ಬಿಳಿ ಕೂದಲನ್ನು ಸುಲಭವಾಗಿ ಕಪ್ಪಾಗಿಸುವ ಮನೆ ಔಷಧಗಳು

Posted By: Divya pandith
Subscribe to Boldsky

ಇತ್ತೀಚೆಗೆ ಕೇಶ ರಾಶಿಯ ಬಣ್ಣ ಬದಲಿಸಿಕೊಳ್ಳುವುದು ಒಂದು ಫ್ಯಾಷನ್. ವಿವಿಧ ಬಣ್ಣಗಳನ್ನು ಕೇಶರಾಶಿಗೆ ಅನ್ವಯಿಸಿಕೊಳ್ಳುವುದರ ಮೂಲಕ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಾರೆ. ಆದರೆ ನೈಸರ್ಗಿಕವಾಗಿ ಕೂದಲು ಬಿಳಿಬಣ್ಣಕ್ಕೆ ತಿರುಗಿದರೆ ಅದನ್ನು ಯಾರೂ ಇಷ್ಟಪಡುವುದಿಲ್ಲ. ವಯಸ್ಸಾದ ಮೇಲೆ ಕೂದಲು ಬಿಳಿ ಬಣ್ಣಕ್ಕೆ ಬರುವುದು ಸಹಜ. ಭಾರತೀಯರು ಕೂದಲು ಬಿಳಿ ಬಣ್ಣಕ್ಕೆ ಬರುವುದನ್ನು ಇಷ್ಟ ಪಡುವುದಿಲ್ಲ. ಅದು ಅಕಾಲಿಕವಾಗಿ ಉಂಟಾಗಿರುವುದು ಅಥವಾ ವಯಸ್ಸಾದ ಸಮಯದಲ್ಲಿ ನೈಸರ್ಗಿಕವಾಗಿಯೇ ಬಿಳಿ ಬಣ್ಣಕ್ಕೆ ಬರುವುದೇ ಆಗಿರಬಹುದು. ಒಟ್ಟಿನಲ್ಲಿ ಕೂದಲು ಬಿಳಿ ಬಣ್ಣಕ್ಕೆ ತಿರುಗುವುದನ್ನು ಅಷ್ಟಾಗಿ ಇಷ್ಟಪಡುವುದಿಲ್ಲ ಎಂದೇ ಹೇಳಬಹುದು.

ಹಿಂದಿನ ಕಾಲದಲ್ಲಿ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತಿದೆ ಎಂದಾದರೆ ಅದೊಂದು ವಯಸ್ಸಾದ ಸಂಕೇತವಾಗಿರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮಾಲಿನ್ಯ, ಪೋಷಕಾಂಶದ ಕೊರತೆ ಹಾಗೂ ಅನುಚಿತ ರೀತಿಯ ಪೋಷಣೆಯಿಂದಾಗಿ ಕೂದಲು ಬಹುಬೇಗ ಅಂದರೆ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಬಣ್ಣಕ್ಕೆ ತಿರುಗುತ್ತಿದೆ. ಕೆಲವು ಮಕ್ಕಳಲ್ಲೂ ಸಹ ಬಿಳಿ ಬಣ್ಣದ ಕೂದಲು ಕಾಣಿಸಿಕೊಳ್ಳುತ್ತಿರುವುದು ಆಶ್ಚರ್ಯಕರ ಸಂಗತಿಯೂ ಹೌದು. ಇಂತಹ ಒಂದು ಸಮಸ್ಯೆಗೆ ಅನೇಕ ಪರಿಹಾರಗಳಿವೆ. ಮಾರುಕಟ್ಟೆಯಲ್ಲಿ ಸಿಗುವ ಬಣ್ಣವನ್ನು ಬಳಸಿಕೊಂಡು ಕೂದಲನ್ನು ಕಪ್ಪಾಗಿಸಬಹುದು. ಆದರೆ ಪುನಃ ಮತ್ತೆ ಬಣ್ಣದ ಬದಲಾವಣೆ ಉಂಟಾಗುವುದು.

ಮನೆಯಲ್ಲಿ ಇರುವ ಕೆಲವು ನೈಸರ್ಗಿಕ ಉತ್ಪನ್ನಗಳನ್ನು ಬಳಸಿಕೊಂಡು ಕೇಶರಾಶಿಯ ಆರೈಕೆ ಮಾಡಿದರೆ ಅಕಾಲಿಕವಾಗಿ ಉಂಟಾಗುವ ಬಿಳಿ ಬಣ್ಣವನ್ನು ತಡೆಯಬಹುದು. ಅವುಗಳ ಆಯ್ಕೆ ಹಾಗೂ ಬಳಕೆಯ ವಿಧಾನಗಳ ಕುರಿತು ಬೋಲ್ಡ್ ಸ್ಕೈ ನಿಮಗೆ ಇಂದು ಪರಿಚಯಿಸಿಕೊಡಲಿದೆ.

ನೆಲ್ಲಿಕಾಯಿ

ನೆಲ್ಲಿಕಾಯಿ

ನೆಲ್ಲಿಕಾಯಿ ಆಂಟಿಆಕ್ಸಿಡೆಂಟ್‍ಗಳು ಮತ್ತು ವಿಟಮಿನ್ ಸಿ ಯನ್ನು ಸಮೃದ್ಧವಾಗಿ ಪಡೆದುಕೊಂಡಿದೆ. ಇದು ವಯಸ್ಸಾದ ಚಿಹ್ನೆಗಳ ವಿರುದ್ಧ ಹೋರಾಡುತ್ತದೆ. ಇದನ್ನು ಸೇವಿಸುವುದು ಅಥವಾ ಎಣ್ಣೆಯಲ್ಲಿ ಬೆರೆಸಿ ಕೂದಲಿಗೆ ಅನ್ವಯಿಸಿಕೊಳ್ಳುವುದರಿಂದಲೂ ಕೂದಲು ಕಪ್ಪಾಗಿಯೇ ಇರುವಂತೆ ಕಾಯ್ದುಕೊಳ್ಳಬಹುದು. ನೆಲ್ಲಿಕಾಯಿಯ ಕೆಲವು ತುಂಡು ಅಥವಾ ಚೂರುಗಳನ್ನು ತೆಂಗಿನ ಎಣ್ಣೆಯಲ್ಲಿ ಸೇರಿಸಿ ಬೇಯಿಸಬೇಕು. ಬಳಿಕ ಎಣ್ಣೆಯನ್ನು ಸೋಸಿ ಸಂಗ್ರಹಿಸಿಟ್ಟುಕೊಳ್ಳಬೇಕು. ಈ ಮಿಶ್ರಣದ ಎಣ್ಣೆಯನ್ನು ವಾರಕ್ಕೊಮ್ಮೆ ಅನ್ವಯಿಸಿ, ಸ್ವಲ್ಪ ಸಮಯದ ಬಳಿಕ ಸ್ನಾನ ಮಾಡಿದರೆ ಅತ್ಯುತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು.

ಈರುಳ್ಳಿ

ಈರುಳ್ಳಿ

ಈರುಳ್ಳಿಯು ಕ್ಯಾಟಲಿಸಿಸ್ ಎಂಬ ಕಿಣ್ವಗಳಿಂದ ಸಮೃದ್ಧವಾಗಿದೆ. ಇದು ಕೂದಲಿನ ಬಣ್ಣಬದಲಾವಣೆಯನ್ನು ನಿಯಂತ್ರಣದಲ್ಲಿ ಇಡುತ್ತದೆ. ಕೂದಲು ಬಣ್ಣ ಕಳೆದುಕೊಳ್ಳುವುದಕ್ಕೆ ಮುಂಚೆಯೇ ಈರುಳ್ಳಿ ರಸದ ಆರೈಕೆ ಮಾಡುವುದು ಸೂಕ್ತ. ಇದರಿಂದ ಉತ್ತಮ ಫಲಿತಾಂಶ ಪಡೆದುಕೊಳ್ಳಬಹುದು. ತಲೆ ಸ್ನಾನ ಮಾಡುವ ಮೊದಲು ನಿಯಮಿತವಾಗಿ ಈರುಳ್ಳಿ ರಸವನ್ನು ನೆತ್ತಿಗೆ ಅನ್ವಯಿಸುವುದರಿಂದ ಕೂದಲು ಬಣ್ಣ ಬದಲಾಗದು. ಜೊತೆಗೆ ಆರೋಗ್ಯದಿಂದ ಕೂಡಿರುವುದು.

ತೆಂಗಿನ ಎಣ್ಣೆ

ತೆಂಗಿನ ಎಣ್ಣೆ

ಕೂದಲ ಅನೇಕ ಸಮಸ್ಯೆಗಳಿಗೆ ದಿವ್ಯ ಔಷಧಿ ತೆಂಗಿನ ಎಣ್ಣೆ. ಸೂಕ್ಷ್ಮಗ್ರಾಹಿ ಎಣ್ಣೆಯಾದ ತೆಂಗಿನ ಎಣ್ಣೆಯನ್ನು ನೆತ್ತಿ ಹಾಗೂ ಕೂದಲುಗಳ ಬುಡಕ್ಕೆ ಅನ್ವಯಿಸುವುದರಿಂದ ಅನೇಕ ಸಮಸ್ಯೆಗಳ ನಿವಾರಣೆಯ ಜೊತೆಗೆ ಬಣ್ಣ ಬದಲಾವಣೆಯನ್ನು ನಿಯಂತ್ರಿಸಬಹುದು.

ಮದರಂಗಿ/ಗೋರಂಟಿ

ಮದರಂಗಿ/ಗೋರಂಟಿ

ಇದು ನೈಸರ್ಗಿಕವಾದ ಕೂದಲ ಬಣ್ಣ. ಇದು ಕೂದಲ ಬಣ್ಣವನ್ನು ಕಾಪಾಡುವುದರ ಜೊತೆಗೆ ಬಲಪಡಿಸುತ್ತದೆ. ಅಲ್ಲದೆ ಆರೋಗ್ಯಕರವಾಗಿ ಇರುವಂತೆ ಮಾಡುವುದು. ಕ್ಯಾಸ್ಟರ್ ಎಣ್ಣೆ, ನಿಂಬೆ ರಸ, ಮದರಂಗಿ ಪುಡಿ ಮತ್ತು ಸ್ವಲ್ಪ ರಸವನ್ನು ಸೇರಿಸಿ ಮಿಶ್ರಗೊಳಿಸಿ. ಮಿಶ್ರಣವನ್ನು ಕೂದಲಿಗೆ ಅನ್ವಯಿಸಿ, 2 ಗಂಟೆಗಳ ಕಾಲ ಹೀರಿಕೊಳ್ಳಲು ಬಿಡಿ. ಉತ್ತಮ ಫಲಿತಾಂಶಕ್ಕಾಗಿ ಪ್ರತಿ ವಾರಕ್ಕೊಮ್ಮೆ ಈ ಕ್ರಮವನ್ನು ಅನ್ವಯಿಸಿ.

ಕಪ್ಪು ಚಹಾ

ಕಪ್ಪು ಚಹಾ

ನಿಮ್ಮ ಕೂದಲು ಗಾಢ ಬಣ್ಣ ಹೊಂದಲು ಮತ್ತು ಹೊಳಪಿನಿಂದ ಕೂಡಿರುವಂತೆ ಮಾಡಲು ಸರಳ ಉಪಾಯ ಕಪ್ಪು ಚಹಾ. ನೀರಿನಲ್ಲಿ ಕೆಲವು ಚಹಾ ಎಲೆಯನ್ನು ಕುದಿಸಿ. ಚೆನ್ನಾಗಿ ಕುದಿ ಬಂದು ಬಣ್ಣ ಬಿಟ್ಟ ಮೇಲೆ, ತಣ್ಣಗಾಗಿಸಿ ತಲೆಗೆ ಅನ್ವಯಿಸಿ. ಒಂದು ಗಂಟೆಯ ನಂತರ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ. ಉತ್ತಮ ಫಲಿತಾಂಶ ಪಡೆದುಕೊಳ್ಳಲು ನಿತ್ಯವೂ ಈ ಪ್ರಕ್ರಿಯೆಯನ್ನು ಮುಂದುವರಿಸಿ.

ಕರಿಬೇವಿನ ಎಲೆ

ಕರಿಬೇವಿನ ಎಲೆ

ಕರಿಬೇವಿನ ಎಲೆಯು ಕೂದಲ ರಕ್ಷಣೆ ಹಾಗೂ ಬಣ್ಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ತೆಂಗಿನೆಣ್ಣೆಯಲ್ಲಿ ಕರಿಬೇವಿನ ಎಲೆಯನ್ನು ಸೇರಿಸಿ ಕುದಿಸಿ. ನಂತರ ತೈಲವನ್ನು ಸೋಸಿ ಸಂಗ್ರಹಿಸಿಟ್ಟುಕೊಳ್ಳಿ. ತಲೆ ಸ್ನಾನ ಮಾಡುವ ಮೊದಲು ನೆತ್ತಿ ಹಾಗೂ ಕೂದಲಿಗೆ ಅನ್ವಯಿಸಿ ಒಂದು ಗಂಟೆಗಳ ಕಾಲ ಬಿಡಿ. ಬಳಿಕ ತೊಳೆಯಿರಿ. ಈ ವಿಧಾನದಿಂದ ಉತ್ತಮ ಕೇಶ ವೃದ್ಧಿ ಹಾಗೂ ಬಣ್ಣಗಳ ರಕ್ಷಣೆ ಮಾಡಬಹುದು.

ಕಾಫಿ

ಕಾಫಿ

ಚಹಾ ದಂತೆ ಕಾಫಿಯೂ ನಿಮ್ಮ ಕೂದಲ ರಕ್ಷಣೆ ಮಾಡುವುದು. ನೀರಿನಲ್ಲಿ ಕಾಫಿ ಪುಡಿಯನ್ನು ಸೇರಿಸಿ, ಕುದಿಸಿ. ಬಳಿಕ ನೀರನ್ನು ಸೋಸಿ ನೆತ್ತಿ ಹಾಗೂ ಕೇಶ ರಾಶಿಗೆ ಅನ್ವಯಸಿ. ಒಂದು ಗಂಟೆಯ ಬಳಿಕ ಶಾಂಪೂವಿನ ಸಹಾಯದಿಂದ ಕೂದಲನ್ನು ತೊಳೆಯಿರಿ. ಈ ವಿಧಾನದಿಂದ ಕೂದಲನ್ನು ಸಂರಕ್ಷಿಸಬಹುದು.

ರೋಸ್ಮರಿ ಮತ್ತು ಸೇಜ್

ರೋಸ್ಮರಿ ಮತ್ತು ಸೇಜ್

ಈ ಗಿಡಮೂಲಿಕೆಗಳು ನಮ್ಮ ಕೂದಲಿನ ಗುಣಮಟ್ಟವನ್ನು ಉತ್ತಮಗೊಳಿಸುತ್ತವೆ. ಅಲ್ಲದೆ ಅಕಾಲಿಕವಾಗಿ ಉಂಟಾಗುವ ಬಣ್ಣ ಬದಲಾವಣೆಯನ್ನು ನಿಯಂತ್ರಿಸುವುದು. ಈ ಗಿಡಮೂಲಿಕೆಯನ್ನು ಒಟ್ಟಿಗೆ ಸೇರಿಸಿ ಕುದಿಸಿ. ಅದರ ನೀರನ್ನು ತಣಿಸಿ, ಕೇಶರಾಶಿಗೆ ಅನ್ವಯಿಸಿ. ಒಂದು ಗಂಟೆಯ ಬಳಿಕ ನೀರಿನಿಂದ ತೊಳೆಯಿರಿ. ನಿಯಮಿತವಾಗಿ ಈ ಕ್ರಮವನ್ನು ಅನ್ವಯಿಸುವುದರಿಂದ ಕೂದಲು ಆರೋಗ್ಯಕರವಾಗಿ ಇರುವುದು.

English summary

Natural Remedies For Premature Greying Of Hair

The hair starts to turn grey when there is a shortage of melanin. Melanin is the pigment that gives hair its colour. With age, the production of melanin slows down, making the hair turn grey. The production of melanin eventually stops completely. Here are some home remedies you can use to prevent the premature greying of your hair. Take a look.
Story first published: Saturday, February 17, 2018, 16:57 [IST]