್ ಚಮಚ ಶಾಂಪೂ, 1 ಟೀ ಚಮಚ ಗುಲಾಬಿ ನೀರು ಹಾಗೂ ಒಂದು ಮೊಟ್ಟೆಯನ್ನು ಸೇರಿಸಿ, ಮಿಶ್ರಗೊಳಿಸಿ.
*ಅಗತ್ಯವಿದ್ದರೆ ಅರ್ಧ ಕಪ್ ನೀರನ್ನು ಸೇರಿಸಿ.
*ಮಿಶ್ರಣವನ್ನು ತಲೆಗೆ ಅನ್ವಯಿಸಿ, ಸ್ವಲ್ಪ ಸಮಯದ ಬಳಿಕ ತೊಳೆಯಿರಿ.
*ಗಣನೀಯವಾಗಿ ಈ ಕ್ರಮವನ್ನು ಅನ್ವಯಿಸಿದರೆ ಕೂದಲು ಹೊಳಪನ್ನು ಪಡೆದುಕೊಳ್ಳುತ್ತದೆ. ಜೊತೆಗೆ ಉದುರುವಿಕೆಯ ಪ್ರಮಾಣ ಕಡಿಮೆಯಾಗುವುದು.
ಮೊಟ್ಟೆ-ಮೊಸರು-ಆಲಿವ್ ಎಣ್ಣೆ ಶಾಂಪೂ
*ಒಂದು ಮೊಟ್ಟೆ, 2 ಟೇಬಲ್ ಚಮಚ ಆಲಿವ್ ಎಣ್ಣೆ, 1 ಟೇಬಲ್ ಚಮಚ ಶಾಂಪೂ ಮತ್ತು 1/4 ಕಪ್ ಮೊಸರನ್ನು ಸೇರಿಸಿ, ಮಿಶ್ರಗೊಳಿಸಿ.
*ಮಿಶ್ರಣವನ್ನು ತಲೆಗೆ ಅನ್ವಯಿಸಿ, ಸ್ವಲ್ಪ ಸಮಯದ ಬಳಿಕ ತೊಳೆಯಿರಿ.
*ಗಣನೀಯವಾಗಿ ಈ ಕ್ರಮವನ್ನು ಅನ್ವಯಿಸಿದರೆ ಕೂದಲು ಒಡೆಯುವುದು ನಿವಾರಣೆಯಾಗುತ್ತದೆ. ಜೊತೆಗೆ ಹೊಳಪನ್ನು ಪಡೆದುಕೊಳ್ಳುತ್ತದೆ.
ಮೊಟ್ಟೆ-ನಿಂಬು-ನೆಲ್ಲಿಕಾಯಿ-ಶಾಂಪೂ
*1 ಟೇಬಲ್ ಚಮಚ ನೆಲ್ಲಿಕಾಯಿ ಪುಡಿ, 1/4 ಕಪ್ ನಿಂಬೆ ರಸ, 2 ಟೇಬಲ್ ಚಮಚ ಶಾಂಪೂ ಮತ್ತು ಒಂದು ಮೊಟ್ಟೆಯನ್ನು ಮಿಶ್ರಗೊಳಿಸಿ. ಅಗತ್ಯವಿದ್ದರೆ ಸ್ವಲ್ಪ ಬೆಚ್ಚಗಿನ ನೀರನ್ನು ಸೇರಿಸಿಕೊಳ್ಳಿ.
*ಮಿಶ್ರಣವನ್ನು ತಲೆಗೆ ಅನ್ವಯಿಸಿ, ಸ್ವಲ್ಪ ಸಮಯದ ಬಳಿಕ ತೊಳೆಯಿರಿ.
*ಗಣನೀಯವಾಗಿ ಈ ಕ್ರಮವನ್ನು ಅನ್ವಯಿಸಿದರೆ ಕೂದಲು ಪ್ರಬಲಗೊಳ್ಳುವುದು ಮತ್ತು ಕೂದಲು ಉದುರುವಿಕೆಯನ್ನು ನಿಯಂತ್ರಿಸಬಹುದು.
ಮೊಟ್ಟೆ-ಪುದೀನಾ-ಪುದೀನ ಎಣ್ಣೆ-ಮದರಂಗಿ-ಶಾಂಪೂ
*ಒಂದು ಮೊಟ್ಟೆ, 1 ಟೇಬಲ್ ಚಮಚ ಪುದೀನ ಎಣ್ಣೆ, ಒಂದು ಟೇಬಲ್ ಚಮಚ ಮದರಂಗಿ, 2 ಟೇಬಲ್ ಚಮಚ ಶಾಂಪೂ ಸೇರಿಸಿ, ಮಿಶ್ರಗೊಳಿಸಿ.
*ಮಿಶ್ರಣವನ್ನು ತಲೆಗೆ ಅನ್ವಯಿಸಿ, ಸ್ವಲ್ಪ ಸಮಯದ ಬಳಿಕ ತೊಳೆಯಿರಿ.
*ಗಣನೀಯವಾಗಿ ಈ ಕ್ರಮವನ್ನು ಅನ್ವಯಿಸಿದರೆ ಕೂದಲು ಪ್ರಬಲಗೊಳ್ಳುವುದು ಮತ್ತು ಕಂಡೀಷನರ್ ರೀತಿಯಲ್ಲಿ ಕಾರ್ಯ ನಿರ್ವಹಿಸುವುದು.
ಮೊಟ್ಟೆ -ಗ್ಲಿಸರಿನ್ -ಗುಲಾಬಿ ನೀರು- ಶಾಂಪೂ
*ಒಂದು ಮೊಟ್ಟೆ, 2 ಟೇಬಲ್ ಚಮಚ ಗ್ಲಿಸರಿನ್, 2 ಟೇಬಲ್ ಚಮಚ ಗುಲಾಬಿ *ನೀರು ಮತ್ತು 2 ಟೇಬಲ್ ಚಮಚ ಶಾಂಪೂ ಸೇರಿಸಿ, ಮಿಶ್ರಗೊಳಿಸಿ.
*ಮಿಶ್ರಣವನ್ನು ತಲೆಗೆ ಅನ್ವಯಿಸಿ, ಸ್ವಲ್ಪ ಸಮಯದ ಬಳಿಕ ತೊಳೆಯಿರಿ.
*ಗಣನೀಯವಾಗಿ ಈ ಕ್ರಮವನ್ನು ಅನ್ವಯಿಸಿದರೆ ಕೂದಲು ಪ್ರಬಲಗೊಳ್ಳುವುದು ಮತ್ತು ಉತ್ತಮ ಹೊಳಪನ್ನು ಪಡೆದುಕೊಳ್ಳುವುದು.
ಮೊಟ್ಟೆ, ಕಡ್ಲೆಹಿಟ್ಟು, ಹಾಗೂ ಆಲಿವ್ ಎಣ್ಣೆ
ಮೊಟ್ಟೆ ಹಾಗೂ ಕಡ್ಲೆಹಿಟ್ಟುಗಳೆರಡೂ ಪ್ರೋಟೀನ್‌ನ ಆಗರಗಳಾಗಿದ್ದು, ನಿಮ್ಮ ಕೇಶರಾಶಿಗೆ ಬಲವನ್ನು ನೀಡುವುದಕ್ಕಾಗಿ ಮಾತ್ರವಲ್ಲದೇ ನೈಸರ್ಗಿಕವಾದ ಕ೦ಡಿಶನಿ೦ಗ್ ಅನ್ನೂ ಸಹ ಒದಗಿಸುವುದಕ್ಕಾಗಿ ಈ ಎರಡು ಸಾಮಗ್ರಿಗಳು ಈ ಹೇರ್ ಪ್ಯಾಕ್ ನಲ್ಲಿ ಜೊತೆಗೂಡಿವೆ. ಒ೦ದು ತತ್ತಿ, ಒ೦ದು ಟೇಬಲ್ ಚಮಚದಷ್ಟು ಕಡ್ಲೆಹಿಟ್ಟು, ಹಾಗೂ ಎರಡು ಟೇಬಲ್ ಚಮಚಗಳಷ್ಟು ಆಲಿವ್ ಎಣ್ಣೆ - ಸಮರೂಪದಲ್ಲಿ ಕಾಣಿಸುವ೦ತಹ ಪ್ಯಾಕ್ ಅನ್ನು ಸಿದ್ಧಪಡಿಸಿಟ್ಟುಕೊಳ್ಳುವುದಕ್ಕಾಗಿ ಈ ಮೂರನ್ನೂ ಚೆನ್ನಾಗಿ ಮಿಶ್ರಗೊಳಿಸಿರಿ. ಈ ಮಿಶ್ರಣವನ್ನು ಸಮಾನವಾಗಿ ಕೂದಲು ಹಾಗೂ ನೆತ್ತಿಯ ಭಾಗಕ್ಕೆ ಲೇಪಿಸಿಕೊ೦ಡ ಬಳಿಕ ಅದನ್ನು ಹಾಗೆಯೇ ಒಣಗಲು ಬಿಡಿರಿ. ಕಡ್ಲೆಹಿಟ್ಟು ನಿಮ್ಮ ಕೂದಲ ಎಳೆಗಳಿಗೆ ಸ್ವಲ್ಪ ಅ೦ಟಿಕೊಳ್ಳಬಹುದು. ಆದರೂ ಕೂಡ, ಸ್ವಲ್ಪ ಹೆಚ್ಚುವರಿಯಾಗಿ ಪ್ರಯತ್ನಿಸಿದಲ್ಲಿ, ಇದನ್ನು ಸುಲಭವಾಗಿ ನಿವಾರಿಸಿ ತೆಗೆಯಬಹುದು.
Boldsky ಇದರಿಂದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಳನ್ನು ಪಡೆಯಿರಿ | Subscribe to Kannada Boldsky.
Related Articles
ಬಿಳಿ ತ್ವಚೆ ಪಡೆಯಲು ಕೆಲವು ನೈಸರ್ಗಿಕ ಫೇಸ್ ಮಾಸ್ಕ್ಗಳು
ಹುಣಸೆ ಹಣ್ಣಿನ ಫೇಸ್ ಪ್ಯಾಕ್ ಪ್ರಯತ್ನಿಸಿ-ಸುಂದರವಾಗಿ ಕಾಣುವಿರಿ
ಥಟ್ಟನೇ ತ್ವಚೆಯನ್ನು ಬೆಳ್ಳಗಾಗಿಸುವ ಸರಳ ಫೇಸ್ ಪ್ಯಾಕ್
ನೈಸರ್ಗಿಕ ಹೇರ್ ಪ್ಯಾಕ್-ಕೂದಲಿಗೆ ಯಾವುದೇ ಸಮಸ್ಯೆ ಬರಲ್ಲ...
ಸುಂದರವಾಗಿ ಕಾಣಬೇಕೆ? ಹಾಗಾದರೆ ಪ್ರತಿನಿತ್ಯ ಈ ಸರಳ ಟಿಪ್ಸ್ ಅನುಸರಿಸಿ
ದಿನವಿಡೀ ತಾಜಾತನದ ಲುಕ್ ನಿಮ್ಮದಾಗಬೇಕೆ... ಇಲ್ಲಿದೆ ಸಿಂಪಲ್ ಟ್ರಿಕ್ಸ್
ದೇಹದ ಆಯಾಸ ಮುಖದ ಮೇಲೆ ಕಾಣದಿರಲು ಈ ಸಲಹೆಗಳನ್ನು ಅನುಸರಿಸಿ ನೋಡಿ
ಬರೀ ಏಳೇ ದಿನಗಳಲ್ಲಿ ಬೆಳ್ಳಗಾಗುವಿರಿ! ಇಲ್ಲಿದೆ ನೋಡಿ ಸರಳ ಮನೆಮದ್ದುಗಳು
ತಲೆಕೂದಲುಗಳು ದುರ್ಗಂಧ ಬೀರುತ್ತದೆಯೆ? ಹಾಗಾದರೆ ಈ ಮನೆ ಮದ್ದುಗಳನ್ನು ಮಾಡಿ ನೋಡಿ
ಮುಖದ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುವ ನೈಸರ್ಗಿಕ ಫೇಸ್ ಪ್ಯಾಕ್
ಸೌಂದರ್ಯ ವಿಷಯದಲ್ಲಿ ಇಂತಹ ತಪ್ಪುಗಳನ್ನು ಮಾಡಬೇಡಿ...
ಅಂದ ಕೆಡಿಸುವ ಕಪ್ಪು ವರ್ತುಲ ನಿವಾರಣೆಗೆ ಶೀಘ್ರ ಮನೆಮದ್ದುಗಳು
ಬ್ಯೂಟಿ ಟಿಪ್ಸ್: ಕೂದಲಿನ ಅಂದ ಚೆಂದ ಹೆಚ್ಚಿಸುವ ರೆಡ್ ವೈನ್
-
ಕರ್ನಾಟಕ ವಿಧಾನಸಭೆ ಚುನಾವಣೆ 2018
ವರುಣಾ ವ್ಯಾಪ್ತಿಯಲ್ಲಿ ಬಿವೈ ವಿಜಯೇಂದ್ರ ಅಭಿಮಾನಿ ನೇಣಿಗೆ ಶರಣು?
ಸಿದ್ದುಗೆ ನೀರಿಳಿಸಿದ್ದ ಮರಿಸ್ವಾಮಿಗೆ ಕುಮಾರಸ್ವಾಮಿ ಸನ್ಮಾನ
ಚುನಾವಣಾ ಆಯೋಗ ವಶಪಡಿಸಿಕೊಂಡ ಹಣ, ಮದ್ಯದ ಮಾಹಿತಿ ಇಲ್ಲಿದೆ