For Quick Alerts
ALLOW NOTIFICATIONS  
For Daily Alerts

ಕೂದಲುದುರುವ ಸಮಸ್ಯೆ ಇದೆಯೇ? ಈ ಎಣ್ಣೆಯನ್ನು ಬಳಸಿ

By Divya Pandith
|

ಕೂದಲು ಉದುರುವ ಪ್ರಕ್ರಿಯೆಯು ಸಾಮಾನ್ಯವಾದದ್ದು. ದಿನಕ್ಕೆ ಸಾಮಾನ್ಯವಾಗಿ 50-100 ಕೂದಲು ಉದುರುತ್ತವೆ ಎಂದು ಹೇಳಲಾಗುವುದು. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೂದಲು ಉದುರುತ್ತದೆ ಎಂದಾದರೆ ಅದು ಒಂದು ಸಮಸ್ಯೆ ಎಂದು ಪರಿಗಣಿಸಬಹುದು. ಇಂದಿನ ಮಾಲಿನ್ಯ, ಧೂಳು, ಅನುಚಿತ ಆಹಾರ ಪದ್ಧತಿ, ಆನುವಂಶಿಕ ಪ್ರಭಾವ ಹಾಗೂ ಅನುಚಿತ ರೀತಿಯ ಕೇಶರಾಶಿಯ ಪೋಷಣೆಯಿಂದಾಗಿ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳುವುದು. ಇಂದು ಈ ಸಮಸ್ಯೆಯನ್ನು ಅನೇಕ ಜನರು ಅನುಭವಿಸುತ್ತಿದ್ದಾರೆ. ಪರುಷರಿಗೆ ಮತ್ತು ಮಹಿಳೆಯರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿದೆ ಎನ್ನಲಾಗುತ್ತದೆ.

ಕೂದಲು ಉದುರಿದಂತೆಯೇ ಬೆಳವಣಿಗೆ ಹಾಗೂ ಹುಟ್ಟನ್ನು ಸಹ ಪಡೆದುಕೊಳ್ಳುತ್ತದೆ. ಆದರೆ ಕೆಲವು ವಯಸ್ಸಿನ ನಂತರ ಬೆಳವಣಿಗೆಯ ಪ್ರಮಾಣ ಮತ್ತು ವೇಗದಲ್ಲಿ ವಿರಳತೆಯನ್ನು ಕಾಣಬಹುದು. ಅಂತಹ ಸಂದರ್ಭದಲ್ಲಿ ಕೂದಲಿನ ಸಮಸ್ಯೆ ಎದ್ದು ಕಾಣುವುದು ಎಂದು ಸಹ ಹೇಳಲಾಗುವುದು. ಇತ್ತೀಚಿನ ದಿನದಲ್ಲಿ ಕೂದಲ ಸಮಸ್ಯೆಗೆ ಆರೈಕೆ ನೀಡಲು ಅನೇಕ ಉತ್ಪನ್ನಗಳು ದೊರೆಯುತ್ತವೆ. ಅವುಗಳಲ್ಲಿ ಕೆಲವೊಂದು ಬಹು ಬೇಗ ಆರೈಕೆ ನೀಡಬಹುದು ಅಥವಾ ಯಾವುದೇ ಪರಿಣಾಮ ಬೀರದೆ ಇರಬಹುದು. ಇನ್ನೂ ಕೆಲವು ಸಂದರ್ಭದಲ್ಲಿ ಅಡ್ಡ ಪರಿಣಾಮದಿಂದ ಇನ್ನಿತರ ಸಮಸ್ಯೆಗಳನ್ನು ಅನುಭವಿಸಬೇಕಾಗುವ ಸಾಧ್ಯತೆಗಳಿರುತ್ತವೆ.

Olive oil

ಕೂದಲುದುರುವ ಸಮಸ್ಯೆ ಉಂಟಾಗುತ್ತಿದೆ ಎನ್ನುವುದು ನಿಮ್ಮ ಗಮನಕ್ಕೆ ಬಂದರೆ ಚರ್ಮರೋಗದ ವೈದ್ಯರಲ್ಲಿ ತೋರಿಸಿ. ರಕ್ತಹೀನತೆ, ಥೈರಾಯಿಡ್ ಸಮಸ್ಯೆ, ಪ್ರೋಟೀನ್ ಕೊರತೆ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳಿಂದ ನೀವು ಬಳಲುತ್ತಿದ್ದೀರಿ ಎಂದಾದರೆ ಕೂದಲುದುರುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಸಮಸ್ಯೆ ಇದೆ ಎಂದು ನಿಮ್ಮ ಗಮನಕ್ಕೆ ಬಂದಾಗ ಮೊದಲು ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಲು ಮರೆಯದಿರಿ.

ನೈಸರ್ಗಿಕವಾದ ಅನೇಕ ಎಣ್ಣೆಗಳು ಆರೋಗ್ಯದ ಆರೈಕೆಯಲ್ಲಿ ಅತ್ಯುತ್ತಮ ರೀತಿಯ ಸಹಕಾರ ನೀಡುತ್ತದೆ. ಕೂದಲುದುರುವ ಸಮಸ್ಯೆಗೆ ಪರಿಣಾಮಕಾರಿಯಾದ ರೀತಿಯಲ್ಲಿ ಸಾರಭೂತ ತೈಲವು ಸಹಕರಿಸುತ್ತದೆ. ಈ ತೈಲವನ್ನು ಬಳಸಿ ಯಾವ ಬಗೆಯಲ್ಲಿ ಆರೈಕೆ ಮಾಡಬಹುದು ಎನ್ನುವುದನ್ನು ಬೋಲ್ಡ್ ಸ್ಕೈ ನಿಮಗೆ ಇಂದು ತಿಳಿಸಿಕೊಡಲಿದೆ.

ನಿಮಗೆ ಇವು ಬೇಕಾಗುವುದು:
- ಕಚ್ಚಾ ತೆಂಗಿನೆಣ್ಣೆ
- ಲ್ಯಾವೆಂಡರ್ ಸಾರಭೂತ ತೈಲ

ತೆಂಗಿನೆಣ್ಣೆಯನ್ನು ಹೆಚ್ಚು ಸಂಸ್ಕರಿಸಲಾಗದ ಇರುವಾಗ ಅದರಲ್ಲಿ ಅಧಿಕ ಪ್ರಮಾಣದ ಪೋಷಕಾಂಶಗಳಿರುತ್ತವೆ. ಅಂತಹ ಎಣ್ಣೆಯು ಆರೈಕೆಗೆ ಉತ್ತಮವಾಗಿರುತ್ತದೆ. ಸಂಸ್ಕರಿಸಿದ ಎಣ್ಣೆಯಲ್ಲಿ ಅಧಿಕ ಪ್ರಮಾಣದ ಫೋಷಕಾಂಶ ಇರುವುದಿಲ್ಲ ಎಂದು ಹೇಳಲಾಗುತ್ತದೆ.

ತೆಂಗಿನ ಎಣ್ಣೆಯ ಜೊತೆ 2-3 ಹನಿ ಲ್ಯಾವೆಂಡರ್ ಎಸೆನ್ಸಿಯಲ್ ತೈಲವನ್ನು ಮಿಶ್ರಗೊಳಿಸಿ. ಈ ಮಿಶ್ರಣವನ್ನು ನೆತ್ತಿ ಭಾಗದಲ್ಲಿ ಹಾಗೂ ತಲೆಯ ಸುತ್ತ ಚರ್ಮಕ್ಕೆ ತಾಗುವಂತೆ ಅನ್ವಯಿಸಿ. ನಂತರ ಮೃದುವಾಗಿ ಮಸಾಜ್ ಮಾಡಿ. ಆಗ ರಕ್ತನಾಳದ ಬೆಳವಣಿಗೆಯು ಉತ್ತೇಜನಗೊಳ್ಳುವುದು. ಜೊತೆಗೆ ರಕ್ತ ಪರಿಚಲನೆ ಹೆಚ್ಚಾಗುವುದು. ಕೂದಲುದುರುವ ಸಮಸ್ಯೆಯು ಗುಣಮುಖವಾಗುವುದು. ತಲೆ ಸ್ನಾನ ಮಾಡುವ ಮೊದಲು ಒಂದು ಗಂಟೆ ಮೊದಲು ಈ ಕ್ರಮವನ್ನು ಅನ್ವಯಿಸಿದರೆ ಅತ್ಯುತ್ತಮ ಫಲಿತಾಂಶವನ್ನು ಕಾಣಬಹುದು.

ಒಂದು ರಾತ್ರಿಗಳ ಕಾಲ ಈ ಮಿಶ್ರಣವನ್ನು ತಲೆಗೆ ಅನ್ವಯಸಿಕೊಂಡು ಇರುವುದರಿಂದ ಉದುರುವಿಕೆಯು ಬಹುಬೇಗ ಕಡಿಮೆಯಾಗುವುದು. ಅಲ್ಲದೆ ಕೂದಲು ಮೃದು ಹಾಗೂ ಹೊಳಪಿನಿಂದ ಕೂಡಿರುತ್ತದೆ. ತೆಂಗಿನ ಎಣ್ಣೆ ಕೂದಲು ಮತ್ತು ದೇಹದ ಆರೈಕೆಗೆ ಅತ್ಯುತ್ತಮವಾದ ಎಣ್ಣೆಗಳಲ್ಲಿ ಒಂದಾಗಿದೆ. ಇದರಲ್ಲಿ ಉತ್ಕರ್ಷಣ ನಿರೋಧಕ ಗುಣಗಳಿರುವುದರಿಂದ ಬ್ಯಾಕ್ಟೀರಿಯಾ, ಶಿಲೀಂಧ್ರ, ಕೂದಲುದುರುವಿಕೆ ಮತ್ತು ನೆತ್ತಿಯ ಶಿಲೀಂಧ್ರ ಸಮಸ್ಯೆಗಳನ್ನು ನಿವಾರಿಸುತ್ತದೆ.

ಕೂದಲಿನ ಆರೈಕೆಗೆ, ಮನೆಯಂಗಳದ 'ದಾಸವಾಳ ಹೂವು'!

ತೆಂಗಿನೆಣ್ಣೆಯನ್ನು ನಿಯಮಿತವಾಗಿ ಬಳಸುವುದರಿಂದ ಕೂದಲನ್ನು ಮೃದು ಗೊಳಿಸುವುದರ ಜೊತೆಗೆ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದರೊಂದಿಗೆ ಲ್ಯಾವೆಂಡರ್ ಎಸೆನ್ಸಿಯಲ್ ಎಣ್ಣೆ ಸೇರಿಸುವುದರಿಂದ ಇದರ ಶಕ್ತಿಯು ದ್ವಿಗುಣವಾಗುತ್ತದೆ. ಇವು ಕೂದಲ ಬೆಳವಣಿಗೆಗೆ ಉತ್ತೇಜನ ನೀಡುತ್ತವೆ. ಉತ್ತಮ ಪರಿಮಳದೊಂದಿಗೆ ಕೇಶರಾಶಿಯನ್ನು ಸಂರಕ್ಷಣೆ ಮಾಡುತ್ತವೆ.

ಲ್ಯಾವೆಂಡರ್ ತೈಲ ನೆತ್ತಿಯ ಮಾಯ್ಚುರೈಸ್ ಗುಣ ಮತ್ತು ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಯನ್ನು ಸಮತೋಲನಗೊಳಿಸುತ್ತವೆ. ಎಲ್ಲಾ ಬಗೆಯ ಕೂದಲಿಗೂ ಉತ್ತಮ ರೀತಿಯಲ್ಲಿ ಆರೈಕೆ ಮಾಡುತ್ತದೆ. ನಿಮಗೆ ಅಥವಾ ನಿಮ್ಮವರಿಗೆ ಕೂದಲು ಉದುರುವ ಸಮಸ್ಯೆ ಇದ್ದರೆ ಈ ವಿಧಾನವನ್ನು ಅನ್ವಯಿಸಿದರೆ ಸಮಸ್ಯೆಗಳಿಂದ ದೂರಾಗಬಹುದು.

English summary

One Essential Oil that will fix all your hair problems

Hair fall is something that all women struggle with. Well, all human beings actually do suffer from it, but it definitely affects us ladies a lot more due to the amount of care we give to our locks. And after all the time spent on caring for it, the hair continues to fall. Today We are going to tell you how to use an essential oil to treat hair fall. A lot of us can be unsure of using essential oils, as they are very potent in nature. But, not to worry, we are going to teach you the correct way of using this amazing essential oil to treat your hair fall.
X
Desktop Bottom Promotion